ಯೂಟ್ಯೂಬ್‌

ಯೂಟ್ಯೂಬ್ ಒಂದು ವೀಡಿಯೋ ಹಂಚಿಕೊಳ್ಳುವ ಜಾಲತಾಣವಾಗಿದ್ದು, ಇಲ್ಲಿ ಬಳಕೆದಾರರು ತಮ್ಮ ವೀಡಿಯೋಗಳನ್ನು ಅಪ್‌ಲೋಡ್ ಮಾಡಬಹುದು ಮತ್ತು ಇತರರೊಂದಿಗೆ ಹಂಚಿಕೊಳ್ಳಬಹುದಾಗಿದೆ.

PayPalನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಉದ್ಯೋಗಿಗಳು ಯೂಟ್ಯೂಬ್ ಅನ್ನು ಫೆಬ್ರವರಿ 2005ನಲ್ಲಿ ಸೃಷ್ಟಿಸಿದರು. ನವೆಂಬರ್ 2006ನಲ್ಲಿ, ಯೂಟ್ಯೂಬ್ LLC ಯನ್ನು Google Inc. ಕಂಪನಿಯು $ 1.65 ಬಿಲಿಯನ್‌ಗಳಿಗೆ ಕೊಂಡುಕೊಂಡಿತು, ಮತ್ತು ಈಗ ಅದು Googleನ ಉಪಾಂಗ ಸಂಸ್ಥೆಯಾಗಿ ಕಾರ್ಯಾಚರಣೆ ನಡೆಸುತ್ತದೆ.

ಯೂಟ್ಯೂಬ್‌
ಯೂಟ್ಯೂಬ್‌
೨೦೧೭ರ ನಂತರದ ಯೂಟ್ಯೂಬ್ ಚಿಹ್ನೆ
ಮುಖಪುಟ
ಚಿತ್ರ:Youtube Homepage.jpg
ಡಾರ್ಕ್ ಮೋಡ್‌ನಲ್ಲಿ ಯೂಟ್ಯೂಬ್ ಮುಖಪುಟ
ಜಾಲತಾಣದ ವಿಳಾಸhttps://www.youtube.com
ಘೋಷಣೆBroadcast Yourself
ತಾಣದ ಪ್ರಕಾರಅಂಗಸಂಸ್ಥೆ
ನೊಂದಾವಣಿಐಚ್ಛಿಕ
ಲಭ್ಯವಿರುವ ಭಾಷೆಆಂಗ್ಲ
ಬಳಕೆದಾರರು(ನೊಂದಾಯಿತರೂ ಸೇರಿ)Increase ೨೦೩ ಕೋಟಿ
ವಿಷಯದ ಪರವಾನಗಿಪ್ರಮಾಣಿತ ಪರವಾನಗಿ ಮತ್ತು ಕ್ರಿಯೇಟಿವ್ ಕಾಮನ್
ಬಳಸಿದ ಭಾಷೆಪೈಥಾನ್, ಸಿ++, ಜಾವಾ, ಜಾವಾಸ್ಕ್ರಿಪ್ಟ್, ಗೋ, ಗಿಸ್(Guice)
ಒಡೆಯಆಲ್ಫಾಬೆಟ್ ಇಂಕ್.
ಪ್ರಾರಂಭಿಸಿದ್ದುಫೆಬ್ರವರಿ ೧೪, ೨೦೦೫
ಆದಾಯIncrease ೧೯೮೦ ಕೋಟಿ ಡಾಲರ್(೨೦೨೦ರಲ್ಲಿ)
ಅಲೆಕ್ಸಾ ‍‍ಶ್ರೇಯಾಂಕ

ಈ ಕಂಪನಿ ಕ್ಯಾಲಿಫೊರ್ನಿಯದ ಸ್ಯಾನ್ ಬ್ರೂನೊದಲ್ಲಿ ನೆಲೆಗೊಂಡಿದೆ ಮತ್ತು ಅಡೋಬ್ ಫ್ಲಾಶ್ ವೀಡಿಯೊ ತಂತ್ರಜ್ಞಾನ ಬಳಸಿ ಬಳಕೆದಾರ-ಉತ್ಪಾದಿಸಿದ ಹಲವು ಬಗೆಯ ವೀಡಿಯೋ ವಿಷಯಗಳನ್ನು ಪ್ರದರ್ಶಿಸುತ್ತದೆ. ಇದರಲ್ಲಿ ಚಲನಚಿತ್ರದ ತುಣುಕುಗಳು, ಟಿವಿ ತುಣುಕುಗಳು ಮತ್ತು ಸಂಗೀತದ ವೀಡಿಯೋ ಸೇರಿದಂತೆ ವೀಡಿಯೋ ಬ್ಲಾಗಿಂಗ್ ಹಾಗೂ ಚಿಕ್ಕ ಗಾತ್ರದ ಸ್ವತಂತ್ರ ವೀಡಿಯೋಗಳಂತಹ ಹವ್ಯಾಸಿ ವಿಷಯಗಳು ಒಳಗೊಂಡಿವೆ. ಯೂಟ್ಯೂಬ್‌ನ ಹೆಚ್ಚಿನ ವಿಷಯಗಳನ್ನು ಬಳಕೆದಾರ ವ್ಯಕ್ತಿಗಳು ಸೇರಿಸಿದ್ದಾರೆ, ಆದರು ಯೂಟ್ಯೂಬ್ ಪಾಲುದಾರರ ಕಾರ್ಯಕ್ರಮದ ಅಂತರ್ಗತವಾಗಿ CBS,BBC,UMGಯಂತಹ ಮಾಧ್ಯಮ ಸಂಸ್ಥೆಗಳು ಮತ್ತು ಬೇರೆ ಸಂಘಗಳು ಅವರದೇ ಆದ ಕೆಲವು ವಸ್ತುಗಳನ್ನು ಜಾಲತಾಣದ ಮೂಲಕ ನೀಡುತ್ತಾರೆ.

ನೋಂದಣೆ ಮಾಡಿಕೊಳ್ಳದ ಬಳಕೆದಾರರು ವೀಡಿಯೋಗಳನ್ನು ಬರೀ ನೊಡಬಹುದು. ಆದರೆ, ನೋಂದಣೆ ಆದ ಬಳಕೆದಾರರು ಮಿತಿ ಇಲ್ಲದಷ್ಟು ಸಂಖ್ಯೆಯ ವೀಡಿಯೋಗಳನ್ನು ಸೇರಿಸಲು ಪರವಾನಗಿ ಇದೆ. ಯಾವುದಾದರೂ ವೀಡಿಯೋಗಳು ವಯಸ್ಕರ ಅಂಶಗಳನ್ನು ಹೊಂದಿವೆ ಎಂದು ಕಂಡುಬಂದಾಗ, ಅದನ್ನು ಕೇವಲ ನೋಂದಣಿಯಾದ 18 ವರ್ಷಕ್ಕೂ ಮೇಲ್ಪಟ್ಟ ಬಳಕೆದಾರರಿಗೆ ಮಾತ್ರ ಲಭ್ಯವಿರುವಂತೆ ಮಾಡಿದೆ. ಅವಮಾನ, ಅಶ್ಲೀಲ ವಿಷಯಗಳ ನಿರೂಪಣೆ, ಕೃತಿಸ್ವಾಮ್ಯದ ಉಲ್ಲಂಘನೆಗಳು ಮತ್ತು ಅಪರಾಧಿ ಪ್ರವೃತ್ತಿಯನ್ನು ಉತ್ತೇಜಿಸುವ ವಿಷಯಗಳ ವೀಡಿಯೋಗಳನ್ನು ಸೇರಿಸುವುದನ್ನು ಯೂಟ್ಯೂಬ್‌ನ ಸೇವಾ ನಿಬಂಧನೆಗಳು ನಿಷೇಧಿಸುತ್ತವೆ. ನೋದಣೆಯಾದ ಬಳಕೆದಾರರ ಖಾತೆಯನ್ನು "ಚ್ಯಾನಲ್ಸ್" ಎಂದು ಕರೆಯಲಾಗುತ್ತದೆ.

ಕಂಪನಿಯ ಇತಿಹಾಸ

ಯೂಟ್ಯೂಬ್‌ 
ಸ್ಯಾನ್ ಬ್ರುನೋ , ಕ್ಯಾಲಿಫೋರ್ನಿಯಾದಲ್ಲಿ ಯುಟ್ಯೂಬ್‌ನ ಈಗಿನ ಪ್ರಧಾನ ಕಾರ್ಯಾಲಯ.

ಯೂಟ್ಯೂಬ್ ಅನ್ನು ಚ್ಯಾಡ್ ಹರ್ಲಿ, ಸ್ಟೀವ್ ಚಾನ್ ಮತ್ತು ಜಾವೆದ್ ಕರೀಮ್‌ರವರು ಸ್ಥಾಪಿಸಿದರು. ಈ ಮೂವರು ಮೊದಲು PayPal ಕಂಪನಿಯ ಉದ್ಯೋಗಿಗಳಾಗಿದ್ದರು. ಹರ್ಲಿರವರು ವಿನ್ಯಾಸ ಕುರಿತ ಶಿಕ್ಷಣವನ್ನು ಪೆನಿಸಿಲ್ವೇನಿಯಾದ ಇಂಡಿಯಾನಾ ವಿಶ್ವವಿದ್ಯಾಲಯದಿಂದ ಪಡೆದರು ಮತ್ತು ಚ್ಯಾನ್ ಹಾಗೂ ಕರೀಮ್‌ರವರು ಕಂಪ್ಯೂಟರ್ ಸೈನ್ಸ್ ಶಿಕ್ಷಣವನ್ನು ಉರ್ಬ್ಯಾನಾ-ಶಾಂಪೇನ್‌ನ ಇಲ್ಲೆನೋಯಿ ವಿಶ್ವವಿದ್ಯಾಲಯದಿಂದ ಪಡೆದರು.

ಮಾಧ್ಯಮದಲ್ಲಿ ಹಲವು ಸಲ ಪ್ರಚಲಿತಗೊಂಡ ಒಂದು ಕಥೆಯ ಅನುಸಾರ, ಚಾನ್‌ರವರ ಸ್ಯಾನ್ ಫ್ರಾನ್ಸಿಸ್ಕೊದ ಅಪಾರ್ಟ್‌ಮೆಂಟ್‍ನಲ್ಲಿ ಒಂದು ರಾತ್ರಿ ಊಟದ ಕೂಟದಲ್ಲಿ ತೆಗೆದ ವೀಡಿಯೋಗಳನ್ನು ಅವರು ಹಂಚಿಕೊಳ್ಳಲ್ಲು ಕಷ್ಟ ಎದುರಿಸಿದ ನಂತರ, ಅದಕ್ಕೆ ಪರಿಹಾರವಾಗಿ ಚ್ಯಾಡ್ ಹರ್ಲಿ ಮತ್ತು ಸ್ಟೀವ್ ಚಾನ್‌ರವರು 2005ರ ಆರಂಭದಲ್ಲಿ ಯೂಟ್ಯೂಬ್ ಅನ್ನು ನಿರ್ಮಿಸಿದರು. ಜಾವೆದ್ ಕರೀಮ್‌ರವರು ಕೂಟದಲ್ಲಿ ಹಾಜಿರಿರಲಿಲ್ಲ, ಮತ್ತು ಅವರು ಈ ಘಟನೆ ನಡೆದಿರುವುದನ್ನು ನಿರಾಕರಿಸಿದರು. ಮತ್ತು ಚ್ಯಾಡ್ ಹರ್ಲಿರವರ ಒಂದು ಹೇಳಿಕೆ ಪ್ರಕಾರ, ಯೂಟ್ಯೂಬ್‌ನ ಶೋಧದ ಯೋಜನೆ ರಾತ್ರಿ ಊಟದ ಕೂಟದ ನಂತರ ಆಯಿತು ಎಂಬ ಕತೆಯು, " ಪ್ರಾಯಶಃ ಮಾರುಕಟ್ಟೆ ಮಾಡುವ ಯೋಜನೆಗಳ ಒಂದು ಭಾಗವಾಗಿ ಬೆಳಸಲ್ಪಟ್ಟಿದ್ದು, ಸುಲಭವಾಗಿ ಜನರಿಗೆ ಒಪ್ಪಿಕೊಳ್ಳಲಾಗುವಂತ ಕಥೆಯನ್ನು ಹೆಣೆಯಲಾಗಿದೆ."

ಸಾಹಸದಿಂದ ಕೂಡಿದ ತಂತ್ರಜ್ಞಾನದ ಅನ್ವೇಷಣೆಯಾದ ಯೂಟ್ಯೂಬ್, ಪ್ರಾಥಮಿಕವಾಗಿ ಸೆಕೋಯಾ ಕ್ಯಾಪಿಟಲ್ ಎಂಬ ಸಂಸ್ಥೆಯು ನವೆಂಬರ್ 2005 ಮತ್ತು ಏಪ್ರಿಲ್ 2006ನ ನಡುವೆ, US $ 11.5 ಮಿಲಿಯನ್‌ರಷ್ಟು ಬಂಡವಾಳ ಹೂಡುವುದರೊಂದಿಗೆ ಪ್ರಾರಂಭವಾಯಿತು. ಯೂಟ್ಯೂಬ್‌ನ ಮೊದಲನೆಯ ಪ್ರಧಾನ ಕಛೇರಿ ಕ್ಯಾಲಿಫೊರ್ನೀಯಾದ ಸ್ಯಾನ್ ಮ್ಯಾಟೆಯೊದಲ್ಲಿರುವ ಒಂದು ಪಿಜ್ಜೇರಿಯಾ ಮತ್ತು ಜಪಾನಿ ಉಪಾಹಾರಗ್ರಹದ ಮೇಲೆ ನೆಲೆಸಿತ್ತು. www.youtube.com ಎಂಬ ಡೋಮೆನ್ ಹೆಸರು ಫೆಬ್ರವರಿ 15,2005 ರಂದು ಚಾಲ್ತಿಗೆ ಬಂದಿತು ಮತ್ತು ಇದನ್ನು ಮುಂದಿನ ತಿಂಗಳುಗಳಲ್ಲಿ ಬೆಳೆಸಲಾಯಿತು. ಯೂಟ್ಯೂಬ್‌ನ ಮೋದಲ ವೀಡಿಯೋಗೆ "ಮಿ ಎಟ್ ದ ಝೂ " ಎಂದು ಹೆಸರಿಡಲಾಯಿತು ಮತ್ತು ಇದು ಸ್ಯಾನ್ ಡಿಯೇಗೊ ಝೂನಲ್ಲಿರುವ ಶೋಧಕ ಜಾವೆದ್ ಕರೀಮ್‌ನನ್ನು ತೋರಿಸುತ್ತದೆ. ಈ ವೀಡಿಯೋವನ್ನು ಏಪ್ರಿಲ್ 23,2005 ರಂದು ಸೇರಿಸಲಾಗಿತ್ತು, ಮತ್ತು ಈಗ ಕೂಡ ಇದನ್ನು ಜಾಲತಾಣದಲ್ಲಿ ವೀಕ್ಷಿಸಬಹುದು.

ಯೂಟ್ಯೂಬ್ ಮೇ 2005ರಲ್ಲಿ ಸಾರ್ವಜನಿಕರಿಗೆ ಅದರ ಜಾಲತಾಣದ ಬೀಟಾ ಟೆಸ್ಟ್‌ನ್ನು ನೀಡಿತು ಮತ್ತು ಆರು ತಿಂಗಳ ನಂತರ ನವೆಂಬರ್ 2005ರಲ್ಲಿ ಅಧಿಕೃತವಾಗಿ ಪ್ರಾರಂಭವಾಯಿತು. ಆನಂತರದಲ್ಲಿ ಈ ಜಾಲತಾಣವು ಭರದಿಂದ ಬೆಳೆಯಿತು. ಜುಲೈ 2006ರಲ್ಲಿ ಈ ಕಂಪನಿಯು ಇದರಲ್ಲಿ ಪ್ರತಿದಿನ 65,000ಕ್ಕೂ ಹೆಚ್ಚು ಹೊಸ ವೀಡಿಯೋಗಳನ್ನು ಸೇರಿಸಲಾಗುತ್ತಿದೆ ಮತ್ತು ಪ್ರತಿದಿನ ಈ ತಾಣಕ್ಕೆ 100 ಮಿಲಿಯನ್ ವೀಡಿಯೋ ವಿಕ್ಷಣೆಗಳು ದೊರಕುತ್ತಿದೆ ಎಂದು ಘೋಷಿಸಿತು. ಮಾರುಕಟ್ಟೆ ಸಂಶೋಧನೆ ಕಂಪನಿ comScoreನ ಪ್ರಕಟಗೊಂಡ ಅಂಕಿಅಂಶಗಳ ಪ್ರಕಾರ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಆನ್‌ಲೈನ್ ವೀಡಿಯೋಗಳನ್ನು ಯೂಟ್ಯೂಬ್ ಪ್ರಬಲವಾಗಿ ಒದಗಿಸುತ್ತದೆ. ಈ ಕಂಪನಿಯ ಮಾರುಕಟ್ಟೆ ಪಾಲು ಸುಮಾರು ಶೇಖಡಾ 43ರಷ್ಟು ಇದ್ದು, ಜನವರಿ 2009ರಲ್ಲಿ ಆರು ಬಿಲಿಯನ್‌ಗಿಂತಾ ಹೆಚ್ಚು ವೀಡಿಯೋಗಳನ್ನು ವೀಕ್ಷಿಸಲಾಗಿತ್ತು. ಪ್ರತಿ ನಿಮಿಷಕ್ಕೆ 20 ಘಂಟೆಯ ಹೊಸ ವೀಡಿಯೋಗಳನ್ನು ಈ ಜಾಲತಾಣಕ್ಕೆ ಸೇರಿಸಲಾಗುತ್ತದೆ ಮತ್ತು ಅದರಲ್ಲಿ ಮುಕ್ಕಾಲರಷ್ಟು ಅಮೇರಿಕಾ ಸಂಯುಕ್ತ ಸಂಸ್ಥಾನ ದೇಶದ ಹೊರಗಿನಿಂದ ಬರುತ್ತದೆ ಎಂದು ಅಂದಾಜು ಮಾಡಲಾಗಿದೆ. 2007ರಲ್ಲಿನ ಯೂಟ್ಯೂಬ್‌ನ ಬ್ಯಾಂಡ್‌ವಿಡ್ತ್ ಬಳಕೆ 2000 ದ ಇಡೀ ಅಂತರ್ಜಾಲ ಬಳಕೆಗೆ ಸಮಾನವಾಗಿತ್ತು ಎಂದು ಕೂಡ ಅಂದಾಜು ಮಾಡಲಾಯಿತು. ಮಾರ್ಚ್ 2008ರಲ್ಲಿ ಯೂಟ್ಯೂಬ್‌ನ ಬ್ಯಾಂಡ್‌ವಿಡ್ತ್‌ನ ಬೆಲೆ ಒಂದು ದಿನಕ್ಕೆ ಸುಮಾರು US$1 ಮಿಲಿಯನ್ ‍ರಷ್ಟು ಇತ್ತು ಎಂದು ಎಣಿಸಲಾಗಿತ್ತು. Google,Yahoo! ಮತ್ತು Facebook ನಂತರ ಯೂಟ್ಯೂಬ್ ಅತ್ಯಂತ ಹೆಚ್ಚು ವೀಕ್ಷಿಸಲ್ಪಡುತ್ತದೆ ಎಂದು Alexa ದರ್ಜೆ ನೀಡಿದೆ.

www.youtube.com ಹೆಸರಿನ ಆಯ್ಕೆಯಿಂದ ಕೆಲವು ಸಮಸ್ಯೆಗಳುಂಟಾದವು. ಏಕೆಂದರೆ, ಈ ಹೆಸರಿಗೆ ಹೋಲುವ ಇನ್ನೊಂದು ಜಾಲತಾಣ www.utube.com ಇದಕ್ಕೆ ಮುಂಚಿತವಾಗಿಯೇ ಇತ್ತು. ನಿಯಮಿತವಾಗಿ YouTube ನ್ನು ಹುಡುಕುತ್ತಾ utube ಗೆ ಬರುವ ಜನರ ಸಂಖ್ಯೆ ಹೆಚ್ಚಾಗತೊಡಗಿದಾಗ, Universal Tube & Rollform Equipment ಜಾಲತಾಣದ ಮಾಲಿಕರು, ಯೂಟ್ಯೂಬ್‌ನ ಮೇಲೆ ನವೆಂಬರ್ 2006ನಲ್ಲಿ ಮೊಕದ್ದಮೆ ಹೂಡಿದರು. ಯುನಿವರ್ಸಲ್ ಟ್ಯೂಬ್ ಆನಂತರ ತನ್ನ ಜಾಲತಾಣದ ಹೆಸರನ್ನು www.utubeonline.comಗೆ ಬದಲಾಯಿಸಿತು.

ಅಕ್ಟೋಬರ್ 2006ರಲ್ಲಿ, Google Inc. ಸಂಸ್ಥೆಯು ಯೂಟ್ಯೂಬ್‌ ಅನ್ನು US$1.65 ಬಿಲಿಯನ್‌ ಹಣವನ್ನು ನೀಡಿ Google ಸ್ಟಾಕ್ ಮುಖಾಂತರ ಯೂಟ್ಯೂಬ್‌ಅನ್ನು ಪಡೆದುಕೊಂಡ ಕುರಿತು ಘೋಷಿಸಿಕೊಂಡಿತು, ಮತ್ತು ಈ ವ್ಯವಹಾರ ನವೆಂಬರ್ 13, 2006 ರಂದು ಪೂರ್ಣಗೊಂಡಿತು. ಯೂಟ್ಯೂಬ್‌ನ ಚಾಲ್ತಿಯಲ್ಲಿರುವ ವಿವರವಾದ ವೆಚ್ಚದ ಅಂಕಿಅಂಶಗಳನ್ನು Google ಒದಗಿಸುವುದಿಲ್ಲ ಮತ್ತು ಯೂಟ್ಯೂಬ್‌ನ ಆದಾಯ 2007ರಲ್ಲಿ "ನಾಟ್ ಮೆಟಿರಿಯಲ್" ಎಂದು ಖರ್ಚುವೆಚ್ಚದ ನೊಂದಣಿಯಲ್ಲಿ ಗುರುತಿಸಲಾಗಿತ್ತು. ಇದರ ಅರ್ಥ ಯೂಟ್ಯೂಬ್ ತನ್ನ ಆದಾಯದ ವಿವರ ತಪ್ಪಾಗಿ ನೀಡಿತ್ತು. ಜೂನ್ 2008ನಲ್ಲಿ ಫೋರ್ಬ್ಸ್ ನಿಯತಕಾಲಿಕದ ಒಂದು ಲೇಖನದಲ್ಲಿ ಯೂಟ್ಯೂಬ್‌ನ 2008ರ ಆದಾಯ US$200 ಮಿಲಿಯನ್ ಇದೆ ಎಂದು ತೋರಿಸಿತು. ಇದರಿಂದ ಜಾಹಿರಾತಿನ ಮಾರಾಟದಲ್ಲಿ ಗಮನಾರ್ಹ ಬೆಳವಣಿಗೆಯಿದೆ ಎಂದು ಕಂಡುಬಂತು.

ನವೆಂಬರ್ 2008ರಲ್ಲಿ,ಯೂಟ್ಯೂಬ್, MGM, ಲೈಯನ್ಸ್ ಗೇಟ್ ಎಂಟರ್‌ಟೈನ್‌ಮೆಂಟ್ ಮತ್ತು CBS ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡಿತು. ಇದರ ಅನುಸಾರ ಕಂಪನಿಗಳು ತಮ್ಮ ಚಲನಚಿತ್ರ ಮತ್ತು ದೂರದರ್ಶನ ಕಾರ್ಯಕ್ರಮಗಳನ್ನು ಪೂರ್ಣವಾಗಿ ಜಾಹೀರಾತಿನ ಯೂಟ್ಯೂಬ್‌ನಲ್ಲಿ ಜೊತೆಗೆ ಪೋಸ್ಟ್ ಮಾಡಲು ಅನುಮತಿ ಇದೆ. ಇದರ ಉದ್ದೇಶ Hulu ದಂತಹ ಜಾಲತಾಣಗಳಿಗೆ ಸ್ಪರ್ಧೆ ನೀಡುವುದಿತ್ತು, Hulu ಜಾಲತಾಣದಲ್ಲಿ NBC,ಫಾಕ್ಸ್ ಮತ್ತು ಡಿಸ್ನಿಯ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಗುತ್ತದೆ.

ಸಾಮಾಜಿಕ ಪರಿಣಾಮ

ಚಿತ್ರ:Guitar youtube.png
ಜಿಯೊಂಗ್-ಹ್ಯುನ್ ಲಿಮ್ ನಿರ್ವಹಿಸಿರುವ ಪಚೆಲ್ಬೆಲ್‍ನ ಕೆನೆನ್‍ ಯುಟ್ಯೂಬ್‍ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ವೀಡಿಯೊಗಳಲ್ಲಿ ಇದು ಒಂದು.

2005ರಲ್ಲಿ ಯೂಟ್ಯೂಬ್‌ ಪ್ರಾರಂಭಿಸುವ ಮೊದಲು, ಸಾಮಾನ್ಯ ಕಂಪ್ಯೂಟರ್ ಬಳಕೆದಾರರಿಗೆ ಸರಳ ರೀತಿಯಲ್ಲಿ ವೀಡಿಯೋಗಳನ್ನು ಆನ್‌ಲೈನ್ ಪೋಸ್ಟ್ ಮಾಡಲು ಕೆಲವು ಅವಕಾಶಗಳಿದ್ದವು. ಬಳಸಲು ಸುಲಭವಾದ ತನ್ನ ಅಂತರಸಂಪರ್ಕ ಸಾಧನದಿಂದ ಯೂಟ್ಯೂಬ್, ಯಾವುದೇ ಸಾಮಾನ್ಯ ಅಂತರಜಾಲ ಬಳಕೆದಾರನೂ ಕೇವಲ ಅಂತರಜಾಲ ಸಂಪರ್ಕದ ಸಹಾಯದಿಂದ ವೀಡಿಯೋಗಳನ್ನು ಪೋಸ್ಟ್ ಮಾಡುವ ಮತ್ತು ಆ ವೀಡಿಯೋಗಳನ್ನು ಕೆಲವೆ ನಿಮಿಷದಲ್ಲಿ ವಿಶ್ವದಾದ್ಯಂತ ಮಿಲಿಯಗಟ್ಟಲೆ ಜನರು ವೀಕ್ಷಿಸುವುದನ್ನು ಸಾಧ್ಯವಾಗಿಸಿತು. ಹಲವಾರು ವಿಷಯಗಳ ವೀಡಿಯೋಗಳನ್ನು ಯೂಟ್ಯೂಬ್ ಒಳಗೊಂಡಿದ್ದು, ವೀಡಿಯೋ ಹಂಚಿಕೆಯು ಯೂಟ್ಯೂಬ್ ನ ಕಾರಣದಿಂದಾಗಿ ಅಂತರ್ಜಾಲ ಸಂಸ್ಕೃತಿಯ ಪ್ರಮುಖ ಭಾಗವಾಗಿಬಿಟ್ಟಿದೆ.

2006ರಲ್ಲಿ ಪ್ರಸರಿಸಿದ "ಬಸ್ ಅಂಕಲ್" ವೀಡಿಯೋವಿನ ಯಶಸ್ಸು ಸಮಾಜದ ಮೇಲೆ ಯೂಟ್ಯೂಬ್‌ನ ಮಹತ್ತರ ಪರಿಣಾಮಕ್ಕೆ ಒಂದು ಉತ್ತಮ ಉದಾಹರಣೆ. ಈ ವೀಡಿಯೋನಲ್ಲಿ ಒಬ್ಬ ಯುವಕ ಮತ್ತು ಒರ್ವ ವೃದ್ಧರ ಮಧ್ಯ ಹಾಂಗ್‌ಕಾಂಗ್‌ನಲ್ಲಿನ ಒಂದು ಬಸ್ಸಿನಲ್ಲಿ ನಡೆದ ಆವೇಶದ ವಾದವನ್ನು ತೋರಿಸಲಾಗಿದೆ. ಇದರ ಬಗ್ಗೆ ಮುಖ್ಯ ಮಾಧ್ಯಮಗಳಲ್ಲಿ ತುಂಬ ಚರ್ಚೆ ನಡೆಯಿತು. ಎಲ್ಲರ ಗಮನ ಸೆಳೆದ ಯೂಟ್ಯೂಬ್‌ನ ಇನ್ನೊಂದು ವೀಡಿಯೋ ಗಿಟಾರ್ . ಇದರಲ್ಲಿ ಪಚ್ಚೆಲ್‌ಬೆಲ್ಸ್ ಕ್ಯಾನನ್‌ರವರ ವಿದ್ಯುತ್ ಗಿಟಾರನ್ನು ನುಡಿಸುವುದನ್ನು ತೋರಿಸಲಾಗಿದೆ. ನುಡಿಸುವವರ ಹೆಸರನ್ನು ವೀಡಿಯೋದಲ್ಲಿ ಕೊಟ್ಟಿರಲಿಲ್ಲ. ಆದರೆ ಇದನ್ನು ಮಿಲಿಯಗಟ್ಟಲೆ ಜನರು ನೋಡಿದ ಮೇಲೆ, "ದಿ ನ್ಯೂಯಾರ್ಕ್ ಟೈಮ್ಸ್ " ಪತ್ರಿಕೆಯು ಆ ಗಿಟಾರ್ ವಾದಕ ದಕ್ಷಿಣ ಕೊರಿಯಾದ 23 ವರ್ಷದ ಜೆಯೋಂಗ್-ಹ್ಯೂನ್ ಲಿಮ್ ಎಂದು ಬಹಿರಂಗಪಡಿಸಿತು. ಇವರು ಅದನ್ನು ತಮ್ಮ ಮನೆಯ ಶಯನಗೃಹದಲ್ಲಿ ಧ್ವನಿಮುದ್ರಣ ಮಾಡಿದರು.

ಯೂಟ್ಯೂಬ್‌ಗೆ 2008ರ ಜಾರ್ಜ್ ಫೋಸ್ಟರ್ ಪೀಬಾಡಿ ಪ್ರಶಸ್ತಿ ದೊರಕಿತು,ಮತ್ತು ಇದು ಪ್ರಜಾಪ್ರಭುತ್ವವನ್ನು ಒಳಗೊಂಡಿದಲ್ಲದೆ ಪ್ರೋತ್ಸಾಹ ಕೂಡ ನೀಡುವ ಕಾರಣದಿಂದಾಗಿ ಇದನ್ನು "ಎ ಸ್ಪೀಕರ್ಸ್ ಕಾರ್ನರ್" ಎಂದು ಪ್ರಮಾಣಿಸಲ್ಪಟ್ಟಿದೆ.

ಟೀಕೆಗಳು

ಕೃತಿಸ್ವಾಮ್ಯದ ವಸ್ತುಗಳು

ಯೂಟ್ಯೂಬ್ ವೀಡಿಯೋಗಳು ಕೃತಿಸ್ವಾಮ್ಯದ ಕಾನೂನನ್ನು ಗೌರವಿಸುವುದರಲ್ಲಿ ವಿಫಲವಾಗಿದೆ ಎಂದು ಟೀಕೆಗೊಳಗಾಗಿದೆ. ವೀಡಿಯೋ ಅಪ್ಲೋಡ್ ಮಾಡಬೇಕಾದರೆ, ಈ ಕೆಳಕಂಡ ಸಂದೇಶವನ್ನು ಬಳಕೆದಾರರಿಗೆ ತಮ್ಮ ಪರದೆಯ ಮೇಲೆ ಪ್ರತಿ ಸಲ ತೋರಿಸಲಾಗುತ್ತದೆ:

ಯಾವುದೇ TV ಕಾರ್ಯಕ್ರಮ, ಸಂಗೀತ ವೀಡಿಯೋ, ಸಂಗೀತ ಕಛೇರಿ ಅಥವಾ ಜಾಹೀರಾತುಗಳನ್ನು ಅನುಮತಿಯಿಲ್ಲದೆ ಸೇರಿಸಬಾರದು. ಇವುಗಳನ್ನು ಪೂರ್ಣವಾಗಿ ನೀವೇ ಸ್ವತಃ ಸೃಷ್ಟಿಸಿದರೆ ಮಾತ್ರ ನೀವು ಇದನ್ನು ಸೇರಿಸಬಹುದು. ಕೃತಿಸ್ವಾಮ್ಯದ ಸಲಹೆಯ ಪುಟ ಮತ್ತು ಸಮುದಾಯದ ವಿವರಣೆಯ ಪುಸ್ತಕದ ಸಹಾಯದಿಂದ ನಿಮ್ಮ ವೀಡಿಯೋ ಇನ್ನಿತರರ ಕೃತಿಸ್ವಾಮ್ಯವನ್ನು ಉಲ್ಲಂಘಿಸುತ್ತದೆಯೇ ಎಂದು ತಿಳಿಯಬಹುದು.

ಈ ಸೂಚನೆ ಆದಾಗ್ಯೂ ಕೂಡ,ಇನ್ನು ಹಲವು ಅನಧಿಕೃತ ತುಣುಕುಗಳನ್ನು ದೂರದರ್ಶನದ ಕಾರ್ಯಕ್ರಮ, ಚಲನಚಿತ್ರ ಮತ್ತು ಸಂಗೀತ ವೀಡಿಯೋಗಳಿಂದ ಮುದ್ರಿಸಿದ ಯೂಟ್ಯೂಬ್‌ನಲ್ಲಿದೆ. ಯೂಟ್ಯೂಬ್ ಯಾವುದೇ ವೀಡಿಯೋಗಳನ್ನು ಆನ್‌ಲೈನ್ ಪೋಸ್ಟ್ ಮಾಡುವ ಮುಂಚೆ ವೀಕ್ಷಿಸಿರುವುದಿಲ್ಲ, ಮತ್ತು ಕೃತಿಸ್ವಾಮ್ಯದ ಮಾಲೀಕರಿಗೆ ಡಿಜಿಟಲ್ ಮಿಲೇನಿಯಮ್ ಕೃತಿಸ್ವಾಮ್ಯ ಕಾಯ್ದೆ ಅಂತರ್ಗತದಲ್ಲಿ ಸೂಚನೆ-ಪತ್ರ ಕಳಿಸುವ ಜವಾಬ್ದಾರಿ ಬಿಟ್ಟಿರುತ್ತದೆ. ಯೂಟ್ಯೂಬ್ ಕೃತಿಸ್ವಾಮ್ಯದ ವಸ್ತುಗಳ ಅಪ್ಲೋಡ್ ಮಾಡುವುದನ್ನು ತಡೆಗಟ್ಟಲು ಬಹಳ ಕಡಿಮೆ ಕ್ರಮಗಳನ್ನು ಕೈಗೊಂಡಿದೆ ಎಂದು ಆಪಾದಿಸಿ ಈಗಾಗಲೇ Viacom,Mediaset ಮತ್ತು ಇಂಗ್ಲಿಷ್ ಪ್ರೀಮಿಯರ್ ಲೀಗ್‌ಗಳಂಹ ಸಂಸ್ಥೆಗಳು ಯೂಟ್ಯೂಬ್‌ನ ವಿರುದ್ಧ ಮೊಕದ್ದಮೆ ಹಾಕಿದ್ದಾರೆ. US$1 ಬಿಲಿಯನ್‌ರಷ್ಟು ಮೊತ್ತವನ್ನು ತಮಗಾದಹಾನಿಯನ್ನು ತುಂಬಿಸಿಕೊಳ್ಳಲು ಯೂಟ್ಯೂಬ್‌ಗೆ ಕೇಳಿದ Viacom ನ ಪ್ರಕಾರ, ಇವರ ಸಂಸ್ಥೆಯ 150,000ರಷ್ಟು ಅನಾಧಿಕೃತ ತುಣುಕುಗಳು ಯೂಟ್ಯೂಬ್‌ನಲ್ಲಿ ಕಂಡುಬಂದಿವೆ ಮತ್ತು ಇವುಗಳನ್ನು ಅಚ್ಚರಿಯ ಪ್ರಮಾಣದಲ್ಲಿ ಅಂದರೆ 1.5 ಬಿಲಿಯನ್‌ರಷ್ಟು ಸಲ ವೀಕ್ಷಿಸಲಾಗಿದೆ. ಇದಕ್ಕೆ ಪ್ರತ್ಯುತ್ತರವಾಗಿ ಯೂಟ್ಯೂಬ್ ನ ಮಾಲೀಕರು, ಕಾನೂನುಬದ್ಧ ಬಾಧ್ಯತೆಯನ್ನು ಮೀರಿ ವಿಷಯ-ವಸ್ತುಗಳ ಮಾಲೀಕರಿಗೆ ತಮ್ಮ ಕೃತಿಯನ್ನು ಕಾಪಾಡಲು ತಾವು ಸಹಾಯ ಮಾಡುತ್ತೇವೆ ಎಂದು ಹೇಳಿದರು. Viacom ಮೊಕದ್ದಮೆ ಹಾಕಿದ ಕಾರಣ, ಯೂಟ್ಯೂಬ್ ವೀಡಿಯೋ ID ಎಂಬ ಒಂದು ಕ್ರಮವನ್ನು ಪರಿಚಯಿಸಿತು. ಇದು ಸೇರಿಸಲ್ಪಟ್ಟ ವೀಡಿಯೋಗಳನ್ನು ಮತ್ತು ಕೃತಿಸ್ವಾಮ್ಯವಿರುವ ವಸ್ತುಗಳ ದತ್ತಾಂಶದಲ್ಲಿನ ವೀಡಿಯೋಗಳನ್ನು ಹೋಲಿಸಿ ನಿಯಮ ಉಲ್ಲಂಘನೆಯಾಗಿದೆಯೆ ಎಂದು ಪರೀಕ್ಷಿಸುತ್ತದೆ. ಈ ಕ್ರಮದ ಗುರಿ ಕೃತಿಸ್ವಾಮ್ಯದ ನಿಯಮ ಉಲ್ಲಂಘನೆಯನ್ನು ಕಡಿಮೆ ಮಾಡುವುದು.

ಆಗಸ್ಟ್ 2008ರಲ್ಲಿ U.S. ನ್ಯಾಯಾಲಯವು, ಕೃತಿಸ್ವಾಮ್ಯದ ಮಾಲೀಕರು ಯಾವುದೆ ಆನ್‌ಲೈನ್ ವಿಶಯವಸ್ತುವನ್ನು ಹಾಗೆಯೆ ತೆಗೆಯಲು ನಿರ್ದೇಶಿಸಬಾರದು, ಮೊದಲು ಆ ಪ್ರಸಾರಗೊಳ್ಳುತ್ತಿರುವ ವಿಷಯವಸ್ತುವು ಸದುಪಯೋಗದ ಮಿತಿಯಲ್ಲಿದೆಯೇ ಎಂದು ಅನ್ವೇಷಿಸಬೇಕೆಂದು ಆದೇಶ ಹೊರಡಿಸಿತು. ಈ ಮೊಕದ್ದಮೆಯು ಪೆನ್ಸಿಲ್ವೇನಿಯಾದ ಗ್ಯಾಲೆಟ್ಸನ್‌ನ ಸ್ಟೆಫ್ಯಾನಿ ಲೆಂಝ್‌ರವರು ತಮ್ಮ 13 ತಿಂಗಳು ವಯಸ್ಸಿನ ಮಗನ 29 ಸೆಕೆಂಡುಗಳ ವೀಡಿಯೋವನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದ ಕುರಿತಾಗಿತ್ತು, ಈ ಮನೆಯಲ್ಲಿ ಮಾಡಿದ ವೀಡಿಯೋದಲ್ಲಿ ಆ ಮಗುವು ಪ್ರಿನ್ಸ್‌ರವರ ಹಾಡು "ಲೆಟ್ಸ್ ಗೋ ಕ್ರೇಜಿ" ಯ ಸಂಗೀತಕ್ಕೆ ಕುಣಿಯುತ್ತಿದ್ದ.

ಗೋಪ್ಯತೆ

ಜುಲೈ 2008ರಲ್ಲಿ, ನ್ಯಾಯಾಲಯದ ಆದೇಶವು Viacomದ ಪರವಾಗಿ ಆಯಿತು, ಮತ್ತು ಇದರ ಅನುಸಾರ ಯೂಟ್ಯೂಬ್ ತನ್ನ ಜಾಲತಾಣದ ಪ್ರತಿ ಬಳಕೆದಾರರ ವೀಕ್ಷಣೆಯ ಅಭ್ಯಾಸದ ವಿಸ್ತಾರವಾದ ದತ್ತಾಂಶವನ್ನು Viacom‍ ಗೆ ಸಲ್ಲಿಸಬೇಕಿತ್ತು. ಪ್ರತ್ಯೇಕ ಬಳಕೆದಾರರ ವೀಕ್ಷಣೆಯ ಅಭ್ಯಾಸವನ್ನು ಗುರುತಿಸಲು ಅವರ IP ವಿಳಾಸ ಮತ್ತು ಲಾಗಿನ್ ಹೆಸರುಗಳ ಸಹಾಯದಿಂದಲೇ ವೀಕ್ಷಣೆಯ ದತ್ತಾಂಶವನ್ನು ಪಡೆಯುವುದಾದ್ದರಿಂದ ಆ ಮಾಹಿತಿಗಳನ್ನೂ ನೀಡಬೇಕಾಗುವ ಕಾರಣದಿಂದಾಗಿ ಸಮಸ್ಯೆ ತಲೆದೋರಿತು. ಈ ನಿರ್ಧಾರವನ್ನು ಎಲೆಕ್ಟ್ರಾನಿಕ್ ಫ್ರಂಟಿಯರ್ ಫೌಂಡೇಷನ್‌ನವರು ಟೀಕಿಸಿ ಈ ಆದೇಶ "ಗೋಪ್ಯತೆಯ ಹಕ್ಕಿಗಳಿಗೆ ಹಿನ್ನಡೆ" ಎಂದು ಹೇಳಿದರು. U.S. ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಲೋಯಿಸ್ ಸ್ಟ್ಯಾಂಟನ್‌ರವರು ಈ ಗೋಪ್ಯತೆಯ ವ್ಯಾಕುಲತೆ ಬರಿ "ಊಹಾತ್ಮಕ" ಎಂದು ಹೇಳಿ ತಳ್ಳಿಹಾಕಿದರು ಮತ್ತು ಯೂಟ್ಯೂಬ್‌ಗೆ ಟೆರಾಬೈಟ್‍ರಷ್ಟು ಗಾತ್ರದ ಎಲ್ಲಾ 12 ದಾಖಲೆಗಳನ್ನು ಸಲ್ಲಿಸುವಂತೆ ಹೇಳಿದರು. ಯೂಟ್ಯೂಬ್ ತನ್ನ ಹುಡುಕಾಟ ಎಂಜಿನ್‌ನ ಸೋರ್ಸ ಕೋಡ್ ತನಗೆ ಸಲ್ಲಿಸಬೇಕೆಂಬ Viacom ನ ಬೇಡಿಕೆಯನ್ನು ನ್ಯಾಯಾಧೀಶರಾದ ಸ್ಟ್ಯಾಂಟನ್‌ವರು ತಿರಸ್ಕರಿಸಿದರು. ಏಕೆಂದರೆ ಅವರ ಪ್ರಕಾರ, ಇದರಲ್ಲಿ ಕೃತಿಸ್ವಾಮ್ಯವನ್ನು ಉಲ್ಲಂಘಿಸಿದ ವೀಡಿಯೋಗಳನ್ನು ಯೂಟ್ಯೂಬ್ ಬೇರೆಯಾಗಿ ಬಳಸುತ್ತಾರೆ ಎಂಬ ಕುರಿತು ಯಾವುದೇ ದಾಖಲೆಯಿಲ್ಲ.

ಅಸೂಕ್ತವಾದ ವಿಷಯ

ತಾವು ಪ್ರಸರಿಸುತ್ತಿರುವ ಕೆಲವು ವೀಡಿಯೋಗಳಲ್ಲಿ ಅವಮಾನಕರ ವಿಷಯಗಳಿರುವುದರಿಂದ ಯೂಟ್ಯೂಬ್ ಟೀಕೆಗಳನ್ನು ಎದುರಿಸಬೇಕಾಯಿತು. ಯೂಟ್ಯೂಬ್‌ನ ಸೇವಾ ನಿಯಮಗಳು ಯಾವುದೆ ಅಸೂಕ್ತ ಎನಿಸಿದ ವೀಡಿಯೋಗಳನ್ನು ಸೇರಿಸುವುದನ್ನು ನಿಷೇಧಿಸಿದರೂ ಸಹಾ, ಅದು ಪ್ರತಿ ವೀಡಿಯೋ ಆನ್‌ಲೈನ್ ಹೋಗುವ ಮುಂಚೆ ಪರೀಕ್ಷಿಸುವುದಿಲ್ಲ. ವಿವಾದದ ವೀಡಿಯೋಗಳಲ್ಲಿ ಹೊಲೊಕಾಸ್ಟ್ ಡಿನಾಯಲ್ ಮತ್ತು ದಿ ಹಿಲ್ಸಬರೊ ಅನಾಹುತಗಳು ಸೇರಿಕೊಂಡಿವೆ. ಈ ಹಿಲ್ಸಬರೊ ಅನಾಹುತ ವೀಡಿಯೋ ಲಿವರ್‌ಪೂಲಿನ 96 ಫುಟ್‍ಬಾಲ್ ಅಭಿಮಾನಿಗಳು ನೂಕುನುಗ್ಗಲಲ್ಲಿ ಸಾವಿಗೀಡಾದ 1989ರ ಘಟನೆಯನ್ನು ತೋರಿಸುತ್ತದೆ. ಇದರಲ್ಲಿ ಕುತಂತ್ರ ಮತ್ತು ಧಾರ್ಮಿಕ ಕಾರಣವಿರಬೇಕೆಂದು ಊಹೆ.

ಯೂಟ್ಯೂಬ್ ಅಸೂಕ್ತ ವೀಡಿಯೋಗಳನ್ನು ತನ್ನ ಬಳಕೆದಾರರೇ ಗುರುತಿಸಿ ಚಿಹ್ನೆ ಹಾಕಬೇಕೆಂದು ಅವರ ಮೇಲೆ ಅವಲಂಬಿಸಿದೆ. ಮತ್ತು ಈ ಚಿಹ್ನೆ ಗುರುತುಪಡಿಸಿದ ವೀಡಿಯೋಗಳನ್ನು ಯೂಟ್ಯೂಬ್‌ನ ಒಬ್ಬ ಉದ್ಯೋಗಿಯು ವೀಕ್ಷಿಸಿ, ಅದು ಜಾಲತಾಣದ ಸೇವಾ ನಿಯಮಗಳನ್ನು ಉಲ್ಲಂಘಿಸಿದೆಯೇ ಎಂದು ಪರೀಕ್ಷಿಸುತ್ತಾನೆ. ಜುಲೈ 2008ರಲ್ಲಿ, ಯುನಿಟೆಡ್ ಕಿಂಗ್‌ಡಮ್‌ನ ಸಾಮಾನ್ಯರ ಸಭೆಯ ಸಂಸ್ಕೃತಿ ಮತ್ತು ಮಾಧ್ಯಮ ಸಮಿತಿಯು ಯೂಟ್ಯೂಬ್‌ನ ವೀಡಿಯೋ ಪಾಲಿಸಿಗಳ ವಿಧಾನದಿಂದ, ಅದು "ಅಸಂತುಷ್ಟಗೊಂಡಿದೆ" ಎಂದು ಹೇಳಿತು, ಮತ್ತು ಬಳಕೆದಾರರು ಉತ್ಪಾದಿಸಿದ ವಿಷಯವಸ್ತುಗಳನ್ನು ನಡೆಸುವ ಜಾಲತಾಣಗಳು ಆ ವೀಡಿಯೋಗಳನ್ನು ಪುನಃ ವೀಕ್ಷಿಸಿ ಪರೀಕ್ಷಿಸುವ ಆದರ್ಶ ರೂಢಿಯನ್ನು ಪಾಲಿಸಬೇಕೆಂದು ವಾದಿಸಿತು. ಪ್ರತ್ಯುತ್ತರದಲ್ಲಿ ಯೂಟ್ಯೂಬ್‌ನ ಹೇಳಿತು:"ನಮ್ಮಲ್ಲಿ ಏನನ್ನು ಅನುಮತಿಸಬೇಕೆಂದು ಕಠಿಣ ಕಾಯಿದೆಗಳಿವೆ, ಮತ್ತು ಯಾರೇ ಆದರೂ ಅಸೂಕ್ತ ವಸ್ತುಗಳ ಕುರಿತಂತೆ ನಮ್ಮ 24/7ರ ಪರೀಕ್ಷಕ ತಂಡಕ್ಕೆ ವರದಿ ಒಪ್ಪುಸುವಂತಹ ವಿಧಾನವಿದೆ, ಮತ್ತು ಈ ತಂಡವು ವರದಿಯ ಬಗ್ಗೆ ನಿಯತ್ತಾಗಿ ವ್ಯವಹರಿಸುತ್ತದೆ. ನಾವು ನಮ್ಮ ಸಮುದಾಯಕ್ಕೆ ಕಾಯದೆಗಳ ಬಗ್ಗೆ ಶಿಕ್ಷಣ ನೀಡುತ್ತೇವೆ ಮತ್ತು ಈ ಪದ್ಧತಿಯನ್ನು ಬಳಕೆದಾರರಿಗೆ ಸುಲಭಗೊಳಿಸಲು ಯೂಟ್ಯೂಬ್‌ನ ಪ್ರತಿ ಪುಟದಲ್ಲಿ ಒಂದು ನೇರ ಕೊಂಡಿಯನ್ನು ಸೇರಿಸಿರುತ್ತೇವೆ. ನಮ್ಮ ಜಾಲತಾಣದಲ್ಲಿ ಸೇರಿಸಲ್ಪಟ್ಟ ವೀಡಿಯೋಗಳ ಸಂಖ್ಯೆಯನ್ನು ಗಮನಿಸಿದರೆ, ಈ ಪರಿಣಾಮಕಾರಿ ದಾರಿಯ ಮೂಲಕ ನಿಯಮ ಉಲ್ಲಂಘಿಸುವ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ವೀಡಿಯೋಗಳನ್ನು ಬೇಗನೇ ನಿಯಂತ್ರಿಸಬಹುದು".

ತಡೆಗಟ್ಟುವಿಕೆ

ಚೈನಾ,ಮೊರೊಕ್ಕೋ ಮತ್ತು ಥೈಲ್ಯಾಂಡ್ ಸೇರಿದಂತೆ ಹಲವು ದೇಶಗಳು ಯೂಟ್ಯೂಬ್‌ನ ಪ್ರವೇಶಾಧಿಕಾರವನ್ನು ಆರಂಭದಿಂದಲೇ ತಡೆಗಟ್ಟಿದ್ದಾರೆ. ಮುಸ್ತಫಾ ಕಮಾಲ್ ಅಟಾಟರ್ಕ್‌ನ ಕುರಿತಂತೆ ಒಂದು ಅವಮಾನಿತ ವೀಡಿಯೋವಿನ ವಾದವಿವಾದಗಳ ನಂತರ, ಸಧ್ಯದಲ್ಲಿ ಟರ್ಕಿಯಲ್ಲಿ ಯೂಟ್ಯೂಬ್ ಅನ್ನು ತಡೆಗಟ್ಟಲಾಗಿದೆ. ತಡೆಗಟ್ಟುವಿಕೆ ಇದ್ದರು ಸಹ,ಟರ್ಕಿಯ ಪ್ರಧಾನ ಮಂತ್ರಿ ರಿಸೆಪ್ ಟಯಿಪ್ ಇಯಾರ್ಡೊಗಾನ ಯೂಟ್ಯೂಬ್‌ನ ಬಳಕೆ ಮಾಡುವ ಅವಕಾಶ ಇತ್ತೆಂದು ಪತ್ರಕರ್ತರ ಬಳಿ ಒಪ್ಪಿಕೊಂಡರು, ಕಾರಣ ಟರ್ಕಿಯಲ್ಲಿ ಈ ಜಾಲತಾಣವನ್ನು ಓಪನ್ ಪ್ರಾಕ್ಸಿ ಬಳಸಿ ಇನ್ನು ಕೂಡ ಬಳಸಬಹುದು.

ಡಿಸೆಂಬರ್ 3, 2006ರಲ್ಲಿ ಇದರಿಂದ ಸಾಮಾಜಿಕ ಮತ್ತು ನೈತಿಕ ಆಚಾರಗಳ ಉಲ್ಲಂಘನೆಯಾಗುತ್ತಿದೆ ಎಂದು ಘೋಷಿಸುತ್ತ, ಇರಾನ್ ತಾತ್ಕಾಲಿಕವಾಗಿ ಯೂಟ್ಯೂಬ್ ಸೇರಿದಂತೆ ಕೆಲವು ಜಾಲತಾಣಗಳಿಗೆ ಪ್ರವೇಶವನ್ನು ತಡೆಗಟ್ಟಿತು. ಇರಾನಿನ ದೂರದರ್ಶನ ಧಾರಾವಾಹಿ ಕಾರ್ಯಕ್ರಮಗಳ ತಾರೆಯೊಬ್ಬಳ ಲೈಂಗಿಕ ಕ್ರಿಯಯನ್ನು ತೋರಿಸುವ ವೀಡಿಯೋ ಆನ್‌ಲೈನ್ ಪೋಸ್ಟ್ ಮಾಡಲಾದ ನಂತರ, ಈ ತಡೆಗಟ್ಟುವಿಕೆ ಜಾರಿಯಾಯಿತು. ಈ ತಡೆಗಟ್ಟುವಿಕೆಯನ್ನು ನಂತರ ತೆಗೆದುಹಾಕಲಾದರೂ ಮತ್ತೆ 2009 ರಲ್ಲಿ ಇರಾನಿನ ಪ್ರಧಾನಮಂತ್ರಿಗಳ ಚುನಾವಣೆಯಾದ ಮೇಲೆ ಪುನಃ ಹೇರಲಾಯಿತು.

ಫೆಬ್ರುವರಿ 23,2008ರಲ್ಲಿ, ಇಸ್ಲಾಮಿಕ್ನಂಬಿಕೆಯ ವಿರುದ್ಧದ ವೀಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಪ್ರದರ್ಶಿಸಿದ ಕಾರಣ,ಪಾಕಿಸ್ಥಾನ ಯೂಟ್ಯೂಬ್‌ನ್ನು ತಡೆಗಟ್ಟಿತು. ಇದರಲ್ಲಿ ಧರ್ಮೋಪದೇಶಕ ಮುಹಮ್ಮದವರ ಡ್ಯಾನಿಷ್ ಕಾರ್ಟೂನುಗಳಿದ್ದವು. ಇದರಿಂದ ಯೂಟ್ಯೂಬ್ ಜಾಲತಾಣಕ್ಕೆ ಎರಡು ಘಂಟೆಗಳ ಕಾಲ ವಿಶ್ವ ಕತ್ತಲಾಗಿದಂತೆ ಕಾಣಿತು, ಏಕೆಂದರೆ ಅಜಾಗರೂಕತೆಯಿಂದ ಪಾಕಿಸ್ಥಾನದ ತಡೆಗಟ್ಟುವಿಕೆ ಬೇರೆ ದೇಶಗಳಿಗೂ ವರ್ಗಾಯಿಸಲ್ಪಟ್ಟಿತು. ಪಾಕಿಸ್ಥಾನವು ತನ್ನ ತಡೆಯನ್ನು ಫೆಬ್ರುವರಿ 26,2008ರಲ್ಲಿ ತೆಗೆದುಹಾಕಿತು. ವಾಸ್ತವ ಖಾಸಗಿ ಸಂಪರ್ಕದ ಸಾಫ್ಟವೇರ್ ಬಳಸಿ ಬಹಳಷ್ಟು ಪಾಕಿಸ್ಥಾನಿಯರು ಮೂರು ದಿನದ ತಡೆಯನ್ನು ತಪ್ಪಿಸಿ ಯೂಟ್ಯೂಬ್ ವೀಕ್ಷಿಸಿದರು.

ಕೆಲವು ದೇಶದ ಶಾಲೆಗಳಲ್ಲಿ ಕೂಡ ಯೂಟ್ಯೂಬ್‌ನ ಪ್ರವೇಶಾಧಿಕಾರವನ್ನು ತಡೆದಿದ್ದಾರೆ, ಏಕೆಂದರೆ ವಿಧ್ಯಾರ್ಥಿಗಳು ಹಿಂಸ ವರ್ತನೆಯ, ಶಾಲಾ ಕ್ಲೇಷಗಳ, ಜಾತೀಯತೆಯ ವರ್ತನೆಗಳು ಮತ್ತು ಅಸೂಕ್ತವಾದ ವೀಡಿಯೋಗಳನ್ನು ಅದರಲ್ಲಿ ಸೇರಿಸುತ್ತಿದ್ದರು.

ತಂತ್ರಜ್ಞಾನ

ಯೂಟ್ಯೂಬ್‌ 
ಯುಟ್ಯೂಬ್‍ನಲ್ಲಿ ಪ್ರಸಾರಗೊಂಡ ಸಾಧಾರಣ,ಮೇಲ್ಮಟ್ಟ ಮತ್ತು HD ಗುಣಮಟ್ಟದ ಯುಟ್ಯೂಬ್‌ ವೀಡಿಯೊಗಳ ಹೋಲಿಕೆ ಮತ್ತು ಅವುಗಳ ಸ್ಥಳೀಯ ನಿರ್ಣಯ.

ವೀಡಿಯೋ ವಿನ್ಯಾಸ

ಯೂಟ್ಯೂಬ್‌ನ ಜಾಲದ ಬಳಕೆದಾರರಿಗೆ ವೀಡಿಯೋ ಪ್ಲೇಬ್ಯಾಕ್, ಅಡೋಬ್ ಫ್ಲಾಷ್ ಪ್ಲೇಯರ್ ತಂತ್ರಜ್ಞಾನದ ಮೇಲೆ ಅಧಾರಿತವಾಗಿದೆ. ಇದರಿಂದ ಈ ಜಾಲತಾಣವು ಇತರ ಸ್ಥಾಪಿತ ವೀಡಿಯೋ ಪ್ಲೇಬ್ಯಾಕ್ ತಂತ್ರಜ್ಞಾನಗಳಿಗೆ ( ಉದಾಹರಣೆಗೆ: ವಿಂಡೋಸ್ ಮೀಡಿಯಾ ಪ್ಲೇಯರ್, ಕ್ವಿಕ್‌ಟೈಮ್ ಮತ್ತು ರಿಯಲ್‌ಪ್ಲೇಯರ್ ಗಳಿಗೆ) ಹೋಲಿಸಿ ನೋಡಬಹುದಾದ ಗುಣಮಟ್ಟದ್ದಾಗಿದೆ. ಮತ್ತು ಇದರಲ್ಲಿ ವೀಡಿಯೋ ವೀಕ್ಷಿಸಬೇಕಾದರೆ ವೆಬ್ ಬ್ರೌಸರ್‌ನಿಂದ ಪ್ಲಗ್-ಇನ್‌ನನ್ನು ಡೌನ್‌ಲೋಡ್ ಮಾಡಿ ಸ್ಥಾಪಿಸಬೇಕಾಗುತ್ತದೆ. ಫ್ಲಾಷ್ ವೀಡಿಯೋ ವೀಕ್ಷಿಸಲು ಸಹ ಪ್ಲಗ್-ಇನ್ ಬೇಕಾಗುತ್ತದೆ. ಆದರೆ, Adobe Systemsನ ಮಾರುಕಟ್ಟೆಯ ಸಂಶೋಧನೆಯ ಪ್ರಕಾರ ಇದರ ಫ್ಲಾಷ್ ಪ್ಲಗ್-ಇನ್ 95%ಗಿಂತ ಹೆಚ್ಚು ವೈಯಕ್ತಿಕ ಕಂಪ್ಯೂಟರ್‌ಗಳಲ್ಲಿ ಸ್ಥಾಪಿತವಾಗಿದೆ.

ರೂಢಿಯಲ್ಲಿರುವ ಖಾತೆದಾರರಿಗೆ ಯೂಟ್ಯೂಬ್‌ನಲ್ಲಿ ಹತ್ತು ನಿಮಿಷಗಳಷ್ಟು ಉದ್ದ ಮತ್ತು 2GBರಷ್ಟು ಗಾತ್ರದ ವೀಡಿಯೋಗಳನ್ನು ಸೇರಿಸಲು ಸೀಮಿತಗೊಳಿಸಿದೆ. 2005ರಲ್ಲಿ ಯೂಟ್ಯೂಬ್ ಆರಂಭವಾದಾಗ ತುಂಬ ಉದ್ದದ ವೀಡಿಯೋಗಳನ್ನು ಸೇರಿಸಬಹುದಿತ್ತು. ಆದರೆ 2006ರಲ್ಲಿ ಹತ್ತು ನಿಮಿಷದ ಮಿತಿಯನ್ನು ಪ್ರಾರಂಭಿಸಲಾಯಿತು. ಏಕೆಂದರೆ ಈ ಮಿತಿಯನ್ನು ಮೀರಿದ ಹಲವು ವೀಡಿಯೋಗಳಲ್ಲಿ ಅನಧಿಕೃತವಾದ ದೂರದರ್ಶನದ ಕಾರ್ಯಕ್ರಮಗಳು ಹಾಗೂ ಚಲನಚಿತ್ರಗಳ ವೀಡಿಯೋಗಳಿದ್ದವು ಎಂಬುದನ್ನು ಯೂಟ್ಯೂಬ್ ಗಮನಿಸಿತು. ಪಾಲುದಾರ ಖಾತೆಯವರಿಗೆ ಮಾತ್ರ ಹತ್ತು ನಿಮಿಷಕ್ಕಿಂತ ಹೆಚ್ಚಿನ ಉದ್ದದ ವೀಡಿಯೋಗಳನ್ನು ಸೇರಿಸಲು ಅನುಮತಿ ಇದೆ, ಆದರೆ ಅದಕ್ಕೆ ಯೂಟ್ಯೂಬ್‌ ಒಪ್ಪಿಗೆ ಕೊಟ್ಟರೆ ಮಾತ್ರ.

ಯೂಟ್ಯೂಬ್ ಹೆಚ್ಚಾನೆಚ್ಚು ವಿನ್ಯಾಸಗಳ ವೀಡಿಯೋಗಳನ್ನು ಸ್ವೀಕರಿಸುತ್ತದೆ,ವಿಂಡೋಸ್ ಮೀಡಿಯಾ ವೀಡಿಯೊWMV, .AVI, .MKV, .MOV, MPEG, .MP4, DivX, .FLV, and . OGG. 3GPಗಳನ್ನು ಕೂಡಾ ಸಮರ್ಥಿಸುತ್ತದೆ, ಮೋಬೈಲ್ ಫೋನ್‌ಗಳಿಂದ ವೀಡಿಯೋಗಳನ್ನು ನೇರವಾಗಿ ಅಪ್ಲೋಡ್ ಮಾಡಲು ಅವಕಾಶ ನೀಡುತ್ತದೆ.

ವೀಡಿಯೋ ಗುಣಮಟ್ಟ

ಯೂಟ್ಯೂಬ್ ಆರಂಭದಲ್ಲಿ ಒಂದೇ ವಿನ್ಯಾಸದಲ್ಲಿ ವೀಡಿಯೋಗಳನ್ನು ನೀಡುತ್ತಿತ್ತು, ಆದರೆ ಈಗ ಇದು ಮೂರು ವಿನ್ಯಾಸಗಳಲ್ಲಿ ವೀಡಿಯೋಗಳನ್ನು ನೀಡುವುದಲ್ಲದೆ ಮೋಬೈಲ್ ಫೋನುಗಳಲ್ಲಿ ವೀಕ್ಷಿಸುವುದಕ್ಕೆ ಮೋಬೈಲ್ ವಿನ್ಯಾಸವನ್ನು ಸಹಾ ನೀಡುತ್ತದೆ. ಈಗ "ಉತ್ತಮ ಗುಣಮಟ್ಟ" ಎನ್ನಲಾಗುವ ಮೂಲ ವಿನ್ಯಾಸವು, ವೀಡಿಯೋಗಳನ್ನು 320*240 ಪಿಕ್ಸೆಲ್ಸ್‌ನ ರೆಸೊಲ್ಯುಷನ್‌ನಲ್ಲಿ ತೋರಿಸುತ್ತದೆ ಮತ್ತು ಸೋರೆನ್ಸನ್ ಸ್ಪಾರ್ಕ್ ಕೊಡೆಕ್‍ರ ಜೊತೆ ಮೊನೊ MP3 ಆಡಿಯೋವನ್ನು ಉಅಪಯೋಗಿಸುತ್ತದೆ. ಈ ಸಮಯದಲ್ಲಿ ಆನ್‌ಲೈನ್ ವೀಡಿಯೋಗಳನ್ನು ಗುಣಮಟ್ಟದ ಆಧಾರದ ಮೇಲೆ ವರ್ಗೀಕರಿಸಿದರು.

ಮಾರ್ಚ್ 2008ರಲ್ಲಿ ಪರಿಚಯಿಸಿದ, "ಉತ್ತಮ ಗುಣಮಟ್ಟ" ವೀಡಿಯೋಗಳನ್ನು 864*480 ಪಿಕ್ಸೆಲ್ಸ್ ಮತ್ತು ಸ್ಟೀರಿಯೊ AAC ಧ್ವನಿಯನ್ನು ಬಳಸಿ ತೋರಿಸಲಾಗುತ್ತದೆ. ಈ ವಿನ್ಯಾಸ ಉತ್ತಮ ಗುಣಮಟ್ಟಕ್ಕೆ ಪರಿಣಾಮಕಾರಿ ಅಭಿವೃದ್ಧಿಯನ್ನು ನೀಡುತ್ತದೆ. ನವೆಂಬರ್ 2008ರಲ್ಲಿ, 720p HD ಬೆಂಬಲ ಸೇರಿಸಲಾಯಿತು. ಇದೆ ಸಮಯದಲ್ಲಿ, ಯೂಟ್ಯೂಬ್ ಪ್ಲೇಯರ್‌ನ ಆಕಾರದ ಅನುಪಾತ 4:3 ಯಿಂದ 16:9 ರ ಅಗಲ ಪರದೆಗೆ ಬದಲಾಯಿಸಲಾಯಿತು. 720p ವೀಡಿಯೋಗಳು 1280*720 ಪಿಕ್ಸೆಲ್ಸ್ ರೆಸೋಲುಷನ್‍ಗಳಲ್ಲಿ ತೋರಿಸಲಾಗುತ್ತದೆ ಮತ್ತು H.264 ವೀಡಿಯೋ ಕೊಡೆಕ್‍ಯಿಂದ ಸಾಂಕೇತಿಕ ಸಂದೇಶವನ್ನು ಒದಗಿಸಲಾಗುತ್ತದೆ. ಸ್ಟೀರಿಯೋ ಆಡಿಯೋ ಸಾಂಕೇತಿಕ ಸಂದೇಶವನ್ನು AAC ಒದಗಿಸುವುದನ್ನು ಕೂಡ ಈ ವಿಧಾನ ತೋರಿಸುತ್ತದೆ.

3D ವೀಡಿಯೋಸ್ ಮತ್ತು ವೀಕ್ಷಣೆ

ಜುಲೈ 21,2009ರಲ್ಲಿ ಪೋಸ್ಟ್ ಮಾಡಿದ ಒಂದು ವೀಡಿಯೋನಲ್ಲಿ,ಯೂಟ್ಯೂಬ್ ಬಳಕೆದಾರರು ಇನ್ನು ಮುಂದೆ 3D ವೀಡಿಯೋಗಳನ್ನು ಅಪ್ಲೋಡ್ ಮಾಡಬಹುದೆಂದು ಯೂಟ್ಯೂಬ್ ಸಾಫ್ಟವೇರ್ ಇಂಜಿನಿಯರ್ ಪೀಟರ್ ಬ್ರಾಡಶೊರವರು ಘೋಷಿಸಿದರು. ಪ್ರತಿ 3D ವೀಡಿಯೋ ಅಪ್ಲೋಡ್ ಮಾಡಿ ಸಂಸ್ಕರಿಸಿದ ನಂತರ, ಬಳಕೆದಾರರ ಬಳಿ ವೀಡಿಯೋವನ್ನು ವೀಕ್ಷಿಸಲು ಹಲವು ಆಯ್ಕೆಗಳಿರುತ್ತವೆ. 3D ಕನ್ನಡಕ ಇಲ್ಲದ ಬಳಕೆದಾರರಿಗಾಗಿ ಅವರ ಬಳಿ ವೀಡಿಯೋ ವೀಕ್ಷಿಸಲು ಕೆಲವು ಆಯ್ಕೆಗಳಿವೆ,ಅವು ಅಡ್ಡಾ-ಕಣ್ಣಿನ ನೋಟ,ಸಮಾನಾಂತರ ದೃಶ್ಯ,ಒಡೆದ-ಕನ್ನಡಿಯ ನೋಟ ಮತ್ತು ಎಡ ಹಾಗು ಬಲ ದೃಶ್ಯದ ನೋಟ ಮಾತ್ರ. ಯಾವ ಬಳಕೆದಾರರ ಬಳಿ 3D ಕನ್ನಡಕವಿದೆಯೋ ಅವರು ವೀಡಿಯೋವನ್ನು 3Dಯಲ್ಲಿ ವೀಕ್ಷಿಸಲು ಬರಿ ಯಾವುದಾದರು ಬಣ್ಣವನ್ನು ಕನ್ನಡಕದ ಮೇಲೆ ಬಳಸಬೇಕೆಂದು ಆಯ್ಕೆ ಮಾಡಬೇಕು. ಜಿಫೋರ್ಸ್ 3D ನೋಟ ಅಥವಾ ಪೊಲರೈಜ಼್ಡ 3D ವೀಕ್ಷಣೆ,ಯಾವುದು ಕೂಡ ಸಧ್ಯದಲ್ಲಿ ಬೆಂಬಲಿಸುತ್ತಿಲ್ಲಾ.

ವಸ್ತುವಿಷಯಗಳ ಪ್ರವೇಶಾಧಿಕಾರ

ಯೂಟ್ಯೂಬಿನ ಒಂದು ಮುಖ್ಯವಾದ ರೂಪ,ಅದರ ವೀಡಿಯೋಗಳನ್ನು ಬಳಕೆದಾರರು ಜಾಲತಾಣದ ಹೊರಗೆ ಜಾಲ ಪುಟಗಳಲ್ಲಿ ಕೂಡ ವೀಕ್ಷಿಸಬಹುದಾದ ಸಕ್ಷಮ್ಯತೆ. ಪ್ರತಿ ಯೂಟ್ಯೂಬ್ ವೀಡಿಯೋ ಒಂದು HTML ತುಣುಕಿನ ಜೊತೆಗೂಡಿರುತ್ತದೆ,ಇದನ್ನು ಯೂಟ್ಯೂಬ್‌ ಜಾಲತಾಣದ ಹೊರಗಿನ ಪುಟದಲ್ಲಿ ಹುದುಗಿಸಲು ಉಪಯೋಗಿಸಬಹುದು. ಈ ಕಾರ್ಯನಿರ್ವಹಣೆಯನ್ನು ಹಲವು ಸಲ ಸಾಮಾಜಿಕ ಸಂಪರ್ಕ ಜಾಲದಲ್ಲಿ ಮತ್ತು ಬ್ಲಾಗ್‍ಗಳ ಪುಟದಲ್ಲಿ ವೀಡಿಯೋಗಳನ್ನು ಹುದುಗಿಸಲು ಉಪಯೋಗಿಸುತ್ತಾರೆ. ಕೆಲವು ಮೋಬೈಲ್ ಫೋನುಗಳು ಕೂಡ ಯೂಟ್ಯೂಬ್‌ ವೀಡಿಯೋಗಳಲ್ಲಿ ಪ್ರವೇಶಾಧಿಕರ ಪಡೆದುಕೊಳ್ಳಬಹುದು,ಇದು ಒದಗಿಸುವವ ಮತ್ತು ದತ್ತಾಂಶದ ಯೋಜನೆಯ ಮೇಲೆ ಅವಲಂಬಿತ. ಯೂಟ್ಯೂಬ್ ಮೋಬೈಲ್ ಜೂನ್ 2007ರಲ್ಲಿ ಸ್ಥಾಪಿಸಲಾಗಿತು ಮತ್ತು ಇದು ವೀಡಿಯೋಗೆ RTSP ವಾಹಿನಿ ಉಅಪಯೋಗಿಸುತ್ತೆ. ಯೂಟ್ಯೂಬ್‌ನ ಎಲ್ಲಾ ವೀಡಿಯೋಗಳು ಜಾಲತಾಣದ ಮೋಬೈಲ್ ಅವತಾರದಲ್ಲಿ ದೊರಕುವುದಿಲ್ಲಾ.

ಜೂನ್ 2007ರಿಂದ,ಯೂಟ್ಯೂಬ್‌ನ ವೀಡಿಯೋಗಳು ಹಲವು ಬಗೆಯ ಆಪ್ಪಲ್ ಉತ್ಪನ್ನಗಳಲ್ಲಿ ವೀಕ್ಷಿಸಲು ಲಭ್ಯವಿದೆ. ಇದಕ್ಕೆ ಯೂಟ್ಯೂಬ್‌ನ ವಿಷಯವಸ್ತುಗಳು ಆಪ್ಪಲ್‍ಗೆ ಒಪ್ಪುವಂತಹ ವೀಡಿಯೋ ದರ್ಜೆ H.264ಗೆ ಪರಿವರ್ತಿಸಬೇಕಾಯಿತು,ಈ ಕಾರ್ಯ ಪೂರ್ಣಗೊಳ್ಳಲು ಹಲವು ತಿಂಗಳುಗಳಾಯಿತು. ಯೂಟ್ಯೂಬ್ ವೀಡಿಯೋಗಳನ್ನು ಆಪ್ಪಲ್ TV ಮತ್ತು iPhone ನಂತಹ ಸಾಧನಗಳಲ್ಲಿ ವೀಕ್ಷಿಸಬಹುದು. ಒಂದು TiVo ಸೇವೆ ಆಧುನಿಕಗೊಳಿಸಿದಾಗ ಜುಲೈ 2008ರಲ್ಲಿ,ಅದು ಯೂಟ್ಯೂಬ್ ವೀಡಿಯೋಗಳನ್ನು ಹುಡುಕಲು ಮತ್ತು ಚಲಿಸಲು ತಂತ್ರವನ್ನು ಅನುಮತಿಸಿತು. ಜನವರಿ 2009ರಲ್ಲಿ,ಯೂಟ್ಯೂಬ್ "ಯೂಟ್ಯೂಬ್ ಫಾರ್ TV" ಸ್ಥಾಪಿಸಿತು,ಸೆಟ್-ಟಾಪ್ ಬಾಕ್ಸಸ್‍ಗಳು ಮತ್ತು ಇತರ TV-ಆಧಾರಿತ ಮಾಧ್ಯಮದ ಸಾಧನಗಳು ವೆಬ್ ಬ್ರೌಸರ್‌‌ನ್ನು ಕೂಡಿ, ಕತರಿಸಿ ಮಾಡಿದ ಜಾಲತಾಣದ ಒಂದು ಅವತಾರ,ಆರಂಭದಲ್ಲಿ ಅದರ ವೀಡಿಯೋಗಳನ್ನು ಪ್ಲೇಸ್ಟೆಷನ್ ಮತ್ತು ವೈ ವೀಡಿಯೋ ಆಟದ ಉಪಕರಣಗಳಲ್ಲಿ ವೀಕ್ಷಿಸಲು ಅನುಮತಿ ಇತ್ತು. ಜೂನ್ 2009ರಲ್ಲಿ, ಯೂಟ್ಯೂಬ್ Xl ಪರಿಚಯಿಸಲಾಗಿತ್ತು,ಇದು ಉತ್ತಮ ದೂರದರ್ಶನದ ಪರದೆಯ ಮೇಲೆ ವೀಕ್ಷಿಸಲು ಇಂಟರ್‌ಫೇಸ್ ಡಿಸೈನ್‍ನನ್ನು ಸರಳಗೊಳಿಸಿದೆ.

ಯೂಟ್ಯೂಬ್ ಸಾಮಾನ್ಯವಾಗಿ ತನ್ನ ವೀಡಿಯೋಗಳಿಗೆ ಡೌನ್‍ಲೋಡ್ ಕೊಂಡಿ ಕೊಡುವುದಿಲ್ಲಾ ಮತ್ತು ಅವುಗಳನ್ನು ತನ್ನ ವೆಬ್‍ಸೈಟ್ ಇಂಟರ್‌ಫೇಸ್‍ನಿಂದಲೆ ವೀಕ್ಷಿಸಬೇಕೆಂದು ಅಪೇಕ್ಷಿಸುತ್ತದೆ. ಕೆಲವು ಸಂಖ್ಯಯ ವೀಡಿಯೋಗಳನ್ನು ಮಾತ್ರ MP4 ಫೈಲ್ ರೂಪದಲ್ಲಿ ಡೌನ್‍ಲೋಡ್ ಮಾಡಬಹುದು,ಉದಾಹರನೆಗೆ ಪ್ರಧಾನ ಮಂತ್ರಿ ಬ್ಯಾರಕ್ ಒಬಾಮಾರವರ ಪ್ರತಿ ವಾರದ ಭಾಷಣಗಳು. ಹಲವು ಮೂರನೇಯ ಜಾಲತಾಣದವರು,ಉಪಯೋಗಗಳು ಮತ್ತು ಬ್ರೌಸರ್ ಪ್ಲಗ್-ಇನ್ಸ್ ಬಳಕೆದಾರಿಗೆ ಯೂಟ್ಯೂಬ್ ವೀಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ನೆರವಾಗುತ್ತದೆ. ಫೆಬ್ರುವರಿ 2009ರಲ್ಲಿ,ಯೂಟ್ಯೂಬ್ ಒಂದು ಪರೀಕ್ಷ ಸೇವೆಯನ್ನು ಘೋಷಿಸಿತು,ಇದರಲ್ಲಿ ಕೆಲವು ಪಾಲುದಾರರು ವೀಡಿಯೋ ಡೌನ್‍ಲೋಡ್‍ಗಳನ್ನು ಉಚಿತವಾಗಿ ಅಥವಾ ಪರೀಕ್ಷಾ ಶುಲ್ಕವನ್ನು ಗೂಗಲ್ ಚೆಕೌಟ್‍ರ ಮೂಲಕ ನೀಡುತ್ತಾರೆ.

ಸ್ಥಳೀಕರಣ

ಜೂನ್ 19,2007ರಲ್ಲಿ Google ನ CEO ಎರಿಕ್ ಇ.ಶ್ಮಿಡ್ಟ್ ಹೊಸ ಸ್ಥಳೀಕರಣದ ವಿಧಾನವನ್ನು ಸ್ಥಾಪಿಸಲು ಪ್ಯಾರಿಸ್‍ನಲ್ಲಿದ್ದರು. ಇಡಿ ಜಾಲತಾಣದ ಇಂಟರ್‌ಫೇಸ್ ಈಗ ಸ್ಥಳೀಕರಣದ ರೂಪಾಂತರದಲ್ಲಿ 22 ದೇಶಗಳಲ್ಲಿ ಲಭ್ಯವಿದೆ:

ದೇಶ URL ಭಾಷೆ Launch date
ಯೂಟ್ಯೂಬ್‌  ಆಸ್ಟ್ರೇಲಿಯಾ au.youtube.com ಇಂಗ್ಲೀಷ್‌‍ (ಆಸ್ಟ್ರೇಲಿಯಾ) October 22, 2007
ಯೂಟ್ಯೂಬ್‌  Brazil br.youtube.com ಪೋರ್ಚುಗೀಸ್‌ (ಬ್ರೆಜಿಲ್‌) June 19, 2007
ಯೂಟ್ಯೂಬ್‌  ಕೆನಡಾ ca.youtube.com ಇಂಗ್ಲಿಷ್(ಕೆನಡಾ) ಮತ್ತು ಫ್ರೆಂಚ್‌ (ಕೆನಡಾ) November 6, 2007
ಯೂಟ್ಯೂಬ್‌  Czech Republic cz.youtube.com ಸೆಝ್ October 9, 2008
ಯೂಟ್ಯೂಬ್‌  France fr.youtube.com ಫ್ರೆಂಚ್‌ June 19, 2007
ಯೂಟ್ಯೂಬ್‌  Germany de.youtube.com ಜರ್ಮನ್‌ November 8, 2007
ಯೂಟ್ಯೂಬ್‌  ಹಾಂಗ್ ಕಾಂಗ್ hk.youtube.com ಚೈನೀಸ್‌ (ಸಾಂಪ್ರದಾಯಿಕ) October 17, 2007
ಯೂಟ್ಯೂಬ್‌  ಇಸ್ರೇಲ್ il.youtube.com ಇಂಗ್ಲೀಷ್ September 16, 2008
ಯೂಟ್ಯೂಬ್‌  ಭಾರತ in.youtube.com ಇಂಗ್ಲೀಷ್‌ (ಭಾರತ) May 7, 2008
ಯೂಟ್ಯೂಬ್‌  ಐರ್ಲ್ಯಾಂಡ್ ie.youtube.com ಇಂಗ್ಲೀಷ್‌ (ಐರ್ಲಂಡ್‌) June 19, 2007
ಯೂಟ್ಯೂಬ್‌  Italy it.youtube.com ಇಟಾಲಿಯನ್‌ June 19, 2007
ಯೂಟ್ಯೂಬ್‌  ಜಪಾನ್ jp.youtube.com ಜಪನೀಸ್‌ June 19, 2007
ಯೂಟ್ಯೂಬ್‌  ದಕ್ಷಿಣ ಕೊರಿಯಾ kr.youtube.com ಕೋರಿಯನ್‌ January 23, 2008
ಯೂಟ್ಯೂಬ್‌  ಮೆಕ್ಸಿಕೋ mx.youtube.com ಸ್ಪಾನಿಷ್‌(ಮೆಕ್ಸಿಕೋ) October 10, 2007
ಯೂಟ್ಯೂಬ್‌  ನೆದರ್ಲ್ಯಾಂಡ್ಸ್ nl.youtube.com ಡಚ್‌ June 19, 2007
ಯೂಟ್ಯೂಬ್‌  ನ್ಯೂ ಜೀಲ್ಯಾಂಡ್ nz.youtube.com ಇಂಗ್ಲೀಷ್‌ (ನ್ಯೂಜಿಲ್ಯಾಂಡ್) October 22, 2007
ಯೂಟ್ಯೂಬ್‌  Poland pl.youtube.com ಪೋಲಿಶ್‌ June 19, 2007
ಯೂಟ್ಯೂಬ್‌  ರಷ್ಯಾ ru.youtube.com ರಶಿಯನ್‌ November 13, 2007
ಯೂಟ್ಯೂಬ್‌  Spain es.youtube.com ಸ್ಪಾನಿಷ್‌ June 19, 2007
ಯೂಟ್ಯೂಬ್‌  Sweden se.youtube.com ಸ್ವೀಡಿಶ್‌ October 22, 2008
ಯೂಟ್ಯೂಬ್‌  Taiwan tw.youtube.com ಚೈನೀಸ್‌ (ಸಾಂಪ್ರದಾಯಿಕ) October 18, 2007
ಯೂಟ್ಯೂಬ್‌  ಯುನೈಟೆಡ್ ಕಿಂಗ್ಡಂ uk.youtube.com ಇಂಗ್ಲೀಷ್‌(ಸಂಯುಕ್ತ ಸಾಮ್ರಾಜ್ಯ ) June 19, 2007

ಯಾವ ಸ್ಥಳಿಯ ರೂಪವನ್ನು ಆಯ್ದುಕೊಳಬೇಕೆಂದು, ಬಳಕೆದಾರರ IP ವಿಳಾಸದ ಆಧಾರದ ಮೇಲೆ ಯೂಟ್ಯೂಬ್‌ನ ಇಂಟರ್‌ಫೇಸ್ ಸಲಹೆ ನೀಡುತ್ತದೆ. ಕೆಲವು ಸಲ "ಈ ವೀಡಿಯೋ ನಿಮ್ಮ ದೇಶದಲ್ಲಿ ಲಭ್ಯವಿಲ್ಲಾವೆಂದು" ಸೂಚನೆ ತೂರಿಸುತ್ತೆ ಕಾರಣ ಕೃತಿಸ್ವಾಮ್ಯದ ತಡೆಗಳು ಅಥವಾ ಅಸೂಕ್ತ ವಸ್ತುವಿಷಯಗಳ ಇರುವಿಕೆ.

ಟರ್ಕಿಯಲ್ಲಿ ಸ್ಥಳೀಯ ಆವೃತ್ತಿಯನ್ನು ತೆರೆಯಲು ಪ್ರಯತ್ನಿಸಿದ ಯುಟ್ಯೂಬ್‌ಗೆ ಹಲವಾರು ಸಮಸ್ಯೆಗಳು ಎದುರಾದವು. ಟರ್ಕಿಯ ಅಧಿಕಾರಿಗಳು ಯೂಟ್ಯೂಬ್‌ಗೆ ತನ್ನ ಕಚೇರಿಯನ್ನು ಅಲ್ಲಿ ಸ್ಥಾಪಿಸಲು ಹೇಳಿ, ಅದು ಸ್ಥಳೀಯ ಕಾನೂನಿಗೆ ಬದ್ಧವಾಗಿರಬೇಕೆಂದು ತಿಳಿಸಿದರು. ಆದರೆ ಯೂಟ್ಯೂಬ್‌ ಈ ರೀತಿಯ ಬದಲಾಣೆಗೆ ತಾನು ಸಿದ್ಧವಿಲ್ಲ ಎಂದು ತಿಳಿಸಿತ್ತಲ್ಲದೇ ಅದರಲ್ಲಿಯ ವಿಡಿಯೋಗಳು ಟರ್ಕಿಯ ಕಾನೂನಿಗೆ ಅದು ಬದ್ಧವಾಗಿಲ್ಲ ಎಂದು ಹೇಳಿತು. ಟರ್ಕಿಯ ಅಧಿಕಾರಿಗಳು ಯೂಟ್ಯೂಬ್‌ನಲ್ಲಿ ಮುಸ್ತಾಫಾ ಕೆಮಾಲ್‌ ಅತಾತುಕ್‌ನನ್ನು ಅವಮಾನಿಸುವಂತಹ ವಿಡಿಯೋವನ್ನು ಪ್ರಸಾರ ಮಾಡಿದರು ಹಾಗೂ ಕೆಲವು ವಿಡಿಯೋಗಳು ಮುಸ್ಲಿಂ ಸಮುದಾಯಕ್ಕೆ ವಿರೋಧವಾಗಿದ್ದವು ಎಂದು ಆತಂಕ ವ್ಯಕ್ತಪಡಿಸಿದರು.

ಮಾರ್ಚ್‌ 2009ರಲ್ಲಿ ಯುಟ್ಯೂಬ್‌ ಮತ್ತು ಪರ್‌ಫಾರ್ಮಿಂಗ್‌ ರೈಟ್ಸ್‌‍ ಸೊಸೈಟಿ ನಡುವಿನ ವಿವಾದವು ಸಂಯುಕ್ತ ಸಾಮ್ರಾಜ್ಯದ ಮುಖ್ಯಕಂಪೆನಿಗಳ ಮ್ಯೂಸಿಕ್‌ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಪ್ರಸಾರಿಸುವುದು ನಿಷೇಧಕ್ಕೊಳಗಾಯಿತು. ಪರವಾನಗಿ ಕುರಿತಂತೆ ಒಪ್ಪಂದಕ್ಕೆ ಬರುವುದು ಸಾಧ್ಯವಾಗದ್ದರಿಂದ ಯೂಟ್ಯೂಬ್‌ ಪ್ರಕಟಿಸಿದ ಬಹುಮುಖ್ಯ ಧ್ವನಿ ಮುದ್ರಣ ಕಂಪೆನಿಗಳ ವಿಡಿಯೋಗಳನ್ನು ತೆಗೆಯಬೇಕಾಯಿತು. ಈ ವಿವಾದವು ಸೆಪ್ಟೆಂಬರ್‌ 2009ರಂದು ಪರಿಹಾರವಾಯಿತು. ಏಪ್ರಿಲ್ 2009ರಂದು ಇದೇ ರೀತಿಯ ಇನ್ನೊಂದು ವಿವಾದದಿಂದಾಗಿ ಜರ್ಮನಿಯಲ್ಲಿ ಕೂಡಾ ಬಹುಮುಖ್ಯ ಕಂಪೆನಿಗಳ ಮ್ಯೂಸಿಕ್‌ವಿಡಿಯೋಗಳನ್ನು ತೆಗೆಯಬೇಕಾಯಿತು.

ವಿವರಗಳಿಗಾಗಿ ನೋಡಿ

  • ಪರ್ಯಾಯ ಮಾಧ್ಯಮ
  • CNN-ಯೂಟ್ಯೂಬ್‌ ಅಧ್ಯಕ್ಷಿಯ ಚರ್ಚೆ
  • ವಿಡಿಯೋ ಸೇವೆಗಳ ಹೋಲಿಕೆ
  • ಅಂತರ್ಜಾಲ ಗುಣಧರ್ಮದ ಪಟ್ಟಿ
  • ಯೂಟ್ಯೂಬ್‌ನ ತಾರಾಮೌಲ್ಯವುಳ್ಳವರ ಪಟ್ಟಿ
  • ರಿಕ್‍ರೋಲಿಂಗ್
  • ಬಳಕೆದಾರರು-ಉತ್ಪಾದಿಸಿದ ವಸ್ತುವಿಷಯಗಳು
  • ವೈರಲ್ ವೀಡಿಯೋ
  • ಯೂಟ್ಯೂಬ್ ಪ್ರಶಸ್ತಿಗಳು
  • ನೇರ ಯೂಟ್ಯೂಬ್

ಆಕರಗಳು

ಹೆಚ್ಚಿನ ಓದಿಗಾಗಿ

  • Lacy, Sarah: The Stories of Facebook, YouTube and MySpace: The People, the Hype and the Deals Behind the Giants of Web 2.0 (2008) ISBN 978-1-85458-453-3

ಹೊರಗಿನ ಕೊಂಡಿಗಳು

Tags:

ಯೂಟ್ಯೂಬ್‌ ಕಂಪನಿಯ ಇತಿಹಾಸಯೂಟ್ಯೂಬ್‌ ಸಾಮಾಜಿಕ ಪರಿಣಾಮಯೂಟ್ಯೂಬ್‌ ಟೀಕೆಗಳುಯೂಟ್ಯೂಬ್‌ ತಡೆಗಟ್ಟುವಿಕೆಯೂಟ್ಯೂಬ್‌ ತಂತ್ರಜ್ಞಾನಯೂಟ್ಯೂಬ್‌ ವಸ್ತುವಿಷಯಗಳ ಪ್ರವೇಶಾಧಿಕಾರಯೂಟ್ಯೂಬ್‌ ಸ್ಥಳೀಕರಣಯೂಟ್ಯೂಬ್‌ ವಿವರಗಳಿಗಾಗಿ ನೋಡಿಯೂಟ್ಯೂಬ್‌ ಆಕರಗಳುಯೂಟ್ಯೂಬ್‌ ಹೆಚ್ಚಿನ ಓದಿಗಾಗಿಯೂಟ್ಯೂಬ್‌ ಹೊರಗಿನ ಕೊಂಡಿಗಳುಯೂಟ್ಯೂಬ್‌

🔥 Trending searches on Wiki ಕನ್ನಡ:

ಪ್ರತಿಧ್ವನಿಪ್ರೀತಿಮದುವೆಭಾಷೆಮೈಲಾರ ಮಹಾದೇವಪ್ಪರಕ್ತಬೇಲೂರುಚಾಲುಕ್ಯವಿಜಯ ಕರ್ನಾಟಕಸಾಲುಮರದ ತಿಮ್ಮಕ್ಕನೀತಿ ಆಯೋಗಕುಕ್ಕೆ ಸುಬ್ರಹ್ಮಣ್ಯ ದೇವಾಲಯರೋಸ್‌ಮರಿಶುಕ್ರಯೇಸು ಕ್ರಿಸ್ತದುರ್ಗಸಿಂಹವಾಲ್ಮೀಕಿನಾಯಕನಹಟ್ಟಿಮೊಜಿಲ್ಲಾ ಫೈರ್‌ಫಾಕ್ಸ್ಪಾಲಕ್ನರೇಂದ್ರ ಮೋದಿಮೇರಿ ಕೋಮ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಶೃಂಗೇರಿವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುವ್ಯಂಜನಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಆಗಮ ಸಂಧಿಕನ್ನಡದಲ್ಲಿ ಮಹಿಳಾ ಸಾಹಿತ್ಯರಾಜಕೀಯ ವಿಜ್ಞಾನನವೆಂಬರ್ ೧೪ಸಂಭೋಗಹನುಮಾನ್ ಚಾಲೀಸಎನ್ ಆರ್ ನಾರಾಯಣಮೂರ್ತಿಅಮೃತಧಾರೆ (ಕನ್ನಡ ಧಾರಾವಾಹಿ)ಸಿ. ಎನ್. ಆರ್. ರಾವ್ಮಣ್ಣಿನ ಸವಕಳಿಪಿ.ಲಂಕೇಶ್ಗಣರಾಜ್ಯೋತ್ಸವ (ಭಾರತ)ಸಿಂಧೂತಟದ ನಾಗರೀಕತೆಗೋವಿನ ಹಾಡುಗೌತಮಿಪುತ್ರ ಶಾತಕರ್ಣಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕೈಗಾರಿಕೆಗಳ ಸ್ಥಾನೀಕರಣಭರತ-ಬಾಹುಬಲಿಸಿದ್ದಲಿಂಗಯ್ಯ (ಕವಿ)ನಿರಂಜನನೈಟ್ರೋಜನ್ ಚಕ್ರಹೂವುಬ್ಯಾಂಕ್ ಖಾತೆಗಳುಗದ್ದಕಟ್ಟುಯೂನಿಲಿವರ್ಬರಗೂರು ರಾಮಚಂದ್ರಪ್ಪಜೀವವೈವಿಧ್ಯಅಲನ್ ಶಿಯರೆರ್ಜವಹರ್ ನವೋದಯ ವಿದ್ಯಾಲಯನಾಗವರ್ಮ-೧ಸಮಾಜಶಾಸ್ತ್ರಕೆ.ಗೋವಿಂದರಾಜುಮಾರ್ತಾಂಡ ವರ್ಮಆನೆವಾಯು ಮಾಲಿನ್ಯಕನ್ನಡ ಸಾಹಿತ್ಯ ಪ್ರಕಾರಗಳುಮೂಲಭೂತ ಕರ್ತವ್ಯಗಳುಬಾಬು ಜಗಜೀವನ ರಾಮ್ಚನ್ನವೀರ ಕಣವಿಇಂಡಿಯನ್ ಪ್ರೀಮಿಯರ್ ಲೀಗ್ರಾಷ್ಟ್ರೀಯತೆದರ್ಬಂಗಮೂಢನಂಬಿಕೆಗಳುಹಂಪೆಕನ್ನಡ ರಂಗಭೂಮಿಬಾದಾಮಿಸೀತೆಅಶ್ವತ್ಥಮರ🡆 More