ಆಲ್ಫ್ರೆಡ್ ಹಿಚ್ಕಾಕ್

ಸರ್ ಆಲ್ಫ್ರೆಡ್ ಜೋಸೆಫ್ ಹಿಚ್ಕಾಕ್, ಕೆ.ಬಿ.ಇ (13 ಆಗಸ್ಟ್ 1899 - 1980 29 ಏಪ್ರಿಲ್) ಪ್ರಸಿದ್ಧ ಚಲನಚಿತ್ರ ನಿರ್ದೇಶಕ.

ಇವನು ಮೂಕಿ ಚಿತ್ರದ ನಿರ್ದೇಶಕನಾಗಿದ್ದ. ಪತ್ತೇದಾರಿ ಸಿನಿಮಾಗಳಲ್ಲಿ ಹಾಸ್ಯಸ್ಪರ್ಶವನ್ನು ನೀಡುತ್ತಿದ್ದುದು ಈತ ಚಿತ್ರನಟರಂತೆ, ಆಕರ್ಷಣಾ ವ್ಯಕ್ತಿಯಾಗಿ ಖ್ಯಾತಿ ಪಡೆಯುವಂತಾಯಿತು.

ಸರ್ ಆಲ್ಫ್ರೆಡ್ ಜೋಸೆಫ್ ಹಿಚ್ಕಾಕ್
KBE
ಆಲ್ಫ್ರೆಡ್ ಹಿಚ್ಕಾಕ್
Studio publicity photo, circa 1955.
ಜನನ
Alfred Joseph Hitchcock

(೧೮೯೯-೦೮-೧೩)೧೩ ಆಗಸ್ಟ್ ೧೮೯೯
Leytonstone, Essex, England
ಮರಣ29 April 1980(1980-04-29) (aged 80)
Bel Air, California, United States
ಮರಣಕ್ಕೆ ಕಾರಣRenal failure
ಇತರೆ ಹೆಸರುಗಳುHitch
The Master of Suspense
ಹಳೆ ವಿದ್ಯಾರ್ಥಿSalesian College, London,
St Ignatius' College
ಉದ್ಯೋಗFilm director, film producer
ಸಕ್ರಿಯ ವರ್ಷಗಳು1921–1976
ಜೀವನ ಸಂಗಾತಿAlma Reville (m. 1926–1980; his death)
ಮಕ್ಕಳುPatricia Hitchcock

ಬದುಕು

1899 ಆಗಸ್ಟ್ 13, ರಂದು ಲಂಡನ್‍ನಲ್ಲಿ ಜನಿಸಿದ.

ಲಂಡನ್ನಿನ ಕುಕ್ಕುಟ ವ್ಯಾಪಾರಿಯ ಮಗನಾದ ಈತ, ಸೇಂಟ್ ಇಗ್ನಟಸ್ ಕಾಲೇಜ್, ಜೆಸ್ಯೂಟ ಶಾಲೆಯಲ್ಲಿ ವ್ಯಾಸಂಗ ಮಾಡಿದ. ಲಂಡನ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದು 1920 ರಿಂದ ಸಿನಿಮಾಗಳಲ್ಲಿ, ಮೂಕಿ ಚಿತ್ರಗಳಿಗೆ ಶೀರ್ಷಿಕಾ ಫಲಕ ರಚಿಸುವ ಕೆಲಸದಲ್ಲಿ ತೊಡಗಿಸಿಕೊಂಡ.


1925 ರಲ್ಲಿ ತನ್ನ ಮೊದಲ ಚಿತ್ರ ನಿರ್ಮಿಸಿದ. ಅನಂತರ 1926ರಲ್ಲಿ “ಲಾಡ್ಜರ್” ಸಿನಿಮಾದಲ್ಲಿ “ಥ್ರಿಲ್ಲರ್ಸ್” ಮೂಲಕ ಗುರುತಿಸಲ್ಪಟ್ಟ. ಇವನು ನಿರ್ದೇಶಿಸಿದ ಚಿತ್ರವೆ ಬ್ಲಾಕ್ಮೇಲ್ (1929). ಮೊದಲ ವಾಕಿ-ಟಾಕಿ ಚಿತ್ರ. ಶಾಸ್ತ್ರೀಯ ಚಿತ್ರಗಳಾದ ಥರ್ಟಿನೈನ್ ಸ್ಟೆಪ್ಸ್ (1935) ಹಾಗೂ ಲೇಡಿ ವ್ಯಾನಿಷಸ್ (1938) ನ್ನು ನಿರ್ದೇಶಿಸಿದ ಅನಂತರ ಈತ ಇಂಗ್ಲೆಂಡ್ ಬಿಟ್ಟು ಹಾಲಿವುಡ್‍ಗೆ ಬಂದು ರಬೆಕ್ಕಾ (1940) ಚಿತ್ರವನ್ನು ನಿರ್ದೇಶಿಸಿದ. ಇದು “ದ ಅಕಾಡೆಮಿ” ಪ್ರಶಸ್ತಿಯನ್ನು ಗಳಿಸಿತು. ಮುಂದಿನ ಮೂವತ್ತು ವರ್ಷಗಳಲ್ಲಿ ನಿರಂತರವಾಗಿ ಚಿತ್ರ ನಿರ್ಮಿಸಿದ. ನಿಗೂಢತೆಯನ್ನು ಕಟ್ಟುವ ಆತನ ಉತ್ಕøಷ್ಟ ತಾಂತ್ರಿಕತೆಯನ್ನು “ಫ್ಲಾಮ್ ಬೊಯಿನಪ್ಲಿ” ಪ್ರದರ್ಶಿಸುತ್ತದೆ. 1950ರ ಸಿನಿಮಾಗಳಾದ ಸ್ಟ್ರೇಂಜರ್ಸ್ ಆನ್ ಎ ಟ್ರೈನ್ (1951), ರಿಯರ್‍ವಿಂಡೋ (1954) ಹಾಗೂ ವರ್ಟಿಗೋ (1958) ಹೆಸರು ಮಾಡಿದುವು. ಇವನು ಸಾಂಪ್ರದಾಯಿಕ ಪತ್ತೇದಾರಿ ತಾಂತ್ರಿಕತೆಯಲ್ಲಿ ಕಾರ್ಯತಃ ಪರಿಣತನಾಗಿದ್ದಾನೆ. ಅನಂತರ ಥ್ರಿಲ್ಲರ್ಸ್ ಗಳನ್ನು ಹೊಸ ಶೈಲಿಯಲ್ಲಿ ತೋರಿಸುವತ್ತ ಗಮನಹರಿಸಿದ(1960). ಇದು ಸೈಕೋ (1960) ಸಿನಿಮಾದಲ್ಲಿ ಕಂಡುಬರುತ್ತದೆ. ಒಬ್ಬ ಪ್ರಮುಖ ಹೆಂಗಸು ಕೊಲೆಯಾದುದನ್ನು ಹೇಳಲು ಸಿನಿಮಾದ 1/3 ಭಾಗವನ್ನು ಬಳಸಿದ್ದಾನೆ. ಇವನ ದ ಬಡ್ರ್ಸ್ (1963) ನಲ್ಲಿ ಪಕ್ಷಿಗಳು ಮನುಷ್ಯರ ಮೇಲೆ ಎರಗಲು ಏನು ಪ್ರೇರಣೆ ಎಂಬ ಬಗೆ ಏನನ್ನೂ ಹೇಳುವುದಿಲ್ಲ. ಟೋರ್ನ್ ಕರ್ಟೈನ್ (1966) ಹಾಗೂ ಟೋಪಾeóï (1969) ನಲ್ಲಿ ಇವನು ಸಾಂಪ್ರದಾಯಿಕ ಪತ್ತೇದಾರಿ ಕಥೆಗಳನ್ನು ಕ್ರೋಡೀಕರಿಸಿ ಪ್ರದರ್ಶಿಸಿದ್ದಾನೆ. ಸಮಾಜ ಬಾಹಿರ ಚಟುವಟಿಕೆಗಳಿಂದ ಕೂಡಿದ ಈ ಕಥಾವಸ್ತುಗಳು ಒಳ್ಳೆಯದಕ್ಕಿಂತ ಕೆಟ್ಟ ಪರಿಣಾಮಗಳನ್ನುಂಟು ಮಾಡುತ್ತವೆಂಬುದನ್ನು ಪ್ರೇಕ್ಷಕರಿಗೆ ತಿಳಿಸುವುದು ಅವನ ಉದ್ದೇಶವಾಗಿದ್ದಿತು. ಆದ್ದರಿಂದ ಮುಂದೆ ಅವನು ಫ್ರಾಂಜಿ ಚಿತ್ರದಲ್ಲಿ (1972) ತನ್ನ ಹಳೆಯ ಶೈಲಿಯನ್ನೇ ಪುನಶ್ಚೇತನಗೊಳಿಸಿದ್ದಾನೆ. ಹೀಗೆ ತನ್ನ ಚಲನಚಿತ್ರಗಳಲ್ಲಿ ಅನೇಕ ನೂತನ ಪ್ರಯೋಗಗಳನ್ನು ಮಾಡಿದ ಈತ 1950-60ರ ದಶಕಗಳಲ್ಲಿ ಹಲವಾರು ಪ್ರಖ್ಯಾತ ಟಿ.ವಿ. ಧಾರಾವಾಹಿಗಳನ್ನು ನಿರ್ಮಿಸಿ ಅಧಿಕ ಕೀರ್ತಿಗೆ ಪಾತ್ರನಾದ. ಇವನು ತನ್ನ ಕೃತಿಗಳನ್ನು ಪರಿಚಯಿಸುವ ಪ್ರಚಾರ ಚಿತ್ರಗಳನ್ನೂ ನಿರ್ಮಿಸಿದ. ನಿಗೂಢ ಕಥಾ ವಸ್ತುಗಳನ್ನುಳ್ಳ ಚಲನಚಿತ್ರ ಸರಣಿಗಳನ್ನು ಮಾಡಿ ಹೆಚ್ಚು ಯಶಸ್ಸು ಪಡೆದ.

ಇನ್ನಿತರ ಹಾಲಿವುಡ್ ನಿರ್ದೇಶಕರಿಗಿಂತಲೂ ಗಂಭೀರವಾಗಿ ಇವನ ಚಿತ್ರಗಳಿರುತ್ತವೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಇವನ ಚಿತ್ರಗಳಲ್ಲಿ ತಾತ್ತ್ವಿಕ ಭಾವನೆಗಳು ಒಡಮೂಡಿದ್ದರೂ ಮನರಂಜನೆಗಿಂತ ಆಚೆ ಯಾವುದೇ ಅಭಿಪ್ರಾಯ ಇಲ್ಲ ಎನ್ನುವುದು ಇವನ ನಿಲುವು. ಕಿರಿಯ ಚಿತ್ರ ನಿರ್ಮಾಪಕರ ಮೇಲೆ ಈತನ ಪ್ರಭಾವ ಅಗಣಿತವಾಗಿದೆ. ಫ್ರಾನ್‍ಕೋಸ್ ಟ್ರುಫಾಟ್, ಕ್ಲಾಂಡೆ ಜಾಬ್ರೊಲ್ ಹಾಗೂ ಎರ್ರಿಕ್ ರೋಹಮರ್, ಲಿಂಟ್ಸೆ ಆ್ಯಂಡರ್‍ಸನ್, ಅಮೆರಿಕದ ಪೀಟರ್ ಬೊಗ್ಡಾನೊವಿಚ್ ಇವರು ಈ ಬಗ್ಗೆ ವ್ಯಾಪಕವಾಗಿ ಬರೆದು, ತಮ್ಮ ಶೈಲಿಗಳ ಮೇಲೆ ಇವನ ಪ್ರಭಾವವನ್ನು ಗುರುತಿಸಿದ್ದಾರೆ.

ಇವನು 1980 ರಲ್ಲಿ ನಿಧನನಾದ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಕೈವಾರ ತಾತಯ್ಯ ಯೋಗಿನಾರೇಯಣರುಮಹಾವೀರಮುಮ್ಮಡಿ ಕೃಷ್ಣರಾಜ ಒಡೆಯರುಕೆಂಪುಸರ್ಪ ಸುತ್ತುಕಾಂತಾರ (ಚಲನಚಿತ್ರ)ವಿಶ್ವ ಪರಂಪರೆಯ ತಾಣಭಾಸಮಾಸ್ತಿ ವೆಂಕಟೇಶ ಅಯ್ಯಂಗಾರ್ಪಂಪಭಾರತದ ಸಂವಿಧಾನ ರಚನಾ ಸಭೆಕ್ರಿಯಾಪದನರರೋಗ(Neuropathy)ಸವರ್ಣದೀರ್ಘ ಸಂಧಿಕೆ. ಅಣ್ಣಾಮಲೈಕನ್ನಡ ವ್ಯಾಕರಣಮೈಸೂರು ದಸರಾತಂತ್ರಜ್ಞಾನಮೊಘಲ್ ಸಾಮ್ರಾಜ್ಯಸಮಾಜ ವಿಜ್ಞಾನಸೀತಾ ರಾಮಆಯತ (ಆಕಾರ)ಭಾರತದ ನದಿಗಳುಡಾ ಬ್ರೋಮಾರುಕಟ್ಟೆಮಾನ್ಸೂನ್ಜೈನ ಧರ್ಮ ಇತಿಹಾಸಜ್ಯೋತಿಬಾ ಫುಲೆದ್ರಾವಿಡ ಭಾಷೆಗಳುಕರ್ನಾಟಕದ ಇತಿಹಾಸಕರ್ನಾಟಕ ಹೈ ಕೋರ್ಟ್ಗಿರೀಶ್ ಕಾರ್ನಾಡ್ಶಕ್ತಿಆದೇಶ ಸಂಧಿಸರ್ಕಾರೇತರ ಸಂಸ್ಥೆಸ್ವರಹೋಳಿಭರತನಾಟ್ಯಗುಲಾಬಿಅಸಹಕಾರ ಚಳುವಳಿಮಂಗಳಮುಖಿಕನ್ನಡ ಪತ್ರಿಕೆಗಳುಡಿ.ವಿ.ಗುಂಡಪ್ಪರಾಯಚೂರು ಜಿಲ್ಲೆರಿಕಾಪುಪಂಜೆ ಮಂಗೇಶರಾಯ್ಎಚ್ ೧.ಎನ್ ೧. ಜ್ವರಗುರುತ್ವಪ್ರಬಂಧ ರಚನೆಕರ್ನಾಟಕ ಸರ್ಕಾರನೀತಿ ಆಯೋಗಮುರುಡೇಶ್ವರರಾಷ್ಟ್ರೀಯತೆಚಿಪ್ಕೊ ಚಳುವಳಿಹಣ್ಣುಸುದೀಪ್ದಶಾವತಾರವಚನ ಸಾಹಿತ್ಯಶೀತಲ ಸಮರಕಲ್ಯಾಣಿಕರ್ನಾಟಕದ ಶಾಸನಗಳುಊಟಭಾರತದ ರಾಷ್ಟ್ರೀಯ ಉದ್ಯಾನಗಳುಲಿಂಗಾಯತ ಧರ್ಮಸಿದ್ಧಯ್ಯ ಪುರಾಣಿಕಜಲ ಮಾಲಿನ್ಯಅಭಿಮನ್ಯುಟಿಪ್ಪಣಿರಾಜ್ಯಸಭೆಕನ್ನಡ ಸಾಹಿತ್ಯ ಸಮ್ಮೇಳನಭಾರತ ರತ್ನವಿಧಾನಸೌಧಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಹಲ್ಮಿಡಿಮಗು🡆 More