ಆದಿಪುರಾಣ: ಪ್ರಥಮ ಜೈನ ಪುರಾಣ

ಆದಿಪುರಾಣವು ೧೦ನೇ ಶತಮಾನದ (ಕ್ರಿ.ಶ.

೯೪೨) ಕನ್ನಡದ ಆದಿಕವಿ ಪಂಪನು ರಚಿಸಿರುವ ಕೃತಿ. ಇದು ಜೈನ ಧರ್ಮದ ಮೊದಲ ತೀರ್ಥಂಕರನಾದ ವೃಷಭನಾಥನ ಜೀವನದ ಕಥೆ. ಇದು ಚಂಪೂಕಾವ್ಯವಾಗಿದ್ದು, ಇದರಲ್ಲಿ ೧೬ ಆಶ್ವಾಸಗಳಿವೆ.

ವಿವರ

ಸಂಸ್ಕೃತದಲ್ಲಿ ಜಿನಸೇನನು ಬರೆದ ಆದಿಪುರಾಣವನ್ನು ಪಂಪ ಕವಿಯು ಕನ್ನಡದಲ್ಲಿ ಬರೆದಿದ್ದಾನೆ. ಒಟ್ಟು ೧೬ ಅಶ್ವಾಸಗಳಲ್ಲಿ ಮೊದಲನೆಯ ೬ ಆಶ್ವಾಸಗಳು -ಪುರುದೇವನ ಹಿಂದಿನ ಒಂಬತ್ತು ಜನ್ಮಗಳ ಬಗ್ಗೆ ಹೇಳುತ್ತವೆ. ೭ರಿಂದ ೧೦ನೇ ಆಶ್ವಾಸಗಳು-ಪುರುದೇವನ ಜನನ, ಬಾಲ್ಯದ ಜೀವನದ ಬಗ್ಗೆ, ತಪಸ್ಸು, ಸಮವಸರಣದ ಬಗ್ಗೆ ಹೇಳುತ್ತವೆ. ೧೧ ರಿಂದ ೧೬ನೇ ಆಶ್ವಾಸವರೆಗೆ ಭರತ ಚಕ್ರವರ್ತಿಯ ಕಥೆಯನ್ನು ವಿವರಿಸುತ್ತದೆ. ಈ ಕಥೆಗಳಲ್ಲಿ ನೀಲಾಂಜನೆ ಎಂಬ ನರ್ತಕಿಯ ಕಥೆಯು ರೋಮಾಂಚನ ಮೂಡಿಸುತ್ತದೆ. ವೃಷಭನಾಥನ ಹಿರಿಯ ಮಗ ಭರತ ಚಕ್ರವರ್ತಿ ಮತ್ತು ಕಿರಿಯಮಗ ಬಾಹುಬಲಿಯ ನಡುವಿನ ಅಧಿಕಾರಕ್ಕಾಗಿ ನಡೆವ ಕದನದ ಪ್ರಸಂಗ ವಾಸ್ತವಿಕತೆಯಿಂದ ಕೂಡಿದೆ. ತನ್ನ ಅಣ್ಣನ ರಾಜ್ಯದ ಆಸೆಯನ್ನು ಕಂಡು ಬಾಹುಬಲಿಯ ಸಂನ್ಯಾಸತ್ವ ಪಡೆದು, ಭರತನಲ್ಲಿ ಪಶ್ಚ್ಯಾತಾಪ ಮೂಡಿಸುವುದು ಕಥೆಯ ಹಿರಿಮೆ.

ಪಂಪನಿಗೆ ಜಿನಧರ್ಮದ ಬಗ್ಗೆ ಇದ್ದ ಒತ್ತಾಸೆ

ಪಂಪನ ತಂದೆ ಪೂರ್ವಿಕರಿಂದ ಬಂದ ವೈದಿಕ ಧರ್ಮವನ್ನು ಬಿಟ್ಟುಕೊಟ್ಟು ಜೈನಧರ್ಮಕ್ಕೆ ಮತಾಂತರ ಹೊಂದಿದವನು. ಜೈನ ಧರ್ಮಕ್ಕೆ ಸೇರಿದ ಪಂಪನಿಗೆ, ತಾನು ಆ ಧರ್ಮವನ್ನು ಕುರಿತು, ಆ ಧರ್ಮದ ಮಹಾವ್ಯಕ್ತಿಗಳನ್ನು ಕುರಿತು ಕಾವ್ಯ ಬರೆಯಬೇಕು ಎನ್ನಿಸಿತು. ಅದಕ್ಕಾಗಿ ಅವನು “ಆದಿಪುರಾಣ” ಎಂಬ ಕಾವ್ಯವನ್ನು ಬರೆದ. “ಆದಿಪುರಾಣ” ಜೈನರ ಮೊಟ್ಟಮೊದಲ ತೀರ್ಥಂಕರನಾದ ಆದಿದೇವ ಅಥವಾ ಪುರುದೇವನನ್ನು ಕುರಿತದ್ದು. ಜೈನರ ಪ್ರಕಾರ ಇಪ್ಪತ್ನಾಲ್ಕು ಜನ ತೀರ್ಥಂಕರರು. ತೀರ್ಥಂಕರರು ಎಂದರೆ ಮುಕ್ತಿಯನ್ನು ಪಡೆದು ಪವಿತ್ರರಾದವರು. ಅವರಲ್ಲಿ ಮೊದಲನೆಯ ತೀರ್ಥಂಕರ ಆದಿದೇವ ಅಥವಾ ಪುರುದೇವ. ಈ ಆದಿದೇವನ ಕತೆಯೇ “ಆದಿಪುರಾಣ”ದ ಕತೆ.

ಹೆಗ್ಗಳಿಕೆ

ಮನುಷ್ಯನ ಮನಸ್ಸು, ಈ ಲೋಕದ ಸುಖ-ಸಂಪತ್ತುಗಳನ್ನು ಬಿಟ್ಟು ವೈರಾಗ್ಯದ ಹಾದಿಯನ್ನು ಹಿಡಿದರೆ ಯಾವ ನಲುವಿಗೆ ಏರುವುದೆಂಬುದನ್ನು ಪಂಪ “ಆದಿಪುರಾಣ”ದಲ್ಲಿ ಚಿತ್ರಿಸಿದ್ದಾನೆ. ಆದಿದೇವ ಅನೇಕ ಜನ್ಮಗಳಲ್ಲಿ ತೊಳಲಿ, ಪಾಪಗಳನ್ನು ಕಳೆದುಕೊಂಡು, ತೊಳಲಿಕೊಂಡು, ಗುರುವಿನ ಉಪದೇಶದಿಂದ ಸಾಧನೆ ಮಾಡುತ್ತಾ, ಕಡೆಗೆ ತೀರ್ಥಂಕರನಾಗುತ್ತಾನೆ.

ಪುರುದೇವನ ಹತ್ತು ಜನ್ಮಗಳು

  • ಜಯವರ್ಮ
  • ಮಹಾಬಲ
  • ಲಲಿತಾಂಗ
  • ವಜ್ರಜಂಘ
  • ಆರ್ಯ
  • ಶ್ರೀಧರದೇವ
  • ಸುವಿಧಿ
  • ಅಚ್ಯುತೇಂದ್ರ
  • ವಜ್ರನಾಭಿ
  • ಅಹಮಿಂದ್ರ

ಉಲ್ಲೇಖ

Tags:

ಆದಿಪುರಾಣ ವಿವರಆದಿಪುರಾಣ ಪಂಪನಿಗೆ ಜಿನಧರ್ಮದ ಬಗ್ಗೆ ಇದ್ದ ಒತ್ತಾಸೆಆದಿಪುರಾಣ ಹೆಗ್ಗಳಿಕೆಆದಿಪುರಾಣ ಪುರುದೇವನ ಹತ್ತು ಜನ್ಮಗಳುಆದಿಪುರಾಣ ಉಲ್ಲೇಖಆದಿಪುರಾಣಜೈನ ಧರ್ಮತೀರ್ಥಂಕರಪಂಪವೃಷಭನಾಥ

🔥 Trending searches on Wiki ಕನ್ನಡ:

ಜಂತುಹುಳುಶ್ರೀಕೃಷ್ಣದೇವರಾಯಮೌಲ್ಯಕುಂಬಳಕಾಯಿಜನ್ನಮುದ್ದಣಬೆಂಗಳೂರುಮೈಸೂರು ದಸರಾಸೌರಮಂಡಲವಿಜಯ ಕರ್ನಾಟಕಮೂಲಧಾತುಗಳ ಪಟ್ಟಿಕೃಷ್ಣದೇವರಾಯಭಾರತದ ರಾಷ್ಟ್ರಪತಿಗಳ ಪಟ್ಟಿಬೇಲೂರುಕಬ್ಬುಮಾಟ - ಮಂತ್ರತಾಳಗುಂದ ಶಾಸನಕನ್ನಡ ಛಂದಸ್ಸುಜಾತ್ಯತೀತತೆಸೇಡಿಯಾಪು ಕೃಷ್ಣಭಟ್ಟಮಾನವ ಸಂಪನ್ಮೂಲ ನಿರ್ವಹಣೆಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕರ್ನಾಟಕ ಸ್ವಾತಂತ್ರ್ಯ ಚಳವಳಿಭಾರತದಲ್ಲಿನ ಜಾತಿ ಪದ್ದತಿಬೆಂಗಳೂರು ನಗರ ಜಿಲ್ಲೆಎಚ್ ಎಸ್ ಶಿವಪ್ರಕಾಶ್ಉಪ್ಪಿನ ಸತ್ಯಾಗ್ರಹಭಾರತದ ರಾಷ್ಟ್ರೀಯ ಉದ್ಯಾನಗಳುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಶ್ಯೆಕ್ಷಣಿಕ ತಂತ್ರಜ್ಞಾನತುಮಕೂರುಕಲ್ಯಾಣಿವೃದ್ಧಿ ಸಂಧಿಐಹೊಳೆಊಳಿಗಮಾನ ಪದ್ಧತಿಗದ್ಯಭಾರತದ ರಾಷ್ಟ್ರಗೀತೆಶಬ್ದಮಣಿದರ್ಪಣತತ್ಪುರುಷ ಸಮಾಸಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಬರಗೂರು ರಾಮಚಂದ್ರಪ್ಪಋಗ್ವೇದಬಂಡಾಯ ಸಾಹಿತ್ಯಪುರೂರವಸ್ಕನ್ನಡದಲ್ಲಿ ಸಣ್ಣ ಕಥೆಗಳುಚೆಲ್ಲಿದ ರಕ್ತಬುಡಕಟ್ಟುಭಕ್ತಿ ಚಳುವಳಿವಿಕ್ರಮಾರ್ಜುನ ವಿಜಯಬ್ರಾಹ್ಮಿ ಲಿಪಿರಾಷ್ಟ್ರೀಯ ಸೇವಾ ಯೋಜನೆಶಿಲೀಂಧ್ರಕೊಡಗುರಚಿತಾ ರಾಮ್ಹಾ.ಮಾ.ನಾಯಕಕಾಂತಾರ (ಚಲನಚಿತ್ರ)ಹೂವುಭ್ರಷ್ಟಾಚಾರಕರ್ನಾಟಕದ ಸಂಸ್ಕೃತಿನಾಕುತಂತಿವಾಲ್ಮೀಕಿಕರಗನಾಗವರ್ಮ-೧ಗೂಗಲ್ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುರಾಶಿಮನೆವಿರಾಟ್ ಕೊಹ್ಲಿಯುಗಾದಿಗುರುರಾಜ ಕರಜಗಿಹರಿಹರ (ಕವಿ)ಖ್ಯಾತ ಕರ್ನಾಟಕ ವೃತ್ತಬಲರಾಮಛತ್ರಪತಿ ಶಿವಾಜಿಸೆಸ್ (ಮೇಲ್ತೆರಿಗೆ)ಅಮ್ಮವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಸನ್ನತಿಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆ🡆 More