ಅರಾಜಕತಾವಾದ

ಅರಾಜಕತಾವಾದ ವು ರಾಜಕೀಯ ಸಿದ್ಧಾಂತವಾಗಿದ್ದು, ಅದು ರಾಜ್ಯವು ಅನಪೇಕ್ಷಣಿಯ, ಅನಾವಶ್ಯಕ, ಮತ್ತು ಅಪಾಯಕಾರಿ ಎಂದು ಪರಿಗಣಿಸಿ ಇದಕ್ಕೆ ಬದಲಾಗಿ ಅಧಿಕಾರ ರಹಿತ ಸಮಾಜ, ಅಥವಾ ಅರಾಜಕತೆಯನ್ನು ಪ್ರೋತ್ಸಾಹಿಸುತ್ತದೆ.

ಮಾನವರ ನಡುವಿನ ಒಬ್ಬರ ಮೇಲೊಬ್ಬರು ಅಧಿಕಾರ ಸಾಧಿಸುವಂತಹ ಸಂಬಂಧವನ್ನು ಕಡಿಮೆ ಮಾಡುತ್ತದೆ ಅಥವಾ ಅಂತಹ ಸಾಧ್ಯತೆಯನ್ನು ತೆಗೆಯುವ ಮಾರ್ಗವನ್ನು ಅರಸುತ್ತದೆ. ಅರಾಜಕತಾವಾದದಲ್ಲಿ ಅವಶ್ಯವಿರುವ ಹೆಚ್ಚುವರಿ ಮಾನದಂಡವೆನಿದೆಯೋ ಅದನ್ನು ಅರಾಜಕತಾವಾದಿಗಳು ಒಪ್ಪುವುದಿಲ್ಲ. ದಿ ಆಕ್ಸ್‌ಫರ್ಡ್ ಕಂಪ್ಯಾನಿಯನ್ ಟು ಫಿಲಾಸಫಿ ಹೇಳುತ್ತದೆ, "ಎಲ್ಲಾ ಅರಾಜಕತಾವಾದಿಗಳಿಗೂ ಅನ್ವಯಿಸುವ ಯಾವುದೇ ಒಂದು ವ್ಯಾಖ್ಯಾನವಿಲ್ಲ, ಮತ್ತು ಯಾರನ್ನು ಉತ್ತಮ ಅರಾಜಕತಾವಾದಿಗಳು ಎಂದು ಪರಿಗಣಿಸಲಾಗುತ್ತದೆಯೊ ಅವರು ಕೆಲವು ಕೌಟುಂಬಿಕ ಎನ್ನುವ ಹೋಲಿಕೆಯನ್ನು ಹೊಂದಿರುತ್ತಾರೆ." ಅರಾಜಕತಾವಾದವು ಹಲವಾರು ಪ್ರಕಾರದಲ್ಲಿದೆ ಮತ್ತು ಸಂಪ್ರದಾಯಗಳನ್ನು ಹೊಂದಿದೆ, ಇವುಗಳಲ್ಲಿ ಕೆಲವು ವಿರೋಧಾಭಾಸವಾಗಿವೆ. ಸಾಮಾಜಿಕ ಮತ್ತು ವ್ಯಕ್ತಿವಾದಿ ಅರಾಜಕತೆ ಅಥವಾ ಎರಡಕ್ಕೂ ಅನ್ವಯವಾಗುವ ರೀತಿಯ ಗುಣ ಲಕ್ಷಣದ ಆಧಾರದ ಮೇಲೆ ಅರಾಜಕತೆಯನ್ನು ವಿಭಾಗಿಸಲಾಗುತ್ತದೆ. ಅರಾಜಕತೆಯನ್ನು ಕೆಲವೊಮ್ಮೆ ಎಡ ಪಂಥೀಯ ಧೋರಣೆಯಿಂದ ಬಂದದ್ದೆಂದು ಪರಿಗಣಿಸಲಾಗುತ್ತದೆ, ಮತ್ತು ಹೆಚ್ಚಿನ ಅರಾಜಕತಾವಾದಿ ಆರ್ಥಿಕತೆ ಮತ್ತು ಅರಾಜಕತಾವಾದಿ ಕಾನೂನುಬದ್ಧ ಸಿದ್ಧಾಂತವು ಸಮತಾವಾದ, ಸಮುದಾಯವಾದ, ಸಿಂಡಿಕಾಲಿಸಂ ಅಥವಾ ಪಾಲ್ಗೊಳ್ಳುವಿಕೆ ಆರ್ಥಿಕತೆ ಮುಂತಾದವುಗಳ ರಾಜ್ಯತ್ವ ವಿರೋಧಿ ವ್ಯಾಖ್ಯೆಗಳು ಪ್ರತಿಬಿಂಬಿಸುತ್ತವೆ. ಆದರೂ, ಅರಾಜಕತೆಯು ಯಾವಾಗಲೂ ವ್ಯಕ್ತಿವಾದಿ ಧೋರಣೆಯನ್ನು ಹೊಂದಿದೆ. ಅದು ಮಾರುಕಟ್ಟೆ ಆರ್ಥಿಕತೆ ಮತ್ತು ಖಾಸಗಿ ಆಸ್ತಿ, ಅಥವಾ ನೈತಿಕವಾಗಿ ವಿರೋಧಿಸದ ಅಹಂಭಾವವನ್ನು ಬೆಂಬಲಿಸುತ್ತದೆ. ಕೆಲವು ವ್ಯಕ್ತಿವಾದಿ ಅರಾಜಕತಾವಾದಿಗಳು ಸಮಾಜವಾದಿಗಳು ಕೂಡಾ ಆಗಿದ್ದಾರೆ. ಮೂಲಭೂತವಾಗಿ ಬೇರೆಯಾಗಿದ್ದರೂ, ಕೆಲವು ಅರಾಜಕತಾವಾದಿ ಚಿಂತನಾ ಪರಂಪರೆಗಳು ತೀವ್ರ ವ್ಯಕ್ತಿವಾದದಿಂದ ಹಿಡಿದು ಸಂಪೂರ್ಣ ಸಮುದಾಯವಾದದವರೆಗೆ ಎಲ್ಲವನ್ನೂ ಬೆಂಬಲಿಸುತ್ತವೆ. ಅರಾಜಕತಾವಾದಿ ಚರಿತ್ರಕಾರ ಡೇನಿಯಲ್ ಗೆರಿನ್ ಕೊನೆಯಲ್ಲಿ ಹೇಳುತ್ತಾರೆ "ಕೆಲವು ಅರಾಜಕತಾವಾದಿಗಳಲ್ಲಿ ಸಾಮಾಜಿಕತೆಗಿಂತ ವ್ಯಕ್ತಿವಾದಿತ್ವ ಹೆಚ್ಚು, ಇನ್ನೂ ಕೆಲವರಲ್ಲಿ ವ್ಯಕ್ತಿವಾದಿತ್ವಗಿಂತ ಸಾಮಾಜಿಕತೆ ಹೆಚ್ಚು. ಹೀಗಿದ್ದರೂ, ವ್ಯಕ್ತಿವಾದಿ ಅಲ್ಲದ ಸ್ವಾತಂತ್ರ್ಯವಾದಿಯ ಕಲ್ಪನೆ ಮಾಡಿಕೊಳ್ಳುವುದು ಸಾಧ್ಯವಿಲ್ಲ." ಗುಣವಾಚಕವಿಲ್ಲದ ಅರಾಜಕತೆ ಎಂದು ಇದು ಪ್ರಸಿದ್ಧವಾಗಿದ್ದು, ಇದು "ಅರಾಜಕತಾವಾದಿ" ಎಂದುಕೊಳ್ಳುವ "ಇತರ ಚಿಂತನೆಗಳ ಹಕ್ಕನ್ನು ಗುರುತಿಸುವುದರಲ್ಲಿದೆ. ಆದರೆ, ಸ್ಪಷ್ಟವಾಗಿ ಹೇಳುವುದಾದರೆ, ನಿರ್ಧಿಷ್ಟ ಪ್ರಕಾರದ ಅರಾಜಕತಾವಾದಿ ಸಿದ್ಧಾಂತವನ್ನು ಆಯ್ಕೆಮಾಡಿಕೊಳ್ಳುವುದರಲ್ಲಿ ಅವರದೇ ಆದ ಆಯ್ಕೆಗಳನ್ನು ಹೊಂದಿರುವುದಕ್ಕೆ ಮತ್ತು ಇತರವು ಯಾಕೆ ತಿರಸ್ಕರಿಸಲ್ಪಟ್ಟವು ಎಂಬುದಕ್ಕೆ ತಮ್ಮದೇ ಆದ ವಾದಗಳನ್ನು ಹೊಂದಿದ್ದಾರೆ." ಅರಾಜಕತೆ ಧೋರಣೆಯ ತಿರುಳೇನೆಂದರೆ ಮೊದಲಿಗೆ ವ್ಯಕ್ತಿವಾದಿ ಅರಾಜಕತೆಯು ಸಿದ್ಧಾಂತೀಯ ಅಥವಾ ಸಾಹಿತ್ಯಕ ಸಂಗತಿಯ ಜೊತೆಗೆ ಅನಾರ್ಕೊ-ಕಮ್ಯುನಿಸಂ ಮತ್ತು ಅನಾರ್ಕೊ-ಸಿಂಡಿಕಾಲಿಸಂನಿಂದ ಸಾಮೂಹಿಕ ಸಾಮಾಜಿಕ ಆಂದೋಲನವನ್ನು ಪ್ರತಿನಿಧಿಸುತ್ತದೆ. ಕೆಲವು ಅರಾಜಕತಾವಾದಿಗಳು ಮೂಲಭೂತವಾದ ಎಲ್ಲಾ ವಿಧವಾದ ಆಕ್ರಮಣವನ್ನು ವಿರೋಧಿಸುತ್ತಾರೆ,ಆತ್ಮ-ರಕ್ಷಣೆ ಅಥವಾ ಅಹಿಂಸಾ (ಶಾಂತಧೋರಣೆಯ ಅರಾಜಕತೆ)ಯನ್ನು ಬೆಂಬಲಿಸುತ್ತಾರೆ, ಇದೇ ಸಮಯದಲ್ಲಿ ಹಿಂಸಾ ಕ್ರಾಂತಿ ಮತ್ತು ಕೆಲಸ ನಡೆಸಲು ಪ್ರಚಾರ, ಅರಾಜಕತಾವಾದಿ ಸಮಾಜದ ಮಾರ್ಗ ಒಳಗೊಂಡಂತೆ ಕೆಲವರು ದಬ್ಬಾಳಿಕೆಯ ಕ್ರಮಗಳನ್ನು ಬಳಸಲು ಬೆಂಬಲಿಸುತ್ತಾರೆ.

ವ್ಯುತ್ಪತ್ತಿ ಮತ್ತು ಪರಿಭಾಷೆ

ಅರಾಜಕತೆ ಎಂಬ ಶಬ್ಧವು ಗ್ರೀಕ್‌ನ ἄναρχος, ಅನಾರ್ಚೋಸ್ , ಇದರರ್ಥ "ಆಳುವವನು ಇಲ್ಲದೆ", ಉಪಸರ್ಗ ἀν- (an- , "ಇಲ್ಲದೆ") + ἀρχή (archê , "ಅಧಿಪತ್ಯ, ರಾಜ್ಯ, ನ್ಯಾಯಾಂಗ") + -ισμός (-ismos , ಪ್ರತ್ಯಯದಿಂದ -ιζειν, -izein "-izing") ಬಂದಿದೆ. ಅರಾಜಕತೆ ಕುರಿತು ಬರೆಯುವಾಗ "ಮಾನವನಿಗೆ ಸಂಕಲ್ಪ ಸ್ವಾತಂತ್ರ್ಯವಿದೆಯೆಂಬ ಸಿದ್ದಾಂತ" ಮತ್ತು "ಇಚ್ಛಾ ಸ್ವಾತಂತ್ರ್ಯವಾದಿ" ಶಬ್ಧದ ಬಳಕೆಯಲ್ಲಿ ಅಸ್ಪಷ್ಟತೆ ಇದೆ. ಫ್ರಾನ್ಸ್‌ನಲ್ಲಿ ೧೮೯೦ರಿಂದ "ಮಾನವನಿಗೆ ಸಂಕಲ್ಪ ಸ್ವಾತಂತ್ರ್ಯವಿದೆಯೆಂಬ ಸಿದ್ದಾಂತ" ಎಂಬ ಶಬ್ಧವನ್ನು ಅರಾಜಕತೆಗೆ ಪರ್ಯಾಯವಾಗಿ ಬಳಸಲಾಗುತ್ತಿತ್ತು, ಮತ್ತು ಈ ಅರ್ಥದಲ್ಲಿ ೧೯೫೦ರ ವರೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮಾತ್ರ ಪ್ರತ್ಯೇಕವಾಗಿ ಬಳಸಲಾಗುತ್ತಿತ್ತು,ಈಗಲೂ ಅಮೆರಿಕಾ ಸಂಯುಕ್ತ ಸಂಸ್ಥಾನದ ಹೊರಗೆ ಬಳಸಲಾಗುತ್ತಿದೆ. ಈ ಪ್ರಕಾರ "ವ್ಯಕ್ತಿವಾದಿ ಮಾನವನಿಗೆ ಸಂಕಲ್ಪ ಸ್ವಾತಂತ್ರ್ಯವಿದೆಯೆಂಬ ಸಿದ್ದಾಂತ"(ವ್ಯಕ್ತಿವಾದಿ ಅರಾಜಕತೆ)ದಿಂದ ಬೇರ್ಪಡಿಸಲು, ಕೆಲವೊಮ್ಮೆ ಸಮಾಜವಾದಿ ಅರಾಜಕತೆಗೆ ಪರ್ಯಾಯ ಪದವಾಗಿ "ಇಚ್ಛಾ ಸ್ವಾತಂತ್ರ್ಯವಾದಿ ಸಮಾಜವಾದ" ಬಳಸಲಾಗುತ್ತದೆ. ಇನ್ನೊಂದು ರೀತಿಯಾಗಿ, "ಇಚ್ಛಾ ಸ್ವಾತಂತ್ರ್ಯವಾದಿ"ಯನ್ನು ಕೇವಲ ಮುಕ್ತ ಮಾರುಕಟ್ಟೆ ಸಿದ್ಧಾಂತವಾಗಿ ಅನ್ವಯಿಸಲಾಗುತ್ತದೆ, ಮುಕ್ತ ಮಾರುಕಟ್ಟೆ ಅರಾಜಕತೆಯು "ಇಚ್ಛಾ ಸ್ವಾತಂತ್ರ್ಯವಾದಿ ಅರಾಜಕತೆ"ಗೆ ಅನ್ವಯಿಸಲಾಗುತ್ತದೆ.

ಮೂಲಗಳು

ಅರಾಜಕತಾವಾದ 
ವಿಲಿಯಂ ಗಾಡ್ವಿನ್, "ಅರಾಜಕತಾವಾದದ ರಾಜಕೀಯ ಹಾಗೂ ಆರ್ಥಿಕ ಕಲ್ಪನೆಗಳನ್ನು ಸೂತ್ರೀಕರಿಸಿದ ಮೊದಲಿಗ, ಅದಾಗ್ಯೂ ಈ ಯೋಜನೆಗಳನ್ನು ಅಭಿವೃದ್ಧಿಸಿದ ತನ್ನ ಕೆಲಸಕ್ಕೆ ಆ ಹೆಸರನ್ನು ಅವನು ಕೊಟ್ಟಿರಲಿಲ್ಲ",

ತಾವೊಯಿಸಂನ ಮಹಾಜ್ಞಾನಿಗಳಾದ ಲಾವೋತ್ಸೆ ಮತ್ತು ಚಾಂಗ್‌ತ್ಸು ಕೃತಿಗಳಲ್ಲಿ ಅರಾಜಕತಾವಾದಿ ವಿಷಯಗಳನ್ನು ಮಂಡಿಸಿದ್ದಾರೆ. ಚಾಂಗ್‌ತ್ಸು ಕೃತಿಯನ್ನು ಹೀಗೆ ಅನುವಾದಿಸಲಾಗಿದೆ: "ಮಾನವಕುಲ ತಮ್ಮಷ್ಟಕ್ಕೇ ತಾವು ಯಾವತ್ತೂ ಜೀವಿಸುತ್ತಿದೆ; ಯಾವತ್ತೂ [ಯಶಸ್ವಿಯಾಗಿ] ಯಾವುದೇ ಶಕ್ತಿಯು ಮನುಕುಲವನ್ನು ಆಳ್ವಿಕೆ ನಡೆಸಲಿಲ್ಲ " ಮತ್ತು "ಒಬ್ಬ ಸಾಮಾನ್ಯ ಕಳ್ಳನನ್ನು ಸೆರೆಯಲ್ಲಿಡುತ್ತಾರೆ. ಆದರೆ ಒಬ್ಬ ದೊಡ್ಡ ಡಕಾಯಿತ ರಾಷ್ಟ್ರವನ್ನು ಆಳುತ್ತಾನೆ." ಸಿನೋಪ್‌ನ ಡಯಾಜೊನಸ್ ಮತ್ತು ಸಿನಿಕರ ಸಮಕಾಲೀನರಾದ ಸ್ಟೋಯಿಸಿಜಂನ ಸ್ಥಾಪಕರಾದ ಸಿಟಿಯಂನ ಜೆನೊ ಕೂಡ ಇದೇ ವಿಷಯವನ್ನು ಹೋಲುವ ಸಂಗತಿಗಳನ್ನು ಪರಿಚಯಿಸಿದ್ದ. ೧೬೪೨ರಲ್ಲಿನ ಇಂಗ್ಲೀಷ್ ಅಂತರ್ಯುದ್ಧದ ಸಮಯದಲ್ಲಿ ಮೊದಲ ಬಾರಿಗೆ "ಅರಾಜಕತಾವಾದಿ" ಶಬ್ಧವು ಇಂಗ್ಲೀಷ್ ಭಾಷೆಗೆ ಪ್ರವೇಶಿಸಿತು, ರಾಯಲಿಸ್ಟ್‌ಗಳು ತಮಗೆ ವಿರುದ್ಧವಾಗಿದ್ದ ರೌಂಡ್‌ಹೆಡ್‌ಗಳನ್ನು ಬೈಯ್ಯಲು ಇದನ್ನು ಬಳಸುತ್ತಿದ್ದರು. "ಕ್ರಾಂತಿಕಾರಕ ಸರ್ಕಾರ"ವನ್ನು ವಿರೋಧಾಭಾಸವಾಗಿ ನೋಡುತ್ತಾ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಎನ್‌ರೇಜಸ್‌ ಗಳು ಜಾಕೊಬಿಯನ್ ಕೇಂದ್ರೀಕೃತ ಅಧಿಕಾರಕ್ಕೆ ವಿರೋಧವಾಗಿ ಈ ಶಬ್ಧವನ್ನು ಸಕಾರಾತ್ಮಕವಾಗಿ ಬಳಸಲು ಪ್ರಾರಂಭಿಸಿದ್ದರು. ಹತ್ತೊಂಬತ್ತನೆಯ ಶತಮಾನದಲ್ಲಿ "ಅರಾಜಕತೆ" ಎಂಬ ಇಂಗ್ಲೀಷ್ ಶಬ್ಧವು ತನ್ನ ಮೊದಲಿನ ನಕಾರಾತ್ಮಕ ಅರ್ಥವನ್ನು ಕಳೆದುಕೊಂಡಿತು. ನಿರ್ದಿಷ್ಟವಾಗಿ ಸ್ವಾತಂತ್ರ್ಯದ ನೈತಿಕ ಕೇಂದ್ರಿಕರಣಕ್ಕೆ ಜೀನ್ ಜಾಕ್ವೇಸ್ ರೂಸೋ ಮಾಡಿದ ವಾದದಿಂದ ಆಧುನಿಕ ಅರಾಜಕತೆಯು ಜಾತ್ಯಾತೀತ ಅಥವಾ ಧಾರ್ಮಿಕ ವಿಚಾರಧಾರೆಯ ತಿಳುವಳಿಕೆಯಿಂದ ಹೊರಹೊಮ್ಮಿತು. ವಿಲಿಯಂ ಗಾಡ್ವಿನ್ ಯಾವ ವಿಷಯವನ್ನು ಬೆಳೆಸಿದನೊ ಅದನ್ನು ಆಧುನಿಕ ಅರಾಜಕತಾವಾದಿ ವಿಚಾರದ ಮೊದಲ ಅಭಿವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಪೀಟರ್ ಕ್ರೊಪೊಟ್ಕಿನ್‌ರ ಪ್ರಕಾರ ಗಾಡ್ವಿನ್ ಮೊದಲ ಬಾರಿಗೆ ಅರಾಜಕತೆ ಕಲ್ಪನೆಯ ರಾಜಕೀಯ ಮತ್ತು ಆರ್ಥಿಕತೆಯನ್ನು ಪ್ರತಿಪಾದಿಸಿದನು, ಆದರೆ ಇತನ ಕೃತಿಯಲ್ಲಿ ಈ ಹೆಸರನ್ನು ಬಳಸಲಿಲ್ಲ, ಗಾಡ್ವಿನ್ ತನ್ನ ಅರಾಜಕತಾವಾದಿ ವಿಚಾರವನ್ನು ಎಡ್ಮಂಡ್ ಬುರ್ಕ್ ಜೊತೆಗೆ ಸೇರಿಸಿದನು. ರಾಜ್ಯರಹಿತ ಮತ್ತು ಸ್ವಯಂಪ್ರೇರಿತ ಸಮುದಾಯದಲ್ಲಿ ಎಲ್ಲಾ ವಸ್ತಗಳು ಮತ್ತು ಸೇವೆಗಳು ಖಾಸಗಿಯಾಗಿರುತ್ತವೆ ಎಂದೂ ಇದರ ಜೊತೆಗೆ ಈಗ "ಅರಾಜಕತೆ" ಎಂದು ಕರೆಯಲಾಗುವ ಸಿದ್ಧಾಂತವನ್ನು ಪ್ರತಿಪಾದಿಸಿದ ಮೊದಲಿಗ ಎಂಬ ಕೀರ್ತಿಯು ಬೆಂಜಮಿನ್ ಟಕರ್ ಬದಲಿಗೆ ಅಮೆರಿಕಾದ ಜೊಸಿಯಾಹ್ ವಾರೆನ್‌‌ಗೆ ಸಲ್ಲುತ್ತದೆ. ಫ್ರೆಂಚ್ ತತ್ವಜ್ಞಾನಿ ಮತ್ತು ರಾಜಕಾರಣಿ ಪಿಯರ್-ಜೋಸೆಫ್ ಪ್ರೊಡೊನ್ ತನ್ನನ್ನು ಮೊದಲ ಅರಾಜಕತಾವಾದಿ ಎಂದು ಹೇಳಿಕೊಳ್ಳುತ್ತಾನೆ, ಕೆಲವರು ಈತನನ್ನು ಆಧುನಿಕ ಅರಾಜಕತಾವಾದಿ ಸಿದ್ಧಾಂತದ ಸ್ಥಾಪಕ ಎಂದು ಕರೆಯುತ್ತಾರೆ.

ಸಾಮಾಜಿಕ ಆಂದೋಲನ

ಅರಾಜಕತೆಯು ಸಾಮಾಜಿಕ ಆಂದೋಲನವಾಗಿ ಬಹುಕಾಲ ನಿರಂತರವಾದ ಏರಿಳಿತವನ್ನು ಅನುಭವಿಸಿದೆ. ಪಂಡಿತರು ೧೮೬೦ ರಿಂದ ೧೯೩೯ರವರೆಗಿನ ಕಾಲವನ್ನು ಇದರ ಕ್ಲಾಸಿಕಲ್ ಅವಧಿ ಎಂದು ಗುರುತಿಸುತ್ತಾರೆ, ಇದು ೧೯ನೆಯ ಶತಮಾನ ಮತ್ತು ಕಾರ್ಮಿಕ ವರ್ಗದವರು ನಿರಂಕುಶ ಪ್ರಭುತ್ವದ ವಿರುದ್ಧ ಹೋರಾಟ ನಡೆಸುತ್ತಿದ್ದ ಸ್ಪ್ಯಾನಿಶ್ ಅಂತರ್ಯುದ್ಧದ ಜೊತೆಗೂ ಸಂಬಂಧ ಹೊಂದಿದೆ.

ದಿ ಫಸ್ಟ್ ಇಂಟರ್ನ್ಯಾಶನಲ್

ಅರಾಜಕತಾವಾದ 
ವಿಶ್ವ ಪ್ರತಿಭಟನೆಯ ಪರವಾಗಿ ಸಮುದಾಯ ಸ್ವಾಮ್ಯದವನಾದ ಅರಾಜಕತಾವಾದಿ ಮೈಖಲ್ ಬಕುನಿಯನ್ ಮಾರ್ಕ್ಸ್‌ವಾದಿಯ ಶ್ರಮಿಕವರ್ಗದ ಸರ್ವಾಧಿಕಾರತ್ವ ಗುರಿಯನ್ನು ವಿರೋದ್ಧಿಸಿದರು, ಮತ್ತು ತನನ್ನು ಮಾರ್ಕ್ಸವಾದಿಗಳಿಂದ ಹೊರಡಿಸುವ ಮುಂಚೆಯೆ ಸಂಯುಕ್ತರಾಷ್ಟ್ರವಾದಿ ಜೊತೆ ಒಟ್ಟುಗೂಡಿದರು.

ಯೂರೋಪಿನಲ್ಲಿ, ೧೮೪೮ರ ಕ್ರಾಂತಿಯಲ್ಲಿ ಉಗ್ರವಾದ ಪ್ರತಿಕ್ರಿಯೆ ಪಡೆಯಿತು, ಈ ಸಮಯದಲ್ಲಿ ಹತ್ತು ದೇಶಗಳ ರಾಷ್ಟ್ರೀಯವಾದಿಗಳು ನಡೆಸಿದ ದಂಗೆಯು ಸಣ್ಣ ಪ್ರಮಾಣದಲ್ಲಿ ಅಥವಾ ದೀರ್ಘಕಾಲದವರೆಗೆ ವಿಪ್ಲವವನ್ನುಂಟು ಮಾಡಿತು. ವ್ಯವಸ್ಥಿತವಾದ ಬದಲಾವಣೆ ನಡೆಸುವ ಈ ಪ್ರಯತ್ನಗಳು ವೈಫಲ್ಯ ಹೊಂದಿದವು. ಗುಂಪುಗಳು ಸಮಾಜವಾದಿಗಳು, ಅರಾಜಕತಾವಾದಿಗಳು, ಪ್ರಗತಿಪರರು, ಮತ್ತು ರಾಷ್ಟ್ರೀಯವಾದಿಗಳು ಎಂದು ಒಡೆದು ಹೋಗಿದ್ದರಿಂದ ಇನ್ನೂ ಹೆಚ್ಚು ದಂಗೆಗಳು ನಡೆಯುವರಿಂದ ರಕ್ಷಿಸಿಕೊಂಡು ಸಂಪ್ರದಾಯವಾದಿ ಗುಂಪುಗಳು ಲಾಭ ಪಡೆದುಕೊಂಡವು. ೧೮೬೪ರಲ್ಲಿ ಇಂಟರ್ನ್ಯಾಶನಲ್ ವರ್ಕಿಂಗ್‌ಮೆನ್ಸ್ ಅಸೋಸಿಯೇಶನ್ (ಕೆಲವೊಮ್ಮೆ "ಫಸ್ಟ್ ಇಂಟರ್ನ್ಯಾಶನಲ್" ಎಂದು ಕರೆಯಲಾಗುತ್ತದೆ) ಫ್ರೆಂಚ್ ಅನುಯಾಯಿಗಳಾದ ಪ್ರೊಡೊನ್ , ಬ್ಲಾಂಕ್ವಿಸ್ಟ್ಸ್, ಫಿಲಡೆಲ್ಫಿಸ್, ಇಂಗ್ಲೀಷ್ ವ್ಯಾಪಾರಿ ಸಂಘಟನೆಗಳು, ಸಮಾಜವಾದಿಗಳು ಮತ್ತು ಸಾಮಾಜಿಕ ಪ್ರಜಾಪ್ರಭುತ್ವವಾದಿಗಳು ಎಂಬ ಭಿನ್ನವಾದ ಕ್ರಾಂತಿಕಾರಿಗಳನ್ನು ಒಗ್ಗೂಡಿಸಿತು. ಕಾರ್ಮಿಕರ ಆಂದೋಲನವನ್ನು ಸಕ್ರಿಯವಾಗಿಡುವಲ್ಲಿ ದಿ ಇಂಟರ್ನ್ಯಾಶನಲ್ ಪ್ರಮುಖವಾದ ಸಂಘಟನೆಯಾಯಿತು. ಕಾರ್ಲ್ ಮಾರ್ಕ್ಸ್ಕಾರ್ಲ್ ಮಾರ್ಕ್ಸ್, ಅಂತರಾಷ್ಟ್ರೀಯ ಮಟ್ಟದ ಪ್ರಮುಖ ವ್ಯಕ್ತಿ ಹಾಗೂ ಇದರ ಸಾಮಾನ್ಯ ಸಭೆಯ ಸದಸ್ಯನಾಗಿದ್ದ. ಪ್ರೊಡೊನ್‌ ಅನುಯಾಯಿಗಳಾದ ಮ್ಯುಚುವಲಿಸ್ಟ್ಸ್‌ಮಾರ್ಕ್ಸ್‌ನ ರಾಜ್ಯ ಸಮಾಜವಾದವನ್ನು ವಿರೋಧಿಸಿ ರಾಜಕೀಯ ಎಬ್‌ಸ್ಟೇನ್ಶಿಯನಿಸಂ ಮತ್ತು ಸಣ್ಣ ಪ್ರಮಾಣದಲ್ಲಿ ಆಸ್ತಿ ಹೊಂದಿರುವುದರ ಪರ ವಾದಿಸಿದರು. ೧೮೬೮ರಲ್ಲಿ ರಷ್ಯಾದ ಕ್ರಾಂತಿಕಾರಿ ಮಿಕೇಲ್ ಬಕುನಿಯನ್ ಮತ್ತು ಅವನ ಕಲೆಕ್ಟಿವಿಸ್ಟ್ ಅರಾಜಕತಾವಾದಿ ಲೀಗ್ ಆಫ್ ಪೀಸ್ ಆ‍ಯ್‌೦ಡ್ ಫ್ರಿಡಂ(ಎಲ್‌ಪಿಎಫ್)ನಲ್ಲಿ ಪಾಲ್ಗೊಳ್ಳಲು ವಿಫಲವಾದಾಗ, ದಿ ಫಸ್ಟ್ ಇಂಟರ್ನ್ಯಾಶನಲ್‌ಗೆ ಸೇರಿಕೊಂಡನು (ಅದು ತಾನು ಎಲ್‌ಪಿಎಫ್ ಜೊತೆಗೆ ಸಂಬಂಧ ಹೊಂದಿರಬಾರದು ಎಂದು ನಿರ್ಧರಿಸಿತ್ತು.). ಇವರು ಇಂಟರ್ನ್ಯಾಶನಲ್‍ನ ಸಂಯುಕ್ತರಾಷ್ಟ್ರವಾದಿ ಸಾಮಾಜವಾದಿ ವಿಭಾಗಕ್ಕೆ ಸೇರಿಕೊಂಡು ರಾಜ್ಯ ಮತ್ತು ಆಸ್ತಿಗಳನ್ನು ಒಗ್ಗೂಡಿಸಿ ಕ್ರಾಂತಿಯನ್ನು ದಮನ ಮಾಡಬಹುದೆಂದು ವಾದಿಸಿದನು. ಮೊದಲಿಗೆ ಕಲೆಕ್ಟಿವಿಸ್ಟ್‌ಗಳು ವಾರ್ಕ್ಸಿಸ್ಟ್‌ಗಳ ಜೊತೆ ಸೇರಿಕೊಂಡು ಫಸ್ಟ್ ಇಂಟರ್ನ್ಯಾಶನಲ್‌ನ್ನು ವಿವಿಧ ಕ್ರಾಂತಿಕಾರಿ ಸಾಮಾಜವಾದಿ ದಿಕ್ಕುಗಳಲ್ಲಿ ಮುನ್ನುಗ್ಗಿಸಿದರು. ಆನಂತರದಲ್ಲಿ, ದಿ ಇಂಟರ್ನ್ಯಾಶನಲ್ ಎರಡು ಗುಂಪುಗಳಾಗಿ ಧ್ರುವೀಕರಣ ಹೊಂದಿ ಮಾರ್ಕ್ಸ್ ಮತ್ತು ಬಕುನಿಯನ್ ಅವುಗಳ ಮುಖ್ಯಸ್ಥರಾದರು. ಬಕುನಿಯನ್, ಮಾರ್ಕ್ಸ್‌ನ ವಿಚಾರವನ್ನು ಕೇಂದ್ರಿಕರಣವಾದಿ ಎಂದು ನಿರೂಪಿಸುತ್ತಾರೆ ಮತ್ತು ಮಾರ್ಕಿಸ್ಟ್ ಪಕ್ಷ ಅಧಿಕಾರಕ್ಕೆ ಬಂದರೆ ಅದರ ಮುಖಂಡರು ಆಳುವ ವರ್ಗವಾಗುತ್ತಾರೆ, ಅವರು ಎನನ್ನು ವಿರೋಧಿಸಿದ್ದರೋ ಅದನ್ನೆ ಅವರು ಮಾಡುತ್ತಾರೆ ಎಂದು ಮುನ್ಸೂಚನೆ ನೀಡಿದರು. ೧೮೭೨ರಲ್ಲಿ ಎರಡು ಗುಂಪುಗಳ ನಡುವಿನ ಸಂಘರ್ಷವು ಕೊನೆಯ ಹಂತಕ್ಕೆ ತಲುಪಿ ಹೇಗ್ ಸಮ್ಮೇಳನದಲ್ಲಿ ಒಡೆಯಿತು, ಬಕುನಿಯನ್ ಮತ್ತು ಜೇಮ್ಸ್ ಗೀಯಾಮ್‌ರನ್ನು ದಿ ಇಂಟರ್ನ್ಯಾಶನಲ್‌ನಿಂದ ಹೊರಹಾಕಲಾಯಿತು ಮತ್ತು ಇದರ ಮುಖ್ಯ ಕಛೇರಿಯು ನ್ಯೂಯಾರ್ಕ್‌ಗೆ ಸ್ಥಳಾಂತರಗೊಂಡಿತು. ಇದಕ್ಕೆ ಪ್ರತಿಯಾಗಿ, ಸಂಯುಕ್ತರಾಷ್ಟ್ರವಾದಿ ದಳವು ಸೇಂಟ್ ಎಮಿಯರ್ ಸಮ್ಮೇಳನದಲ್ಲಿ ತಮ್ಮದೆ ಆದ ಇಂಟರ್ನ್ಯಾಶನಲ್ ರೂಪಿಸಿ ಕ್ರಾಂತಿಕಾರಿ ಅರಾಜಕತಾವಾದಿ ಯೋಜನೆಯನ್ನು ಅಳವಡಿಸಿಕೊಂಡರು.

ಸಂಘಟಿತ ಕಾರ್ಮಿಕರು

ಅನಾರ್ಕೊ-ಸಿಂಡಿಕಾಲಿಸ್ಟ್‌ಗಳು ಫಸ್ಟ್ ಇಂಟರ್ನ್ಯಾಶನಲ್‌ನ ನಿರಂಕುಶಾಧಿಕಾರಿ-ವಿರೋಧಿ ದಳದ ಅಗ್ರಗಾಮಿಗಳು, "ಮುಕ್ತ ಮತ್ತು ಸ್ವಯಂಪ್ರೇರಿತ ಕಾರ್ಮಿಕ ಸಂಘಟನೆಗಳ ಜೊತೆಗೆ ಹಕ್ಕು ಮತ್ತು ರಾಜ್ಯದ ಅಧಿಕಾರವನ್ನು ಪುನಃ ಸ್ಥಾಪಿಸಲು" ಅವಕಾಶ ಹುಡುಕುತ್ತಿದ್ದರು. ೧೮೮೬ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಕೆನಡಾದ ಫೆಡರೆಶನ್ ಆಫ್ ಆರ್ಗನೈಸ್ಡ್ ಟ್ರೇಡ್ಸ್ ಆ‍ಯ್‌೦ಡ್ ಲೇಬರ್ ಯೂನಿಯನ್ಸ್(ಎಫ್‌ಒಟಿಎಲ್‌ಯು) ದಿನದಲ್ಲಿ ಎಂಟು ಗಂಘೆಕಾಲ ಕೆಲಸ ಎಂದು ಮೇ ೧ ೧೮೮೬ರಂದು ಸರ್ವಾನುಮತದಿಂದ ಅಂಗೀಕರಿಸಿದವು, ಇದೇ ಕೆಲಸದ ಸ್ಟ್ಯಾಂಡರ್ಡ್ ವೇಳೆಯಾಯಿತು. ಇದಕ್ಕೆ ಉತ್ತರವಾಗಿ, ಈ ಘಟನೆಯನ್ನು ಬೆಂಬಲಿಸಲು ಅಮೆರಿಕಾ ಸಂಯುಕ್ತ ಸಂಸ್ಥಾನದಾದ್ಯಂತ ಸಾಮಾನ್ಯ ಮುಷ್ಕರ ನಡೆಸಲು ತಯಾರಿ ನಡೆಯಿತು. ಚಿಕಾಗೋದಲ್ಲಿ ಮೇ ೩ರಂದು, ಮುಷ್ಕರ ಉಲ್ಲಂಘಕರು ನಿಯಂತ್ರಣ ರೇಖೆಯನ್ನು ದಾಟುವ ಪ್ರಯತ್ನ ನಡೆಸಿದಾಗ ಹೋರಾಟವು ದಿಕ್ಕಾಪಾಲಾಯಿತು, ಮತ್ತು ಪೋಲಿಸರು ಉದ್ರಿಕ್ತ ಗುಂಪಿನ ಮೇಲೆ ಗುಂಡಿನದಾಳಿ ನಡೆಸಿದಾಗ ಎರಡು ಕಾರ್ಮಿಕರು ಸತ್ತರು. ಮರುದಿನ ೪ ಮೇರಂದು ಅರಾಜಕತಾವಾದಿಗಳು ಚಿಕಾಗೋದ ಹೇಮಾರ್ಕೇಟ್ ಚೌಕದಲ್ಲಿ ಒಂದು ರ್ಯಾಲಿ ಆಯೋಜಿಸಿದರು. ರ್ಯಾಲಿಯ ಕೊನೆಯಲ್ಲಿ ಅಪರಿಚಿತರು ಬಾಂಬ್ ದಾಳಿ ನಡೆಸಿದ್ದರಿಂದ ಒಬ್ಬ ಅಧಿಕಾರಿ ಸಾವನ್ನಪ್ಪಿದರು. ಮುಂದೆ ನಡೆದ ಗಲಭೆಯಲ್ಲಿ ಪೋಲಿಸರು ಗುಂಡಿನ ದಾಳಿ ನಡೆಸಿದರು ಮತ್ತು ಉದ್ರಿಕ್ತರು ಕೂಡ ದಾಳಿ ಆರಂಭಿಸಿದರು. ಏಳು ಜನ ಪೋಲಿಸರು ಮತ್ತು ನಾಲ್ಕು ಜನ ಕಾರ್ಮಿಕರು ಸಾವನ್ನಪ್ಪಿದರು. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ರ್ಯಾಲಿ ಆಯೋಜಿಸಲು ನೆರವಾದ ಎಂಟು ಮಂದಿ ಅರಾಜಕತಾವಾದಿಗಳನ್ನು ಬಂಧಿಸಿ ಸಾವನ್ನಪ್ಪಿದ ಅಧಿಕಾರಿಗಳ ಕೊಲೆ ಮಾಡಿರುವ ಆರೋಪ ಹೊರಿಸಲಾಯಿತು. ಇವರು ಕಾರ್ಮಿಕ ಚಳುವಳಿಯಲ್ಲಿ ಅಂತರಾಷ್ಟ್ರೀಯ ರಾಜಕೀಯ ವ್ಯಕ್ತಿಗಳಾದರು. ನಾಲ್ಕು ಜನರನ್ನು ಗಲ್ಲಿಗೇರಿಸಲಾಯಿತು ಮತ್ತು ಐದು ಜನರು ಗಲ್ಲಿಗೇರಿಸುವ ಮೊದಲೆ ಆತ್ಮಹತ್ಯೆ ಮಾಡಿಕೊಂಡರು. ಈ ಘಟನೆಯು ಹೇಮಾರ್ಕೇಟ್ ಅಫೇರ್ ಎಂದು ಪ್ರಸಿದ್ಧವಾಯಿತು, ಮತ್ತು ಕಾರ್ಮಿಕ ಆಂದೋಲನಕ್ಕೆ ಮತ್ತು ಎಂಟು ಗಂಟೆ ಕೆಲಸ ಎಂಬ ಹೋರಾಟಕ್ಕೆ ಹಿನ್ನೆಡೆ ಉಂಟಾಯಿತು. ಎಂಟು ಗಂಟೆ ಕೆಲಸ ಎಂಬುದನ್ನು ಕ್ರಮಗೊಳಿಸಲು ೧೮೯೦ರಲ್ಲಿ ನಡೆದ ಎರ‍ಡನೆಯ ಪ್ರಯತ್ನದಲ್ಲಿ ಅಂತರಾಷ್ಟ್ರೀಯ ಸ್ವರೂಪ ಪಡೆದುಕೊಂಡಿತು.ಹೇಮಾರ್ಕೇಟ್ ಅಫೇರ್ ಘಟನೆಯ ಪರಿಣಾಮವಾಗಿ ಸತ್ತ ಕಾರ್ಮಿಕರ ಸ್ಮರಿಸಿಕೊಳ್ಳುವುದು ಎರಡನೆಯ ಉದ್ದೇಶವಾಗಿತ್ತು. ಇದು ಒಮ್ಮೆ ನಡೆಯುವ ಘಟನೆಯಾದರೂ, ಮುಂದಿನ ವರ್ಷದಿಂದ ಮೇ ದಿನ ಅಂತರಾಷ್ಟ್ರೀಯ ಕಾರ್ಮಿಕ ದಿನ ಮತ್ತು ಅಂತರಾಷ್ಟ್ರೀಯ ಕಾರ್ಮಿಕ ರಾಜಾದಿನವಾಗಿ ಆಚರಿಸಲಾಗುತ್ತಿದೆ.

ಅರಾಜಕತಾವಾದ 
ಹೇಮಾರ್ಕೇಟ್ ಘಟನೆ ಆದ ನಂತರದಲ್ಲಿ ಮರಣದಂಡನೆ ಜಾರಿಗೊಳಿಸಿದ "ಚಿಕಾಗೊದ ಅರಾಜಕತರ" ಮೇಲಿನ ಸಹಾನುಭೂತಿಯಿಂದ ವಾಲ್ಟರ್ ಕ್ರೇನ್ ಕೇತ್ತಿದ ಒಂದು ಕೃತಿ. ಅಂತರ್‌ರಾಷ್ಟ್ರೀಯ ಮೇ ದಿನ ಆಚರಣೆಗೆ ಹೇಮಾರ್ಕೇಟ್ ಘಟನೆಯನ್ನು ಸಾಮಾನ್ಯವಾಗಿ ಪ್ರಮುಖವಾಗಿ ಪರಿಗಣಿಸಲಾಗಿದೆ.

೧೯೦೭ರಲ್ಲಿ, ಇಂಟರ್ನ್ಯಾಶನಲ್ ಅನಾರ್ಕಿಸ್ಟ್‌ ಕಾಂಗ್ರೆಸ್ ಆಫ್ ಆ‍ಯ್‌ಮ್ಸ್ಟರ್‌ಡ್ಯಾಂ ೧೪ ವಿವಿಧ ದೇಶಗಳ ನಿಯೋಗದ ಸಭೆ ಸೇರಿಸಿತು, ಇದರಲ್ಲಿ ಅರಾಜಕತಾವಾದಿ ಚಳುವಳಿಯ ಪ್ರಮುಖ ವ್ಯಕ್ತಿಗಳಾದ, ಎರಿಕೊ ಮಲಾಟೀಸ್ಟಾ, ಪೀಯರ್ ಮೊನಾಟೆ, ಲ್ವಿಗಿ ಫಬ್ರಿ, ಬೆನಾಯ್ಟ್ ಬ್ರೌಚೊಕ್ಸ್, ಎಮ್ಮಾ ಗೋಲ್ಡ್‌ಮನ್, ರುಡೋಲ್ಫ್ ರಾಕರ್, ಮತ್ತು ಕ್ರಿಸ್ಟಿಯಾನ್ ಕೊನಿಲಿಸೆನ್ ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ಮುಖ್ಯವಾಗಿ ಅರಾಜಕತಾವಾದಿ ಚಳುವಳಿಯನ್ನು ಸಂಘಟಿಸುವುದು, ಪ್ರಸಿದ್ಧ ಶೈಕ್ಷಣಿಕ ವಿಷಯಗಳು, ಮುಷ್ಕರ ಅಥವಾ ಸೈನಿಕ ಪ್ರವೃತ್ತಿ ವಿರೋಧಿ ಕುರಿತಾಗಿ ಹಲವಾರು ವಿಚಾರಗಳು ಮಂಡನೆಯಾದವು. ಮುಖ್ಯ ಚರ್ಚೆಯ ವಿಷಯವು ರಾಜಕತೆ ಮತ್ತು ಸಿಂಡಿಕಾಲಿಸಂ (ಅಥವಾ ವ್ಯಾಪಾರಿ ಸಂಘಟನೆ)ಯ ಕುರಿತಾಗಿತ್ತು. ಮಲಾಟೀಸ್ಟಾ ಮತ್ತು ಮೊನಾಟೆ ನಿರ್ದಿಷ್ಟವಾಗಿ ಈ ವಿಷಯಕ್ಕೆ ವಿರೋಧ ವ್ಯಕ್ತಪಡಿಸಿದರು, ಸಿಂಡಿಕಾಲಿಸಂ ವಿಚಾರದಲ್ಲಿ ಕ್ರಾಂತಿಕಾರಿಯಾಗಿದೆ ಮತ್ತು ಇದು ಸಾಮಾಜಿಕ ಕ್ರಾಂತಿಯನ್ನು ಉಂಟಮಾಡಬಹುದು, ಇದರಿಂದಾಗಿ ಮಲಾಟೀಸ್ಟಾ ಸಿಂಡಿಕಾಲಿಸಂ ಸಮರ್ಥವಾಗಿದೆ ಎಂಬುದನ್ನು ಪರಿಗಣಿಸಲಿಲ್ಲ. ಅವರು ಯೋಚಿಸಿದ ಪ್ರಕಾರ, ವ್ಯಾಪಾರಿ-ಸಂಘಟನಾ ಚಳುವಳಿಯು ಸುಧಾರಣಾವಾದಿ ಮತ್ತು ಉಳಿತಾಯ ಪ್ರಚೋದಿಯಾಗಿತ್ತು. ಅಲ್ಲದೆ ಇದು ಮಧ್ಯಮ ವರ್ಗ ಮತ್ತು ಕಾರ್ಮಿಕ ವಿರೋಧಿಯಾಗಿದ್ದು ವೃತ್ತಿಪರ ಸಂಘಟನಾ ಅಧಿಕಾರಿಗಳ ಯೋಜನೆಯಂತೆ ನಡೆಯುತ್ತಿತ್ತು. ಮಲಾಟೆಸ್ಟಾ ಎಚ್ಚರಿಸಿದ ಪ್ರಕಾರ ಸಿಂಡಿಕಾಲಿಸ್ಟರು ಸಿಂಡಿಕಾಲಿಸಮ್‌ ಅನ್ನು ಶಾಶ್ವತವಾಗಿರಿಸಬೇಕೆಂದುಕೊಂಡರು. ಅಲ್ಲದೆ ಯಾವುದೇ ಇತರೆ ತತ್ವಗಳು ಇದನ್ನು ಸಾಧಿಸಬಾರದು ಎಂದು ಪ್ರಯತ್ನಿಸುತ್ತಿದ್ದರು. ೧೮೮೧ರಲ್ಲಿನ ಸ್ಪ್ಯಾನಿಷ್ ವರ್ಕರ್ಸ್ ಫೆಡರೇಶನ್ ಪ್ರಮುಖವಾದ ಮೊದಲ ಅನಾರ್ಕೊ-ಸಿಂಡಿಕಾಲಿಸ್ಟ್ ಆಂದೋಲನವಾಗಿದೆ; ಸ್ಪೇನ್‌ನಲ್ಲಿ ಅರಾಜಕತಾವಾದಿ ಟ್ರೇಡ್ ಯೂನಿಯನ್‌ ಫೆಡರೇಶನ್ ವಿಶೇಷವಾದ ಸ್ಥಾನ ಹೊಂದಿತ್ತು. ೧೯೧೦ರಲ್ಲಿ ಯಶಸ್ವಿಯಾದಕಾನ್‌ಫೆಡರೇಸಿಯಾನ್ ನ್ಯಾಷಿಯಾನಲ್ ಡೆಲ್ ಟ್ರಬ್ಯಾಜೊ (Confederación Nacional del Trabajo) (ನ್ಯಾಷನಲ್ ಕಾನ್ಫಿಡರೇಶನ್ ಆಫ್ ಲೇಬರ್: ಸಿಎನ್‌ಟಿ) ಸ್ಥಾಪನೆಯಾಯಿತು. ೧೯೪೦ಕ್ಕಿಂತ ಮೊದಲಿಗೆ ಸ್ಪೇನಿನ ಕಾರ್ಮಿಕ ವರ್ಗದ ರಾಜಕೀಯದಲ್ಲಿ ಸಿಎನ್‌ಟಿ ಪ್ರಮುಖವಾದ ಪ್ರಭಾವಿ ಸಂಘಟನೆಯಾಗಿತ್ತು, ಒಂದು ಸಂದರ್ಭದಲ್ಲಿ ೧.೫೮ ಮಿಲಿಯನ್ ಸದಸ್ಯರನ್ನು ಆಕರ್ಷಿಸಿತ್ತು ಮತ್ತು ಸ್ಪ್ಯಾನಿಷ್ ಅಂತರ್ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಸಿಎನ್‌ಟಿ ಇಂಟರ್ನ್ಯಾಶನಲ್ ವರ್ಕರ್ಸ್ ಅಸೊಸಿಯೇಶನ್‌ನೊಂದಿಗೆ ಸೇರಿಕೊಂಡಿತ್ತು, ೧೯೨೨ರಲ್ಲಿ ಫೆಡರೆಶನ್ ಆಫ್ ಅನಾರ್ಕೊ-ಸಿಂಡಿಕಾಲಿಸ್ಟ್ ಟ್ರೇಡ್ ಯೂನಿಯನ್ಸ್ ಸ್ಥಾಪನೆಯಾಯಿತು, ಇದರ ಪ್ರತಿನಿಧಿಗಳು ಯೂರೋಪ್ ಮತ್ತು ಲ್ಯಾಟಿನ್‌ ಅಮೆರಿಕಾದ ಹದಿನೈದು ದೇಶಗಳ ಎರಡು ಮಿಲಿಯನ್ ಕಾರ್ಮಿಕರನ್ನು ಪ್ರತಿನಿಧಿಸುತ್ತಿದ್ದರು. ಮುಖ್ಯವಾಗಿ ಲ್ಯಾಟಿನ್ ಅಮೆರಿಕಾದಲ್ಲಿ ಅರಾಜಕತಾವಾದಿಗಳು ಮತ್ತು ದಕ್ಷಿಣ ಮತ್ತು ಮಧ್ಯ ಅಮೆರಿಕಾದಲ್ಲಿ ಔದ್ಯೋಗಿಕ ಕಾರ್ಮಿಕರು ಶೀಘ್ರವಾಗಿ ಸಂಘಟನೆಯಲ್ಲಿ ಸಕ್ರಿಯರಾದರು, ಮತ್ತು ೧೯೨೦ಕ್ಕಿಂತ ಮೊದಲಿನ ಮೆಕ್ಸಿಕೊ, ಬ್ರೆಜಿಲ್, ಪೆರು, ಚಿಲಿ, ಮತ್ತು ಅರ್ಜಂಟೈನಾದಲ್ಲಿನ ಹೆಚ್ಚಿನ ಟ್ರೇಡ್ ಯೂನಿಯನ್ಸ್ ಸಾಮಾನ್ಯ ದೃಷ್ಟಿಕೋನದಲ್ಲಿ ಅನಾರ್ಕೊ-ಸಿಂಡಿಕಾಲಿಸ್ಟ್ ಆಗಿ ಕಂಡುಬರುತ್ತವೆ, ಸ್ಪ್ಯಾನಿಶ್ ಸಿ.ಎನ್.ಟಿ ಕ್ರಾಂತಿಕಾರಿ ಸಂಘಟನೆಯಾಗಿ ಹೆಸರುವಾಸಿಯಾಗಿತ್ತು. ನಿಸ್ಸಂಶಯವಾಗಿ ಈ ಸಂದರ್ಭಕ್ಕಾಗಿ ತುಂಬಾ ಜವಾಬ್ದಾರಿ ತೆಗೆದುಕೊಂಡಿತ್ತು. ಈ ಸಂಘಟನೆಯ ಬೃಹತ್ ಪ್ರಮಾಣದ ಮತ್ತು ಆಕ್ರಮಣಕಾರಿ ಫೆಡರೇಶನ್ ಒಬ್ರೆರಾ ರೀಜನಲ್ ಅರ್ಜಂಟೈನಾ...ತುಂಬಾ ವೇಗವಾಗಿ ಬೆಳೆಯಿತು. ಸುಮಾರು ಎರಡೂವರೆ ಲಕ್ಷ ಸದಸ್ಯರನ್ನು ಒಳಗೊಂಡು ಸಾಮಾಜಿಕ ಪ್ರಜಾಪ್ರಭುತ್ವವಾಗಿ ಯೂನಿಯನ್‌ ಮೀರಿ ಬೆಳೆಯಿತು." ಇಂದು ದೊಡ್ಡ ಪ್ರಮಾಣದ ಅರಾಜಕತಾವಾದಿ ಚಳುವಳಿಯು ಕಾನ್‌ಫೆಡರೇಸಿಯಾನ್ ಜನರಲ್ ಡೆಲ್‌ ಟ್ರಬ್ಯಾಜೊ (Confederación General del Trabajo) (ಸಿಜಿಟಿ) ಮತ್ತು ಸಿಎನ್‌ಟಿ ಸ್ವರೂಪದಲ್ಲಿ ಸ್ಪೇನ್‌ನಲ್ಲಿದೆ, ೨೦೦೩ರ ಪ್ರಕಾರ ಸಿಜಿಟಿಯ ಸದಸ್ಯರು ಸುಮಾರು ೧೦೦,೦೦೦. ಇತರೆ ಸಕ್ರಿಯ ಸಿಂಡಿಕಾಲಿಸ್ಟ್ ಮೂವ್‌ಮೆಂಟ್‌ಗಳು ಅಮೆರಿಕಾ ಸಂಯುಕ್ತ ಸಂಸ್ಥಾನದ ವರ್ಕರ್ಸ್ ಸಾಲಿಡಾರಿಟಿ ಅಲಯನ್ಸ್ ಮತ್ತು ಯುಕೆಯ ಸಾಲಿಡಾರಿಟಿ ಫೆಡರೇಶನ್. ಇಂಡಸ್ಟ್ರೀಯಲ್ ವರ್ಕರ್ಸ್ ಆಫ್ ದ ವರ್ಲ್ಡ್ ಒಂದು ಕ್ರಾಂತಿಕಾರಿ ಔದ್ಯೋಗಿಕ ಒಕ್ಕೂಟದ ಸದಸ್ಯ ಈ ಸಂಘಟನೆಯು ೨,೦೦೦ ಸದಸ್ಯರಿದ್ದಾರೆ ಎಂದು ಹೇಳಿಕೊಳ್ಳುತ್ತದೆ, ಮತ್ತು ಇಂಟರ್ನ್ಯಾಶನಲ್ ವರ್ಕರ್ಸ್ ಅಸೊಸಿಯೇಶನ್, ಫಸ್ಟ್ ಇಂಟರ್ನ್ಯಾಶನಲ್‌ನ ಮುಂದಿನ ಅನಾರ್ಕೊ-ಸಿಂಡಿಕಾಲಿಸ್ಟ್ ಕೂಡ ಸಕ್ರಿಯವಾಗಿದೆ.

ಕಾರ್ಯವೈಖರಿಯ ವಿಧಾನ ಮತ್ತು ಅಕ್ರಮವಾದ

ಅರಾಜಕತಾವಾದ 
ಇಟಲಿಯ-ಅಮೆರಿಕಾದ ಅರಾಜಕತಾವಾದಿ ಲ್ವಿಗಿ ಗಲ್ಯಾನೊ. ಇತನ ಅನುಯಾಯಿಗಳು ಗೆಲೆಯಾನಿಸ್ಟ್‌ರು ಎಂದು ಪ್ರಚಲಿತರಿದ್ದರು,ಇವರು ’ಪ್ರಜಾಪೀಡಕಗಳು’ ಹಾಗೂ ’ಜನರ ಶತ್ರುಗಳು’ ಎಂದು ನೋಡಿದಲ್ಲಿ 1914 ರಿಂದ 1932ರವರೆಗೆ ಸರಣಿ ಬಾಂಬ್ ಸ್ಫೋಟಗಳ ಮತ್ತು ಹತ್ಯೆಗಳ ಪ್ರಯತ್ನ ನಡೆಸಿದ್ದಾರೆ.

ಜೊಹಾನ್ ಮೋಸ್ಟ್‌ ನಂತಹ ಕೆಲವು ಅರಾಜಕತಾವಾದಿಗಳು ಕ್ರಾಂತಿಕಾರಿ-ವಿರೋಧಿಗಳ ವಿರುದ್ಧ ಸೇಡು ತೀರಿಸೊಕೊಳ್ಳಲು ಹಿಂಸಾ ಕ್ರಮಗಳನ್ನು ಪ್ರಚಾರಗೊಳಿಸಬೇಕು ಏಕೆಂದರೆ "ನಾವು ಕೇವಲ ಪ್ರತಿಕಾರಕ್ಕಾಗಿ ಮಾತ್ರ ಕೆಲಸ ಮಾಡುವುದಿಲ್ಲ ಪ್ರಚಾರದ ಕಾರ್ಯವಾಗಿಯು ಇದನ್ನು ಮಾಡುತ್ತೇವೆ" ಎಂದು ವಾದಿಸಿದರು. ೧೮೮೦ರಿಂದ ವೈಯಕ್ತಿಕ ದಾಳಿ, ರಾಜಹಂತಕರು, ಮತ್ತು ಟೈರನಿಸೈಡ್‌ಗಳನ್ನು ಉಲ್ಲೇಖಿಸಲು ಅರಾಜಕತಾವಾದಿ ಚಳುವಳಿಯ ಒಳಗೆ ಮತ್ತು ಹೊರಗೆ ಕೆಲಸದ ಪ್ರಚಾರ ಎಂಬ ಘೋಷಣೆಯು ಆರಂಭವಾಯಿತು. ೧೯೦೫ರ ನಂತರದಲ್ಲಿ, ರಷಿಯಾಗೆ ಪೂರಕವಾಗಿ ಈ ಸಿಂಡಿಕಾಲಿಸ್ಟ್- ವಿರೋಧಿ ಅರಾಜಕತಾವಾದಿ-ಕಮ್ಯೂನಿಸ್ಟರು ಆರ್ಥಿಕ ಭಯೋತ್ಪಾದನೆ ಮತ್ತು ಅಕ್ರಮವಾಗಿ ‘ಸ್ವಾಧೀನಕ್ಕೆ ತೆಗೆದುಕೊ’ಳ್ಳುವುದನ್ನು ಬೆಂಬಲಿಸಿದರು." ಕಾನೂನುಬಾಹಿರತೆ ಆಚರಣೆಯು ಉಗಮವಾಯಿತು ಮತ್ತು ಇದರೊಳಗೆ " ಅರಾಜಕತಾವಾದಿ ಬಾಂಬರ್‌ಗಳು ಮತ್ತು ಹಂತಕರು ("ಪ್ರಚಾರದ ಒಪ್ಪಂದ") ಮತ್ತು ಅರಾಜಕತಾವಾದಿ ದರೋಡೆಕೋರರು ("ವ್ಯಕ್ತಿಗತ ಪುನರ್ವಿನಿಯೋಗ") ತಮ್ಮ ವೈಯಕ್ತಿಕ ಹತಾಶೆಯನ್ನು ವ್ಯಕ್ತಪಡಿಸಿದರು ಮತ್ತು ಅಸಹನೀಯ ಸಮಾಜದ ಬಲಾತ್ಕಾರವನ್ನು ಅಲ್ಲಗಳೆದರು. ಹೆಚ್ಚಿನದಾಗಿ, ಅವರು ನೇರವಾಗಿ ಆದರ್ಶಪ್ರಾಯವಾದ ಒಂದು ಬಂಡಾಯದ ಆಹ್ವಾನವನ್ನು ನೀಡಿದ್ದರು. . ಕಾನೂನುಬಾಹಿರತೆಯನ್ನು ಅಪ್ಪಿಕೊಂಡವರಲ್ಲಿ ಫ್ರಾನ್ಸ್‌ನ ಬೊನೆಟ್ ಗ್ಯಾಂಗ್ ಪ್ರಸಿದ್ಧವಾಗಿದೆ. ಆದರೂ ೧೮೮೭ರಲ್ಲಿ, ಅರಾಜಕತಾವಾದಿ ಚಳುವಳಿಯ ಕೆಲವು ಪ್ರಮುಖರು ವೈಯಕ್ತಿಕ ಕೆಲಸದಿಂದಾಗಿ ಅಂತರವನ್ನು ಕಾಯ್ದುಕೊಂಡರು ಅದೇ ವರ್ಷ ಪೀಟರ್ ಕ್ರೊಪೊಟ್ಕಿನ್‌ Le Révolté ಜರ್ನಲ್‌ನಲ್ಲಿ ಬರೆದರು " ಇದಕ್ಕೆ ಹಲವಾರು ಶತಮಾನದ ಇತಿಹಾಸದ ತಳಹದಿ ಇದ್ದು ಕೇವಲ ಕೆಲವೆ ಕಿಲೋ ಡೈನಾಮೈಟ್‌ನಿಂದ ನಾಶ ಪಡಿಸಲಾಗುವುದಿಲ್ಲ". ಸಾಮೂಹಿಕ ಕ್ರಾಂತಿಯ ಆಯ್ಕೆಯಲ್ಲಿ ಈ ಪ್ರಕಾರದ ತಂತ್ರಗಳನ್ನು ಕೈಬಿಡಲಾಗಿದೆ ಎಂದು ವಿವಿಧ ಅರಾಜಕತಾವಾದಿಗಳು ವಾದಿಸಿದ್ದಾರೆ, ಉದಾಹರಣೆಗೆ ಟ್ರೇಡ್ ಯೂನಿಯನ್ ಚಳುವಳಿ ೧೮೯೫ರಲ್ಲಿ ಅನಾರ್ಕೊ-ಸಿಂಡಿಕಾಲಿಸ್ಟ್, ಫೆರ್ನಾಂಡ್ ಪೆಲ್ಲೊಟಿಯರ್, ಅರಾಜಕತಾವಾದಿಗಳು ಕಾರ್ಮಿಕ ಆಂದೋಲನದಲ್ಲಿ ಹೊಸ ವಿಧದಲ್ಲಿ ಭಾಗವಹಿಸಬೇಕು, ಈ ಮೂಲಕ ವ್ಯಕ್ತಿಗತ ಕ್ರಾಂತಿಯ ಹೊರತಾಗಿಯು ಅರಾಜಕತೆ ಚೆನ್ನಾಗಿ ಕೆಲಸ ಮಾಡುತ್ತದೆ." ಅರಾಜಕತಾವಾದಿ ಮತ್ತು ಕಾರ್ಮಿಕ ಚಳುವಳಿಗಳು (೧೮೯೪ರ ಫ್ರೆಂಚ್ ois scélérates ಒಳಗೊಂಡಂತೆ) ರಾಜ್ಯ ನಿಗ್ರಹಕ್ಕಾಗಿ ಯಶಸ್ವಿಯಾಗಿ ಬಾಂಬ್ ಹಾಕುವಿಕೆ ಮತ್ತು ಹತ್ಯೆಯನ್ನು ನಡೆಸಿದ ಈ ಕೆಲವು ತಂತ್ರಗಳನ್ನು ಕೈಬಿಡಲಾಯಿತು, ಆದಾಗ್ಯೂ ರಾಜ್ಯ ನಿಗ್ರಹಕ್ಕೆ ಬದಲಾಗಿ ಮೊದಲನೇ ಸ್ಥಾನದಲ್ಲಿ ಈ ಪ್ರತ್ಯೇಕವಾದ ಚಟುವಟಿಕೆಗಳು ಪ್ರಮುಖವಾದವು. ೧೮೭೧ರ ಪ್ಯಾರಿಸ್ ಕಮ್ಯೂನ್ ದಮನವಾಯಿತು,ನಂತರದಲ್ಲಿ ಪ್ರೆಂಚ್‌ನ ಸಮಾಜವಾದಿ ಆಂದೋಲನದ ವಿಭಜನೆಯಾಗಿ ಹಲವಾರು ಗುಂಪುಗಳಾಯಿತು, ಹಲವಾರು ಕಮ್ಯುನಾರ್ಡ್ಸ್‌ರನ್ನು ಶಿಕ್ಷಿಸಲಾಯಿತು ಮತ್ತು ದಂಡನೆ ನೀಡುವ ವಸಾಹತುಗಳಿಗೆ ಗಡೀಪಾರು ಮಾಡಲಾಯಿತು ಇದು ವ್ಯಕ್ತಿಗತ ರಾಜಕೀಯ ಮತ್ತು ಅದರ ಚಟುವಟಿಕೆಯನ್ನು ಬೆಂಬಲಿಸಿತು. ಅರಾಜಕತಾವಾದಿ ಆಂದೋಲನದ ಸದಸ್ಯರು ೧೮೮೧ ಮತ್ತು ೧೯೧೪ರ ನಡುವೆ ಹಲವಾರು ಜನ ರಾಜ್ಯದ ಮುಖ್ಯಸ್ಥರನ್ನು ಕಗ್ಗೊಲೆ ಮಾಡಿದರು. ಉದಾಹರಣೆಗೆ, ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಮ್ಯಾಕಿನ್ಲಿಯ ಹಂತಕ ಲಿಯಾನ್ Czolgosz ಅರಾಜಕತಾವಾದಿ ಮತ್ತು ಸ್ತ್ರೀವಾದಿ ಎಮ್ಮಾ ಗೋಲ್ಡ್‌ಮನ್‌ರಿಂದ ಪ್ರಭಾವಿತಗೊಂಡಿದ್ದಾಗಿ ಆರೋಪಿಸಿದ್ದಾನೆ. ಗೋಲ್ಡ್‌ಮನ್ ತಾನು ಈತನ ಜೊತೆಗೆ ಸಂಬಂಧ ಹೊಂದಿರುವುದನ್ನು ನಿರಾಕರಿಸಿದರು, ರಿಪಬ್ಲಿಕನ್ ಪಾರ್ಟಿಯಲ್ಲಿ ತನ್ನ ಸದಸ್ಯತ್ವ ದಾಖಲಾಗಿದೆ ಮತ್ತು ಎಂದಿಗೂ ಅರಾಜಕತಾವಾದಿ ಸಂಘಟನೆಯ ಜೊತೆಗೆ ಸಂಬಂಧ ಹೊಂದಿರಲಿಲ್ಲ. ಮಾಧ್ಯಮದಲ್ಲಿ ಅರಾಜಕತಾವಾದಿಗಳ ಜೊತೆಗೆ ಬಾಂಬಿಂಗ್ ಕೂಡ ಸೇರಿಕೊಂಡಿದೆ, ಏಕೆಂದರೆ ಇದೇ ಸಮಯದಲ್ಲಿ ಅಂತರಾಷ್ಟ್ರೀಯ ಭಯೋತ್ಪಾದನೆ ಕಾಣಿಸಿಕೊಂಡು ಡೈನಾಮೈಟ್ ಹಂಚಿಕೆ ವ್ಯಾಪಕವಾಯಿತು. ಈ ಚಿತ್ರಣವು ಇಂದುಗೂ ಕಂಡುಬರುತ್ತದೆ. ಮೊದಲ ವಿಶ್ವ ಯುದ್ಧ (೧೯೧೪–೧೯೧೮) ಮತ್ತು ೧೯೧೭ ಅಕ್ಟೋಬರ್ ಕ್ರಾಂತಿಯ ನಂತರ ಹೆಚ್ಚಿನ ಅರಾಜಕತಾವಾದಿ ಚಳುವಳಿಯ ಕೆಲಸಕ್ಕಾಗಿ ಪ್ರಚಾರ ಕೈಬಿಡಲಾಯಿತು.

ರಷ್ಯಾ ಕ್ರಾಂತಿ

ಅರಾಜಕತಾವಾದ 
ಯುಕ್ರೇನಿನ ರೆವಲ್ಯೂಶನರಿ ಇನ್‌ಸರೆಶನರಿ ಆರ್ಮಿಯ ಅರಾಜಕತಾವಾದಿ ಸದಸ್ಯರ ಜೊತೆಗೆ ನೆಸ್ಟೋರ್ ಮ್ಯಾಂಕ್ನೊ

ಬೋಲ್ಶೆವಿಕ್‌‍ ಪಕ್ಷದ ಅರಾಜಕತಾವಾದಿಗಳು ಫೆಬ್ರುವರಿ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ನಡೆದ ಕ್ರಾಂತಿಯ ಜೊತೆಜೊತೆಯಾಗಿ ನಡೆದವರು. ಮತ್ತು ಅವರು ಬೋಲ್ಶೆವಿಕ್ಸ ದಿಢೀರ್ ಕಾರ್ಯಾಚರಣೆಯ ಬಗ್ಗೆ ಸದಾ ಉತ್ಸುಕರಾಗಿದ್ದರು. ಹೇಗೆಂದರೆ ಅವರು ಅತಿ ಬೇಗನೆ ಸುಧಾರಣಾ ವಾದಿಗಳ ವಿರೋಧಿಗಳಾದರು ಮತ್ತು ಎಲ್ಲ ಎಡಪಕ್ಷಗಳ ವಿರೋಧ ಕಟ್ಟಿಕೊಂಡರು. ಹೊಸ ಸರ್ಕಾರರವಾದ ಕ್ರೋನ್‌ಸ್ಟ್ಯಾಡ್ಟನ ವಿರುದ್ಧ ದಂಗೆಯು ೧೯೨೧ರಲ್ಲಿ ಉಗ್ರತೆಯ ಶಿಖರಕ್ಕೇರಿತು. ಮಧ್ಯ ರಷ್ಯಾದ ಕ್ರಾಂತಿಕಾರರು ಜೈಲಿಗೆ ತಳ್ಳಲ್ಟಟ್ಟರು, ಭೂಗತರಾದರು ಅಥವಾ ಗೆಲುವಿನ ಕುದುರೆಯಾದ ಬೊಲ್ಶೆವಿಕ್ಸ ಪಕ್ಷವನ್ನು ಸೇರಿಕೊಂಡರು. ಪೆಟ್ರೋಗಾರ್ಡ ಮತ್ತು ಮಾಸ್ಕೋದಲ್ಲಿನ ಕ್ರಾಂತಿಕಾರರು ತಲೆಮರೆಸಿಕೊಂಡು ಉಕ್ರೇನ್‌ಗೆ ಪಲಾಯನ ಮಾಡಿದರು. ಅಲ್ಲಿ ಅವರು ಒಳಗಡಿ(ಸೀಮೆ) ಇಲ್ಲದ ರಾಜ್ಯಕ್ಕಾಗಿ ಬಿಳಿಯರ (ಅಕ್ಟೋಬರ್ ತಿಂಗಳಲ್ಲಿ ಅರಾಜಕತಾವಾದಿಗಳ ವಿರುದ್ಧ ಹೋರಾಡಿದ ಗುಂಪು) ವಿರುದ್ಧ ಅಂತರ್ಯುದ್ಧ ಕೈಗೊಂಡರು. ನಂತರ ಅವರು ಕೆಲವು ತಿಂಗಳುಗಳ ಕಾಲ ಒಂದು ಭಾಗದಲ್ಲಿ ನೆಸ್ಟರ್ ಮಾಕ್ನೋ ಅವರು ಹುಟ್ಟುಹಾಕಿದ ಅರಾಜಕತಾವಾದಿ ಸಂಸ್ಥೆಯಾದ ರೆವಲ್ಯೂಶನರಿ ಇನ್ಶೂರೆಕ್ಶನರಿ ಆರ್ಮಿ ಆಪ್ ಯುಕ್ರೇನ್‌ನ ಭಾಗವಾಗಿ ಕೆಲಸಮಾಡಿದರು. ಬೊಲ್ಶೆವಿಕ್ಸನ ನೀತಿಗಳು ಮತ್ತು ಕ್ರೋನ್‌ಸ್ಟ್ಯಾಡ್ಟ ನ ಮುಂದಾಳತ್ವವದ ಬಗ್ಗೆ ಬೇಸರಗೊಂಡು ಬರೆದ ಅಮೇರಿಕಾದ ಅರಾಜಕತಾವಾದಿಗಳಾದ ಎಮ್ಮಾ ಗೋಲ್ಡಮ್ಯಾನ್ ಮತ್ತು ಅಲೆಕ್ಸಾಂಡರ್ ಬರ್ಕ್‌ಮನ್‌ ಇವರು. ತಾವು ರಷ್ಯಾವನ್ನು ಬಿಟ್ಟು ತೆರಳುವ ಮುನ್ನ ತಮ್ಮ ಅಭಿಪ್ರಾಯವನ್ನು ಬರೆದಿದ್ದಾರೆ. ತಮ್ಮ ವಿಮರ್ಶೆಯಲ್ಲಿ ಅವರು ಬೊಲ್ಶೆವಿಕ್ಸನ ಗುಂಪಿನವರನ್ನುಹಿಡಿದಿಡುವ ನೀತಿಯನ್ನು ಟೀಕಿಸಿದ್ದಾರೆ. ಅವರ ವಿಚಾರದಲ್ಲಿ ಬಕುನಿಯನ್‌ರವವರ ವಿಮರ್ಶೆಯ ಪ್ರಕಾರ ಕಾರ್ಲ ಮಾಕ್ರ್ಸರವರ ಮುಂದೊದಗಬಹುದಾದ ಸಾಮಾಜಿಕತೆಯ ಪರಿಣಾಮಗಳನ್ನು ಅವಲೋಕಿಸಿದಾಗ ಮಾರ್ಕ್ಸ್‌‍ ವಾದ ಸರಣಿಯ ಸಾಮಾಜಿಕತೆಯು ಅತೀ ಶ್ರೇಷ್ಠ ನೆಲಗಟ್ಟಿನಲ್ಲಿ ನಿಲ್ಲುತ್ತದೆ. ಅಕ್ಟೋಬರ್ ತಿಂಗಳಿನಲ್ಲಿ ರಷ್ಯಾದ ಸಾಮಾಜಿಕ ಕ್ರಾಂತಿಯಲ್ಲಿ ಬೋಲ್ಶೆವಿಕ್ಸಗೆ ಆದ ಮಹಾಜಯವು ಅರಾಜಕತಾವಾದಿಗಳ ಮೇಲೆ ಅಂತರಾಷ್ಟ್ರೀಯವಾಗಿ ಬಹಳಷ್ಟು ದುಷ್ಪರಿಣಾಮಗಳನ್ನು ಬೀರಿತು. ಬಹಳಷ್ಟು ಕೆಲಸಗಾರರು ಮತ್ತು ಕಾರ್ಯಕರ್ತರು ಬೋಲ್ಶೆವಿಕ್ಸನ ಸಾಧನೆಯನ್ನು ತಮ್ಮ ಮುಂದಿರುವ ಉದಾಹರಣೆ ಎಂದು ಭಾವಿಸಿದರು. ಸಮತಾವಾದವು ಅರಾಜಕತಾವಾದಿಗಳು ವತ್ತು ಸಮಾಜವಾದಿಗಳ ಘರ್ಷಣೆಯಿಂದ ಹೊರಹೊಮ್ಮುವಂತಾಯಿತು. ಫ್ರಾನ್ಸ ಮತ್ತು ಅಮೇರಿಕಾಗಳಲ್ಲಿ, ಉದಾಹರಣೆಗೆ ಸಿ.ಜಿ.ಟಿ.ಮತ್ತು ಐ.ಡಬ್ಲೂ.ಡಬ್ಲೂದ ಪ್ರಮುಖ ಸದಸ್ಯರುಗಳು ಅಂತರಾಷ್ಟ್ರೀಯ ಸಮಾಜವಾದಿ ಸಂಘಟನೆಗೆ ಸೇರಿಕೊಳ್ಳತೊಡಗಿದರು. ಪ್ಯಾರೀಸ್‌ನಲ್ಲಿ ಬೋಲ್ಶೆವಿಕ್ಸನ ಪುನಶ್ಚೇತನಕ್ಕಾಗಿ ರಷ್ಯಾದ ಅರಾಜಕತಾವಾದಿ ನೆಸ್ಟರ್ ಮಾಕ್ನೋರವರ ಗುಂಪಾದ ದೈಲೋ ತ್ರುಡಾ ಗುಂಪನ್ನು ಗಡಿಪಾರು ಮಾಡಿದರು. ಅವರ ೧೯೨೬ರ ಪ್ರನಾಳಿಕೆಯು ಅರಾಜಕತಾವಾದಿ ಸಾಮಾನ್ಯ ವಿಭಾಗೀಯ ಸಂಸ್ಥೆಗಳ ಅಡಿಪಾಯ(Draft) ನ್ನು ಬೆಂಬಲಿಸಿದವು. ಇಂತಹ ಸಂಸ್ಥೆಗಳು ಇಂದು ಕಾರ್ಮಿಕರ ಒಕ್ಕೂಟ ಚಳುವಳಿಯಲ್ಲಿರುವವರನ್ನು ಸೇರಿಸಿಕೊಳ್ಳುತ್ತದೆ. ಐರ್ಲ್ಯಾಂಡ್, ಉತ್ತರ ಅಮೇರಿಕಾದ ಅರಾಜಕತಾವಾದಿ ಸಮತಾವಾದಿಗಳ ಸಂಸ್ಥೆ ಇವುಗಳಲ್ಲಿ ಸದಸ್ಯರನ್ನು ಹೊಂದಿವೆ. ಮಿಶ್ರ ಅರಾಜಕತಾವಾದಿ ಸಂಘಟನೆಗಳು ಈ ವೇದಿಕೆಗೆ ಪರ್ಯಾಯವಾಗಿ ಬೇರೆ ಬೇರೆ ಉದ್ದೇಶಗಳಿಂದ ಕೂಡಿ ಬೇರೆಬೇರೆ ತರಹದ ರೀತಿಯಲ್ಲಿ ಕಾರ್ಯೋನ್ಮುಖರಾದ ವಿವಿಧ ಸಂಘಟನೆಗಳು ಒಂದಾಗಿ ಹೊರಹೊಮ್ಮಿದವು. ೧೯೨೦ರಲ್ಲಿ ವೋಲಿನ್ ಮತ್ತು ಸೆಬಾಸ್ಟಿನ್ ಫೌರ್ ಇವರು ಮಿಶ್ರ ಅರಾಜಕತಾವಾದಿ ಸಂಘಟನೆಯ ಪ್ರಮುಖ ತತ್ವ ಪ್ರತಿಪಾಧಕರಾಗಿ ಕಾಣಿಸಿಕೊಂಡರು. ಇದೇ ಅರಾಜಕತಾವಾದಿಗಳ ಸಮಕಾಲೀನ ಜಾಗತಿಕ ಮತ್ತು ಅಂತರಾಷ್ಟ್ರೀಯ ಸಂಯುಕ್ತ ಒಕ್ಕೂಟ(fascism)ದ ಸಿದ್ಧಾಂತವಾಯಿತು.

ಅರಾಜಕತಾವಾದ 
ಪ್ರತಿಗಾಮಿ-ವಿರೋಧಿ ಮಾಕಿಸ್, ಇವರು ಯೂರೋಪಿನಲ್ಲಿ ನಾಜಿ ಮತ್ತು ಫ್ರ್ಯಾಂಕೋಯಿಸ್ಟ್ ಆಡಳಿತವನ್ನು ವಿರೋಧಿಸಿದರು.

ಎರಡನೇ ಮಹಾಯುದ್ಧ ಮತ್ತು ನಿರಂಕುಶ ಆಡಳಿತದ ವಿರುದ್ಧ ಹೋರಾಟ

೧೯೨೦ ಮತ್ತು ೧೯೩೦ನೇ ದಶಕಗಳಲ್ಲಿ ಯುರೋಪಿನಲ್ಲಿ ರಾಜ್ಯಾಡಳಿತದ ವಿರುದ್ಧ ಅರಾಜಕತಾವಾದಿ ಚಳುವಳಿಗಳು ಪ್ರಾರಂಭವಾದವು. ಇಟಲಿಯಲ್ಲಿ ಪ್ರಥಮಬಾರಿಗೆ ಸಾಮ್ರಾಜ್ಯಶಾಹಿಗಳು ಮತ್ತು ಅರಾಜಕತಾವಾದಿಗಳ ನಡುವೆ ವೈಮನಸ್ಸು ಪ್ರಾರಂಭವಾಯಿತು. ಇಟಲಿಯ ಅರಾಜಕತಾವಾದಿಗಳು ಅತ್ಯಂತ ಶಕ್ತಿಶಾಲಿ ಅರಾಜಕತಾವಾದಿ ಸಂಪ್ರದಾಯ ಹೊಂದಿದ ಸಾಮ್ರಾಜ್ಯಶಾಹಿ ವಿರೋಧಿ ಸಂಘಟನೆಯಾದ ಆರ್ದಿತಿ ಡೆಲ್ ಪೋಪೊಲೊ ಪರವಾಗಿ ಅತ್ಯಂತ ಪ್ರಮುಖ ಪಾತ್ರ ವಹಿಸಿದರು. ಮತ್ತು ಸ್ವಲ್ಪ ಪ್ರಮಾಣದ ಜಯವನ್ನೂ ಗಳಿಸಿದರು, ಫಾರ್ಮಾದಲ್ಲಿನ ಅರಾಜಕತಾವಾದಿಗಳ ಪ್ರಾಭಲ್ಯತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಅಗಸ್ಟ್ ೧೯೨೨ರಲ್ಲಿ ಬ್ಲ್ಯಾಕ್ ಶರ್ಟ ಪಡೆಯನ್ನು ಹಿಂದೆ ಸರಿಸುವಲ್ಲಿಯೂ ಕೂಡ ಯಶಸ್ವಿಯಾದರು. ಫ್ರಾನ್ಸನಲ್ಲಿ ಫಾರ್ ರೈಟ್ ಲೀಗ್ಸ ದಂಗೆಯು ಫೆಬ್ರುವರಿ ೧೯೩೪ರಲ್ಲಿ ಹತ್ತಿರ ಬರುತ್ತಿದ್ದಂತೆ ರೈತ ಸಂಘಟನೆಗಳು ಮತ್ತು ಕ್ರಾಂತಿಕಾರರ ಸಂಘಟನೆಗಳು ಒಗ್ಗೂಡಿ ಮುನ್ನಡೆಯುವಿಕೆಯ ನೀತಿಗೆ ಬದಲಾದರು. ಸ್ಪೇನ್‌ನಲ್ಲಿ ಸಿ.ಎನ್.ಟಿ.ಯು ಮೂಲತಃ ಚುನಾವಣಾ ಹೊಂದಾಣಿಕೆಯನ್ನು ತಿರಸ್ಕರಿಸಿದವು. ಸಿ.ಎನ್.ಟಿ.ಯ ಬೆಂಬಲಿಗರಿಗೆ ಚುನಾವಣೆಯಿಂದ ದೂರವಿರುವಂತೆ ಸೂಚಿಸಿತು. ಆದರೆ ೧೯೩೬ರಲ್ಲಿ ಸಿ.ಎನ್.ಟಿಯು ತನ್ನ ನಿಲುವನ್ನು ಬದಲಿಸಿ ಪೊಪ್ಯೂಲರ್ ಪ್ರಂಟ್ ಪಕ್ಷವನ್ನು ಪುನಃ ಅಧಿಕಾರಕ್ಕೆ ತರಲು ನೆರವಾಯಿತು. ಒಂದು ತಿಂಗಳ ನಂತರ ಮೊದಲು ಆಳುತ್ತಿದ್ದ ಸ್ಪೇನಿನ ಸಾಮಾಜಿಕ ಯುದ್ಧದಲ್ಲಿ ದಿಢೀರನೆ ಕಾಣಿಸಿಕೊಂಡವು(೧೯೩೬-೧೯೩೯) ಸೈನಿಕ ದಂಗೆಕೋರರ ವಿರುದ್ಧ ಕ್ರಾಂತಿಕಾರಕ ಸ್ಪೂರ್ತಿ ಪಡೆದು ರೈತರು ಮತ್ತು ಕಾರ್ಮಿಕರು ಶಸ್ತ್ರ ಸಜ್ಜಿತ ಸೈನ್ಯದ ಸಹಾಯದಿಂದ ಬಾರ್ಸಿಲೋನ್ ಮತ್ತು ಗ್ರಾಮೀಣ ಸ್ಫೇನ್ ಬೆಳೆ ಬೆಳೆಯುತ್ತಿರುವ ಕೃಷಿ ಕ್ಷೇತ್ರವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ೧೯೩೯ರ ಸಾಮ್ರಾಜ್ಯಶಾಹಿಗಳ ವಿಜಯದ ಮೊದಲು ಸೋವಿಯತ್ ಯುನಿಯನ್‌ನ ಸೈನಿಕ ಗಣತಂತ್ರವನ್ನು ನಿಗ್ರಹಿಸುತ್ತಿರುವ ಸ್ಟಾಲಿನ್‌ರ ಅನುಯಾಯಿಗಳಿಂದ ಅರಾಜಕತಾವಾದಿಗಳು ಬಹಳ ಕಷ್ಟಪಡುತ್ತಿದ್ದರು. ಸ್ಟಾಲಿನ್‌ರವರು ಮುಂದಾಳತ್ವವಹಿಸಿದ ಗುಂಪು ಮಾರ್ಕ್ಸ್‌ವಾದಿಗಳು ಮತ್ತು ಕ್ರಾಂತಿಗಳಿಬ್ಬರೂ ಗಳಿಸಿದ ಪ್ರದೇಶಗಳನ್ನು ಹಿಂಪಡೆಯಲು ಸಮರ್ಥವಾಯಿತು. ಪ್ರಾನ್ಸ ಮತ್ತು ಇಟಲಿಯಲ್ಲಿ ಅರಾಜಕತಾವಾದಿಗಳು ಏರಡನೇ ಮಹಾಯುದ್ಧದಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸಿದರು. ಅರಾಜಕತಾವಾದಿಗಳು ಫ್ರಾನ್ಸ್ ಮತ್ತು ಇಟಾಲಿಯಲ್ಲಿ ಎರಡನೇ ವಿಶ್ವಯುದ್ಧದ ವಿರುದ್ಧ ಸಕ್ರೀಯವಾಗಿದ್ದರು.

ಯುದ್ಧದ ನಂತರದ ವರ್ಷಗಳು

ಅರಾಜಕತಾವಾದಿಗಳಿಗೆ ಯುದ್ಧದ ನಂತರ ತಮ್ಮನ್ನು ತಾವು ಗುರುತಿಸಿಕೊಳ್ಳುವುದು ಅವಶ್ಯಕವಾಗಿತ್ತು ೧೯೪೧ರ ನಂತರ ಮೆಕ್ಸಿಕನ್ ಅನಾರ್ಕಿಸ್ಟ್‌ ಫೆಡರೇಷನ್ ಅಸ್ಥಿತ್ವಕ್ಕೆ ಬಂದಿತ್ತು. ೧೯೪೦ರ ದಶಕದ ಮೊದಲಲ್ಲಿ ಎಂಟಿಫೆಸಿಸ್ಟ್ ಇಂಟರ್ನ್ಯಾಶನಲ್ ಸೊಲಿಡೆಟರಿ ಮತ್ತು ಕ್ಯೂಬಾದ ಫೆಡರೇಶನ್ ಗ್ರುಪ್‌ಗಳು ಒಂದಾಗಿ ಕ್ಯೂಬನ್ ಲಿಬೇರಿಯನ್ ಅಸೋಸಿಯೇಶನ್ ಎಂಬ ಹೆಸರಿಂದ ಮುಂದುವರೆಯಿತು. ೧೯೪೫ರಲ್ಲಿ ಫ್ರಾನ್ಸನಲ್ಲಿ ಫೆಡರೇಶನ್ ಅನಾರ್ಕಿಸ್ಟ್ ಎಂಬ ಅರಾಜಕತಾವಾದಿ ಸಂಘಟನೆಯು ಸ್ಥಾಪಿಸಲ್ಪಟ್ಟಿತು ಮತ್ತು 'ಸಿಂತೆಸಿಸ್ಟ್ ಫೆಡರೆಶನ್ ಅನಾರ್ಚಿಕಾ ಇಟಾಲಿನಾ ಸಂಘಟನೆಯು ಹುಟ್ಟಿಕೊಂಡಿತು. ೧೯೫೬ರಲ್ಲಿ 'ಉರುಗ್ವಾಯನ್ ಅನಾರ್ಕಿಸ್ಟ ಫೆಡರೇಶನ್' ಎಂಬ ಸಂಸ್ಥೆಯು ಹುಟ್ಟಿಕೊಂಡಿತು. ೧೯೫೫ರಲ್ಲಿ 'ಅನಾರ್ಕೋ ಕಮ್ಯುನಿಸ್ಟ್ ಫೆಡರೇಶನ್ ಆಪ್‌ ಅರ್ಜೆಟೈನಾ' ಎಂಬ ಸಂಸ್ಥೆಯು 'ಅಜೆಂಟೈನ್ ಲಿಬರ್ಟಿರಿಯನ್ ಫೆಡರೇಶನ್' ಎಂದು ಮರುನಾಮಕರಣ ಮಾಡಿಕೊಂಡಿತು.೧೯೪೬ರಲ್ಲಿ 'ಜಪಾನಿಸ್ ಅನಾರ್ಕಿಸ್ಟ್ ಫೇಡರೇಶನ್' ಸಂಸ್ಥೆಯು ಹುಟ್ಟಿಕೊಂಡಿತು. ಅಲ್ಬರ್ಟ ಕಾಮೂ, ಹರ್ಬರ್ಟ ರೀಡ್, ಪಾಲ್ ಗುಡ್ಮ್ಯಾನ್, ಅಲ್ಲೆನ್ ಗಿನ್ಸಬರ್ಗದ ಮತ್ತು ಪ್ರೆಂಚ್‌ ಸರ್ರಿಯಲಿಸ್ಟ್‌ ಅಂಡ್ರೆ ಬಿಟೋನ್ ಇವರಿಂದ ಮುನ್ನಡೆಸಲ್ಪಟ್ಟ ಮತ್ತು ಸದ್ಯ ಅರಾಜಕತಾವಾದಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವ 'ಫೆಡರೇಶನ್ ಅನಾರ್ಕಿಸ್ಟ್' ಗಳು ಈಗಲೂ ಸಹ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳ ಕುರಿತಾಗಿನ ವಿಷಯಗಳಲ್ಲಿ ತನ್ನ ಪ್ರಭಾವ ಬೀರುತ್ತಿವೆ. 'ಅನಾರ್ಕೋ-ಪ್ಯಾಸಿಫಿಸಮ್' ಆಗಿನ ಕಾಲದಲ್ಲಿ ಪರಮಾಣು ವಿರುದ್ಧದ ಹೋರಾಟ ಮತ್ತು ಯುದ್ಧವಿರೋಧಿ ಹೊರಾಟಗಳಲ್ಲಿ ಅತ್ಯಂತ ಪ್ರಭಾವ ಬೀರಿದವು. ಇವುಗಳನ್ನು ಪರಮಾಣು ನಿಷೇಧ ನೀತಿಯ ಅಲೆಕ್ಸ್ ಕಂಫರ್ಟ್‌‍ ಕ್ರಾಂತಿಕಾರಿ ಸಂಘಟನೆಯ ಸದಸ್ಯರಾದ ಅಮೇರಿಕಾದ ಸಾಮ್ರಾಜ್ಯಶಾಹಿ ವಿರೋಧಿಗಳಾದ ಅಮ್ಮನ್ ಹೆನ್ಸಿಯವರ ಬರಹಗಳಲ್ಲಿ ಕಾಣಬಹುದು.

ಪರ್ಯಾಯ ಅರಾಜಕತಾವಾದ

ಅರಾಜಕತಾವಾದ 
ಬಾರ್ಸಿಲೋನಾದ ಮೇಲಿನಿಂದ ನೋಡಿದಾಗ ಕಾಣುವ ಪಾರ್ಕ್ ಗ್ವೆಲ್ ಸಮೀಪದ ಪ್ರಸಿದ್ಧ ಒಕುಪಾಸ್ ಸ್ಕ್ವಾಟ. ಅಪ್ಪಣೆ ಇಲ್ಲದೆ ಒಂದು ಸ್ಥಳದಲ್ಲಿ ವಾಸಮಾಡುವುದು 1960 ಮತ್ತು 1970ರ ವಿರೋಧಿ ಸಂಸ್ಕೃತಿಯಿಂದ ಹುಟ್ಟಿಕೊಂಡು ಪುನಶ್ಚೇತನಗೊಂಡ ಅರಾಜಕತಾವಾದಿ ಚಳುವಳಿಯ ಒಂದು ಮುಖ್ಯ ಭಾಗವಾಗಿತ್ತು.

೧೯೬೦ ಮತ್ತು ೧೯೭೦ರ ದಶಕಗಳಲ್ಲಿ ಹೆಚ್ಚಾಗಿ ಜನರಲ್ಲಿ ಕಅರಾಜಕತಾವಾದಿಮನೋಭಾವನೆತ್ತ ಒಲವು ಮೂಡಿತು. ಅರಾಜಕತಾವಾದಿ ಮನೋಭಾವನೆಯು ೧೯೬೦ರ ದಶಕದ ಸಾಂಸ್ಕ್ರತಿಕ ಬದಲಾವಣೆಗಳಲ್ಲೊಂದಾಗಿತ್ತು. ಮತ್ತು ಅರಾಜಕತಾವಾದಿಗಳು ೧೯೬೦ರ ಉತ್ತರಾರ್ದದಲ್ಲಿ ವಿದ್ಯಾರ್ಥಿಗಳು ಮತ್ತು ಕಾರ್ಮಿಕರ ಕ್ರಾಂತಿಗಳಲ್ಲಿ ಬಹುವಾಗಿ ಕಾಣಿಸಿಕೊಂಡವು. ೧೯೬೮ರಲ್ಲಿ ಇಟಾಲಿಯ ಕರಾರಾದಲ್ಲಿ ನಡೆದ, ಅಂತರಾಷ್ಟ್ರೀಯ ಅರಾಜಕತಾವಾದಿ ಫೆಡರೇಷನ್ ಅನ್ನು ಸ್ಥಾಪಿಸಲಾಯಿತು. ಅಂತರಾಷ್ಟ್ರೀಯ ಅರಾಜಕತಾವಾದಿ ಕಾನ್‌ಫರೆನ್ಸ್‌ ಅನ್ನು ೧೯೬೮ರಲ್ಲಿ ನಡೆಸಲಾಯಿತು. ಇದರಲ್ಲಿ ಫ್ರಾನ್ಸ್‌, ಇಟಾಲಿ ಮತ್ತು ಐಬೇರಿಯನ್ ಅನಾರ್ಕಿಸಮ್ ಫೆಡರೇಷನ್ ಸಂಘಟನೆಗಳು ಅಲ್ಲದೆ ಫ್ರೆಂಚ್‌ನ ಬಲ್ಗೇರಿಯಾ ಫೆಡರೇಷನ್‌ಗಳು ಭಾಗವಹಿಸಿದ್ದವು. ೧೯೭೦ರ ದಶಕದಲ್ಲಿ ಇದು ಇಂಗ್ಲಂಡ್‌ನ 'ಪಂಕ್ ರಾಕ್' ಚಳುವಳಿಯೊಂದಿಗೆ ಸೇರಿಕೊಂಡಿತ್ತು. ಈ ಸಮಯದಲ್ಲಿ ಉದಾಹರಣೆಗೆ ಕ್ರಾಸ್ ಮತ್ತು ಸೆಕ್ಸ್‌ ಪಿಸ್ತೋಲ್ ಬ್ಯಾಂಡ್‌ಗಳನ್ನು ಹೊರತುಪಡಿಸಲಾಗಿತ್ತು. ಯುರೋಪ್‌ನ ಹೆಚ್ಚಾಗಿ ಪಶ್ಚಿಮ ಭಾಗಗಳಲ್ಲಿ ವಾಸ್ತವ್ಯ ಮತ್ತು ನೌಕರಿಗಳು ಬಹುವಾಗಿ ಕ್ಷೀಣಿಸಿದವು. ಈ ಬೆಳವಣಿಗೆಯು ಬಾರ್ಸಿಲೋನಾ, ಸ್ಪೇನ್, ಡೆನ್ಮಾರ್ಕ, ಗಳಲ್ಲಾದಂತೆ ಖಾಲಿ ಇವರುವ ಜಾಗಗಳ ಅತಿಕ್ರಮಣಕ್ಕೆ ದಾರಿಯಯಿತು ಮತ್ತು ಕೊಫೆಗನ್‌ನ ಮಧ್ಯಭಾಗದಲ್ಲಿ ಸ್ವತಂತ್ರ ಪ್ರದೇಶಗಳೆಂದು ಸ್ವಯಂ ಘೋಷಿಸಿಕೊಂಡವು.

೨೦ನೇ ಶತಮಾನದ ಮಧ್ಯದಲ್ಲಿ ಪುನರುತ್ಥಾನದ ನಂತರ ಹೊಸ ಹೊಸ ಚಳುವಳಿಗಳು ಮತ್ತು ವಿಚಾರ ಶಾಲೆಗಳು ಹುಟ್ಟಿಕೊಂಡವು. ಯಾವಾಗಲೂ ಮಹಿಳಾವಾದಿಗಳು ಈ ಚಳುವಳಿಯ ಭಾಗವಾಗಿದ್ದರು ಇದನ್ನು ಹೆಚ್ಚಾಗಿ ಅರಾಜಕತಾ-ಮಹಿಳಾವಾದ ಎಂದು ಕರೆಯಲಾಗುತ್ತಿತ್ತು. ಈ ಚಳುವಳಿಯು ೧೯೬೦ರ ಮಹಿಳಾವಾದಕ್ಕೆ ಕಾರಣವಾಯಿತು. ಅಮೇರಿಕಾದ ಸಾಮಾಜಿಕ ಹಕ್ಕು ಚಳುವಳಿ ಮತ್ತು ವಿಯೆಟ್ನಂನಲ್ಲಿ ನಡೆದ ಯುದ್ಧ ವಿರೋಧಿ ಚಳುವಳಿಗಳು ಉತ್ತರ ಅಮೇರಿಕಾದ ಕ್ರಾಂತಿಯಲ್ಲಿ ತಮ್ಮ ಪಾತ್ರವಹಿಸಿದವು. ಯುರೋಪ್‌ನಲ್ಲಿಯ ಕ್ರಾಂತಿಯು ೨೦ನೇ ಶತಮಾನದಲ್ಲಿ ಕಾರ್ಮಿಕ ಚಳುವಳಿ ಮತ್ತು ಪ್ರಾಣಿ ಹಕ್ಕು ಚಳುವಳಿಗಳ ಮೂಲಕ ಹೆಚ್ಚಿನ ಶಕ್ತಿಯನ್ನು ಪಡೆಯಿತು. ಅರಾಜಕತಾವಾದಿ ಸಾಮಾಜಿಕ ವಿಜ್ಞಾನಿಯಾದ ಡೆವಿಡ್ ಗ್ರೇಬರ್ರವರು ಮತ್ತು ಕ್ರಾಂತಿ ಇತಿಹಾಸಕಾರರಾದ ಅಂದ್ರೇಜ್ ಗ್ರುಬಾಕಿಕ್‌ರವರು ಕ್ರಾಂತಿಯ ಪೀಳಿಗೆಯನ್ನು ವಿಭಾಗಿಸಿದರು. ಇದರಿಂದ ಯಾರು ೧೯ನೇ ಶತಮಾನದಲ್ಲಿ ಪಂಥಾನುಯಾಯಗಳಾಗಿ ಉಳಿದರೋ ಅಂತವರಿಗೇ ಹೆಚ್ಚು ಲಕ್ಷ್ಯವಹಿಸಿ ಯುವ ಕಾರ್ಯಕರ್ತರನ್ನು ಸಹಾಯಕ್ಕೆ ತೆಗೆದುಕೊಂಡು ಮನವೊಲಿಸುವ ಪ್ರಯತ್ನ ಮಾಡಲಾಯಿತು. ಅದರಲ್ಲಿ ಸ್ವದೇಶಿಯರು, ಸಾಮ್ರಾಜ್ಯ ವಿರೋಧಿಗಳು, ಮಹಿಳಾ ವಾದಿಗಳು ಪರಿಸರ ವಿಜ್ಞಾನ ಮತ್ತು ಸಾಂಸ್ಕ್ರತಿಕ ಸೂಕ್ಷ್ಮ ವಿಚಾರಗಳು ಸೇರಿದ್ದವು. ೨೧ನೇ ಶತಮಾನದಲ್ಲಿ ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರಾಜಕತಾವಾದಿಗಳಾಗಿ ಪರಿವರ್ತನೆಗೊಂಡರು. ೨೧ನೇ ಶತಮಾನಕ್ಕೆ ಕಾಲಿಡುತ್ತಿದ್ದಂತೆ ಕ್ರಾಂತಿಯು ಯುದ್ಧ ವಿರೋಧಿ, ಬಂಢವಾಳಶಾಹಿ ವಿರೋಧಿ, ಜಾಗತೀಕರಣ ವಿರೋಧಿ ಚಳುವಳಿ ಅತ್ಯಂತ ಪ್ರಭಾವ ಬೀರುವ ಭಾಗವಾಯಿತು. ಅರಾಜಕತಾವಾದಿಗಳು ವಿಶ್ವ ವ್ಯಾಪಾರ ಸಂಸ್ಥೆ, ಮತ್ತು '೮ದೇಶಗಳ ಗುಂಪು' ಮತ್ತು ವಿಶ್ವ ಅರ್ಥಶಾಸ್ತ್ರ ವೇದಿಕೆಗಳ ವಿರೋಧಿ ಗುಂಪೆಂದು ಪರಿಗಣಿಸಲ್ಪಟ್ಟಿತು. ಕೆಲವು ಅರಾಜಕತಾವಾದಿಗಳು ರೈತ ಪರ ಚಳುವಳಿಗಳಲ್ಲಿ ತೊಡಗಿಕೊಂಡರು. ಕೆಲವರು ರೈತರ ಆಸ್ತಿಪಾಸ್ತಿ ನಾಶದ ವಿರುದ್ಧ, ಮತ್ತು ಆರಕ್ಷರ ವಿರುದ್ಧ ಹಿಂಸಾಚಾರದ ಮುಖಾಮುಖಿ ಮತ್ತು ರೈತರ ವಿರುದ್ಧ ನಡೆಯುವ ಅವ್ಯಾಹತ ಕಿರುಕುಳದ ವಿರುದ್ಧ ಚಳುವಳಿಯಲ್ಲಿ ಪಾಲ್ಗೊಂಡರು. ಈ ಚಳುವಳಿಗಳು ವಿಶಿಷ್ಠ ಉದ್ದೇಶಕ್ಕಾಗಿ ಮಾತ್ರ, ಅಂದರೆ ಮುಖಂಡರ ರಹಿತವಾಗಿ, ಬ್ಲ್ಯಾಕ್ ಬ್ಲೋಕ್ಸ (black blocs) ಎಂದೇ ಕರೆಯಲಾಗುವ ಅನಾಮಧೇಯ ಅನುಚಿತ ವರ್ತನೆಯ, ಸಂಧರ್ಬಗಳಲ್ಲಿ ಮಾತ್ರ ಇಂತಹ ಚಳುವಳಿಗಳನ್ನು ಕೈಗೊಳ್ಳುತ್ತಿದ್ದರು. ಇತರ ಸಂಘಟನೆಗಳು ಸಾಂಸ್ಕ್ರತಿಕ ಭದ್ರತೆ, ಮತ್ತು ವಿಕೇಂದ್ರಿಕ್ರತ ಪದ್ಧತಿಗಳಾದ ಅಂತರ್ಜಾಲ ಮುಂತಾದವುಗಳ ಕಡೆ ಒಲವು ತೋರಿದವು. ಈ ಪರಿಶ್ರಮದ ನಿಚ್ಛಳವಾದ ಭೂಮಿಗುರುತು ವಿಶ್ವ ವ್ಯಾಪಾರ ಸಂಘಟನೆಯ ಮುಖಾಮುಖಿಯನ್ನು ೧೯೯೯ರಲ್ಲಿ 'ಸೀತ್ತಲ್'ದಲ್ಲಿ ಎದುರಿಸಬೇಕಾಯಿತು. ಅಂತರಾಷ್ಟ್ರೀಯ ಅರಾಜಕತಾವಾದಿ ಸಂಘಟನೆಗಳಾದ 'ಇಂಟರ್ನ್ಯಾಶನಲ್ ಫೆಡರೇಶನ್',ಸಂಘಟನೆಯು 'ಇಂಟರ್ನ್ಯಾಶನಲ್ ಆಪ್ ಅನಾರ್ಕಿಸ್ಟ್ ಫೇಡರೇಶನ್', ಇಂಟರ್ನ್ಯಾಶನಲ್ ವರ್ಕರ್ಸ್ ಅಸೋಸಿಯೇಸನ್, ಮತ್ತು ಇಂಟರ್ನ್ಯಾಶನಲ್ ಲಿಬಟೇರಿಯನ್ ಸೊಲಿಡೇಟರಿ'ಯೊಂದಿಗೆ ಇಂದಿಗೂ ಜೀವಂತವಾಗಿದೆ.

ಅರಾಜಕತಾವಾದಿ ಪರಂಪರೆ

ಅರಾಜಕತಾವಾದ 
ಗುಸ್ತೇವ್ ಕೋರ್ಬೆಟ್‌ರಿಂದ ತತ್ವಜ್ಞಾನಿ ಪೀಯರ್-ಜೋಸೆಫ್ ಪ್ರೊಡೊನ್‌‌ರ (1809–1865) ರೇಖಾಚಿತ್ರ. ಪ್ರೊಡೊನ್ ಅರಾಜಕತಾವಾದಿ ಮ್ಯುಚುವಲಿಸಂನ ಮೂಲ ಸಿದ್ಧಾಂತ ಪ್ರತಿಪಾದಕರಾಗಿ, ಮತ್ತು ನಂತರ ಹಲವಾರು ಇಚ್ಛಾ ಸ್ವಾತಂತ್ರವಾದಿ ಅರಾಜಕತಾವಾದಿ ಚಿಂತಕರನ್ನು ಪ್ರಭಾವಿತಗೊಳಿಸಿದ್ದಾರೆ.

ಅರಾಜಕತಾವಾದಿ ವಿಚಾರವಾದಿ ಪರಂಪರೆಯನ್ನು ಸಾಮಾನ್ಯವಾಗಿ ವಯುಕ್ತಿಕ ಕ್ರಾಂತಿ ಮತ್ತು ಸಾಮಾಜಿಕ ಕ್ರಾಂತಿ ಎಂದು ಎರಡು ವಿಭಾಗಗಳಾಗಿ ವಿಂಗಡಿಸಬಹುದು ಏಕೆಂದತೆ ಅವುಗಳ ಮೂಲ ಉದ್ದೇಶಗಳು ಮತ್ತು ಮೌಲ್ಯಗಳು ಮತ್ತು ವಿಕಸನದ ಹಾದಿಯನ್ನು ಬೇರೆ ಬೇರೆ ಹೊಂದಿವೆ. ವಯಕ್ತಿಕ ಶಾಖೆಯು ಋಣಾತ್ಮಕ ಸ್ವಾತಂತ್ರ್ಯದ ಬಗ್ಗೆ ಹೆಚ್ಚು ಒಲವು ತೋರುತ್ತದೆ.ಉ.ದಾ: ರಾಜ್ಯ ಅಥವಾ ಸಾಮಾಜಿಕ ಅಧಿಕಾರವು ಖಾಸಗಿ ತನದ ಮೇಲೆ ಸ್ವಾಮ್ಯತ್ವವನ್ನು ಸಾಧಿಸುವುದು. ಆದರೆ ಸಾಮಾಜಿಕ ಶಾಖೆಯು ಧನಾತ್ಮಕ ಸ್ವಾತಂತ್ರ್ಯದ ಬಗ್ಗೆ ಒಲವು ತೋರಿಸುತ್ತದೆ. ಒಬ್ಬನ ಸಾಮರ್ಥ್ಯದ ಬಗ್ಗೆ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಮತ್ತು ಸಮಾನತೆಯ ಬಗ್ಗೆ ಹೇಳುತ್ತದೆ. ಇವು ಕಾಲಾನುಕ್ರಮದ ಮತ್ತು ಸೈದ್ಧಾಂತಿಕ ಮತ್ತು ಶಾಸ್ತ್ರೀಯ ವಿಚಾರಗಳನ್ನು ೧೯ನೇ ಶತಮಾನದುದ್ದಕ್ಕೂ ಉತ್ಪತ್ತಿ ಮಾಡಿದವು. ಮತ್ತು ಮುಂದುವರಿದ ಶಾಸ್ತ್ರೀಯ ಕ್ರಾಂತಿ ವಿಚಾರವಾದದ ಶಾಲೆಗಳು ೨೦ನೇ ಶತಮಾನದ ಮಧ್ಯದಲ್ಲಿ ಮತ್ತು ನಂತರ ಪ್ರಭಾವ ಬೀರಿದವು. ಒಂದು ವಿಧವಾದ ಅರಾಜಕತಾವಾದಿ ಒಳಪಕ್ಷವನ್ನು ಮೀರಿ ಸಂಪೂರ್ಣವಾಗಿ ಪದ್ಧತಿಯನ್ನೇ ಕಿತ್ತೊಗೆಯುವ ಬದಲಾಗಿ ಅದರಲ್ಲೂ ವಯಕ್ತಿಕ ಕ್ರಾಂತಿಯಲ್ಲಿ ಸೈದ್ಧಾಂತಿಕವಾದ ವಿಚಾರವಾದವನ್ನು ಕೈಗೊಂಡವು. ಸೈದ್ಧಾಂತಿಕ ಅರಾಜಕತಾವಾದಿ ವಿಚಾರವಾದವು ಸಣ್ಣಪ್ರಮಾಣದ ಅಭಾಗ್ಯವಂತಿಕೆ ಯನ್ನು ಒಪ್ಪಿಕೊಳ್ಳುತ್ತದೆ, ಮತ್ತು ಹೆಚ್ಚಾಗಿ ಅವು ತಾತ್ಕಾಲಿಕವಾಗಿರುತ್ತದೆ. ಸಣ್ಣ ಅಪರಾಧವು ಸಾಮಾನ್ಯವಾಗಿರುತ್ತದೆ ಮತ್ತು ಅದರ ವಾದವೇನೆಂದರೆ ಖಾಸಗಿಯಾಗಿ ಒಪ್ಪಿಕೊಳ್ಳಲಾಗದ ಯಾವುದೇ ಕಾಯಿದೆಯನ್ನು ಒಪ್ಪಿಕೊಳ್ಳಲು ಯಾವುದೇ ಕಾರಣಗಳಿರುವುದಿಲ್ಲ. ೧೮೮೯ರಲ್ಲಿ ಫರ್ನಾಡೋ ತಾರಿದಾ ಡೆಲ್ ಮಾರ್ಮೋಲ್‌ರವರು ಮೊದಲಬಾರಿಗೆ ನೀಡಿದ ಚರ್ಚಾತ್ಮಕ ಹೇಳಿಕೆಯಾದ ಅರಾಜಕತಾವಾದಿ ವಿಚಾರವಾದದಲ್ಲಿ ಅಂಧಾಭಿಮಾನದ ವಿರುದ್ಧವಾದ ಒಂದು ವಾದವೆಂದರೆ ಇದೊಂದು ಉದ್ದೇಶವೇ ಇಲ್ಲದ ಅರಾಜಕತಾವಾದಿ ವಿಚಾರವಾಗಿದೆ. ಕ್ರಾಂತಿವಾದವು ಸ್ವೇಚ್ಛಾಚಾರಕ್ಕೆ ಸಮನಾಗಿದೆ.(ಸಮಷ್ಠಿಸಾಮ್ಯವಾದಿ, ಸಮುದಾಯ ಸ್ವಾಮ್ಯವಾದಿ, ಸಹಜೀವನವಾದಿ ಮತ್ತು ವ್ಯಕ್ತಿ ಸ್ವತಂತ್ರ್ಯವಾದಿ ಅರಾಜಕತಾ ವಾದ) ಅಧಿಕಾರ ವಿರೋಧಿ ನೀತಿಯನ್ನು ಸಾಮಾನ್ಯವಾಗಿ ಇಂಥ ಎಲ್ಲ ಶಾಲೆಗಳಲ್ಲಿ ಹೇಳಿಕೊಡಲಾಗುತ್ತಿದೆ.

ಪರಸ್ಪರಾವಲಂಬನೆ

ಪರಸ್ಪರಾವಲಂಬನವಾದವು ೧೮ನೇ ಶತಮಾನದಲ್ಲಿ ಫ್ರೆಂಚ್ ಮತ್ತು ಇಂಗ್ಲಿಷ್ ಕಾರ್ಮಿಕ ಚಳುವಳಿಗಳು ಅರಾಜಕತಾವಾದಿ ಚಳುವಳಿಗಳನ್ನು ಫ್ರಾನ್ಸ್‌ನಲ್ಲಿ ಫೈರ್ರೆ-ಜೊಸೆಫ್ ಪ್ರೌಡನ್‌ರವರಿಂದ ಮತ್ತು ಅಮೇರಿಕಾದಲ್ಲಿ ಇತರರಿಂದ ಪಡೆಯುವ ಮೊದಲು ಪ್ರಾರಂಭವಾದವು. ಫ್ರೌಡನ್‌ನವರು ಒಂದು ಸ್ವಯಂಪ್ರೇರಿತ ನಿಯಮಬದ್ಧತೆಯನ್ನು ಸೂಚಿಸಿದರು ಎಲ್ಲಿ ಸಂಘಟನೆಗಳು ಕೇಂದ್ರೀಯ ಅಧಿಕಾರವನ್ನು ಹೊರತುಪಡಿಸಿ ಹೆರಹೊಮ್ಮುತ್ತದೆಯೋ ಅಂತಹ ಗುಣಾತ್ಮಕ ಅನೊನ್ಯತಾವಾದವು ಪ್ರಶ್ನೆಯು ಎಲ್ಲಿ ಉದ್ಬವಿಸುತ್ತದೆ ಎಂದರೆ ಯಾವಾಗ ಪ್ರತಿಯೊಬ್ಬನು ತನ್ನ ಇಷ್ಟದಂತೆ ನಡೆದುಕೊಳ್ಳುತ್ತಾನೋ ಮತ್ತು ತನ್ನ ಇಷ್ಟದಂತೆ ಮಾತ್ರ ನಡೆದುಕೊಳ್ಳುತ್ತಾನೋ ಆವಾಗ ವ್ಯವಹಾರಗಳು ತನ್ನಿಂದ ತಾನೆ ಸಾಮಾಜಿಕ ನಿಯಮ ಬದ್ಧತೆಯು ಭದ್ರವಾಗುತ್ತದೆ. ಪರಸ್ಪರಾವಲಂಬನವಾದವು ಪರಸ್ಪರ ಸಂಬಂಧತೆ, ಮುಕ್ತ ಸಂಘಟನೆ,ಸ್ವಯಂ ಪ್ರೇರಿತ ಕರಾರು, ಸಂಘಟನೆಗಳು, ಮತ್ತು ಸಾಲ ಅಥವಾ ಹಣದ ಸುಧಾರಣೆಗಳಿಗೆ ಸಂಬಂಧಿಸಿದ್ದಾಗಿದೆ. ವಿಲಿಯಂ ಬ್ಯಾಚಲ್ಡರ್ ಗ್ರೀನಿಯವರು ಹೇಳಿದಂತೆ ಪರಸ್ಪರಾವಲಂಬನವಾದದಲ್ಲಿ ಭಾಗಿಯಾದ ಪ್ರತಿಯೊಬ್ಬನೂ ಅವನ ಕೆಲಸಕ್ಕೆ ತಕ್ಕ ಸಂಬಳವನ್ನು ಪಡೆಯುತ್ತಾನೆ.ಸೇವೆಯ ಮೌಲ್ಯವನ್ನು ಸೇವೆಯಿಂದಲೇ ಲಾಭ ಅಥವಾ ನಷ್ಟವಾಗದಂತೆ ಅಳೆಯಲಾಗುವುದು. ಪರಸ್ಪರಾವಲಂಬನವಾದವು ಕ್ರಾಂತಿಯ ವಯಕ್ತಿಕ ಸ್ವತಂತ್ರ್ಯವಾದ ಮತ್ತು ಒಂದುಗುಡುವಿಕೆಯ ಪೂರ್ವಸ್ಮರಣೆಯನ್ನು ಹೊಂದಿ ಅವುಗಳೆರಡರ ಮಧ್ಯೆ ಸ್ಥಳ ಪಡೆದುಕೊಂಡಿದೆ. ಫ್ರೌಡನ್ನನು ಮೊದಲಬಾರಿಗೆ ಸಮತಾವಾದ ಮತ್ತು ಆಸ್ತಿವಾದದ ಸಂಯೋಜನೆಯಾದ ಸಮಾಜದ ಮೂರನೇ ವಿಧವನ್ನು ನಿಗದಿಪಡಿಸಿದನು.

ವೈಯುಕ್ತಿಕ ಅರಾಜಕವಾದ

ವೈಯುಕ್ತಿಕ ಅರಾಜಕವಾದವು ವಿವಿಧ ರೀತಿಯ ಅರಾಜಕತಾವಾದ ವಿಚಾರವಾದಗಳಿಂದ ಹೊರಹೊಮ್ಮಿದೆ. ಖಾಸಗಿ ಕ್ರಾಂತಿಯು ಒಕ್ಕೂಟಗಳು, ಸಮಾಜ, ಸಂಸ್ಕೃತಿ,ಆದರ್ಶ ವ್ಯವಸ್ಥೆಗಳು ಪ್ರಭಾವ ಬೀರಿದವು. ವ್ಯಕ್ತಿ ಸ್ವಾತಂತ್ರ್ಯವಾದವು ಕೇವಲ ಏಕೈಕ ತತ್ವಜ್ಞಾನವಾಗಿರದೇ ಅವು ಖಾಸಗಿ ವಾದಿಗಳ ಗುಂಪಿನಿಂದ ಕೂಡಿದೆ ಅವು ಕೆಲವೊಂದು ಸಂದರ್ಭಗಳಲ್ಲಿ ಮುಖಾಮುಖಿಯಾದ ಸಂಧರ್ಬಗಳು ಇವೆ.

ಅರಾಜಕತಾವಾದ 
19ನೆಯ ಶತಮಾನದ ತತ್ವಜ್ಞಾನಿ ಮ್ಯಾಕ್ಸ್ ಸ್ಟಿರ್ನರ್, ಇವರನ್ನು ಆರಂಭದ ಮುಖ್ಯವಾದ ಇಚ್ಛಾ ಸ್ವಾತಂತ್ರವಾದಿ ಅರಾಜಕತಾವಾದಿ ಎಂದು ಪರಿಗಣಿಸಲಾಗುತ್ತದೆ (ಫ್ರೈಡ್‌ರಿಚ್ ಏಂಜಲ್‌ರ ಚಿತ್ರ‌).

೧೭೯೩ರಲ್ಲಿ ವಿಲಿಯಂ ಗಾಡ್ವಿನ್‌ರು ಮೊದಲ ಕ್ರಾಂತಿವಾದಿಯೆಂದು ಪ್ರಮಾಣಿಸಲ್ಪಟ್ಟರು. ಅವರು ರಾಜಕೀಯ ನ್ಯಾಯ ವನ್ನು ಬರೆದರು. ಕೆಲವರ ಅಭಿಪ್ರಾಯದಂತೆ ಅದು ಮೊದಲ ಅಭಿವ್ಯಕ್ತಿ ಎಂದು ಕರೆಯಲ್ಪಟ್ಟಿದೆ. ಸೈದ್ಧಾಂತಿಕ ಅರಾಜಕತಾವಾದಿ ಗಾಡ್ವಿನ್, ತಾರ್ಕಿಕತೆ ಮತ್ತು ಉಪಯುಕ್ತವಾದವನ್ನು ಆಧಾರವಾಗಿರಿಸಿಕೊಂಡು ಕ್ರಾಂತಿಕಾರಕ ಕಾರ್ಯವನ್ನು ವಿರೋಧಿಸಿದರು. ಅತಿಸೂಕ್ಷ್ಮ ರಾಜ್ಯವನ್ನು ಸಧ್ಯದ ಪರಿಸ್ಥಿತಿಯಲ್ಲಿ ಈ ಯೋಚನೆಯ ವಿವೇಚನೆ ಬೆಳವಣಿಗೆಯಿಂದ ಅಧಿಕಾರ ರಹಿತ ಹಾಗೂ ಅಪ್ರಸ್ತುತವಾದ ಪರಿಸ್ಥಿತಿಯನ್ನು ಹುಟ್ಟುಹಾಕುತ್ತದೆ. ಗಾಡ್ವಿ‍ನ್‌ರವರು ಅತಿಯಾಗಿ ವ್ಯಕ್ತಿ ಸ್ವ್ಯಾತಂತ್ರ್ಯ ವಾದವನ್ನು ವಹಿಸುತ್ತಿದ್ದರು. ಅವರು ಹೇಳಿದಂತೆ ಸಾರ್ವಜನಿಕರಿಗೆ ಹಿತವಾಗಬೇಕೆಂದರೆ ಕಾರ್ಮಿಕರ ನಡುವಿನ ಕಾರ್ಯಕ್ಷೇತ್ರದಲ್ಲಿ ಸಹಕಾರ ಮನೋಭಾವನೆಯನ್ನು ತೊಲಗಿಸಬೇಕು. ಗಾಡ್ವಿನ್‌ರವರು ಉಪಯೋಗವಾದಿಯಾಗಿದ್ದರು. ಅವರ ಪ್ರಕಾರ ಎಲ್ಲ ವ್ಯಕ್ತಿಯೂ ಸಮನಾದ ಉಪಯುಕ್ತತೆಯನ್ನು ಹೊಂದಿರಲಾರ, ಆತ ಸಮಾಜಕ್ಕೆ ನೀಡಿದ ಕೊಡುಗೆಗಳ ಮೇಲೆ ಆತನ ಮೌಲ್ಯವು ನಿರ್ಧಾರವಾಗುತ್ತದೆ. ಆದ್ದರಿಂದ ಅವರು ಯಾವಾಗಲೂ ಸಮಾನ ಹಕ್ಕುಗಳನ್ನು ವಿರೋಧಿಸಿದರು. ಆದರೆ ಸಮಾಜದ ಒಳಿತಿಗಾಗಿ ಪ್ರತಿಯೊಬ್ಬ ಮನುಷ್ಯನಿಗೂ ಸಹಕಾರವನ್ನು ನೀಡಬೇಕು. ಗಾಡ್ವಿನ್‌ರವರು ಸರ್ಕಾರವನ್ನು ವಿರೋಧಿಸಿದರು ಏಕೆಂದರೆ ಯಾವುದು ಹೆಚ್ಚು ಉಪಯುಕ್ತವಾಗಿರುವುದೋ ಅಂತಹ ವಯಕ್ತಿಕ ತೀರ್ಪಿಗೆ ಯಾವುದೇ ಮಹತ್ವವನ್ನು ನೀಡದೇ ಇರುವುದೇ ಆಗಿತ್ತು. ಮತ್ತು ಅಧಿಕಾರ ವರ್ಗದವರು ವಯಕ್ತಿಕ ಹಿತವನ್ನು ಅಲಕ್ಷಿಸಿದವು. ಗಾಡ್ವಿನ್‌ರವರ ಈ ವಾದದಿಂದಾಗಿ ಉಪಯುಕ್ತತಾ ವಾದದ ಪ್ರೋತ್ಸಾಹವು ತೆಗೆದುಹಾಕಲ್ಪಟ್ಟಿತು. ಮತ್ತು ಸ್ಟಿನ್ನರ್‌ರವರಿಂದ ನಂತರ ಬೆಳವಣಿಗೆಗಳನ್ನು ಕಂಡಿತು. ಅತಿಯಾದ ವ್ಯಕ್ತಿ ಸ್ವ್ಯಾತಂತ್ರ ವಾದದ ಕ್ರಾಂತಿಕಾರಕ ವಿಧವನ್ನು ಅಹಂಕಾರ (egoism) ಎಂದು ಕರೆಯುತ್ತಾರೆ.ಅಥವಾ ಅಹಂಕಾರ ಅರಾಜಕತೆಯು ವ್ಯಕ್ತಿ ಸ್ವ್ಯಾತಂತ್ರ ವಾದವು ಪ್ರಸಿದ್ಧ ಪ್ರತಿಪಾದಕರಾದ ಮ್ಯಾಕ್ಸ ಸ್ಟಿರ್ನರ್ ಇವರಿಂದ ನಿರೂಪಿಸಲ್ಪಟ್ಟಿತು. ೧೮೪೪ರಲ್ಲಿ ಸ್ಟಿರ್ನರ್‌ರವರ ತತ್ವಶಾಸ್ತ್ರಕ್ಕೆ ಸಂಬಂಧಿಸಿದ ದಿ ಎಗೋ ಎಂಡ್ ಇಟ್ಸ ಓನ್ ಪುಸ್ತಕವು ಬಿಡುಗಡೆಯಾಯಿತು. ಸ್ಟಿರ್ನರ್‌ರವರ ಪ್ರಕಾರ ಪ್ರತಿಯೊಬ್ಬನ ಮೇಲೂ ಹೇರಬಹುದಾದ ಮಿತಿಯೆಂದರೆ ಕೇವರ ಅವನ ಇಚ್ಛೆಯ ಪ್ರಕಾರ ವಸ್ತುವನ್ನು ಪಡೆಯ ಬಹುದಾದ ಶಕ್ತಿಯನ್ನು ದೇವರನ್ನೋ ಅಥವಾ ಇನ್ನಾವುದೋ ಶಕ್ತಿಯನ್ನು ನಂಬದೇ ಗಳಿಸಿಕೊಳ್ಳುವುದು. ಸ್ಟಿರ್ನರ್‌ರವರ ಪ್ರಕಾರ ಹಕ್ಕುಗಳು ಮನಸ್ಸಿಲ್ಲಿ ತುಂಬಿರುವ ಪಿಶಾಚಿ ಗಳಾಗಿದ್ದವು. ಸಮಾಜ ಎಂಬುದಿಲ್ಲ ವೈಯಕ್ತಿಕತೆಯೆ ಸತ್ಯ ಎಂದು ಪ್ರತಿಪಾದಿಸಿದರು. ಸ್ಟಿರ್ನರ್‌ರವರ ಅಹಂಕಾರ ವಾದದ ಸ್ವ- ಸಮರ್ಥನೆ ಮತ್ತು ಮುಂಗಾಣಬಹುದಾದ ನಿರೀಕ್ಷೆಯನ್ನು ಹೆಚ್ಚಾಗಿ ಪ್ರತಿಪಾದಿಸಿದರು. ಸರ್ಕಾರದ ಎಲ್ಲ ಪಕ್ಷಗಳಿಂದಲೂ ಅವ್ಯವಸ್ಥಿತವಾದ ಕಾರ್ಯಗಳನ್ನು ಅಲ್ಲಗಳೆದು ವ್ಯವಸ್ಥಿತವಾದ ಸಂಘಟನೆಯನ್ನು ಬೋದಿಸಿದರು. ಅಹಂಕಾರ ಕ್ರಾಂತಿಕಾರರ ಪ್ರಕಾರ ಅವರ ಸಂಘಟನೆಯು ಒಂದು ನಿಜವಾದ ಹೋರಾಟಗಾರರ ಒಂದು ಸಂಘಟನೆಯಾಗಿದೆ. ಸ್ಟಿರ್ನರ್‌ರವರ ತತ್ವಜ್ಞಾನದಿಂದ ಅಹಂಕಾರವಾದವು ಬಹಳಷ್ಟು ಸ್ಪೂರ್ತಿಗೊಂಡಿದೆ. ಇದು ಜರ್ಮನ್ ತತ್ವಜ್ಞಾನಿ ಮತ್ತು ಕ್ರಾಂತಿಕಾರರಾದ ಎಲ್.ಜಿ.ಬಿ.ಟಿ. ಕಾರ್ಯಕರ್ತರಾದ ಜೋನ್ ಹನ್ರಿಮಕಾಯ್ ಇವರಿಂದ ಮತ್ತೊಮ್ಮೆ ಬೆಳಕಿಗೆ ಬಂದಿತು. ವೈಯುಕ್ತಿಕ ಅರಾಜಕತಾವಾದವು ಸಮಾಜದ ಕಟ್ಟುಪಾಡುಗಳನ್ನು ಲೆಕ್ಕೆಸದ ಯುರೋಪಿನ ಬೋಹೆಮಿಯಾದ ಕಲಾವಿದರು ಮತ್ತು ಬುದ್ಧಿವಂತರಿಂದ ಹೊಂದಿಕೊಂಡಿರುವ ಸ್ಟಿರ್ನರ್‌ರವರಿಂದ ಪ್ರೇರೆಪಿಸಲ್ಪಟ್ಟಿತು. ಹಾಗೆಯೇ ಕಾನೂನು ಬಾಹಿರ ಮತ್ತು ವೈಯುಕ್ತಿಕ ಸುಧಾರಣೆಯನ್ನು ಯುವ ಅರಾಜತಾವಾದವು ಒಳಗೊಂಡಿತ್ತು ಎಂದು ಹೇಳಲಾಗುತ್ತದೆ. (ನೋಡಿ, ಯುರೋಪ್‌ ವೈಯುಕ್ತಿಕ ಅರಾಜಕತಾವಾದ)

ಸಾಮಾಜಿಕ ಅರಾಜಕತಾವಾದ

ಸಾಮಾಜಿಕ ಅರಾಜಕತೆಯನ್ನು ಹೀಗೆ ಬಣ್ಣಿಸಲಾಗುತ್ತದೆ, ಸಾರ್ವಜನಿಕ ಮಾಲೀಕತ್ವದಲ್ಲಿ ಎಲ್ಲ ಆಡಳಿತ ವಿಭಾಗಗಳು ಪ್ರಜಾಸತ್ತಾತ್ಮಕ ನಿಯಂತ್ರಣಕ್ಕೆ ಒಳಪಡುತ್ತವೆ. ಇದರಲ್ಲಿ ಸರ್ಕಾರದ ಅಧಿಕಾರವಾಗಲೀ ಅಥವಾ ಬಲವಂತದ ಅಧಿಕಾರವಾಗಲಿ ಇರುವುದಿಲ್ಲ. ಇದು ಅರಾಜಕತೆಯ ದೊಡ್ಡ ಪರಂಪರೆಯಾಗಿದೆ. ಸಾಮಾಜಿಕ ಅರಾಜಕತಾವಾದವು ಖಾಸಗೀ ಆಸ್ತಿಗಳನ್ನು ಬಹಿಷ್ಕರಿಸುತ್ತವೆ. ಏಕೆಂದರೆ ಇದು ಸಾಮಾಜಿಕವಾಗಿ ಅಸಮಾನತೆಯನ್ನು ತೋರಿಸುತ್ತದೆ ಮತ್ತು ಪರಸ್ಪರ ಸಹಕಾರ ಹಾಗೂ ಒಟ್ಟುಗೂಡುವಿಕೆಯ ಕೆಲಸಕ್ಕೆ ಇದು ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದೆ.

ಅರಾಜಕತಾವಾದ 
ರಷಿಯಾದ ಸಿದ್ಧಾಂತವಾದಿ ಪೀಟರ್ ಕ್ರೊಪೊಟ್ಕಿನ್‌ (1842–1921), ಅರಾಜಕತಾವಾದಿ ಸಮತಾವಾದ ಬೆಳವಣಿಗೆಯಲ್ಲಿ ಒಬ್ಬ ಪ್ರಭಾವಿ ವ್ಯಕ್ತಿ.

ಸಮಷ್ಟಿಸ್ವಾಮ್ಯವಾದಿ ಅರಾಜಕತಾವಾದವೂ ಸಹ ಕ್ರಾಂತಿಕಾರಿ ಸಮಾಜವಾದ ಅಥವಾ ಅದೇ ರೀತಿಯಾದ ಕ್ರಾಂತಿಕಾರಿ ರೂಪದ ಅರಾಜಕತೆಯನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಇದನ್ನು ಮಿಕೇಲ್ ಬಕುನಿಯನ್ ಮತ್ತು ಜೋಹನ್ ಮೋಸ್ಟ್ ಪ್ರತಿಪಾದಿಸಿದ್ದಾರೆ. ಸಮಷ್ಟಿಸ್ವಾಮ್ಯವಾದಿ ಅರಾಜಕತಾವಾದಿಗಳು ಖಾಸಗೀ ಮಾಲಿಕತ್ವವನ್ನು ವಿರೋಧಿಸುತ್ತಾರೆ. ಜತೆಗೆ ಮಾಲಿಕತ್ವವು ಸಮಾಜದ ಒಡೆತನದಲ್ಲಿರಬೇಕು ಎಂಬುದನ್ನು ಸೂಚಿಸುತ್ತಾರೆ. ಇದನ್ನು ಹಿಂಸಾತ್ಮಕ ಕ್ರಾಂತಿಯಿಂದ ಪಡೆಯಲಾಗಿದ್ದು, ಇದು ಮೊದಲು ಪ್ರಾರಂಭವಾಗಿದ್ದು ಸಣ್ಣ ಪ್ರಮಾಣದ ಸಂಘಟನೆಯಿಂದ ಹಿಂಸಾತ್ಮಕ ಕಾಯ್ದೆಯಿಂದ ಅಥವಾ "ಪ್ರಚಾರದ ಒಪ್ಪಂದ"ದಿಂದಾದುದಾಗಿದೆ. ಇದು ಕಾರ್ಮಿಕರಿಗೆ ಸ್ಫೂರ್ತಿಯನ್ನು ನೀಡಿ ದಂಗೆ ಏಳುವಂತೆ ಮಾಡಿತು ಮತ್ತು ಅಭಿವೃದ್ಧಿಯ ಒಡೆತನವು ಸಮಷ್ಟಿ ಸ್ವಾಮ್ಯವಾದಿಯಾಗಲು ಹೆಚ್ಚಿನ ಒತ್ತಡವನ್ನು ತರುವಂತೆ ಮಾಡಿತು. ಆದಾಗ್ಯೂ ಸಮಷ್ಟಿಸ್ವಾಮ್ಯವಾದವು ಆದಾಯದ ವಿತರಣೆಯಲ್ಲಿ ವಿಸ್ತರಣೆ ಹೊಂದಲಿಲ್ಲ. ಕೆಲಸಗಾರರು ಸಮಯದ ಕೆಲಸಕ್ಕೆ ಹಣ ಪಾವತಿ ಮಾಡಬೇಕಿತ್ತು. ಅವಶ್ಯಕತೆಗೆ ತಕ್ಕಂತೆ ಪಡೆದುಕೊಂಡ ಸರಕನ್ನು ಅರಾಜಕತಾವಾದ ಸಾಮುದಾಯಿಕ ಸಿದ್ಧಾಂತದ ಅಡಿಯಲ್ಲಿ ವಿತರಣೆ ಮಾಡಬೇಕಿತ್ತು. ಈ ಘಟ್ಟವನ್ನು ಸ್ಥಿರೀಕೃತ ವೇತನ ಪದ್ಧತಿ ಎಂದು ಅರಾಜಕತಾವಾದದ ಸಮುದಾಯಸ್ವಾಮ್ಯವಾದಿಗಳು ವಿಶ್ಲೇಷಿಸಿದರು. ಸಮಷ್ಟಿಸ್ವಾಮ್ಯವಾದ ಸಾಮುದಾಯಿಕ ಸಿದ್ಧಾಂತವು ಮಾರ್ಕ್ಸ್ ವಾದದ ಸಮಕಾಲೀನ ಸಂದರ್ಭದಲ್ಲಿ ಆಚರಣೆಗೆ ಬಂದಿತ್ತು. ಆದರೆ ಅರಾಜಕತಾವಾದಿ ಕಮ್ಯುನಿಸ್ಟ್‌ರಿಂದ ಇದರಲ್ಲಿಯ ಕಾರ್ಮಿಕ ವರ್ಗದವರ ಮೇಲೆ ನಡೆಸುವ ಸರ್ವಾಧಿಕಾರವನ್ನು ವಿರೋಧಿಸಿದೆ. ಸಮಷ್ಟಿ ಅರಾಜಕತಾವಾದವು ಮಾರ್ಕ್ಸ್‌ ವಾದದ ಜೊತೆಜೊತೆಗೆ ಬೆಳೆದು ಬಂದಂತದ್ದಾಗಿದೆ. ಆದರೆ ಮಾರ್ಕ್ಸ್‌ವಾದಿಗಳ ಶ್ರಮಿಕ ವರ್ಗದ ಸರ್ವಾಧಿಕಾರತೆಯನ್ನು ವಿರೋಧಿಸಿತು. ಅದಕ್ಕೆ ಬದಲಾಗಿ ಮಾರ್ಕ್ಸ್‌‍ವಾದಿಗಳ ಸರ್ಕಾರರಹಿತ ಸಮಾಜವನ್ನು ಬೆಂಬಲಿಸಿತು. ಅರಾಜಕತಾವಾದಿ, ಕಮ್ಯುನಿಸ್ಟ್ ಮತ್ತು ಎರಡೂ ಸೇರಿಕೊಂಡಿರುವ ಯೋಚನೆಗಳು ಪರಸ್ಪರ ಹೊಸತಾದವೇನೂ ಅಲ್ಲ; ಕಲೆಕ್ಟಿವಿಸ್ಟ್‌‍ ಅರಾಜಕತಾವಾದಿಗಳು ಕಾರ್ಮಿಕರಿಗೆ ಪರಿಹಾರ ಧನ ನೀಡಬೇಕು ಎಂಬುದನ್ನು ಒಪ್ಪಿಕೊಂಡಿದ್ದರೂ ಕೂಡ ಕೆಲವರು ಕ್ರಾಂತಿಯ ನಂತರ ಕಮ್ಯೂನಿಸಮ್‌ಗೆ ಬದಲಾವಣೆ ಹೊಂದಿದ ನಂತರ ಅದರ ಪ್ರಕಾರ ಅಗತ್ಯಕ್ಕೆ ತಕ್ಕಂತೆ ಹಂಚುವುದನ್ನು ಒಪ್ಪಿಕೊಂಡಿದ್ದರು. ಅರಾಜಕತಾವಾದಿ ಕಮ್ಯುನಿಸಮ್ ಸ್ವತಂತ್ರ ಸಾಮಾಜಿಕ ಆಡಳಿತ ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ. ಇದು ಸಮಾಜದಲ್ಲಿ ಸ್ವ-ನಿಯಂತ್ರಣ ಪಂಗಡವನ್ನು ತಯಾರಿಕಾ ಉದ್ದೇಶಕ್ಕಾಗಿ ಬಳಸಿದಾಗ ಪ್ರಜಾಸತ್ತಾತ್ಮಕ ಆಡಳಿತಕ್ಕೊಳಪಟ್ಟಿರುತ್ತದೆ. ಅಲ್ಲದೆ ಒಕ್ಕೂಟಗಳ ಮೂಲಕ ಉಳಿದ ಪಂಗಡಗಳು ಇದಕ್ಕೆ ಸಮೀಪವಿರುತ್ತದೆ. ಕೆಲ ಅರಾಜಕತಾವಾದಿ ಕಮ್ಯುನಿಸ್ಟರು ನೇರ ಪ್ರಜಾಪ್ರಭುತ್ವದ ಪರವಾಗಿ ಇರುತ್ತಾರೆ. ಉಳಿದ ಕೆಲವರು ಬಹುಮತೀಯ ವೈಯುಕ್ತಿಕ ಸ್ವಾತಂತ್ರ್ಯಕ್ಕೆ ತಡೆಯೊಡ್ಡುತ್ತದೆ ಎಂದು ನಂಬಿದ್ದಾರೆ. ಬಹುಮತ ಪ್ರಜಾಪ್ರಭುತ್ವದ ಬದಲಾಗಿ ಇದನ್ನು ಬೆಂಬಲಿಸಿದ್ದಾರೆ. ಅರಾಜಕತಾವಾದದ ಸಮುದಾಯಸ್ವಾಮ್ಯವಾದಲ್ಲಿ ಹಣದ ಪದ್ಧತಿಯನ್ನು ನಿರಾಕರಿಸಿದ್ದು, ಯಾವುದೇ ವ್ಯಕ್ತಿಯು ಕಾರ್ಮಿಕನಿಂದ ನೇರವಾಗಿ ಹಣವನ್ನು ಸ್ವೀಕರಿಸುವುದಿಲ್ಲ (ಇದರಲ್ಲಿ ಲಾಭದ ಹಂಚಿಕೆ ಅಥವಾ ಹಣಪಾವತಿ ಮೂಲಕ ಆಗುತ್ತದೆ). ಆದರೆ ಸಂಪನ್ಮೂಲಗಳ ಬಳಕೆಗೆ ಯಾವುದೇ ಅಡೆತಡೆಗಳಿಲ್ಲ ಮತ್ತು ಸಮುದಾಯದ ಆದಾಯವೂ ಹೆಚ್ಚಿತ್ತದೆ. ಅರಾಜಕತಾವಾದದ ಕಮ್ಯುನಿಸಮ್ ಯಾವಾಗಲೂ ಕಮ್ಯುನಿಸಮ್ ಸಂಬಂಧಿ ಧೋರಣೆ ಹೊಂದಿರುವುದಿಲ್ಲ. ಕೆಲ ರೀತಿಯ ಅರಾಜಕತಾವಾದ ಕಮ್ಯುನಿಸಮ್ ಅಹಂಕಾರಿಯಾಗಿಯೂ ಮತ್ತು ಮೂಲಸ್ವರೂಪದ ಏಕತಾನತೆಯಿಂದ ಬಲವಾಗಿ ಪ್ರಭಾವಿತವಾಗಿದೆ. ಮತ್ತು ಅರಾಜಕತಾವಾದದ ಕಮ್ಯೂನಿಸಮ್ ಯಾವಾಗಲೂ ಕಮ್ಯೂನಿಸಮ್‌ ವಾದದ ಧೋರಣೆಯನ್ನೇ ಹೊಂದಿರಬೇಕು ಎಂದೇನೂ ಇಲ್ಲ. ೨೦ನೇ ಶತಮಾನಕ್ಕಿಂತ ಮೊದಲು ಅರಾಜಕತಾವಾದಿ-ಸಿಂಡಿಕಾಲಿಸಂನ ಯೋಚನಾ ಪರಂಪರೆಯ ಮಾದರಿಯಲ್ಲೇ ಹುಟ್ಟಿಕೊಂಡ ತತ್ವವಾಗಿದೆ. ಈ ಹಿಂದೆ ಇದ್ದ ಅರಾಜಕತಾವಾದದ ಬೇರೆ ಬೇರೆ ವಿಧಗಳನ್ನು ಗಮನಿಸಿದರೆ ಕಾರ್ಮಿಕ ಚಳುವಳಿಯ ಮೇಲೆ ಹೆಚ್ಚಿನ ಪ್ರಮಾಣದ ಗಮನ ಬಂದದ್ದು ಕಂಡುಬರುತ್ತದೆ. ಕ್ರಾಂತಿಕಾರದ ಸಾಮಾಜಿಕ ಬದಲಾವಣೆಗೆ ಬಂಡವಾಳಶಾಹಿ ಮತ್ತು ಸರ್ಕಾರ ಪದ್ಧತಿಯನ್ನು ಹೊರತುಪಡಿಸಿ ಸಿಂಡಿಕಾಲಿಸಂ ಮೂಲಕ ಟ್ರೇಡ್ ಯೂನಿಯನ್ ಕಾರ್ಮಿಕರಿಂದ ಸ್ವ-‌ಹತೋಟಿಯ ಪ್ರಜಾಪ್ರಭುತ್ವ ರೀತಿಯಲ್ಲಿ ನಡೆಸಲು ಸಹಾಯಕವಾಗಬಹುದು ಎಂದುಕೊಳ್ಳಲಾಯಿತು. ಇದನ್ನು ಅರಾಜಕತಾವಾದದ ಉಳಿದ ಶಾಖೆಗಳಿಗೂ ವರ್ಗಾಯಿಸಲಾಯಿತು. ಮತ್ತು ಅರಾಜಕತಾವಾದಿ-ಸಿಂಡಿಕಾಲಿಸ್ಟ್‌ಗಳು ಹೆಚ್ಚಾಗಿ ಅರಾಜಕತಾವಾದಿ ಕಮ್ಯೂನಿಸ್ಟ್‌ ಅಥವಾ ಸಮಷ್ಟಿ ಅರಾಜಕತಾವಾದಿ ಆರ್ಥಿಕ ಪದ್ಧತಿಯತ್ತ ಒಲವು ತೋರಿದರು. ಈ ಮೊದಲು ಮುಂಚೂಣಿಯಲ್ಲಿದ್ದ ಕ್ರಾಂತಿಕಾರಿ ಕಾರ್ಮಿಕಸ್ವಾಮ್ಯವಾದಿ ಚಿಂತಕ ರುಡಾಲ್ಫ್ ರಾಕರ್‌ನ ೧೯೩೮ರಲ್ಲಿ ಪ್ರಕಟಪಡಿಸಿದ ಕಿರುಹೊತ್ತಿದೆ ಅನಾರ್ಕೋಸ್ ಸಿಂಡಿಕಾಲಿಸಮ್ (ಅನಾರ್ಕೊ) ದಲ್ಲಿ ಚಳವಳಿಯ ಉದ್ದೇಶ, ಗುರಿ ಹಾಗೂ ಮಹತ್ವವನ್ನು ಕಾರ್ಮಿಕರ ಭವಿಷ್ಯಕ್ಕಾಗಿ ಏನು ಮಾಡಬೇಕೆಂಬದನ್ನು ತಿಳಿಸಿದ್ದ.

ಪೊಸ್ಟ್‌-ಕ್ಲಾಸಿಕಲ್ ಪ್ರಭಾವಗಳು

ಅರಾಜಕತಾವಾದ 
ಲಾರೆನ್ಸ್ ಜರಾ (ಎಡ) ಮತ್ತು ಜಾನ್ ಜೆರ್ಜಾನ್ (ಬಲ), ಇಬ್ಬರು ಸಮಕಾಲೀನ ಮುಖ್ಯ ಅರಾಜಕತಾವಾದಿ ಲೇಖಕರು. ಅನಾರ್ಕೊ-ಪ್ರಿಮಿಟಿವಿಸಂ ಸಿದ್ಧಾಂತದ ಮುಖ್ಯ ಸಿದ್ಧಾಂತವಾದಿಯಾಗಿ ಪ್ರಚಲಿತರಾದ ಜೆರ್ಜಾನ್ ಆಗಿದ್ದು, ಜರಾಕ್ ಒಬ್ಬ ಪ್ರಸಿದ್ಧವಾದ ಪೋಸ್ಟ್-ಲೆಫ್ಟ್ ಅರಾಜಕತೆಯ ವಕೀಲ.

ಅರಾಜಕತಾವಾದವು ಹಲವಾರು ತತ್ವಶಾಸ್ತ್ರ ಮತ್ತು ಚಳವಳಿಗಳಲ್ಲಿ ಕಾಣಿಸಿಕೊಂಡಿತು. ಈ ಸಂದರ್ಭದಲ್ಲಿ ಸಾರಸಂಗ್ರಹಿ (ಪ್ರತಿಯೊಂದು ತತ್ವಗಳಲ್ಲಿ ತನಗೆ ಬೇಕಾದ್ದನ್ನು ಆರಿಸಿಕೊಳ್ಳುವವನು)ಯು ಹಲವಾರು ಮೂಲಗಳಿಂದ ಸಂಗ್ರಹಿಸುವುದು ಮತ್ತು ಸಮನ್ವಯದ, ಭಿನ್ನವಾಗಿರುವುದನ್ನು ಒಟ್ಟುಗೂಡಿಸುವಿಕೆ ಮತ್ತು ವಿರುದ್ಧವಾದ ಯೋಚನೆಗಳು ಹೊಸ ತತ್ವಶಾಸ್ತ್ರೀಯ ಚಿಂತನೆಗೆ ಅವಕಾಶ ಮಾಡಿಕೊಟ್ಟಿತು. ಈಗಲೂ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ೧೯೬೦ರಿಂದ ಅರಾಜಕತಾವಾದವು ಮರುಹುಟ್ಟನ್ನು ಪಡೆಯಿತು. ಕೆಲ ಹೊಸ ಚಳವಳಿಗಳು ಮತ್ತು ಇದರ ಶಾಲೆಗಳು ಇವುಗಳಿಂದ ಬೇರ್ಪಟ್ಟವು. ಅರಾಜಕತಾ ಬಂಡವಾಳಶಾಹಿತ್ವವು ಮೂಲ ಸ್ವರೂಪದ ರಾಜ್ಯಕ್ಕೆ ವಿರುದ್ಧವಾದ ಸ್ವಾತಂತ್ರ್ಯವಾದ ಮತ್ತು ವ್ಯಕ್ತಿವಾದಿ ಅರಾಜಕತೆಯಿಂದ ಅಭಿವೃದ್ಧಿ ಹೊಂದಿತು. ಇದನ್ನು ಆಸ್ಟ್ರಿಯನ್ ಆರ್ಥಿಕ ಶಾಲೆಗಳಿಂದ, ಸ್ಟಡಿ ಆಫ್ ಲಾ ಆಂಡ್ ಎಕನಾಮಿಕ್ಸ್ ಆಂಡ್ ಪಬ್ಲಿಕ್ ಚಾಯ್ಸ್ ಥಿಯರಿಗಳಿಂದ ನೋಡಬಹುದಾಗಿದೆ. ಆಗ ತಾನೆ ಸ್ತ್ರೀವಾದವು ಮೊಳಕೆಯೊಡೆಯುತ್ತಿತ್ತು ಮತ್ತು ಪರಿಸರವಾದಿಗಳ ಚಳವಳಿಗಳೂ ಸಹ ಅರಾಜಕತಾವಾದವು ಹುಟ್ಟಿಕೊಂಡ ಸಮಯದಲ್ಲೇ ಪ್ರಾರಂಭವಾಯಿತು. ಅರಾಜಕತಾವಾದ-ಸ್ತ್ರೀವಾದವು ಮೂಲಸ್ವರೂಪದ ಸ್ತ್ರೀವಾದ ಮತ್ತು ಅರಾಜಕತಾವಾದವನ್ನು ಸಂಯೋಜಿಸಿ ಅಭಿವೃದ್ಧಿಹೊಂದುದಾಗಿದೆ. ಇದು ಪುರುಷ ಪ್ರಧಾನ (ಸ್ತ್ರೀ ಮೇಲೆ ಪುರುಷರ ಅಧಿಕಾರ ಚಲಾವಣೆ)ವು ಸಂವಿಧಾನಿಕವಾಗಿ ಸ್ಪಷ್ಟವಾಗಿ ಸರ್ಕಾರಕ್ಕೆ ತೋರಿಸಬೇಕಾಕು ಎಂಬುದು ಇವುಗಳ ಮೂಲ ಉದ್ದೇಶವಾಗಿದೆ. ೧೯ನೇ ಶತಮಾನದ ಕೊನೆ ಭಾಗದಲ್ಲಿ ಬಂದ ಸ್ತ್ರೀವಾದಿ, ಅರಾಜಕತಾವಾದಿ ಬರಹಗಾರರಾದ ಲೂಸಿ ಪಾರ್ಸನ್ಸ್, ಎಮ್ಮಾ ಗೋಲ್ಡ್‌ಮನ್, ವೋಲ್ಟರೈನ್ ಡೆ ಕ್ಲೇರ್ ಮತ್ತು ದೊರ ಮರ್ಸದೆನ್ ಈ ಬಗ್ಗೆ ಸಾಕಷ್ಟು ಪ್ರಭಾವ ಬೀರಿದರು. ಅರಾಜಕತಾವಾದ-ಸ್ತ್ರೀವಾದಿಗಳು ಉಳಿದ ಮೂಲಸ್ವರೂಪಿ ಸ್ತ್ರೀವಾದಿಗಳಂತೆ ಸಾಂಪ್ರದಾಯಿಕ ಕುಟುಂಬ, ಶಿಕ್ಷಣ ಮತ್ತು ಲಿಂಗ ನಿರ್ಧಾರಿತ ಜವಾಬ್ದಾರಿಯ ಕಲ್ಪನೆಯನ್ನು ಟೀಕಿಸುವ ಮತ್ತು ಅದನ್ನು ಕಾಯುವ ಕೆಲಸವನ್ನು ಮಾಡಿದರು. ಹಸಿರು ಅರಾಜಕತಾವಾದವು (ಅಥವಾ ಪರಿಸರ ಅರಾಜಕತಾವಾದ) ತಳಮಟ್ಟದ ಚಿಂತನೆಯಾಗಿದ್ದು, ಅರಾಜಕತಾವದದ ಜತೆ ಬೆಳೆದು ಪಾರಿಸರಿಕ ಘಟನೆಗಳಿಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಿತು. ಮತ್ತು ಇದೇ ಸಮಕಾಲೀನ ಸಂದರ್ಭದಲ್ಲಿ ಅರಾಜಕತಾವಾದ-ಪ್ರಾಕ್ತಾನತಾವಾದವು (ಅನಾಗರಿಕ ನಡತೆ) ಮತ್ತು ಸಾಮಾಜಿಕ ಪರಿಸರವಿಜ್ಞಾನವು ಬಂದವು. ಅರಾಜಕತಾ-ಶಾಂತಿವಾದವು ಹಿಂಸೆಗಳ ಮೂಲಕ ಮಾಡಲು ಹೊರಟಿರುವ ಸಾಮಾಜಿಕ ಬದಲಾವಣೆಯನ್ನು ನಿರಾಕರಿಸಿತು. ಈ ವಾದವು ಎರಡನೇ ಮಹಾಯುದ್ಧದ ನಂತರ ಹಾಲೆಂಡ್, ಬ್ರಿಟನ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಅಭಿವೃದ್ಧಿ ಹೊಂದುತ್ತಾ ಸಾಗಿತು. ಉತ್ತರ-ಎಡಪಂಥೀಯ ಅರಾಜಕತಾವಾದ (Post-left ಅನಾರ್ಚಿ) ವು ಸಾಂಪ್ರದಾಯಿಕ ಎಡಪಂಥೀಯ ಅಲೆಯ ರಾಜಕೀಯದ ನಡುವೆ ಕೆಲ ಅಂತರವನ್ನು ಇಟ್ಟುಕೊಂಡಿದೆ ಮತ್ತು ಈ ಮೂಲಕ ಈ ವಾದದಿಂದ ತನ್ನ ಹಿಡಿತವನ್ನು ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿತು. ಅರಾಜಕತಾವಾದೋತ್ತರದ ಸೈದ್ಧಾಂತಿಕ ನಡೆಯು ಪ್ರಥಮವರ್ಗದ ಅರಾಜಕತಾವಾದದ ಸಿದ್ಧಾಂತ ಮತ್ತು ರಚನೊತ್ತರ ಸಿದ್ಧಾಂತದ ಯೋಚನೆಗಳು ಇದರ ಜತೆ ಸಾಗುತ್ತವೆ. ಇದರ ಚಿಂತನೆಗಳ ನಾನಾ ಬಗೆಯ ಉದ್ದೇಶವಾದ ಆಧುನಿಕೋತ್ತರ, ಸ್ವಾಯುತ್ತ ಮಾರ್ಕ್ಸ್‌‍ವಾದ, ಎಡಪಂಥೀಯ ಅರಾಜಕತಾವಾದೋತ್ತರ, ಸಂದರ್ಭವಾದ ಮತ್ತು ವಸಾಹತೋತ್ತರ ಚಿಂತನೆಯನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧವಾಗಿರುವ ಸಾಮನ್ಯವಾದ ಅರಾಜಕತಾವಾದಿ ಚಳುವಳಿಯನ್ನು ಬಂಡಾಯ ಅರಾಜಕತಾವಾದ ಎಂದು ಗುರುತಿಸಲಾಗುತ್ತದೆ; ಇದರ ಕುರಿತಾಗಿ ವೊಲ್ಫಿ ಲ್ಯಾಂಡ್‌ಸ್ಟ್ರಚರ್ ಮತ್ತು ಅಲ್ಫ್ರೆಡೊ ಎಂ.ಬೊನಾನ್ನೊ.

ಅರಾಜಕತಾವಾದ ಸಿದ್ಧಾಂತದ ಆಸಕ್ತಿಕರ ಅಂಶಗಳು

ಹಲವಾರು ಶಾಲೆಗಳ ಚಿಂತನೆಗಳು ಬದಲಾವಣೆ ಹೊಂದಿದವು ಮತ್ತೆ ಕೆಲವು ಬೇರೆ ಚಿಂತನೆಗಳು ಹುಟ್ಟಿಕೊಂಡವು. ಇದರಿಂದ ಕೆಲ ಆಸಕ್ತಿಕರ ಅಂಶಗಳು ಮತ್ತು ಆಂತರಿಕ ಕಚ್ಚಾಟಗಳು ಅರಾಜಕತಾವಾದ ಸಿದ್ಧಾಂತದಲ್ಲಿ ಸಾರ್ವಕಾಲಿಕವಾಗಿ ನಡೆಯುತ್ತದೆ ಎಂಬುದು ಸಾಭೀತುಗೊಂಡಿತು.

ಮುಕ್ತ ಪ್ರೇಮ

ಅರಾಜಕತಾವಾದ 
20ನೇಯ ಶತಮಾನದ ಆರಂಭದಲ್ಲಿ ಪರ್ಶಿಯನ್ ಅರಾಜಕತಾವಾದಿ ಸಮಾಜದ ಮುಕ್ತ ಪ್ರೇಮದ ಸದ್ಗುಣಗಳನ್ನು ಪ್ರತಿಪಾದಿಸಿದ ಫ್ರೆಂಚ್‌ನ ಇಚ್ಛಾ ಸ್ವಾತಂತ್ರವಾದಿ ಅರಾಜಕತಾವಾದಿ ಇಮೈಲ್ ಅರ್ಮಂಡ್ (1872–1962)

ಅರಾಜಕತಾವಾದದ ಮುಖ್ಯ ಪ್ರವೃತ್ತಿಯು ಮುಕ್ತ ಪ್ರೇಮವನ್ನು ಹೊಂದಿದೆ. ಏಕೆಂದರೆ ಈ ಮುಕ್ತ ಪ್ರೇಮದ ಹಿನ್ನೆಲೆಯನ್ನು ನೋಡಿದಾಗ ಇದನ್ನು ಜೋಸೈ ವಾರೆನ್ ಎಂಬಾತನ ಹಿನ್ನೆಲೆ ಮತ್ತು ಕೆಲವು ಪ್ರಾಯೋಗಿಕ ಸಮುದಾಯಗಳಲ್ಲಿ ಕಂಡುಬರುತ್ತದೆ. ಇದರ ಪ್ರಕಾರ ಲೈಂಗಿಕ ಸ್ವಾತಂತ್ರ್ಯವು ವ್ಯಕ್ತಿ-ಸ್ವಾತಂತ್ರ್ಯದ ನೇರ ಅಭಿವ್ಯಕ್ತಿಯಾಗಿದೆ. ಇಲ್ಲಿ ಏಕವ್ಯಕ್ತಿಯು ನೇರವಾಗಿ ತನ್ನ ಸ್ವಮಾಲೀಕತ್ವವನ್ನು ಹೊಂದಿರುತ್ತಾನೆ. ಈ ಪ್ರೀತಿ ಸ್ವಾತಂತ್ರ್ಯವು ನಿರ್ದಿಷ್ಟವಾಗಿ ಮಹಿಳೆಯರ ಹಕ್ಕುಗಳಿಗಾಗಿ ಮಾಡಿದ್ದು, ಏಕೆಂದರೆ ಹೆಚ್ಚು ಲೈಂಗಿಕ ಕಾನೂನುಗಳು ಮಹಿಳೆಯರ ವಿರುದ್ಧವಾಗಿದ್ದು, ಅವರಿಗೆ ಸಾಕಷ್ಟು ಅನ್ಯಾಯವನ್ನುಂಟುಮಾಡಿವೆ. ಉದಾಹರಣೆಗೆ ವಿವಾಹ ಕಾನೂನು ಮತ್ತು ಕುಟುಂಬ ನಿಯಂತ್ರಣ ಕಾಯ್ದೆ. ಮುಕ್ತ ಪ್ರೇಮದ ಬಗ್ಗೆ ಅಮೆರಿಕದ ಲುಸೀಫರ್ ದಿ ಲೈಟ್ ಬೇರರ್ (೧೮೮೩-೧೯೦೭) ನಿಯತಕಾಲಿಕೆ ಪ್ರಕಟವಾಗುತ್ತಿದ್ದು, ಮೋಸಸ್ ಹಾರ್ಮೋನ್ ಮತ್ತು ಲೂಯಿಸ್ ವೈಸ್ ಬ್ರೂಕರ್ ಸಂಪಾದಿಸುತ್ತಿದ್ದರು. ಇದಲ್ಲದೇ ಎಜ್ರಾ ಹೇವುಡ್ ಮತ್ತು ಅಂಜೇಲಾ ಹೇವುಡ್‌ರ' ದ ವರ್ಡ್' (೧೮೭೨–೧೮೯೦, ೧೮೯೨–೧೮೯೩) ಎಂಬ ಪತ್ರಿಕೆಯೂ ಇತ್ತು. ಫ್ರೀ ಸೊಸೈಟಿ (೧೮೯೫-೧೮೯೭ರಲ್ಲಿ ದಿ ಫೈರ್ ಬ್ರಾಂಡ್ ಆಗಿತ್ತು, ೧೮೯೭-೧೯೦೪ರಲ್ಲಿ ಫ್ರೀ ಸೊಸೈಟಿ ) ಇವು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ೧೯ನೇ ಶತಮಾನದ ಅಂತ್ಯದಲ್ಲಿ ಹಾಗೂ ೨೦ನೇ ಶತಮಾನದ ಪ್ರಾರಂಭದಲ್ಲಿ ಅರಾಜಕತಾವಾದವನ್ನು ಪ್ರತಿಬಿಂಬಿಸುವ ದಿನಪತ್ರಿಕೆಯಾಗಿತ್ತು. ಈ ಪತ್ರಿಕೆಯು ಮುಕ್ತ ಪ್ರೇಮ ಮತ್ತು ಸ್ತ್ರೀ ಹಕ್ಕುಗಳ ಬಗ್ಗೆ ಧ್ವನಿ ಎತ್ತಿತು ಮತ್ತು ಮುಚ್ಚುಮರೆ ಇಲ್ಲದೆ ವಾಸ್ತವಿಕ ನಿರೂಪಣೆಯನ್ನು ಕಾಮಾಸಕ್ತಿಯೆಂದು ಪರಿಗಣಿಸಿ ವಿಮರ್ಶೆ ಮಾಡುವುದು (ಪ್ರತ್ಯಕ್ಷ ಸತ್ಯತೆ ವಿಶ್ಲೇಷಣೆ) ಅಂದರೆ ಲೈಂಗಿಕ ಜೀವನದ ಮಾಹಿತಿಯನ್ನು ನೀಡುತ್ತಿರಲಿಲ್ಲ.ಜತೆಗೆ ಎಂ.ಇ.ಲಾಜಾರುಸ್ ಎಂಬ ಅಮೆರಿಕಾದ ಮುಖ್ಯ ವ್ಯಕ್ತಿವಾದದ ಅರಾಜಕತಾವಾದಿಯು ಮುಕ್ತ ಪ್ರೇಮವನ್ನು ಬೆಂಬಲಿಸಿದ. ನ್ಯೂಯಾರ್ಕ್‌ನ ಗ್ರೀನ್‌ವಿಚ್ ಹಳ್ಳಿಯಲ್ಲಿ, ಬೊಹೆಮಿಯಾದ ಸ್ತ್ರೀವಾದಿಗಳು ಮತ್ತು ಸಮಾಜವಾದಿಗಳು ಸ್ತ್ರೀಯರಿಗೆ (ಪುರುಷರಗೂ) ಈ ಕ್ಷಣದಲ್ಲಿಯೇ ಸ್ವಸಂತೋಷವಿದೆ ಎಂದು ಹೇಳುತ್ತಾರೆ. ಅವರು ಲೈಂಗಿಕತೆಯನ್ನು ಮತ್ತು ಮುಕ್ತವಾಗಿ ದ್ವಿಲಿಂಗಿ ಲೈಂಗಿಕತೆಯನ್ನು ಪ್ರೋತ್ಸಾಹಿಸಿದರು. ಇವರಲ್ಲಿ ಎಡ್ಮಾ ಸೇಂಟ್.ವಿನ್ಸೆಂಟ್ ಮಿಲ್ಲೆ ಮತ್ತು ಲೆಸ್ಬಿಯನ್ ಅರಾಜಕತಾವಾಗಿ ಮಾರ್ಗರೇಟ್ ಆ‍ಯ್‌೦ಡರ್ಸನ್ ಪ್ರಮುಖರು. ಈ ಬಗ್ಗೆ ಹಳ್ಳಿಗರು ಮತ್ತೆ ಮತ್ತೆ ಚರ್ಚಾ ತಂಡಗಳನ್ನು ಸಂಘಟಿಸುತ್ತಿದ್ದರು. ಇದು ಎಮ್ಮಾ ಗೋಲ್ಡ್‌ಮನ್ ಮತ್ತಿತರ ಮಾರ್ಗದರ್ಶನದಂತೆ ನಡೆಯುತ್ತಿತ್ತು. ಮಾಗ್ನಸ್ ಹಿರ್ಸ್ಚ್‌‍ಫೆಲ್ಡ್ ೧೯೨೩ರಲ್ಲಿ ಹೇಳಿದಂತೆ ಗೋಲ್ಡ್‌ಮನ್ ಎಂಬಾಕೆ ವ್ಯಕ್ತಿಯ ಹಕ್ಕಿಗಾಗಿ ದಿಟ್ಟವಾಗಿ ಮತ್ತು ಸ್ಥಿರವಾಗಿ ಹೋರಾಟವನ್ನು ನಡೆಸುತ್ತಾ ಬಂದವಳು. ಮತ್ತು ಮುಖ್ಯವಾಗಿ ಯಾರು ಇವರಿಂದ ಹಕ್ಕುಗಳನ್ನು ಕಸಿದುಕೊಂಡಿದ್ದರೋ ಅವರಿಂದ ಇವುಗಳನ್ನು ಮರಳಿ ಪಡೆಯಲು ಹೋರಾಟ ನಡೆಸಿದ್ದಳು. ಈ ಬಗ್ಗೆ ಧ್ವನಿ ಎತ್ತಿತ ಮೊದಲ ಹಾಗೂ ಏಕಮಾತ್ರ ಮಹಿಳೆ ಈಕೆಯಾಗಿದ್ದು, ಅಮೆರಿಕಾದವಳಾಗಿದ್ದಾಳೆ. ಜತೆಗೆ ಈಕೆ ಸಾರ್ವಜನಿಕರ ಎದುರಿಗೆ ಸಲಿಂಗ ಕಾಮವನ್ನು ಸಮರ್ಥಿಸಿಕೊಂಡಳು. ಗೋಲ್ಡ್‌ಮನ್‌ಗಿಂತ ಮೊದಲು ಭಿನ್ನಲಿಂಗಕಾಮಿ ಅರಾಜಕತಾವಾದಿ ರಾಬರ್ಟ್ ರೈಟ್ ಜಲ್ (೧೮೪೯-೧೮೯೮) ಕೂಡಾ ಸಲಿಂಗಕಾಮದ ಬಗ್ಗೆ ಧನಾತ್ಮಕವಾಗಿ ಮಾತನಾಡಿದ್ದ. ೧೮೯೦ರ ಪ್ರಾರಂಭದಲ್ಲಿ ಆತನ ಡೆಟ್ರಾಯಿಟ್‌ ಮೂಲದ ಜರ್ಮನ್ ಭಾಷೆಯ ನಿಯತಕಾಲಿಕ ಡೆರ್ ಅರ್ಮೆ ತುಫೆಲ್‌ ನಲ್ಲಿ ಈ ಬಗ್ಗೆ ಒಲವು ವ್ಯಕ್ತಪಡಿಸಿದ್ದ. ಯುರೋಪ್‌ನಲ್ಲಿ ಮುಕ್ತ ಪ್ರೇಮದ ಪ್ರಚಾರಕ ಇಮೈಲ್ ಆರ್ಮಂಡ್ ಎಂಬುವವನು ವ್ಯಕ್ತಿವಾದ ಅರಾಜಕತಾವಾದದಲ್ಲಿ ಈ ಬಗ್ಗೆ ಪ್ರಚಾರ ಮಾಡಿದ. ಈತ ಸಲ್ಲಿಸಿದ ಲಾ ಕೆಮರಾಡೆರೈ ಅಮೌರ್ಯೂಸ್ (la camaraderie amoureuse) ವಿಷಯದ ಪ್ರಸ್ತಾವನೆಯಲ್ಲಿ, ಮುಕ್ತ ಪ್ರೇಮದಲ್ಲಿನ ಲೈಂಗಿಕ ಕ್ರಿಯೆಗೆ ಒಪ್ಪಿಗೆ ಸೂಚಿಸುವ ವಯಸ್ಕರ ನಡುವಿನ ಸಾಧ್ಯತೆಗಳ ಬಗ್ಗೆ ಮಾತನಾಡಿದ್ದಾನೆ. ಈತ ಬಹುಜನರ ಜೊತೆಗಿನ ಪ್ರೇಮಕ್ಕೂ ಒಪ್ಪಿಗೆ ಸೂಚಿಸಿದ್ದನು. ಜರ್ಮನಿಯಲ್ಲಿ ಸ್ಟಿರ್ನರಿಸ್ಟ್‌ಗಳಾದ ಆಡಾಲ್ಫ್ ಬ್ರಾಂಡ್ ಮತ್ತು ಜಾನ್ ಹೆನ್ರಿ ಮ್ಯಾಕೆ ಎಂಬುವರು ಪುರುಷ ಭಿನ್ನಲೈಂಗಿಕತೆ ಮತ್ತು ಸಲಿಂಗಕಾಮವನ್ನು ಒಪ್ಪಿಕೊಳ್ಳುವ ಹೋರಾಟಗಾರರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಇತ್ತೀಚೆಗಷ್ಟೇ ಬ್ರಿಟಿಷ್ ಅರಾಜಕತಾವಾದ-ಶಾಂತವಾದಿ ಅಲೆಕ್ಸ್ ಕಂಫರ್ಟ್ ಎಂಬುವರು ಲೈಂಗಿಕ ಕ್ರಾಂತಿಕಾರಿ ಬರಹವಾದ ಅತ್ಯಧಿಕ ಮಾರಾಟವಾದ ಲೈಂಗಿಕತೆ ಕುರಿದ ದಿ ಜಾಯ್ ಆಫ್ ಸೆಕ್ಸ್‌ ನಿಂದ ಬಹಳ ಕೆಟ್ಟ ಹೆಸರನ್ನು ಪಡೆದರು. ಇಲ್ಲಿ ಮುಕ್ತ ಪ್ರೇಮದ ವಿಷಯವನ್ನು ಫ್ರೆಂಚ್ ಅರಾಜಕತಾವಾದ-ಭೋಗವಾದಿ ತತ್ವಶಾಸ್ತ್ರಜ್ಞ ಮೈಕಲ್ ಆನ್‌ಫ್ರೇ ಎಂಬಾತ ಉತ್ತಮ ಶುಶ್ರೂಷೆ ಎಂದು ತಿಳಿದಿದ್ದು, ಆತನ ಕೆಲ ಬರಹಗಳಾದ ಥಿಯರಿ ಡ್ಯೂ ಕಾರ್ಪ್ಸ್ ಅಮೌರೆಕ್ಸ್‌: ಪೌರ್ ಯೂನ್ ಎರೊಟಿಗ್ ಸೊಲೈರ್ (೨೦೦೦) (Théorie du corps amoureux : pour une érotique solaire (೨೦೦೦)) ಮತ್ತು ಎಲ್‌’ಇನ್ವೆನ್ಷನ್ ಡ್ಯು ಪ್ಲಾಸಿರ್:ಫ್ರಾಗ್ಮೆಂಟ್ಸ್ ಸೈರಿಯಾನಿಗ್ಸ್ (L'invention du plaisir : fragments cyréaniques (೨೦೦೨)) ಗಳಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾನೆ.

ಸ್ವಾತಂತ್ರ್ಯವಾದಿ ಶಿಕ್ಷಣ

ಅರಾಜಕತಾವಾದ 
ಫ್ರಾನ್ಸ್ಸೆಸ್ ಫೆರರ್ ಐ ಗ್ವಾರ್ಡಿಯಾ, ಕಥಲಾನ್ ಅರಾಜಕತಾವಾದಿ ಬೋಧಕ

೧೮೪೨ರಲ್ಲಿ ಮ್ಯಾಕ್ಸ್ ಸ್ಟಿರ್ನರ್ ಎಂಬುವರು ದಿ ಫಾಲ್ಸ್ ಪ್ರಿನ್ಸಿಪಲ್ ಆಫ್ ಅವರ್ ಎಜುಕೇಶನ್ ಎಂಬ ವಿಷಯವಾಗಿ ಶಿಕ್ಷಣದ ಮೇಲೆ ಮಹಾ ಪ್ರಂಬಂಧವನ್ನು ಬರೆದಿದ್ದಾರೆ. ಈ ಎಜುಕೇಶನ್ ತತ್ವದಲ್ಲಿ ಸ್ಟಿರ್ನರ್ ಹೆಸರಿಸಿದಂತೆ, ವೈಯುಕ್ತಿಕತೆ ಬಗ್ಗೆ ವಿವರಿಸುತ್ತಾ ಸ್ವ-ಅರ್ಥೈಸಿಕೊಂಡು ಸ್ವ-ರಚನೆಗಳನ್ನು ಮಾಡಿ ಸ್ಥಿರವಾಗಿರುವುದು. ಈ ಶಿಕ್ಷಣದಿಂದ ಒಬ್ಬ ಮುಕ್ತವಾದ ವ್ಯಕ್ತಿ ಸೃಷ್ಟಿಯಾಗುತ್ತಾನೆ. ಜತೆಗೆ ಶ್ರೇಷ್ಠ ನಡತೆಗಳು, ಆತ ಹೆಸರಿಸಿದಂತೆ ಶಾಶ್ವತ ವ್ಯಕ್ತಿತ್ವ... ಹುಟ್ಟಿಕೊಳ್ಳುತ್ತದೆ. ಅವರೆಲ್ಲ ಶ್ರೇಷ್ಠರಾಗುತ್ತಾರೆ. ಏಕೆಂದರೆ ಅವರು ಪ್ರತಿ ಸಮಯದಲ್ಲೂ ತಮ್ಮನ್ನು ತಾವು ಅಭಿವ್ಯಕ್ತಗೊಳಿಸಿಕೊಳ್ಳುತ್ತಿರುತ್ತಾರೆ.

೧೯೦೧ರಲ್ಲಿ ಕೆತಲನ್ ಅರಾಜಕತಾವಾಗಿ ಮತ್ತು ಮುಕ್ತ ಚಿಂತಕ ಫ್ರಾನ್ಸೆಸ್ಕ್ ಫೆರರ್ ಐ ಗುರಾಡಿಯಾ ಹುಟ್ಟುಹಾಕಿದ ‘ಮಾಡರ್ನ್’ ಅಥವಾ ಬಾರ್ಸಿಲೋನಾದಲ್ಲಿ ಪ್ರಗತಿಶೀಲ ಶಾಲೆಯು ಕ್ಯಾಥೋಲಿಕ್ ಚರ್ಚ್‌ನ ಅಧೀನದಲ್ಲಿದ್ದ ಶಿಕ್ಷಣ ವ್ಯವಸ್ಥೆಯನ್ನು ವಿರೋಧಿಸಿತು. ಈ ಶಾಲೆಯ ಮುಖ್ಯ ಗುರಿಯು "ಕಾರ್ಮಿಕ ವರ್ಗದ ವಿವೇಚನಾಶಕ್ತಿಯುಳ್ಳ, ಜಾತ್ಯತೀತವಾದ ಮತ್ತು ದಬ್ಬಾಳಿಕೆಗೊಳಪಡದ ವ್ಯವಸ್ಥೆಯಲ್ಲಿ" ಶಿಕ್ಷಣವಂತರನ್ನಾಗಿ ಮಾಡುವುದಾಗಿತ್ತು. ಪಾದ್ರಿವರ್ಗದವರನ್ನು ಉಗ್ರವಾಗಿ ವಿರೋಧಿಸುವ ಫೆರರ್ ಸ್ವತಂತ್ರ ಶಿಕ್ಷಣದಲ್ಲಿ ನಂಬಿಕೆ ಇಟ್ಟಿದ್ದ. ದೇಶ ಹಾಗೂ ಚರ್ಚ್‌ಗಳ ಹಿಡಿತದಲ್ಲಿದ್ದ ಶಿಕ್ಷಣವನ್ನು ಮುಕ್ತವಾಗಿಸುವ ಉದ್ದೇಶವನ್ನು ಈತ ಹೊಂದಿದ್ದ. ಮುರ್ರೈ ಬುಕ್‌ಚಿನ್ ಬರೆದ ದಿಸ್ ಪೀರಿಯಡ್ (೧೮೯೦) ಕೃತಿಯು ಸ್ವತಂತ್ರವಾದಿ ಶಾಲೆಗಳಲ್ಲಿ ಮತ್ತು ತುಂಬ ಮೆಚ್ಚುಗೆ ಪಡೆಯಿತು. ಮತ್ತು ಇದು ಅಧ್ಯಾಪಕ ವರ್ಗಕ್ಕೆ ಸಂಬಂಧಿಸಿದ ವಿಷಯಗಳಾಗಿದ್ದು ದೇಶದ ಎಲ್ಲ ಪ್ರದೇಶಗಳಿಗೂ ಅನ್ವಯವಾಗುವಂತೆ ಇತ್ತು. ಅರಾಜಕತಾವಾದಿಗಳು ಇದನ್ನು ಕೆಲವೆಡೆ ಪ್ರಯೋಗಿಸಿದರು. ಪ್ರಾಯಶಃ ಈ ಕ್ಷೇತ್ರದಲ್ಲಿ ಇದು ಉತ್ತಮ ಪ್ರಯತ್ನವಾಗಿದ್ದು, ಫೆರರ್‌ನ ಮಾಡರ್ನ್ ಶಾಲೆ (ಎಸ್ಕುಲಾ ಮಾರ್ಡನಾ)ವು ಉತ್ತಮ ಬೆಳವಣಿಗೆ ಕಂಡಿತು. ಈ ಯೋಜನೆಯು ಕೆತಲನ್ ಶಿಕ್ಷಣದ ಮೇಲೆ ಬಹಳ ಪ್ರಭಾವವನ್ನು ಬೀರಿತು. ಮತ್ತು ಬೋಧನೆಯಲ್ಲಿ ಪ್ರಾಯೋಗಿಕ ಉಪಾಯಗಳನ್ನು ಸಹ ಅಳವಡಿಸಲಾಯಿತು. ಲಾ ಎಸ್ಕುಲಾ ಮಾಡರ್ನಾ ಮತ್ತು ಫೆರರ್ ಉಪಾಯಗಳು ಸಾಮಾನ್ಯವಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನ ಕ್ಯೂಬಾ, ದಕ್ಷಿಣ ಅಮೆರಿಕಾ ಮತ್ತು ಲಂಡನ್‌ಗಳ ಮಾರ್ಡನ್ ಶಾಲೆ ಗಳಲ್ಲಿ ಹೆಚ್ಚು ಪ್ರಭಾವ ಬೀರಿದವು. ಇವುಗಳನ್ನು ಮೊದಲು ನ್ಯೂಯಾರ್ಕ್ ನಗರದಲ್ಲಿ ೧೯೧೧ರಲ್ಲಿ ಪ್ರಾರಂಭವಾಗಿತ್ತು. ಈ ಬಗ್ಗೆ ೧೯೦೧ರಲ್ಲಿ ಸ್ಥಾಪನೆಗೊಂಡ ಇಟಲಿ ದಿನಪತ್ರಿಕೆ ಯೂನಿವರ್ಸಿಟಾ ಪೋಪೋಲೇರ್ ಸಹ ಇದರ ಪ್ರಭಾವ ಬಗ್ಗೆ ಬರೆಯಲ್ಪಟ್ಟಿತು. ಮತ್ತೊಂದು ಸ್ವಾತಂತ್ರ್ಯವಾದ ಸಂಪ್ರದಾಯವಾಗಿ ಶಾಲೆರಹಿತ ಮತ್ತು ಉಚಿತ ಶಿಕ್ಷಣವನ್ನು ಅಧ್ಯಾಪಕರ ಬದಲಾಗಿ ಮಗುವಿಗೆ ಬಾಲ್ಯದಲ್ಲಿ ಹೇಳಿಕೊಡುವುದು. ಜರ್ಮನಿಯಲ್ಲಿ ಪ್ರಾಯೋಗಿಕವಾಗಿ ಎ.ಎಸ್. ನೈಲ್ ಎಂಬಾತ ೧೯೨೧ರಲ್ಲಿ ಸಮ್ಮರ್ ಹಿಲ್ ಶಾಲೆಯನ್ನು ಪ್ರಾರಂಭಿಸಿದ. ಸಮ್ಮರ್ ಹಿಲ್ ಅರಾಜಕತಾವಾದವನ್ನು ಉದಾಹರಣೆಯಾಗಿ ಅಭ್ಯಾಸ ವೇಳೆ ಉಲ್ಲೇಖಿಸಿದೆ. ಆದಾಗ್ಯೂ ಸಮ್ಮರ್ ಹಿಲ್ ಮತ್ತು ಉಳಿದ ಮುಕ್ತ ಶಾಲೆಗಳು ಮೂಲಭೂತವಾಗಿ ಸ್ವತಂತ್ರವಾದವಾಗಿವೆ. ಅವುಗಳು ಫೆರರ್‌‍ ತತ್ವಕ್ಕೆ ಹೊರತಾಗಿ ಇರುತ್ತಿದ್ದವು. ಅಲ್ಲದೆ ರಾಜಕೀಯ ವರ್ಗ ಹೋರಾಟದ ಹಿನ್ನೆಲೆಯನ್ನು ಹೊಂದಿದ್ದವು. ಇದಕ್ಕೆ ಸಂಬಂಧಿಸಿದಂತೆ ಸ್ಥಾಪಿಸಲ್ಪಟ್ಟ ಶಾಲೆಗಳು ಸ್ವಾತಂತ್ರ್ಯವಾದದ ನೀತಿ, ಅರಾಜಕತಾವಾದಿಗಳ ಈ ಯೋಜನೆಯನ್ನು ಪ್ರಶ್ನಿಸಿದವು. ಡೇಸ್ಕೂಲಿಂಗ್ ಎಂಬುದನ್ನು ಸ್ಥಾಪಿಸಿದ ಐವನ್ ಇಲ್ಲಿಚ್ ಎಂಬಾತ ವಾದಿಸುವಂತೆ, ಶಾಲೆಯ ಆಡಳಿತವು ಸ್ವ-ಕಲಿಕೆ ಮತ್ತು ಕೊಳ್ಳುವ ಸಮಾಜಕ್ಕೆ ಬೇಕಾದ ಕ್ರಿಯಾತ್ಮಕತೆಯನ್ನು ಬೆಳೆಸಬೇಕು.

ಆಂತರಿಕ ಘಟನೆಗಳು ಮತ್ತು ಹೋರಾಟ (ಚರ್ಚೆ)ಗಳು

ಅರಾಜಕತಾವಾದ 
ಅರಾಜಕತೆಯಲ್ಲಿ ಹಿಂಸೆಯುಂಟು ಮಾಡುವುದು ಹೆಚ್ಚು ವಿವಾದಕ್ಕೊಳಗಾದ ವಿಷಯವಾಗಿದೆ.

ಅರಾಜಕತಾವಾದವು ತತ್ವಶಾಸ್ತ್ರದ ಹಲವಾರು ಬೇರೆ ಬೇರೆ ನಡತೆಗಳನ್ನು, ಪ್ರವೃತ್ತಿಗಳು ಮತ್ತು ಶಾಲೆಗಳ ಚಿಂತನೆಗಳನ್ನು ಮೂರ್ತರೂಪವಾಗಿಸುತ್ತದೆ. ಅವುಗಳ ಮೌಲ್ಯಗಳು, ಗುರಿಗಳು ಮತ್ತು ತಂತ್ರಗಳು ಇವುಗಳಲ್ಲಿ ಹುಟ್ಟಿಕೊಳ್ಳುವುದು ಸಹಜ. ಇಲ್ಲಿ ಬಂಡವಾಳಶಾಹಿತ್ವ, ರಾಷ್ಟ್ರೀಯತೆ ಮತ್ತು ಧಾರ್ಮಿಕತೆಯಲ್ಲಿನ ಸಾಮರಸ್ಯದ ಬಗ್ಗೆ ಅರಾಜಕತಾವಾದಲ್ಲಿ ವಿಸ್ತೃತವಾಗಿ ವಿರೋಧಿಸಲಾಯಿತು. ಇದಕ್ಕೆ ಸಾಮೀಪ್ಯ ಹೊಂದಿದ ಅರಾಜಕತಾವಾದವು ಸಮೂಹ ಬಾಂಧವ್ಯದ ಉದ್ದೇಶ ಹೊಂದಿದ ಮಾರ್ಕ್ಸ್ ವಾದ, ಕಮ್ಯುನಿಸಂ ಮತ್ತು ಬಂಡವಾಳಶಾಹಿವಾದವನ್ನು ಬೆಂಬಲಿಸುತ್ತದೆ. ಅರಾಜಕತಾವಾದಿಗಳು ಮಾನವತಾವಾದ, ದೈವಿಕ ಶಕ್ತಿ, ಸ್ವಆಸಕ್ತಿ ಬಗ್ಗೆ ಪ್ರಭಾವಿತವಾಗುವ, ಸಸ್ಯಾಹಾರ ಬೆಂಬಲಿಗರು ಅಥವಾ ಉಳಿದ ಯಾವುದೇ ಬದಲಾಯಿತ ನೀತಿಯುಳ್ಳ ಬೋಧನೆಯಿಂದ ಪ್ರೇರಣೆಗೊಳಪಟ್ಟವರಾಗಿದ್ದರು. ನಾಗರಿಕತೆ, ತಂತ್ರಜ್ಞಾನ (ಅರಾಜಕತಾವಾದ-ಅನಾಗರಿಕ ನಡತೆ ಮತ್ತು ಬಂಡಾಯದ-ಅರಾಜಕತಾವಾದ) ಮತ್ತು ಪ್ರಜಾಸತ್ತಾತ್ಮಕ ಕಾರ್ಯವಿಧಾನಗಳು ಕೆಲ ಅರಾಜಕತಾವಾದಿಗಳಿಂದ ಕಟುವಾಗಿ ಟೀಕೆಗೊಳಪಟ್ಟಿತು. ಮತ್ತು ಇದೇ ಸಂದರ್ಭದಲ್ಲಿ ಮತ್ತೆ ಕೆಲವರಿಂದ ಶ್ಲಾಘನೆಗೊಳಪಟ್ಟಿತು. ಈ ಹೋರಾಟದ ಹಂತದಲ್ಲಿ, ೧೯ನೇ ಶತಮಾನದಲ್ಲಿ ಅರಾಜಕತಾವಾದಿಗಳು ಕೆಲಸಕ್ಕಾಗಿ ಪ್ರಚಾರ ಎಂಬ ತಂತ್ರವನ್ನು ರೂಪಿಸಿದ್ದರು (ಶೂನ್ಯಾವಾದಿ ಚಳವಳಿ), ಜತೆಗೆ ಸಮಕಾಲೀನ ಅರಾಜಕತಾವಾದಿಗಳು ಅರಾಜಕತಾವಾದ ಸಮಾಜದಲ್ಲಿ ಅವರ ತತ್ವಗಳನ್ನು ಬೇರೆಯಾಗಿ ನೇರ ಮಾರ್ಗದಲ್ಲಿ ಒಪ್ಪಿಕೊಳ್ಳಬಹುದಾದ ಅಹಿಂಸಾತ್ಮಕತೆ, ಆರ್ಥಿಕ-ವಿರೋಧ ಮತ್ತು ರಾಜ್ಯ ವಿರೋಧಿ ಗೂಢಲಿಪಿಶಾಸ್ತ್ರಗನ್ನು ಬಳಕೆ ಮಾಡುತ್ತಿದ್ದರು. ಅರಾಜಕತಾವಾದ ಸಮಾಜದ ಉದ್ದೇಶದ ಸಲುವಾಗಿ ಕೆಲ ಅರಾಜಕತಾವಾದಿಗಳು ಜಾಗತಿಕ ವ್ಯಕ್ತಿಗಳನ್ನು ಸಲಹೆ ಮಾಡಿದರೆ, ಮತ್ತೆ ಕೆಲವರು ಸ್ಥಳೀಯರನ್ನು ಸಲಹೆ ಮಾಡುತ್ತಾರೆ. ಅರಾಜಕತಾವಾದವು ವಿವಿಧತೆಯಿಂದ ಕೂಡಿದ್ದಾಗಿದೆ. ಇದರಿಂದಾಗಿ ಅರಾಜಕತಾವಾದದ ಕುರಿತಾಗಿ ವಿವಿಧ ರೀತಿಯಲ್ಲಿ ಬಳಸಲಾಗುತ್ತಿದೆ. ಇದು ಅರಾಜಕತಾವಾದದಲ್ಲಿಯ ವ್ಯಾಖ್ಯಾನದಲ್ಲಿ ಭಿನ್ನತೆಯನ್ನು ಕಾಣಬಹುದಾಗಿದೆ.

ಸಂಬಂಧಿತ ಪುಟಗಳು

  • ಅರಾಜಕತಾವಾದಿ ಪ್ರತಿಮಾವಾದ
  • ಅರಾಜಕತಾವಾದದ ವಿಷಯಗಳ ಪಟ್ಟಿ
  • ಅರಾಜಕತಾವಾದಿ ಸಮುದಾಯಗಳ ಪಟ್ಟಿಗಳು
  • ಪ್ರದೇಶವಾರು ಅರಾಜಕತಾವಾದಿ ಚಳುವಳಿಗಳ ಪಟ್ಟಿಗಳು

ಅಡಿ ಟಿಪ್ಪಣಿಗಳು

Tags:

ಅರಾಜಕತಾವಾದ ವ್ಯುತ್ಪತ್ತಿ ಮತ್ತು ಪರಿಭಾಷೆಅರಾಜಕತಾವಾದ ಮೂಲಗಳುಅರಾಜಕತಾವಾದ ಸಾಮಾಜಿಕ ಆಂದೋಲನಅರಾಜಕತಾವಾದ ಿ ಪರಂಪರೆಅರಾಜಕತಾವಾದ ಸಿದ್ಧಾಂತದ ಆಸಕ್ತಿಕರ ಅಂಶಗಳುಅರಾಜಕತಾವಾದ ಸಂಬಂಧಿತ ಪುಟಗಳುಅರಾಜಕತಾವಾದ ಅಡಿ ಟಿಪ್ಪಣಿಗಳುಅರಾಜಕತಾವಾದ ಹೆಚ್ಚಿನ ಓದಿಗಾಗಿಅರಾಜಕತಾವಾದ ಬಾಹ್ಯ ಕೊಂಡಿಗಳುಅರಾಜಕತಾವಾದದೇಶ

🔥 Trending searches on Wiki ಕನ್ನಡ:

ಅರಸೀಕೆರೆಮಾಧ್ಯಮಚನ್ನಬಸವೇಶ್ವರಗೂಗಲ್ಜನಪದ ಕಲೆಗಳುದೇವರ ದಾಸಿಮಯ್ಯಶನಿ (ಗ್ರಹ)ಯುಗಾದಿಮೆಕ್ಕೆ ಜೋಳದ್ರಾವಿಡ ಭಾಷೆಗಳುಫೇಸ್‌ಬುಕ್‌ಬಿದಿರುಮಾರುಕಟ್ಟೆಜವಾಹರ‌ಲಾಲ್ ನೆಹರುಕರ್ನಾಟಕದ ಹಬ್ಬಗಳುವಿಜಯನಗರಅಲಾವುದ್ದೀನ್ ಖಿಲ್ಜಿಕಿತ್ತೂರು ಚೆನ್ನಮ್ಮಚದುರಂಗಯೋಗಸಾರ್ವಜನಿಕ ಹಣಕಾಸುಕನ್ನಡದಲ್ಲಿ ಸಾಂಗತ್ಯಕಾವ್ಯಭಾರತದಲ್ಲಿ ಕೃಷಿರಾಮಾಚಾರಿ (ಕನ್ನಡ ಧಾರಾವಾಹಿ)ಮಹೇಂದ್ರ ಸಿಂಗ್ ಧೋನಿಅಂತರರಾಷ್ಟ್ರೀಯ ಸಂಘಟನೆಗಳುಗೋವಿಂದ ಪೈವೃದ್ಧಿ ಸಂಧಿಚೆನ್ನಕೇಶವ ದೇವಾಲಯ, ಬೇಲೂರುಮಂಡಲ ಹಾವುತ್ರಿಪದಿಆಂಡಯ್ಯಮಾನವನ ವಿಕಾಸಬಾಲಕಾರ್ಮಿಕಉಗ್ರಾಣಕೈಗಾರಿಕಾ ಕ್ರಾಂತಿಮಳೆಬಹಮನಿ ಸುಲ್ತಾನರುಹೂವುಆಸ್ಪತ್ರೆವ್ಯವಸಾಯವಿಶ್ವ ಪರಿಸರ ದಿನಚಿನ್ನವ್ಯಕ್ತಿತ್ವದ್ವಾರಕೀಶ್ಗ್ರಂಥ ಸಂಪಾದನೆವಿನಾಯಕ ಕೃಷ್ಣ ಗೋಕಾಕವಿಜಯ ಕರ್ನಾಟಕಕಪ್ಪೆಚಿಪ್ಪುಶಿವಪೆಟ್ರೋಮ್ಯಾಕ್ಸ್ (ಚಲನಚಿತ್ರ)ಉಪನಯನದೇವನೂರು ಮಹಾದೇವಭಾಮಿನೀ ಷಟ್ಪದಿಗುಣ ಸಂಧಿಬೆಸಗರಹಳ್ಳಿ ರಾಮಣ್ಣಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಶಬ್ದಮಣಿದರ್ಪಣನೇಮಿಚಂದ್ರ (ಲೇಖಕಿ)ಜೀವಕೋಶರೋಸ್‌ಮರಿಡೊಳ್ಳು ಕುಣಿತಅಕ್ಷಾಂಶ ಮತ್ತು ರೇಖಾಂಶಪಂಚಾಂಗಇಮ್ಮಡಿ ಪುಲಿಕೇಶಿಸಂಗೊಳ್ಳಿ ರಾಯಣ್ಣಕೇಸರಿ (ಬಣ್ಣ)ಭಾರತದ ವಿಜ್ಞಾನಿಗಳುಇಸ್ಲಾಂ ಧರ್ಮಕಾಲಾಯ ತಸ್ಮೈ ನಮಃ (ಚಲನಚಿತ್ರ)ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಎಸ್. ಜಾನಕಿಅಡೋಲ್ಫ್ ಹಿಟ್ಲರ್ಹಲ್ಮಿಡಿ ಶಾಸನಮಹಮದ್ ಬಿನ್ ತುಘಲಕ್🡆 More