ಭಾರತೀಯ ತತ್ವಶಾಸ್ತ್ರ ಸಮೀಕ್ಷೆ

ಭಾರತದಲ್ಲಿ ಸಾವಿರಾರು ವರ್ಷಗಳಿಂದ ಬೆಳೆದು ಬಂದ ತತ್ತ್ವಶಾಸ್ತ್ರವು ನಾಸ್ತಿಕವೆನಿಸುವ ಚರ್ವಾಕವಾದದಿಂದ ಇತ್ತೀಚಿನ ಭಕ್ತಿವೇದಾಂತದವರೆಗಿನ ವೈವಿಧ್ಯವನ್ನು ಹೊಂದಿದೆ.

ಭಾರತೀಯ ತತ್ತ್ವಶಾಸ್ತ್ರ-ಪೀಠಿಕೆ

ಪ್ರಕೃತಿತತ್ವದ ವಿಕಾಸದ ಸಾಂಖ್ಯ , ಶೂನ್ಯದಿಂದಲೇ ಎಂದು ಹೇಳುವ ಬೌದ್ಧ , ವೇದವನ್ನು ಧಿಕ್ಕರಿಸುವ ಲೋಕಾಯತ , ಬ್ರಹ್ಮ(ಒ)ವೊಂದೇ ಸತ್ಯವೆನ್ನುವ ಅದ್ವೈತ , ಅದೇ ವಿಷ್ಣು,ಅಥವಾ ಶಿವನೆನ್ನುವ ಭಕ್ತಿಪಂಥಗಳು ,ಅಹಿಂಸೆ ನಗ್ನತೆ ಪಾಲಿಸುವ ಜೈನ ಧರ್ಮ , ಪಂಚ ಮಕಾರಗಳ ಆರಾಧನೆಯ ಶಾಕ್ತ ಪಂಥ , ಏನು ಸಾಧನೆ ಮಾಡಿದರೂ ಫಲವಿಲ್ಲವೆನ್ನುವ , ಎಲ್ಲಾ ಪೂರ್ವನಿಶ್ಚಿತವೆನ್ನುವ ಆಜೀವಕ ಮಾರ್ಗ, ಸತ್ಯ ಅನಿಶ್ಚಿತ , ಜಗತ್ತೇ ಇಲ್ಲವೆನ್ನುವ ಮಾಧ್ಯಮಿಕ , ಇದ್ದರೆ ಅದು ಭ್ರಮೆ ಎನ್ನುವ ಶಾಂಕರ ಮತ ; ಇವೆಲ್ಲವೂ ಸೇರಿ ಜಗಳವಾಡುತ್ತಾ ಸಹಬಾಳ್ವೆ ನಡೆಸುತ್ತಾ , -ಅವರವರದು ಅವರವರಿಗೆನ್ನುವ ತಾತ್ವಿಕ ನಿಲುವುಳ್ಳ ಭಾರತ ಸಮಾಜ ಒಂದು ವಿಚಿತ್ರ ಸಮ್ಮಿಲನ .

    ವಾದ ಮಾಡಿ ವಾದ ಮಾಡಿ , ಸೋತವನು ಗೆದ್ದವನ ಶಿಷ್ಯನಾಗುತ್ತಾ ಮುಕ್ತ ಚರ್ಚೆಯ ತಾತ್ವಿಕ ಪ್ರಜಾತಂತ್ರ - ಇಲ್ಲಿ ಅಂತರ್ಗತ. ನಿನ್ನ ದಾರಿ ಸರಿ ಇರಬಹುದು , ಆದರೆ ನಾನು ಒಪ್ಪುವುದಿಲ್ಲ ; ಮುಂದೆ ಸರಿಕಂಡರೆ ಒಪ್ಪಲೂಬಹುದು ಎನ್ನುವ ಉದಾರ ನಿಲುವು ಭಾರತಸಂಸ್ಕೃತಿ ಮತ್ತು ಅದರ ಮನೋಭಾವ . ಈ ಸಾಂಸ್ಕೃತಿಕ ಮನೋಭವ ಇಂದು

ನಿನ್ನೆಯದಲ್ಲ ; ಆದರೆ ಸಾವಿರಾರು ವರ್ಷಗಳಿಂದ ನಡೆದು ಬಂದ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಮನೋಭಾವ.

ವೇದಾಂತದ ಪ್ರಭುತ್ವ

ಜೀವ, ಜಗತ್ತು , ದೇವರು , ಕರ್ಮ , ಪಾಪ , ಪುಣ್ಯ , ಭಕ್ತಿ , ಮೋಕ್ಷ , ಇವುಗಳನ್ನು ಎಳೆ ಎಳೆಯಾಗಿ ಕೂದಲು ಸೀಳುವ ತರ್ಕದಿಂದ ಬೆಳೆದದ್ದು ದೊಡ್ಡ ಗ್ರಂಥರಾಶಿ . ಇದಕ್ಕಾಗಿ ಪ್ರಚಂಡ ತರ್ಕಗಳು , ಒಂದೇ ದರ್ಶನದಲ್ಲಿ ನಾನಾ ಬೇಧ, ಮಂಡನೆ - ಖಂಡನೆಗಳ ಗ್ರಂಥಗಳ ಸಾಗರ (ರಾಶಿ) ; ಕೆಲವು ಹಿಮಾಲಯದ ಎತ್ತರದ ಚಂತನೆ , ಸಮುದ್ರದಷ್ಟು ಆಳ - ಕೆಲವು ಶುಷ್ಕ ತರ್ಕಗಳ ಮರುಭೂಮಿ ; ಇವು -ಇವುಗಳ ಸಮಗ್ರ ಅಧ್ಯಯನವನ್ನು ಅಸಾಧ್ಯವಾಗಿಸಿದೆ. ಆದರೆ ಇವೆಲ್ಲವೂ , ಮೋಕ್ಷವನ್ನು ಮಾತ್ರಾ ಗುರಿಯಾಗಿ ಬೆಳೆದು ಬಂದಿದ್ದು ಒಂದು ವಿಚಿತ್ರ (ದುರಂತ ?) . ಸಂಸ್ಕೃತಿಯು ಸಮಾಜದ ಇತರ ಮುಖಗಳನ್ನು -ದಾರ್ಶನಿಕ ಚಿಂತನೆಗಳು ಕಡೆಗಣಿಸಿವೆ ಎನ್ನಬೇಕು . ದರ್ಶನಗಳ ಸೆಳೆತವೆಲ್ಲಾ ಪರಲೋಕದ ಕಡೆ ಇದ್ದು , ಉಳಿದ ದರ್ಶನಗಳಿಗಿಂತ ವೇದಾಂತ ದರ್ಶನವೇ ಶ್ರೇಷ್ಠ ವೆಂಬ , ಭ್ರಮೆಯಿಂದ , ಐಹಿಕ (ಈ ಲೋಕದ) ಜೀವನ ಪ್ರೀತಿಗೆ ವಿರೋಧವಾಗಿ , ಸಂಸ್ಸೃತಿ ಬೆಳೆಯಿತೇ ? - ಜೀವನ ವೀರ್ಯವತ್ತಾಗುವ ಬದಲು , ಸಂರಕ್ಷಣೆಯು ಇಲ್ಲದೇ ನಿರ್ವೀರ್ಯ ಸಂಸ್ಸೃತಿಯಾಯಿತೇ ? -ಎಂಬುದು ಚಿಂತಿಸಬೇಕಾದ ವಿಷಯ. ಕೇವಲ ನೂರಿನ್ನೂರು ವರ್ಷಗಳಲ್ಲಿ ಕಂಡ ಆಥುನಿಕ ಬುದ್ದಿಜೀವಿಗಳ ದರ್ಶನ ಹೊಸ ಪ್ರಪಂಚವನ್ನೇ ಕಾಣಹೊರಟಿದೆ.

ವೇದ-ಭಕ್ತಿ-ಮೋಕ್ಷ

ವೇದದಲ್ಲಿ ಜೀವನ ವಿಮುಖ ದೃಷ್ಟಿ ಇಲ್ಲ . ಗೃಹಸ್ಥಾಶ್ರಮಕ್ಕೆ ಮಹತ್ವವಿದೆ ಅದರ ರಕ್ಷಣೆಗೆ ಮಹತ್ವವಿದೆ ; ಸುಖ ಸಂಪತ್ತಿಗೆ ಮಹತ್ವವಿದೆ. ಧರ್ಮ , ಅರ್ಥ(ಹಣ) , ಕಾಮ (ಆಸೆಗಳು)ಇವುಗಳ ಪೂರೈಕೆ ಆದರ ಗುರಿಯಾಗಿತ್ತು . ಮೀಮಾಂಸಕರ ಕರ್ಮಠತೆ , ವೇದಾಂತದ ಪ್ರಾಮುಖ್ಯತೆ ವೇದಗಳನ್ನು ಜನರಿಂದ ದೂರ ಮಾಡಿದವು . ಈ ವೇದ -ವೇದಾಂತದ ಗೊಂದಲಗಳನ್ನು ದಾಟಿ ಸಾಮಾನ್ಯ ಜನರ ಬಳಿಗೆ ಸಾರಿದ ಭಕ್ತಿ ಪಂಥವೂ ಅತಿರೇಕಕ್ಕೆ ಹೋಗಿ ನಿಷ್ಕ್ರಿಯತೆ , ಅಳು ಬುರುಕುತನ , ಆತ್ಮ ವಿಶ್ವಾಸದ ಬದಲು - ಎಲ್ಲದಕ್ಕೂ ಭಗವಂತನನ್ನು ಕರೆಯುವ ಪರಾಭವ ಮನೋಭಾವ -ಮೂರ್ತಿಪೂಜೆಯ ಪ್ರಾಮುಖ್ಯತೆ , ಜಗತ್ತಿನ ಜೀವನದ ಸೌಂದರ್ಯಕ್ಕೆ ವಿಮುಖವಾದವು. ಮಾನವ ಸಹಜವಾದ ಪ್ರವೃತ್ತಿತನವನ್ನು ಕುಂಠಿತಗೊಳಿಸಿದವು , ಶ್ರೀ ಕೃಷ್ಣನೇ ಮೊದಲಾಗಿ ಬಸವಣ್ಣ ,ವಿವೇಕಾನಂದ , ದಯಾನಂದ ಸರಸ್ವತಿ , ಗಾಂಧೀಜಿ , ಈ ಜೀವನದ ಕಷ್ಟ ಸುಖಗಳಿಗೆ ಸ್ಪಂದಿಸುವ , ಜೀವನಪರಗೊಳಿಸುವ , ಪ್ರಯತ್ನ ಮಾಡಿದರೂ , ಮುಖ್ಯಧಾರೆಯನ್ನು ತಿರುಗಿಸಲು ಸಾಧ್ಯವಾಗಲಿಲ್ಲ. ಕೆಲಸ ಮಾಡುತ್ತಾ ನೂರು ಕಾಲ ಬದುಕೋಣ ಎಂದು ವೇದ ಮೊಳvದ ದೇಶದಲ್ಲೇ "ಪರಲೋಕಕ್ಕಾಗಿ ದುಡಿಯೋಣ" ,ಎನ್ನುವ ವೇದಾಂತ ಪ್ರಾಮುಖ್ಯವಾದದ್ದು ವಿಚಿತ್ರ. ಎಲ್ಲಾ ಜೀವರು ದೇವರ ಅಂಶ -ಎನ್ನುತ್ತಲೇ, ನೀ ನನ್ನ ಮುಟ್ಟಬೇಡ ,ಎನ್ನುವಂತಾದದ್ದು ; ಬಡತನ , ದುಃಖ , ಕಷ್ಟ -ಕೋಟಲೆಗೆ ಇದು ನನ್ನ / ಅವನ -ಕರ್ಮ ಎನ್ನುವ ನಿಷ್ಕರುಣ ನಿರಾಶಾವಾದ ಹುಟ್ಟಿದ್ದು ದುರಂತ.

    ನನಗೆ ನಾನೇ ಹೊಣೆ , ಎನ್ನುವ ಕರ್ಮಸಿದ್ಧಾಂತ ಹೋಗಿ ಫಲ-ಜ್ಯೋತಿಷ , ದೈವ ಲೀಲೆ, ಭಜನೆ , ಇವುಗಳನ್ನು ನೆಚ್ಚಿಕೊಂಡಿದ್ದು ಒಂದು ರೀತಿಯಲ್ಲಿ ಜೀವನದ ಪರಾಭವವಾಯಿತು ಅಥವಾ ಜೀವನ ಪರಾಭವದ ಕಡೆ ಮುಖಮಾಡಿತು ಎನ್ನಬಹುದು.

೧೭ನೇ ಶತಮಾನದ ಸಾಹಸಿ-ಪಾಶ್ಚಿಮಾತ್ಯರ ಧಾಳಿ , ದೃಷ್ಟಿಕೋನ ಅವಕಾಶವಾದ, -ಭಾರತವನ್ನು ಎಚ್ಚರಿಸಿತೆನ್ನಬೇಕು. ವಿವೇಕಾನಂದರ ವೀರ ಗರ್ಜನೆ , ಗಾಂಧೀಜಿಯವರ ಕರ್ಮಯೋಗ , ಸೇವಾ ಮನೋಭಾವ , ಆತ್ಮವಿಶ್ವಾಸಗಳು ಚಿಗರೊಡೆದರೂ ಸ್ಥಿತ ಬಹಳ ಬದಲಾಗಿಲ್ಲ.

  • ಜಾನಪದ ದರ್ಶನ :ಈ ಎಲ್ಲದಕ್ಕೂ ವಿರುದ್ಧವಾಗಿ ದುಡಿಮೆಯಲ್ಲಿ ತೊಡಗಿದ ;ಅಷ್ಟು ವಿದ್ಯಾವಂತರಲ್ಲದ , ಸಾಮಾನ್ಯ ಜನರ ನಿಷ್ಟೆ , ಪ್ರಕೃತಿ ಪ್ರೇಮ , ಸತ್ಯ ಮತ್ತು ನ್ಯಾಯ ನಿಷ್ಟೆ , ಆಡಂಬರವಿಲ್ಲದ ಸರಳ ಜೀವನ - ಇವು ನಿಜವಾದ ಭಾರತದ ಜೀವನ ದರ್ಶನವಾಗಿದೆ. ಅವರಿಗೆ ಪಂಡಿತರ ಪ್ರಗತಿ ಚಿಂತನ ತರ್ಕ ಬೇಕಿಲ್ಲ . ಜ್ಞಾನ ಕರ್ಮಗಳೆರಡೂ ಒಂದೇ , ಜೀವನವೇ ಸಿದ್ಧಾಂತ , ಬದುಕೇ ಗ್ರಂಥ , ಅದರಿಂದ /ಅವರಿಂದ ದಾರ್ಶನಿಕರೂ ಕಲಿಯಬೇಕಾಗಿದೆ.

ಈಗಿನ ದರ್ಶನ

ನಮ್ಮ ದಾರ್ಶನಿಕ ಪರಂಪರೆಯಲ್ಲಿ, ಆಧುನಿಕ ಜೀವನ ದೃಷ್ಟಿಯಿಂದ, ಒಳಿತಾದುದನ್ನು ಇಟ್ಟುಕೊಂಡು ಅನಗತ್ಯ ಜೀವನ ವಿರೋಧಿ ಅಂಶಗಳನ್ನು ಬಿಟ್ಟು ಎಲ್ಲೆಡೆಯಿಂದ ಒಳಿತನ್ನು ಸ್ವೀಕರಿಸುವ , ತತ್ವದೃಷ್ಟಿ ಬೇಕಾಗಿದೆ.

ನೋಡಿ

ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ದರ್ಶನಶಾಸ್ತ್ರ ಚಾರ್ವಾಕ ದರ್ಶನ ; ಜೈನ ಧರ್ಮ- ಜೈನ ದರ್ಶನ ; ಬೌದ್ಧ ಧರ್ಮ ; ಸಾಂಖ್ಯ-ಸಾಂಖ್ಯ ದರ್ಶನ ; (ಯೋಗ)->ರಾಜಯೋಗ ; ನ್ಯಾಯ ದರ್ಶನ ; ವೈಶೇಷಿಕ ದರ್ಶನ;; ಮೀಮಾಂಸ ದರ್ಶನ - ; ವೇದಾಂತ ದರ್ಶನ / ಉತ್ತರ ಮೀಮಾಂಸಾ ; ಅದ್ವೈತ ; ಆದಿ ಶಂಕರರು ಮತ್ತು ಅದ್ವೈತ ; ವಿಶಿಷ್ಟಾದ್ವೈತ ದರ್ಶನ ; ದ್ವೈತ ದರ್ಶನ - ಮಾಧ್ವ ಸಿದ್ಧಾಂತ ; ಪಂಚ ಕೋಶ ; ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ; ಸೃಷ್ಟಿ ಮತ್ತು ಪುರಾಣ ದರ್ಶನ ಗಳಲ್ಲಿ ವಿಶ್ವ ಸೃಷ್ಟಿ . ಭಗವದ್ಗೀತಾ ತಾತ್ಪರ್ಯ ಹುಟ್ಟು , ಇತಿಹಾಸ, ಹಿನ್ನೆಲೆ, ಪಠನ ಕ್ರಮ ಶೈವ ದರ್ಶನಗಳು ಅಥವಾ ಶೈವ ಸಿದ್ಧಾಂತಗಳು-ಶೈವ ಪಂಥ - ಶಕ್ತಿ ವಿಶಿಷ್ಟಾದ್ವೈತ- ಪಂಚ ಕೋಶ- ವಿವೇಕ ಚೂಡಾಮಣಿಯಲ್ಲಿ ಪಂಚ ಕೋಶಗಳು.- ಓಂ ತತ್ಸತ್- ವೇದ ಕರ್ಮ ಸಿದ್ಧಾಂತ- ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು;- ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ-ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ

ಉಲ್ಲೇಖ

Tags:

ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಾರತೀಯ ತತ್ತ್ವಶಾಸ್ತ್ರ-ಪೀಠಿಕೆಭಾರತೀಯ ತತ್ವಶಾಸ್ತ್ರ ಸಮೀಕ್ಷೆ ವೇದಾಂತದ ಪ್ರಭುತ್ವಭಾರತೀಯ ತತ್ವಶಾಸ್ತ್ರ ಸಮೀಕ್ಷೆ ವೇದ-ಭಕ್ತಿ-ಮೋಕ್ಷಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಈಗಿನ ದರ್ಶನಭಾರತೀಯ ತತ್ವಶಾಸ್ತ್ರ ಸಮೀಕ್ಷೆ ನೋಡಿಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಉಲ್ಲೇಖಭಾರತೀಯ ತತ್ವಶಾಸ್ತ್ರ ಸಮೀಕ್ಷೆಅದ್ವೈತಜೈನ ಧರ್ಮತತ್ತ್ವಶಾಸ್ತ್ರಬ್ರಹ್ಮಭಾರತವಿಷ್ಣುವೇದಶಾಕ್ತ ಪಂಥಶಿವಸಾಂಖ್ಯ

🔥 Trending searches on Wiki ಕನ್ನಡ:

ಗಲ್ಲು ಶಿಕ್ಷೆಫ್ರಾನ್ಸ್ಪಟ್ಟದಕಲ್ಲುಜೋಗಿ (ಚಲನಚಿತ್ರ)ಬ್ಯಾಂಕ್ಹತ್ತಿವಿಧಾನ ಪರಿಷತ್ತುಶ್ಯೆಕ್ಷಣಿಕ ತಂತ್ರಜ್ಞಾನಬಾಹುಬಲಿಮಾನವನ ವಿಕಾಸಗದ್ದಕಟ್ಟುನಗರವಲ್ಲಭ್‌ಭಾಯಿ ಪಟೇಲ್ಯೋಗ ಮತ್ತು ಅಧ್ಯಾತ್ಮಮಂಜುಳಬ್ಯಾಂಕ್ ಖಾತೆಗಳುಹಾಗಲಕಾಯಿಭಾರತದ ರಾಷ್ಟ್ರಪತಿವಿಷ್ಣುಹಣಕಾಸುಕರ್ನಾಟಕ ಜನಪದ ನೃತ್ಯಭಾರತದಲ್ಲಿನ ಜಾತಿ ಪದ್ದತಿಎ.ಪಿ.ಜೆ.ಅಬ್ದುಲ್ ಕಲಾಂಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಭಾರತೀಯ ಸಂಸ್ಕೃತಿನಾಡ ಗೀತೆವಿಭಕ್ತಿ ಪ್ರತ್ಯಯಗಳುಸುಧಾ ಮೂರ್ತಿಮಂಡ್ಯವೀರಗಾಸೆಗುಡುಗುಜಾಗತಿಕ ತಾಪಮಾನಕೋಲಾರಮ್ಮ ದೇವಸ್ಥಾನಕನ್ನಡ ಅಕ್ಷರಮಾಲೆಗೌತಮ ಬುದ್ಧನ ಕುಟುಂಬಡೊಳ್ಳು ಕುಣಿತಪರಿಣಾಮಜಾನಪದಮಸೂದೆಅದಿತಿತಾಲ್ಲೂಕುಯು.ಆರ್.ಅನಂತಮೂರ್ತಿಮೌರ್ಯ ಸಾಮ್ರಾಜ್ಯಶ್ರೀವಿಜಯಚೆನ್ನಕೇಶವ ದೇವಾಲಯ, ಬೇಲೂರುನಕ್ಷತ್ರಯೋನಿಕರ್ನಾಟಕ ಹೈ ಕೋರ್ಟ್ತಾರಹಣಮುರಬ್ಬಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಭಾರತದ ರಾಷ್ಟ್ರಗೀತೆಕರಗಗಂಗ (ರಾಜಮನೆತನ)ಸ್ವರಸಂಸದೀಯ ವ್ಯವಸ್ಥೆಹಸ್ತಪ್ರತಿನಯನತಾರಕರ್ನಾಟಕ ಸ್ವಾತಂತ್ರ್ಯ ಚಳವಳಿಕರ್ನಾಟಕ ಸರ್ಕಾರಭಾರತದ ಬುಡಕಟ್ಟು ಜನಾಂಗಗಳುರಾಜು ಅನಂತಸ್ವಾಮಿಕದಂಬ ರಾಜವಂಶಜ್ಯೋತಿಷ ಮತ್ತು ವಿಜ್ಞಾನವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಜಪಾನ್ಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಭಾರತೀಯ ಭಾಷೆಗಳುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಬಾದಾಮಿಭಾರತೀಯ ಮೂಲಭೂತ ಹಕ್ಕುಗಳುಸುಭಾಷ್ ಚಂದ್ರ ಬೋಸ್ವರ್ಣಾಶ್ರಮ ಪದ್ಧತಿವಾಟ್ಸ್ ಆಪ್ ಮೆಸ್ಸೆಂಜರ್ಕರ್ಕಾಟಕ ರಾಶಿಭಾರತದ ಸಂಸತ್ತು🡆 More