ಆಯ್ಕೆ: ಬಹು ಗಳಿಂದ ಮಾಡುವ ಕ್ರಿಯೆ.

ವ್ಯಕ್ತಿ ತನ್ನ ಪುರೋಭಿವೃದ್ಧಿಯ ದೃಷ್ಟಿಯಿಂದ ಶಾಲಾ ಕಾಲೇಜುಗಳಲ್ಲಿ ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲಿ ತನಗೊಗ್ಗಿದುವನ್ನು ಆರಿಸಿಕೊಳ್ಳುವುದಕ್ಕೂ ಸರ್ಕಾರ ಮತ್ತು ಇತರ ಸಂಸ್ಥೆಗಳು ಯುಕ್ತ ಅಭ್ಯರ್ಥಿಗಳನ್ನು ಅವರವರ ಯೋಗ್ಯತೆಯ ಮೇಲೆ ಆರಿಸಿಕೊಳ್ಳುವುದಕ್ಕೂ ಈ ಹೆಸರಿದೆ.

ಮೊದಲನೆಯ ಅಂಶವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಎರಡನೆಯ ಅಂಶಕ್ಕೆ ಅರ್ಹತೆಗಳು. ತೀರ ಎಳೆಯ ಮಕ್ಕಳಿಗೆ ಆಯ್ಕೆಮಾಡುವ ವಿವೇಕವಿರುವುದಿಲ್ಲ. ಆದ್ದರಿಂದ ಅವುಗಳಿಗೆ ಎಂಥ ಶಿಕ್ಷಣ ಕೊಡಬೇಕೆಂಬುದನ್ನು ತಜ್ಞರು ತಾವೇ ನಿರ್ಧರಿಸಿರುತ್ತಾರಂತೆ. ಹಾಗೆ ನಿರ್ಧರಿಸುವಾಗ ಮಕ್ಕಳ ಅಭಿರುಚಿಗಳನ್ನೂ ಅವರ ವ್ಯಕ್ತಿತ್ವದ ಪುರ್ಣ ವಿಕಾಸವನ್ನೂ ಗಮನದಲ್ಲಿಟ್ಟುಕೊಂಡು, ಎಂಥ ವ್ಯಕ್ತಿಗೇ ಆಗಲಿ ಅಗತ್ಯವಾದುದು ಎಷ್ಟೋ ಅಷ್ಟನ್ನು ಪಾಠದಲ್ಲಿ ಕಡ್ಡಾಯವಾಗಿ ಸೇರಿಸುವುದು ಉತ್ತಮ. ಆಯ್ಕೆಯ ವಿಷಯದಲ್ಲಿ ಮಕ್ಕಳ ಜವಾಬ್ದಾರಿ ಏನೂ ಇಲ್ಲವೆಂದು ಹೇಳುವುದು ಸರಿಯಲ್ಲ. ಏಕೆಂದರೆ ಅವು ಅನೇಕ ವೇಳೆ ತಮ್ಮ ಗುಣಲಕ್ಷಣಗಳಿಗೆ ಯೋಗ್ಯವಾದ, ತಮ್ಮ ಶಕ್ತಿ ಸಾಮರ್ಥ್ಯ್ತಗಳಿಗೆ ತಕ್ಕ ವಿಷಯಗಳನ್ನೇ ಸಹಜವಾಗಿ ಆರಿಸಿಕೊಳ್ಳುತ್ತವೆ. ತಜ್ಞರ ಗಮನ ಈ ಕಡೆ ಇರಬೇಕಾದುದು ಅನಿವಾರ್ಯ. ಮಗು ಬೆಳೆದು ದೊಡ್ಡವನಾಗುತ್ತಿದ್ದಂತೆ ಅವನ ಅಭಿರುಚಿಗಳು ಸ್ಥಿರವಾಗತೊಡಗು ತ್ತವೆ. ಲಲಿತಕಲೆಯ ಕಡೆಗೂ ಅವನು ವಾಲುತ್ತಾನೆ. ಆಗ ಅವನ ಮೇಲೆ ಬೇಡದ ವಿಷಯಗಳನ್ನು ಹೇರಬಾರದು. ಅಭಿರುಚಿಯಿಲ್ಲದ ಮಾತ್ರಕ್ಕೇ ಆತ ಮೂಲಭೂತವಾದ, ಸಾಮಾನ್ಯವಾದ ವಿಷಯಗಳ ಕಡೆ ಪುರ್ಣ ಅನಾಸಕ್ತನಾಗದಂತೆಯೂ ನೋಡಿಕೊಳ್ಳಬೇಕು. ಇದನ್ನು, ನಿರ್ಣಯಿಸಲು ವಿದ್ಯಾರ್ಥಿ ನಡೆಸಿದ ಅಭ್ಯಾಸಗಳು ಸೂಚಿಗಳಾಗಬೇಕು. ಅವನ ಅಭಿವೃದ್ಧಿಯ ಬಗ್ಗೆ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಇಡಬೇಕಾದುದು ಶಾಲೆಯ ಕರ್ತವ್ಯ. ಶಿಕ್ಷಣದಲ್ಲಿ ಪಕ್ಷಪಾತವಿರಬಾರದು. ಯಾವ ವಿದ್ಯಾರ್ಥಿ ಯಾವ ಭಾಗವನ್ನು ವ್ಯಾಸಂಗಮಾಡಲು ಬಯಸುತ್ತಾನೊ, ಅದನ್ನು ಕಲಿಯಲು ಅವನಿಗೆ ಅವಕಾಶವಿರಬೇಕು ಎಂದು ಹೇಳುವುದು ಈ ದೃಷ್ಟಿಯಿಂದಲೇ. (ನೋಡಿ - ಅವಕಾಶಸಮಾನತೆ ಶಿಕ್ಷಣದಲ್ಲಿ) ಈಗಂತೂ ಪ್ರತಿ ಪ್ರೌಢಶಾಲೆಯಲ್ಲೂ ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾರ್ಗನಿರ್ದೇಶ ಮಾಡಲು ಯುಕ್ತವ್ಯವಸ್ಥೆ ಮಾಡಲಾಗುತ್ತಿದೆ. ಹೀಗೆ ಮಾಡುವುದರಿಂದ ವಿದ್ಯಾರ್ಥಿಗೆ ವ್ಯಾಸಂಗದಲ್ಲಿನ ಉತ್ಸಾಹ ಹೆಚ್ಚುತ್ತದೆ. ಅನುತ್ತೀರ್ಣರಾಗುವವರ ಸಂಖ್ಯೆ ತಗ್ಗುತ್ತದೆ. ಉತ್ತಮ ವಿದ್ಯಾಭ್ಯಾಸದ ಸತ್ಫಲ ಹೆಚ್ಚುತ್ತದೆ. ವ್ಯಕ್ತಿ ತನಗೂ, ದೇಶಕ್ಕೂ ಉಪಯುಕ್ತನಾಗಿ ಬಾಳುವಂತಾಗುತ್ತದೆ.

ಆಯ್ಕೆ: ಬಹು ಗಳಿಂದ  ಮಾಡುವ ಕ್ರಿಯೆ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

🔥 Trending searches on Wiki ಕನ್ನಡ:

ಪರಿಸರ ಕಾನೂನುಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಅವಿಭಾಜ್ಯ ಸಂಖ್ಯೆಗಣಗಲೆ ಹೂಜಲ ಮಾಲಿನ್ಯಕರಗ (ಹಬ್ಬ)ಕರ್ನಾಟಕ ಸ್ವಾತಂತ್ರ್ಯ ಚಳವಳಿಭೂಮಿ ದಿನಭೂಮಿಶ್ರೀಕೃಷ್ಣದೇವರಾಯದ್ವಂದ್ವ ಸಮಾಸಗಿಡಮೂಲಿಕೆಗಳ ಔಷಧಿಗೋವಿಂದ ಪೈತಾಳೀಕೋಟೆಯ ಯುದ್ಧಗದ್ದಕಟ್ಟುತ್ರಿಪದಿಅವಲೋಕನಮಲೈ ಮಹದೇಶ್ವರ ಬೆಟ್ಟವಿಮರ್ಶೆಚಂದ್ರಸಚಿನ್ ತೆಂಡೂಲ್ಕರ್ಗೋಕರ್ಣಪರಮಾತ್ಮ(ಚಲನಚಿತ್ರ)ಬಾದಾಮಿ ಶಾಸನಕನ್ನಡ ಅಕ್ಷರಮಾಲೆರವಿಚಂದ್ರನ್ಸೀತೆಮೆಕ್ಕೆ ಜೋಳರಾಣಿ ಅಬ್ಬಕ್ಕವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆದಯಾನಂದ ಸರಸ್ವತಿಲೋಕಸಭೆಆರೋಗ್ಯನಿರಂಜನತೆಂಗಿನಕಾಯಿ ಮರಗುಪ್ತ ಸಾಮ್ರಾಜ್ಯಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಸ್ತ್ರೀಸ್ವರಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ರಾಜ್ಯಪಾಲಗೊರೂರು ರಾಮಸ್ವಾಮಿ ಅಯ್ಯಂಗಾರ್ಅಲ್-ಬಿರುನಿದ್ವಾರಕೀಶ್ಕಾದಂಬರಿಜೋಳಅಂತಾರಾಷ್ಟ್ರೀಯ ಸಂಬಂಧಗಳುಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟಮಗಧಜಾತ್ರೆಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭಾರತ ಸಂವಿಧಾನದ ಪೀಠಿಕೆನೀನಾದೆ ನಾ (ಕನ್ನಡ ಧಾರಾವಾಹಿ)ಮಹೇಂದ್ರ ಸಿಂಗ್ ಧೋನಿಕುವೆಂಪುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಹನುಮಾನ್ ಚಾಲೀಸರಾಮ ಮಂದಿರ, ಅಯೋಧ್ಯೆಜೈನ ಧರ್ಮಹೊಯ್ಸಳ ವಾಸ್ತುಶಿಲ್ಪಕುಕ್ಕೆ ಸುಬ್ರಹ್ಮಣ್ಯ ದೇವಾಲಯಲೋಹಋಗ್ವೇದಋತುಚಕ್ರದಶಾವತಾರಕೊಲ್ಲೂರು ಮೂಕಾಂಬಿಕಾ ದೇವಸ್ಥಾನಮೈಸೂರುಕನ್ನಡದಲ್ಲಿ ಸಣ್ಣ ಕಥೆಗಳುಹಂಪೆಮುಪ್ಪಿನ ಷಡಕ್ಷರಿಸುವರ್ಣ ನ್ಯೂಸ್ರಾಮಾಚಾರಿ (ಕನ್ನಡ ಧಾರಾವಾಹಿ)ಈರುಳ್ಳಿಮುದ್ದಣಗಂಗಾನಂಜನಗೂಡು🡆 More