ಅಹಲ್ಯ ಬಲ್ಲಾಳ್

ಅಹಲ್ಯ ಬಲ್ಲಾಳ್, ಕನ್ನಡದ ರಂಗಭೂಮಿ ನಟಿ ಮತ್ತು ನಿರ್ದೇಶಕಿ.

ಮುಂಬಯಿ ನಗರದಲ್ಲಿ ಕನ್ನಡದ ಹಲವಾರು ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅಹಲ್ಯ, ಭರತನಾಟ್ಯ ಕಲಾವಿದೆ, ಲೇಖಕಿ ಮತ್ತು ಅನುವಾದಕಿಯೂ ಆಗಿದ್ದಾರೆ.

ಅಹಲ್ಯ ಬಲ್ಲಾಳ್
ಅಹಲ್ಯ ಬಲ್ಲಾಳ್
Born
ಅಹಲ್ಯ

(1963-12-01) ೧ ಡಿಸೆಂಬರ್ ೧೯೬೩ (ವಯಸ್ಸು ೬೦)
Alma materಮಂಗಳೂರು ವಿಶ್ವವಿದ್ಯಾಲಯ ಮತ್ತು ಮುಂಬಯಿ ವಿಶ್ವವಿದ್ಯಾಲಯ.
Occupation(s)ನಟಿ, ಕಂಠದಾನ ಕಲಾವಿದೆ, ಅನುವಾದಕಿ, ಭರತನಾಟ್ಯ ಕಲಾವಿದೆ, ಲೇಖಕಿ ಮತ್ತು ನಾಟಕ ನಿರ್ದೇಶಕಿ
Known forನಾಟಕ ನಿರ್ದೇಶನ, ಅಭಿನಯ
Parent(s)ಪಿ.ಎನ್.ವೆಂಕಟ್‍ರಾವ್
ಜಾನಕಿ

ಜನನ,ವಿದ್ಯಾಭ್ಯಾಸ, ಕುಟುಂಬ

ಅಹಲ್ಯ ಹುಟ್ಟಿದ್ದು ಡಿಸೆಂಬರ್ ೦೧, ೧೯೬೩ರಲ್ಲಿ[ಸಾಕ್ಷ್ಯಾಧಾರ ಬೇಕಾಗಿದೆ]. ತಂದೆ ಪಿ. ಎನ್. ವೆಂಕಟ್‍ರಾವ್, ತಾಯಿಯ ಹೆಸರು ಜಾನಕಿ. ಚಲನಚಿತ್ರ ನಿರ್ದೇಶಕರಾದ ರಾಮಚಂದ್ರ ಪಿ. ಎನ್. ಅಹಲ್ಯಾರ ತಮ್ಮ. ಉಡುಪಿ, ಕುಂದಾಪುರ, ಧಾರವಾಡ, ಬೆಂಗಳೂರು ಮತ್ತು ಮುಂಬಯಿ ಯಲ್ಲಿ ವಿದ್ಯಾಭ್ಯಾಸ ಮಾಡಿದ ಅಹಲ್ಯ, ವಿಜ್ಞಾನ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ.

ವಿವಾಹ

ಸಂತೋಷ ಬಲ್ಲಾಳರನ್ನು ಮದುವೆಯಾದ ಅಹಲ್ಯ ಅವರಿಗೆ ಇಬ್ಬರು ಗಂಡುಮಕ್ಕಳಿದ್ದಾರೆ.

ಭರತನಾಟ್ಯ ರಂಗಪ್ರವೇಶ

೧೯೮೮ರಲ್ಲಿ ಬೆಂಗಳೂರಿನ ’ಯವನಿಕಾ’ ಸಭಾಂಗಣದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದರು. ಕರ್ನಾಟಕ, ಮುಂಬಯಿ ಹಾಗೂ ಇತರೆ ನಗರಗಳಲ್ಲಿ ಹಲವಾರು ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ. ಅನೇಕ ನೃತ್ಯನಾಟಕಗಳಲ್ಲಿ ಭಾಗವಹಿಸಿದ್ದಾರೆ.

ನಾಟಕಗಳಲ್ಲಿ ಅಭಿನಯ

ಮುಂಬಯಿನ ಕನ್ನಡ ಕಲಾಕೇಂದ್ರ, ಮೈಸೂರ್ ಅಸೋಸಿಯೇಷನ್, ಮುಂಬಯಿ, ’ದೃಶ್ಯ’ ತಂಡ ಮತ್ತು ಮಾತುಂಗ ಕರ್ನಾಟಕ ಸಂಘದ ಕಲಾಭಾರತಿ ತಂಡಗಳ ಕನ್ನಡ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಅಭಿನಯಿಸಿದ ನಾಟಕಗಳು

[ಸಾಕ್ಷ್ಯಾಧಾರ ಬೇಕಾಗಿದೆ]

  • ಪದ್ಮಶ್ರೀ ದುಂಢೀರಾಜ್ (ನಿರ್ದೇಶನ: ಕಿಶೋರಿ ಬಲ್ಲಾಳ)
  • ಸಹ್ಯಾದ್ರಿಯ ಸ್ವಾಭಿಮಾನ (ರಚನೆ: ಆರ್.ಡಿ.ಕಾಮತ, ನಿ: ಶ್ರೀಪತಿ ಬಲ್ಲಾಳ)
  • ತರುಣ ದುರ್ದಂಡ ಮುದುಕ ಮಾರ್ತಾಂಡ (ಮರಾಠಿ ಮೂಲದ ಕನ್ನಡ ರೂಪಾಂತರ ಮತ್ತು ನಿರ್ದೇಶನ: ಶ್ರೀಪತಿ ಬಲ್ಲಾಳ)
  • ನಮ್ಮ ನಮ್ಮಲ್ಲಿ ( ಮರಾಠಿಯ ’ಚಾರ್ ಚೌಗಿಯ’ ನಾಟಕದ ರೂಪಾಂತರ ಮತ್ತು ನಿರ್ದೇಶನ: ಸಂತೋಷ ಬಲ್ಲಾಳ)
  • ಬಾಕಿ ಇತಿಹಾಸ (ಮೂಲ ಕೃತಿ:ಬಾದಲ್ ಸರ್ಕಾರ್, ನಿ: ರಮೇಶ್ ಶಿವಪುರ)
  • ಬೆಂದಕಾಳೂರು (ರಚನೆ ಮತ್ತು ನಿರ್ದೇಶನ: ಡಾ.ಬಿ.ಆರ್.ಮಂಜುನಾಥ್)
  • ಪುಷ್ಪರಾಣಿ (ರಚನೆ: ಚಂದ್ರಶೇಖರ ಕಂಬಾರ, ನಿ: ಜಯಲಕ್ಷ್ಮೀ ಪಾಟೀಲ್)
  • ಮಂಥರಾ (ರಚನೆ: ಡಾ.ಹೆಚ್.ಎಸ್.ವೆಂಕಟೇಶಮೂರ್ತಿ, ನಿ: ಜಯಲಕ್ಷ್ಮೀ ಪಾಟೀಲ್)
  • ಎಲ್ಲಮ್ಮ (ಮೂಲ ನಾಟಕ: ಲೋರ್ಕಾ, ರೂಪಾಂತರ ಮತ್ತು ನಿರ್ದೇಶನ: ಬಿ. ಬಾಲಚಂದ್ರ ರಾವ್)
  • ಅಂಬೆ (ಕನ್ನಡಕ್ಕೆ: ಸರಜೂ ಕಾಟ್ಕರ್, ನಿರ್ದೇಶನ:ಭರತ್ ಕುಮಾರ್ ಪೊಲಿಪು)
  • ಅಂಬೆ [ತುಳು] (ನಿ: ಭರತ್ ಕುಮಾರ್ ಪೊಲಿಪು)
  • ಕುವೆಂಪು ಕಂಡ ಮಂಥರೆ (ಮೂಲ : ಕುವೆಂಪು, ರಂಗರೂಪ ಮತ್ತು ನಿರ್ದೇಶನ ಸಾ ದಯಾ[ದಯಾನಂದ ಸಾಲ್ಯಾನ])
  • ಮಾಯಾವಿ ಸರೋವರ.
  • ಚೌಕಟ್ಟಿನಾಚೆಯ ಚಿತ್ರಗಳು.

ನಿರ್ದೇಶಿಸಿದ ನಾಟಕಗಳು

[ಸಾಕ್ಷ್ಯಾಧಾರ ಬೇಕಾಗಿದೆ]

  • ನಕ್ಕಳಾ ರಾಜಕುಮಾರಿ (ರಚನೆ: ಪಾಷಾ)
  • ಗುಮ್ಮ (ರಚನೆ: ಎ.ಎಸ್. ಮೂರ್ತಿ)
  • ಸೂರ್ಯ ಬಂದ (ರಚನೆ: ವೈದೇಹಿ)
  • ಯಾರು ಶ್ರೇಷ್ಠರು (ಇಂಗ್ಲೀಷ್ ಮೂಲದ ನಾಟಕ, ಕನ್ನಡ ರೂಪಾಂತರ: ಅಹಲ್ಯ ಬಲ್ಲಾಳ್)
  • ಹಕ್ಕಿ ಹಾಡು (ರಚನೆ: ವೈದೇಹಿ)

ಕೈಲಾಸಂ ಸ್ಮರಣೆಯ ದಿನದಂದು ನಾಟಕ ಪ್ರದರ್ಶನ

ಮೈಸೂರು ಅಸೋಸಿಯೇಷನ್, ಮುಂಬಯಿನಲ್ಲಿ ಏಕ-ವ್ಯಕ್ತಿ ಪ್ರಧಾನವಾದ ನಾಟಕ "ಅವಳ ಕಾಗದ" ವನ್ನು ಅಹಲ್ಯಾ ಬಲ್ಲಾಳ್ ರವರಿಂದ ೨೮,ಆಗಸ್ಟ್, ೨೦೨೨ ರಂದು ಪ್ರದರ್ಶಿಸಲಾಯಿತು. ಈ ಕಿರು-ಬೆಂಗಾಲಿ ನಾಟಕ,'ಸ್ತ್ರೀರ್ ಪತ್ರ'ದ ಕನ್ನಡ ರೂಪಾಂತರವೇ 'ಅವಳ ಕಾಗದ'.

ಪ್ರಶಸ್ತಿ ಹಾಗೂ ಪುರಸ್ಕಾರಗಳು

  • ಮಾಟುಂಗಾ ಕರ್ನಾಟಕ ಸಂಘ ಮುಂಬಯಿ ಆಯೋಜಿಸುವ ೨೦೦೪ರ ಸಾಲಿನ ಅಖಿಲ ಭಾರತ ಕುವೆಂಪು ನಾಟಕ ಸ್ಪರ್ಧೆ”ಯಲ್ಲಿ ಶ್ರೇಷ್ಠ ಅಭಿನಯಕ್ಕಾಗಿ ‘ಅತ್ಯುತ್ತಮ ನಟಿ ಪ್ರಥಮ ಪ್ರಶಸ್ತಿ’(ನಾಟಕ: ಪುಷ್ಪರಾಣಿ, ಮಹಾರಾಣಿ ಪಾತ್ರ).
  • 'ಮಂಥರಾ' ನಾಟಕದ ಮಂಥರೆ ಪಾತ್ರಕ್ಕೆ ‘ಭಾರತಿ ಕೊಡ್ಲೀಕೆರೆ ಸ್ಮಾರಕ’ ಪ್ರಶಸ್ತಿ [ಸಾಕ್ಷ್ಯಾಧಾರ ಬೇಕಾಗಿದೆ]
  • ನಾಟಕ: ಎಲ್ಲಮ್ಮ, ಅತ್ಯುತ್ತಮ ನಟಿ ಪ್ರಥಮ ಪ್ರಶಸ್ತಿ, [ಸಾಕ್ಷ್ಯಾಧಾರ ಬೇಕಾಗಿದೆ]
  • ಉಡುಪಿಯ ತುಳು ಕೂಟ ಏರ್ಪಡಿಸಿದ ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆಯಲ್ಲಿ ’ಅತ್ಯುತ್ತಮ ನಟಿ ಪ್ರಥಮ’ (ನಾಟಕ: ಅಂಬೆ, ಅಂಬೆ ಪಾತ್ರಕ್ಕಾಗಿ)ಪ್ರಶಸ್ತಿ [ಸಾಕ್ಷ್ಯಾಧಾರ ಬೇಕಾಗಿದೆ]
  • `ಕುವೆಂಪು ಕಂಡ ಮಂಥರೆ'ನಾಟಕದಲ್ಲಿನ ಮಂಥರೆ ಪಾತ್ರಕ್ಕಾಗಿ, ಮಾಟುಂಗಾ ಕರ್ನಾಟಕ ಸಂಘ ಮುಂಬಯಿ ಆಯೋಜಿಸುವ ೨೦೧೨ರ ಸಾಲಿನ ಅಖಿಲ ಭಾರತ ಕುವೆಂಪು ನಾಟಕ ಸ್ಪರ್ಧೆ”ಯಲ್ಲಿ ಅತ್ಯುತ್ತಮ ನಟಿ, ಗೌರವ [ಸಾಕ್ಷ್ಯಾಧಾರ ಬೇಕಾಗಿದೆ]
  • ಭಾರತಿ ಕೊಡ್ಲೇಕರ್ ಪ್ರಶಸ್ತಿ [ಸಾಕ್ಷ್ಯಾಧಾರ ಬೇಕಾಗಿದೆ]
  • 'ಅಖಿಲ ಭಾರತ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ತೀರ್ಪುಗಾರ'ರಾಗುವ ಗೌರವ ಸಂದಿದೆ [ಸಾಕ್ಷ್ಯಾಧಾರ ಬೇಕಾಗಿದೆ]

ಚಿತ್ರಗಳು

|

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

  1. ಅವಧಿ,ಕ್ವಿಜ಼್ :'ಬಂತು ಸರಿ ಉತ್ತರ, ಕನ್ಗ್ರಾಟ್ಸ್, ಅಹಲ್ಯ ಬಲ್ಲಾಳ್',ಮಾರ್ಚ್,೨೨,೨೦೧೦

Tags:

ಅಹಲ್ಯ ಬಲ್ಲಾಳ್ ಜನನ,ವಿದ್ಯಾಭ್ಯಾಸ, ಕುಟುಂಬಅಹಲ್ಯ ಬಲ್ಲಾಳ್ ಭರತನಾಟ್ಯ ರಂಗಪ್ರವೇಶಅಹಲ್ಯ ಬಲ್ಲಾಳ್ ನಾಟಕಗಳಲ್ಲಿ ಅಭಿನಯಅಹಲ್ಯ ಬಲ್ಲಾಳ್ ನಿರ್ದೇಶಿಸಿದ ನಾಟಕಗಳುಅಹಲ್ಯ ಬಲ್ಲಾಳ್ ಕೈಲಾಸಂ ಸ್ಮರಣೆಯ ದಿನದಂದು ನಾಟಕ ಪ್ರದರ್ಶನಅಹಲ್ಯ ಬಲ್ಲಾಳ್ ಪ್ರಶಸ್ತಿ ಹಾಗೂ ಪುರಸ್ಕಾರಗಳುಅಹಲ್ಯ ಬಲ್ಲಾಳ್ ಚಿತ್ರಗಳುಅಹಲ್ಯ ಬಲ್ಲಾಳ್ ಉಲ್ಲೇಖಗಳುಅಹಲ್ಯ ಬಲ್ಲಾಳ್ ಬಾಹ್ಯ ಸಂಪರ್ಕಗಳುಅಹಲ್ಯ ಬಲ್ಲಾಳ್ಮುಂಬಯಿ

🔥 Trending searches on Wiki ಕನ್ನಡ:

ಹೀಮೊಫಿಲಿಯಮೈಸೂರು ರಾಜ್ಯಯೋಗಮಂಗಳೂರುಬ್ಯಾಂಕ್ಫೇಸ್‌ಬುಕ್‌ಗುರುಮೂತ್ರಪಿಂಡವಿಕ್ರಮಾರ್ಜುನ ವಿಜಯಪ್ರಬಂಧಕರಡಿಎ.ಎನ್.ಮೂರ್ತಿರಾವ್ದಿಕ್ಕುಇಸ್ಲಾಂ ಧರ್ಮಕಂಪ್ಯೂಟರ್ವಿಶ್ವ ವ್ಯಾಪಾರ ಸಂಸ್ಥೆನವೋದಯಜಾತ್ಯತೀತತೆರವೀಂದ್ರನಾಥ ಠಾಗೋರ್ರಾಜಕುಮಾರ (ಚಲನಚಿತ್ರ)ಬಾಲಕೃಷ್ಣಭಾರತದಲ್ಲಿನ ಚುನಾವಣೆಗಳುಮೂಲಭೂತ ಕರ್ತವ್ಯಗಳುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಭಾಷಾ ವಿಜ್ಞಾನಅಮ್ಮಕರ್ನಾಟಕ ಲೋಕಸೇವಾ ಆಯೋಗರಾಘವಾಂಕಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಟಿ.ಪಿ.ಕೈಲಾಸಂಚಾಣಕ್ಯಚನ್ನವೀರ ಕಣವಿದಶಾವತಾರಅಮೇರಿಕ ಸಂಯುಕ್ತ ಸಂಸ್ಥಾನಮಂಡ್ಯಅಶ್ವತ್ಥಮರಶ್ರೀನಾಥ್ಗೋಕರ್ಣಅಲ್ಲಮ ಪ್ರಭುಜಾಗತಿಕ ತಾಪಮಾನಆದೇಶ ಸಂಧಿಈರುಳ್ಳಿಸೂರ್ಯ ವಂಶಅಮಿತ್ ತಿವಾರಿ (ಏರ್ ಮಾರ್ಷಲ್)ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಖೊಖೊಭಾರತೀಯ ಭೂಸೇನೆಗೋಲ ಗುಮ್ಮಟರಾಹುಭಾರತದಲ್ಲಿ ಮೀಸಲಾತಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಚೆನ್ನಕೇಶವ ದೇವಾಲಯ, ಬೇಲೂರುಮಾರುಕಟ್ಟೆನಿರುದ್ಯೋಗಮಹಾಭಾರತರಾಜ್‌ಕುಮಾರ್ನಂಜುಂಡೇಶ್ವರ ದೇವಸ್ಥಾನ, ನಂಜನಗೂಡುನೀನಾದೆ ನಾ (ಕನ್ನಡ ಧಾರಾವಾಹಿ)ಹಿಂದೂ ಧರ್ಮಪಂಚಾಂಗಅಕ್ಷಾಂಶ ಮತ್ತು ರೇಖಾಂಶಕರಗಸೀಮೆ ಹುಣಸೆಸಂಯುಕ್ತ ರಾಷ್ಟ್ರ ಸಂಸ್ಥೆಸೂರ್ಯ (ದೇವ)ಎಂ. ಎಂ. ಕಲಬುರ್ಗಿರಕ್ತದೊತ್ತಡರಾಜಸ್ಥಾನ್ ರಾಯಲ್ಸ್ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಭಾರತೀಯ ಧರ್ಮಗಳುಮಾನವ ಸಂಪನ್ಮೂಲ ನಿರ್ವಹಣೆವ್ಯಂಜನವಿಜಯನಗರ ಸಾಮ್ರಾಜ್ಯಅಜಂತಾಕೆ. ಎಸ್. ನಿಸಾರ್ ಅಹಮದ್ಹರ್ಡೇಕರ ಮಂಜಪ್ಪಮದುವೆ🡆 More