ಪುಸ್ತಕ ಆನಂದ ಮಠ

ಆನಂದ ಮಠ (ಬಂಗಾಳಿ : আনন্দমঠ), ಬಂಕಿಮ ಚಂದ್ರ ಚಟ್ಟೋಪಾಧ್ಯಾಯರು ರಚಿಸಿದ ಬಂಗಾಳಿ ಭಾಷೆಯ ಕಾದಂಬರಿ.

ಬಂಗದರ್ಶನ್‌‌ ಎಂಬ ನಿಯತಕಾಲಿಕದಲ್ಲಿ ಧಾರಾವಾಹಿ ಸ್ವರೂಪದಲ್ಲಿ ಮೊದಲು ಕಾಣಿಸಿಕೊಂಡ ಈ ಕಾದಂಬರಿಯು ಕ್ರಿಸ್ತಶಕ ೧೮೮೨ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು.

Title page of the second edition of the books
ಆನಂದ ಮಠ (ಬಂಗಾಳಿ ಕಾದಂಬರಿ)
ಲೇಖಕರುಬಂಕಿಮ ಚಂದ್ರ ಚಟ್ಟೋಪಾಧ್ಯಾಯ
ಮೂಲ ಹೆಸರುআনন্দ মঠ
ದೇಶಭಾರತ
ಭಾಷೆಬೆಂಗಾಲಿ
ಪ್ರಕಾಶಕರುರಾಮಾನುಜನ್ ಯುನಿವರ್ಸಿಟಿ ಪ್ರೆಸ್
ಪ್ರಕಟವಾದ ದಿನಾಂಕ
1882
ಇಂಗ್ಲೀಷ್‌ನಲ್ಲಿ ಪ್ರಕಟಗೊಂಡಿದ್ದು
2005, 1941, 1906
ಮಾಧ್ಯಮ ಪ್ರಕಾರPrint (Paperback)
ಪುಟಗಳು336 pp

ವಿಶಿಷ್ಟತೆ

೧೮ನೇ ಶತಮಾನದ ಅಂತ್ಯದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ದ ನಡೆದ ಸನ್ಯಾಸಿ ಕ್ರಾಂತಿಯನ್ನು ಆಧಾರವಾಗಿಟ್ಟುಕೊಂಡು ಈ ಕಾದಂಬರಿಯನ್ನು ಹೆಣೆಯಲಾಗಿದೆ. ಬ್ರಿಟೀಶ್ ಸಾಮ್ರಾಜ್ಯದ ವಿರುದ್ದ ನಡೆದ ಸ್ವಾತಂತ್ರ್ಯ ಹೋರಾಟದದಲ್ಲಿ ಈ ಕೃತಿಯು ಮಹತ್ವದ ಪಾತ್ರವನ್ನು ವಹಿಸಿದೆ. ಬಾರತದ ರಾಷ್ಟ್ರೀಯತೆಯ ಪ್ರತೀಕವೆಂದು ಭಾವನಾತ್ಮಕವಾಗಿ ಪರಿಗಣಿಸಲಾಗುವ "ವಂದೇಮಾತರಂ" ಗೀತೆಯು ಇದೇ ಕಾದಂಬರಿಯ ಭಾಗವಾಗಿದೆ. ಈ ಗೀತೆಗೆ ಮೊದಲ ಬಾರಿಗೆ ರವೀಂದ್ರನಾಥ ಟ್ಯಾಗೋರ್‌‌‌ರವರು ಸಂಗೀತ ಸಂಯೋಜಿಸಿದ್ದರು. ಬ್ರಿಟೀಶ್ ಸರ್ಕಾರವು ಈ ಪುಸ್ತಕದ ಮೇಲೆ ಹೇರಿದ್ದ ನೀಷೇಧವನ್ನು, ಭಾರತವು ಸ್ವಾತಂತ್ರ್ಯ ಗಳಿಸಿದ ಮೇಲೆ ಹಿಂತೆಗೆಯಲಾಯಿತು.

ಪುಸ್ತಕ ಆನಂದ ಮಠ 
ಆನಂದ ಮಠ (ಕನ್ನಡಾನುವಾದ)

ಕಥಾವಸ್ತು

ಆನಂದಮಠ ಎಂಬುದು ಒಂದು ರಾಜಕೀಯ ಕಾದಂಬರಿಯಾಗಿದೆ. ೧೭೭೦ರಲ್ಲಿ ಬಂಗಾಳ ರಾಜ್ಯವು ಎದುರಿಸಿದ ಭೀಕರ ಬರಗಾಲದ ಹಿನ್ನಲೆಯಿಟ್ಟುಕೊಂಡು ಮಹೇಂದ್ರ , ಕಲ್ಯಾಣಿ, ಸತ್ಯಾನಂದ, ಜೀವಾನಂದ, ಭವಾನಂದ ಮತ್ತು ಶಾಂತಿ ಎಂಬ ಮುಖ್ಯ ಪಾತ್ರಗಳ ಸುತ್ತ ನಡೆಯುವ ಕತೆಯಾಗಿದೆ. ಮಹೇಂದ್ರ ಮತ್ತು ಕಲ್ಯಾಣಿ ಜಮೀನ್ದಾರರ ಕುಟುಂಬಕ್ಕ ಸೇರಿದ ದಂಪತಿ, ಬರಗಾಲದ ಪರಿಣಾಮ, ತಮ್ಮ ಊರಾದ ಪದಚಿನ್ಹವನ್ನು ಬಿಡಬೇಕಾದ ಸನ್ನೀವೇಶ ಉಂಟಾಗುತ್ತದೆ. ಹೀಗೆ ಊರು ತೊರೆದವರು ಪುಟ್ಟ ಮಗು ಸುಕುಮಾರಿಯ ಜೊತೆ ಕಾಡು ಪಾಲಾಗುತ್ತಾರೆ. ಅಲ್ಲಿ ಆಂಗ್ಲರ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ದ ಬಂಡಾಯವೆದ್ದಿರುವ ಕ್ರಾಂತಿಕಾರಿ ಸನ್ಯಾಸಿಗಳ ತಂಡವು ಸಿಗುವುದು. ಮಹೇಂದ್ರನೂ ಕೂಡ ಆ ತಂಡದೊಡನೆ ಸೇರಿಕೊಂಡು, ಆನಂದ ಮಠ ಸಂಸ್ಥೆಯ ಮುಖ್ಯಸ್ಥ ಸತ್ಯಾನಂದರ ಶ್ರೀರಕ್ಷೆಯಲ್ಲಿ, ಸನ್ಯಾಸಿ ಕ್ರಾಂತಿಯಲ್ಲಿ ಪಾಲ್ಗೊಳ್ಳುತ್ತಾನೆ. ಈ ಕಾದಂಬರಿಯಲ್ಲಿ ಭಾರತವನ್ನು ದುರ್ಗೆ,ಕಾಳಿ ಹಾಗೂ ಜಗದ್ದಾತ್ರಿಯ ಎಂಬ ಮೂರು ರೂಪಗಳ ಭಾರತ ಮಾತೆಯಾಗಿ ವಿವರಿಸುವ ಭಾಗವು ವಿಶೇಷವಾಗಿದೆ.

ಅನುವಾದ ಮತ್ತು ರೂಪಾಂತರ

ಈ ಕಾದಂಬರಿಯನ್ನು ಕನ್ನಡಕ್ಕೆ ಮೊದಲ ಬಾರಿ ಅನುವಾದಿಸಿದವರು ವೆಂಕಟಾಚಾರ್ಯ ಬಿ. ಇತರ ಲೇಖಕರು ಮಾಡಿದ ಆನುವಾದಿತ ಆವೃತ್ತಿಗಳು ಕೂಡ ಲಭ್ಯವಿರುವವು. ೨೦೦೭ ರಲ್ಲಿ ಎಸ್. ಆರ್. ರಾಮಸ್ವಾಮಿಯವರು ಕನ್ನಡಕ್ಕೆ ಅನುವಾದ ಮಾಡಿದುದನ್ನು ರಾಷ್ಟ್ರೋತ್ಥಾನ ಸಾಹಿತ್ಯದವರು ಪ್ರಕಟಿಸಿದ್ದಾರೆ. ಆನಂದ ಮಠ ಕಾದಂಬರಿ ಆಧಾರಿತ ಚಲನಚಿತ್ರವು ೧೯೫೨ರಲ್ಲಿ ಹಿಂದಿ ಭಾಷೆಯಲ್ಲಿ ಆನಂದ ಮಠ ಎಂಬ ಹೆಸರಿನಲ್ಲಿ ಬಿಡುಗಡೆಗೊಂಡಿತು. ಪೃಥ್ವಿರಾಜ್‌ ಕಪೂರ್‌, ಪ್ರದೀಪ್ ಕುಮಾರ್, ಗೀತಾ ಬಾಲಿ ನಟಿಸಿದ ಈ ಚಿತ್ರಕ್ಕ್ಕೆ ಹೇಮಂತ್ ಕುಮಾರ್ ಸಂಗೀತ ನಿರ್ದೇಶನ ಮಾಡಿದ್ದರು. ಲತಾ ಮಂಗೇಶ್ಕರ್ ದನಿಯಲ್ಲಿ ಮೂಡಿದ ವಂದೇ ಮಾತರಂ ಹಾಡು ಬಲು ಜನಪ್ರಿಯವಾಗಿತ್ತು.

ಉಲ್ಲೇಖಗಳು

Tags:

ಪುಸ್ತಕ ಆನಂದ ಮಠ ವಿಶಿಷ್ಟತೆಪುಸ್ತಕ ಆನಂದ ಮಠ ಕಥಾವಸ್ತುಪುಸ್ತಕ ಆನಂದ ಮಠ ಅನುವಾದ ಮತ್ತು ರೂಪಾಂತರಪುಸ್ತಕ ಆನಂದ ಮಠ ಉಲ್ಲೇಖಗಳುಪುಸ್ತಕ ಆನಂದ ಮಠಕಾದಂಬರಿಕ್ರಿಸ್ತ ಶಕಧಾರಾವಾಹಿಬಂಕಿಮ ಚಂದ್ರ ಚಟ್ಟೋಪಾಧ್ಯಾಯಬಂಗಾಳಿ ಭಾಷೆ

🔥 Trending searches on Wiki ಕನ್ನಡ:

ಹರಕೆಶಾತವಾಹನರುಸಂಸದೀಯ ವ್ಯವಸ್ಥೆಕರ್ನಾಟಕದ ಶಾಸನಗಳುಸಿದ್ದರಾಮಯ್ಯಹಿಪಪಾಟಮಸ್ಬಾದಾಮಿಸಿಂಧನೂರುಸೀತಾ ರಾಮದ್ವಿಗು ಸಮಾಸಕಲಿಯುಗಕಾಳಿ ನದಿಕೃಷ್ಣದೇವರಾಯಸರ್ಕಾರೇತರ ಸಂಸ್ಥೆಪಾಪವಾರ್ತಾ ಭಾರತಿಅಂತಾರಾಷ್ಟ್ರೀಯ ಸಂಬಂಧಗಳುತಿಂಥಿಣಿ ಮೌನೇಶ್ವರಎರಡನೇ ಮಹಾಯುದ್ಧತತ್ತ್ವಶಾಸ್ತ್ರಆವರ್ತ ಕೋಷ್ಟಕಚೋಳ ವಂಶಭಾರತ ಸರ್ಕಾರಸಾನೆಟ್ಕನ್ನಡ ಸಾಹಿತ್ಯ ಪರಿಷತ್ತುಕರ್ನಾಟಕದ ಇತಿಹಾಸಆನೆಸುಮಲತಾಆಸ್ಪತ್ರೆಮೆಂತೆಜಾತ್ರೆಮಹಾಭಾರತಬಾಳೆ ಹಣ್ಣುಬ್ರಿಕ್ಸ್ ಸಂಘಟನೆರಾವಣರಕ್ತಪಿಶಾಚಿಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಭ್ರಷ್ಟಾಚಾರಶಿಕ್ಷಕಕರ್ನಾಟಕ ರಾಜ್ಯ ಮಹಿಳಾ ಆಯೋಗಹದಿಹರೆಯಕರ್ನಾಟಕದ ವಾಸ್ತುಶಿಲ್ಪನೇಮಿಚಂದ್ರ (ಲೇಖಕಿ)ರಾಜ್ಯಸಭೆಅಲಂಕಾರಕರ್ಬೂಜಚದುರಂಗದ ನಿಯಮಗಳುಮನಮೋಹನ್ ಸಿಂಗ್ರಾಜಕೀಯ ಪಕ್ಷಕಾನೂನುತಾಟಕಿಕನ್ನಡ ವ್ಯಾಕರಣವೆಂಕಟೇಶ್ವರ ದೇವಸ್ಥಾನಅಮೇರಿಕ ಸಂಯುಕ್ತ ಸಂಸ್ಥಾನಮುಮ್ಮಡಿ ಕೃಷ್ಣರಾಜ ಒಡೆಯರುಕರ್ನಾಟಕದ ಜಿಲ್ಲೆಗಳುಭಾರತದ ನದಿಗಳುಏಡ್ಸ್ ರೋಗಸಂಗೀತಮಂಕುತಿಮ್ಮನ ಕಗ್ಗಕಲೆಲೋಕಸಭೆಡೊಳ್ಳು ಕುಣಿತಮಹಿಳೆ ಮತ್ತು ಭಾರತಶ್ರೀರಂಗಪಟ್ಟಣಚಂದ್ರದುರ್ಗಸಿಂಹಮಲೈ ಮಹದೇಶ್ವರ ಬೆಟ್ಟಭಾರತ ಸಂವಿಧಾನದ ಪೀಠಿಕೆರಾಮಾಯಣಕರ್ನಾಟಕದ ನದಿಗಳುಭಾರತದ ಮುಖ್ಯಮಂತ್ರಿಗಳುಕೊಪ್ಪಳಕೆ. ಅಣ್ಣಾಮಲೈಅದ್ವೈತಮಂಜುಳಸೀತೆಊಟ🡆 More