ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ

ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಈ ದಂಪತಿಗಳು ಮಹಾರಾಷ್ಟ್ರದ ಕಡೆಯಿಂದ ಬಂದವರು.

ಒಂದೆಡೆ ಕಿತ್ತು ತಿನ್ನುವ ಬಡತನ, ಮತ್ತೊಂದೆಡೆ ಕಳ್ಳನಾಗಿದ್ದ ಗಂಡನೊಡನೆ ಕಾಳವ್ವೆ ಪ್ರಯಾಸದ ಜೀವನ ನಡೆಸುತ್ತಿರುತ್ತಾಳೆ. ಒಂದು ದಿನ ಕಳ್ಳತನ ಮಾಡಲು ಹೋದ ಉರಿಲಿಂಗಪೆದ್ದಿ ಮನ:ಪರಿವರ್ತನೆಗೊಂಡು, 'ಉರಿಲಿಂಗ ದೇವರೆಂಬ' ಗುರುವಿನಿಂದ ಗುರುದೀಕ್ಷೆ ಪಡೆದು ಶರಣನಾಗುವನು. ಇದರಿಂದ ಸಂತಸಗೊಂಡ ಕಾಳವ್ವೆ ತಾನೂ ಪತಿಯ ಹಾದಿಯಲ್ಲೆ ಮುನ್ನಡೆದಳು. ಈಕೆಯ ವಚನಗಳ ಅಂಕಿತ "ಉರಿಲಿಂಗಪೆದ್ದಿಗಳರಸ".

ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಜನನ೧೧೬೦
ಅಂಕಿತನಾಮಉರಿಲಿಂಗಪೆದ್ದಿಗಳರಸ
ಸಂಗಾತಿ(ಗಳು)ಉರಿಲಿಂಗಪೆದ್ದಿ

ವಚನಗಳ ವೈಶಿಷ್ಟ್ಯ

ಕೃತಯುಗ, ತ್ರೇತಾಯುಗ, ದ್ವಾಪರಯುಗಗಳಲ್ಲಿ ಭೂಸುರರು ಕ್ರಮವಾಗಿ ಆನೆ, ಮಹಿಷ, ಅಶ್ವ ಮೊದಲಾದ ಪ್ರಾಣಿಗಳನ್ನು ಬಲಿಕೊಟ್ಟು ಹೋಮ ಮಾಡಿದುದನ್ನು ಕಲಿಯುಗದಲ್ಲಿ ಹೋತನನ್ನು ಬಲಿಕೊಟ್ಟು ಹೋಮ ಮಾಡಿದುದನ್ನು ಕಾಳವ್ವೆ ತನ್ನ ವಚನವೊಂದರಲ್ಲಿ ತಿಳಿಸುತ್ತಾ, ಮನುಷ್ಯ ಸೇವಿಸುವ ಆಹಾರದ ಮೇಲೆ ಜಾತಿಗಳನ್ನು ವಿಂಗಡಿಸುವುದನ್ನು ಖಂಡಿಸಿದ್ದಾಳೆ. ದೈವಗಳನ್ನು ಒಲಿಸಿಕೊಳ್ಳುವ ನೆಪದಲ್ಲಿ ಪ್ರಾಣಿಗಳನ್ನು ಬಲಿಕೊಡುವಂತಹ ಘೋರ ಕೃತ್ಯವನ್ನು, ಜಾತೀಯತೆಯನ್ನು ತನ್ನ ವಚನಗಳ ಮೂಲಕ ಉಗ್ರವಾಗಿ ಖಂಡಿಸಿ, ವ್ರತಾಚರಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾಳೆ. ಈಕೆಯ ೧೨ ವಚನಗಳು ಲಭ್ಯವಾಗಿವೆ.

ಕುರಿ-ಕೋಳಿ ಕಿರಿಮೀನು ತಿಂಬವರೆಲ್ಲ
ಕುಲಜ ಕುಲಜರೆಂದೆಂಬರು!
ಶಿವಗೆ ಪಂಚಾಮೃತವ ಕರೆವ ಪಶುವ
ತಿಂಬ ಮಾದಿಗ ಕೀಳುಜಾತಿಯೆಂಬರು
ಅವರೆಂತು ಕೀಳುಜಾತಿಯಾದರು ?
ಜಾತಿಗಳೇ ನೀವೇಕೆ ಕೀಳಾದಿರೊ ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ
ನಾಯಿ ನೆಕ್ಕಿ ಹೋಯಿತು
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಂಗೆ
ಶೋಭಿತವಾಯ್ತು ಅದೆಂತೆಂದಡೆ-
ಸಿದ್ಧಲಿಕೆಯಾಯ್ತು, ಸಗ್ಗಳೆಯಾಯ್ತು
ಸಿದ್ಧಲಿಕೆಯ ತುಪ್ಪವನು ಸಗ್ಗಳೆಯ ನೀರನು
ಶುದ್ಧವೆಂದು ಕುಡಿದ ಬುದ್ಧಿಗೇಡಿ ವಿಪ್ರರಿಗೆ
ನಾಯಕ ನರಕ ತಪ್ಪದಯ್ಯ!
ಉರಿಲಿಂಗಪೆದ್ದಿಗಳರಸ ಇದನೊಲ್ಲನವ್ವಾ

Tags:

ಮಹಾರಾಷ್ಟ್ರ

🔥 Trending searches on Wiki ಕನ್ನಡ:

ಪುಟ್ಟರಾಜ ಗವಾಯಿಕನ್ನಡ ರಾಜ್ಯೋತ್ಸವಚಾಣಕ್ಯಛಂದಸ್ಸುದಿಕ್ಕುಜೈಮಿನಿ ಭಾರತಅನುವಂಶಿಕ ಕ್ರಮಾವಳಿಮಂಕುತಿಮ್ಮನ ಕಗ್ಗತ್ರಿಪದಿಯಕೃತ್ತುವಿಭಕ್ತಿ ಪ್ರತ್ಯಯಗಳುಚರ್ಚೆಜವಹರ್ ನವೋದಯ ವಿದ್ಯಾಲಯಶಿವರಾಜ್‍ಕುಮಾರ್ (ನಟ)ಭಾರತದ ಪಂಚಾಯತ್ ರಾಜ್ ವ್ಯವಸ್ಥೆಗುರುನಾನಕ್ಮನುಸ್ಮೃತಿಪಾಲಕ್ಹಂಪೆಸಾತ್ವಿಕಅಡಿಕೆಸಂಖ್ಯಾಶಾಸ್ತ್ರಹೂವುನಾಕುತಂತಿಶ್ವೇತ ಪತ್ರಭಾರತದ ಸಂವಿಧಾನದ ೩೭೦ನೇ ವಿಧಿಕರ್ನಾಟಕ ಲೋಕಸೇವಾ ಆಯೋಗಕಬಡ್ಡಿರಾಯಲ್ ಚಾಲೆಂಜರ್ಸ್ ಬೆಂಗಳೂರುವಿಶ್ವ ಪರಂಪರೆಯ ತಾಣಕರ್ನಾಟಕದ ರಾಜ್ಯಪಾಲರುಗಳ ಪಟ್ಟಿರಾಮಾಯಣವ್ಯಕ್ತಿತ್ವಭಾರತ ಸಂವಿಧಾನದ ಪೀಠಿಕೆಐಹೊಳೆಅಶ್ವತ್ಥಮರಕರ್ಮಧಾರಯ ಸಮಾಸಭಾರತದ ಪ್ರಧಾನ ಮಂತ್ರಿಗಳ ಪಟ್ಟಿಹೆಚ್.ಡಿ.ಕುಮಾರಸ್ವಾಮಿಡಾ. ಎಚ್ ಎಲ್ ಪುಷ್ಪಸಾರಾ ಅಬೂಬಕ್ಕರ್ಚಂಡಮಾರುತಮಹಿಳೆ ಮತ್ತು ಭಾರತರಾಷ್ಟ್ರೀಯ ಸೇವಾ ಯೋಜನೆಕವಿರಾಜಮಾರ್ಗಬಾದಾಮಿ ಚಾಲುಕ್ಯರ ವಾಸ್ತುಶಿಲ್ಪರಾಜೇಶ್ ಕುಮಾರ್ (ಏರ್ ಮಾರ್ಷಲ್)ರಕ್ತದೊತ್ತಡದ.ರಾ.ಬೇಂದ್ರೆವೃತ್ತಪತ್ರಿಕೆಭಾರತದ ರಾಷ್ಟ್ರಪತಿನಿರ್ವಹಣೆ ಪರಿಚಯಸೋಮನಾಥಪುರಹೊಂಗೆ ಮರಬಿ.ಟಿ.ಲಲಿತಾ ನಾಯಕ್ರಾಜಧಾನಿಗಳ ಪಟ್ಟಿದೆಹಲಿಕರ್ನಾಟಕದ ವಿಶ್ವವಿದ್ಯಾಲಯಗಳುಗುರುರಾಜ ಕರಜಗಿಶ್ರೀನಿವಾಸ ರಾಮಾನುಜನ್ನಾಗಚಂದ್ರಸಾವಿತ್ರಿಬಾಯಿ ಫುಲೆಬ್ಲಾಗ್ಬಹುಸಾಂಸ್ಕೃತಿಕತೆಜಾತ್ರೆನುಗ್ಗೆಕಾಯಿನೀನಾದೆ ನಾ (ಕನ್ನಡ ಧಾರಾವಾಹಿ)ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಜಿ.ಎಚ್.ನಾಯಕಹಲ್ಮಿಡಿ ಶಾಸನಯೋಜಿಸುವಿಕೆಹುಣಸೂರು ಕೃಷ್ಣಮೂರ್ತಿಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಸೂರ್ಯ ವಂಶಕಾಲಾಯ ತಸ್ಮೈ ನಮಃ (ಚಲನಚಿತ್ರ)ಜಂತುಹುಳು🡆 More