ಅಮಾವಾಸ್ಯೆ

ಅಮಾವಾಸ್ಯೆ (ಕುಹು) ಎಂದರೆ ಚಾಂದ್ರಮಾಸದಲ್ಲಿ ಒಮ್ಮೆ ಚಂದ್ರನು ಕಾಣಿಸದಿರುವ ದಿನ.

ಪ್ರಾಚೀನ ಭಾರತೀಯ ಪಂಚಾಂಗಗಳು ೩೦ ಚಾಂದ್ರಹಂತಗಳನ್ನು ಬಳಸುತ್ತಿದ್ದವು. ಇವನ್ನು ತಿಥಿಗಳೆಂದು ಕರೆಯಲಾಗುತ್ತದೆ. ಯುತಿಯ ಮೊದಲಿನ ಸೂರ್ಯ ಮತ್ತು ಚಂದ್ರರ ನಡುವಿನ ಕೋನೀಯ ದೂರದ ೧೨ ಕೋನಮಾನಗಳೊಳಗೆ ಚಂದ್ರನು ಇರುವಾಗ ಅಮಾವಾಸ್ಯೆ ತಿಥಿಯು ಸಂಭವಿಸುತ್ತದೆ. ಅನೇಕ ಹಬ್ಬಗಳನ್ನು ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಇವುಗಳಲ್ಲಿ ದೀಪಾವಳಿಯು ಅತ್ಯಂತ ಪ್ರಸಿದ್ಧವಾಗಿದೆ. ಅನೇಕ ಹಿಂದೂಗಳು ಅಮಾವಾಸ್ಯೆಯಂದು ಉಪವಾಸ ಮಾಡುತ್ತಾರೆ. ಪ್ರತಿ ತಿಂಗಳು, ಪೂರ್ವಜರ ಪೂಜೆಗಾಗಿ ಅಮಾವಾಸ್ಯೆ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಧರ್ಮನಿಷ್ಠ ಜನರು ಪ್ರಯಾಣ ಅಥವಾ ಕೆಲಸ ಮಾಡುವಂತಿಲ್ಲ, ಬದಲಾಗಿ ಅಮಾವಾಸ್ಯೆಗಳ ಕ್ರಿಯಾವಿಧಿಗಳ ಮೇಲೆ ಗಮನಹರಿಸಬೇಕು, ಸಾಮಾನ್ಯವಾಗಿ ಮನೆಯಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ. ಪೂರ್ವಜರಿಗೆ ತರ್ಪಣ ನೀಡಲು ವಿಶೇಷವಾಗಿ ಪವಿತ್ರವಾದ ಪಿತೃ ಪಕ್ಷದ ಕೊನೆಯ ದಿನವು ಮಹಾಲಯ ಅಮಾವಾಸ್ಯೆಯಾಗಿದೆ. ವರ್ಷದಲ್ಲಿ, ಈ ದಿನವನ್ನು ಅಪರಕರ್ಮಗಳು ಮತ್ತು ಕ್ರಿಯಾವಿಧಿಗಳನ್ನು ಮಾಡಲು ಅತ್ಯಂತ ಪ್ರಮುಖ ದಿನವೆಂದು ಪರಿಗಣಿಸಲಾಗುತ್ತದೆ.

ಸಂಸ್ಕೃತದಲ್ಲಿ, ಅಮಾ ಎಂದರೆ ಒಟ್ಟಿಗೆ ಮತ್ತು ವಾಸ್ಯ ಎಂದರೆ ಸಹಜೀವನ ನಡೆಸುವುದು ಎಂದು. ಭಾರತೀಯ ಉಪಖಂಡದ ಬಹುತೇಕ ಭಾಗಗಳಲ್ಲಿ ಹಿಂದೂ ಚಾಂದ್ರಮಾನ ಪಂಚಾಂಗವನ್ನು ಬಳಸಲಾಗುತ್ತದೆ. ಚಾಂದ್ರಮಾನ ಮಾಸವು ಹುಣ್ಣಿಮೆಯ ಅಥವಾ ಪೂರ್ಣಿಮಾದಿಂದ ಆರಂಭವಾಗುತ್ತದೆ, ಆದ್ದರಿಂದ ಅಮಾವಾಸ್ಯೆ ಯಾವಾಗಲೂ ತಿಂಗಳ ಮಧ್ಯದಲ್ಲಿ ಬೀಳುತ್ತದೆ. ಆದಾಗ್ಯೂ, ಕೆಲವು ಪ್ರದೇಶಗಳಲ್ಲಿ ಅಮಾಂತಮಾನ ಪಂಚಾಂಗವನ್ನು ಬಳಸಲಾಗುತ್ತದೆ. ಕೃಷ್ಣ ಪಕ್ಷದಲ್ಲಿ ಹುಣ್ಣಿಮೆಯಿಂದ ಅಮಾವಾಸ್ಯೆಗೆ ಚಂದ್ರನ ಆಕಾರ ಬದಲಾಗುತ್ತದೆ ಶುಕ್ಲ ಪಕ್ಷವನ್ನು ಪ್ರಕಾಶಮಾನವಾದ ಅರ್ಧಭಾಗವೆಂದು ಕರೆಯಲಾಗುತ್ತದೆ. ಆದ್ದರಿಂದ ಅದೇ ಅಮಾವಾಸ್ಯೆಯಂದು ದೇಶದ ಎಲ್ಲಾ ಕಡೆ ಅದೇ ಉತ್ಸವ ಇರುವುದನ್ನು ಕಾಣಬಹುದು. ಉಜ್ಜೈನಿ, ಅಲಹಾಬಾದ್, ಓರಿಸ್ಸಾ, ಬಿಹಾರ್‌ನ ಬ್ರಾಹ್ಮಣರಂತಹ ಕೆಲವು ಪಂಚ-ಗೌಡ ಬ್ರಾಹ್ಮಣರ ತಿಂಗಳು ಪೂರ್ಣಿಮೆಯ 1 ದಿನ ನಂತರ ಶುರುವಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ, ಗುಜರಾತ್, ಕೇರಳ ಮತ್ತು ಆಂಧ್ರ ಪ್ರದೇಶದ ಜನರು ಅಂದರೆ ಪಂಚ-ದ್ರಾವಿಡರ ತಿಂಗಳು ಅಮಾವಾಸ್ಯೆಯ ಒಂದು ದಿನದ ನಂತರದಿಂದ ಆರಂಭವಾಗುತ್ತದೆ. ಆದಿ ಶಂಕರರು ವಾಸಿಸಿದ್ದ ಕಾಂಚೀಪುರಂ ಮಠಕ್ಕೆ ಎಲ್ಲ ಪಂಚ-ಗೌಡ, ಪಂಚ-ದ್ರಾವಿಡರು ಭೇಟಿಕೊಡುತ್ತಿದ್ದರಿಂದ ತಮಿಳುನಾಡು ಪಂಚಾಂಗ ಮತ್ತು ಶಕ ಪಂಚಾಂಗದ ಮಿಶ್ರಣವನ್ನು ಅಭಿವೃದ್ಧಿಮಾಡಿಕೊಂಡಿತು. ಹಾಗೆಯೇ ಪಂಚ-ಗೌಡ ಮತ್ತು ಪಂಚ-ದ್ರಾವಿಡರು ಒಟ್ಟಿಗೆಯಿರುವ ಸ್ಥಳಗಳಾದ ರಾಜಸ್ಥಾನ, ಮಧ್ಯಪ್ರದೇಶ, ದಕ್ಷಿಣ ಉತ್ತರ ಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಸಹ ಇದೇ ಮಿಶ್ರಣಗಳನ್ನು ಬಳಸಲಾಗುತ್ತದೆ. ಜೈನ್ ಧರ್ಮದ ಜನರು ಸಹ ಪಂಚ-ದ್ರಾವಿಡ ಪಂಚಾಂಗವನ್ನು ಅನುಸರಿಸುತ್ತಿದ್ದಾರೆ.

ಸೂರ್ಯನಿಗೆ ಚಂದ್ರನ ಕೋನಾಂತರ ಮತ್ತು ತಿಥಿಗಳು

ಅಮಾವಾಸ್ಯೆ
ಕಪ್ಪುಗೋಳ ಚಂದ್ರ: :ಭೂಮಿಯಿಂದ ಸೂರ್ಯನ ಕೇಂದ್ರಕ್ಕೆ ರೇಖೆ ಎಳೆದಾಗ ಚಂದ್ರನು ಭೂಮಿಗೆ ಮತ್ತು ಸೂರ್ಯನಿಗೆ ಇರುವ ಕೋನವನ್ನು ತೋರಿಸಿದೆ: ಚತುರ್ದಶಿ - ಅಮವಾಸ್ಯೆ - ಪ್ರಥಮಾ ಮತ್ತು ದ್ವಿತೀಯಾ ತಿಥಿ

ಉಲ್ಲೇಖಗಳು

Tags:

ದೀಪಾವಳಿಪಿತೃ ಪಕ್ಷ

🔥 Trending searches on Wiki ಕನ್ನಡ:

ಹಳೆಗನ್ನಡಮತದಾನಗೂಗಲ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಾದಾಮಿ ಗುಹಾಲಯಗಳುಸಾವಿತ್ರಿಬಾಯಿ ಫುಲೆದ್ರಾವಿಡ ಭಾಷೆಗಳುಶಂಕರ್ ನಾಗ್ಗೋಲಗೇರಿಹೆಚ್.ಡಿ.ಕುಮಾರಸ್ವಾಮಿಸಚಿನ್ ತೆಂಡೂಲ್ಕರ್ದಶಾವತಾರತಾಳೀಕೋಟೆಯ ಯುದ್ಧಮೆಂತೆಗುಪ್ತ ಸಾಮ್ರಾಜ್ಯಕನ್ನಡ ಸಾಹಿತ್ಯ ಪರಿಷತ್ತುಜನಪದ ಕಲೆಗಳುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದೇವರಾಯನ ದುರ್ಗಕೊಪ್ಪಳಗಾಳಿ/ವಾಯುದಾಸ ಸಾಹಿತ್ಯಅಮೇರಿಕ ಸಂಯುಕ್ತ ಸಂಸ್ಥಾನಸಂಯುಕ್ತ ರಾಷ್ಟ್ರ ಸಂಸ್ಥೆರನ್ನರಾಜಕೀಯ ಪಕ್ಷಅರಳಿಮರಕರ್ನಾಟಕ ಐತಿಹಾಸಿಕ ಸ್ಥಳಗಳುಛತ್ರಪತಿ ಶಿವಾಜಿಕೃಷಿದ್ರೌಪದಿಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಕೆ. ಅಣ್ಣಾಮಲೈತಾಳಗುಂದ ಶಾಸನಸಾಲುಮರದ ತಿಮ್ಮಕ್ಕಇಸ್ಲಾಂ ಧರ್ಮಆರ್ಯರುಇನ್ಸ್ಟಾಗ್ರಾಮ್ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಚುನಾವಣೆಜಿ.ಪಿ.ರಾಜರತ್ನಂಹನುಮಂತನಾಟಕರಾಘವಾಂಕರೇಣುಕಬರವಣಿಗೆದೀಪಾವಳಿಗಣರಾಜ್ಯಮಲ್ಲಿಕಾರ್ಜುನ್ ಖರ್ಗೆಭಾರತೀಯ ಸಂವಿಧಾನದ ತಿದ್ದುಪಡಿಸಿದ್ದರಾಮಯ್ಯವಾಟ್ಸ್ ಆಪ್ ಮೆಸ್ಸೆಂಜರ್ಜಯಚಾಮರಾಜ ಒಡೆಯರ್ಭಾರತದ ಇತಿಹಾಸಆರ್ಯಭಟ (ಗಣಿತಜ್ಞ)ಕ್ರಿಕೆಟ್ಯೂಟ್ಯೂಬ್‌ದಿಕ್ಕುನೀತಿ ಆಯೋಗಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಕೋವಿಡ್-೧೯ಅವಿಭಾಜ್ಯ ಸಂಖ್ಯೆಸರ್ವೆಪಲ್ಲಿ ರಾಧಾಕೃಷ್ಣನ್ಹಾಗಲಕಾಯಿಪಿ.ಲಂಕೇಶ್ಡೊಳ್ಳು ಕುಣಿತಹೈನುಗಾರಿಕೆಮಳೆಗಾಲಮಾಧ್ಯಮಸರ್ವಜ್ಞಪ್ರೀತಿಬಾಲ ಗಂಗಾಧರ ತಿಲಕಚಾಮರಾಜನಗರಹಾಲುಕನ್ನಡದಲ್ಲಿ ಮಹಿಳಾ ಸಾಹಿತ್ಯಕನ್ನಡಪ್ರಭಹಿಂದೂ ಧರ್ಮ🡆 More