ತ್ಯಾಜ್ಯ ನಿರ್ವಹಣೆ

ಕಸದ ಸಂಗ್ರಹ, ಸಾಗಣೆ, ಸಂಸ್ಕರಣೆ, ಮರುಬಳಕೆ ಅಥವಾ ವಿಲೆವಾರಿ ಹಾಗು ತ್ಯಾಜ್ಯ ವಸ್ತುಗಳ ನಿರ್ವಹಣೆಯನ್ನು ತಾಜ್ಯ ನಿರ್ವಹಣೆ ಎನ್ನುತ್ತೇವೆ.

ತ್ಯಾಜ್ಯ ನಿರ್ವಹಣೆ
ಇಂಗ್ಲೆಂಡಿನ ಬರ್ಕ್ಸ್ ಶಾಯರ್ ನಲ್ಲಿನ ನೀಲಿ ಬಣ್ಣದ ಕಸದ ತೊಟ್ಟಿ
ತ್ಯಾಜ್ಯ ನಿರ್ವಹಣೆ
ಕಾಠ್ಮಂಡಿನಲ್ಲಿ ತ್ಯಾಜ್ಯ ನಿರ್ವಹಣೆ(ನೇಪಾಳ)
ತ್ಯಾಜ್ಯ ನಿರ್ವಹಣೆ
ಕಸ ಹೂತು ಹಾಕುವ ವಾಹನದ ಕಾರ್ಯಾಚರಣೆಯ ಒಂದು ನೋಟ.
ತ್ಯಾಜ್ಯ ನಿರ್ವಹಣೆ
ತ್ಯಾಜ್ಯ ಕುರಿತ ರೇಖಾ ಚಿತ್ರ

ಮಾನವನು ಬಳಸಿದ ವಸ್ತುಗಳ ಉಳಿದ ಭಾಗವನ್ನು ತ್ಯಾಜ್ಯದ ಉಗಮ ಎಂದು ಹೇಳಬಹುದು. ಈ ವ್ಯರ್ಥ ವಸ್ತುಗಳು ಮನುಷ್ಯನ ಆರೋಗ್ಯ, ಪರಿಸರ ಸೌಂದರ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತವೆ. ಇದರ ಜೊತೆಯಲ್ಲಿ ಕಸದೊಳಗಿನ ರಸ ತೆಗೆಯಲು ಕೂಡಾ ಇವು ಸಂಪನ್ಮೂಲಗಳಾಗಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತವೆ. ಅನೇಕ ಪದ್ಧತಿಗಳು ಮತ್ತು ವಿವಿಧ ಕ್ಷೇತ್ರಗಳ ಪರಿಣಿತರ ನೆರವಿನೊಂದಿಗೆ ಘನ ತ್ಯಾಜ್ಯ, ದ್ರವರೂಪದ ಪದಾರ್ಥಗಳು, ಅನಿಲ ರೂಪದ ವ್ಯರ್ಥ ವಿಷ-ಕಸ ಅಥವಾ ರೇಡಿಯೊ ಆಕ್ಟಿವ್ ಹೊರಸೂಸುವ ವಸ್ತುಗಳ ನಿರ್ವಹಣೆಯನ್ನು ತ್ಯಾಜ್ಯ ವಸ್ತು ಉಸ್ತುವಾರಿ ಎನ್ನಬಹುದು. ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯು ಪ್ರಗತಿಹೊಂದಿದ ಮತ್ತು ಪ್ರಗತಿ ಹೊಂದುತ್ತಿರುವ ದೇಶಗಳ, ನಗರ ಪ್ರದೇಶ ಹಾಗು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಜನವಸತಿ ಪ್ರದೇಶಗಳು ಹಾಗು ಕೈಗಾರಿಕಾ ಉತ್ಪಾದನಾ ಪ್ರದೇಶಗಳಲ್ಲಿ ವಿಭಿನ್ನವಾಗಿರುತ್ತದೆ. ಆರೋಗ್ಯಕರ ಜನವಸತಿ ಪ್ರದೇಶ ಮತ್ತು ಮೆಟ್ರೋಪಾಲಿಟನ್ ಪ್ರದೇಶಗಳ ಸಂಘ ಸಂಸ್ಥೆಗಳ ಹತ್ತಿರದ ಜಾಗೆಗಳಲ್ಲಿನ ಕಸ ನಿರ್ವಹಣೆಯ ಜವಾಬ್ದಾರಿಯು ಸ್ಥಳೀಯ ಸರ್ಕಾರಿ ಸಂಸ್ಥೆಗಳದ್ದಾಗಿರುತ್ತದೆ. ಅಂತೆಯೇ ಆರೋಗ್ಯಕರ ವಾಣಿಜ್ಯ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಕಸ ನಿರ್ವಹಣೆಯನ್ನು ಜನರೇಟರ್ ಮಾಡುತ್ತದೆ.

ವಿಧಾನಗಳು

ದಹನ ಕ್ರಿಯೆ

ತ್ಯಾಜ್ಯ ನಿರ್ವಹಣೆ 
ವಿಯೆನ್ನಾದಲ್ಲಿ ತ್ಯಾಜ್ಯ ದಹನ ಕ್ರಿಯೆಯ ಸ್ಠಾವರ ತಾಣ.

ಳಿಸಿದ ಜಾಗೆಗಳಲ್ಲಿ ಕಡಿಮೆ ವೆಚ್ಚದ ಮತ್ತು ಆರೋಗ್ಯಕರ ರೀತಿಯಲ್ಲಿ ತ್ಯಾಜ್ಯ ವಿಲೆವಾರಿ ಮಾಡಬಹುದಾ ಗಿದೆ. ಹಳೆ ಮಾದರಿಯಲ್ಲಿ ವಿನ್ಯಾಸಗೊಳಿಸಿದ ಮತ್ತು ಕಳಪೆ ಮಟ್ಟದ ನಿರ್ವಹಣೆಯು ಅನಾರೋಗ್ಯಕರ ವಾತಾವರಣ ನಿರ್ಮಿಸುವ ಸಾಧ್ಯತೆ ಇರುತ್ತದೆ, ಇದರಿಂದಾಗಿ ವ್ಯರ್ಥ ಪದಾರ್ಥಗಳು ಗಾಳಿಗೆ ತೂರಿ ಗಲೀಜು ಮಾಡಬಹುದು ಅಲ್ಲದೆ ವಾತಾವರಣದಲ್ಲಿ ಮಾರಕ ಕ್ರಿಮಿ ಕೀಟಗಳು ನೈರ್ಮಲ್ಯಕ್ಕೆ ಅಪಾಯಕಾರಿ ಆದೀತು. ನೆಲದಲ್ಲಿ ಹೂತು ಹಾಕುವ ತ್ಯಾಜ್ಯದಿಂದ ಉಂಟಾಗುವ ಉಪವಸ್ತು ಅನಿಲ ಉತ್ಪಾದನೆ(ಬಹುತೇಕ ಮಿಥೇನ್ ಹಾಗು ಇಂಗಾಲದ ಡೈಆಕ್ಸೈಡ್)ಜೈವಿಕ ತ್ಯಾಜ್ಯವಾಗಿರುವ ಇದು ವಿನಾಶಕಾರಿಯಾಗಿರುತ್ತದೆ. ಈ ಅನಿಲವು ದುರ್ವಾಸನೆ ಮತ್ತು ಬೆಳೆ ನಾಶ ಹಾಗು ಹಸಿರು ಮನೆಯ ಅನಿಲಕ್ಕೂ ಕಾರಣವಾಗುತ್ತದೆ.

ಆಧುನಿಕ ಪದ್ದತಿಯಲ್ಲಿ ಕಸವನ್ನು ಹೂತು ಹಾಕುವ ಮತ್ತು ಮುಚ್ಚಲು ಜೇಡಿ ಮಣ್ಣು ಹಾಗು ಪ್ಲಾಸ್ಟಿಕ್ ಹೊದಿಕೆಗಳ ಬಳಕೆ ಸಾಮಾನ್ಯ. ಕ್ರೋಢೀಕರಿಸಿದ ತ್ಯಾಜ್ಯ ಹರಡದಂತೆ ಅದರ ಪ್ರದೇಶ ವ್ಯಾಪ್ತಿ ಮತ್ತು ಸ್ಥಿರತೆ ಕಾಯ್ದುಕೊಂಡು, ಮುನ್ನೆಚ್ಚರಿಕೆಯಾಗಿ ಪ್ರಾಣಿಗಳು(ಉದಾ; ಇಲಿ ಅಥವಾ ಹೆಗ್ಗಣಗಳು) ಆ ಕಡೆ ಸುಳಿಯದಂತೆ ನಿಗಾವಿಡಲಾಗುತ್ತದೆ. ಕಸ ಹೂಳುವ ನೆಲದಾಳದಲ್ಲಿ ಅನಿಲ ಬೇರ್ಪಡಿಸುವ ಯಂತ್ರಗಳನ್ನು ಅಳವಡಿಸಲಾಗಿರುತ್ತದೆ. ಕಸ ಹೂತ ಸ್ಥಳದಿಂದ ಅನಿಲವನ್ನು ಶಕ್ತಿಯುತ ಕೊಳವೆಗಳ ಮೂಲಕ ಹೊರಹಾಕಿ ಮತ್ತು ನೆಲದಾಳದಿಂದ ಪ್ರಸರ್ಣದ ಮೂಲಕ ಇಲ್ಲವೆ ಗ್ಯಾಸ್ ಇಂಜಿನ್ ನಲ್ಲಿ ಸುಟ್ಟು ವಿದ್ಯುತ್ ಉತ್ಪಾದಿಸಲಾಗುತ್ತದೆ.

ದಹನ ಕ್ರಿಯೆ

ತ್ಯಾಜ್ಯ ನಿರ್ವಹಣೆ 
ವಿಯೆನ್ನಾದಲ್ಲಿ ತ್ಯಾಜ್ಯ ದಹನ ಕ್ರಿಯೆಯ ಸ್ಠಾವರ ತಾಣ.
  • ಸುಡುವಿಕೆ ಕೂಡಾ ಒಂದು ತ್ಯಾಜ್ಯಗಳ ವಿಲೇವಾರಿಯ ವಿಧಾನ. ನಿರುಪಯುಕ್ತ ವಸ್ತುಗಳ ದಹನ ಮಾಡಿ ನೈರ್ಮಲ್ಯ ರಕ್ಷಣೆಗೆ ಸಹಾಯ ಮಾಡುವುದುಂಟು. ದಹನ ಮತ್ತು ಹೆಚ್ಚಿನ ತಾಪಮಾನದಲ್ಲಿ ನಿರುಪಯುಕ್ತ ವಸ್ತುಗಳನ್ನು ಭಸ್ಮಗೊಳಿಸುವ ಕ್ರಿಯೆಗೆ ಉಷ್ಣತೆಯ ಬಳಕೆ ವಿಧಾನ ಎಂದು ಬಣ್ಣಿಸಲಾಗಿದೆ. ಸುಡುವಿಕೆಯು ತ್ಯಾಜ್ಯ ಪದಾರ್ಥಗಳನ್ನು ಶಾಖ, ಅನಿಲ, ಆವಿ ಮತ್ತು ಬೂದಿಯನ್ನಾಗಿ ಪರಿವರ್ತಿಸುತ್ತದೆ. ಭಸ್ಮಗೊಳಿಸುವಿಕೆಯು ವ್ಯಕ್ತಿಗತವಾಗಿ ಸಣ್ಣ ಪ್ರಮಾಣದಲ್ಲಿದ್ದರೆ ಕೈಗಾರಿಕೆ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿರುತ್ತದೆ. *ಘನ, ದ್ರವ ಹಾಗು ಅನಿಲರೂಪದ ವ್ಯರ್ಥ ಪದಾರ್ಥಗಳನ್ನು ಇದರ ಮೂಲಕ ವಿಲೆವಾರಿ ಮಾಡಲಾಗುತ್ತದೆ. ಇದನ್ನು ಪ್ರಾಯೋಗಿಕ ಪದ್ದತಿ ಎಂದು ಕರೆಯುತ್ತಾರೆ, ಬಹುಮುಖ್ಯವಾಗಿ ಹಾನಿಕಾರಕ ತ್ಯಾಜ್ಯ ವಸ್ತುಗಳು,(ಜೈವಿಕ ತ್ಯಾಜ್ಯ ಆಸ್ಪತ್ರೆಯ ತ್ಯಾಜ್ಯ ವಸ್ತುಗಳು). ಸುಡುವಿಕೆಯು ವಿವಾದಾತ್ಮಕ ಪದ್ದತಿ ಎನಿಸಿದೆ, ಈ ಸಂದರ್ಭದಲ್ಲಿ ವಿಷಾನಿಲಗಳು ಬಿಡುಗಡೆಯಾಗುವುದರಿಂದ ಧೂಳು ಕಣಗಳು ವಾತಾವರಣವನ್ನು ಕಲುಷಿತಗೊಳಿಸುತ್ತದೆ. ಜಪಾನ್‌ನಂತಹ ದೇಶಗಳಲ್ಲಿ ತ್ಯಾಜ್ಯ ದಹನ ಸಾಮಾನ್ಯವೆನಿಸಿದೆ.
  • ಇಂತಹ ದೇಶಗಳಲ್ಲಿ ಜಾಗೆ ಸಮಸ್ಯೆಯಾಗಿರುತ್ತದೆ. ಈ ಕ್ರಿಯೆಯು ತ್ಯಾಜ್ಯ ಹೂತು ಹಾಕುವ ಕೆಲಸಕ್ಕೆ ಬೇಕಾಗುವ ಪ್ರದೇಶಕ್ಕಿಂತ ಕಡಿಮೆ ಜಾಗೆ ಹಿಡಿಯುತ್ತದೆ. ತ್ಯಾಜ್ಯದಿಂದ-ಇಂಧನದವರೆಗೆ ಅಥವಾ ಇಂಧನದಿಂದ-ತ್ಯಾಜ್ಯದವರೆಗೆ ಎಂಬುದು ವಿಶಾಲ ಅರ್ಥವನ್ನೊಳಗೊಂಡಿದೆ. ತಾಜ್ಯವನ್ನು ದೊಡ್ದ ಪ್ರಮಾಣದ ಬೆಂಕಿಯಲ್ಲಿ ಸುಡುವುದರಿಂದ ಇದರ ಮೂಲಕ ಶಾಖ,ಆವಿ ಇಲ್ಲವೆ ವಿದ್ಯುತ್ ಉತ್ಪಾದನೆಗೆ ಸಹಾಯಕವಾಗುತ್ತದೆ. ಕಸ ಸುಡುವುದು ಅಥವಾ ಬೆಂಕಿ ಮೂಲಕ ತ್ಯಾಜ್ಯ ವಿಲೆವಾರಿ ಮಾಡುವುದು ಪರಿಪೂರ್ಣವಾದುದಲ್ಲ.
  • ಇದರ ಮೂಲಕ ಸಣ್ಣ ಪ್ರಮಾಣದ ಧೂಳು ಕಣಗಳು ಪರಿಸರಕ್ಕೆ ವಿಷಾಣುವಾಗಿ ಅರ್ಧ ಸುಟ್ಟ ವಸ್ತುಗಳ ಹೊಗೆ ಕೆಟ್ಟ ಪರಿಣಾಮ ಬೀರುತ್ತದೆ. ತ್ಯಾಜ್ಯ ದಹನ ಸಂದರ್ಭದಲ್ಲಿ ಜೈವಿಕ ಅರೆಬೆಂದ ವಸ್ತುಗಳ ಮೂಲಕ ಹುಟ್ಟುವ ವಿಷಕಾರಿ ಹೊಗೆ ಬಗ್ಗೆ ಎಲ್ಲರ ಕಳವಳ ಪ್ರಮುಖವಾಗಿದೆ. ಇದರಿಂದಾಗಿ ಸುತ್ತಲಿನ ಪರಿಸರದ ಮೇಲೆ ತಕ್ಷಣವೇ ಪರಿಣಾಮ ಉಂಟಾಗಬಹುದು, ಆ ಪ್ರದೇಶದಲ್ಲಿ ಗಂಭೀರ ವಾತಾವರಣದ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದು ಅಲ್ಲದೆ ಈ ಪದ್ದತಿಯಿಂದ ಇನ್ನೊಂದೆಡೆ ಶಾಖ ಬಿಡುಗಡೆಯಾಗುತ್ತದೆ, ಇದನ್ನು ಶಾಖೋತ್ಪನ್ನ ಶಕ್ತಿಯನ್ನಾಗಿ ಬಳಸಬಹುದು.

ಮರುಬಳಕೆಯ ಪದ್ದತಿಗಳು

PVC, LDPE, PP, ಮತ್ತು PS(ನೋಡಿ-ರಾಳದಂತಹ ದ್ರವ್ಯ ಪದಾರ್ಥಗಳ ಗುರ್ತಿಸುವಿಕೆ) ಹಾಗು ಮರುಬಳಕೆ ಮಾಡಬಹುದು, ಆದರೆ ಇವುಗಳ ಸಂಗ್ರಹ ಅಪರೂಪದ್ದಾಗಿದೆ. ಇಂತಹ ವಸ್ತುಗಳು ಏಕರೂಪತೆಯನ್ನು ಹೊಂದಿರುವುದರಿಂದ ಮರುಬಳಕೆಯಿಂದ ಹೊಸ ಉತ್ಪಾದನೆ ಗಳನ್ನು ಸುಲಭ ಪದ್ಧತಿಯಿಂದ ಪಡೆಯಬಹುದಾಗಿದೆ. ಸಂಕೀರ್ಣ ಉತ್ಪಾದನೆಗಳ ತ್ಯಾಜ್ಯದ ಮರುಬಳಕೆ ತುಂಬಾ ಕಠಿಣವಾದದ್ದು. (ಉದಾ; ಕಂಪ್ಯೂಟರ್‌ಗಳು ಹಾಗು ಎಲೆಕ್ಟ್ರಾನಿಕ್ ವಸ್ತುಗಳು)ಇವುಗಳನ್ನು ಮುರಿದು ಪ್ರತ್ಯೇಕಿಸುವ ಕೆಲಸಕ್ಕೆ ಅಧಿಕ ಶ್ರಮ ಹಾಗು ವೇಳೆ ತಗಲುತ್ತದೆ.

ಜೈವಿಕ ಸಂಸ್ಕರಣ

ತ್ಯಾಜ್ಯ ನಿರ್ವಹಣೆ 
ಕ್ರಿಯಾಶೀಲ ಕಾಂಪೊಸ್ಟ್ ಗೊಬ್ಬರದ ರಾಶಿ
  • ಜೈವಿಕ ಮೂಲದ ಕಸ ಪದಾರ್ಥಗಳು ಮೂಲತಃ ಸಸ್ಯಜನ್ಯ, ಉಳಿದ ಆಹಾರ ಮತ್ತು ಕಾಗದ ಉತ್ಪಾದನೆಯ ವ್ಯರ್ಥ ವಸ್ತುಗಳು ಜೈವಿಕ ಪರಿವರ್ತನೆ ಮೂಲಕ ಮರುಬಳಕೆ ಹಾಗು ಸಮಂಜಸ ರೀತಿಯ ಸಂಸ್ಕರಣಕ್ಕೆ ಒಳಪಡುತ್ತವೆ. ಈ ಮೂಲಕ ಜೈವಿಕ ತ್ಯಾಜ್ಯಗಳನ್ನು ವಿಂಗಡಿಸ ಲಾಗುತ್ತದೆ. ಜೈವಿಕ ವ್ಯರ್ಥ ವಸ್ತುಗಳು ಮತ್ತೆ ಬಳಕೆ ಮಾಡಲು ಕೊಳೆತ ಹಸಿಹುಲ್ಲು ಅಥವಾ ಕಾಂಪೊಸ್ಟ್ ಗೊಬ್ಬರವಾಗಿ ಕೃಷಿಗೆ ಅಥವಾ ಭೂಮಿ ಸಮತಟ್ಟು ಮಾಡಲು ಬಳಸಬಹುದಾಗಿದೆ.
  • ಈ ಸಂಸ್ಕರಣ ಕ್ರಿಯೆಯಿಂದ ಉಂಟಾಗುವ ತ್ಯಾಜ್ಯ ಅನಿಲ(ಮೀಥೇನ್ )ವನ್ನು ಸಂಗ್ರಹಿಸಿ ಹಿಡಿದು ಜೈವಿಕ ವಿದ್ಯುತ್ ಉತ್ಪಾದನೆಗೆ ಬಳಸಬಹುದು. ಜೈವಿಕ ತ್ಯಾಜ್ಯಗಳ ಸಂಸ್ಕರಣೆ ಉದ್ದೇಶವೆಂದರೆ ತ್ಯಾಜ್ಯಗಳ ಮರುಬಳಕೆ ಮತ್ತು ಸ್ವಾಭಾವಿಕ ಮರುವಿಂಗಡಣೆಗೆ ಅನುಕೂಲವಾಗುತ್ತದೆ, ಇದರಿಂದ ತ್ತ್ಯಾಜ್ಯ ನಿರ್ವಹಣೆ ಮಾಡುವ ಸಮೂಹಕ್ಕೂ ನಿಯಂತ್ರಣ ಸಾಧ್ಯವಾಗುತ್ತದೆ.
  • ಕಸ ಸಂಗ್ರಹಣೆಯ ನಂತರ ಅದನ್ನು ವಿವಿಧ ಮಾದರಿಯಲ್ಲಿ ವಿಂಗಡಿಸಿ ಒಟ್ಟುಗೂಡಿಸಿ ಕಾಂಪೊಸ್ಟ್ ತಯಾರಿಕೆ ಮತ್ತು ಬಹು ಉಪಯೋಗಿ ಕೆಲಸಗಳಿಗಾಗಿ ಆಧುನಿಕ ತಂತ್ರಜ್ಜಾನವನ್ನು ಬಳಸಲಾಗುತ್ತದೆ. ಮನೆಗಳಲ್ಲಿಯ ಕಸ ಹಾಗು ಕೈಗಾರಿಕೆಗಳಲ್ಲಿ ಒಟ್ಟು ಮಾಡಿದ ವ್ಯರ್ಥ ವಸ್ತುಗಳನ್ನು ಬಳಸಿ ದೊಡ್ಡ ದೊಡ್ಡ ಕಸ ಸಂಗ್ರಹದ ತೊಟ್ಟಿಗಳಲ್ಲಿ ಇಟ್ಟು ಗೃಹ ಕಸ ಮತ್ತು ದೊಡ್ಡ ಪ್ರಮಾಣದ ರಾಶಿಯನ್ನು ಮಿಶ್ರಣ ಮಾಡಲಾಗುತ್ತದೆ (ನೋಡಿ ಯಾಂತ್ರಿಕ ಜೈವಿಕ ಪ್ರಕ್ರಿಯೆ ವಿಧಾನ)
  • ಜೈವಿಕ ಕಸ ವಿಂಗಡಣೆಯು ಎರಡು ಬಗೆಯಲ್ಲಿ ವಿಭಿಜಿಸಬಹುದು.ಆಮ್ಲಜನಕದಿಂದ ಜೀವಿಸುವ ಅಥವಾ ಆಮ್ಲಜನಕ ರಹಿತ ಜೀವಾಣುಗಳಿಂದ ಉಂಟಾದ ತ್ಯಾಜ್ಯ ವಿಭಜನಾ ಪದ್ದತಿ. ಆದಾಗ್ಯೂ ಎರಡೂ ತಂತ್ರಗಾರಿಕೆಗಳನ್ನು ಅನುಸರಿಸಲಾಗುತ್ತದೆ. ಕಸ ವಿಲೆವಾರಿಗೆ ಉತ್ತಮ ಉದಾಹರಣೆ ಎಂದರೆ ಹಸಿರು ತೊಟ್ಟಿ ಯೋಜನೆ ಕೆನಡಾ ದೇಶದ ಟೊರೊಂಟೊನಲ್ಲಿ (ಅಡುಗೆ ಮನೆ ತ್ಯಾಜ್ಯ ಹಾಗು ಸಸ್ಯಗಳನ್ನು ಕತ್ತರಿಸಿ ಉಳಿದ ಭಾಗಗಳು ಮುಂತಾದವುಗಳನ್ನು) ಅದಕ್ಕೇ ಮೀಸಲಿಟ್ಟ ತೊಟ್ಟಿ ಗಳಲ್ಲಿ ಶೇಖರಿಸಿ ನಂತರ ವಿಲೇವಾರಿ ಮಾಡುವ ಪದ್ದತಿ ಇದೆ.

ಇಂಧನ ಮರುಕಳಿಕೆ

right|thumbnail|180px|ಜರ್ಮನಿಯಲ್ಲಿನ 2007ರ ಜೈವಿಕ ಆಮ್ಲಜನಕದ ಮೇಲೆ ಜೀವಿಸುವ ಪ್ರಾಣಿಗಳಿಂದ ಉಂಟಾದ ತ್ಯಾಜ್ಯ ವಿಲೆವಾರಿ ಸ್ಥಾವರ ಲುಬೆಕ್ ಯಾಂತ್ರೀಕರಣದ ಮೂಲಕ ನಿರ್ವಹಣೆ.

  • ತ್ಯಾಜ್ಯಗಳಲ್ಲಿರುವ ಇಂಧನವನ್ನು ನೇರವಾಗಿ ಪಡೆದುಕೊಳ್ಳಬಹುದು. ಅಂದರೆ ಇಡೀಯಾಗಿ ಇಂಧನದಂತೆ ಬಳಸಬಹುದು. ಇಲ್ಲವೆ ಅವುಗಳನ್ನು ಸಂಸ್ಕರಿಸಿ ಬೇರೆ ತರಹದಲ್ಲಿ ಇಂಧನಕ್ಕೆ ಬಳಸಬಹುದು. ಉಷ್ಣತಾ ವಿಧಾನದಿಂದ ಮರುಬಳಕೆ ಮಾಡಿದ ಕಸದಲ್ಲಿರುವ ಇಂಧನವನ್ನು ಅಡುಗೆಗೆ ಇಲ್ಲವೆ ಕಾಯಿಸಲು ಅಥವಾ ಬಾಯ್ಲರಗಳಲ್ಲಿ ಬಳಸಿ ಆವಿ ಮತ್ತು ವಿದ್ಯುತ್ ಉತ್ಪಾದನೆಗೆ ಹಬೆ ಯಂತ್ರಗಳಲ್ಲಿ ಉಪಯೋಗಿಸಲಾಗುತ್ತದೆ. ಉಷ್ಣತೆ ಮೂಲಕ ತ್ಯಾಜ್ಯಗಳ ಸಂಸ್ಕರಣೆಯಲ್ಲಿ ಎರಡು ವಿಧಾನಗಳಿವೆ.
  • ಮೊದಲನೆಯದ್ದು ದೊಡ್ಡ ಪ್ರಮಾಣದಲ್ಲಿ ದಹನ ಕ್ರಿಯೆ ಮತ್ತು ಅನಿಲಗಳ ರೂಪ ಪಡೆಯಲು ಹೆಚ್ಚು ಒತ್ತಡದಲ್ಲಿ ಕಾಯಿಸುವುದು. ನಿಯಮಿತ ಆಮ್ಲಜನಿಕದ ಲಭ್ಯತೆ ಮೇಲೆ ಹೆಚ್ಚು ಉಷ್ಣ ತೆ ಬಳಸಿ ತ್ಯಾಜ್ಯವನ್ನು ಇಂಧನವಾಗಿಸುವುದು ಒಂದು ಕ್ರಮವಾಗಿದೆ. ಈ ಪ್ರಕ್ರಿಯೆಯು ಮುಚ್ಚಳ ಹಾಕಿ ಬಂದ್ ಮಾಡಿದ ಬೃಹದಾಕಾರದ ತೊಟ್ಟಿ ಅಥವಾ ನಿಗದಿಪಡಿಸಿದ ಪಾತ್ರೆಗಳಲ್ಲಿ ತ್ಯಾಜ್ಯವನ್ನು ಪ್ರಬಲ ಒತ್ತಡದಲ್ಲಿ ಉಷ್ಣತೆ ಕೊಡುವ ಮೂಲಕ ಇಂಧನ ತಯಾರಿಕೆಗೆ ಉಪಯೋಗಿಸಲಾಗುತ್ತದೆ.
  • ಘನ ತ್ಯಾಜ್ಯದ ಸುಡುವಿಕೆಯಿಂದ ವಸ್ತುಗಳು ಘನ, ದ್ರವ ಹಾಗು ಅನಿಲ ರೂಪದ ವಸ್ತುಗಳಾಗಿ ಪರಿವರ್ತನೆಗೊಳ್ಳುತ್ತವೆ. ದ್ರವ ಮತ್ತು ಅನಿಲಗಳನ್ನು ಸುಟ್ಟು ಇಂಧನವಾಗಿ ಅಥವಾ ಇನ್ನಿತರೆ ಶುಧ್ಧೀಕರಿಸಿದ ಉತ್ಪಾದನೆಗಳಾಗಿ ಮಾರ್ಪಡಿಸಬಹುದು. ದಹನದಿಂದ ದೊರೆತ ಘನ ರೂಪದ ಇದ್ದಿಲು ಇಲ್ಲವೆ ಬೂದಿಯನ್ನು ಮತ್ತೆ ಶುಧ್ಧೀಕರಿಸಿ ಪ್ರತಿಕ್ರಿಯಾತ್ಮಕ ಇಲ್ಲವೆ ಕ್ರಿಯಾಶೀಲ ಇಂಗಾಲದಂತಹ ಉತ್ಪಾದನೆಗಳನ್ನು ಪಡೆಯಬಹುದಾಗಿದೆ.
  • ಅನಿಲ ರೂಪಗೊಳಿಸುವುದು ಮತ್ತು ರಕ್ತವರ್ಣದ ಹೆಪ್ಪುಗಟ್ಟಿಸಿದ ತ್ಯಾಜ್ಯ ರೂಪಕ್ಕೆ ಕೃತಕ ಅನಿಲವಾಗಿ ಪರಿವರ್ತನೆಗೊಳ್ಳುವಂತೆ ಮಾಡಲಾಗುವುದು. ಈ ಸಿನೆಗ್ಯಾಸ್ ಕಾರ್ಬನ್ ಮೊನಾಕ್ಸಾಯಿಡ್ ಮತ್ತು ಜಲಜನಕವನ್ನು ಒಳಗೊಂಡಿರುತ್ತದೆ. ನಂತರ ಅನಿಲವನ್ನು ಸುಟ್ಟ ಮೇಲೆ ವಿದ್ಯುತ್ ಹಾಗು ಹಬೆ ಉತ್ಪಾದನೆಗಳಾಗಿ ಹೊರಬರುತ್ತವೆ.

ನಿವಾರಣೆ ಮತ್ತು ತಗ್ಗಿಸಲು ಕ್ರಮ

  • ತ್ಯಾಜ್ಯ ನಿರ್ವಹಣೆಯ ಪ್ರಮುಖ ಉದ್ದೇಶವೇ ಕಸ ಹಾಗು ನಿರುಪಯುಕ್ತ ವಸ್ತುಗಳನ್ನು ಅದಷ್ಟು ಕಡಿಮೆ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುವುದು ಉತ್ತಮ ವಿಧಾನ. ಇದನ್ನು ತ್ಯಾಜ್ಯ ಬೀಳದಂತೆ ಎಚ್ಚರಿಕೆ ವಹಿಸುವ ಮೂಲಕ ನಿಯಂತ್ರಿಸಬಹುದಾಗಿದೆ. ತ್ಯಾಜ್ಯ ಪ್ರಮಾಣ ಕಡಿಮೆ ಮಾಡಲು ಹಳೆ ವಸ್ತುಗಳ ಮರುಬಳಕೆ, ಮುರಿದ ಅಥವಾ ಅರ್ಧಮರ್ಧ ಕೆಟ್ಟು ಹೋದ ಉತ್ಪಾದನೆಗಳನ್ನು ದುರಸ್ತಿ ಮಾಡಿಸುವುದು ಹೊಸದಾಗಿ ಕೊಳ್ಳುವುದಕ್ಕಿಂತ ವಾಸಿ ಎನ್ನಬಹುದು. ಮರಳಿ ತುಂಬಿಸಬಲ್ಲ ಇಲ್ಲವೆ ಮರುಉಪಯೋಗಿಸುವ ಸಾಧ್ಯತೆಗಳನ್ನು ಗಮನಿಸಬೇಕಾಗುತ್ತದೆ.(ಉದಾ; ಪ್ಲಾಸ್ಟಿಕ್‌ ಬ್ಯಾಗ್‌ಗಳಿಗಿಂತ ಹತ್ತಿ ಚೀಲಗಳು ಉತ್ತಮ) ವಿನಿಯೋಗಿಸುವ ವಸ್ತುಗಳ ಬಗ್ಗೆ ಗ್ರಾಹಕರಲ್ಲಿ ಜಾಗ್ರತಿ ಮೂಡಿಸುವ ಕೆಲಸ ಮಾಡಬೇಕಿದೆ (ಉದಾ;ವಿನಿಯೋಗಿಸಿದ ಕತ್ತಿ,ಚಾಕು, ಕ್ಯಾನ್ ಗಳಲ್ಲಿನ ಆಹಾರ ವಸ್ತುಗಳನ್ನು ತೆಗೆಯುವುದು.
  • ಉಳಿದ ಪದಾರ್ಥಗಳನ್ನು ಹೊರತೆಗುವ ಸಾಹಸ ಕೂಡಾ ಕಸದ ಹೆಚ್ಚಳಕ್ಕೆ ಕಾರಣ ಮತ್ತು ನಿರುಪಯುಕ್ತ ವಿನ್ಯಾಸ ಹೊಂದಿದ ವಸ್ತುಗಳನ್ನು ಬಳಸಲು ಯತ್ನ(ಉದಾ;ದ್ರವಗಳನ್ನು ಸಂಗ್ರಹಿಸಿಡುವ ಕ್ಯಾನ್‌ಗಳು ಮತ್ತು ಹಗುರ ಖಾಲಿಯಾದ Archived 2009-02-25 ವೇಬ್ಯಾಕ್ ಮೆಷಿನ್ ನಲ್ಲಿ.ವಸ್ತುಗಳು ಮುಂತಾದವುಗಳು).

ಘನ ತ್ಯಾಜ್ಯ ನಿರ್ವಹಣೆ

ತ್ಯಾಜ್ಯ ನಿರ್ವಹಣೆ 
ಉತ್ತರ ಅಮೆರಿಕಾದಲ್ಲಿನ ಟ್ರಕ್‌ನ ಮುಂಭಾಗದಿಂದ ತ್ಯಾಜ್ಯ ತುಂಬುವ ಲಾರಿ
  • ಕಸ ಹಾಗು ತ್ಯಾಜ್ಯಗಳ ಸಂಗ್ರಹಣಾ ಪದ್ದತಿಯು ವಿವಿಧ ದೇಶಗಳಲ್ಲಿ ಹಲವು ಪ್ರದೇಶಗಳಲ್ಲಿ ಭಿನ್ನವಾಗಿರುತ್ತದೆ. ಒಂದು ಪದ್ದತಿ ಒಂದು ದೇಶದಲ್ಲಿ ಸೂಕ್ತವಾದರೆ ಇನ್ನೊಂದರಲ್ಲಿ ಪ್ರತಿಕೂಲವಾಗಿರುತ್ತದೆ. ಗೃಹ ತ್ಯಾಜ್ಯಗಳ ಸಂಗ್ರಹಣೆಯ ಸೇವಾ ಕಾರ್ಯವನ್ನು ಸ್ಥಳೀಯ ಸರ್ಕಾರಿ ಸಂಸ್ಥೆಗಳು ಇಲ್ಲವೆ ಖಾಸಗಿ ಉದ್ಯಮದವರು ಒದಗಿಸುವರು. ಕೆಲವಡೆ ಅದೂ ಬಹುತೇಕವಾಗಿ ಹಿಂದುಳಿದ ದೇಶಗಳಲ್ಲಿ ಯಾವುದೇ ಸಾಂಪ್ರದಾಯಿಕ ಪದ್ದತಿಗಳನ್ನು ಕ್ರಮಗಳನ್ನು ಕಸ ಸಂಗ್ರಹಣಾ ವಿಷಯದಲ್ಲಿ ಬಳಸುವದಿಲ್ಲ. ತ್ಯಾಜ್ಯ ನಿರ್ವಹಣಾ ಪದ್ದತಿಗಳ ಉದಾಹರಣೆಗಳು:
  • ಆಸ್ಟ್ರೇಲಿಯಾದಲ್ಲಿ ನಿಯಂತ್ರಿತ ಸಂಗ್ರಹಣಾ ರೂಪದ ಪದ್ದತಿಯನ್ನು ಬಳಸಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತದೆ. ನಗರ ಪ್ರದೇಶದ ಪ್ರತಿಯೊಂದು ಮನೆಯಲ್ಲಿ ಮೂರು ಬೇರೆ ಬೇರೆ ಕಸದ ತೊಟ್ಟಿಗೆಗಳನ್ನು ಬಳಸಲಾಗುತ್ತದೆ. ಒಂದು ಮರುಬಳಕೆಯ ತ್ಯಾಜ್ಯಗಳಿಗೆ, ಒಂದು ಸಾಮಾನ್ಯ ಮಟ್ಟದ ಕಸ ಸಂಗ್ರಹಿಸಲು ಹಾಗು ಇನ್ನೊಂದನ್ನು ಕೈತೋಟದ ಹಸಿರು ತ್ಯಾಜ್ಯ ಸಂಗ್ರಹಿಸಲು; ಅಗತ್ಯಬಿದ್ದರೆ ಪುರಸಭೆ ಅಥವಾ ನಗರಸಭೆಯವರು ಇವುಗಳನ್ನು ಮನವಿ ಮೇರೆಗೆ ಒದಗಿಸುತ್ತಾರೆ. ಹಲವಾರು ಮನೆಗಳಲ್ಲಿ ತ್ಯಾಜ್ಯ ಮಿಶ್ರಣದ ಕಸದ ತೊಟ್ಟಿಗಳು ಕಾಣಬರುತ್ತವೆ. *ಆದರೆ ಇವುಗಳನ್ನು ಮುನ್ಸಿಪಾಲ್ಟಿಯವರು ಒದಗಿಸುವದಿಲ್ಲ. ಮರುಬಳಕೆಯನ್ನು ಪ್ರೊತ್ಸಾಹಿಸಲು ನಗರಸಭೆಯವರು ದೊಡ್ಡ ಪ್ರಮಾಣದ ಕಸದ ತೊಟ್ಟಿಗಳನ್ನು ನೀಡುತ್ತಾರೆ. ಇವು ಮಾಮೂಲಿ ಬಳಕೆ ತೊಟ್ಟಿಗಳಿಗಿಂತ ಆಕಾರದಲ್ಲಿ ದೊಡ್ಡವು ಇರುತ್ತವೆ. ನಗರ ವ್ಯಾಪ್ತಿಯ, ವಾಣಿಜ್ಯ ಮತ್ತು ಕೈಗಾರಿಕೆ, ಕಟ್ಟಡ ಮತ್ತು ಕಟ್ಟಡ ಉರುಳಿಸಿದ ನಂತರದ ವಸ್ತುಗಳನ್ನು ನೆಲದಲ್ಲಿ ಹೂಳಲಾಗುವದಲ್ಲದೆ ಕೆಲವನ್ನು ಮರುಬಳಕೆಗಾಗಿ ವಿನಿಯೋಗಿಸಲಾಗುತ್ತದೆ. ಮನೆಗಳ ಮೂಲದ ನಿರುಪಯುಕ್ತ ವಸ್ತುಗಳನ್ನು ಪ್ರತ್ಯೇಕಿಸಲಾಗುತ್ತದೆ.
  • ಮರುಬಳಕೆಯ ತ್ಯಾಜ್ಯಗಳನ್ನು ಹೊಸ ಉತ್ಪಾದನೆಗೆ ಉಪಯೋಗಿಸಿ ಉಳಿದವುಗಳನ್ನು ಹೂಳಲು ಕಾದಿರಿಸಿರುವ ಪ್ರದೇಶಗಳಿಗೆ ಸಾಗಿಸುವರು. ABS ಸಂಸ್ಥೆಯವರ ಸರ್ವೇಕ್ಷಣೆ ಪ್ರಕಾರ ಮರುಬಳಕೆ ಪ್ರಮಾಣ ಹೆಚ್ಚಾಗಿದೆ ಮತ್ತು ಉಪಯೋಗಿಸಿದ ವಸ್ತುಗಳನ್ನು ಮತ್ತೆ ಬಳಕೆ ಮಾಡುವವರ ಸಂಖ್ಯೆಯೂ ವೃದ್ಧಿಸಿದೆ. ಕೆಲವರು ಕಳೆದ ವರ್ಷವೇ ಅತ್ಯಧಿಕವಾಗಿ ಮರುಬಳಕೆಯ ವಿಧಾನಗಳಿಗೆ ಒತ್ತು ಕೊಟ್ಟಿದ್ದಾರೆ.(2003ರ ಅಧ್ಯಯನ ಸಮೀಕ್ಷೆ)99%ರಷ್ಟು ಮನೆ ಬಳಕೆದಾರರು ಈ ಕ್ರಮಕ್ಕೆ ಮುಂದಾಗಿದ್ದಾರೆ.
  • ಈ ಪ್ರಮಾಣವು 1992ನಲ್ಲಿ 85% ಆಗಿತ್ತು. ಇದರಿಂದಾಗಿ ಆಸ್ಟೇಲಿಯನ್ನರು ಕಡಿಮೆ ತ್ಯಾಜ್ಯ ಉತ್ಪಾದನೆಗೆ, ಹೂಳುವ ಪ್ರಕ್ರಿಯೆ ಹಾಗು ಮರುಬಳಕೆಯ ಕ್ರಮಗಳಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಕಳೆದ 2002-03ರ ಅವಧಿಯಲ್ಲಿ ಒಟ್ಟು ತ್ಯಾಜ್ಯದಲ್ಲಿ '30% ಮುನ್ಸಿಪಾಲಟಿ , ವಾಣಿಜ್ಯ ಮತ್ತು ಕೈಗಾರಿಕೆಗಳಿಂದ 45% ಹಾಗು ಕಟ್ಟಡ ಧ್ವಂಸ ಹಾಗು ಕಟ್ಟಡ ಸಾಮಗ್ರಿಗಳಿಂದ 57%ರಷ್ಟು ತ್ಯಾಜ್ಯವನ್ನು ಮರುಬಳಕೆಗೆ ವಿನಿಯೋಗಿಸಲಾಗಿದೆ.
  • ತ್ಯಾಜ್ಯಗಳಿಂದ ಇಂಧನ ಉತ್ಪಾದಿಸಲಾಗುತ್ತದೆಯಲ್ಲದೇ ನೆಲದಡಿಯಲ್ಲಿಯ ತ್ಯಾಜ್ಯದಿಂದ ಅನಿಲ ರೂಪದ ಇಂಧನ ಹಾಗು ವಿದ್ಯುತ್ ಪಡೆದುಕೊಳ್ಳಲಾಗುವುದು. ಮನೆ ಮತ್ತು ಕೈಗಾರಿಕೆಗಳು ಹೊರಬಿಡುವ ತ್ಯಾಜ್ಯಗಳ ಪ್ರಮಾಣವನ್ನು ಅನುಸರಿಸಿ ಕರ ವಿಧಿಸಲಾಗುವದಿಲ್ಲ. ವಿಶ್ವದ ಯುರೋಪ್‌ ಹಾಗು ಕೆಲವು ಸಮುದಾಯಗಳು ವಿಲೇವಾರಿ ವ್ಯವಸ್ಥೆಯನ್ನು ನಿಭಾಯಿಸುತ್ತವೆ. ತ್ಯಾಜ್ಯ ಆಡಳಿತವನ್ನು ವಹಿಸಲು ಒಡೆತನದ ಎನ್ವಾಕ್ ಎಂಬ ಪದ್ದತಿಯನ್ನು ಅನುಸರಿಸಲಾಗುತ್ತದೆ.
  • ನಿರ್ವಾತ ಪ್ರದೇಶದಿಂದ ತ್ಯಾಜ್ಯಗಳನ್ನು ಸಂಸ್ಕರಿಸಿ ಕೊಳವೆಗಳ ಮೂಲಕ ಇಂಧನ ಉತ್ಪಾದನೆಗೆ ಅನುವುಮಾಡಿಕೊಡಲಾಗುತ್ತದೆ. ಕೆನಡಾದ ನಗರ ಕೇಂದ್ರ ಪ್ರದೇಶಗಳಲ್ಲಿ ನಿಯಂತ್ರಿತ ಕಸ ವಿಲೇವಾರಿ ಪದ್ದತಿಯು ಸರ್ವೆ ಸಾಮಾನ್ಯವಾಗಿದೆ. ತ್ಯಾಜ್ಯ ಸಂಗ್ರಹ ಅಥವಾ ಮರುಬಳಕೆಯ ಮತ್ತು ಜೈವಿಕ ತ್ಯಾಜ್ಯದ ಯೋಜಿತ ವ್ಯವಸ್ಥೆಯು ಕಾರ್ಯಕ್ರಮದ ನಿಗದಿಯಂತೆ ಪಟ್ಟಿ ಮಾಡಲಾಗಿದೆ.
  • ಗ್ರಾಮೀಣ ಪ್ರದೇಶದ ಜನರು ತಮ್ಮ ತ್ಯಾಜ್ಯ ವಸ್ತುಗಳನ್ನು ಹತ್ತಿರದ ಮರುಬಳಕೆಯ ಕೇಂದ್ರಗಳಿಗೆ ಇಲ್ಲವೆ ಬೇರೆಡೆಗೆ ಒತ್ತಾಯಪೂರ್ವಕವಾಗಿ ಸಾಗಿಸುವ ಸಂದರ್ಭಗಳೂ ಉಂಟು. ಸಂಗ್ರಹಿಸಿದ ತ್ಯಾಜ್ಯವನ್ನು ಪ್ರಾದೇಶಿಕ ಹೂಳು ಪ್ರದೇಶ ಇಲ್ಲವೆ ಕಸದ ರಾಶಿ ಇರುವ ಸ್ಥಳಕ್ಕೆ ಸಾಗಾಟ ಮಾಡಲಾಗುತ್ತದೆ. ತೈಪೈನಲ್ಲಿನ ಸ್ಥಳೀಯ ಸರ್ಕಾರ ಅಲ್ಲಿನ ಮನೆ ಹಾಗು ಉದ್ದಿಮೆಗಳು ಉತ್ಪಾದಿಸುವ ಕಸ, ತ್ಯಾಜ್ಯದ ಪ್ರಮಾಣದ ಮೇಲೆ ಕರ ವಿಧಿಸುತ್ತದೆ. ಸರ್ಕಾರ ನಿಗದಿಪಡಿಸಿ ನೀಡಿದ ತ್ಯಾಜ್ಯ ಚೀಲಗಳಲ್ಲಿ ಹಾಕಿದ ವಸ್ತುಗಳನ್ನು ಮಾತ್ರ ಸಿಟಿ ಕೌನ್ಸಿಲ್ ಅಥವಾ ಪುರಸಭೆ ಸಂಗ್ರಹಿಸಿ ತೆಗೆದುಕೊಂಡು ಹೋಗುತ್ತದೆ. ಇದೇ ನೀತಿಯಿಂದಾಗಿ ತ್ಯಾಜ್ಯ ವಸ್ತುಗಳ ಪ್ರಮಾಣ ತಗ್ಗಿದೆಯಲ್ಲದೇ ಮರುಪಯೋಗ ಕೂಡಾ ಹೆಚ್ಚಾಗಿದೆ.

HCL ತಂತ್ರಜ್ಞಾನಗಳು

ಸಾಂಪ್ರದಾಯಿಕವಾಗಿ ತ್ಯಾಜ್ಯ ನಿರ್ವಹಣಾ ಆಡಳಿತವು ಹೊಸ ತಂತ್ರಜ್ಮಾನವನ್ನು ಅಳವಡಿಸಿಕೊಳ್ಳಲು ಮಂದಗತಿ ತೋರಿದೆ. RFID ಟಾಗ್ಸ್ ,GPS ಮತ್ತು ಒಟ್ಟು ಸಾಫ್ಟವೇರ್ ಬಳಕೆಯ ಮಾದರಿಗಳನ್ನು ಅನುಸರಿಸಿದರೆ ವಿಲೇವಾರಿ,ಸಂಗ್ರಹದ ಬಗ್ಗೆ ಶ್ರಮದಾಯಿಕ ಕ್ರಮಗಳಿಗೆ ವಿದಾಯ ಹೇಳಬಹುದು. ನಿಖರವಾದ ಮಾಹಿತಿಗಳನ್ನು ಗುಣಮಟ್ಟದ ಅಂದಾಜನ್ನು ಸಹ ನಾವು ಪಡೆಯಬಹುದಾಗಿದೆ.

  • ಆಧುನಿಕ RFDI ಟ್ಯಾಗ್‌ಗಳು ಇಂದು ತ್ಯಾಜ್ಯ ನಿಯಂತ್ರಣ ಯೋಜನೆಯಡಿ ಕಸ ಸಂಗ್ರಹಕ್ಕಾಗಿ ಮಾಡುವ ವೆಚ್ಚ ಕುರಿತಂತೆ ಸಾಗಾಟದ ಮಾಹಿತಿ ಬಗ್ಗೆ ಕೂಲಂಕುಷವಾಗಿ ವ್ಯಾಖ್ಯಾನ ಮಾಡುತ್ತದೆ.
  • GPS ಕಸ ಸಾಗಣೆ ಪದ್ದತಿಯಲ್ಲಿ ಗ್ರಾಹಕರ ಮನವಿಯ ಮೇಲೆ ಕಸವನ್ನು ಸಂಗ್ರಹಿಸಿದ ಸ್ಥಳದಿಂದ ಸುರಕ್ಷಿತ ಸ್ಥಳಗಳಗಳಿಗೆ ತಲುಪಿಸಲಾಗುವುದು(ಕೆಲವು ತೊಟ್ಟಿಗಳನ್ನು ಇಲ್ಲವೆ ಜಾಗೆಗಳಿಗೆ ನಿಯಮಿತವಾಗಿ ಹೋಗದಿರುವ ಸಂದರ್ಭಗಳೂ ಇವೆ).
  • ಸಮಗ್ರ ಆಧುನಿಕ ತಂತ್ರಜ್ಕಾನದ ಆವಿಷ್ಕಾರಗಳನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ. ತ್ಯಾಜ್ಯ ಸಂಗ್ರಹಣಾ ಕಾರ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ.
  • ತ್ಯಾಜ್ಯ ಸಂಗ್ರಹಣಾ ಪ್ರಕ್ರಿಯೆಯು ಇಂದು ವಿಶಾಲ ವ್ಯಾಪ್ತಿಯಲ್ಲಿ ಹೊರಹೊಮ್ಮುತ್ತಿದೆ. ಅತ್ಯಾಧುನಿಕ ಛಾಯಾಚಿತ್ರಗಳನ್ನು ಬಳಸಿ ಮನೆ ಬಾಗಿಲಿನವರೆಗಿನ ಸೇವೆಗಳನ್ನು ಗಮನಿಸಲಾಗುತ್ತಿದೆ. ತ್ಯಾಜ್ಯದ ರಾಶಿಯನ್ನು ಸೂಕ್ತವಾದ ನಿಭಾಯಿಸದಿದ್ದರೆ ಅದು ಅನಾರೋಗ್ಯಕರ ವಾರತಾವರಣವನ್ನು ಸೃಷ್ಟಿಸುವ ಸಾಧ್ಯತೆಗಳಿವೆ.

ತ್ಯಾಜ್ಯ ನಿರ್ವಹಣಾ ಆಡಳಿತದ ಪರಿಕಲ್ಪನೆಗಳು

  • ತ್ಯಾಜ್ಯ ವಿಲೇವಾರಿ ಹಾಗು ನಿರ್ವಹಣೆಗೆ ಹಲವಾರು ಪರಿಕಲ್ಪನೆಗಳಿವೆ. ಇಂತಹ ಉದ್ದೇಶಗಳು ದೇಶದಿಂದ ದೇಶಗಳಿಗೆ, ಪ್ರದೇಶಗಳಿಗೆ ಹೊಂದಾಣಿಕೆ ಆಗುವಂತಹ ರೀತಿಯಲ್ಲಿ ಬದಲಾವಣೆಗೊಳ್ಳುತ್ತವೆ. ಅದರಲ್ಲಿ ಸಾಮಾನ್ಯವಾಗಿ ಎಲ್ಲೆಡೆಯೂ ಬಳಸುವಂತಹ ಕೆಲವು ಪರಿಕಲ್ಪನೆಗಳು ಜನಪ್ರಿಯವಾಗಿವೆ. ತ್ಯಾಜ್ಯ ವಿಲೇವಾರಿಯ ಪ್ರತ್ಯೇಕ ವಿಭಾಗ- ತ್ಯಾಜ್ಯ ವಿಲೇವಾರಿಯು ಪ್ರತ್ಯೇಕ ವಿಭಾಗ "3 Rs" ತ್ಯಾಜ್ಯ ಕಡಿಮೆ ಮಾಡುವಿಕೆ, ಮರುಪಯೋಗ, ಮರುಬಳಕೆ ಇವುಗಳ ಮೂಲಕ ತ್ಯಾಜ್ಯ ಕನಿಷ್ಟ ಪ್ರಮಾಣಕ್ಕೆ ತರಲು ಯತ್ನಿಸಲಾಗುತ್ತಿದೆ.
  • ತ್ಯಾಜ್ಯ ವಿಂಗಡನಾ ವಿಭಾಗದಲ್ಲಿ ಪ್ರತ್ಯೇಕತೆಯು ತ್ಯಾಜ್ಯ ವಸ್ತುಗಳ ಪ್ರಮಾಣವನ್ನು ಅತ್ಯಂತ ಕಡಿಮೆ ಮಟ್ಟಕ್ಕೆ ತರುವುದೇ ಈ ನೀತಿಯ ಉದ್ದೇಶವೆನಿಸಿದೆ. ವ್ಯರ್ಥವಸ್ತುಗಳಿಂದ ಗರಿಷ್ಟ ಮಟ್ಟದ ಲಾಭ ಪಡೆದುಕೊಂಡು ಅದರ ಸದುಪಯೋಗ ಮಾಡಬೇಕು. ಇದರಿಂದ ಅತ್ಯಲ್ಪ ಪ್ರಮಾಣದ ತ್ಯಾಜ್ಯ ಉಳಿಯುವ ಸಾಧ್ಯತೆ ಹೆಚ್ಚು. ಇದೊಂದು ಪ್ರಾಯೋಗಿಕ ಫಲ ಎಂದೂ ಹೇಳಬಹುದು.
  • ವಿಸ್ತೃತ ಉತ್ಪಾದನಾ ಹೊಣೆಗಾರಿಕೆ - ವಿಸ್ತೃತ ಉತ್ಪಾದನಾ ಹೊಣೆಗಾರಿಕೆ(EPR) ಈ ತೆರನಾದ ಜವಾಬ್ದಾರಿಯು ಕಸದ ನಿರ್ವಹಣೆಯೊಂದಿಗೆ ಅದರ ಮರುಬಳಕೆಯ ಸಾಧ್ಯತೆಗಳನ್ನು ಪ್ರತಿಪಾದಿಸುತ್ತದೆ. ಈ ವ್ಯವಸ್ಥೆಯ ಸಂಪೂರ್ಣ ಖರ್ಚು ವೆಚ್ಚಗಳ ಬಗ್ಗೆಯೂ ವಿವರ ಒದಗಿಸುತ್ತದೆ.(ತ್ಯಾಜ್ಯಗಳ ವಿಲೆವಾರಿಯ ವರೆಗಿನ ಎಲ್ಲ ಖರ್ಚುಗಳು)ಮರುತ್ಪಾದನೆಗಳ ಮಾರುಕಟ್ಟೆ ಅಂದಾಜು ಬೆಲೆಯೂ ಇದರಲ್ಲಿ ಸೇರಿರುತ್ತದೆ. ವಿಸ್ತ್ರತ ಜವಾಬ್ದಾರಿಯು ಸಂಪೂರ್ಣ ಬದ್ದತೆಯನ್ನು ತೋರಿಸುತ್ತದೆ.
  • ಉತ್ಪಾದನೆಗಳ ಪ್ಯಾಕೇಜಿಂಗ್‌ನಿಂದ ಹಿಡಿದು ಮಾರಾಟದ ವರೆಗೆ ಅದರ ಎಲ್ಲಾ ಆಗು-ಹೋಗುಗಳ ಬಗ್ಗೆ ನಿಗಾವಹಿಸುವುದೇ ಇಪಿಆರ್ ನೀತಿ ಮೂಲಮಂತ್ರವೆನಿಸಿದೆ. ವಸ್ತುಗಳನ್ನು ತಯಾರಿಸುವ, ಆಮದು ಮಾಡಿಕೊಳ್ಳುವ ಇಲ್ಲವೆ ಮಾರಾಟ ಮಾಡುವವರು ಅದರ ಪೂರ್ಣ ಉಪಯೋಗ ದ ಅವಧಿವರೆಗೆ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಉತ್ಪಾದನಾ ವೇಳೆಯಲ್ಲೂ ಅಗತ್ಯ ಎಚ್ಚರಿಕೆಗಳನ್ನು ವಹಿಸುವುದು ಕೂಡಾ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಒಂದು ಭಾಗವಾಗಿದೆ.
  • ಉತ್ಪಾದನೆಗಳಿಂದ ಪರಿಸರ ಮಾಲಿನ್ಯದ ಕಾರಣಗಳಿಗೂ ಉತ್ಪಾದಕರು ಜವಾಬ್ದಾರಿ ತೋರಿಸಬೇಕಾಗುತ್ತದೆ, ತಮ್ಮ ಮೂಲಕ ಇಂತಹ ದುಷ್ಪರಿಣಾಮಗಳಿಗೂ ಅವರು ತೆರಬೇಕಾಗುತ್ತದೆ. ತ್ಯಾಜ್ಯ ಆಡಳಿತ ವ್ಯವಸ್ಥೆಯಂತೆ ತ್ಯಾಜ್ಯಕ್ಕೆ ಕಾರಣರಾದವರು ಇದನ್ನು ಸಾಗಿಸಲು ಮತ್ತು ವಿಲೇವಾರಿ ಹಂತದವರೆಗಿನ ಎಲ್ಲಾ ವೆಚ್ಚಗಳಿಗೆ ಸಂದಾಯ ಮಾಡಲೇಬೇಕಾಗುತ್ತದೆ. ತ್ಯಾಜ್ಯ ಆಡಳಿತ ವ್ಯವಸ್ಥೆಯಂತೆ ತ್ಯಾಜ್ಯಕ್ಕೆ ಕಾರಣರಾದವರು ಇದನ್ನು ಸಾಗಿಸಲು ಮತ್ತು ವಿಲೇವಾರಿ ಹಂತದವರೆಗಿನ ಎಲ್ಲಾ ವೆಚ್ಚಗಳಿಗೆ ಸಂದಾಯ ಮಾಡಲೇಬೇಕಾಗುತ್ತದೆ.

ಶಿಕ್ಷಣ ಮತ್ತು ಜಾಗೃತಿ

  • ಶಿಕ್ಷಣ ಮತ್ತು ಜಾಗೃತಿಯು ಇಂದಿನ ಜಾಗತಿಕ ಮಟ್ಟದಲ್ಲಿ ಬಹಳ ಮಹತ್ವ ಪಡೆದುಕೊಂಡಿದೆ. ತ್ಯಾಜ್ಯ ವಿಲೇವಾರಿಯ ನಂತರದ ಸಂಪನ್ಮೂಲ ವ್ಯವಸ್ಥೆ ಕೂಡಾ ಇಂದು ಹೆಚ್ಚು ಪ್ರಚಾರ ಪಡೆದುಕೊಂಡಿದೆ. ಟಾಲೊಯರ್ಸ್‌ ಘೋಷಣೆಯಂತೆ ವಾತಾವರಣದ ಪೋಷಣೆ, ಪರಿಸರದ ನಾಶ ತಡೆಯಲು ಮಾಲಿನ್ಯ, ಕಳಪೆಗೊಳ್ಳುವ ವಿಲೆವಾರಿ ವ್ಯವಸ್ಥೆ ಇಂದು ನೈಸರ್ಗಿಕ ಸಂಪನ್ಮೂಲಗಳ ಕೊರತೆಗೆ ಕಾರಣವೆಂದು ಸ್ಪಷ್ಟಪಡಿಸಿದೆ.
  • ಸ್ಥಳೀಯ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಹವಾ ಮಾಲಿನ್ಯದಿಂದ ವಿಷವಸ್ತುಗಳು ಎಲ್ಲೆಡೆ ಹರಡಿ ವಿನಾಶ ಮತ್ತು ಅರಣ್ಯ ಪ್ರದೇಶದ ಪ್ರಮಾಣದ ಇಳಿಕೆ ಇಂದಿನ ಪರಿಣಾಮಗಳು. ಮಣ್ಣು, ಜಲಮೂಲ, ಓಝೋನ ಪದರು ತಮ್ಮ ಎಂದಿನ ಶಕ್ತಿಯನ್ನು ಉಳಿಸಿಕೊಳ್ಳಲು ಅಸಮರ್ಥ ವಾಗುತ್ತಿವೆ. ಹಸಿರು ಮನೆಯ ಅನಿಲಗಳು ಬದುಕನ್ನು ನರಕ ಮಾಡುತ್ತಿವೆ. ಭೂಮಿ ಮೇಲಿನ ಜೈವಿಕ ವೈವಿಧ್ಯ ಮಾಯವಾಗುತ್ತಿದೆ. ಹೀಗಾಗಿ ವಿಶ್ವದ ರಾಷ್ಟ್ರಗಳ ಭದ್ರತೆ ಹಾಗು ಪರಂಪರೆ ಮುಂದಿನ ಪೀಳಿಗೆಯ ಅಳಿವು ಉಳಿವು ಇಂದಿನ ಚಿಂತನೆಯ ವಿಷಯವಾಗಿದೆ.
  • ಹಲವಾರು ವಿಶ್ವವಿದ್ಯಾನಿಲಯಗಳು ಟಾಲೊರಿಸ್ ಘೋಷಣೆಗೆ ಬದ್ದವಾಗಿವೆ, {{0}ಪರಿಸರ ಆಡಳಿತ ಮತ್ತು ತ್ಯಾ ಜ್ಯ ನಿರ್ವಹಣಾ ಯೋಜನೆಗಳಿಗೆ ಒತ್ತು ನೀಡುತ್ತಿವೆ. ಇಂದು ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಕುರಿತಂತೆ ಅಧ್ಯಯನಗಳು ವಿವಿಗಳಲ್ಲಿ ಯೋಜನಾ ವಿಷಯಗಳಾಗಿವೆ. ವಿಶ್ವವಿದ್ಯಾನಿಲಯಗಳು ಮತ್ತು ರಜಾಕಾಲದ ಶಿಕ್ಷಣ ತರಬೇತಿಗಳು ವಿವಿಧ ಸಂಘಟಣೆಗಳ ಮೂಲಕ ತ್ಯಾಜ್ಯ ವಿಲೆವಾರಿ ಕುರಿತ ವಿಷಯಗಳ ಅಧ್ಯಯನಕ್ಕೆ (WAMITAB) ಮತ್ತು ಚಾರ್ಟರ್ಡ ಇನಿಸ್ಟಿಟೂಟ್ ಆಫ್ ವೇಸ್ಟ್ ಮ್ಯಾನೇಜ್ ಮೆಂಟ್ ವಿಷಯಕ್ಕೆ ಒತ್ತು ನೀಡಿವೆ.
  • ಅಧ್ಯಯನಗಳು ವಿವಿಗಳಲ್ಲಿ ಯೋಜನಾ ವಿಷಯಗಳಾಗಿವೆ. ವಿಶ್ವವಿದ್ಯಾನಿಲಯಗಳು ಮತ್ತು ರಜಾಕಾಲದ ಶಿಕ್ಷಣ ತರಬೇತಿಗಳು ವಿವಿಧ ಸಂಘಟಣೆಗಳ ಮೂಲಕ ತ್ಯಾಜ್ಯ ವಿಲೆವಾರಿ ಕುರಿತ ವಿಷಯಗಳ ಅಧ್ಯಯನಕ್ಕೆ (WAMITAB) ಮತ್ತು ಚಾರ್ಟರ್ಡ ಇನಿಸ್ಟಿಟೂಟ್ ಆಫ್ ವೇಸ್ಟ್ ಮ್ಯಾನೇಜ್ ಮೆಂಟ್ ವಿಷಯಕ್ಕೆ ಒತ್ತು ನೀಡಿವೆ. ಈ ಕುರಿತಂತೆ ಅಧ್ಯಯನಗಳು ವಿವಿಗಳಲ್ಲಿ ಯೋಜನಾ ವಿಷಯಗಳಾಗಿವೆ.
  • ವಿಶ್ವವಿದ್ಯಾನಿಲಯಗಳು ಮತ್ತು ರಜಾಕಾಲದ ಶಿಕ್ಷಣ ತರಬೇತಿಗಳು ವಿವಿಧ ಸಂಘಟಣೆಗಳ ಮೂಲಕ ತ್ಯಾಜ್ಯ ವಿಲೆವಾರಿ ಕುರಿತ ವಿಷಯಗಳ ಅಧ್ಯಯನಕ್ಕೆ (WAMITAB) ಮತ್ತು ಚಾರ್ಟರ್ಡ ಇನಿಸ್ಟಿಟೂಟ್ ಆಫ್ ವೇಸ್ಟ್ ಮ್ಯಾನೇಜ್ ಮೆಂಟ್ ವಿಷಯಕ್ಕೆ ಒತ್ತು ನೀಡಿವೆ. ವಸ್ತುಗಳ ಮರುಬಳಕೆ ಹಾಗು ವಾಪಸಾತಿಗೆ ಅನುಕೂಲವಾಗುವ ಯಂತ್ರಗಳನ್ನು (ತೊಮ್ರಾ)( ಎನ್ವಿಪ್ಕೊ) ಕಂಪೆನಿಗಳು ತಯಾರು ಮಾಡುತ್ತವೆ. ತ್ಯಾಜ್ಯ ನಿರ್ವಹಣೆಯ ಕುರಿತಂತೆ ಬೇಕಾದಷ್ಟು ಮಾದರಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಇದನ್ನೂ ನೋಡಿರಿ

  • ಜೈವಿಕ ವೈದ್ಯಕೀಯ ತ್ಯಾಜ್ಯ
  • ಪರಿಸರ ತ್ಯಾಜ್ಯ ನಿಯಂತ್ರಣಗಳು
  • ಇಂಗ್ಲೆಂಡಿನಲ್ಲಿನ ಆಹಾರ ಮೂಲದ ತ್ಯಾಜ್ಯ
  • ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಇತಿಹಾಸ
  • ಕೈಗಾರಿಕಾ ತ್ಯಾಜ್ಯಗಳ ರಾಶಿ
  • ತ್ಯಾಜ್ಯ ವಿಲೆವಾರಿ ಆಡಳಿತದ ವಿವರ ಪಟ್ಟಿ

ಆಕರಗಳು

ಟಿಪ್ಪಣಿಗಳು

ಹೊರಗಿನ ಕೊಂಡಿಗಳು

Tags:

ತ್ಯಾಜ್ಯ ನಿರ್ವಹಣೆ ವಿಧಾನಗಳುತ್ಯಾಜ್ಯ ನಿರ್ವಹಣೆ ಘನ ತ್ಯಾಜ್ಯ ನಿರ್ವಹಣೆ HCL ತಂತ್ರಜ್ಞಾನಗಳುತ್ಯಾಜ್ಯ ನಿರ್ವಹಣೆ ತ್ಯಾಜ್ಯ ನಿರ್ವಹಣಾ ಆಡಳಿತದ ಪರಿಕಲ್ಪನೆಗಳುತ್ಯಾಜ್ಯ ನಿರ್ವಹಣೆ ಶಿಕ್ಷಣ ಮತ್ತು ಜಾಗೃತಿತ್ಯಾಜ್ಯ ನಿರ್ವಹಣೆ ಇದನ್ನೂ ನೋಡಿರಿತ್ಯಾಜ್ಯ ನಿರ್ವಹಣೆ ಆಕರಗಳುತ್ಯಾಜ್ಯ ನಿರ್ವಹಣೆ ಹೊರಗಿನ ಕೊಂಡಿಗಳುತ್ಯಾಜ್ಯ ನಿರ್ವಹಣೆಮರುಬಳಕೆ

🔥 Trending searches on Wiki ಕನ್ನಡ:

ಮಣ್ಣಿನ ಸವಕಳಿಎಚ್.ಎಸ್.ಶಿವಪ್ರಕಾಶ್ಉಡಲೋಕಸಭೆಮೋಕ್ಷಗುಂಡಂ ವಿಶ್ವೇಶ್ವರಯ್ಯಪ್ಲೇಟೊರಾಜ್ಯಸಭೆಶಿವಕುಮಾರ ಸ್ವಾಮಿವರ್ಗೀಯ ವ್ಯಂಜನಕರ್ನಾಟಕದ ವಾಸ್ತುಶಿಲ್ಪರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕರ್ನಾಟಕ ಸಂಗೀತಶ್ಯೆಕ್ಷಣಿಕ ತಂತ್ರಜ್ಞಾನಆಸಕ್ತಿಗಳುಜೈನ ಧರ್ಮ ಗ್ರಂಥ ತತ್ತ್ವಾರ್ಥ ಸೂತ್ರಗೋಲ ಗುಮ್ಮಟಬೆಂಗಳೂರುಜೋಡು ನುಡಿಗಟ್ಟುಆಂಗ್‌ಕರ್ ವಾಟ್ಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಸಿದ್ದಲಿಂಗಯ್ಯ (ಕವಿ)ಛಂದಸ್ಸುಕುಬೇರಶಿವರಾಮ ಕಾರಂತಆಲ್‌ಝೈಮರ್‌‌ನ ಕಾಯಿಲೆಜ್ಞಾನಪೀಠ ಪ್ರಶಸ್ತಿಕಪ್ಪೆಟಿಪ್ಪಣಿಫುಟ್ ಬಾಲ್ಮುದ್ದಣಹೊಯ್ಸಳಶಿಕ್ಷಣಚಂದ್ರಆಯ್ದಕ್ಕಿ ಲಕ್ಕಮ್ಮಮೆಕ್ಕೆ ಜೋಳಗುರು (ಗ್ರಹ)ಕಾಳಿಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಸಿದ್ದರಾಮಯ್ಯದೂರದರ್ಶನಕಥೆರತ್ನಾಕರ ವರ್ಣಿಋತುಗೋವಿಂದ III (ರಾಷ್ಟ್ರಕೂಟ)ಸ್ತ್ರೀಪ್ರತಿಧ್ವನಿಅಕ್ಬರ್ರಾಮಪ್ಯಾರಾಸಿಟಮಾಲ್ಜ್ಯೋತಿಬಾ ಫುಲೆವಿಜಯಪುರ ಜಿಲ್ಲೆರಾಷ್ಟ್ರೀಯ ಸೇವಾ ಯೋಜನೆರಾಷ್ಟ್ರಕೂಟಮದಕರಿ ನಾಯಕವಿದ್ಯುಲ್ಲೇಪಿಸುವಿಕೆಶಿವಪ್ಪ ನಾಯಕಉತ್ತರ ಕರ್ನಾಟಕಅಂತರ್ಜಲಕನ್ನಡದಲ್ಲಿ ಕಾದಂಬರಿ ಸಾಹಿತ್ಯಕೃಷ್ಣದೇವರಾಯಕರ್ಣಕರ್ನಾಟಕದ ಶಾಸನಗಳುಅದಿಲಾಬಾದ್ ಜಿಲ್ಲೆದಕ್ಷಿಣ ಕನ್ನಡಪೂರ್ಣಚಂದ್ರ ತೇಜಸ್ವಿಬ್ಯಾಡ್ಮಿಂಟನ್‌ಎತ್ತಿನಹೊಳೆಯ ತಿರುವು ಯೋಜನೆಕರ್ನಾಟಕದ ಹಬ್ಬಗಳುಶಿವಕೋಟ್ಯಾಚಾರ್ಯಸಿರ್ಸಿಅಮ್ಮಟಿ.ಪಿ.ಕೈಲಾಸಂಮಧ್ಯಕಾಲೀನ ಭಾರತಅಂಜನಿ ಪುತ್ರಇಮ್ಮಡಿ ಪುಲಕೇಶಿಅಶೋಕನ ಶಾಸನಗಳುಕನ್ನಡದಲ್ಲಿ ಸಣ್ಣ ಕಥೆಗಳುಗೌತಮಿಪುತ್ರ ಶಾತಕರ್ಣಿ🡆 More