ಊಳಿಗಮಾನ ಪದ್ಧತಿ

ಊಳಿಗಮಾನ ಪದ್ಧತಿ ಅನ್ನುವುದು ಶ್ರೀಮಂತರ(ಒಡೆಯ ಅಥವಾ ಧಣಿ), ಮತ್ತು ಹಿಡುವಳಿದಾರರ (ರೈತ) ನಡುವಿನ ಆಳ್ವಿಕೆಯ ಮತ್ತು ಮಿಲಿಟರಿ ಪದ್ಧತಿ.

ಊಳಿಗಮಾನ ಪದ್ಧತಿಯು ಒಂಬತ್ತನೆಯ ಶತಮಾನದಿಂದ ಹದಿನೈದನೆಯ ಶತಮಾನದವರೆಗೂ ಪ್ರವರ್ಧ ಮಾನದಲ್ಲಿತ್ತು. ಇದರ ಅತ್ಯಂತ ಉನ್ನತ ಅರ್ಥದಲ್ಲಿ, ಊಳಿಗಮಾನ ಪದ್ಧತಿಯನ್ನು ಮಧ್ಯಯುಗದ ಯುರೋಪಿನ ಆಳ್ವಿಕೆಯ ಪದ್ದತಿಗೆ ಸೂಚಿಸಲಾಗಿದ್ದು ಪರಸ್ಪರ ಕಾನೂನು ಬದ್ದ ಮತ್ತು ಸೈನಿಕ ಉದಾತ್ತಗುಣದ ನಡುವಿನ ಮಿಲಿಟರಿ ಜವಾಬ್ದಾರಿಗಳಿಂದ ರಚಿಸಲ್ಪಟ್ಟು, ಮೂರು ಪ್ರಮುಖ ಪರಿಕಲ್ಪನೆಗಳಾದ ಒಡೆಯರ, ಹಿಡುವಳಿದಾರರ, ಮತ್ತು ಉಂಬಳಿಗಳ ಸುತ್ತ ಸುತ್ತುತ್ತದೆ. ಲ್ಯಾಟಿನ್ ಪದ ಪ್ಯುಡಮ್‌ (ಫೀಪ್) ನಿಂದ ಪಡೆಯಲಾಗಿದ್ದರೂ, ನಂತರ ಉಪಯೋಗದಲ್ಲಿದ್ದ ಶಬ್ದ ಪ್ಯುಡಲಿಸಂ ಮತ್ತು ಪದ್ಧತಿಗಳನ್ನು ಮಧ್ಯಯುಗದ ಅವಧಿಯಲ್ಲಿ ಜೀವಿಸುತ್ತಿದ್ದ ಜನರಿಂದ ಇದನ್ನು ಔಪಚಾರಿಕ ರಾಜಕೀಯ ಪದ್ಧತಿ ಎಂದು ಭಾವಿಸಲಾಗಿಲ್ಲ.

ಸಾಮಾನ್ಯ ಅರ್ಥದಲ್ಲಿ ಒಬ್ಬ ಮನುಷ್ಯ ಇನ್ನೊಬ್ಬನಿಗೆ ಅಧೀನನಾಗಿರುವಂಥ ವೈಯಕ್ತಿಕ ಸಂಬಂಧಗಳಿರುವ ಮತ್ತು ಭೂಸ್ವಾಮ್ಯ ಹಕ್ಕುಗಳನ್ನು ಅನುಕ್ರಮವಾಗಿ ಪಡೆದಿರುವ ವ್ಯವಸ್ಥೆ, ಪಾಲನೆ ಪೋಷಣೆ ಮಾಡುವ ಒಂದು ಪಕ್ಷಕ್ಕೂ ಸೇವೆ ವಿಧೇಯತೆ ತೋರುವ ಇನ್ನೊಂದು ಪಕ್ಷಕ್ಕೂ ನಡುವಣ ವೈಯಕ್ತಿಕ ಸಂಬಂಧಸೂಚಕವಾದ ಮಧ್ಯಯುಗೀಣ ನ್ಯಾಯವ್ಯವಸ್ಥೆಯೆಂಬುದು ಈ ಪದದ (ಫ್ಯೂಡಲಿಸಂ) ವಿಶಿಷ್ಟಾರ್ಥ. ಈ ಸಂಬಂಧಗಳು ಆ ಕಾಲದಲ್ಲಿದ್ದ ಸ್ವತ್ತನ್ನು ಕುರಿತಾದ ನ್ಯಾಯವನ್ನೇ ಅಲ್ಲದೆ ಮಧ್ಯಯುಗದ ದೇಶಗಳ ಇಡೀ ರಾಜ್ಯರಚನೆಯ ಮೇಲೆಯೇ ತೀವ್ರ ಪರಿಣಾಮವನ್ನುಂಟುಮಾಡಿದ್ದುವು.

ವ್ಯಾಖ್ಯಾನ

  • ಊಳಿಗಮಾನ ಪದ್ಧತಿಗೆ ವ್ಯಾಪಕವಾಗಿ ಅಂಗೀಕರಿಸಲಾದ ಆಧುನಿಕ ವ್ಯಾಖ್ಯಾನ ಇಲ್ಲ. ಆಧುನಿಕ ಅವಧಿಯ ಆರಂಭದಲ್ಲಿ (17ನೆಯ ಶತಮಾನ) ಕಲ್ಪಿಸಲ್ಪಟ್ಟ, ಶಬ್ದವನ್ನು, ಮೂಲತಃ ರಾಜಕೀಯ ಪ್ರಕರಣಗಳಲ್ಲಿ ಉಪಯೋಗಿಸಲಾಗಿತ್ತು. ಆದರೆ ಊಳಿಗಮಾನ ಪದ್ಧತಿಯ ಇತರ ವ್ಯಾಖ್ಯಾನ ಗಳು ಅಸ್ತಿತ್ವದಲ್ಲಿವೆ. ಕನಿಷ್ಟ ಪಕ್ಷ 1960ರ ಶತಮಾನದಿಂದ,
  • ಅನೇಕ ಮಧ್ಯಯುಗದ ಇತಿಹಾಸಕಾರರು, ಕೆಲವುಸಲ "ಫ್ಯುಡಲ್ ಸಮುದಾಯ" ಎಂದು ಸೂಚಿಸುವ, ಭೂಮಿಯ ಒಡೆತನದ ತತ್ವದ ರೈತ ಸಮುದಾಯದ ಬಾಂಡುಗಳನ್ನು ಸೇರಿಸುವುದರಿಂದ, ವಿಶಾಲವಾದ ಸಾಮಾಜಿಕ ನೋಟವನ್ನು ಅಂತರ್ಗತಗೊಳಿಸಿದ್ದಾರೆ. ಅದಾಗ್ಯೂ 1970ರ ದಶಕದಿಂದ ಇತರರು ಪುರಾವೆಗಳನ್ನು ಮರು-ಪರಿಶೀಲಿಸಿದರು ಮತ್ತು ಊಳಿಗಮಾನ ಪದ್ಧತಿಯು ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲದ ಶಬ್ದ.
  • ಆದ್ದರಿಂದ ಇದನ್ನು ಪರಿಣತರ ಮತ್ತು ಶೈಕ್ಷಣಿಕ ಚರ್ಚೆಯಿಂದ ಸಂಪೂರ್ಣವಾಗಿ ತಗೆದು ಹಾಕಬೇಕು ಅಥವಾ ಕೊನೆಯಪಕ್ಷ ಕೇವಲ ಹೆಚ್ಚಿನ ಅರ್ಹತೆ ಮತ್ತು ಎಚ್ಚರಿಕೆಯೊಂದಿಗೆ ಉಪಯೋಗಿಸಬೇಕೆಂದು ನಿಶ್ಚಯಿಸಿದರು. ಸಾಂಪ್ರದಾಯಿಕವಾಗಿ, ಅಮೆರಿಕಾ ಮತ್ತು ಬ್ರಿಟಿಷ್ ಚರಿತ್ರೆಕಾರರು "ಊಳಿಗಮಾನ ಪದ್ಧತಿ" ಶಬ್ಧವನ್ನು, ರಾಜಕೀಯ, ಮಿಲಿಟರಿ, ಮತ್ತು ca. 1000 ಮತ್ತು ca. 1300ರ ನಡುವಿನ ಪಾಶ್ಚಾತ್ಯ ಯುರೋಪಿನ ಸೇನಾನಿ ಶ್ರೀಮಂತ ವರ್ಗವನ್ನು ಒಟ್ಟಿಗೆ ಬದ್ಧವಾಗಿಸಿದ ಸಾಮಾಜಿಕ ಪದ್ಧತಿಯನ್ನು ವಿವರಿಸಲು ಉಪಯೋಗಿಸಿದ್ದರು. ಇವುಗಳ ಮೂಲ ಪಾಠ ಗಳು:
  • ವಿವಿಧ ದರ್ಜೆಯ ಮೆಲ್ಮಟ್ಟದವುಗಳ ನಡುವಿನ ಪರಸ್ಪರ ನಿಷ್ಠೆಯ ವೈಯುಕ್ತಿಕ ಒಡಂಬಡಿಕೆ ಮತ್ತು ಮಿಲಿಟರಿ ಸೇವೆಗಳನ್ನು ಹಿಡುವಳಿದಾರಿಕೆ/ಒಡೆತನ ಎಂದು ಗುರುತಿಸಲಾಗುತ್ತದೆ;
  • ಗೊತ್ತುಮಾಡಿದ ಸೇವೆಗಳ ಪ್ರತಿಫಲವಾಗಿ ಅವರ ಒಡೆಯರಿಂದ ಪಡೆದು, ಹಿಡುವಳಿದಾರರು/ಪುರುಷರು ಹೊಂದಿದ್ದ ಉಂಬಳಿಗಳು, ಸಾಮಾನ್ಯವಾಗಿ ಮಿಲಿಟರಿ ಮತ್ತು ಸಾಮಾಜಿಕ ಕರ್ತವ್ಯಗಳ ಮತ್ತು ನಾನಾರೀತಿಯ ಬಟವಾಡೆಗಳ ಸಂಯೋಜನೆಯಾಗಿರುತ್ತವೆ;
  • ಪೌರಹಕ್ಕುಗಳು, ವಿನಾಯಿತಿಗಳು ಅಥವಾ ಅತಿಸಾಧಾರಣ ಹಕ್ಕುಗಳನ್ನು ಹೊಂದಿದ್ದ ಪ್ರತಿಷ್ಠರ ಆಡಳಿತ ವ್ಯಾಪ್ತಿಯ ಮತ್ತು ರಾಜಕೀಯ ಅಧಿಕಾರ;
  • ಸೈದ್ಧಾಂತಿಕವಾಗಿ ಒಡೆಯರ ಒಡೆಯ ಮತ್ತು ಭೂಮಿಯಮೇಲಿನ ಎಲ್ಲಾ ಹಕ್ಕುಗಳ ಅಂತಿಮ ಮೂಲವಾದ ದುರ್ಬಲ ರಾಜನೊಂದಿಗೆ ವಿಕೇಂದ್ರೀಕರಿಸಿದ ನಿಯಮ.

ಈ ನಿದರ್ಶನದಲ್ಲಿ, ಊಳಿಗಮಾನ ಪದ್ಧತಿಯು ಪ್ರಮುಖವಾಗಿ ಮಿಲಿಟರಿ ನೇಮಕಾತಿಯ ಪದ್ಧತಿಯಾಗಿದ್ದು, ಇದರಲ್ಲಿ ಭೂಮಿಯ ಅನುಭೋಗದ ಅವಧಿಯನ್ನು ವೀರಯೋಧ ಸೇವೆಗೆ ಬದಲಾಯಿಸಲಾಗುವುದು.

  • ಯುರೋಪಿನ ಪ್ರಸಂಗಗಳ ಹೊರಗೆ, ಊಳಿಗಮಾನ ಪದ್ಧತಿಯ ಪರಿಕಲ್ಪನೆಯನ್ನು ಸಾಧಾರಣವಾಗಿ ಕೇವಲ ಹೋಲಿಕೆಗಳಿಂದ (ಅರೆ-ಊಳಿಗಮಾನ ಎಂದು ಕರೆಯುವ) ಬಳಸಲಾಗುತ್ತಿತ್ತು, ಅತಿ ಹೆಚ್ಚಾಗಿ ಜಪಾನಿನ ಚರ್ಚೆಗಳಲ್ಲಿ ಶೊಗನ್‌ (ಮಿಲಿಟರಿ ಶ್ರೇಣಿ)ಗಳ ಅಡಿಯಲ್ಲಿ, ಮತ್ತು ಕೆಲವುಸಲ ಮಧ್ಯಯುಗದಲ್ಲಿ ಮತ್ತು ಗೋಂಡರಿನ್ ಇಥಿಯೋಪಿಯಾ ಸಮಯದಲ್ಲಿಯೂ ಬಳಕೆಯಲ್ಲಿತ್ತು.
  • ಅದಾಗ್ಯೂ, ಕೆಲವರು ಊಳಿಗಮಾನ ಪದ್ಧತಿಯ ಹೋಲಿಕೆಯನ್ನು ಪ್ರೋತ್ಸಾಹಿಸುವುದರಿಂದ, ಪುರಾತನ ಈಜಿಪ್ಟ್, ಪಾರ್ಥಿಯನ್ ಸಾಮ್ರಾಜ್ಯ, ಭಾರತದ ಉಪಖಂಡ, ಮತ್ತು ಆಂಟೆಬೆಲ್ಲಮ್ ಅಮೆರಿಕಾದ ದಕ್ಷಿಣಭಾಗಗಳಂತಹ ವಿಭಿನ್ನ ಸ್ಥಳಗಳಲ್ಲಿ ಕಾಣಲಾಗುತ್ತದೆ.

ಊಳಿಗಮಾನ ಪದ್ಧತಿ ಅನ್ನುವ ಶಬ್ದವನ್ನು ಆಗಾಗ್ಗೆ ಅನುಚಿತವಾಗಿ ಅಥವಾ ತುಚ್ಛಾರ್ಥಕವಾಗಿ ಪಾಶ್ಚಾತ್ಯವಲ್ಲದ ಸಮಾಜಗಳಿಗೆ ಅನ್ವಯಿಸುವಂತೆ ಮಾಡಲಾಗುವುದು, ಅಲ್ಲಿನ ಸಂಸ್ಥೆಗಳು ಮತ್ತು ಮನೋಭಾವಗಳು, ಮಧ್ಯಯುಗದ ಯುರೋಪ್ ರೂಡಿಯಲ್ಲಿಡಲು ಗ್ರಹಿಸಿದವುಗಳನ್ನು ಹೋಲುತ್ತವೆ. ಅಂತಿಮವಾಗಿ, ಊಳಿಗಮಾನ ಪದ್ಧತಿ ಶಬ್ದವನ್ನು ಉಪಯೋಗಿಸಿದ ಅನೇಕ ಮಾರ್ಗಗಳು ಇದಕ್ಕೆ ಖಚಿತವಾದ ಅರ್ಥ ದೊರಕದಂತೆ ಮಾಡಿವೆ, ಇದು ಅನೇಕ ಇತಿಹಾಸಕಾರರು ಮತ್ತು ರಾಜಕೀಯ ಸಿದ್ಧಾಂತಿಗಳು ಸಮಾಜವನ್ನು ಅರ್ಥಮಾಡಿಕೊಳ್ಳಲು ಇದು ಒಂದು ಉಪಯೋಗಕರ ಪರಿಕಲ್ಪನೆ ಎಂಬುದನ್ನು ತಿರಸ್ಕರಿಸುವಂತೆ ಮಾಡಿದೆ.

ಊಳಿಗಮಾನ್ಯ ಸಮಾಜ

ಊಳಿಗಮಾನ್ಯ ಸಮಾಜವೆಂದಾಗ ಇಂದಿನದಕ್ಕಿಂತ ಭಿನ್ನವಾದ ಒಂದು ವಿಶಿಷ್ಟ ನಾಗರಿಕತೆಯೇ ಕಣ್ಣಮುಂದೆ ಬಂದು ನಿಲ್ಲುತ್ತದೆ. ಆ ಕಾಲದಲ್ಲಿದ್ದ ಪ್ರಭುಗಳ, ಜೀತಗಾರರ ಮತ್ತು ಉಂಬಳಿಗಳ ಚಿತ್ರ ಮೂಡುವುದು ಮಾತ್ರವಲ್ಲ; ಇಂಥ ಸಮಾಜ ವ್ಯವಸ್ಥೆಯಲ್ಲಿ ಅಧಿಕಾರ ನಿರತವಾದ ಆಡಳಿತಗಾರರೂ ಸೈನಿಕರೂ ರಾಷ್ಟ್ರವೆಂಬ ಅಮೂರ್ತಕಲ್ಪನೆಗೆ ಸೇವೆ ಸಲ್ಲಿಸುವವರಲ್ಲ; ಇವರಿಗೂ ಇವರ ಮೇಲ್ಪಟ್ಟ ಪ್ರಭುವಿಗೂ ಇರುವ ವೈಯಕ್ತಿಕ ಹಾಗೂ ವಿಶಿಷ್ಟ ಸಂಬಂಧಗಳಿಗಾಗಿ ಇವರು ಈ ಬಗೆಯ ಕರ್ತವ್ಯ ನಿರತರಾಗಿರುತ್ತಾರೆ. ಇವರಿಗೆ ಪ್ರತಿಫಲ ಸಲ್ಲುವುದು ವಂಶಪಾರಂಪರ್ಯವಾಗಿ ಇವರು ಅನುಭವಿಸಿಕೊಂಡು ಬರುವ ಭೂಮಾನ್ಯಗಳಿಂದ. ಇಂತಿಂಥ ಭೂಮಾನ್ಯ ಪಡೆದಿರುವವರು ಇಂತಿಂಥ ಸೇವೆ ಸಲ್ಲಿಸಬೇಕೆಂಬುದು ನಿಗದಿಯಾಗಿರುವುದರಿಂದ ಆಯಾ ಕರ್ತವ್ಯ ನಿರ್ವಹಿಸುವವರು ಆಯಾ ಸ್ಥಾನಗಳಲ್ಲಿರುವುದು ಒಂದು ದೃಷ್ಟಿಯಲ್ಲಿ ಆಕಸ್ಮಿಕ. ಸೇವೆಗೂ ವ್ಯಕ್ತಿಗೂ ಸಂಬಂಧವೆನ್ನುವುದಕ್ಕಿಂತ ಸೇವೆಗೂ ಹಿಡುವಳಿಗೂ ಸಂಬಂಧವೆನ್ನುವುದು ಹೆಚ್ಚು ಸೂಕ್ತ. ಸಾರ್ವಜನಿಕಾಧಿಕಾರವೇ ಒಡೆದು ವಿಕೇಂದ್ರೀಕೃತವಾಗಿರುವುದು ಈ ವ್ಯವಸ್ಥೆಯ ಮುಖ್ಯ ಲಕ್ಷಣ.ನೆಲದೊಡೆಯರು ರೈತರನ್ನು ಅಸ್ವತಂತ್ರಗೊಳಿಸಿ ಅವರ ಮೇಲೆ ರಕ್ಷಣೆ, ನ್ಯಾಯವಿತರಣೆ, ಸುಂಕ ತೆರಿಗೆ ವಸೂಲಿ ಮುಂತಾದ ನಾನಾ ಅಧಿಕಾರಗಳನ್ನು ಚಲಾಯಿಸುವ ಮೆನೋರಿಯಲ್ ಪದ್ಧತಿಗೂ ಊಳಿಗಮಾನ್ಯ ವ್ಯವಸ್ಥೆಗೂ ಐತಿಹಾಸಿಕ ಸಂಬಂಧವಿದೆ. ಈ ವ್ಯವಸ್ಥೆಯಲ್ಲಿ ದೇಶಕ್ಕೆಲ್ಲ ರಾಜನೇ ಒಡೆಯ, ಅವನ ಕೆಳಗೆ ದೊಡ್ಡ ಪಾಳೆಯಗಾರರು, ಅವರ ಅಧೀನದಲ್ಲಿ ಚಿಕ್ಕ ಪಾಳೆಯಗಾರರು, ಕೊನೆಯ ಹಂತದಲ್ಲಿ ಜೀತಗಾರರು. ಇವರಲ್ಲಿ ಪರಸ್ಪರ ಮುಖ್ಯ ಸಂಬಂಧ ಭೂಮಾನ್ಯಕ್ಕೆ ಪ್ರತಿಯಾಗಿ ಊಳಿಗವೃತ್ತಿ ಮಾಡುವುದು, ಸೈನ್ಯಸೇವೆಸಲ್ಲಿಸುವುದು, ಈ ಅನುಕ್ರಮದ ಹೊರಗಿದ್ದ ಕ್ರೈಸ್ತ ಮಠಾಧಿಕಾರಿಗಳೂ ಜೀತಗಾರರಲ್ಲದ ಸ್ವತಂತ್ರ ಜನರೂ ಈ ವ್ಯವಸ್ಥೆಯ ಪ್ರಭಾವಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಒಳಗಾದರು. ಇದರ ವ್ಯಾಪ್ತಿ ಸರ್ವತೋಮುಖವಾಗಿ, ಸಾಮಾಜಿಕ, ನೈತಿಕ, ಧಾರ್ಮಿಕ ಭಾವನೆಗಳನ್ನೂ ಒಳಗೊಂಡ ಹೊಸದೊಂದು ಸಂಸ್ಕøತಿಯೇ ಉದ್ಭವಿಸಿರುವುದನ್ನು ಕಾಣಬಹುದು. ಸ್ಥೂಲವಾಗಿ 9ನೆಯ ಶತಮಾನದಿಂದ 13ನೆಯ ಶತಮಾನದ ವರೆಗಿನ ಕಾಲ ಊಳಿಗಮಾನ್ಯದ್ದೆನ್ನಬಹುದು.

ಇತಿಹಾಸ

ರೋಮನ್ ಸಾಮ್ರಾಜ್ಯ ಕಾಲದಲ್ಲಿ ಶಕ್ತರಾಗಿದ್ದ ಕೆಲವರು ಯುದ್ಧವೀರರಾಗಿದ್ದರು. ಕೆಲವು ಖಾಸಗಿ ಭೂಮಿಗಳು ಇವರ ಒಡೆತನದಲ್ಲಿದ್ದವು. ಇವುಗಳ ಮೇಲೆ ಸರ್ಕಾರದ ಅಧಿಕಾರವಿಲ್ಲದ್ದರಿಂದ ಇವರು ಈ ನೆಲವನ್ನು ಯಾರಿಗೆ ಬೇಕಾದರೂ ಕೊಡಬಹುದಾಗಿತ್ತು. ಈ ಕಾರಣದಿಂದ ಇವರು ತಮ್ಮ ಸುತ್ತಲೂ ನಿಷ್ಠಾವಂತ ಯೋಧರ ಗುಂಪುಗಳನ್ನು ಕಟ್ಟಿಕೊಂಡಿದ್ದರು. ಮುಂದೆ ಎರಡನೆಯ ಶತಮಾನದ ವೇಳೆಗೆ ಇದು ಸಾಮಾನ್ಯ ಪದ್ಧತಿಯಾಯಿತು. ದೈಹಿಕ ಶಕ್ತಿಯುಳ್ಳ ಕಡಿಮೆ ದರ್ಜೆಯ ಜನರನೇಕರು ತಮ್ಮ ಸೇವೆಯನ್ನು ಬಲಿಷ್ಠ ಪ್ರಭುಗಳಿಗೆ ಮುಡಿಪಾಗಿಡುವ ಪದ್ಧತಿ ರೂಪುಗೊಂಡಿತು. ಇವರ ನಿಷ್ಠೆಗೆ ಪ್ರತಿಯಾಗಿ ಇವರನ್ನು ಪಾಲಿಸಿ ಪೋಷಿಸುವ ಹೊಣೆ ಪ್ರಭುವಿನದಾಗಿತ್ತು. ಮೊದಮೊದಲು ಆತ ಇವರಿಗೆ ನೆಲವನ್ನು ದಾನವಾಗಿ ಕೊಡುತ್ತಿದ್ದ. ಮುಂದೆ ಅದನ್ನು ಅನುಭವಿಸುವ ಹಕ್ಕನ್ನು ಮಾತ್ರ ಕೊಡುವ ಪದ್ಧತಿ ಬೆಳೆಯಿತು. ಒಡೆತನ ಪ್ರಭುವಿನಲ್ಲೇ ಉಳಿದಿತ್ತು. ಫ್ರಾಂಕಿಷ್ ದೊರೆಗಳಲ್ಲೊಬ್ಬರಾದ ಚಾರಲ್ಸ್ ಮಾರ್ಟೆಲ್ಲನ ಕಾಲದಲ್ಲೇ ಈ ಹೊಸ ಪದ್ಧತಿ ಜಾರಿಗೆ ಬಂದದ್ದು. ಜರೂರು ಪರಿಸ್ಥಿತಿ ಒದಗಿದ್ದಾಗ ಈ ದೊರೆ ಚರ್ಚಿನ ಭೂಮಿ ವಶಪಡಿಸಿಕೊಂಡು ಅವನ್ನು ಜೀತಗಾರರಿಗೆ ಕೊಟ್ಟಿದ್ದಲ್ಲದೆ ಸ್ವಂತ ನೆಲವನ್ನೂ ಇದೇ ರೀತಿ ಹಂಚಿದ. ದೊರೆಯ ಉದಾಹರಣೆಯನ್ನೇ ಇತರ ಪ್ರಭುಗಳೂ ಅನುಸರಿಸಿದರು.ಫ್ರಾಂಕಿಷ್ ದೊರೆಗಳು ಯೂರೋಪಿನಲ್ಲಿ ತಮ್ಮ ರಾಜ್ಯ ವಿಸ್ತರಿಸಿದಂತೆ ಈ ವ್ಯವಸ್ಥೆ ಇತರ ಕಡೆಗಳಿಗೂ ಹಬ್ಬಿತು. ಹನ್ನೊಂದನೆಯ ಶತಮಾನದ ವೇಳೆಗೆ ಇಂಗ್ಲೆಂಡ್ ಸ್ಕಾಟ್ಲೆಂಡ್ ಐರ್ಲೆಂಡ್‍ಗಳಲ್ಲೂ ಇದು ಸಾಮಾನ್ಯವಾಯಿತು. ಧರ್ಮಯುದ್ಧಗಳಲ್ಲಿ ಐರೋಪ್ಯ ಕ್ರೈಸ್ತರು ಜಯಿಸಿದ ಪೂರ್ವದ ಕಡೆಯ ನಾಡುಗಳಲ್ಲೂ ಊಳಿಗಮಾನ್ಯ ವ್ಯವಸ್ಥೆ ಬೇರೂರಿತೆನ್ನಬಹುದು. ಆದರೆ ಯೂರೋಪಿನ ಕೆಲವು ಭಾಗಗಳಲ್ಲಿ ಊಳಿಗಮಾನ್ಯ ವ್ಯವಸ್ಥೆ ಬರಲೇ ಇಲ್ಲ. ಅವು ಸಾಮೂಹಿಕ ಪದ್ಧತಿಯಿಂದ ನೇರವಾಗಿ ಆಧುನಿಕ ವ್ಯವಸ್ಥೆಗೆ ಜಾರಿಕೊಂಡವು.

ರೋಮನ್ ಸಾಮ್ರಾಜ್ಯ ಕ್ಷೀಣಿಸಿದಂತೆ, ಚಕ್ರವರ್ತಿಗಳು ನಿಷ್ಠಾವಂತಿಕೆಯ ವಿನಿಮಯದಲ್ಲಿ ಭೂಮಿಯನ್ನು ಮೇಲ್ಮಟ್ಟದವರಿಗೆ ನೀಡಿದ್ದಾರೆ. ರೋಮನ್ ಸೈನ್ಯ ದೀರ್ಘಕಾಲ ಕೇಂದ್ರೀಕರಿಸಲು ಸಾಧ್ಯವಿಲ್ಲದಿದ್ದರಿಂದ, ರಕ್ಷಣೆಗಾಗಿ ಭೂಮಿಯನ್ನು ವ್ಯಾಪಾರಮಾಡಿದ್ದ, ಒಡೆಯರ ದರ್ಜೆಯ ಮೇಲೆ ಮಿಲಿಟರಿ ಅಧಿಕಾರವು ಕೆಂದ್ರೀಕರಿಸಿದೆ.

ಈ ಅಸಂಯುಕ್ತ ಸಮಾಜ ವ್ಯವಸ್ಥೆ ಆ ಕಾಲಕ್ಕೆ ಉಚಿತವಾಗಿದ್ದರೂ ಇದರಲ್ಲಿ ಅನೇಕ ಲೋಪದೋಷಗಳಿದ್ದುವು. ಅನಾಗರಿಕ ದಾಳಿಕಾರರ ಹಾವಳಿ ಅಡಗಿದರೂ ಪದೇ ಪದೇ ಪ್ರಭುಗಳ ನಡುವೆ ನಡೆಯುತ್ತಿದ್ದ ಹೋರಾಟಗಳಿಂದ ದೇಶದಲ್ಲಿ ಪೂರ್ಣ ಶಾಂತಿ ಏರ್ಪಡಲಿಲ್ಲ. ವ್ಯಾಪಾರ ವಾಣಿಜ್ಯಕ್ಕೆ ಅನುಕೂಲ ಕಡಿಮೆ. ಜನರ ದೃಷ್ಟಿ ಸ್ಥಳೀಯ, ಸಂಕುಚಿತ. ಈ ವಾತಾವರಣದಲ್ಲಿ ಸಂಸ್ಕøತಿಯ ಬೆಳೆವಣಿಗೆ ಮಂದವಾಗಿದ್ದರಲ್ಲಿ ಆಶ್ಚರ್ಯವಿಲ್ಲ. ಆದರೂ ಇದನ್ನು ಕತ್ತಲೆಯ ಕಾಲವೆಂದು ಭಾವಿಸುವುದು ಸೂಕ್ತವಲ್ಲ. ದಾಳಿ ಮಾಡಲು ಬಂದ ಅನಾಗರಿಕನನ್ನು ಈ ಕಾಲದ ಜನ ತಡೆಗಟ್ಟಿ ಸುಸಂಸ್ಕøತರನ್ನಾಗಿ ಪರಿವರ್ತಿಸಿ ಪುನರುಜ್ಜೀವನಕ್ಕೆ ತಳಹದಿ ಹಾಕಿದ್ದಲ್ಲದೆ ವಿಶ್ವ ಸಂಸ್ಕøತಿಗೂ ಉತ್ತಮ ಸೇವೆ ಸಲ್ಲಿಸಿದ್ದಾರೆ. ಫ್ರಾನ್ಸಿನ ಕೆಥೆಡ್ರಲ್‍ಗಳೂ ಡಾಂಟೆಯ ದಿ ಡಿವೈನ್ ಕಾಮೆಡಿಯಂಥ ಉದಾತ್ತ ಕಾವ್ಯಗಳೂ ಈ ವ್ಯವಸ್ಥೆ ನೀಡಿರುವ ಉತ್ಕøಷ್ಟ ಕಾಣಿಕೆಗಳು.ವಿಶ್ವದ ಪ್ರತಿಯೊಂದು ಮಹಾ ನಾಗರಿಕತೆಯ ಇತಿಹಾಸದಲ್ಲೂ ಒಂದಲ್ಲೊಂದು ಘಟ್ಟದಲ್ಲಿ ಊಳಿಗಮಾನ್ಯ ಅವಸ್ಥೆಯನ್ನು ಕಾಣಬಹುದೆಂಬುದು ತೌಲನಿಕ ಇತಿಹಾಸದಿಂದ ವೇದ್ಯವಾಗಿರುವ ಸಂಗತಿ. ಊಳಿಗಮಾನ್ಯ ವ್ಯವಸ್ಥೆಯೂ ಬಂಡವಾಳ ವ್ಯವಸ್ಥೆಯೂ ಸಮಾಜವಾದಿ ವ್ಯವಸ್ಥೆಯೂ ಪ್ರತಿಯೊಂದು ಜನಾಂಗದ ಆರ್ಥಿಕ ಸಾಮಾಜಿಕ ಅಭಿವೃದ್ಧಿಯಲ್ಲಿ ಅನುಕ್ರಮವಾಗಿ ಬರುವ ಮೂರು ಘಟ್ಟಗಳೆಂಬುದು ಮಾಕ್ರ್ಸ್‍ವಾದದ ಸಿದ್ದಾಂತ. ಕೆಲವು ರಾಜಕೀಯ ಹಾಗೂ ಮಾನಸಿಕ ಪರಿಸ್ಥಿತಿಗಳಿಂದಾಗಿ ಊಳಿಗಮಾನ್ಯ ವ್ಯವಸ್ಥೆ ಉದ್ಭವಿಸುವುದೆಂಬುದು ಈ ತೌಲನಿಕ ವಿವೇಚನೆಯಿಂದ ಮೂಡಿಬರುವ ವಿಚಾರ. ವಿಶಾಲ ಪ್ರದೇಶದ ಆಡಳಿತ ನಡೆಸಲು ಅಗತ್ಯವಾದ ಭೌತಿಕ ಮಾನಸಿಕ ಪರಿಸರವಾಗಲಿ ಸೌಲಭ್ಯವಾಗಲಿ ಇಲ್ಲದಂಥ ಪರಿಸ್ಥಿತಿಯಲ್ಲಿ ಒಂದು ದೊಡ್ಡ ಸಾಮ್ರಾಜ್ಯದ ನಿರ್ಮಾಣವಾದಾಗ ಅದರ ಫಲವಾಗಿ ಊಳಿಗಮಾನ್ಯ ವ್ಯವಸ್ಥೆ ಉದ್ಭವಿಸಬಹುದು. ರಾಷ್ಟ್ರದ ಕಲ್ಪನೆಯಾಗಲಿ, ಒಗ್ಗಟ್ಟನ್ನು ಸಾಧಿಸುವ ಬಿಗಿಯಾಗಲಿ ಸಾರಿಗೆ ಸಂಪರ್ಕವಾಗಲಿ ಇಲ್ಲದಾಗ ಈ ಬಗೆಯ ವ್ಯವಸ್ಥೆ ಬರುವ ಸಂಭವವುಂಟು. ಭಾರತದಲ್ಲಿ ಔರಂಗeóÉೀಬನ ಅನಂತರ ಇಂಥ ಪರಿಸ್ಥಿತಿ ಏರ್ಪಟ್ಟಿತ್ತೆನ್ನಬಹುದು. ಅನಾಗರಿಕ ಸ್ಥಿತಿಯಿಂದ ಆಧುನಿಕ ರಾಷ್ಟ್ರವಾಗಿ ಪರಿವರ್ತನೆಗೊಳ್ಳುವಾಗ ಪ್ರತಿಯೊಂದು ಜನಾಂಗದಲ್ಲೂ ಊಳಿಗಮಾನ್ಯ ವ್ಯವಸ್ಥೆ ತಲೆಯೆತ್ತುವ ಅಪಾಯವಿದೆ. ಆದರೆ ಆರ್ಥಿಕ ಸಾಮಾಜಿಕ ಬೆಳೆವಣಿಗೆಯ ಹಾದಿಯಲ್ಲಿ ಊಳಿಗಮಾನ್ಯ ಪದ್ಧತಿ ಸಂಭಾವ್ಯವೇ ಹೊರತು ಅನಿವಾರ್ಯವೇನೂ ಅಲ್ಲ. ಅದನ್ನು ಹಾರಿಸಿ ಮುಂದಿನ ಘಟ್ಟ ಅಡಗಿರುವುದು ಸಾಧ್ಯ. ಹೊರ ಸಂಪರ್ಕವಿಲ್ಲದೆ ಸ್ಥಗಿತವಾದ ಕೃಷಿಕ ಅರ್ಥವ್ಯವಸ್ಥೆಗಳಲ್ಲಿ ಊಳಿಗಮಾನ್ಯ ಲಕ್ಷಣಗಳಿರುವ ಸೈನಿಕ ಶ್ರೀಮಂತ ನಿರಂಕುಶ ಪ್ರಭುತ್ವಗಳನ್ನು ಇಂದಿಗೂ ಕಾಣಬಹುದು.

ಯೂರೋಪಿನಲ್ಲಿ ಊಳಿಗಮಾನ್ಯ ವ್ಯವಸ್ಥೆ ಎಂಟನೆಯ ಶತಮಾನದಲ್ಲಿ ನಿರ್ದಿಷ್ಟ ರೂಪ ತಳೆದು ಹದಿನೆಂಟನೆಯ ಶತಮಾನದ ಅಂತ್ಯದವರೆಗೂ ತನ್ನ ಪ್ರಭಾವವನ್ನು ಅಬಾಧಿತವಾಗಿ ಹಬ್ಬಿಸಿತ್ತು. ಎಂಟನೆಯ ಶತಮಾನಕ್ಕೂ ಬಲು ಹಿಂದೆ, ರೋಮನ್ ಚಕ್ರಾಧಿಪತ್ಯದ ಕಾಲದಲ್ಲೇ, ಈ ವ್ಯವಸ್ಥೆಯ ಮೂಲಗಳನ್ನು ಕಾಣಬಹುದು. ರೋಮನ್ ಸಾಮ್ರಾಜ್ಯದ ಅವನತಿ ಮತ್ತು ಪತನ ಕಾಲದಲ್ಲಿ ಏರ್ಪಟ್ಟ ಅಶಾಂತಿ ಮತ್ತು ಅರಾಜಕತೆ ಇದರ ಉಗಮಕ್ಕೆ ನಾಂದಿಯಾಯಿತೆಂದು ಹೇಳಬಹುದು. ಕೇಂದ್ರಾಡಳಿತ ಕ್ಷೀಣಿಸಿ ಸಣ್ಣಪುಟ್ಟ ರಾಜ್ಯಗಳ ಮತ್ತು ಪಾಳೆಯಪಟ್ಟುಗಳ ಏಳಿಗೆಗೆ ತೆರವು ಮಾಡಿಕೊಟ್ಟಿತು. ನಿರಂತರ ಅಂತರ್ಯುದ್ಧಗಳಲ್ಲಿ ತೊಡಗಿ, ರಾಜಕೀಯ ಆರ್ಥಿಕ ದುರ್ಬಲತೆಗೆ ಕಾರಣವಾಗಿ ಬಲಹೀನವಾಗಿದ್ದ ರಾಜ್ಯಗಳು ತಮ್ಮ ಪ್ರಜೆಗಳಿಗೆ ಪರಕೀಯರ ಮತ್ತು ಅನಾಗರಿಕರ ದಾಳಿಯ ವಿರುದ್ಧ ರಕ್ಷಣೆ ಒದಗಿಸಲು ಅಸಮರ್ಥವಾಗಿದ್ದವು. ಸದಾ ಯುದ್ಧಭೀತಿಗೊಳಗಾಗಿದ್ದ ಆಗಿನ ಜನ ತಮ್ಮ ಜೀವದ ರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧರಿದ್ದರು. ಮಧ್ಯಯುಗದಲ್ಲಿ ಜನರಿಗಿದ್ದ ಏಕಮೇವ ಆಸ್ತಿಯೆಂದರೆ ಭೂಮಿ. ಅಂಥ ಭೂಮಿಯನ್ನು ತಮ್ಮ ಜೀವಕ್ಕೆ ರಕ್ಷಣೆಯನ್ನೊದಗಿಸುವ ಸಮರ್ಥ ವ್ಯಕ್ತಿಗೆ ಒಪ್ಪಿಸಿ ರಕ್ಷಣೆ ಪಡೆದರು. ಇದರಿಂದ ಊಳಿಗಮಾನ್ಯ ಪದ್ಧತಿಗೆ ಭೂಮಿಯೇ ಅಸ್ತಿಭಾರವಾಯಿತು.

ಮೇನರ್ ಅಥವಾ ಜಹಗೀರು ವ್ಯವಸ್ಥೆಯ ಕೇಂದ್ರ

ಮೇನರ್ ಅಥವಾ ಜಹಗೀರು ವ್ಯವಸ್ಥೆಯ ಕೇಂದ್ರವಾಗಿ ಮೇನರಿನ ಒಡೆಯನ-ಪ್ರಭುವಿನ-ಭವನ, ಅದರ ಸುತ್ತ ಅವನಿಗೆ ಸೇರಿದ ಗ್ರಾಮಸಮೂಹ. ಕೆಲವು ಜಮೀನುಗಳು ಮಾತ್ರ ಅವನಿಗೆ ಸ್ವಂತ, ಉಳಿದವು ಜೀತದಾರರಿಗೆ ಊಳಿಗಮಾನ್ಯವಾಗಿ ಸೇರಿದ್ದು. ಭೂಮಿ ಇವರಿಗೆ ಅನುಭವ ಬಾಧ್ಯಸ್ಥವೇ ಹೊರತು ಸ್ವಂತವಲ್ಲ. ಇವರ ಕಾಲಾನಂತರ ಚಾಲ್ತಿಯಲ್ಲಿ ಇದು ಇವರ ವಾರಸುದಾರರಿಗೆ ಸೇರುತ್ತಿತ್ತು. ಜೀತಗಾರರು ಗುಲಾಮರಲ್ಲದಿದ್ದರೆ ಅವರಿಗೆ ಭೂಮಿಯನ್ನು ಬಿಟ್ಟು ಹೋಗುವ ಹಕ್ಕಿರಲಿಲ್ಲ. ಜಮೀನನ್ನು ಸಾಗುವಳಿಗೆ ಪಡೆದದ್ದಕ್ಕೆ ಮಾಡಬೇಕಾದ ಪ್ರತಿಸೇವೆಯೆಂದರೆ ಬೆಳೆ ಪಶುಧನಗಳ ಒಂದಂಶ ಸಲ್ಲಿಕೆ, ನಿರ್ದಿಷ್ಟ ಕಾಲಗಳಲ್ಲಿ ಪ್ರಭುವಿನ ಸ್ವಂತ ಜಮೀನಿನ ವ್ಯವಸಾಯಕ್ಕೆ ಉಚಿತಸೇವೆ, ಸೈನ್ಯ ಸೇವೆ ಮೊದಲಾದವು. ಪ್ರಭುಗಳ ಕರ್ತವ್ಯಗಳೆಂದರೆ ಜಹಗೀರನ ರಕ್ಷಣೆ, ವ್ಯಾಜ್ಯಗಳ ತೀರ್ಪು, ಜನರ ಸೌಖ್ಯಕ್ಕೆ ಅಗತ್ಯವಾದ ಸಾಮಾಜಿಕ ಆರ್ಥಿಕ ವ್ಯವಸ್ಥೆಗಳ ನಿರ್ವಹಣೆ, ಸಮಾಜ ಸಂಪ್ರದಾಯಬದ್ಧವಾದ್ದರಿಂದ ಪ್ರಭುಗಳು ಸ್ವಚ್ಫಂದವರ್ತಿಗಳಾಗಲೂ ಜೀತಗಾರರು ತೀವ್ರಗಾಮಿಗಳಾಗಲೂ ಅವಕಾಶ ಕಡಿಮೆಯಿತ್ತು.ತಾತ್ತ್ವಿಕವಾಗಿ ರಾಜನೇ ದೇಶಕ್ಕೆಲ್ಲಾ ಒಡೆಯನಾಗಿದ್ದು ಜನರೆಲ್ಲ ಅವನ ಅಧೀನರಾದರೂ ವಾಸ್ತವವಾಗಿ ಪ್ರಭುಗಳ ಸಮೂಹದಲ್ಲಿ ಈತ ಅಗ್ರ. ಸ್ವಂತಕ್ಕೆ ಸೇರಿದ ಮೇನರುಗಳಿಂದ ಈತ ವರಮಾನ ಪಡೆಯುತ್ತಿದ್ದ. ಊಳಿಗಮಾನ್ಯ ಕರಾರಿನ ಪ್ರಕಾರ ಪ್ರಭುಗಳು ಸುಸಜ್ಜಿತ ಯೋಧರೊಡನೆ ರಾಜನಿಗೆ ಸೈನ್ಯಸೇವೆ ಸಲ್ಲಿಸಬೇಕಿತ್ತು. ನಿರ್ದಿಷ್ಟ ವೇಳೆಗಳಲ್ಲಿ ಹಣಕಾಸು ಕೊಡಬೇಕಿತ್ತು. ಆದರೆ ಇವುಗಳ ಸಂಗ್ರಹಣ ರಾಜನ ಪ್ರಭಾವಕ್ಕೆ ತಕ್ಕಂತಿತ್ತು. ಹಲವು ವೇಳೆ ರಾಜನಿಗಿಂತ ಅವನ ಅಧೀನದಲ್ಲಿದ್ದ ಪ್ರಭುಗಳೇ ಹೆಚ್ಚು ಶ್ರೀಮಂತರಾಗಿಯೂ ಪ್ರಭಾವಶಾಲಿಯಾಗಿಯೂ ಇರುತ್ತಿದ್ದರು. ಆ ಕಾಲದಲ್ಲಿ ರಾಜನಿಷ್ಠೆಗೆ ಪ್ರಧಾನ ಸ್ಥಾನವಿರಲಿಲ್ಲ. ಪ್ರತಿಯೊಬ್ಬರೂ ಯಾರಿಗೆ "ನಿನ್ನವನು" ಎಂದು ಮಾತಿತ್ತರೊ ಅವರಿಗೆ ಅನುಕೂಲವಾಗಿ ನಡೆಯುವುದೇ ಆಗಿನ ನೀತಿಸೂತ್ರವಾಗಿತ್ತು. ಪ್ರಭುಗಳ ವರ್ಗದ ಅನಂತರದ ವರ್ಗವೇ ಆಶ್ರಿತ ವರ್ಗ. ಇವರು ನೇರವಾಗಿ ಪ್ರಭುಗಳ ಅಧೀನಕ್ಕೆ ಒಳಪಟ್ಟಿದ್ದರು; ಅವರಿಂದ ದೊರೆತ ಭೂಮಿಯ ಮೇಲ್ವಿಚಾರಣೆಯ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಭೂಮಿಯಿಂದ ಬರುತ್ತಿದ್ದ ಗೇಣಿಯೇ ಈ ವರ್ಗದ ಮುಖ್ಯ ಆದಾಯ. ಪ್ರಭುಗಳಿಂದ ದೊರಕಿದ ಭೂಮಿಗೆ ಪ್ರತಿಯಾಗಿ ಆಶ್ರಿತರು ಅವರಿಗೆ ಅನೇಕ ಬಗೆಯ ಕೈಂಕರ್ಯ ಸಲ್ಲಿಸುತ್ತಿದ್ದರು. ಸೈನಿಕ ಸೇವೆಗೆ ಇವರು ಸದಾ ಸಿದ್ಧರಾಗಿರಬೇಕಾದ್ದದ್ದು ಅವಶ್ಯ. ಇಂಥ ಸೈನಿಕ ಸೇವೆ ಸಾಮಾನ್ಯವಾಗಿ ನಲವತ್ತು ದಿನಗಳ ಮಿತಿಗೆ ಒಳಗಾಗಿತ್ತು. ಪ್ರವಾಸಕ್ಕಾಗಲಿ ಅಥವಾ ಬೇಟೆಗಾಗಲಿ ಪ್ರಭು ಹೊರಟಾಗ ಅವನಿಗೆ ಸಹಾಯ ಮತ್ತು ಸತ್ಕಾರ ನೀಡುವುದೂ ಅವರು ಯುದ್ಧದಲ್ಲಿ ಕೈಸೆರೆಯಾದಲ್ಲಿ ಅವರ ಬಿಡುಗಡೆಗೆ ಹಣ ತೆರುವುದೂ ಪ್ರಭುವಿನ ಮಗಳ ಮದುವೆಯಾದಾಗ, ಅವನ ಮಗ ಸೈನಿಕ ಶಿಕ್ಷಣ ಮುಗಿಸಿ ಯೋಧ ಪದವಿಗಳಿಸಿದಾಗ, ಆಶ್ರಿತ ಅವನಿಗೆ ಅಪಾರ ಕಾಣಿಕೆ ಸಲ್ಲಿಸಬೇಕಾಗಿತ್ತು. ತನ್ನ ಧನಿಗೆ ಸಹಾಯ ನೀಡುವುದಷ್ಟೇ ಆಶ್ರಿತನ ಕರ್ತವ್ಯವಲ್ಲ; ಯಥೋಚಿತ ಸಲಹೆ ನೀಡುವುದೂ ಅವನ ಒಂದು ಕರ್ತವ್ಯ.

ಗುಣಲಕ್ಷಣಗಳು

ಮಾಲಿಕರು, ಹಿಡುವಳಿದಾರರು ಮತ್ತು ಉಂಬಳಗಳು

  • ಊಳಿಗಮಾನ ಪದ್ದತಿಯನ್ನು ವಿವರಿಸುವ ಮೂರು ಮೂಲಭೂತ ಅಂಶಗಳೆದರೆ: ಮಾಲಿಕರು, ಹಿಡುವಳಿದಾರರು ಮತ್ತು ಉಂಬಳಗಳು; ಊಳಿಗಮಾನದ ಗುಂಪು ಈ ಮೂರು ಅಂಶಗಳು ಹೇಗೆ ಒಂದಕ್ಕೊಂದು ಹೊಂದಿಕೊಳ್ಳುತ್ತವೆ ಎಂಬುದನ್ನು ವಿವರಿಸುತ್ತವೆ. ಒಬ್ಬ ಮಾಲಿಕನು ಭೂಮಿಯನ್ನು (ಒಂದು ಉಂಬಳ) ತನ್ನ ಹಿಡುವಳಿದಾರನಿಗೆ ಕೊಡುತ್ತಿದ್ದನು. ಉಂಬಳಕ್ಕೆ ಬದಲಾಗಿ ಹಿಡುವಳಿದಾರನು ಮಾಲಿಕನಿಗೆ ಸೈನಿಕ ಸೇವೆಯನ್ನು ಒದಗಿಸುತ್ತಿದ್ದನು.
  • ಮಾಲಿಕ, ಹಿಡುವಳಿದಾರ ಮತ್ತು ಉಂಬಳಗಳ ನಡುವಿನ ಸಂಬಂಧವು ಊಳಿಗಮಾನ ಪದ್ದತಿಯ ಪ್ರಮುಖ ಆಧಾರವಾಗಿದೆ. ಮಾಲಿಕನು ಒಬ್ಬನಿಗೆ ಭೂಮಿ (ಉಂಬಳ) ವನ್ನು ಕೊಡುವ ಮೊದಲು, ಅವನು ಆ ವ್ಯಕ್ತಿಯನ್ನು ಹಿಡುವಳಿದಾರನನ್ನಾಗಿ ಮಾಡಬೇಕಾಗುತ್ತಿತ್ತು. ಇದನ್ನು ಊಳಿಗದವನ ಪ್ರಮಾಣ ಮತ್ತು ಸತ್ಕಾರಗಳನ್ನೊಳಗೊಂಡ ಎರಡು ಕ್ರಿಯೆಗಳಿರುವ ಪ್ರಶಂಸಾ ಆಚಾರ ಎಂಬ ಔಪಚಾರಿಕ ಮತ್ತು ಸಾಂಕೇತಿಕ ಆಚಾರವಿಧಿಯ ಮೂಲಕ ನಡೆಸಲಾಗುತ್ತದೆ.
  • ಸನ್ಮಾನದ ಸಂದರ್ಭದಲ್ಲಿ, ಮಾಲಿಕ ಮತ್ತು ಹಿಡುವಳಿದಾರ ಒಂದು ಒಪ್ಪಂದಕ್ಕೆ ಬಂದು, ಮಾಲಿಕನ ಆದೇಶದ ಮೇರೆಗೆ ಹಿಡುವಳಿದಾರನು ತಾನು ಹೊರಾಡಲು ಸಿದ್ದ ಎಂಬ ಮಾತು ಕೊಡುತ್ತಾನೆ. ಪಿಯಲ್ಟಿ ( ಊಳಿಗದವ) ಎಂಬ ಪದವುಪಿಡೆಲಿಟಸ್ (ಸ್ವಾಮಿನಿಷ್ಟೆ) ಎಂಬ ಲ್ಯಾಟಿನ್ ಪದದಿಂದ ಬಂದಿದ್ದು, ಹಿಡುವಳಿದಾರನು ತನ್ನ ಮಾಲಿಕನಿಗೆ ತೋರಿಸಬೇಕಾದ ಸ್ವಾಮಿನಿಷ್ಟೆ ಎಂಬ ಅರ್ಥವನ್ನು ಸೂಚಿಸುತ್ತದೆ.
  • "ಊಳಿಗದವ" ಎಂಬ ಪದವು ಹಿಡುವಳಿದಾರನೊಬ್ಬನು ತನ್ನ ಸನ್ಮಾನದ ಸಮಯದಲ್ಲಿ ಸ್ಪಷ್ಟವಾಗಿ ಮಾಡಿದ ವಚನ ಬದ್ದತೆಗಳ ಒಂದು ಪ್ರಮಾಣವನ್ನೂ ಸಹ ಸೂಚಿಸುತ್ತದೆ. ಅಂತಹ ಒಂದು ಪ್ರಮಾಣದ ನಂತರ ಸನ್ಮಾನ ನಡೆಯುತ್ತದೆ. ಅಂತಹ ಒಂದು ಪ್ರಶಂಸನಾ ಸಮಾರಂಭ ಮುಗಿದ ನಂತರ, ಮಾಲಿಕ ಮತ್ತು ಹಿಡುವಳಿದಾರರು ಪರಸ್ಪರ ಕರಾರಿನಂತೆ ಒಂದು ಊಳಿಗ ಸಂಬಂಧಕ್ಕೆ ಸಮ್ಮತಿ ಸೂಚಿಸುತ್ತಾರೆ.
  • ಹಿಡುವಳಿದಾರನ ಪ್ರಮುಖ ಕರಾರು ಎಂದರೆ ತನ್ನ ಮಾಲಿಕನಿಗೆ ಸಹಾಯ ಮಾಡುವುದು ಅಥವಾ ಸೈನಿಕ ಸೇವೆ ಒದಗಿಸುವುದು. ಉಂಬಳದ ಕಂದಾಯದಿಂದ ಏನೆಲ್ಲಾ ಸಲಕರಣೆಗಳನ್ನು ಹಿಡುವಳಿದಾರನು ಪಡೆಯುತ್ತಾನೋ, ಮಾಲಿಕನ ಪರವಾಗಿ ಸೈನಿಕ ಸೇವೆಯ ಕರೆಗಳ ಸಮಯದಲ್ಲಿ ಅವುಗಳಿಗೆ ಹಿಡುವಳಿದಾರನೇ ಜವಾಬ್ದಾರನಾಗಿರುತ್ತಾನೆ. ಈ ಸೈನಿಕ ಸೇವೆಯ ಸಹಾಯದ ಕಾರಣಕ್ಕಾಗಿಯೇ ಮಾಲಿಕನು ಊಳಿಗ ಸಂಬಂಧಕ್ಕೆ ಒಪ್ಪಿರುತ್ತಾನೆ.
  • ಇದರ ಜೊತೆಗೆ, ಹಿಡುವಳಿದಾರನು ಕೆಲವು ಸಮಯದಲ್ಲಿ ಇತರ ಕರಾರುಗಳನ್ನೂ ನಡೆಸಿಕೊಡಬೇಕಾಗುತ್ತದೆ. ಅಂತಹ ಕರಾರುಗಳಲ್ಲಿ ಒಂದು ಎಂದರೆ ಮಾಲಿಕನು ಯುದ್ಧಕ್ಕೆ ಹೋಗಬೇಕೆ ಅಥವಾ ಬೇಡವೆ ಎಂಬ ನಿರ್ಧಾರವನ್ನು ತೆಗೆದುಕೊಳ್ಳುವಾಗ, ತನ್ನ ಎಲ್ಲಾ ಹಿಡುವಳಿದಾರರನ್ನು ಒಂದು ಸಭೆ ಸೇರುವಂತೆ ಆಜ್ಞಾಪಿಸಿ ಸೂಕ್ತ ಸಲಹೆ ಪಡೆಯುತ್ತಾನೆ. ಹಿಡುವಳಿದಾರನು ತನ್ನ ಬೆಳೆಯ ಸ್ವಲ್ಪ ಭಾಗವನ್ನು ಮಾಲಿಕನಿಗೆ ಕೊಡಬೇಕಾಗಿರುತ್ತದೆ.
  • ಕೆಲವು ಸಂದರ್ಭಗಳಲ್ಲಿ ಹಿಡುವಳಿದಾರನು ತನ್ನ ಗೋಧಿಯನ್ನು ತಾನೇ ಗಿರಣಿಗಳಲ್ಲಿ ಹಿಟ್ಟು ಮಾಡಿಸಿ ಕೊಳ್ಳಬೇಕಾಗುತ್ತಿತ್ತು. ಆತನ ಮಾಲಿಕನು ಒಲೆಗಳ ಒಡೆತನವನ್ನು ಹೊಂದಿದ್ದು ಅದಕ್ಕೆ ಕಂದಾಯ ನೀಡಬೇಕಿತ್ತು. ಭೂ-ಸ್ವಾಧೀನ ಸಂಬಂಧಗಳು ಉಂಬಳದ ಸುತ್ತ ಸುತ್ತುತ್ತಿದ್ದವು.

ಕೊಡುವವನ ಸಾಮರ್ಥ್ಯಕ್ಕೆ ಅನುಗುಣವಾಗಿ, ಕೊಡುವಿಕೆಗಳು ಒಂದು ಚಿಕ್ಕ ಒಕ್ಕಲ ಜಮೀನಿನಿಂದ ಹಿಡಿದು ಬಹುದೊಡ್ಡ ಭೂಮಿಯವರೆಗೂ ಇರುತ್ತಿತ್ತು.

  • ಉಂಬಳದ ಗಾತ್ರಗಳನ್ನು ಈಗಿನ ಆಧುನಿಕ ಭೂ ವಾಯಿದೆಗಳಿಗಿಂತ ಭಿನ್ನವಾದ ಅನಿಯಮಿತ ವಾಯಿದೆಗಳ ಮೂಲಕ ನಿರ್ಧರಿಸಲಾಗುತ್ತಿತ್ತು (ನೋಡಿರಿಮಧ್ಯಕಾಲೀನ ಭೂ ವಾಯಿದೆಗಳು). ಒಡೆಯ-ಹಿಡುವಳಿದಾರ ಸಂಬಂಧವು ಶ್ರೀಸಾಮಾನ್ಯತೆಯ ಸದಸ್ಯರಿಗೆ ಮಾತ್ರ ಸೀಮಿತವಾಗಿಲ್ಲ; ಉದಾಹರಣೆಗೆ, ಬಿಷಪರು ಮತ್ತು ಅಬೋಟರು, ಸಹ ಒಡೆಯರಾಗಿ ವರ್ತಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಆದ್ದರಿಂದ ಮಾಲಿಕತ್ವ ಹಾಗೂ ಹಿಡುವಳಿಕೆಯಲ್ಲಿ ವಿವಿಧ ಹಂತಗಳು ಇದ್ದವು.
  • ಅರಸನು ಮಾಲಿಕನಾಗಿದ್ದು ಉಂಬಳಗಳನ್ನು ಶ್ರೀಮಂತರಿಗೆ ಎರವಲಾಗಿ ಕೊಡುತ್ತಿದ್ದನು, ಅವರೇ ಹಿಡುವಳಿದಾರರಾಗಿದ್ದರು. ಶ್ರೀಮಂತರು ಉಪಊಳಿಗಮಾನದ ಮೂಲಕ ತಮ್ಮ ಸ್ವಂತ ಹಿಡುವಳಿಗಳಿಗೆ ಮಾಲಿಕರಾಗಿರುತ್ತಿದ್ದರು. ಸಾಹುಕಾರರು ಹೊಲದಲ್ಲಿ ಕೆಲಸಮಾಡುವ ಒಕ್ಕಲಿಗರಿಗೆ ಮಾಲಿಕರಾಗಿದ್ದರು. ಅಂತಿಮವಾಗಿ ಚಕ್ರವರ್ತಿಯು ಒಬ್ಬ ಮಾಲಿಕನಾಗಿದ್ದು ಹಿಡುವಳಿದಾರರಾದ ಅರಸರಿಗೆ ಭೂಮಿಯನ್ನು ಎರವಲಾಗಿ ಕೊಡುತ್ತಿದ್ದನು.
  • ಸಾಂಪ್ರದಾಯಿಕವಾಗಿ ಇದು ಒಂದು ಸಾರ್ವಭೌಮಿಕ ಒಗ್ಗೂಡಿವಿಕೆಯ 'ಸಾರ್ವತ್ರಿಕ ಚಕ್ರಾಧಿಪತ್ಯ'ಕ್ಕೆ ಆಧಾರವಾಯಿತು ಮತ್ತು ಜಗತ್ತಿನ ಒಂದು ಕ್ರಮವಾಗಿ ಪರಿಣಮಿಸಿತು. ಹಿಡುವಳಿಗೆದಾರರಿಗೆ ಬರೀ ಜಮೀನನ್ನು ಕೊಡುವುದಷ್ಟೇ ಅಲ್ಲದೆ ಕೆಲವು ಸುಂಕ ಅಥವಾ ತೆರಿಗೆಗಳನ್ನು ಸಂಗ್ರಹಿಸುವ ಮತ್ತು ತಮ್ಮ ಜಮೀನುಗಳ ಮೇಲೆ ಖಾಸಗಿ ಕಾನೂನು ವ್ಯಾಪ್ತಿ ಅಧಿಕಾರ ಗಳನ್ನು ಪಡೆಯುವ ಹಕ್ಕುಗಳನ್ನು ನೀಡಲಾಗುತ್ತಿತ್ತು.

ಊಳಿಗಮಾನ್ಯ ಪದ್ಧತಿಯಲ್ಲಿ ಕಟ್ಟಕಡೆಯ ವರ್ಗವೇ ಗೇಣಿದಾರರ, ಜೀತಗಾರರ ಮತ್ತು ಕೃಷಿ ಕಾರ್ಮಿಕರ ವರ್ಗ. ಈ ವರ್ಗದವರು ಅಸಂಖ್ಯಾತರು, ನೇರವಾಗಿ ಕೃಷಿ ಕೆಲಸದಲ್ಲಿ ನಿರತರಾಗಿದ್ದವರು, ಗೇಣಿದಾರರ ಮತ್ತು ಜೀತಗಾರರ ಸ್ಥಿತಿಗತಿಗಳನ್ನು ನಿರ್ದಿಷ್ಟವಾಗಿ ವಿವರಿಸಲು ಸಾಧ್ಯವಿಲ್ಲ. ಏಕೆಂದರೆ ಅವರ ಸ್ಥಿತಿಗತಿಗಳಲ್ಲಿ ಕಾಲಕಾಲಕ್ಕೂ ವ್ಯತ್ಯಾಸಗಳಿದ್ದುವು. ಒಂದು ದೃಷ್ಟಿಯಲ್ಲಿ ಗೇಣಿದಾರರ ಜೀವನ ಆಧುನಿಕ ಕೂಲಿಗಾರರ ಜೀವನಕ್ಕಿಂತ ಉತ್ತಮವಾಗಿತ್ತೆಂದು ಹೇಳಬಹುದು. ಆತನಿಗೆ ತನ್ನ ಗೇಣಿಯ ಪೂರ್ಣ ರಕ್ಷಣೆಯಿತ್ತು. ಪ್ರಭು ಆತನಿಂದ ಭೂಮಿಯನ್ನು ಸ್ವೇಚ್ಫೆಯಾಗಿ, ಸಂಪ್ರದಾಯಕ್ಕೆ ವಿರುದ್ಧವಾಗಿ ಕಿತ್ತುಕೊಳ್ಳುವ ಹಾಗಿರಲಿಲ್ಲ. ಆಸ್ತಿಯ ಉತ್ತರಾಧಿಕಾರದ ಹಕ್ಕೂ ತಂದೆಯಿಂದ ಮಗನಿಗೆ ವಂಶಪಾರಂಪರ್ಯವಾಗಿ ಸಾಮಾನ್ಯವಾಗಿ ಯಾವ ಅಡಚಣೆಯೂ ಇಲ್ಲದೆ ನಡೆದುಬರುತ್ತಿತ್ತು. ಗೇಣಿದಾರ ಬಹುಮಟ್ಟಿಗೆ ರಕ್ಷಣೆಯನ್ನೂ ಸ್ವಲ್ಪಮಟ್ಟಿನ ಜೀವನಾನುಕೂಲಗಳನ್ನೂ ಹೊಂದಿದ್ದ, ಆದರೆ ತನ್ನ ಧನಿಯನ್ನು ಸದಾ ಅವಲಂಬಿಸಿರಬೇಕಾಗಿತ್ತು. ಪ್ರತಿ ಗಳಿಗೆಯೂ ತನ್ನ ಧನಿಯ ಸುಖ ಸಂತೋಷಗಳಿಗಾಗಿ ಶ್ರಮಿಸುವುದು ಅವನ ಕರ್ತವ್ಯ. ಧನಿ ಅವನ ಮೇಲೆ ಹಾಕುವ ಕರಕ್ಕೆ ಯಾವ ಮಿತಿಯೂ ಇರಲಿಲ್ಲ. ಬಲವಂತ ಬಿಟ್ಟಿ ಸೇವೆಗೂ ಮಿತಿಯಿರಲಿಲ್ಲ. ಇದರಿಂದ ಅವನ ಆರ್ಥಿಕ ಪರಿಸ್ಥಿತಿಗಳಿಗೆ ಪ್ರತಿಕೂಲವೊದಗುತ್ತಿದ್ದದ್ದಲ್ಲದೆ ಅನೇಕ ವೇಳೆ ಸ್ವಕಾರ್ಯಗಳಿಗೆ ಸಮಯವೇ ಉಳಿಯುತ್ತಿರಲಿಲ್ಲ. ಜಗಳ ಸಂಭವಿಸಿದಾಗ ಪ್ರಭುವಿನ ನ್ಯಾಯಸ್ಥಾನದಲ್ಲಿ ವಿಚಾರಣೆಗೆ ಗುರಿಯಾಗಿ, ಆತ ಹಾಕಿದ ದಂಡ ತೆರಬೇಕಾಗಿತ್ತು. ಹೀಗೆ ಗೇಣಿದಾರ ವರ್ಗದ್ದು ಪಾರತಂತ್ರ್ಯದ ಜೀವನ. ಅನೇಕ ವೇಳೆ ಅಸಹನೀಯ ಕಷ್ಟ ಅನುಭವಿಸಬೇಕಾಗಿದ್ದ ಈ ಜನ ಸಂಪ್ರದಾಯ ಬಲದಿಂದ ಅದಕ್ಕೆ ಬಂಧಿತರಾಗಿದ್ದರ ಸಾಮಾಜಿಕ ದೃಷ್ಟಿಯಿಂದ ಇದು ಆದರ್ಶವೀರರ ಯುಗ. ತಾವು ಆಶ್ರಯಿಸಿದ್ದ ನಾಯಕರಲ್ಲಿ ಭಕ್ತಿಯಿಂದಲೂ ನಿಷ್ಠೆಯಿಂದಲೂ ನಡೆದುಕೊಳ್ಳುವುದೂ ಮಹಿಳೆಯರ ಗೌರವವನ್ನು ಕಾಪಾಡುವುದೂ ದೀನ ದುರ್ಬಲರ ರಕ್ಷಣೆಯಲ್ಲಿ ಮುಂದಾಗಿರುವುದೂ ತಮ್ಮ ಆದರ್ಶ ಮಹಿಳೆಯರಲ್ಲಿ ಅನುಕೂಲವಾಗಿ ವರ್ತಿಸುವುದೂ ವೀರೋಚಿತ ವರ್ತನೆಗಳಾಗಿದ್ದುವು. ಶಸ್ತ್ರಾಭ್ಯಾಸ, ಯುದ್ಧ ತರಬೇತು, ನಾಯಕರ ಆಸ್ಥಾನಗಳ ನಡೆವಳಿ, ಮಲ್ಲಯುದ್ಧ ಕ್ರೀಡಾಯುದ್ಧಗಳ ನಿಯಮಗಳು- ಇವೇ ಇವರ ವಿದ್ಯಾಕ್ರಮದಲ್ಲಿ ಮುಖ್ಯವಾಗಿದ್ದುವು. ಶಾಸ್ತ್ರe್ಞÁನ ಗೌಣವೆನಿಸಿತ್ತು, ಹಲವಾರು ಶ್ರೀಮಂತ ವೀರರು ನಿರಕ್ಷರರಾಗಿಯೇ ಇದ್ದರು.

ಊಳಿಗಮಾನ್ಯ ವ್ಯವಸ್ಥೆಯ ಆಂತರಿಕ ಬೆಳೆವಣಿಗೆ

ಊಳಿಗಮಾನ್ಯ ವ್ಯವಸ್ಥೆಯ ಆಂತರಿಕ ಬೆಳೆವಣಿಗೆಯಾದದ್ದು ಒಂಬತ್ತನೆಯ ಶತಮಾನದಲ್ಲಿ. ಭೂಮಾನ್ಯ ವಂಶಪಾರಂಪರ್ಯವಾದದ್ದು ಆಗಲೇ. ಮುಂದೆ ಕ್ರಮೇಣ ಊಳಿಗಮಾನ್ಯ ವ್ಯವಸ್ಥೆಯನ್ನು ಸೆಳೆದಿಟ್ಟಿದ್ದ ಕೇಂದ್ರ ಶಕ್ತಿ ಕ್ಷೀಣಿಸಿತು. ದೊರೆ ದುರ್ಬಲನಾದ. ಸ್ಥಳೀಯ ಪ್ರಭುಗಳು ಸ್ವತಂತ್ರವಾಗಿ ಬಲಿಷ್ಠರಾಗಿ ತಂತಮ್ಮ ಪ್ರಾದೇಶಿಕ ರಾಜ್ಯಗಳನ್ನು ಕಟ್ಟಿಕೊಂಡರು. 12ನೆಯ ಶತಮಾನದ ವೇಳೆಗೆ ಈ ವ್ಯವಸ್ಥೆಯ ಸಾಮಾಜಿಕ ಪ್ರಾಬಲ್ಯವೂ ಕುಂದಲಾರಂಭಿಸಿತೆನ್ನಬಹುದು. ನಾನಾ ಬಗೆಯ ವಿರುದ್ಧ ಶಕ್ತಿಗಳ ಆಘಾತ ಒದಗಲಾರಂಭಿಸಿತು. ಕೇಂದ್ರ ಪ್ರಾಬಲ್ಯವುಳ್ಳ ರಾಷ್ಟ್ರಗಳ ಉದಯವೂ ರೋಮನ್ ಮಾದರಿಯಲ್ಲಿ ಸಂಬಳ ಪಡೆಯುವ ಅಧಿಕಾರಿಗಳ ಹಾಗೂ ಸೈನ್ಯದ ಸೃಷ್ಟಿಯೂ ಪ್ರಭು-ಜೀತಗಾರ ಸಂಬಂಧದ ಬದಲು ದೊರೆ-ಪ್ರಜೆ ಸಂಬಂಧದ ಬೆಳೆವಣಿಗೆಯೂ ಆರ್ಥಿಕ ಶಕ್ತಿಯುಳ್ಳ ನಗರಗಳ ಉದಯವೂ ಇದರ ಕ್ಷೀಣಗತಿಗೆ ಕೆಲವು ಕಾರಣಗಳು. ಮೇನರಿನ ಪದ್ಧತಿ ಆರ್ಥಿಕ ಮುಗ್ಗಟ್ಟಿಗೆ ಸಿಕ್ಕಿಕೊಂಡಿದ್ದರಿಂದ ಹಳೆಯ ಶ್ರೀಮಂತರ ಪ್ರಭಾವ ಕುಗ್ಗಿತು. ವಾಣಿಜ್ಯ ವಹಿವಾಟುಗಳಿಂದ ಹಣವಂತರಾದವರನೇಕರು ನೆಲವನ್ನೂ ಇತರ ಸ್ವತ್ತುಗಳಂತೆ ಕೊಳ್ಳಲಾರಂಭಿಸಿದಾಗ ಈ ವ್ಯವಸ್ಥೆಯ ಕಟ್ಟು ಸಡಿಲವಾಯಿತು. ಆದರೂ ಊಳಿಗಮಾನ್ಯ ವ್ಯವಸ್ಥೆಯ ಕೆಲವು ನ್ಯಾಯಪದ್ಧತಿಗಳು 20ನೆಯ ಶತಮಾನದವರೆಗೂ ಉಳಿದುಕೊಂಡು ಬಂದುವೆನ್ನಬಹುದು.ಊಳಿಗಮಾನ್ಯ ವ್ಯವಸ್ಥೆಯಲ್ಲಿ ಅಧಿಕಾರ ಸ್ಥಳೀಯ ಶಕ್ತ ವ್ಯಕ್ತಿಗಳಲ್ಲಿ ಹಂಚಿಕೆಯಾಗಿರುತ್ತದಾದ್ದರಿಂದ ಅನಾಯಕತ್ವ ಪ್ರವೃತ್ತಿಯುಳ್ಳ ಸಡಿಲತೆಯೇ ಊಳಿಗಮಾನ್ಯ ವ್ಯವಸ್ಥೆಯ ಒಂದು ಅವಶ್ಯ ಲಕ್ಷಣವೆಂದು ಇತಿಹಾಸಕಾರರ ಸಾಮಾನ್ಯ ಭಾವನೆ. ಆದರೆ ವಾಸ್ತವವಾಗಿ ಎಲ್ಲ ಸಂದರ್ಭಗಳಲ್ಲೂ ಪರಿಸ್ಥಿತಿ ಹೀಗಿದ್ದಿತು. ಈ ವ್ಯವಸ್ಥೆಯ ಮೇಲೆ ಕುಳಿತ ದೊರೆಯ ವೈಯಕ್ತಿಕ ಸಾಮಥ್ರ್ಯವನ್ನೇ ಇದು ಬಹಳ ಮಟ್ಟಿಗೆ ಅವಲಂಬಿಸಿತ್ತು. ಆಂತರಿಕವಾಗಿ ಈ ವ್ಯವಸ್ಥೆಯಲ್ಲಿ ಅನಾಯಕತ್ವದ ಲಕ್ಷಣಗಳೇನೂ ಇರಲಿಲ್ಲ. ವೈಯಕ್ತಿಕ ಸಂಬಂಧಗಳಿಂದ ಮಾತ್ರವೇ ವಿಶಾಲ ಚಕ್ರಾಧಿಪತ್ಯದ ಏಕತೆಯನ್ನು ಕಾಪಾಡುವುದು ಸಾಧ್ಯವಾಗಿದ್ದ ಆ ಕಾಲದಲ್ಲಿ ಈ ವ್ಯವಸ್ಥೆ ಅನೇಕ ಸಾರಿ ಒಗ್ಗಟ್ಟಿನ ಸಾಧನವಾಗಿತ್ತು. 12, 13ನೆಯ ಶತಮಾನಗಳಲ್ಲಿ ಫ್ರೆಂಚ್ ದೊರೆಗಳು ಬಾಡಿದ ಹೂವಿನ ದಳಗಳಂತೆ ಉದುರಿ ಹೋಗಲಿದ್ದ ಪ್ರದೇಶಗಳನ್ನು ಒಂದಾಗಿ ಪವಣಿಸಲು ಊಳಿಗಮಾನ್ಯ ವ್ಯವಸ್ಥೆಯ ಸೂತ್ರವನ್ನೇ ಬಳಸಿಕೊಂಡರೆಂಬುದು ಉಲ್ಲೇಖನಾರ್ಹ.

ಪಾಶ್ಚಾತ್ಯ ನಾಗರಿಕತೆ

ಪಾಶ್ಚಾತ್ಯ ನಾಗರಿಕತೆ ಹಾಗೂ ಸಮಾಜಗಳ ಮೇಲೆ ಊಳಿಗಮಾನ್ಯ ವ್ಯವಸ್ಥೆಯ ಪ್ರಭಾವ ಬಲು ಆಳವಾದದ್ದು. ಸ್ವಾಮಿನಿಷ್ಠೆಯೂ ಸ್ಥೈರ್ಯ ಸಾಹಸಗಳ ಬಗ್ಗೆ ಏರ್ಪಟ್ಟ ಸಂಹಿತೆಯೂ ಈ ವ್ಯವಸ್ಥೆಯ ಸಲ್ಲಕ್ಷಣಗಳು. ಸೈನಿಕ ಶ್ರೀಮಂತವರ್ಗದ ರಚನೆ ಈ ವ್ಯವಸ್ಥೆಯ ಇನ್ನೊಂದು ಲಕ್ಷಣ. ಬಾಹ್ಯ ಶತ್ರುಗಳಿಂದ ಜನರನ್ನು ಇವರು ರಕ್ಷಿಸುತ್ತಿದ್ದರಾದರೂ ಈ ವರ್ಗದವರು ಪರಸ್ಪರವಾಗಿ ಸಣ್ಣಪುಟ್ಟ ಕದನಗಳಲ್ಲಿ ನಿರತರಾಗಿದ್ದದ್ದರಿಂದ ಪದೇ ಪದೇ ಶಾಂತಿಭಂಗವಾಗುತ್ತಿತ್ತು. ಬಲಿಷ್ಠನದೇ ನ್ಯಾಯವೆನಿಸುತ್ತಿತ್ತು. ಯುದ್ಧಾಡಳಿತ ನಿರತವಾದ ಮೇಲುವರ್ಗದ ಬೆಳೆವಣಿಗೆಯಿಂದ ಶ್ರೀಸಾಮಾನ್ಯರ ಪ್ರಾಮುಖ್ಯ ಬಲುಮಟ್ಟಿಗೆ ಕಡಿಮೆಯಾಯಿತು. ಆರ್ಥಿಕ ಬೆಳೆವಣಿಗೆಯೂ ಕುಂಠಿತವಾಗಿತ್ತು. ಧಣಿ-ಸೇವಕ, ಶ್ರೀಮಂತ-ಸಾಮಾನ್ಯ, ಅಧಿಕಾರ-ಹಕ್ಕು, ಈ ದ್ವಂದ್ವಗಳ ನಡುವೆ ಘರ್ಷಣೆ ಸಂಭವಿಸಿ ಸಮಾಜಕ್ಕೆ ಆದರ್ಶವೆನಿಸಿದ ಕ್ರಾಂತಿಕಾರಿ ಭಾವನೆಗಳು ರೂಪುಗೊಳ್ಳಲು ಈ ವ್ಯವಸ್ಥೆಯೂ ಕಾರಣವೆನ್ನಬಹುದು.

ಊಳಿಗಮಾನ್ಯ ನ್ಯಾಯಪದ್ಧತಿ

ನೆಲ ಪ್ರಾಣಗಳ ರಕ್ಷಣೆಗಾಗಿ ದುರ್ಬಲನಾದವನು ಸಬಲನನ್ನಾಶ್ರಯಿಸುವ ಮನೋಭಾವದ ಫಲವಾಗಿ ಬೆಳೆದ ಊಳಿಗಮಾನ್ಯ ವ್ಯವಸ್ಥೆ ಕ್ರಮೇಣ ಹೇಗೆ ಇಡೀ ಸಮಾಜದ ಒಗ್ಗಟ್ಟಿನ ಸಾಧನವಾಯಿತೆಂಬುದು ಹಿಂದಿನ ಲೇಖನಗಳಲ್ಲಿ ವ್ಯಕ್ತವಾಗಿದೆ. ಇದರ ಪರಿಣಾಮವಾಗಿ ವಿಶಿಷ್ಟವಾದ ಒಂದು ನ್ಯಾಯ ವ್ಯವಸ್ಥೆಯೂ ರೂಪಿತವಾಗಿತ್ತು. ಪ್ರಾಣರಕ್ಷಣೆಗಾಗಿ ರಕ್ಷಕ-ರಕ್ಷಿತರಲ್ಲಿ ಆಗುವ ಒಡಂಬಡಿಕೆ ಅಥವಾ ಒಪ್ಪಂದವನ್ನು ಪ್ಯಾಟ್ರೊಸಿನಿಯಂ ಎಂಬುದಾಗಿಯೂ, ಸ್ವತ್ತಿನ(ಭೂಮಿ) ರಕ್ಷಣೆಗಾಗಿ ಮಾಡಿಕೊಂಡ ಒಪ್ಪಂದವನ್ನು ಪ್ರಿಕೇರಿಯಂ ಎಂಬುದಾಗಿಯೂ ಕರೆಯುತ್ತಿದ್ದರು... 

ಒಡೆಯ ಜೀತಗಾರ ಸಂಬಂಧ ಯಾವ ರೀತಿ ಸ್ಥಿರವಾಗಿತ್ತೆಂಬುದನ್ನು ಈ ಕೆಳಗಿನಂತೆ ವರ್ಣಿಸಲಾಗಿದೆ

ಜೀತಗಾರ ಒಡೆಯನ ಮುಂದೆ ಮೊಳಕಾಲೂರಿ ಕುಳಿತು ಮಣಿದು, ಒಡೆಯನ ಕೈಯಲ್ಲಿ ತನ್ನ ಕೈಹಾಕಿ ದಾಸ್ಯ ಒಪ್ಪಿಕೊಳ್ಳುತ್ತಿದ್ದ. ಮಣಿದವನು ಮೇಲೆದ್ದು ನಿಂತು ತಾನು ಕೈಂಕರ್ಯವೆಸಗುವುದಾಗಿ ಪ್ರಮಾಣ ಮಾಡಿ ಹೇಳುತ್ತಿದ್ದ. ಆಗ ಒಡೆಯ, ತಾನು ಅವನಿಗೆ ಕೊಡುವ ಕಾಣಿಕೆಯನ್ನು ವಿಧಿಪೂರ್ವಕವಾಗಿ ಅನುಗ್ರಹಿಸುತ್ತಿದ್ದ. ಎಲ್ಲಿಯವರೆಗೆ ಜೀತಗಾರ ತಾನು ಪ್ರಮಾಣಪೂರ್ವಕವಾಗಿ ಒಪ್ಪಿಕೊಂಡು ಸೇವೆಯನ್ನು ಸಲ್ಲಿಸುವನೋ ಅಲ್ಲಿಯವರೆಗೆ ಒಡೆಯನಿತ್ತ ಕಾಣಿಕೆಗೆ ಈತ ಹಕ್ಕುದಾರ. ಇದು ವಂಶಪಾರಂಪರ್ಯವಾಗಿ ಸಾಗುತ್ತಿತ್ತು.ಈ ವ್ಯವಸ್ಥೆಯ ಅಡಿಯಲ್ಲಿ ಹಳೆಯ ಕಾಲದ ಸ್ಥಳೀಯ ನ್ಯಾಯಾಲಯಗಳು ಮರೆಯಾಗಿ ಪ್ರತಿಯೊಬ್ಬ ಪ್ರಭುವು ಒಂದು ಪ್ರತ್ಯೇಕ ನ್ಯಾಯಾಲಯ ಏರ್ಪಡಿಸಿಕೊಂಡ. ಇಪ್ಪತ್ತನೆಯ ಶತಮಾನದಲ್ಲಿ ಶಾಸನಗಳಿಗೆ ಇರುವಷ್ಟು ಬಲ ಮಧ್ಯಯುಗದಲ್ಲಿ ಈ ಪದ್ಧತಿಗೆ ಇತ್ತು. ಪ್ರತಿಯೊಂದನ್ನೂ ಒಂದು ಕ್ರಮಕ್ಕೆ ಒಳಪಡಿಸುವಷ್ಟು ಶಕ್ತಿ ಸರ್ಕಾರಕ್ಕೆ ಆಗ ಇರಲಿಲ್ಲ. ಮೇಲಿನಿಂದ ಕೆಳಕ್ಕೆ ಪರಸ್ಪರ ಕರ್ತವ್ಯಸೇವೆಗಳ ಅಸ್ತಿವಾದದ ಮೇಲೆಯೇ ಇಡೀ ನ್ಯಾಯವ್ಯವಸ್ಥೆ ನಿಂತಿತ್ತು. ನೆಲ ಹೊಂದಿದ್ದ ಮಾತ್ರಕ್ಕೆ ಏನನ್ನಾದರೂ ಮಾಡುಬಹುದೆಂಬ ಅಧಿಕಾರ ಯಾರಿಗೂ ಇರಲಿಲ್ಲ. ನೆಲದ ಸ್ವಾಮ್ಯದೊಂದಿಗೆ ಇತರರ ಬಗ್ಗೆ ಕೆಲವು ಕರ್ತವ್ಯಗಳೂ ಇದ್ದವು. ಯುದ್ಧಕಾಲದಲ್ಲಿ ಜೀತಗಾರನಿಗೆ ರಕ್ಷಣೆ ನೀಡಬೇಕಾದ್ದು ಒಡೆಯನ ಕರ್ತವ್ಯ. ಇಬ್ಬರು ಜೀತಗಾರರ ನಡುವಣ ವ್ಯಾಜ್ಯದ ತೀರ್ಮಾನ ಪ್ರಭುವಿನ ನ್ಯಾಯಾಲಯದಲ್ಲಿ ನಡೆಯುವುದು ಸಂಪ್ರದಾಯವಾಗಿತ್ತು. ಜೀತಗಾರನ ಮೇಲೆ ಪ್ರಭುವಿನ ಅಧಿಕಾರವಿತ್ತಾದರೂ ಆತ ಪದೇ ಪದೇ ಸಂಪ್ರದಾಯದ ಕಟ್ಟು ಮುರಿದಾಗ ಆತನ ಅಧಿಪತಿ ಅವನಿಂದ ವಿವರಣೆ ಕೇಳಿದ ಸಂದರ್ಭಗಳೂ ಉಂಟು. ಮುಖ್ಯವಾಗಿ ಇಂಗ್ಲೆಂಡಿನಲ್ಲಿ ದೊರೆಯ ನ್ಯಾಯಾಸ್ಥಾನದಲ್ಲಿ ರೈತನ ದೂರಿನ ವಿಚಾರಣೆಗೂ ಅವಕಾಶವಿತ್ತು. 

ಮೇನರಿನ ಪ್ರಭುವೂ ಜೀತಗಾರ

ಮೇನರಿನ ಪ್ರಭುವೂ ಜೀತಗಾರನಂತೆಯೇ ಇದ್ದ. ಅವನೂ ನೆಲದ ಮೇಲೆ ಪರಮಾಧಿಕಾರ ಹೊಂದಿರಲಿಲ್ಲ. ಆತ ಮೇಲ್ಪಟ್ಟ ಪ್ರಭುವಿನ ಬಾಡಿಗೆದಾರ, ಜೀತಗಾರ, ಅರ್ಧ ಸ್ವತಂತ್ರ ರೈತ ಮತ್ತು ಸ್ವತಂತ್ರ ರೈತರ ಹಿಡುವಳಿಯ ಹಕ್ಕು ಪ್ರಭುವಿನಿಂದ ಬರುತ್ತಿತ್ತು. ಪ್ರಭುವಿಗೆ ಅವನ ಮೇಲ್ಪಟ್ಟ ಶ್ರೀಮಂತನಿಂದಲೂ ಆತನಿಗೆ ದೊರೆಯಿಂದಲೂ ಈ ಹಕ್ಕು ದೊರೆತಿರುತ್ತಿತ್ತು. ಕೆಲವು ವೇಳೆ ಈ ಕ್ರಮ ಇನ್ನೂ ಮುಂದುವರಿದು, ಒಬ್ಬ ದೊರೆ ಇನ್ನೊಬ್ಬ ದೊರೆಯಿಂದ ಈ ಹಕ್ಕು ಪಡೆದಿದ್ದ, ಗೇಣಿದಾರರು ತಮ್ಮಿಚ್ಫೆಯಂತೆ ನೆಲವನ್ನು ವಿನಿಯೋಗಿಸುವಂತಿರಲಿಲ್ಲ. ಇದಕ್ಕೆ ತಮ್ಮ ಅಧಿಪತಿಯ ಒಪ್ಪಿಗೆ ಅಗತ್ಯವಿತ್ತು. ಅವನಿಗೆ ಕಾಣಿಕೆ ಒಪ್ಪಿಸಿ ಅನಂತರ ಇನ್ನೊಬ್ಬರಿಗೆ ಅವನ್ನು ವರ್ಗಾಯಿಸಬಹುದಿತ್ತು. ಜೀತಗಾರನ ಉತ್ತರಾಧಿಕಾರಿ ಪಿತ್ರಾರ್ಜಿತ ಪಡೆಯಲು ಪ್ರಭುವಿಗೆ ಕಾಣಿಕೆ ಕೊಡಬೇಕಾಗಿತ್ತು. ಪ್ರಭುವಿನ ಉತ್ತರಾಧಿಕಾರಿಯೂ ಪಿತ್ರಾರ್ಜಿತ ಹಕ್ಕು ಪಡೆಯಲು ತನ್ನ ಅಧಿಪತಿಗೆ ತೆರಿಗೆ ಕೊಡಬೇಕಾಗಿತ್ತು. ಒಬ್ಬ ಗೇಣಿದಾರ ಸತ್ತಾಗ ಅವನ ಉತ್ತರಾಧಿಕಾರಿ ವಯಸ್ಕನಾಗಿರದಿದ್ದರೆ ಆತ ಪ್ರಾಪ್ತವಯಸ್ಕನಾಗುವವರೆಗೂ ಆತನ ಹಕ್ಕು ಪ್ರಭುವಿನ ಕೈಯಲ್ಲಿರುತ್ತಿತ್ತು.. ಉತ್ತರಾಧಿಕಾರಿಣಿಗಳುಪ್ರಭುವಿನಒಪ್ಪಿಗೆ ಪಡೆಯದೆ ಮದುವೆಯಾಗುವಂತಿರಲಿಲ್ಲ. ವಿಧವೆ ಮದುವೆಯಾಗಲು ಪ್ರಭುವಿಗೆ ದಂಡ ತೆರಬೇಕು. ವಿಧವೆ ವಿವಾಹವಾಗದಿರಬೇಕೆಂದು ಬಯಸಿದಾಗ ಆಕೆ ಮದುವೆಯಾಗಬೇಕೆಂದು ಪ್ರಭು ಒತ್ತಾಯಪಡಿಸಬಹುದಿತ್ತು. ಅದರಿಂದ ತಪ್ಪಿಸಿಕೊಳ್ಳಬೇಕಿದ್ದರೆ ಅದಕ್ಕಾಗಿಯೂ ಕಾಣಿಕೆ ಆಕೆ ತೆರಬೇಕಿತ್ತು.ನಾನಾ ಪ್ರಭುಗಳ ಪ್ರತ್ಯೇಕ ನ್ಯಾಯಾಲಯಗಳಿದ್ದುದರಿಂದ ಆಗಿನ ಕಾಲದ ನ್ಯಾಯ ವ್ಯವಸ್ಥೆ ಬಲು ತೊಡಕಿನದಾಗಿತ್ತೆಂದೇ ಹೇಳಬಹುದು. ನ್ಯಾಯಾಲಯದ ರುಸುಮುಗಳು ಆದಾಯ ಮೂಲಗಳಾಗಿದ್ದುದರಿಂದ ಈ ದೃಷ್ಟಿಯಿಂದಲೂ ಇವನ್ನು ಸ್ಥಾಪಿಸಲಾಗುತ್ತಿತ್ತು.ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸ್ಪಷ್ಟವಾಗಿ ರೂಪುಗೊಂಡ ಊಳಿಗಮಾನ್ಯ ವ್ಯವಸ್ಥೆ ಭಾರತದಲ್ಲಿ ಎಂದೂ ರೂಪುಗೊಳ್ಳಲಿಲ್ಲ. ಪಾಳೆಯಗಾರಿಕೆ ಪದ್ಧತಿಯಲ್ಲಿ ಈ ವ್ಯವಸ್ಥೆಯ ಲಕ್ಷಣಗಳನ್ನು ಕಾಣಬಹುದಾದರೂ ಇದರಲ್ಲಿ ಊಳಿಗಮಾನ್ಯ ವ್ಯವಸ್ಥೆಯ ಕಟ್ಟುನಿಟ್ಟುಗಳಾಗಲಿ ನ್ಯಾಯನೈಷ್ಠುರ್ಯವಾಗಲಿ ಕಾಣಬರುವುದಿಲ್ಲ.

ಇತಿಹಾಸ ಲೇಖನ

ಸಂಶೋಧನೆ

  • "ಫ್ಯೂಡಲ್" ಎಂಬ ಪದವನ್ನು ಇಟಲಿಯ ಪುನರುಜ್ಜೀವನದ ನ್ಯಾಯಶಾಸ್ತ್ರ ಪಂಡಿತರುಗಳು ಆಸ್ತಿಯ ಸಾಮಾನ್ಯ ಸಾಂಪ್ರದಾಯಿಕ ನಿಯಮಕ್ಕಾಗಿ ಕಂಡುಹಿಡಿದರು. ಜಿಯಾಕೊಮೊ ಆಲ್ವಾರೋಟ್ಟೊನ (1385-1453) ಶಾಸ್ತ್ರ ಗ್ರಂಥವಾದ ದೆ ಫ್ಯೂಡಿಸ್ ( ಉಂಬಳಕ್ಕೆ ಸಂಬಂಧಿಸಿದ) ಸಾಮಾನ್ಯ ಕಾನೂನು ತತ್ವಗಳ ಮೂಲದ ಶ್ರೀಮಂತರ ಭೂ ಹಿಡುವಳಿಯ ಅವಾರೋಹಣಗಳನ್ನು ನಿಯಂತ್ರಿಸುವ ನಿಯಮಗಳ ಪ್ರಾಂತೀಯ ಬೇಧಗಳು ಇದ್ದಾಗ್ಯೂ, ಒಂದು ರೂಡಿಯ "ಊಳಿಗಮಾನ ನಿಯಮ"ವನ್ನು ಜಾರಿಗೆ ತರಲಾಯಿತು.
  • ಇನ್ನೊಂದು ಮೂಲದ ಪ್ರಕಾರ, ಫ್ಯೂಡಲ್ ಎಂಬ ಪದವನ್ನು ಅತ್ಯಂತ ಪ್ರಾರಂಭದಲ್ಲಿ ಬಳಸಲಾದ ಕಾಲವೆಂದರೆ ಅದು 17ನೇ ಶತಮಾನ(1614), ಆ ಸಮಯದಲ್ಲಿ ಈ ಪದ್ದತಿಯನ್ನು ವಿವರಿಸುವ ಅರ್ಥವು ಅತಿ ವೇಗವಾಗಿ ಅಥವಾ ಸಂಪೂರ್ಣವಾಗಿ ಅಳಿದು ಹೋಗಿತ್ತು. ಈ ಅವಧಿಯಲ್ಲಿ ಯಾವುದೇ ಲೇಖಕರು ಊಳಿಗಮಾನ ಪದ್ದತಿಯು ಆ ಶಬ್ದವನ್ನು ಬಳಸಿಕೊಂಡತೆ ವಿವರಿಸುವುದಿಲ್ಲ.
  • "ಫ್ಯೂಡಲಿಸಂ" ( ಊಳಿಗಮಾನ) ಎಂಬ ಪದವು ಮಧ್ಯಕಾಲೀನ ಅವಧಿಯಲ್ಲಿ ಬಳಸಿದ ಒಂದು ಪದವಾಗಿರದೆ, ಅದು 16ನೇ ಶತಮಾನದಲ್ಲಿ ಫ್ರೆಂಚ್ ಮತ್ತು ಆಂಗ್ಲ ವಕೀಲರು ಶ್ರೀಮಂತ ಯೋಧರ ಮಧ್ಯೆ ಇರುವ ಕೆಲವು ಸಾಂಪ್ರದಾಯಿಕ ಕರಾರುಗಳನ್ನು ವಿವರಿಸಲು ಬಳಸಿದ ಪದವಾಗಿದೆ.
  • ನಂತರದ ವಿಮರ್ಶಕರು ಇದನ್ನು ಕೆಲವು ಸಾರಿ ಯಾವುದೇ ಕಾನೂನು ಅಥವಾ ಪದ್ದತಿಯನ್ನು ವಿವರಿಸಲು ಒಂದು ಹದಗೆಟ್ಟ ಪದವಾಗಿ ಬಳಸಿದರು, ಏಕೆಂದರೆ ಅವರ ಪ್ರಕಾರ ಇದು ಅನ್ಯಾಯದ ಅಥವಾ ಸಮಯ ಮೀರಿದ ಪದವಾಗಿತ್ತು. ಇವುಗಳ ಅನೇಕ ಕನೂನು ಮತ್ತು ರೂಢಿಗಳು ಕೆಲವು ರೀತಿಯಲ್ಲಿ ಉಂಬಳ (ಲ್ಯಾಟೀನ್:ಫ್ಯೂಡಮ್ , ಪ್ರಾನ್ಸ್ ನ 884ಶಾಸನದಲ್ಲಿ ಕಾಣಿಸಿಕೊಂಡ ಮೊದಲ ಪದ)ದ ಮಧ್ಯಕಾಲಿಕ ಸಂಸ್ಥೆಗೆ ಸಂಬಂಧಿಸಿರುತ್ತಿತ್ತು ಮತ್ತು ಇದನ್ನು ಒಂದೇ ಪದದ ಅರ್ಥದಲ್ಲಿ ಬಳಸಲಾಯಿತು. "ಫ್ಯೂಡಲಿಸಂ" ಎಂಬ ಪದವು ಫ್ರೆಂಚ್ ಕ್ರಾಂತಿ ಯ ಸಮಯದಲ್ಲಿ ಬಳಸಲಾದ ಪೆಯೊಡಲಿಸ್ಮೆ ಎಂಬ ಪದದಿಂದ ಬಂದಿದೆ.

ಪದದ ಬೆಳವಣಿಗೆ

  • ಊಳಿಗಮಾನ ಪದ್ದತಿಯು 1748ರಲ್ಲಿ ವ್ಯಾಪಕವಾಗಿ ಬಳಸಿದ ಜನಪ್ರಿಯ ಪದವಾಗಿದೆ, ಇದಕ್ಕೆ ಮೊಂಟೆಸ್ಕುನ De L'Esprit des Lois (ಕಾನೂನುಗಳ ಚೇತನ )ಕ್ಕೆ ಕೃತಜ್ಞತೆ ಸಲ್ಲಿಸಬೇಕು. 18ನೇ ಶತಮಾನದಲ್ಲಿ, ಜ್ಞಾನೋದಯದ ಲೇಖಕರು ಪ್ರಾಚೀನ ಪ್ರಭುತ್ವದ , ಹಳೆಯ ಪದ್ದತಿ ಅಥವಾ ಪ್ರೆಂಚ್ ಪ್ರಭುತ್ವಕ್ಕೆ ಕಪ್ಪು ಮಸಿ ಬಳೆಯಲು ಊಳಿಗಮಾನ ಪದ್ದತಿಯ ಬಗ್ಗೆ ಬರೆದರು.
  • ಬರಹಗಾರರು ಇದನ್ನು ಕಾರಣಿಕರಿಸಿದ್ದರಿಂದ ಇದನ್ನು ಜ್ಞಾನೋದಯ ಯುಗ ಎನ್ನುವರು ಮತ್ತು ಮಧ್ಯಕಾಲಿಕ ಯುಗವನ್ನು "ಅಂಧಕಾರ ಯುಗಗಳು" ಎನ್ನುವರು. ಊಳಿಗಮಾನವನ್ನು ಒಳಗೊಂಡಂತೆ, ಅದರ ನಕಾರಾತ್ಮಕ ಗುಣಗಳನ್ನು ಪ್ರೆಂಚ್ ರಾಜಪ್ರಭುತ್ವದ ಆಧಾರದಲ್ಲಿ ರಾಜಕೀಯ ಲಾಭ ಎಂದು ಬಿಂಬಿಸಿದ್ದರಿಂದ ಅರಿವುಳ್ಳ ಬರಹಗಾರರು ಸಾಮಾನ್ಯವಾಗಿ ಅಂಧಕಾರ ಯುಗಗಳಿಂದ ಅಪಹಾಸ್ಯ ಮತ್ತು ತಿರಸ್ಕಾರಕ್ಕೆ ಒಳಗಾದರು. ಅವರಿಗೆ "ಊಳಿಗಮಾನ" ಪದ್ದತಿ ಎಂದರೆ ಭೂಮಿಯ ಒದೆತನದ ತತ್ವಕ್ಕೆ ಸಂಬಂಧಪಟ್ಟ ಘನತೆಗಳು ಮತ್ತು ವಿಶೇಷ ಅಧಿಕಾರಗಳ ಹಕ್ಕು ಆಗಿತ್ತು.

ಆಗಸ್ಟ್ 1789ರಲ್ಲಿ ಫ್ರೆಂಚ್ ಮೂಲಭೂತ ಸಭೆಯು ಊಳಿಗಮಾನ ಆಡಳಿತ ಪದ್ದತಿಯನ್ನು ತೆಗೆದು ಹಾಕಿತು.

  • ಆಡಮ್ ಸ್ಮಿತ್ "ಊಳಿಗಮಾನ ಪದ್ದತಿ" ಎಂಬ ಪದವನ್ನು ಸಾಮಾಜಿಕ ಮತ್ತು ಆರ್ಥಿಕ ಅರ್ಥ ವ್ಯವಸ್ಥೆಯನ್ನು ವಿವರಿಸಲು ಸಾಮಾಜಿಕ ಸ್ತರಗಳಲ್ಲಿ ವ್ಯಾಖ್ಯಾನಿಸಿದ ಪದವಾಗಿ ಬಳಸಿದನು, ಇವುಗಳಲ್ಲಿ ಪ್ರತಿಯೊಂದು ಅರ್ಜಿತ ಸಾಮಾಜಿಕ ಮತ್ತು ಅರ್ಥಿಕ ಘನತೆಗಳು ಮತ್ತು ಒಪ್ಪಂದಗಳನ್ನು ಹೊಂದಿತ್ತು. ಇಂತಹ ಒಂದು ಪದ್ದತಿಯಲ್ಲಿ, ಮಾರುಕಟ್ಟೆ ಪ್ರಭಾವಗಳಿಗನುಸಾರವಾಗಿ ಸಂಘಟಿತವಾಗದ ಆಸ್ತಿಯನ್ನು ಆದರೆ ಜೀತದಾಳುಗಳನ್ನು ಹೊಂದಿದ್ದ ಭೂ ಮಾಲಿಕರ ರೂಢಿಯ ಕೂಲಿ ಸೇವೆಗಳಿಗನುಸಾರವಾಗಿ ಆಸ್ತಿಯನ್ನು ಕೃಷಿಯಿಂದ ಪಡೆಯಲಾಗುತ್ತಿತ್ತು.

ಮಾರ್ಕ್ಸ್

  • ಕಾರ್ಲ್ ಮಾರ್ಕ್ಸ್ ಸಹ ಈ ಪದವನ್ನು ರಾಜಕೀಯ ವಿಶ್ಲೇಷಣೆಗೆ ಬಳಸಿದ್ದಾರೆ. 19ನೇ ಶತಮಾನದಲ್ಲಿ ಕಾರ್ಲ್ ಮಾರ್ಕ್ಸ್, ಊಳಿಗಮಾನ ಪದ್ದತಿಯನ್ನು ಬಂಡವಾಳ ಶಾಹಿಯ ಅನಿವಾರ್ಯ ಉದಯದ ಮುಂಚೆ ಉಂಟಾದ ಆರ್ಥಿಕ ಸ್ಥಿತಿಗತಿ ಎಂದು ವಿವರಿಸಿದ್ದಾರೆ. ಮಾರ್ಕ್ಸ್‌ನ ಪ್ರಕಾರ, ಊಳಿಗಮಾನ ಪದ್ದತಿಯು ತಮ್ಮ ವ್ಯವಸಾಯ ಯೋಗ್ಯ ಜಮೀನಿನ ನಿಯಂತ್ರದ ಮೇಲಿರುವ ಆಡಳಿತ ವರ್ಗದ (ಶ್ರೀಮಂತಿಕೆ) ಸಾಮರ್ಥ್ಯವಾಗಿದ್ದು, ಈ ಜಮೀನುಗಳಿಗಾಗಿ ದುಡಿದ ರೈತರನ್ನು ಜೀತ ಪದ್ದತಿಯ ಮೂಲಕ ಶೋಷಣೆಯ ಆಧಾರದ ಮೇಲೆ ಒಂದು ಸಮಾಜದ ವರ್ಗ ವನ್ನಾಗಿ ಮಾಡಲಾಯಿತು.
  • "ಕೈ-ಗಿರಣಿಯು ನಿಮಗೆ ಊಳಿಗ ಮಾಲಿಕರ ಸಮಾಜವನ್ನು ಕೊಡುತ್ತದೆ; ಹಬೆ-ಗಿರಣಿಯು ಕೈಗಾರಿಕಾ ಬಂಡವಾಳ ಶಾಹಿಗಳ ಸಮಾಜವನ್ನು ನೀಡುತ್ತದೆ." ಆದ್ದರಿಂದ ಮಾರ್ಕ್ಸ್ ಊಳಿಗಮಾನ ಪದ್ದತಿಯನ್ನು ಒಂದು ಪರಿಶುದ್ಧ ಆರ್ಥಿಕ ಮಾದರಿ ಎಂದು ಪರಿಗಣಿಸಿದರು.

ನಂತರದ ಅಧ್ಯಯನಗಳು

  • 19ನೇ ಶತಮಾನದ ಕೊನೆಯ ಹಾಗೂ 20ನೇ ಶತಮಾನದ ಆರಂಭಗಳಲ್ಲಿ , ಜಾನ್ ಹೊರೇಸ್ ರೌಂಡ್ ಮತ್ತು ಫ್ರೆಡ್ರಿಕ್ ವಿಲಿಯಂ ಮೈಟ್ ಲ್ಯಾಂಡ್, ಎಂಬ ಇಬ್ಬರು ಬ್ರಿಟನ್ನಿನ ಮಧ್ಯಕಾಲಿಕ ಇತಿಹಾಸಕರು, 1066 ರಲ್ಲಿ ನಾರ್ಮನ್ ದಾಳಿಯ ಮುನ್ನ ಇದ್ದ ಬ್ರಿಟೀಷ್ ಸಮಾಜದ ಬಗ್ಗೆ ವಿಭಿನ್ನ ತೀರ್ಮಾನಗಳನ್ನು ಕೊಟ್ಟರು. ರೌಂಡ್ ಪ್ರಕಾರ ನಾರ್ಮನ್‌ಗಳು ಊಳಿಗಮಾನ ಪದ್ದತಿಯನ್ನು ತಂದರು ಎಂದು ವಾದಿಸಿದರೆ, ಮೈಟ್ ಲ್ಯಾಂಡ್ ಇದರ ಮೂಲಭೂತಗಳು ಆಗಲೇ ಬ್ರಿಟನ್‌ನಲ್ಲಿ ಇದ್ದವು ಎಂದು ಅಭಿಪ್ರಾಯಪಟ್ಟಿದ್ದರು.
  • ಈ ಚರ್ಚೆ ಇಂದಿಗೂ ಮುಂದುವರೆದಿದೆ. 20ನೇ ಶತಮಾನದಲ್ಲಿ, ಚರಿತ್ರಕಾರರಾದ ಫ್ರಾಂಕೋಯಿಸ್-ಲೂಯಿಸ್ ಗ್ಯಾನ್ಸ್‌ಹೋಫ್ ರವರು ಊಳಿಗಮಾನ ಪದ್ದತಿಯ ವಿಷಯದ ಬಗ್ಗೆ ತುಂಬಾ ಪ್ರಭಾವಿತರಾದರು. ಗ್ಯಾನ್ಸ್‌ಹೋಫ್ ಊಳಿಗಮಾನ ಪದ್ದತಿಯನ್ನು ಸಂಕುಚಿತವಾದ ಕಾನೂನು ಮತ್ತು ಸೈನಿಕ ದೃಷ್ಟಿಕೋನದಿಂದ ವ್ಯಾಖ್ಯಾನಿಸುವುದರೊಂದಿಗೆ ಊಳಿಗಮಾನ ಸಂಬಂಧಗಳು ಕೇವಲ ಮಧ್ಯಕಾಲೀನ ಕುಲೀನತೆಯಲ್ಲಿ ಮಾತ್ರ ಅಸ್ತಿತ್ವದಲ್ಲಿದ್ದವು.
  • ಗ್ಯಾನ್ಸ್‌ಹೋಫ್ ಈ ಪರಿಕಲ್ಪನೆಯನ್ನು ಊಳಿಗಮಾನ (1944) ಸ್ಪಷ್ಟೀಕರಿಸಿದರು. ಈತನ ಊಳಿಗಮಾನ ಪದ್ದತಿಯ ಅತಿ ಶ್ರೇಷ್ಟವಾದ ವ್ಯಾಖ್ಯಾನವು ಇಂದಿಗೂ ಪರಿಚಿತವಾಗಿದೆ. ಅಷ್ಟೇ ಅಲ್ಲದೆ ಇದು ಅರ್ಥ ಮಾಡಿಕೊಳ್ಳಲು ಸುಲಭವಾಗಿದ್ದು, ಒಬ್ಬ ಮಾಲಿಕನು ಉಂಬಳವನ್ನು ಒಬ್ಬ ಹಿಡುವಳಿದಾರನಿಗೆ ಕೊಟ್ಟಾಗ, ಆತನು ಅದಕ್ಕೆ ಬದಲಾಗಿ ಸೈನಿಕ ಸೇವೆಯನ್ನು ಒದಗಿಸುತ್ತಾನೆ ಎಂಬ ವಿಷಯ ಸರಳವಾಗಿದೆ.
  • ಗ್ಯಾನ್ಸ್‌ಹೋಪ್ಸ್‌ನ ಸಮಕಾಲೀನರಲ್ಲಿ ಒಬ್ಬನಾದ, ಫ್ರೆಂಚ್ ಇತಿಹಾಸಕಾರ ಮಾರ್ಕ್ ಬ್ಲೋಚ್, 20ನೇ ಶತಮಾನದ ಮಧ್ಯಕಾಲೀನ ಪ್ರಭಾವಿತ ಮಧ್ಯಕಾಲೀನ ಇತಿಹಾಸಕಾರನಾಗಿದ್ದನು. ಬ್ಲೋಚ್ ಊಳಿಗಮಾನ ಪದ್ದತಿಯನ್ನು ಒಂದು ಕಾನೂನು ಹಾಗೂ ಸೈನಿಕ ದೃಷ್ಟಿಕೋನದಿಂದ ನೋಡದೇ, ಸಾಮಾಜಿಕವಾಗಿ ಪರಿಗಣಿಸಿದರು. ಅವರು ತಮ್ಮ ಆಲೋಚನೆಗಳನ್ನು ಊಳಿಗ ಸಮಾಜ ದಲ್ಲಿ ಬೆಳೆಸಿದರು (1939–40; ಇಂಗ್ಲಿಷ್ 1960).
  • ಬ್ಲೋಚ್ ಊಳಿಗಮಾನ ಪದ್ದತಿಯನ್ನು ಸಂಪೂರ್ಣವಾಗಿ ಉದಾತ್ತತೆಯ ಸೀಮಿತವನ್ನು ಹೊಂದದೇ ಇರುವ ಒಂದು ಸಮಾಜ ಎಂದು ಪರಿಗಣಿಸಿದ್ದಾನೆ. ಗ್ಯಾನ್ಸ್‌ಹೋಫ್, ಮಾಲಿಕ ಮತ್ತು ಹಿಡುವಳಿದಾರರ ಮಧ್ಯೆ ಒಂದು ಶ್ರೇಣಿಕೃತ ಸಂಬಂಧವನ್ನು ಗುರುತಿಸಿದ್ದರು. ಆದರೆ ಬ್ಲೋಚ್ ಮಾಲಿಕರು ಮತ್ತು ರೈತರ ಮಧ್ಯೆ ಒಂದೇ ರೀತಿಯ ಸಂಬಂಧವನ್ನು ಕಂಡಿದ್ದರು. ರೈತರು ಊಳಿಗಮಾನ ಪದ್ದತಿ ಸಂಬಧಗಳ ಒಂದು ಅಂಗ ಎಂಬ ಅಂಶವನ್ನು ಬ್ಲೋಚ್ ತಮ್ಮ ಶ್ರೀಮಂತ ವರ್ಗದ ಗುಂಪಿನಿಂದ ಕೈಬಿಟ್ಟಿದ್ದರು.
  • ಉಂಬಳಕ್ಕೆ ಬದಲಾಗಿ ಹಿಡುವಳಿದಾರರು ಸೈನಿಕ ಸೇವೆಯನ್ನು ಮಾಡಿದರೆ, ಒಕ್ಕಲಿಗರು ಅದಕ್ಕೆ ಬದಲಾಗಿ ರಕ್ಷಣೆಗೋಸ್ಕರ ದೈಹಿಕ ಶ್ರಮ ವಹಿಸುತ್ತಿದ್ದರು. ಈ ಎರಡೂ ಸಹ ಊಳಿಗಮಾನ ಪದ್ದತಿ ಸಂಬಂಧದ ಒಂದು ಸ್ವರೂಪವಾಗಿದೆ. ಬ್ಲೋಚ್‌ನ ಪ್ರಕಾರ, ಊಳಿಗ ಅರ್ಥಗಳಲ್ಲಿ ಕಂಡು ಬರುವ ಇತರ ಸಮಾಜದ ಅಂಶಗಳೆಂದರೆ: ಮಾಲಿಕತ್ವದ ಮೇಲೆ ಕೇಂದ್ರೀಕೃತವಾಗಿರುವ ಜೀವನದ ಎಲ್ಲಾ ಅಂಶಗಳು ಮತ್ತು ಆದ್ದರಿಂದ ನಾವು ಊಳಿಗ ಚರ್ಚ್ ರಚನೆ, ಊಳಿಗ ಮುಖ ಸ್ತುತಿ ಸಾಹಿತ್ಯ( ಮತ್ತು ಅಂತಿ ಮುಖ ಸ್ತುತಿ) ಮತ್ತು ಊಳಿಗ ಆರ್ಥಿಕತೆಯ ಬಗ್ಗೆ ಮತನಾಡಲು ಸಾಧ್ಯವಿದೆ.

ಪದ ಬಳಕೆಯ ವಿರುದ್ಧ ಪ್ರತಿಭಟನೆ

1974ರಲ್ಲಿ ಯು.ಎಸ್.ನ ಇತಿಹಾಸಕಾರರಾದ ಎಲಿಜಬೆತ್ ಎ.ಆರ್. ಬ್ರೌನ್

  • ಊಳಿಗಮಾನ ಎಂಬ ಪದವನ್ನು ನಿರಾಕರಿಸಿದರು, ಏಕೆಂದರೆ ಈ ಪರಿಕಲ್ಪನೆಗೆ ಒಂದು ಚಾರಿತ್ರಿಕ ದೋಷವನ್ನು ಉಂಟುಮಾಡುವಂತಿತ್ತು. ಕೆಲವು ಸಾರಿ ಊಳಿಗಮಾನ , ಈ ಪದವನ್ನು ಹಲವಾರು ಜನರು ವಿರೋಧವಾಗಿ ಬಳಸುವುದನ್ನು ಮನಗಂಡು, ಈ ಪದವು ಮಧ್ಯಕಾಲಿಕ ನೈಜ್ಯತೆಯ ಆಧಾರದ ಮೇಲೆ ಮಾತ್ರ ರಚಿತವಾಗಿದ್ದು, ಇತಿಹಾಸದ ದಾಖಲೆಗಳಲ್ಲಿ ಇದನ್ನು ಆಧುನಿಕ ಚರಿತ್ರಾಕಾರಾರು ಒತ್ತಾಯಪುರ್ವಕವಾಗಿ ಸೇರಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
  • ಬ್ರೌನ್‌ನ ಬೆಂಬಲಿಗರು ಈ ಪದವನ್ನು ಚರಿತ್ರೆಯ ಪಠ್ಯಪುಸ್ತಕಗಳಿಂದ ತೆಗೆದುಹಾಕಬೇಕು ಎಂಬ ಸಲಹೆಯನ್ನು ನೀಡಿದರು ಮತ್ತು ಸಂಪೂರ್ಣವಾಗಿ ಮಧ್ಯಕಾಲಿಕ ಇತಿಹಾಸದ ಬಗ್ಗೆ ಉಪನ್ಯಾಸಗಳನ್ನು ನೀಡಬೇಕು ಎಂದು ಅಭಿಪ್ರಾಯ ಪಟ್ಟರು. ಉಂಬಳ ಮತ್ತು ಹಿಡುವಳಿಗಳಲ್ಲಿ: ಸುಸಾನ್ ರೇನಾಲ್ಡ್ಸ್ ಬ್ರೌನ್ ನ ಮೂಲ ಸಿದ್ದಾಂತವನ್ನು ವಿಸ್ತರಿಸಿ ಮಧ್ಯಕಾಲಿಕ ಪುರಾವೆಯನ್ನು ಪುನರ್ ಅರ್ಥವಿವರಣೆ (1994), ಮಾಡಲಾಯಿತು.
  • ರೇನಾಲ್ಡ್‌ಳ ಪದ್ದತಿಯನ್ನು ಆಕೆಯ ಸಮಕಾಲಿನರು ಪ್ರಶ್ನಿಸಿದರಾದರೂ, ಇತರ ಚರಿತ್ರಕಾರರು ಆಕೆಯ ವಾದವನ್ನು ಬೆಂಬಲಿಸಿದರು. ರೇನಾಲ್ಡ್‌ಮಾರ್ಕ್ಸ್ ರವರ ಊಳಿಗಮಾನ ವನ್ನು ವಿರೋಧಿಸಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಫ್ಯೂಡಲ್ ಎಂಬ ಪದವು ಪಾಶ್ಚಿಮಾತ್ಯವಲ್ಲದ ಸಮಾಜಗಳಿಗೂ ಅನ್ವಯಿಸುವುದಾಗಿದ್ದು ಮಧ್ಯಕಾಲೀನ ಯೂರೋಪ್‌ನಲ್ಲಿ ಇರಬಹುದಾದ ಒಂದೇ ರೀತಿಯ ಮನೋಭಾವನೆಗಳು ಮತ್ತು ಆಚಾರಗಳನ್ನು ಒಳಗೊಂಡಿತ್ತು. (ಇತರೆ ಊಳಿಗದಂತಹ ಪದ್ದತಿಗಳನ್ನು ನೋಡಿ).

  • ಅಂತಿಮವಾಗಿ, ವಿಮರ್ಶಕರು ಹೇಳುವಂತೆ, ಊಳಿಗಮಾನ ಪದ್ದತಿ ಯು ಹಲವಾರು ವಿಧಗಳಲ್ಲಿ ತನ್ನ ನಿರ್ಧಿಷ್ಟ ಅರ್ಥದಿಂದ ವಂಚಿತವಾಗಿದ್ದು, ಅನೇಕ ಇತಿಹಾಸಕರರು ಮತ್ತು ರಾಜಕೀಯ ಸಿದ್ದಾಂತಕರು ಇದು ಸಮಾಜವನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುವ ಒಂದು ಉಪಯುಕ್ತ ಪರಿಕಲ್ಪನೆ ಎಂದು ಎಂದು ಕೈಬಿಟ್ಟಿದ್ದಾರೆ.

ಊಳಿಗಮಾನ ಪದ್ಧತಿಯನ್ನು ಪ್ರಶ್ನಿಸುವಿಕೆ

ಶಬ್ದದ ವ್ಯಾಖ್ಯಾನ ಮತ್ತು ಉಪಯೋಗ

ಊಳಿಗಮಾನ ಪದ್ಧತಿ 
ಮಧ್ಯಕಾಲೀನ ಸಮಾಜದ ತ್ರಿಪಕ್ಷೀಯ ವಿನ್ಯಾಸ: ಪಾದ್ರಿ (ಒರೇಟರ್ಸ್), ವೀರಯೋಧ (ಬೆಲ್ಲೇಟರ್ಸ್) ಮತ್ತು ಕೃಷಿಕ (ಲ್ಯಾಬರ‍ೇಟರ್ಸ್)
  • ಸುಸನ್ ರೆನೋಲ್ಡ್ಸ್ ರವರಿಂದ ನೀಡಲಾಗಿದ್ದ ಐತಿಹಾಸಿಕ ಉದಾಹರಣೆಗಳು ಊಳಿಗಮಾನ ಪದ್ಧತಿ ಶಬ್ದದ ಸಾಂಪ್ರದಾಯಿಕ ಬಳಕೆಯನ್ನು ಸವಾಲಿಸುತ್ತವೆ: ರಾಜ್ಯದಲ್ಲಿನ ಇತರ ಪ್ರಭಾವಿ ಪುರುಷರು ಮಾಡಿದ ರೀತಿಯಲ್ಲಿ, ಮೊದಲಿನ ಕೊರೊಲಿಂಗೈನರು ಹಿಡುವಳಿದಾರರನ್ನು ಹೊಂದಿದ್ದರು ಎಂಬುದನ್ನು ಚಾಲ್ತಿಯಲ್ಲಿರುವ ಮೂಲಗಳು ಬಹಿರಂಗಪಡಿಸುತ್ತವೆ. ಕೊರೊಲಿಂಗೈನ್ ಪ್ರಾನ್ಸಿಯಾದಲ್ಲಿ, ಸೆರ್ವಿಯ ಪ್ರತಿಷ್ಠೆಯನ್ನು ಹೊಂದಿದ್ದ ಪುರುಷರು, ಸಾಮಾನ್ಯವಾಗಿ ನಾವು ಹಿಡುವಳಿದಾರರಿಗೆ ಸಂಬಂಧಪಟ್ಟವು ಎಂದು ಭಾವಿಸುವ ಕಛೇರಿಗಳ ಬಗೆಗಳನ್ನು ಸಹ ಹೊಂದಿರ ಬಹುದು ಎಂಬುದು ಸಹ ಸತ್ಯ. ಮುಂದಿನ ಎರಡು ಶತಮನಗಳಲ್ಲಿ ಈ ಸಂಬಂಧವು ಹೆಚ್ಚು ಹೆಚ್ಚು ಪ್ರಮಾಣಬದ್ಧವಾಯಿತು.
  • ಆದರೆ ಇದರ ಕಾರ್ಯ ಮತ್ತು ಪದ್ಧತಿಗಳು ವಿವಿಧ ಪ್ರದೇಶಗಳಲ್ಲಿ ಬಿನ್ನವಾಗಿರುತ್ತವೆ. ಉದಾಹರಣೆಗೆ, ಈಸ್ಟರ್ನ್ ಫ್ರಾನ್ಸಿಯಾದ ಆಧಿಪತ್ಯವನ್ನು ಸ್ಥಾನಪಲ್ಲಟ ಮಾಡಿದ ಜರ್ಮನ್ ರಾಜ್ಯಗಳಲ್ಲಿ, ಹಾಗು ಕೆಲವು ಸ್ಲೇವಿಕ್ ರಾಜ್ಯಗಳಲ್ಲಿ, ಊಳಿಗಮಾನದ ಸಂಬಂಧವು ಊಳಿಗತನಕ್ಕೆ ಚರ್ಚಾಸ್ಪದವಾಗಿ ಹೆಚ್ಚು ಹತ್ತಿರದ ನಂಟನ್ನು ಹೊಂದಿದ್ದು, ಇದು ಕೃಷಿಕರು ಭೂಮಿಯೊಂದಿಗೆ ಸಂಬಂಧವನ್ನು ಹೊಂದುವಂತೆ ಮಾಡುವ ಒಂದು ಪದ್ಧತಿಯಾಗಿದೆ.
  • ಮೇಲಾಗಿ, ಹೋಲಿ ರಾಮನ್ ಆಧಿಪತ್ಯದ ವಿಕಸನವು ಮಧ್ಯದ ಯುರೋಪಿನಲ್ಲಿನ ಊಳಿಗಮಾನ ಸಂಬಂಧದ ಇತಿಹಾಸ ದಮೇಲೆ ಹೆಚ್ಚು ಪರಿಣಾಮಬೀರಿದೆ. ಹೆಚ್ಚಾಗಿ ಅಂಗೀಕರಿಸಲಾದ ಊಳಿಗಮಾನ ಪದ್ಧತಿಯ ಮಾದರಿಗಳು, ಅವರು ರಾಜರು, ನಾಯಕರು, ರಾಜಕುಮಾರರು, ಅಥವಾ ಮಿಲಿಟರಿ ಅಧಿಕಾರಿಗಳಾದಿದ್ದರೂ, ಅವರಲ್ಲಿ ಚಕ್ರವರ್ತಿಯಿಂದ ಕಡಿಮೆ ಅಧಿಕಾರದಿಂದ ಆಳುವವರ ವರೆಗೂ ಸ್ಪಷ್ಟ ಅಧಿಕಾರ ಶ್ರೇಣಿ ಇರುತ್ತದೆ ಎಂಬುದನ್ನು ನೀದರ್ಶಿಸುತ್ತವೆ.
  • ಈ ನಮೂನೆಗಳು ಸುವ್ಯಕ್ತವಾಗಿ ಅಸತ್ಯವಾಗಿರುತ್ತವೆ: ಹೋಲಿ ರಾಮನ್ ಚಕ್ರವರ್ತಿಯನ್ನು ಏಳು ಪ್ರತಿಷ್ಠಿತ ವ್ಯಕ್ತಿಗಳ ಗುಂಪಿನಿಂದ ಆಯ್ಕೆ ಮಾಡಲಾಗಿದೆ, ಇವರಲ್ಲಿ ಮೂವರು ಚರ್ಚ್‌ನ ದೊರೆಗಳಾಗಿದ್ದು ಅವರು ಸೈದ್ಧಾಂತಿಕವಾಗಿ ಯಾವುದೇ ಜಾತ್ಯಾತೀತ ಒಡೆಯರಿಗೆ ನಿಷ್ಠೆಯಿಂದ ಶಪಥಮಾಡುವುದಿಲ್ಲ. ಪ್ರೆಂಚ್ ರಾಜ್ಯಗಳು ಸಹ ಮಾದರಿಗಳು ನಿಖರವಾದವು ಎಂಬುದಕ್ಕೆ ಸ್ಪಷ್ಟ ಆಧಾರಗಳನ್ನು ಒದಗಿಸುವಂತೆ ಕಾಣುತ್ತಿದ್ದವು.
  • ನಾರ್ಮಾಂಡಿಯ ಡಜ್ ರಾಜ್ಯಕ್ಷೇತ್ರದ ಪ್ರತಿಫಲವಾಗಿ ಚಾರ್ಲೆಸ್ ದಿ ಸಿಂಪಲ್‌ಗೆ ರೊಲ್ಲೊ ಆಫ್ ನಾರ್ಮಾಂಡಿ ಮೊಣಕಾಲೂರಿ ಗೌರವವನ್ನು ಅರ್ಪಿಸಿದ ಸಮಯದವರೆಗೂ ಇದನ್ನು ಪರಿಗಣಿಸಲಾಗಿತ್ತು. ರಾಜನು ಬಗ್ಗಿ ಏಳುವಾಗ ಆತನು ಗುದ್ದಿದನೆಂದು ಕೆಲ ಮೂಲಗಳು ಹೇಳುತ್ತವೆ. ಇದು 'ಹಿಡುವಳಿದಾರರು' ಊಳಿಗಮಾನ ಸಂಬಂಧಗಳನ್ನು ಬಹಿರಂಗವಾಗಿ ಹೀಗಳೆಯಲು ಸಾಧ್ಯವಾಗುತ್ತದೆ ಎಂಬುದನ್ನು ತಿಳಿಯಪಡಿಸುತ್ತದೆ.
  • ಸ್ವಾಯತ್ತತೆಯಿಂದ ನಾರ್ಮಾನ್ಸ್ ಆಳಿದ ರಾಜ್ಯಕ್ಷೇತ್ರವು, ಯಾವುದೇ ಕಾನೂನು ಬದ್ದ "ಊಳಿಗಮಾನ" ಸಂಬಂಧಗಳನ್ನು ಹೊರತು ಪಡಿಸಿ, ನಾರ್ಮಾನ್ಸ್ ಅವರ ತೃಪ್ತಿಯಂತೆ ನಡೆದುಕೊಂದಿದ್ದರು ಎಂಬ ಅಭಿಪ್ರಾಯವನ್ನು ಸಮರ್ಥಿಸುತ್ತದೆ. ಅದಾಗ್ಯೂ, ಅವರ ಸ್ವಂತ ನಾಯಕತ್ವದಲ್ಲಿ, ನಾರ್ಮಾನ್ಸ್ ತನ್ನ ಅನುಯಾಯಿಗಳು ತಮಗೆ ಬದ್ಧವಾಗಿರುವಂತೆ ಮಾಡಲು ಊಳಿಗಮಾನದ ಸಂಬಂಧವನ್ನು ಉಪಯೋಗಮಾಡಿಕೊಂಡಿದ್ದರು.
  • ಇದು ನಾರ್ಮಾನ್ ದಾಳಿಕಾರರ ಪ್ರಾಬಲ್ಯವಾಗಿದ್ದು, ಇದು ನಾರ್ಮಾನ್‌ರ ಗೆಲುವಿನ ನಂತರ ಇಂಗ್ಲೇಂಡ್‌ನಲ್ಲಿ ಊಳಿಗಮಾನದ ಸಂಬಂಧವನ್ನು ಪ್ರಭಲಗೊಳಿಸಿತು ಮತ್ತು ಸ್ವಲ್ಪ ಮಟ್ಟಿಗೆ ಅಧಿಕೃತಗೊಳಿಸಿತು. ಆಧುನಿಕ ಕಾಲದಲ್ಲಿ, ಊಳಿಗಮಾನ ಪದ್ಧತಿ ಎಂಬ ಶಬ್ದದ ಬಳಕೆಯಮೇಲೆ ವಿವಾದವು ಅಸ್ತಿತ್ವದಲ್ಲಿತ್ತು. ಅದಾಗ್ಯೂ, ಬೆಂಬಲದ ಎಲ್ಲಾ ಪರಸ್ಪರ ಜವಾಬ್ದಾರಿಗಳನ್ನು ಮತ್ತು ಸ್ಥಾನ, ಅಧಿಕಾರ ವ್ಯಾಪ್ತಿ, ಅಥವಾ ಭೂಮಿಯ ನಿರ್ಭಂದವಿಲ್ಲದ ಅನುಭೋಗದ ಜಾಗದಲ್ಲಿನ ನಿಷ್ಠೆಗಳನ್ನು ಆಕ್ರಮಿಸಲು ಕೆಲವುಸಲ ಅವ್ಯವಸ್ಥಿತವಾಗಿ ಉಪಯೋಗಿಸಲಾಗುತ್ತದೆ.
  • ಭೂಮಿಯನ್ನು "ಕರಾರುಗೊಳಿಸಿದ" ಅನುಭೋಗದ ಅವಧಿಗೆ ಸಂಯೋಜಿಸಿದ ಅನೈಶ್ಚಿಕ ಜವಾಬ್ದಾರಿಗಳನ್ನು ಹೊರತುಪಡಿಸಿದ ನಿರ್ಧಿಷ್ಟವಾದ ಸ್ವಪ್ರೇರಿತ ವಿನಿಮಯ ಮತ್ತು ವೈಯುಕ್ತಿಕ ವ್ಯವಹಾರಗಳಿಗೆ, ಈ ಶಬ್ದವನ್ನು ಬಹುತೇಕ ಇತಿಹಾಸಕಾರರಿಂದ ನಿರ್ಭಂದಿಸಲಾಗಿದೆ: ನಂತರದವನ್ನು ಮಾನೊರಿಯಲಿಸಂನ ಮಗ್ಗಲುಗಳು ಎನ್ನುವುದಕ್ಕಿಂತಲೂ, ಊಳಿಗಮಾನ ಸಮಾಜದ ಭಾಗ ಆದರೆ ಸರಿಯಾದ ಊಳಿಗಮಾನ ಪದ್ಧತಿಯಲ್ಲ ಎಂದು ಪರಿಗಣಿಸಲಾಗಿದೆ.

ಉಳಿಗಮಾನ ಪದ್ಧತಿ ಬಳಕೆಯ ಮುಂಜಾಗ್ರತೆಗಳು

ಅವು ಹೊಂದಿದ್ದ ಅರ್ಥಗಳ ಶ್ರೇಣಿಯ ಕಾರಣ, ಊಳಿಗಮಾನ ಪದ್ಧತಿ ಮತ್ತು ಸಂಬಂಧಿಸಿದ ಶಬ್ದಗಳನ್ನು ಗಣನೀಯವಾದ ಜಾಗರೂಕತೆಯಿಂದ ಪ್ರಸ್ತಾಪಿಸತಕ್ಕದ್ದು ಮತ್ತು ಉಪಯೋಗಿಸತಕ್ಕದ್ದು. ಪೆರ್ನಂದ್ ಬ್ರಾವ್‌ಡೆಲ್ ನಂತಹ ಎಚ್ಚರಿಕೆಯ ಇತಿಹಾಸಕಾರರು, "ವ್ಯಾಪಕ ದೊಡ್ಡ ಎಸ್ಟೇಟ್‌ಗಳು ಕಾಣಿಸಿಕೊಂಡಂತೆ, ಅಮೆರಿಕಾದ ಬಹುತೇಕ ಭಾಗವು 'ಊಳಿಗಮಾನ ಪದ್ದತಿಗೆ' ಒಳಗಾದಾಗಿನ, ಹದಿನೇಳನೆಯ ಶತಮಾನದಂತಹ", ವಿಶಾಲವಾದ ಸಾಮಾಜಿಕ ಮತ್ತು ಆರ್ಥಿಕ ಪ್ರಕರಣಗಳಲ್ಲಿ ಪ್ರಯೋಗಿಸುವಾಗ ಉದಾಹರಣೆಗಳಲ್ಲಿ ಊಳಿಗಮಾನ ಪದ್ಧತಿ ಯನ್ನು ಮಂಡಿಸುತ್ತಾರೆ, (ದಿ ಪರ್ಸ್‌ಪೆಕ್ಟಿವ್ ಆಫ್ ದಿ ವರ್ಲ್ಡ್ , 1984, ಪು. 403).

ಇತರ ಊಳಿಗಮಾನ-ಮಾದರಿಯ ಪದ್ಧತಿಗಳು

ಭೂಮಿಯ ಅನುಭೋಗದ ಅವಧಿ ಮಾದರಿಯ ಇತರ ಊಳಿಗಮಾನ ಪದ್ಧತಿಗಳು ಸಹ ಅಸ್ತಿತ್ವದಲ್ಲಿದ್ದವು, ಮತ್ತು ಮಧ್ಯಕಾಲೀನ ಜಪಾನನ್ನು ಒಳಗೊಂಡು, ಪ್ರಪಂಚದ ವಿವಿಧ ಭಾಗಗಳಲ್ಲಿ ಇನ್ನುಸಹ ಅಸ್ತಿತ್ವದಲ್ಲಿವೆ. "ಊಳಿಗಮಾನ ಪದ್ಧತಿಯನ್ನು" ಆಧುನಿಕ ರಾಜಕೀಯ ವ್ಯಾಖ್ಯಾನದಲ್ಲಿ, ಕೇಂದ್ರದ ಅಧಿಕಾರಕ್ಕೆ ಕಾರ್ಪೊರೇಟ್ (ಸಂಘದ) "ಬರೋನ್‌ಗಳನ್ನು" ನಿರ್ಬಂಧಿಸಲು ಸೇವೆಯನ್ನು ಒದಗಿಸುವ, ಮೇಲ್ನೋಟಕ್ಕೆ ಬಂಡವಾಳಗಾರರಂತೆ ಕಾಣುವ ಸಮಾಜಗಳಲ್ಲಿನ ಕಾರ್ಯಕ್ರಮಗಳ ಶೀರ್ಷಿಕೆಯಂತೆ (ಆರ್ಥಿಕ ವಿಮೋಚನೆಗಳು ಮತ್ತು ಉತ್ತೇಜಕಗಳಂತಹ ಕಾರ್ಯಕ್ರಮಗಳು) ಸಹ ಉಪಯೋಗಿಸಲಾಗುತ್ತಿತ್ತು.

ಇವನ್ನೂ ನೋಡಿ

  • ಮಿಶ್ರ ಜಾತಿಯ ಊಳಿಗಮಾನ ಪದ್ಧತಿ
  • ಸೆಸ್ಟುಯಿ ಕ್ಯೂ
  • ಸ್ವಾತಂತ್ರ್ಯಗಳ ಹಕ್ಕುಪತ್ರ
  • ಶೌರ್ಯ
  • ಕನ್‌ಕಾರ್ಡಟ್ ಆಫ್ ವರ್ಮ್ಸ್
  • ಸಜ್ಜನರು
  • ಭೂಮಿಯ ಸಂಪತ್ತು
  • ಮಜೊರತ್ (ಆಸ್ತಿ ಪರಂಪರೆಯ ಹಕ್ಕು)
  • ಭೂಮಿಯ ಒಡೆತನದ ತತ್ವ
  • ಮಧ್ಯಕಾಲೀನ ಜನಾಂಗ ಸ್ಥಿತಿ ಅಧ್ಯಯನ
  • ಮಧ್ಯಕಾಲೀನ ಯುಗ
  • ನಲ್ಲೆ ಟೆರ್ರೆ ಸಾನ್ಸ್ ಸೈಗ್‌ನೆಯರ್
  • ಇತರರ ಮೇಲಿನ ಒಡೆಯ
  • ಕ್ವಿಯಾ ಎಂಪ್ಟೊರ್ಸ್
  • ಸಾರ್ಕ್
  • ಊಳಿಗತನ
  • ಮಾರ್ಟ್‌ಮೈನ್‌ನ ನಿಬಂಧನೆ
  • ಹಿಡುವಳದಾರ

ಮಿಲಿಟರಿ (ಸೇನೆ)

  • ವೀರಯೋಧರು
  • ಮಧ್ಯಯುಗದ ಸಂಗ್ರಾಮ

ಯುರೋಪಿಯನ್ ಅಲ್ಲದ:

  • ಫೆಂಗ್ಜಿಯನ್
  • ಭಾರತೀಯ ಊಳಿಗಮಾನ ಪದ್ಧತಿ

ಟಿಪ್ಪಣಿಗಳು

ಉಲ್ಲೇಖಗಳು

  • ಬ್ಲಾಚ್, ಮಾರ್ಕ್, ಪೇಡಲ್ ಸೊಸೈಟಿ. ಅನುವಾದಕ. ಎಲ್.ಎ.ಮಾನ್ಯನ್ ಎರಡು ಸಂಪುಟಗಳು. ಚಿಕಾಗೊ: ಯೂನಿವರ್ಸಿಟಿ ಆಫ್ ಚಿಕಾಗೊ ಪ್ರೆಸ್, 1961 ಐಎಸ್‌ಬಿಎನ್ 0-226-05979-0
  • ಬ್ರೌನ್, ಎಲಿಜಾಬೆತ್, 'ದಿ ಟೈರನ್ನಿ ಆಫ್ ಎ ಕನ್‌ಸ್ಟ್ರಕ್ಟ್: ಮಧ್ಯಕಾಲೀನ ಯುರೋಪಿನ ಊಳಿಗಮಾನ ಪದ್ಧತಿ ಮತ್ತು ಇತಿಹಾಸಕಾರರು', ಅಮೆರಿಕನ್ ಹಿಸ್ಟೋರಿಕಲ್ ರಿವ್ಯೂವ್ , 79 (1974), ಪು. 1063–8.
  • ಕ್ಯಾಂಟರ್, ನಾರ್ಮನ್ ಎಫ್., ಇನ್ವೆಂಟಿಂಗ್ ದಿ ಮಿಡಿಲ್ ಏಜೆಸ್: ದಿ ಲೈವ್ಸ್, ವರ್ಕ್ಸ್, ಆಂಡ್ ಐಡಿಯಾಸ್ ಆಫ್ ದಿ ಗ್ರೇಟ್ ಮಿಡೀವಲಿಸ್ಟ್ಸ್ ಆಫ್ ದಿ ಟ್ವಂಟಿಯತ್ ಸೆಂಚುರಿ. ಕ್ವಿಲ್, 1991.
  • Ganshof, François Louis (1952). Feudalism. London; New York: Longmans, Green.
  • ಗ್ವೆರ್ರೆವ್, ಅಲೈನ್, L'avenir d'un passé ಇನ್‌ಸರ್ಟೈನ್. ಪರೀಸ್: ಲೆ ಸೆವಿಲ್, 2001. (ಶಬ್ದದ ಅರ್ಥದ ಸಂಪೂರ್ಣ ಇತಿಹಾಸ).
  • ಪೊಲಿ, ಜೀನ್-ಪಿಯರೆ ಆಂಡ್ ಬೊರ್ನಝೆಲ್, ಎರಿಕ್, ದಿ ಫ್ಯುಡಲ್l ಟ್ರಾನ್ಸ್‌ಫಾರ್ಮೇಷನ್, 900-1200. , Tr. ಕಾರೊಲೈನ್ ಹಿಗ್ಗಿತ್. ನ್ಯೂ ಯಾರ್ಕ್ ಆಂಡ್: ಹಾಲ್‌ಮ್ಸ್ ಆಂಡ್ ಮಿಯರ್, 1991.
  • ರೆಯ್‌ನೋಲ್ಡ್ಸ್, ಸುಸನ್, ಫೀಪ್ಸ್ ಆಂಡ್ ವಸ್ಸಲ್ಸ್: ದಿ ಮಿಡೀವಲ್ ಎವಿಡೆನ್ಸ್ ರಿಇಂಟೆರ್‌ಪ್ರಿಟೆಡ್. ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಮುದ್ರಣಾಲಯ, 1994 ಐಎಸ್‌ಬಿಯನ್ 0-19-820648-8

ಬಾಹ್ಯ ಕೊಂಡಿಗಳು

Tags:

ಊಳಿಗಮಾನ ಪದ್ಧತಿ ವ್ಯಾಖ್ಯಾನಊಳಿಗಮಾನ ಪದ್ಧತಿ ಊಳಿಗಮಾನ್ಯ ಸಮಾಜಊಳಿಗಮಾನ ಪದ್ಧತಿ ಇತಿಹಾಸಊಳಿಗಮಾನ ಪದ್ಧತಿ ಮೇನರ್ ಅಥವಾ ಜಹಗೀರು ವ್ಯವಸ್ಥೆಯ ಕೇಂದ್ರಊಳಿಗಮಾನ ಪದ್ಧತಿ ಗುಣಲಕ್ಷಣಗಳುಊಳಿಗಮಾನ ಪದ್ಧತಿ ಊಳಿಗಮಾನ್ಯ ವ್ಯವಸ್ಥೆಯ ಆಂತರಿಕ ಬೆಳೆವಣಿಗೆಊಳಿಗಮಾನ ಪದ್ಧತಿ ಪಾಶ್ಚಾತ್ಯ ನಾಗರಿಕತೆಊಳಿಗಮಾನ ಪದ್ಧತಿ ಊಳಿಗಮಾನ್ಯ ನ್ಯಾಯಪದ್ಧತಿಊಳಿಗಮಾನ ಪದ್ಧತಿ ಒಡೆಯ ಜೀತಗಾರ ಸಂಬಂಧ ಯಾವ ರೀತಿ ಸ್ಥಿರವಾಗಿತ್ತೆಂಬುದನ್ನು ಈ ಕೆಳಗಿನಂತೆ ವರ್ಣಿಸಲಾಗಿದೆಊಳಿಗಮಾನ ಪದ್ಧತಿ ಮೇನರಿನ ಪ್ರಭುವೂ ಜೀತಗಾರಊಳಿಗಮಾನ ಪದ್ಧತಿ ಇತಿಹಾಸ ಲೇಖನಊಳಿಗಮಾನ ಪದ್ಧತಿ ಯನ್ನು ಪ್ರಶ್ನಿಸುವಿಕೆಊಳಿಗಮಾನ ಪದ್ಧತಿ ಇವನ್ನೂ ನೋಡಿಊಳಿಗಮಾನ ಪದ್ಧತಿ ಟಿಪ್ಪಣಿಗಳುಊಳಿಗಮಾನ ಪದ್ಧತಿ ಉಲ್ಲೇಖಗಳುಊಳಿಗಮಾನ ಪದ್ಧತಿ ಬಾಹ್ಯ ಕೊಂಡಿಗಳುಊಳಿಗಮಾನ ಪದ್ಧತಿ

🔥 Trending searches on Wiki ಕನ್ನಡ:

ಗೋಪಿಕೃಷ್ಣಕೊಲೆಸ್ಟರಾಲ್‌ಆಲ್ಫೊನ್ಸೋ ಮಾವಿನ ಹಣ್ಣುನರೇಂದ್ರ ಮೋದಿನೇಗಿಲುರಾಜ್ಯಸಭೆಅಂತಾರಾಷ್ಟ್ರೀಯ ಸಂಬಂಧಗಳುಕಾವೇರಿ ನದಿಭಾರತದ ರಾಷ್ಟ್ರಪತಿಗಳ ಪಟ್ಟಿಪಿತ್ತಕೋಶಶಿಕ್ಷಕಕೊಡಗಿನ ಇತಿಹಾಸಛತ್ರಪತಿ ಶಿವಾಜಿಹುರುಳಿಕನ್ನಡದಲ್ಲಿ ಮಹಿಳಾ ಸಾಹಿತ್ಯಚಿತ್ರದುರ್ಗಕ್ಷಯಮನೆಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಕೋಪಸಂಯುಕ್ತ ಕರ್ನಾಟಕಮದುವೆಶೂದ್ರ ತಪಸ್ವಿಕಿರುಧಾನ್ಯಗಳುಬಸವೇಶ್ವರಸಾಲ್ಮನ್‌ರಕ್ತಓಂ (ಚಲನಚಿತ್ರ)ತಂತ್ರಜ್ಞಾನದ ಉಪಯೋಗಗಳುಸಂಸ್ಕೃತಿಆಸ್ಟ್ರೇಲಿಯಾ ಕ್ರಿಕೆಟ್ ತಂಡಅಳತೆಗಳುಬೆಂಗಳೂರು ಕೋಟೆಸಮಾಜ ವಿಜ್ಞಾನಅಂಬರೀಶ್ವಿರಾಮ ಚಿಹ್ನೆಇರಾನ್ಉಡಕರ್ನಾಟಕ ಲೋಕಸೇವಾ ಆಯೋಗಕ್ರೀಡೆಗಳುಪರಿಪೂರ್ಣ ಪೈಪೋಟಿಕರ್ನಾಟಕದ ತಾಲೂಕುಗಳುಗೋಕರ್ಣಮಕರ ಸಂಕ್ರಾಂತಿಕಯ್ಯಾರ ಕಿಞ್ಞಣ್ಣ ರೈಅಂತರಜಾಲಶ್ರವಣಬೆಳಗೊಳತಲಕಾಡುಮಂಡ್ಯಭಾರತದ ಪ್ರಧಾನ ಮಂತ್ರಿಗಳ ಪಟ್ಟಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕಾರ್ಲ್ ಮಾರ್ಕ್ಸ್ಇತಿಹಾಸಕೈಲಾಸನಾಥಭತ್ತಮಲೈ ಮಹದೇಶ್ವರ ಬೆಟ್ಟಅದಿತಿಗೋವಿಂದ ಪೈಬಾಲ ಗಂಗಾಧರ ತಿಲಕಬಾರ್ಲಿಪ್ರಾಥಮಿಕ ಶಾಲೆಕ್ರಿಯಾಪದಹಲಸುಬಾಲ್ಯ ವಿವಾಹಚಿದಂಬರ ರಹಸ್ಯಕರ್ನಾಟಕದ ಜಾನಪದ ಕಲೆಗಳುಬೆಂಗಳೂರುಕೆರೆಗೆ ಹಾರ ಕಥನಗೀತೆಸಾಲುಮರದ ತಿಮ್ಮಕ್ಕಲಕ್ಷ್ಮಣ ತೀರ್ಥ ನದಿಕಾದಂಬರಿಭೂಕಂಪಚೇಳು, ವೃಶ್ಚಿಕಚುನಾವಣೆವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)🡆 More