ಆಯ್ದಕ್ಕಿ ಲಕ್ಕಮ್ಮ

ಆಯ್ದಕ್ಕಿ ಲಕ್ಕಮ್ಮ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಅಮರೇಶ್ವರ'ಗ್ರಾಮದ ದಲಿತ ಕುಟುಂಬದ ಸ್ವಾಭಿಮಾನಿ ಹೆಣ್ಣು.

ಅವಳ ಪತಿ 'ಆಯ್ದಕ್ಕಿ ಮಾರಯ್ಯ'. 'ಬಡತನ'ವೆಂಬ ದಿವ್ಯ ಅನುಭವವೇ ಲಕ್ಕಮ್ಮನಲ್ಲಿ ಸೂಕ್ಷ್ಮ ಚಿಂತನೆ ಮತ್ತು ಗಾಂಭೀರ್ಯದ ಬದುಕನ್ನು ಕಲಿಸಿತು. ದಂಪತಿಗಳು ಬಸವಣ್ಣನವರ ತತ್ವಕ್ಕೆ, ವ್ಯಕ್ತಿತ್ವಕ್ಕೆ ಮಾರು ಹೋಗಿ, 'ಅಮರೀಶ್ವರಿ ಗ್ರಾಮದಿಂದ ಕಲ್ಯಾಣಕ್ಕೆ ಬಂದು ನೆಲೆಸಿದರು. ಕಾಯಕ ಮಾಡಿ, ಜನರಿಗೆ ನೀಡಿ ಬದುಕ ಬೇಕೆ ಹೊರತು, ಹೆಚ್ಚೆಚ್ಚು ಶೇಖರಿಸಿಡಬಾರದು ಎಂಬ ನಿಲುವಿನವಳು. ಆಕೆಯ ಅಂಕಿತನಾಮ 'ಮಾರಯ್ಯಾ ಪ್ರಿಯ ಅಮರೇಶ್ವರ ಲಿಂಗ'.

ಆಯ್ದಕ್ಕಿ ಲಕ್ಕಮ್ಮ
ಜನನ೧೧೬೦
ಅಂಕಿತನಾಮಮಾರಯ್ಯಪ್ರಿಯ ಅಮರೇಶ್ವರಲಿಂಗ
ಸಂಗಾತಿ(ಗಳು)ಆಯ್ದಕ್ಕಿ ಮಾರಯ್ಯ

ಲಕ್ಕಮ್ಮನ ಪವಾಡ/ಶಿವನಿಷ್ಠೆ

ಲಕ್ಕಮ್ಮ 'ಹಿಡಿಯಕ್ಕಿ' ಯಿಂದಲೇ ಒಂದು ಲಕ್ಷದ ತೊಂಬತ್ತಾರು ಸಾವಿರದ ಜಂಗಮರಿಗೆ ಊಟ ನೀಡಿ ಬಸವಣ್ಣನವರಿಂದ "ಸೈ"ಎನಿಸಿಕೊಂಡವಳು. ಶರಣರೆಲ್ಲ ಆಕೆಯ ಪವಾಡಕ್ಕೆ ಮೂಕ ವಿಸ್ಮಿತ ರಾಗಿ 'ಭಕ್ತಿಯ ಮುಂದೆ ಎಲ್ಲವೂ ಮಿಥ್ಯ'ವೆಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಒಮ್ಮೆ ಸಾಕ್ಷಾತ್ ಶಿವನೇ ಜಂಗಮ ರೂಪದಲ್ಲಿ ಬಂದು, ಅಸಾಧ್ಯ ಚಳಿಯನ್ನೂ ಸೃಷ್ಠಿಸಿ ನಡುಗುತ್ತಾ, ಶಿವಭಕ್ತರಾದ ಇವರಿಬ್ಬರು ಉಟ್ಟ ಬಟ್ಟೆಯೇ ಬೇಕೆಂದು ಕೇಳಿ ತೊಟ್ಟುಕೊಂಡು ಅವರ ಭಕ್ತಿಗೆ ಮೆಚ್ಚುಗೆ ಸೂಚಿಸಿದನಂತೆ. ಆಯ್ದಕ್ಕಿ ಲಕ್ಕಮ್ಮನ ವಚನಗಳಲ್ಲಿ ಆತ್ಮೋದ್ಧಾರ, ಲೋಕೋದ್ಧಾರ ಗಳೆಂಬ ದ್ವಿಮುಖ ಆಶಯ, ಕಾಯಕತತ್ವ, ನಿಶ್ಚಲ ನಿಲುವು, ಜ್ಞಾನದ ಅರಿವು, ಸಮತಾಭಾವ, ಇತರರ ಒಳ್ಳೆತನವನ್ನೇ ಪ್ರಶ್ನಿಸುವ ದಿಟ್ಟತನ, ಅತಿಯಾಸೆ ಒಳ್ಳೆಯದಲ್ಲವೆಂಬ ನಿಲುವು, ಆಕೆಯ ಅಚಲ ಆತ್ಮವಿಶ್ವಾಸ, ನಿರ್ಮಲ ವ್ಯಕ್ತಿತ್ವದ ಅನಾವರಣವಿದೆ.

ಲಕ್ಕಮ್ಮನ ವಿಶಿಷ್ಟವ್ಯಕ್ತಿತ್ವ

ಶರಣರ ಕಾಯಕ, ದಾಸೋಹಗಳ ನಿಜಸ್ವರೂಪವನ್ನು, ಜೀವನಮೌಲ್ಯವನ್ನು ತನ್ನ ಪತಿ ಮಾರಯ್ಯನಿಗೆ ಮನಗಾಣಿಸುವ ರೀತಿಯಿಂದಾಗಿ ಅವಳ ನಿಸ್ವಾರ್ಥ ಮನಸ್ಸು, ತತ್ವ್ತಸಿದ್ಧಾಂತಗಳ ಪ್ರಧ ತಿಳಿವು, ಧೈರ್ಯ ಧೀಃಶಕ್ತಿಗಳಿಂದಾಗಿ ಎಲ್ಲಾ ಕಾಲದ, ಎಲ್ಲಾ ವರ್ಗದ ಸ್ತ್ರೀಯರಿಗೆ ಮಾರ್ಗದರ್ಶಿಯಾಗಿದ್ದಾಳೆ. ಒಂದೊಂದು ಅಕ್ಕಿಯಕಾಳು ಪೋಲಾಗದಂತೆ ರಕ್ಷಿಸಬೇಕಾದ ಸಾಮಾಜಿಕ ಜವಾಬ್ದಾರಿಯತ್ತ ನಮ್ಮನ್ನು ಕರೆದೊಯ್ಯುತ್ತಾಳೆ. ಲಕ್ಕಮ್ಮನ ೨೫ ವಚನಗಳು ಲಭ್ಯವಾಗಿವೆ.

'ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ
ಭಾವ ಶುದ್ಧವಾಗಿ ಮಹಾ ಶರಣರ ತಿಪ್ಪೆಯ
ತಪ್ಪಲು ಅಕ್ಕಿಯ ತಂದು ನಿಶ್ಚೈಸಿ ಮಾಡಬೇಕು
ಮಾರಯ್ಯಾಪ್ರಿಯ ಅಮರೇಶ್ವರಲಿಂಗಕ್ಕೆ
ಬೇಗ ಹೋಗು ಮಾರಯ್ಯಾ ಅಂಗವರಿತ
ಅರುವೆಯ ಅಂಗದಲ್ಲಿ ಕಟ್ಟಿ ಬಯಕೆಯರಿತ
ಕೈಯಲ್ಲಿ ತಂಡುಲವನಾಯ್ದುಕೊಂಡು ಬನ್ನಿರಿ'

ಉಲ್ಲೇಖಗಳು

Tags:

ಕುಟುಂಬ

🔥 Trending searches on Wiki ಕನ್ನಡ:

ಸಾರ್ವಜನಿಕ ಆಡಳಿತಗೋತ್ರ ಮತ್ತು ಪ್ರವರಅಯೋಧ್ಯೆಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಹಸ್ತ ಮೈಥುನಪೆರಿಯಾರ್ ರಾಮಸ್ವಾಮಿಶಿವರಾಮ ಕಾರಂತಸಾರಾ ಅಬೂಬಕ್ಕರ್ಪಂಪದೇವುಡು ನರಸಿಂಹಶಾಸ್ತ್ರಿಜಯಮಾಲಾಮೂಲಧಾತುಹಿಂದುಸ್ತಾನಿ ಶಾಸ್ತ್ರೀಯ ಸಂಗೀತಭಾರತೀಯ ಶಾಸ್ತ್ರೀಯ ನೃತ್ಯರಾಘವಾಂಕಸುಧಾರಾಣಿಕ್ರಿಕೆಟ್ರಾಜಧಾನಿಗಳ ಪಟ್ಟಿಗಂಗ (ರಾಜಮನೆತನ)ಭಾರತದ ವಾಯುಗುಣಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಬೆಳವಲಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿದಿಕ್ಕುಜಯಚಾಮರಾಜ ಒಡೆಯರ್ಕಾವೇರಿ ನದಿಪ್ರಾಥಮಿಕ ಶಿಕ್ಷಣಸಿಂಗಪೂರಿನಲ್ಲಿ ರಾಜಾ ಕುಳ್ಳಎ.ಆರ್.ಕೃಷ್ಣಶಾಸ್ತ್ರಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕಪ್ಪೆ ಅರಭಟ್ಟಅಂತಿಮ ಸಂಸ್ಕಾರಪ್ರಜಾವಾಣಿಕುಮಾರವ್ಯಾಸಕೆ. ಎಸ್. ನಿಸಾರ್ ಅಹಮದ್ಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆಪುರಂದರದಾಸನಾಟಕಹಲ್ಮಿಡಿ ಶಾಸನಹರೇ ರಾಮ ಹರೇ ಕೃಷ್ಣ (ಚಲನಚಿತ್ರ)ಅಂತರಜಾಲವಿನಾಯಕ ದಾಮೋದರ ಸಾವರ್ಕರ್ಕ್ಯಾನ್ಸರ್ಜಾಗತಿಕ ತಾಪಮಾನವಿರಾಮ ಚಿಹ್ನೆಶ್ವೇತ ಪತ್ರಪ್ಲೇಟೊಮಳೆವೀರಗಾಸೆಕರ್ಕಾಟಕ ರಾಶಿಕನ್ನಡ ಸಾಹಿತ್ಯವಾಸ್ತವಿಕವಾದಕರ್ಣಕಂಪ್ಯೂಟರ್ಪುಟ್ಟರಾಜ ಗವಾಯಿನುಡಿಗಟ್ಟುಕನ್ನಡ ಸಾಹಿತ್ಯ ಪರಿಷತ್ತುಮೊದಲನೆಯ ಕೆಂಪೇಗೌಡಹೂಡಿಕೆವಿರೂಪಾಕ್ಷ ದೇವಾಲಯಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಚೆನ್ನಕೇಶವ ದೇವಾಲಯ, ಬೇಲೂರುಅಮೃತಪ್ರಬಂಧ ರಚನೆವಿಧಾನಸೌಧರಾಘವನ್ (ನಟ)ತಾಜ್ ಮಹಲ್ಕೃಷ್ಣಕೊಪ್ಪಳಭಾರತದ ಸಂವಿಧಾನದ ೩೭೦ನೇ ವಿಧಿಕರ್ನಾಟಕದ ಇತಿಹಾಸಭಾರತದ ರಾಷ್ಟ್ರಪತಿಭಾರತೀಯ ಮೂಲಭೂತ ಹಕ್ಕುಗಳುಜವಹರ್ ನವೋದಯ ವಿದ್ಯಾಲಯಗುದ್ದಲಿಚಂದ್ರಶೇಖರ ಕಂಬಾರ🡆 More