ಅಂದಾನಪ್ಪ ದೊಡ್ಡಮೇಟಿ

ಅಂದಾನಪ್ಪ ದೊಡ್ಡಮೇಟಿ (1908-72).

ಕರ್ನಾಟಕ ಏಕೀಕರಣಕ್ಕಾಗಿ ದುಡಿದ ರಾಜಕಾರಣಿ.

ಜನನ ಮತ್ತು ಜೀವನ

ಇಂದಿನ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮದಲ್ಲಿ 1908 ಮಾರ್ಚ್ 8ರಂದು ಜನಿಸಿದರು. ಚಿಕ್ಕಂದಿನಲ್ಲಿ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು. 22ನೆಯ ವಯಸ್ಸಿನಲ್ಲಿ ಅಸಹಕಾರ ಆಂದೋಲನ ಮತ್ತು ಸತ್ಯಾಗ್ರಹಗಳಲ್ಲಿ ಭಾಗವಹಿಸಿದರು. 1933ರ ಕಾಯಿದೆ ಭಂಗ ಚಳವಳಿಯಲ್ಲಿ ಪಾಲ್ಗೊಂಡು ಸರ್ಕಾರದ ಆಗ್ರಹಕ್ಕೆ ಒಳಗಾಗಿ ಬಂದಿಸಲ್ಪಟ್ಟರು. ಇವರು ಅನೇಕ ಬಾರಿ ಕಾರಾಗೃಹ ವಾಸ ಅನುಭವಿಸಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ದುಡಿದರು.

ಕನ್ನಡದ ಕಟ್ಟಾಳು

ಶ್ರಿಮಂತ ಜಮೀನುದಾರರಾಗಿದ್ದ ಅಂದಾನಪ್ಪನವರು ಒಮ್ಮೆ ಊರಿಗೆ ಬರ ಬಂದಾಗ ತಮ್ಮಲ್ಲಿದ್ದ ಧಾನ್ಯವನ್ನು ಜನರಿಗೆ ಹಂಚಿದರಲ್ಲದೆ ನಿರುದ್ಯೋಗ ನಿವಾರಣೆಗಾಗಿ ಜನರಿಗೆ ಕೆಲಸ ಒದಗಿಸಿದರು. ಹಾವು ಸಾಕುವುದು ಇವರ ಒಂದು ಹವ್ಯಾಸವಾಗಿತ್ತು. ತಮ್ಮ ಪ್ರೀತಿ ಪಾತ್ರ ಹಾವೊಂದು ಸತ್ತಾಗ ಇವರು ಉಪವಾಸ ಮಾಡಿದರಂತೆ. ಅಂದಾನಪ್ಪವನರು ಕನ್ನಡ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿದ್ದರು. ಕನ್ನಡ ಭುವನೇಶ್ವರಿಯನ್ನು ಸ್ತುತಿಸುವ ಕರ್ನಾಟಕ ಮಹಿಮಾಸ್ತೋತ್ರ ಎಂಬುದು ಇವರ ಕವನಸಂಗ್ರಹ. ಇವರು ಪತ್ರಿಕೋದ್ಯಮಿ ಯಾಗಿದ್ದರು. ಕಲ್ಕಿ ಎಂಬ ಮಾಸಪತ್ರಿಕೆ ಯನ್ನು ಇವರು ಕೆಲವುಕಾಲ ಗದಗಿನಿಂದ ಪ್ರಕಟಿಸುತ್ತಿದ್ದರು. ಮುಂಬಯಿಯ ವಿಧಾನಸಭೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಕನ್ನಡ ದಲ್ಲಿ ಮಾತನಾಡಿದರು. ಕರ್ನಾಟಕ ಏಕೀಕರಣ ಪ್ರಯತ್ನವನ್ನು ಬಲ ಪಡಿಸಿ,ಹೆಚ್ಚು ಕಾಲವನ್ನು ಅದಕ್ಕಾಗಿ ಮೀಸಲಿಟ್ಟು ಮುಂಬಯಿ ವಿಧಾನ ಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಏಕೀಕರಣಗೊಂಡ ವಿಶಾಲ ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲು ವಿಧಾನ ಸಭೆಯಲ್ಲಿ ಪದೇಪದೇ ವಾದಿಸುತ್ತಿದ್ದರು.

ರಾಜಕೀಯ

1970-71ರಲ್ಲಿ ದೊಡ್ಡಮೇಟಿಯವರು ರಾಜ್ಯದ ನೀರಾವರಿ ಖಾತೆಯ ಸಹಾಯಕ ಮಂತ್ರಿಗಳಾಗಿದ್ದರು.

ನಿಧನ

1972 ಫೆಬ್ರವರಿ 21ರಂದು, ನಿಧನರಾದರು.

ಉಲ್ಲೇಖಗಳು



Tags:

ಅಂದಾನಪ್ಪ ದೊಡ್ಡಮೇಟಿ ಜನನ ಮತ್ತು ಜೀವನಅಂದಾನಪ್ಪ ದೊಡ್ಡಮೇಟಿ ಕನ್ನಡದ ಕಟ್ಟಾಳುಅಂದಾನಪ್ಪ ದೊಡ್ಡಮೇಟಿ ರಾಜಕೀಯಅಂದಾನಪ್ಪ ದೊಡ್ಡಮೇಟಿ ನಿಧನಅಂದಾನಪ್ಪ ದೊಡ್ಡಮೇಟಿ ಉಲ್ಲೇಖಗಳುಅಂದಾನಪ್ಪ ದೊಡ್ಡಮೇಟಿಕರ್ನಾಟಕ

🔥 Trending searches on Wiki ಕನ್ನಡ:

ಮಾನವ ಹಕ್ಕುಗಳುದ್ಯುತಿಸಂಶ್ಲೇಷಣೆಬ್ಯಾಡ್ಮಿಂಟನ್‌ಶಾಸನಗಳುಭಾರತದಲ್ಲಿನ ಶಿಕ್ಷಣಸಿಂಧನೂರುಝಾನ್ಸಿ ರಾಣಿ ಲಕ್ಷ್ಮೀಬಾಯಿಸುರಪುರದ ವೆಂಕಟಪ್ಪನಾಯಕಭೂಮಿ ದಿನಬಹಮನಿ ಸುಲ್ತಾನರುತಂತ್ರಜ್ಞಾನದ ಉಪಯೋಗಗಳುಅವರ್ಗೀಯ ವ್ಯಂಜನಕೃಷ್ಣದೇವರಾಯಸಿ. ಆರ್. ಚಂದ್ರಶೇಖರ್ಬರವಣಿಗೆಬೆಂಗಳೂರು ಗ್ರಾಮಾಂತರ ಜಿಲ್ಲೆಏಡ್ಸ್ ರೋಗಕೃಷ್ಣಾ ನದಿಅರಳಿಮರಕೊಪ್ಪಳಹನುಮಾನ್ ಚಾಲೀಸಎಚ್.ಎಸ್.ಶಿವಪ್ರಕಾಶ್ಪಾಲಕ್ಆಟಗಾರ (ಚಲನಚಿತ್ರ)ಅನುನಾಸಿಕ ಸಂಧಿಗಣಗಲೆ ಹೂಭಾರತದ ಇತಿಹಾಸಜಲ ಮಾಲಿನ್ಯದುರ್ಗಸಿಂಹಭಾರತೀಯ ಸಮರ ಕಲೆಗಳುಛಂದಸ್ಸುಗೋಲ ಗುಮ್ಮಟಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಮಹಾಭಾರತಲೋಪಸಂಧಿಚುನಾವಣೆವಿನಾಯಕ ಕೃಷ್ಣ ಗೋಕಾಕಕಂದಡಾ ಬ್ರೋಇಂದಿರಾ ಗಾಂಧಿಚಾಲುಕ್ಯಕೃಷಿ ಉಪಕರಣಗಳುಅಕ್ಬರ್ಕನ್ನಡ ರಂಗಭೂಮಿದಯಾನಂದ ಸರಸ್ವತಿಪುಟ್ಟರಾಜ ಗವಾಯಿಭಾರತದ ಬಂದರುಗಳುಭಾರತಬಾಲ ಗಂಗಾಧರ ತಿಲಕಸೂರ್ಯವ್ಯೂಹದ ಗ್ರಹಗಳುಶಬ್ದಮಣಿದರ್ಪಣವೀರಗಾಸೆಜೋಳಕ್ರೀಡೆಗಳುಹೊಯ್ಸಳ ವಾಸ್ತುಶಿಲ್ಪಭಾರತೀಯ ಜನತಾ ಪಕ್ಷಕಲಬುರಗಿಕರ್ನಾಟಕ ವಿಶ್ವವಿದ್ಯಾಲಯಭಾರತದ ಸರ್ವೋಚ್ಛ ನ್ಯಾಯಾಲಯನಾಡ ಗೀತೆಕಂಪ್ಯೂಟರ್ಲೋಕಸಭೆಚಿದಾನಂದ ಮೂರ್ತಿಮಾಸಸ್ತ್ರೀಮಿಂಚುಆದಿವಾಸಿಗಳುನಾಥೂರಾಮ್ ಗೋಡ್ಸೆಭಾರತದ ಚುನಾವಣಾ ಆಯೋಗಹಿಂದೂ ಮಾಸಗಳುಅಂತರಜಾಲಮಗಧಕನ್ನಡ ಜಾನಪದಶಾಂತಲಾ ದೇವಿಮುಟ್ಟು🡆 More