ಅಂಕೇಗೌಡ


ಸುಮಾರು ನಾಲ್ಕು ಲಕ್ಷ ಪುಸ್ತಕಗಳನ್ನೂ, ನಾಣ್ಯ ಸಂಗ್ರಹ, ಅಂಚೆ ಚೀಟಿಗಳ ಸಂಗ್ರಹ, ಲಗ್ನಪತ್ರಿಕೆಗಳ ಸಂಗ್ರಹವನ್ನೂ ತನ್ನ ಒಡಲಿನಲ್ಲಿರಿಸಿಕೊಂಡಿರುವ ಮಂಡ್ಯದ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯಲ್ಲಿರುವ ಪುಸ್ತಕದ ಮನೆಯನ್ನು ಸಾರ್ವಜನಿಕರಿಗಾಗಿ, ಗ್ರಾಮೀಣ ಪ್ರದೇಶದ ಪುಸ್ತಕ ಪ್ರಿಯರಿಗಾಗಿ ನೀಡಿರುವ "ಎಂ. ಅಂಕೇಗೌಡ"ರು ಸಾಮಾನ್ಯರಲ್ಲಿ ಅಸಾಮಾನ್ಯರು. ಅಂಕೇಗೌಡರು ಪಾಂಡವಪುರ ತಾಲ್ಲೂಕಿನ ಚಿನಕುರಳಿಯಲ್ಲಿ ಹುಟ್ಟಿದರು. ಮೈಸೂರು ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಆಗಿ ಕೆಲಸಕ್ಕೆ ಸೇರಿದ ಅಂಕೇಗೌಡರು ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. ಪದವಿ ಪಡೆದರು. ನಂತರ ಅಂಚೆ ಮತ್ತು ತೆರಪಿನ ಮೂಲಕ ಕನ್ನಡ ಎಂ.ಎ. ಪದವಿ ಪಡೆದರು. ಸಕ್ಕರೆ ಕಾರ್ಖಾನೆಯಲ್ಲಿ ವೇಳಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಅಂಕೇಗೌಡರು ತಮ್ಮ ಸಂಬಳದ ಬಹುಭಾಗವನ್ನು ಪುಸ್ತಕ ಕೊಳ್ಳಲು ಬಳಸಿದ್ದಾರೆ. ಪುಸ್ತಕ ಸಂಗ್ರಹಕ್ಕಾಗಿ ನಿವೇಶನವನ್ನು ಮಾರಿದ್ದಾರೆ. ಉದ್ಯಮಿ ಹರಿ ಕೋಡೆ ಅವರು ಪುಸ್ತಕಗಳನ್ನು ಇಡಲು ಪಾಂಡವಪುರದ ವಿಶ್ವೇಶ್ವರನಗರ ಬಡಾವಣೆಯಲ್ಲಿ ಒಂದು ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದಾರೆ. ಅಂಕೇಗೌಡರ ಪುಸ್ತಕದ ಮನೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗೆ ಸೇರಿದೆ.

ಪ್ರಶಸ್ತಿಗಳು

  • ೨೦೧೪ರ ರಾಜ್ಯೋತ್ಸವ ಪ್ರಶಸ್ತಿ
  • ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಸಾಹಿತ್ಯ ಪರಿಚಾರಕ ಪ್ರಶಸ್ತಿ
  • ೨೦೧೮ರಲ್ಲಿ ನಡೆದ ಪಾಂಡವಪುರ ತಾಲ್ಲೂಕು ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಉಲ್ಲೇಖಗಳು

ಹೊರಕೊಂಡಿಗಳು

Tags:

🔥 Trending searches on Wiki ಕನ್ನಡ:

ಸಂಧಿಆಯುರ್ವೇದಸಾರ್ವಭೌಮತ್ವಪರಿಣಾಮಮುತ್ತುಗಳುಸಿದ್ದಲಿಂಗಯ್ಯ (ಕವಿ)ದಾಸವಾಳರಾಮಾಯಣಕನ್ನಡ ರಂಗಭೂಮಿಗೋಪಾಲಕೃಷ್ಣ ಅಡಿಗರಾಷ್ಟ್ರೀಯತೆಉಪ್ಪಾರಸಂಸ್ಕೃತಯಮಭಾರತದ ಪಂಚಾಯತ್ ರಾಜ್ ವ್ಯವಸ್ಥೆಹೆಚ್.ಡಿ.ದೇವೇಗೌಡಚಾಮರಾಜನಗರಪುಟ್ಟರಾಜ ಗವಾಯಿಭಕ್ತಿ ಚಳುವಳಿರಾಷ್ಟ್ರೀಯ ಉತ್ಪನ್ನಆಯ್ದಕ್ಕಿ ಲಕ್ಕಮ್ಮಜನ್ನದೀಪಾವಳಿಭಾರತದಲ್ಲಿ ಬಡತನವ್ಯಾಪಾರಮನಮೋಹನ್ ಸಿಂಗ್ಪರೀಕ್ಷೆಗುಬ್ಬಚ್ಚಿವಿಧಾನಸೌಧಬೊಜ್ಜುಕನ್ನಡ ಅಭಿವೃದ್ಧಿ ಪ್ರಾಧಿಕಾರವಾಣಿಜ್ಯ(ವ್ಯಾಪಾರ)ಗಣೇಶ ಚತುರ್ಥಿಕರ್ಣವಚನಕಾರರ ಅಂಕಿತ ನಾಮಗಳುಕನ್ನಡದಲ್ಲಿ ಕಾವ್ಯ ಮಿಮಾಂಸೆಕರ್ನಾಟಕದ ಇತಿಹಾಸಬೆಕ್ಕುರಾಜಸ್ಥಾನ್ ರಾಯಲ್ಸ್ಮಂಗಳ (ಗ್ರಹ)ಸ್ತ್ರೀವಾದಒಡ್ಡರು / ಭೋವಿ ಜನಾಂಗಪ್ರಾಥಮಿಕ ಶಾಲೆಮಾನವ ಸಂಪನ್ಮೂಲ ನಿರ್ವಹಣೆನಿರಂಜನಹಂಪೆಆವಕಾಡೊಭಾರತದ ಸಂಸತ್ತುಕಂಪ್ಯೂಟರ್ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಸಾಲುಮರದ ತಿಮ್ಮಕ್ಕಭಾರತದ ಸಂವಿಧಾನ ರಚನಾ ಸಭೆಕರ್ನಾಟಕದ ಜಿಲ್ಲೆಗಳುವಾಸ್ತವಿಕವಾದಕಾಮಸೂತ್ರಹೈನುಗಾರಿಕೆಕಂದಚಾಲುಕ್ಯನುಗ್ಗೆ ಕಾಯಿಶ್ರೀ ರಾಘವೇಂದ್ರ ಸ್ವಾಮಿಗಳುಕರ್ನಾಟಕ ವಿಧಾನ ಪರಿಷತ್ಕುಕ್ಕೆ ಸುಬ್ರಹ್ಮಣ್ಯ ದೇವಾಲಯಶ್ರೀಪಾದರಾಜರುಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿವಿಮೆಭಾರತೀಯ ಸ್ಟೇಟ್ ಬ್ಯಾಂಕ್ಗದ್ಯಕೃಷ್ಣರೈತಭಾರತದ ತ್ರಿವರ್ಣ ಧ್ವಜಮಾವುಸೂರತ್ಭಾರತದ ಸ್ವಾತಂತ್ರ್ಯ ಚಳುವಳಿಶ್ರೀವಿಜಯಸೋಮನಾಥಪುರಶ್ರವಣಬೆಳಗೊಳಗ್ರಾಮ ಪಂಚಾಯತಿ🡆 More