ಕಾಲೇಜು ಶಿಕ್ಷಣ

ಉನ್ನತ ಪ್ರೌಢಶಾಲೆಯ (ಹೈಯರ್ ಸೆಕೆಂಡರಿ ಸ್ಕೂಲ್) ಅನಂತರದ ಶಿಕ್ಷಣ; ಸಾಮಾನ್ಯವಾಗಿ ಸಾಂಸ್ಕೃತಿಕ ಶಿಕ್ಷಣಕ್ಕೆ ಮಾತ್ರ ಈ ಹೆಸರನ್ನು ಬಳಸುವುದು ಸಂಪ್ರದಾಯವಾಗಿದ್ದರೂ ಈಚೆಗೆ ಆ ಮಟ್ಟದ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣಕ್ಕೂ ಬಳಸಲಾಗುತ್ತಿದೆ; ಸ್ನಾತಕೋತ್ತರ ಶಿಕ್ಷಣಕ್ಕೂ ಇದೇ ಹೆಸರಿದೆ.

ಇತಿಹಾಸ

ಉನ್ನತ ಶಿಕ್ಷಣದ ಅಥವಾ ವಿಶ್ವವಿದ್ಯಾಲಯದ ಶಿಕ್ಷಣದ ಪ್ರಥಮ ಪದವಿಯ ಶಿಕ್ಷಣ ಇದರ ಮೊದಲ ಹಂತ; ಇದರ ಎರಡನೆಯ ಹಂತವೇ ಸ್ನಾತಕೋತ್ತರ ಶಿಕ್ಷಣ (ಡಾಕ್ಟರೇಟ್ ಮತ್ತು ಸಂಶೋಧನೆಯ ಭಾಗವನ್ನು ಒಳಗೊಂಡಂತೆ); ವಿಶ್ವವಿದ್ಯಾಲಯದ ಅಂಗಸಂಸ್ಥೆಯಲ್ಲಿ ವ್ಯವಸ್ಥೆಗೊಳಿಸಿರುವ ಯಾವುದೇ ರೀತಿಯ ಶಿಕ್ಷಣಕ್ಕೂ ಇದನ್ನು ಬಳಸುವುದೂ ಉಂಟು; ಸ್ವಯಮಾಧಿಕಾರ ಹೊಂದಿರುವ ವಿಶ್ವವಿದ್ಯಾಲಯದ ಯಾವುದೇ ಸಂಸ್ಥೆಯೊಂದು ವ್ಯವಸ್ಥೆಗೊಳಿಸಿರುವ ಶಿಕ್ಷಣವಿದು.ಸಾಮಾನ್ಯವಾಗಿ ಕಾಲೇಜು ಶಿಕ್ಷಣ ಹದಿನೆಂಟನೆಯ ವರ್ಷದಿಂದ ಆರಂಭವಾಗುತ್ತದೆ. ಅದುವರೆಗೆ 5 ವರ್ಷ ವಯಸ್ಸಿನಿಂದ ಹನ್ನೊಂದು-ಹನ್ನೆರಡು ವರ್ಷಗಳ ಪೂರ್ವಭಾವಿ ಶಿಕ್ಷಣ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದೊರಕಿರುತ್ತದೆ. ಪ್ರಾಚೀನ ಭಾರತದಲ್ಲಿ 16-18ನೆಯ ವಯಸ್ಸಿನ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಶಿಕ್ಷಣವೀಯುತ್ತಿದ್ದ ಉನ್ನತ ಶಿಕ್ಷಣ ಸಂಸ್ಥೆಗಳೆಲ್ಲ ಕಾಲೇಜು ಮಟ್ಟದ ಶಿಕ್ಷಣವೀಯುತ್ತಿದ್ದುವೆಂದು ಭಾವಿಸುವುದುಂಟು. ಆ ಶಿಕ್ಷಣ 6-8 ವರ್ಷಗಳ ಕಾಲಾವಧಿಯ ವರೆಗೆ ನಡೆಯುತ್ತಿತ್ತು. ಇಂದು ವಿಶ್ವವಿದ್ಯಾಲಯದ ಇಡೀ ಶಿಕ್ಷಣಕ್ಕೆ ಈ ಹೆಸರನ್ನು ಬಳಸುವಾಗ ಈ ಕಾಲವಧಿ ಒಪ್ಪುವಂತೆಯೇ ಇರುವುದು ಸ್ಪಷ್ಟವಾಗುತ್ತದೆ.

ಕಾಲೇಜು ಶಿಕ್ಷಣದ ಉದ್ದೇಶ

ವಿಶ್ವವಿದ್ಯಾಲಯದ ಅಥವಾ ಉನ್ನತ ಶಿಕ್ಷಣದ ಉದ್ದೇಶವೇ ಕಾಲೇಜು ಶಿಕ್ಷಣದ ಉದ್ದೇಶವೂ ಆಗಿದೆ, ಜ್ಞಾನ ಸಂಸ್ಕೃತಿಗಳ ಪರಿಚಯ, ವಿವೇಚನೆ ಮತ್ತು ಸಂವರ್ಧನ ಇವೆಲ್ಲವನ್ನೂ ಅದು ಒಳಗೊಂಡಿದೆ. ಈ ಮೂರು ಉದ್ದೇಶಗಳಲ್ಲಿ ಕೇವಲ ಪ್ರಥಮ ಪದವಿಗೇ ಮೀಸಲಾಗಿರುವ ಕಾಲೇಜು ಶಿಕ್ಷಣದಲ್ಲಿ ಕೊನೆಯೆರಡು ಉದ್ದೇಶಗಳು ಪ್ರಧಾನವೆನಿಸುತ್ತವೆ. ಕಾಲೇಜಿಗೆ ಶಿಕ್ಷಣದಲ್ಲಿ ಕೊನೆಯೆರಡು ಉದ್ದೇಶಗಳು ಪ್ರಧಾನವೆನಿಸುತ್ತವೆ. ಕಾಲೇಜಿಗೆ ಬರುವ ವೇಳೆಗೆ ವಿದ್ಯಾರ್ಥಿಗಳು ಸ್ವತಂತ್ರವಾಗಿ ವಿವೇಚಿಸುವ ಶಕ್ತಿ ಪಡೆದಿರುವುದರಿಂದ ಅಲ್ಲಿ ಬೋಧಿಸಿದ ಅಂಶಗಳನ್ನು ಕುರಿತು ಸ್ವಂತ ಅಭಿಪ್ರಾಯವನ್ನು ರೂಪಿಸಿಕೊಂಡು ತಮ್ಮದೇ ಆದ ರೀತಿಯಲ್ಲಿ ವಿಷಯವನ್ನು ಗ್ರಹಿಸುವುದು ಸಾಧ್ಯ. ಸ್ನಾತಕೋತ್ತರ ಶಿಕ್ಷಣಕ್ಕೆ ಇದು ಅಗತ್ಯವೆನಿಸುವ ಪೂರ್ವ ಸಿದ್ಧತೆ. ಇದರ ಆಧಾರದ ಮೇಲೆ ಜ್ಞಾನ ಸಂಸ್ಕøತಿಗಳ ಸಂವರ್ಧನಕ್ಕೆ ನೆರವಾಗುವಂತೆ ಅಲ್ಲಿ ಸಂಶೋಧನೆ ನಡೆಸುವುದು ಸಾಧ್ಯವಾಗುತ್ತದೆ.

ಪ್ರವೇಶ ನಿಯಮಗಳು

ಎಲ್ಲ ದೇಶಗಳಲ್ಲೂ ಕಾಲೇಜು ಶಿಕ್ಷಣದ ಪ್ರವೇಶನಿಯಮಗಳು ಏಕರೀತಿಯಾಗಿಲ್ಲ. ಒಂದು ದೇಶದ ಎಲ್ಲ ಕಾಲೇಜುಗಳೂ ಒಂದೇ ರೀತಿಯ ನಿಯಮಗಳನ್ನು ರೂಪಿಸಿಲ್ಲ. ಅಮೆರಿಕದ ಸಂಯುಕ್ತ ಸಂಸ್ಥಾನದ ಬೇರೆ ಬೇರೆ ರಾಜ್ಯಗಳ ಬೇರೆ ಬೇರೆ ಕಾಲೇಜುಗಳಲ್ಲಿ ಈ ನಿಯಮಗಳು ಹೆಚ್ಚು ವೈವಿಧ್ಯವನ್ನು ತೋರುತ್ತವೆ. ಯೂರೋಪ್, ಇಂಗ್ಲೆಂಡ್ ಮತ್ತು ಭಾರತದ ಕಾಲೇಜುಗಳಲ್ಲೂ ವ್ಯತ್ಯಾಸಗಳಿದ್ದರೂ ಅಷ್ಟು ವೈಪರೀತ್ಯ ಕಂಡುಬರುವುದಿಲ್ಲ. ಸಾಮಾನ್ಯವಾಗಿ ಕಾಲೇಜು ಶಿಕ್ಷಣಕ್ಕೆ ವಿದ್ಯಾರ್ಥಿಯೊಬ್ಬ 11-12 ವರ್ಷಗಳ ವರೆಗೆ ಆಗಲೆ ಶಾಲಾಶಿಕ್ಷಣ ಪಡೆದಿರಬೇಕು. ಎಂದರೆ ಮಾತೃಭಾಷೆ, ರಾಷ್ಟ್ರಭಾಷೆ, ವ್ಯಾವಹಾರಿಕಭಾಷೆ, ಗಣಿತ, ಸಮಾಜಪಾಠ, ವಿಜ್ಞಾನ ಮತ್ತು ಕೆಲವು ವೇಳೆ ಆಯ್ದ ವಿಷಯ-ಇವುಗಳಲ್ಲಿ ಶಿಕ್ಷಣ ಪಡೆದಿದ್ದು ಅಂಗೀಕೃತ ಸೆಕೆಂಡರಿ ಶಿಕ್ಷಣ ಅಥವಾ ಪ್ರೀ-ಯೂನಿವರ್ಸಿಟ್ ಅಥವಾ ಇಂಟರ್‍ಮಿಡಿಯೆಟ್ ಪರೀಕ್ಷಾ ಮಂಡಲಿ ನಡೆಸುವ ಪ್ರಿ-ಯೂನಿವರ್ಸಿಟಿ ಅಥವಾ ಹೈಯರ್ ಸೆಕೆಂಡರಿ ಶಾಲೆ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಬೇಕು. ಅಮೆರಿಕದ ಕೆಲವು ಕಾಲೇಜುಗಳು ವಿದ್ಯಾರ್ಥಿಗೆ 18 ವರ್ಷ ವಯಸ್ಸಾಗಿದ್ದು ಆ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರದಿದ್ದರೂ ಆತ ಕಾಲೇಜಿನ ಶಿಕ್ಷಣಕ್ಕೆ ಯೋಗ್ಯನಾಗಿರುವನೆಂದು ನಿರ್ಧರವಾದರೆ, ಅವನಿಗೆ ಪ್ರವೇಶಾವಕಾಶವನ್ನು ನೀಡುವುದುಂಟು.

ಶಿಕ್ಷಣಾಭಿವೃದ್ಧಿಗೆ ಸಂಬಂಧಿಸಿದಂತೆ ಮೇಲೆ ಸೂಚಿಸಿದ ನಿಯಮಗಳಂತೆ ಇತರ ನಿಯಮಗಳನ್ನೂ ರೂಪಿಸಿರುವುದುಂಟು. ಸೆಕೆಂಡರಿ ಶಾಲಾಪರೀಕ್ಷೆಯಲ್ಲಿ ವಿದ್ಯಾರ್ಥಿ ಪಡೆದುಕೊಂಡಿರುವ ಅಂಶಗಳ ಬಗ್ಗೆ ಕನಿಷ್ಟ ಸೇಕಡಾ ಪ್ರಮಾಣವನ್ನು ಸಮಗ್ರ ಅಥವಾ ಕೆಲವು ವಿಷಯಗಳಲ್ಲಿ ಮಾತ್ರ ಗೊತ್ತುಮಾಡಿರಬಹುದು. ಉದಾ: ಕೆಲವು ತಾಂತ್ರಿಕ ಅಥವಾ ವೈದ್ಯಕೀಯ ಕಾಲೇಜುಗಳು ಆಯ್ದುಕೊಂಡು ವಿಷಯಗಳಲ್ಲಿ ಕನಿಷ್ಟ. ಪಕ್ಷ ಸೇ. 45 ಅಂಕಗಳನ್ನು ಪಡೆದಿರಬೇಕೆಂದು ಪ್ರವೇಶನಿಯಮ ಮಾಡಿರುವುದುಂಟು, ಕೆಲವು ವೃತ್ತಿಶಿಕ್ಷಣದ ಕಾಲೇಜುಗಳು ನಿರ್ದಿಷ್ಟ ವಿಷಯಗಳನ್ನು ಅಧ್ಯಯನ ಮಾಡಿರುವವರನ್ನು ಮಾತ್ರ ಸೇರಿಸಿಕೊಳ್ಳುವುವು. ಉದಾ: ವೈದ್ಯಕೀಯ ಕಾಲೇಜು ಶಿಕ್ಷಣಕ್ಕೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಇತ್ಯಾದಿ ವಿಜ್ಞಾನ ವಿಭಾಗಗಳನ್ನು ಅಭ್ಯಾಸ ಮಾಡಿರುವುದುಂಟು. ಇತರ ಕೆಲವು ಕಾಲೇಜುಗಳು ವಿದ್ಯಾರ್ಥಿಗಳ ಗುಣಶೀಲಗಳಿಗೂ ಮಹತ್ತ್ವ ಕೊಟ್ಟು ಪ್ರವೇಶಾವಕಾಶದ ನಿಯಮಗಳನ್ನು ರೂಪಿಸುವುದುಂಟು: ಅದಕ್ಕಾಗಿ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ವಿದ್ಯಾರ್ಥಿಯ ಗುಣ, ವ್ಯಕ್ತಿತ್ವ, ಶಿಕ್ಷಣ ಕಾರ್ಯಗಳಲ್ಲೂ ಆಟಪಾಟಗಳಲ್ಲೂ ತೆಳೆದಿರುವ ಆಸಕ್ತಿ ಇತ್ಯಾದಿ ಅಂಶಗಳ ಬಗ್ಗೆ ಕೊಟ್ಟಿರುವ ಯೋಗ್ಯತಾಪತ್ರವನ್ನು ಪರಿಗಣನೆಗೆ ತೆಗೆದುಕೊಳ್ಳುವುದಂಟು. ಇನ್ನು ಕೆಲವು ಕಾಲೇಜುಗಳು ಸೆಕೆಂಡರಿ ಶಾಲಾಪರೀಕ್ಷೆಯ ಜೊತೆಗೆ ತಮ್ಮವೇ ಆದ ಪ್ರವೇಶ ಪರೀಕ್ಷೆಗಳನ್ನೂ ನಡೆಸಿ ಅದರಲ್ಲಿ ವಿದ್ಯಾರ್ಥಿ ಪಡೆಯುವ ಫಲಿತಾಂಶವನ್ನು ಆಧಾರ ಮಾಡಿಕೊಳ್ಳುವುದುಂಟು. ಕೆಲವು ವೇಳೆ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರ ಅಭಿರುಚಿ, ವ್ಯಕ್ತಿತ್ವ, ದೈಹಿಕ ಸ್ವರೂಪ, ಸಂವೇಗ ಜೀವನ (ಭಾವಜೀವನ) ಇತ್ಯಾದಿಗಳನ್ನು ಪರಿಶೀಲಿಸುವುದೂ ಉಂಟು. ಅದಕ್ಕಾಗಿ ಅಭಿರುಚಿ ಪರೀಕ್ಷಣ (ಆಪ್ಟಿಟ್ಯೂಡ್ ಟೆಸ್ಟ್), ಬುದ್ಧಿ ಪರೀಕ್ಷಣ, ಆಸಕ್ತಿ, ಪರೀಕ್ಷಣ, ವ್ಯಕ್ತಿತ್ವ ಪರೀಕ್ಷಣ-ಇತ್ಯಾದಿ ಅಳತೆಯ ಸಾಧನಗಳನ್ನು ಬಳಸುವುದು ಅಮೆರಿಕದಲ್ಲಿ ಹೆಚ್ಚು.

ಭಾರತದಲ್ಲಿ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಕಡ್ಡಾಯ ಪ್ರಾಥಮಿಕ ಶಿಕ್ಷಣ ಆಚರಣೆಗೆ ಬಂದ ಮೇಲೆ ಸೆಕೆಂಡರಿ ಶಿಕ್ಷಣ ಅಗಾಧವಾಗಿ ಬೆಳೆದಿದೆ. ಇದರ ಫಲವಾಗಿ ವರ್ಷಂಪ್ರತಿ ಕಾಲೇಜು ಶಿಕ್ಷಣಕ್ಕಾಗಿ ಬರತಕ್ಕವರ ಸಂಖ್ಯೆ 8-10 ಪಾಲು ಹೆಚ್ಚಿದೆ. ಇದರಿಂದ ಅವರೆಲ್ಲರಿಗೂ ಅವಕಾಶ ಕಲ್ಪಿಸುವುದು ಅಸಾಧ್ಯವಾಗಿ ಪ್ರತಿಯೊಂದು ಕಾಲೇಜೂ ವಿದ್ಯಾರ್ಥಿಗಳನ್ನು ಆಯ್ದುಕೊಳ್ಳವುದು ಅನಿವಾರ್ಯವಾಗುತ್ತಿದೆ. ಹಾಗೆ ಮಾಡುವಾಗ ಬಹುಮಟ್ಟಿಗೆ ಹೈಯರ್ ಸೆಕೆಂಡರಿ, ಪ್ರಿ-ಯೂನಿವರ್ಸಿಟಿ ಅಥವಾ ಇಂಟರ್‍ಮಿಡಿಯಟ್ ಪರೀಕ್ಷೆಯಲ್ಲಿ ಪಡೆದ ಅಂಕಗಳ ಪ್ರಮಾಣ ಆಧಾರವಾಗುತ್ತಿದೆ. ಅಷ್ಟಾಗಿ ಅಂಕಗಳನ್ನು ಪಡೆಯದವರನ್ನು ಅಧಿಕ ತಲೆಗಂದಾಯ ವಸೂಲು ಮಾಡಿ ಪ್ರವೇಶಾವಕಾಶ ಕೊಡುವ ಸಂಪ್ರದಾಯವೂ ಕೆಲವು ಖಾಸಗಿ ಕಾಲೇಜುಗಳಲ್ಲಿ ತಲೆಹಾಕಿಕೊಂಡಿದೆ. ಗಿರಿಜನ ಹರಿಜನರಿಗಾಗಿ ಪ್ರವೇಶ ನಿಯಮಗಳನ್ನು ಸಡಿಲ ಮಾಡಿರುವುದುಂಟು.

ಅಮೆರಿಕ, ಭಾರತ ಮುಂತಾದೆಡೆಗಳಲ್ಲಿ ಸೆಕೆಂಡರಿ ಹಂತದ ಕೊನೆಯ ಎರಡು ತರಗತಿಗಳನ್ನು ಪ್ರತ್ಯೇಕಗೊಳಿಸಿ ಜೂನಿಯರ್ ಕಾಲೇಜುಗಳೆಂದು ಕರೆದಿರುವರು. ಅಲ್ಲಿ ಕಾಲೇಜೆಂಬ ಹೆಸರಿದ್ದರೂ ಅದು ಕಾಲೇಜು ಶಿಕ್ಷಣವಲ್ಲ; ಅದು ಪ್ರೌಢಶಾಲಾ ಶಿಕ್ಷಣದ ಮುಂದುವರಿಸಿದ ಶಿಕ್ಷಣ ಮಾತ್ರ. ಇದು ತನಕ ಭಾರತದ ಅನೇಕ ಕಡೆಗಳಲ್ಲಿ ಜೂನಿಯರ್ ಕಾಲೇಜಿನ ಮೊದಲ ವರ್ಷದ ಶಿಕ್ಷಣ ಸೆಕೆಂಡರಿ ಶಾಲೆಗೂ ಎರಡನೆಯ ವರ್ಷದ ಶಿಕ್ಷಣದ ವಿಶ್ವವಿದ್ಯಾನಿಲಯಕ್ಕೂ ಸೇರಿತ್ತು. ಈಗ ಜೂನಿಯರ್ ಕಾಲೇಜುಗಳ ಆಡಳಿತಕ್ಕಾಗಿ ಪ್ರಿ-ಯೂನಿವರ್ಸಿಟಿ ಬೋರ್ಡ್ ಎಂಬ ಪ್ರತ್ಯೇಕ ಸಂಸ್ಥೆಯನ್ನು ಆರಂಭಿಸಲಾಗಿದೆ.

ಕಾಲೇಜುಗಳ ವೈವಿಧ್ಯ

ಪಠ್ಯಕ್ರಮ ಮತ್ತು ಉದ್ದೇಶಗಳನ್ನನುಸರಿಸಿ ಕಾಲೇಜುಗಳನ್ನು ಸಾಂಸ್ಕ್ರತಿಕ ಶಿಕ್ಷಣದ ಕಾಲೇಜುಗಳನ್ನು ಮಾನವಿಕ ವಿಷಯಗಳ ಕಾಲೇಜು, ವಿಜ್ಞಾನ ಶಾಸ್ತ್ರದ ಕಾಲೇಜು, ವಾಣಿಜ್ಯಶಾಸ್ತ್ರದ ಕಾಲೇಜು, ಲಲಿತ ಕಲಾ ಕಾಲೇಜು, ಎಂದು ನಾಲ್ಕು ವಿಧಗಳನ್ನಾಗಿ ಗುರುತಿಸಬಹುದು. ತಾಂತ್ರಿಕ ಶಿಕ್ಷಣದ ಕಾಲೇಜುಗಳೇ ಬೇರೆ; ವೃತ್ತಿಶಿಕ್ಷಣದ ಕಾಲೇಜುಗಳೇ ಬೇರೆ. ತಾಂತ್ರಿಕ ಶಿಕ್ಷಣದ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಮತ್ತು ಔದ್ಯೋಗಿಕ ವಿಜ್ಞಾನದ (ಟೆಕ್ನಾಲಜಿ) ಕಾಲೇಜುಗಳೇ ಬೇರೆ; ವೃತ್ತಿ ಶಿಕ್ಷಣದ ಕಾಲೇಜುಗಳೇ ಬೇರೆ. ವೈದ್ಯ, ವ್ಯವಸಾಯ, ಪಶುವೈದ್ಯ, ನ್ಯಾಯಶಾಸ್ತ್ರ, ಇತ್ಯಾದಿ ವೃತ್ತಿಗಳಲ್ಲಿ ಶಿಕ್ಷಣವೀಯುವ ಸಂಸ್ಥೆಗಳು ವೃತ್ತಿಶಿಕ್ಷಣಕ್ಕೆ ಸೇರುತ್ತವೆ. ಅಧ್ಯಾಪಕರ ವೃತ್ತಿಶಿಕ್ಷಣದ ಕಾಲೇಜುಗಳು ವಿಶಿಷ್ಟ ರೀತಿಯವಾಗಿದ್ದು ಅಧ್ಯಾಪಕರ ವೃತ್ತಿಶಿಕ್ಷಣಕ್ಕೆ ಮೀಸಲಾಗಿವೆ.

ಆಡಳಿತ ದೃಷ್ಟಿಯಿಂದ ಕಾಲೇಜು ಶಿಕ್ಷಣ ಮೂರು ಮುಖ್ಯ ಕ್ಷೇತ್ರಗಳಿಗೆ ಹಂಚಿಹೋಗಿದೆ. ವಿಶ್ವವಿದ್ಯಾನಿಲಯ ಮತ್ತು ಅದರ ಆಂಗಿಕ (ಕಾನ್ಸ್ಟಿಟ್ಯೂಯೆಂಟ್) ಕಾಲೇಜುಗಳಲ್ಲೂ ಸರ್ಕಾರದ, ಸ್ಥಳೀಯ ಸರ್ಕಾರಗಳ ಮತ್ತು ಖಾಸಗಿ ಸಂಸ್ಥೆಗಳ ಅಂಗೀಕೃತ (ಅಫಿಲಿಯೇಟಿಡ್) ಕಾಲೇಜುಗಳಲ್ಲೂ ಆ ಶಿಕ್ಷಣ ಹರಡಿದೆ. ಯುದ್ಧಪೂರ್ವದಲ್ಲಿ ಖಾಸಗಿ ಕಾಲೇಜುಗಳಿಗೆ ಅನುದಾನ ಅಷ್ಟಾಗಿ ಇರಲಿಲ್ಲವಾಗಿ ಅವುಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಈಚೆಗೆ ಅವಕ್ಕೆ ಹೆಚ್ಚು ಉದಾರವಾಗಿ ಧನಸಹಾಯ ದೊರಕುವಂತಾಗಿ ಆ ಕ್ಷೇತ್ರ ಬಹುವಾಗಿ ವಿಸ್ತರಿಸಿದೆ. ಶಿಕ್ಷಣದ ಅಂತಸ್ತನ್ನು ಆಧರಿಸಿ ಪರಿಗಣಿಸಿದಾಗ ಕಾಲೇಜು ಶಿಕ್ಷಣದಲ್ಲಿ ಎರಡು ಹಂತಗಳಿವೆ. ಮೊದಲ ಹಂತದಲ್ಲಿ ಪದವಿಯ ಸ್ನಾತಕ ಪೂರ್ವ ಶಿಕ್ಷಣ (ಅಂಡರ್ ಗ್ರಾಜುಯೇಟ್) ಮತ್ತು ಸ್ನಾತಕೋತ್ತರ ಶಿಕ್ಷಣ (ಪೋಸ್ಟ್ ಗ್ರಾಜುಯೇಟ್). ಎರಡನೆಯ ಹಂತದಲ್ಲಿ ಎಂ.ಎ., ಎಂ.ಎಸ್‍ಸಿ., ಎಂ.ಕಾಂ., ಎಂ.ಇ., ಎಂ.ಎಲ್., ಇತ್ಯಾದಿ ಮಾಸ್ಟರ್ ಪದವಿಯ ಶಿಕ್ಷಣವೂ ಡಾಕ್ಟರ್ ಪದವಿಯ ಶಿಕ್ಷಣವೂ ಇತರ ಉನ್ನತ ಸಂಶೋಧನೆಯ ಶಿಕ್ಷಣವೂ ಸೇರಿವೆ. ಬಹುಮಟ್ಟಿಗೆ ಸ್ನಾತಕೋತ್ತರ ಶಿಕ್ಷಣ ವಿಶ್ವವಿದ್ಯಾನಿಲಯದ ಬೇರೆ ಬೇರೆ ವಿಭಾಗಗಳಲ್ಲಿ ಅಥವಾ ಆಂಗಿಕ ಸಂಸ್ಥೆಗಳಲ್ಲಿ ಇದ್ದು, ಅದರ ನೇರ ಆಡಳಿತದಲ್ಲಿ ನಡೆಯುತ್ತದೆ. ಎಲ್ಲೊ ಕೆಲವು ಅಂಗೀಕೃತ ಕಾಲೇಜುಗಳಲ್ಲೂ ಸ್ನಾತಕೋತ್ತರ ಶಿಕ್ಷಣದ ವ್ಯವಸ್ಥೆಯುಂಟು. ಮುಂದೆ ನೂತನವಾಗಿ ವಿಶ್ವವಿದ್ಯಾನಿಲಯವೊಂದನ್ನು ಆರಂಭಿಸಬೇಕಾಗಿರುವ ಸ್ಥಳದಲ್ಲೂ ಸ್ನಾತಕೊತ್ತರ ಶಿಕ್ಷಣ ಕೇಂದ್ರವನ್ನು ಪೂರ್ವಭಾವಿಯಾಗಿ ಆರಂಭಿಸುವುದುಂಟು.

ಕೆಲವು ಶಿಕ್ಷಣಸಂಸ್ಥೆಗಳು ಕಾಲೇಜು ಎಂಬ ಹೆಸರನ್ನು ಹೊಂದಿಲ್ಲವಾದರೂ ಕಾಲೇಜು ಹಂತದ ಶಿಕ್ಷಣವನ್ನು ವ್ಯವಸ್ಥೆಗೊಳಿಸಿರುತ್ತವೆ. ಉದಾ: ಸ್ಕೂಲ್ ಆಫ್ ಮೆಡಿಸನ್, ಸ್ಕೂಲ್ ಆಫ್ ಮೈನಿಂಗ್, ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್-ಇತ್ಯಾದಿ.

ಭಾರತದಲ್ಲಿ ಕಾಲೇಜು ಶಿಕ್ಷಣ : ಪ್ರಾಚೀನ ಭಾರತದಲ್ಲಿ ಕಾಲೇಜು ಮಟ್ಟದ ಶಿಕ್ಷಣ ತುಂಬ ಅಭಿವೃದ್ಧಿ ಸ್ಥಿತಿಯಲ್ಲಿತ್ತು. ವೇದಗಳ ಆರಂಭ ಕಾಲದಲ್ಲಿ ಮೊದಲಾದ ಆ ಶಿಕ್ಷಣ ಮಧ್ಯಯುಗಗಳ ವರೆಗೂ ನಡೆದುಕೊಡು ಬಂದು ಮುಸಲ್ಮಾನರ ದಾಳಿಗೆ ಸಿಕ್ಕು ನಾಮಾವಶೇಷವಾಯಿತು. ಅಳಿದುಳಿದುಕೊಂಡಿದ್ದ ಕೆಲವು ಕಾಲೇಜುಗಳು 19ನೆಯ ಶತಮಾನದ ಮಧ್ಯಕಾಲದಲ್ಲಿ ಇಂಗ್ಲಿಷ್ ಶಿಕ್ಷಣ ಪದ್ಧತಿ ಆರಂಭವಾದಂತೆ ಕೊನೆಗೊಂಡುವು. ಬಂಗಾಳ, ಬಿಹಾರಗಳಲ್ಲಿ ಇನ್ನೂ ಉಳಿದುಕೊಂಡು ಬಂದಿರುವ ಕೆಲವು ತೋಲ್ ಎಂಬ ಸಂಸ್ಕøತ ಶಿಕ್ಷಣಸಂಸ್ಥೆಗಳೂ ಮದ್ರಸಾ ಎಂಬ ಮುಸಲ್ಮಾನರ ಸಂಸ್ಥೆಗಳೂ ಸಂಸ್ಕ್ರತ ಮಹಾಪಾಠಶಾಲೆಗಳೂ ಇಂದಿಗೂ ಅವನ್ನು ನೆನಪಿಗೆ ತರುವಂತೆ ನಡೆದುಕೊಂಡು ಬರುತ್ತಿವೆ. ಕ್ರಿ.ಪೂ. 7ನೆಯ ಶತಮಾನಕ್ಕೂ ಹಿಂದೆ ಆರಂಭವಾಗಿದ್ದ ತಕ್ಷಶಿಲೆಯ ವಿಶ್ವವಿದ್ಯಾನಿಲಯ ಇಲ್ಲಿನ ಪ್ರಾಚೀನತಮ ಉನ್ನತ ಶಿಕ್ಷಣ ಸಂಸ್ಥೆ. ಮೊದಮೊದಲು ಇದು ಬ್ರಾಹ್ಮಣ (ಹಿಂದೂ) ವಿದ್ಯಾಕೇಂದ್ರವಾಗಿದ್ದರೂ ಕ್ರಿ.ಪೂ. ಎರಡನೆಯ ಶತಮಾನದ ವೇಳೆಗೆ ಬೌದ್ಧ ವಿಶ್ವವಿದ್ಯಾನಿಲಯವಾಯಿತು. ಇಲ್ಲಿ ವೇದ, 18 ಕಲೆ (ವೃತ್ತಿ) ಅಥವಾ ಸಿಪಾಗಳನ್ನು ಕಲಿಸುತ್ತಿದ್ದರು. ಹದಿನೆಂಟು ಕಲೆಗಳಲ್ಲಿ ವೈದ್ಯ, ಧನುರ್ವಿದ್ಯೆ, ಸರ್ಪವಿದ್ಯೆ, ವ್ಯವಸಾಯ, ಮಂತ್ರಗಾರಿಕೆ ಇತ್ಯಾದಿ ವೃತ್ತಿಶಿಕ್ಷಣವೂ ಜೋತಿಷ್ಯ, ಖಗೋಳವಿಜ್ಞಾನ, ಲೆಕ್ಕಗಾರಿಕೆ, ವಾಣಿಜ್ಯ ಇತ್ಯಾದಿಗಳೂ ಸೇರಿದ್ದುವು. ಜೊತೆಗೆ ವ್ಯಾಕರಣ, ತರ್ಕ, ಕಾವ್ಯಮೀಮಾಂಸೆ, ಪುರಾಣ ಇವೂ ಸೇರಿಕೊಂಡಿದ್ದುವು. ಅನಂತರ ಆರಂಭವಾದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಾಶಿ, ನಾಳಂದ, ವಲಭಿ (ವಾಲಾ), ವಿಕ್ರಮಶಿಲ, ಧನ್ಯಕಟಕ ಮುಂತಾದವು ಖ್ಯಾತಿ ಪಡೆದಿದ್ದುವು. ಕರ್ಣಾಟಕದಲ್ಲಿ ದೇವಸ್ಥಾನದ ಅಥವಾ ಮಠಗಳ ಅಂಗವಾಗಿ ಕಾಲೇಜು ಮಟ್ಟದ ಶಿಕ್ಷಣ ವ್ಯವಸ್ಥೆಗೊಂಡಿತ್ತು. ಅಂಥ ಕಾಲೇಜುಗಳಲ್ಲಿ ಸಾಲೊಟಗಿ, ಹೆಬ್ಬಾಳು (ಧಾರವಾಡ ಜಿಲ್ಲೆ), ಭುಜವೇಶ್ವರ ದೇವಾಲಯ, ಚಿತ್ರದುರ್ಗ ಜಿಲ್ಲೆಯ ಜಟಿಂಗ ರಾಮೇಶ್ವರ ದೇವಾಲಯ, ಬಿಜಾಪುರ, ತಾವರೆಗೆರೆ, ಮನಗೋಳಿ, ಬೆಳಗಾಂವಿಯ ದಕ್ಷಿಣೇಶ್ವರ ದೇವಾಲಯ, ತಾಳಗುಂದದ ಪ್ರಣವೇಶ್ವರ ದೇವಾಲಯ ಮುಂತಾದೆಡೆಗಳಲ್ಲಿ ಅಂಥ ಕಾಲೇಜು ಶಿಕ್ಷಣಕ್ಕೆ ವ್ಯವಸ್ಥೆ ಮಾಡಿತ್ತು. ಬಹುಮಟ್ಟಿಗೆ ಅವೆಲ್ಲ ಸಂಸ್ಕ್ರತ ಪಾಠಶಾಲೆಗಳು. ಆ ಕಾಲದಲ್ಲಿ ಅಗ್ರಹಾರಗಳೂ (ಬಾಹ್ಮಣರ ವಸತಿಗಳು) ಬ್ರಹ್ಮಪುರಿಗಳೂ (ನಗರದ ಬ್ರಾಹ್ಮಣರು ವಾಸಿಸುತ್ತಿದ್ದ ಭಾಗಗಳು) ಉನ್ನತ ಶಿಕ್ಷಣದ ಕ್ಷೇತ್ರಗಳಾಗಿದ್ದುವು. ಅವುಗಳಲ್ಲಿ ಅರಸೀಕೆರೆ, ಕಾಡಿಯೂರು, ಸರ್ವಜ್ಞಪುರ (ಅರಸೀಕೆರೆ) ಮುಂತಾದುವನ್ನು ಉಲ್ಲೇಖಿಸಬಹುದು.  

ಆಧುನಿಕ ಭಾರತದಲ್ಲಿ ಕಾಲೇಜು ಶಿಕ್ಷಣ: ಹತ್ತೊಂಬತ್ತನೆಯ ಶತಮಾನದ ಮಧ್ಯಕಾಲದಿಂದ ಭಾರತದಲ್ಲಿ ಇಂದಿನ ರೀತಿಯ ಕಾಲೇಜು ಶಿಕ್ಷಣ ಆರಂಭವಾಯಿತು. ಆ ಶತಮಾನದ ಮಧ್ಯಕಾಲದ ವೇಳೆಗೆ ಸೆಕೆಂಡರಿ ಶಾಲೆಗಳು ಹೆಚ್ಚಿ ಕಾಲೇಜಿನ ಅಗತ್ಯ ಹೆಚ್ಚಿತು. ಅನಂತರ ಇಂಗ್ಲಿಷ್ ಆಡಳಿತ ಅದಕ್ಕೆ ನೀಡಿದ ಪ್ರೋತ್ಸಾಹದಿಂದ ನೂತನ ಮಾದರಿಯ ಕಾಲೇಜುಗಳು ಅಧಿಕ ಸಂಖ್ಯೆಯಲ್ಲಿ ಹೆಚ್ಚಿದುವು. ಸ್ವಾತಂತ್ರ್ಯಾ ನಂತರ ಕಾಲೇಜು ಶಿಕ್ಷಣ 8-10 ಪಾಲು ವಿಸ್ತರಿಸಿತು. ಸದ್ಯದಲ್ಲಿ ಆ ಶಿಕ್ಷಣ ದೇಶಾದ್ಯಂತ ಇರುವ 3,297 ಕಾಲೇಜುಗಳಲ್ಲೂ 9 ಪರಿಗಣಿತ ವಿಶ್ವವಿದ್ಯಾನಿಲಯಗಳಲ್ಲೂ 10 ರಾಷ್ಟ್ರೀಯ ಪ್ರಾಮುಖ್ಯ ಪಡೆದ ಸಂಸ್ಥೆಗಳಲ್ಲೂ ನಡೆಯುತ್ತಿದೆ. ಈ ಕಾಲೇಜುಗಳಲ್ಲಿ 185 ವಿಶ್ವವಿದ್ಯಾಲಯದ ಆಂಗಿಕ ಕಾಲೇಜುಗಳೂ; ಮಿಕ್ಕ 3112 ಅಂಗೀಕೃತ ಕಾಲೇಜುಗಳು. ಅವುಗಳಲ್ಲಿ ಸೇ. 5.4 ರಷ್ಟು ಕಾಲೇಜುಗಳು; ಮಾತ್ರ 1947ರ ಹಿಂದೆ ಆರಂಭವಾಗಿದ್ದುವು. ಮಿಕ್ಕ ಕಾಲೇಜುಗಳು ಅನಂತರ ಆರಂಭವಾದುವು. ಈ ಮಟ್ಟದ ಶಿಕ್ಷಣ ಎಷ್ಟು ತೀವ್ರಗತಿಯಿಂದ ವಿಸ್ತರಿಸಿತೆಂಬುದನ್ನು ಕೆಳಗಿನ ಪಟ್ಟಿ 2ರಲ್ಲಿ ಅರಿತುಕೊಳ್ಳಬಹುದು:

 

ಪಟ್ಟಿ 1

ಬೇರೆ ಬೇರೆ ವಿಷಯ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ಮತ್ತು ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಅವರ ಶೇಕಡಾ ಪ್ರಮಾಣ.

 

1967-68

1968-69

169-70

ವಿಷಯ ವಿ¨sU

ಸಂಖ್ಯಾಬಲ

ಒಟ್ಟು

ಸಂಖ್ಯೆಯ

ಸೇ. ಪ್ರವiಣ

ಸಂಖ್ಯಾಬಲ

ಒಟ್ಟು

ಸಂಖ್ಯೆಯ

ಸೇ. ಪ್ರವiಣ

ಸಂಖ್ಯಾಬಲ

ಒಟ್ಟು

ಸಂಖ್ಯೆಯ

ಪ್ರವiಣ

ಕಾಲಶಾಸ್ತ್ರಗಳ (ಪ್ರಾಚ್ಯವಿದ್ಯೆಯನ್ನೂ ಒಳಗೊಂqಂv)

9,18,345

41.4

10,55,238

42.7

12,18,02

43.6

ಜ್ಞಾನ ಶಾಸû್ರಗಳು

7,38,858

33.3

8,02,369

32.4

9,14,739

32.8

ವಾಣಿಜ್ಯ ಶಾಸ್ತ್ರ

2,19,831

9.9

2,55,568

10.3

2,96,325

10.6

ಕ್ಷಣಶಾಸ್ತ್ರ

43,108

1.9

48,536

2.0

51,854

1.8

ವಾಸ್ತುಶಿಲ್ಪ ಮತ್ತು ಔದ್ಯೋಗಿ ವಿಜ್ಞಾನ

1,04,266

4.7

1,01,380

4.1

97,889

3.5

ವೈದ್ಯಶಾಸ್ತ್ರ

83,422

3.8

90,470

3.7

95,017

3.4

ವ್ಯವಸಾಯಶಾಸ್ತ್ರ

51,639

2.3

53,120

2.1

43,415

1.6

ಪಶುವೈದ್ಯ

6,610

0.3

6,590

0.3

6,131

0.2

ನ್ಯಾಯಶಾಸ್ತ್ರ

44,581

2.0

49,520

2.0

56,240

2.0

ಇvg ವಿಷಯಗಳು

9,318

0.4

10,473

0.4

12,998

0.5

ಒಟ್ಟು ವಿದ್ಯಾಥಿ ಸಂಖ್ಯೆ

22,18,972

 

24,73,264

 

27,92,630

100.0

 

ಪಟ್ಟಿ 2

 

ಆgಂsÀವಾz ವರ್ಷ

   

ಆgಂsÀವಾz ಕಾಲೇಜುಗಳ

ಸೇ. ಸಂಖ್ಯಾಪ್ರವiಣ

1947 ಕ್ಕೆ ಹಿಂದೆ

   

5.4

1948-57

   

6.5

1958-59

   

2.4

1959-60

   

7.7

1961-62

   

6.0

1962-63

   

12.5

1963-64

   

7.1

1964-65

   

35.7

   

ಒಟ್ಟು

100.0

 

ಇಂದಿನ ಕಾಲೇಜುಗಳ ಸಂಖ್ಯೆಯ ಸುಮಾರು ಮುಕ್ಕಾಲುಭಾಗ 1961-64ರ ಅವಧಿಯಲ್ಲಿ ಆರಂಭವಾಗಿರುವುದನ್ನು ಗಮನಿಸಬಹುದು.

ಕಾಲೇಜು ಶಿಕ್ಷಣದಲ್ಲಿ ವಿದ್ಯಾರ್ಥಿ ಸಂಖ್ಯೆ: ಭಾರತದಲ್ಲಿ 1967ರಿಂದ 1970ರ ವರೆಗೆ ವಿವಿಧ ಬಗೆಯ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿ ಸಂಖ್ಯೆಯನ್ನು ಪಟ್ಟಿ 1ರಲ್ಲಿ ಸೂಚಿಸಿದೆ:

1950-51ರಲ್ಲಿ ಈ ಮಟ್ಟದ ಶಿಕ್ಷಣದಲ್ಲಿ ಒಟ್ಟು 2,63,000 ವಿದ್ಯಾರ್ಥಿಗಳಿದ್ದರು. ಅದು 1969-70ರಲ್ಲಿ 27,92,630ಕ್ಕೆ ಹೆಚ್ಚಿದೆ. ವರ್ಷಂಪ್ರತಿ ಸೇ. 19ರಷ್ಟು ಹೆಚ್ಚುತ್ತಿರುವ ಈ ಸಂಖ್ಯೆ 1970-71ರಲ್ಲಿ 31 ಲಕ್ಷದ ಸುಮಾರಿಗೆ ಹೆಚ್ಚುವುದೆಂದು ಊಹಿಸಬಹುದು. 1950-51ರಲ್ಲಿ ಈ ಮಟ್ಟದ ಶಿಕ್ಷಣದಲ್ಲಿದ್ದ ವಿದ್ಯಾರ್ಥಿಗಳ ಒಟ್ಟು ಸಂಖ್ಯಾಪ್ರಮಾಣದಲ್ಲಿ ಕೇವಲ ಸೇ. 13 ರಷ್ಟಿದ್ದ ವಿದ್ಯಾರ್ಥಿನಿಯರ ಸೇ. ಪ್ರಮಾಣ 1969-70ರಲ್ಲಿ ಸೇ. 28ಕ್ಕೆ ಹೆಚ್ಚಿದೆ. ಅದು 1970-71ರ ವೇಳೆಗೆ ಸೇ. 29ಕ್ಕೆ ಹೋಗುವ ನಿರೀಕ್ಷೆಯಿದೆ.  ಆಧುನಿಕ ಕರ್ಣಾಟಕದಲ್ಲಿ ಕಾಲೇಜು ಶಿಕ್ಷಣ: ಕರ್ಣಾಟಕದಲ್ಲಿ ಕಾಲೇಜು ಶಿಕ್ಷಣ ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾನಿಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯ ಮತ್ತು ಕರ್ನಾಟಕದ ವಿಶ್ವವಿದ್ಯಾಲಯ ಈ ನಾಲ್ಕು ವಿಶ್ವವಿದ್ಯಾಲಯಗಳಿಗೆ ಸೇರಿದೆ. ವಿಶ್ವವಿದ್ಯಾನಿಲಯದ 10 ಆಂಗಿಕ ಕಾಲೇಜುಗಳಲ್ಲೂ 227 ಅಂಗೀಕೃತ ಕಾಲೇಜುಗಳಲ್ಲೂ ಎಂದರೆ ಒಟ್ಟನಲ್ಲಿ 237 ಕಾಲೇಜುಗಳಲ್ಲಿ ಅದು ವ್ಯವಸ್ಥೆಗೊಂಡಿದೆ. ಬೆಂಗಳೂರಿನ ಇಂಡಿಯನ್ ಇನ್ಸಿ ಟ್ಯೂಟ್ ಆಫ್ ಸೈನ್ಸ್‍ನಲ್ಲೂ (ಪರಿಗಣಿತ ವಿಶ್ವವಿದ್ಯಾನಿಲಯ) ಅದಕ್ಕೆ ಅವಕಾಶ ಕಲ್ಪಿಸಿದೆ. ಪ್ರಾಚ್ಯವಿದ್ಯೆಗೂ ಸಂಸ್ಕøತಕ್ಕೂ ಸಂಬಂಧಿಸಿದ ಉನ್ನತ ಶಿಕ್ಷಣವನ್ನು ಸಂಸ್ಕøತ ಕಾಲೇಜುಗಳಲ್ಲೂ ಇತರ ಕೆಲವು ಸಂಸ್ಥೆಗಳಲ್ಲೂ ಏರ್ಪಡಿಸಲಾಗಿದೆ.

ಉಲ್ಲೇಖಗಳು

Tags:

ಕಾಲೇಜು ಶಿಕ್ಷಣ ಇತಿಹಾಸಕಾಲೇಜು ಶಿಕ್ಷಣ ದ ಉದ್ದೇಶಕಾಲೇಜು ಶಿಕ್ಷಣ ಪ್ರವೇಶ ನಿಯಮಗಳುಕಾಲೇಜು ಶಿಕ್ಷಣ ಕಾಲೇಜುಗಳ ವೈವಿಧ್ಯಕಾಲೇಜು ಶಿಕ್ಷಣ ಉಲ್ಲೇಖಗಳುಕಾಲೇಜು ಶಿಕ್ಷಣ

🔥 Trending searches on Wiki ಕನ್ನಡ:

ಚಿನ್ನರಾಷ್ಟ್ರಕೂಟಅರಳಿಮರಹುರುಳಿಕೆ. ವಿಜಯ (ನಟಿ)ಗ್ರಂಥ ಸಂಪಾದನೆಭಾರತದ ಚಲನಚಿತ್ರೋದ್ಯಮಸವರ್ಣದೀರ್ಘ ಸಂಧಿಬ್ಯಾಂಕ್ ಖಾತೆಗಳುಪರಿಸರ ಶಿಕ್ಷಣಕಾವೇರಿ ನದಿಕರ್ಣಾಟಕ ಸಂಗೀತರಾಮ ಮಂದಿರ, ಅಯೋಧ್ಯೆಬೆಳಗಾವಿವಿವಾಹಶಿಕ್ಷಣಮಧುಕೇಶ್ವರ ದೇವಾಲಯಉತ್ತರ ಕರ್ನಾಟಕಸಂವತ್ಸರಗಳುಸ್ತ್ರೀಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಮೂಲಭೂತ ಕರ್ತವ್ಯಗಳುಸಿದ್ಧಯ್ಯ ಪುರಾಣಿಕಕರ್ನಾಟಕದಲ್ಲಿ ಸಹಕಾರ ಚಳವಳಿಅಶ್ವತ್ಥಮರಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕರ್ನಾಟಕದ ಏಕೀಕರಣಜ್ವರಎಕರೆಅರ್ಥಶಾಸ್ತ್ರಕಿತ್ತೂರು ಚೆನ್ನಮ್ಮಬಾಲ್ಯ ವಿವಾಹಜೀವವೈವಿಧ್ಯಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಎಸಳುಯಜಮಾನ (ಚಲನಚಿತ್ರ)ಸಂಸದೀಯ ವ್ಯವಸ್ಥೆಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಚೋಳ ವಂಶಜವಾಹರ‌ಲಾಲ್ ನೆಹರುಜಯಚಾಮರಾಜ ಒಡೆಯರ್ಸಂವಹನಬಿಳಿ ರಕ್ತ ಕಣಗಳುಓಂ ನಮಃ ಶಿವಾಯಅಸ್ಪೃಶ್ಯತೆಪರಿಣಾಮಚಿದಾನಂದ ಮೂರ್ತಿಸೂತ್ರದ ಗೊಂಬೆಯಾಟದಾದಾ ಭಾಯಿ ನವರೋಜಿಕ್ಯಾನ್ಸರ್ಭಾರತದ ಪ್ರಧಾನ ಮಂತ್ರಿಪ್ಲೇಟೊಊಳಿಗಮಾನ ಪದ್ಧತಿಮದಕರಿ ನಾಯಕತಮಿಳುನಾಡುಮಂಕುತಿಮ್ಮನ ಕಗ್ಗಶಾಲೆರಾಬರ್ಟ್ (ಚಲನಚಿತ್ರ)ಝೊಮ್ಯಾಟೊತುಮಕೂರುಉಪ್ಪಿನ ಸತ್ಯಾಗ್ರಹದ್ರಾವಿಡ ಭಾಷೆಗಳುಜೈಜಗದೀಶ್ಮಂಗಳೂರುಭಾರತದ ವಿಜ್ಞಾನಿಗಳುದಿಕ್ಸೂಚಿಜಾತಕ ಕಥೆಗಳುಮೇಘಾ ಶೆಟ್ಟಿಯಾಣಹೊಯ್ಸಳ ವಾಸ್ತುಶಿಲ್ಪಕನ್ನಡ ರಂಗಭೂಮಿಸೌರಮಂಡಲಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್ಭಾರತದ ರಾಷ್ಟ್ರೀಯ ಉದ್ಯಾನಗಳುಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಭಾಷೆವಚನಕಾರರ ಅಂಕಿತ ನಾಮಗಳುಸುದೀಪ್ಹೊಯ್ಸಳ🡆 More