ಜ್ಞಾನಪೀಠ ಪ್ರಶಸ್ತಿ

ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.

ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ ೨೨ ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ೨೧ ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.

ಜ್ಞಾನಪೀಠ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ
ಪ್ರಶಸ್ತಿ ಫಲಕ
ಪ್ರಶಸ್ತಿಯ ವಿವರ
ವರ್ಗ ಸಾಹಿತ್ಯ (ವೈಯುಕ್ತಿಕ)
ಪ್ರಾರಂಭವಾದದ್ದು ೧೯೬೧
ಮೊದಲ ಪ್ರಶಸ್ತಿ ೧೯೬೫
ಕಡೆಯ ಪ್ರಶಸ್ತಿ ೨೦೨೩
ಒಟ್ಟು ಪ್ರಶಸ್ತಿಗಳು ೬೩
ಪ್ರಶಸ್ತಿ ನೀಡುವವರು ಭಾರತೀಯ ಜ್ಞಾನಪೀಠ
ವಿವರ ಭಾರತದ ಅತ್ಯುನ್ನತ ಸಾಹಿತ್ಯ ಪುರಸ್ಕಾರ
ಮೊದಲ ಪ್ರಶಸ್ತಿ ಪುರಸ್ಕೃತರು ಜಿ. ಶಂಕರ ಕುರುಪ್
ಕೊನೆಯ ಪ್ರಶಸ್ತಿ ಪುರಸ್ಕೃತರು  • ಗುಲ್ಜಾರ್
 • ರಾಮಭದ್ರಾಚಾರ್ಯ

ಜ್ಞಾನಪೀಠದ ಹಿನ್ನೆಲೆ ಮತ್ತು ವಿವರ

ಈ ಪ್ರಶಸ್ತಿಯನ್ನು ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನಪೀಠ ಟ್ರಸ್ಟ್. ಟೈಂಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ. ೧೯೮೨ ರಿಂದ, ಈ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಸಮಗ್ರ ಕೊಡುಗೆಯನ್ನು ನೀಡಿದ ಲೇಖಕರಿಗೆ ಸಂದಾಯವಾಗುತ್ತಿದೆ. ಈವರೆಗೆ ಹಿಂದಿ ಸಾಹಿತಿಗಳು ಹನ್ನೊಂದು ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಕನ್ನಡ ಭಾಷೆಯು ಎಂಟು ಪ್ರಶಸ್ತಿಯನ್ನು ಪಡೆದು ಎರಡನೆ ಸ್ಥಾನದಲ್ಲಿದೆ.

೧೯೮೨ರಿಂದ ಒಂದು ಕೃತಿಯ ಬದಲಿಗೆ ಸಮಗ್ರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ ನೀಡಲಾಗುತ್ತಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ

ವರ್ಷ ಭಾವಚಿತ್ರ ಪುರಸ್ಕೃತರು ಭಾಷೆ ಕೃತಿ Refs
1965
(1st)
ಜ್ಞಾನಪೀಠ ಪ್ರಶಸ್ತಿ  ಜಿ. ಶಂಕರ ಕುರುಪ್ ಮಲಯಾಳಂ ಓಡಕ್ಕುಳಲ್
1966
(2nd)
 – ತಾರಾಶಂಕರ ಬಂದೋಪಾಧ್ಯಾಯ ಬೆಂಗಾಲಿ ಗಣದೇವತಾ
1967
(3rd)
ಜ್ಞಾನಪೀಠ ಪ್ರಶಸ್ತಿ  ಉಮಾಶಂಕರ್ ಜೋಶಿ ಗುಜರಾತಿ ನಿಶಿತಾ
ಜ್ಞಾನಪೀಠ ಪ್ರಶಸ್ತಿ  ಕುವೆಂಪು ಕನ್ನಡ ಶ್ರೀ ರಾಮಾಯಣ ದರ್ಶನಂ
1968
(4th)
ಜ್ಞಾನಪೀಠ ಪ್ರಶಸ್ತಿ  ಸುಮಿತ್ರಾನಂದನ ಪಂತ್ ಹಿಂದಿ ಚಿದಂಬರಾ
1969
(5th)
ಜ್ಞಾನಪೀಠ ಪ್ರಶಸ್ತಿ  ಫಿರಾಕ್ ಗೋರಕ್ ಪುರಿ ಉರ್ದು ಗುಲ್-ಎ-ನಗ್ಮಾ
1970
(6th)
ಜ್ಞಾನಪೀಠ ಪ್ರಶಸ್ತಿ  ವಿಶ್ವನಾಥ ಸತ್ಯನಾರಾಯಣ ತೆಲುಗು ರಾಮಾಯಣ ಕಲ್ಪವೃಕ್ಷಮು
1971
(7th)
 – ಬಿಷ್ಣು ಡೆ ಬೆಂಗಾಲಿ ಸ್ಮೃತಿ ಸತ್ತಾ ಭವಿಷ್ಯತ್
1972
(8th)
ಜ್ಞಾನಪೀಠ ಪ್ರಶಸ್ತಿ  ರಾಮ್‍ಧಾರಿ ಸಿಂಘ್ ದಿನಕರ್ ಹಿಂದಿ ಊರ್ವಶಿ
1973
(9th)
ಜ್ಞಾನಪೀಠ ಪ್ರಶಸ್ತಿ  ದ. ರಾ. ಬೇಂದ್ರೆ ಕನ್ನಡ ನಾಕುತಂತಿ
ಜ್ಞಾನಪೀಠ ಪ್ರಶಸ್ತಿ  ಗೋಪಿನಾಥ್ ಮೊಹಾಂತಿ ಒಡಿಯಾ ಮಾಟಿ ಮಟಲ್
1974
(10th)
ಜ್ಞಾನಪೀಠ ಪ್ರಶಸ್ತಿ  ವಿ. ಎಸ್. ಖಾಂಡೇಕರ್ ಮರಾಠಿ ಯಯಾತಿ
1975
(11th)
ಜ್ಞಾನಪೀಠ ಪ್ರಶಸ್ತಿ  ಪಿ. ವಿ. ಅಖಿಲನ್ ತಮಿಳು ಚಿತ್ರಪ್ಪಾವೈ
1976
(12th)
 – ಆಶಾಪೂರ್ಣ ದೇವಿ ಬೆಂಗಾಲಿ ಪ್ರಥಮ್ ಪ್ರತಿಶೃತಿ
1977
(13th)
ಜ್ಞಾನಪೀಠ ಪ್ರಶಸ್ತಿ  ಕೆ. ಶಿವರಾಮ ಕಾರಂತ ಕನ್ನಡ ಮೂಕಜ್ಜಿಯ ಕನಸುಗಳು
1978
(14th)
 – ಸಚ್ಚಿದಾನಂದ ವಾತ್ಸಾಯನ ಹಿಂದಿ ಕಿತ್ನೀ ನಾವೋಂ ಮೇಂ ಕಿತ್ನೀ ಬಾರ್
1979
(15th)
 – ಬೀರೇಂದ್ರ ಕುಮಾರ್ ಭಟ್ಟಾಚಾರ್ಯ ಅಸ್ಸಾಮಿ ಮೃತ್ಯುಂಜಯ್
1980
(16th)
ಜ್ಞಾನಪೀಠ ಪ್ರಶಸ್ತಿ  ಎಸ್. ಕೆ. ಪೋಟ್ಟಕ್ಕಾಡ್ ಮಲಯಾಳಂ ಒರು ದೇಶತ್ತಿಂಟೆ ಕಥಾ
1981
(17th)
ಜ್ಞಾನಪೀಠ ಪ್ರಶಸ್ತಿ  ಅಮೃತಾ ಪ್ರೀತಮ್ ಪಂಜಾಬಿ ಕಾಗಜ್ ತೆ ಕ್ಯಾನ್ವಾಸ್
1982
(18th)
ಜ್ಞಾನಪೀಠ ಪ್ರಶಸ್ತಿ  ಮಹಾದೇವಿ ವರ್ಮಾ ಹಿಂದಿ ಸಮಗ್ರ ಸಾಹಿತ್ಯ
1983
(19th)
ಜ್ಞಾನಪೀಠ ಪ್ರಶಸ್ತಿ  ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ಚಿಕ್ಕವೀರ ರಾಜೇಂದ್ರ
1984
(20th)
ಜ್ಞಾನಪೀಠ ಪ್ರಶಸ್ತಿ  ತಕಳಿ ಶಿವಶಂಕರ ಪಿಳ್ಳೈ ಮಲಯಾಳಂ ಸಮಗ್ರ ಸಾಹಿತ್ಯ
1985
(21st)
 – ಪನ್ನಾಲಾಲ್ ಪಟೇಲ್ ಗುಜರಾತಿ ಸಮಗ್ರ ಸಾಹಿತ್ಯ
1986
(22nd)
ಜ್ಞಾನಪೀಠ ಪ್ರಶಸ್ತಿ  ಸಚ್ಚಿದಾನಂದ ರಾವುತರಾಯ್ ಒಡಿಯಾ ಸಮಗ್ರ ಸಾಹಿತ್ಯ
1987
(23rd)
ಜ್ಞಾನಪೀಠ ಪ್ರಶಸ್ತಿ  ವಿ. ವಿ. ಶಿರ್ವಾಡ್ಕರ್ ಮರಾಠಿ ಸಮಗ್ರ ಸಾಹಿತ್ಯ
1988
(24th)
ಜ್ಞಾನಪೀಠ ಪ್ರಶಸ್ತಿ  ಸಿ. ನಾರಾಯಣ ರೆಡ್ಡಿ ತೆಲುಗು ಸಮಗ್ರ ಸಾಹಿತ್ಯ
1989
(25th)
 – ಕುರ್ರಾತುಲೈನ್ ಹೈದರ್ ಉರ್ದು ಸಮಗ್ರ ಸಾಹಿತ್ಯ
1990
(26th)
ಜ್ಞಾನಪೀಠ ಪ್ರಶಸ್ತಿ  ವಿ. ಕೃ. ಗೋಕಾಕ ಕನ್ನಡ ಸಮಗ್ರ ಸಾಹಿತ್ಯ
1991
(27th)
 – ಸುಭಾಷ್ ಮುಖ್ಯೋಪಾಧ್ಯಾಯ ಬೆಂಗಾಲಿ ಸಮಗ್ರ ಸಾಹಿತ್ಯ
1992
(28th)
ಜ್ಞಾನಪೀಠ ಪ್ರಶಸ್ತಿ  ನರೇಶ್ ಮೆಹ್ತಾ ಹಿಂದಿ ಸಮಗ್ರ ಸಾಹಿತ್ಯ
1993
(29th)
ಜ್ಞಾನಪೀಠ ಪ್ರಶಸ್ತಿ  ಸೀತಾಕಾಂತ್ ಮಹಾಪಾತ್ರ ಒಡಿಯಾ ಸಮಗ್ರ ಸಾಹಿತ್ಯ
1994
(30th)
ಜ್ಞಾನಪೀಠ ಪ್ರಶಸ್ತಿ  ಯು. ಆರ್. ಅನಂತಮೂರ್ತಿ ಕನ್ನಡ ಸಮಗ್ರ ಸಾಹಿತ್ಯ
1995
(31st)
ಜ್ಞಾನಪೀಠ ಪ್ರಶಸ್ತಿ  ಎಂ. ಟಿ. ವಾಸುದೇವನ್ ನಾಯರ್ ಮಲಯಾಳಂ ಸಮಗ್ರ ಸಾಹಿತ್ಯ
1996
(32nd)
ಜ್ಞಾನಪೀಠ ಪ್ರಶಸ್ತಿ  ಮಹಾಶ್ವೇತಾ ದೇವಿ ಬೆಂಗಾಲಿ ಸಮಗ್ರ ಸಾಹಿತ್ಯ
1997
(33rd)
 – ಅಲಿ ಸರ್ದಾರ್ ಜಾಫ್ರಿ ಉರ್ದು ಸಮಗ್ರ ಸಾಹಿತ್ಯ
1998
(34th)
ಜ್ಞಾನಪೀಠ ಪ್ರಶಸ್ತಿ  ಗಿರೀಶ್ ಕಾರ್ನಾಡ್ ಕನ್ನಡ ಸಮಗ್ರ ಸಾಹಿತ್ಯ
1999
(35th)
ಜ್ಞಾನಪೀಠ ಪ್ರಶಸ್ತಿ  ನಿರ್ಮಲ್ ವರ್ಮ ಹಿಂದಿ ಸಮಗ್ರ ಸಾಹಿತ್ಯ
 – ಗುರುದಯಾಳ್ ಸಿಂಗ್ ಪಂಜಾಬಿ ಸಮಗ್ರ ಸಾಹಿತ್ಯ
2000
(36th)
ಜ್ಞಾನಪೀಠ ಪ್ರಶಸ್ತಿ  ಇಂದಿರಾ ಗೋಸ್ವಾಮಿ ಅಸ್ಸಾಮಿ ಸಮಗ್ರ ಸಾಹಿತ್ಯ
2001
(37th)
 – ರಾಜೇಂದ್ರ ಕೆ. ಶಾ ಗುಜರಾತಿ ಸಮಗ್ರ ಸಾಹಿತ್ಯ
2002
(38th)
ಜ್ಞಾನಪೀಠ ಪ್ರಶಸ್ತಿ  ಡಿ. ಜಯಕಾಂತನ್ ತಮಿಳು ಸಮಗ್ರ ಸಾಹಿತ್ಯ
2003
(39th)
 – ವಿಂದಾ ಕರಂದೀಕರ್ ಮರಾಠಿ ಸಮಗ್ರ ಸಾಹಿತ್ಯ
2004
(40th)
ಜ್ಞಾನಪೀಠ ಪ್ರಶಸ್ತಿ  ರೆಹಮಾನ್ ರಾಹಿ ಕಾಶ್ಮೀರಿ ಸಮಗ್ರ ಸಾಹಿತ್ಯ
2005
(41st)
 – ಕುನ್ವರ್ ನಾರಾಯಣ್ ಹಿಂದಿ ಸಮಗ್ರ ಸಾಹಿತ್ಯ
2006
(42nd)
ಜ್ಞಾನಪೀಠ ಪ್ರಶಸ್ತಿ  ರವೀಂದ್ರ ಕೇಳೇಕರ್ ಕೊಂಕಣಿ ಸಮಗ್ರ ಸಾಹಿತ್ಯ
ಜ್ಞಾನಪೀಠ ಪ್ರಶಸ್ತಿ  ಸತ್ಯವ್ರತ ಶಾಸ್ತ್ರಿ ಸಂಸ್ಕೃತ ಸಮಗ್ರ ಸಾಹಿತ್ಯ
2007
(43rd)
ಜ್ಞಾನಪೀಠ ಪ್ರಶಸ್ತಿ  ಓ. ಎನ್. ವಿ. ಕುರುಪ್ ಮಲಯಾಳಂ ಸಮಗ್ರ ಸಾಹಿತ್ಯ
2008
(44th)
 – ಅಖ್ಲಾಕ್ ಮೊಹಮ್ಮದ್ ಖಾನ್ (ಶಹರ್ಯಾರ್) ಉರ್ದು ಸಮಗ್ರ ಸಾಹಿತ್ಯ
2009
(45th)
 – ಅಮರ್ ಕಾಂತ್ ಹಿಂದಿ ಸಮಗ್ರ ಸಾಹಿತ್ಯ
ಜ್ಞಾನಪೀಠ ಪ್ರಶಸ್ತಿ  ಶ್ರೀ ಲಾಲ್ ಶುಕ್ಲ ಹಿಂದಿ ಸಮಗ್ರ ಸಾಹಿತ್ಯ
2010
(46th)
ಜ್ಞಾನಪೀಠ ಪ್ರಶಸ್ತಿ  ಚಂದ್ರಶೇಖರ ಕಂಬಾರ ಕನ್ನಡ ಸಮಗ್ರ ಸಾಹಿತ್ಯ
2011
(47th)
ಜ್ಞಾನಪೀಠ ಪ್ರಶಸ್ತಿ  ಪ್ರತಿಭಾ ರೇ ಒಡಿಯಾ ಸಮಗ್ರ ಸಾಹಿತ್ಯ
2012
(48th)
ಜ್ಞಾನಪೀಠ ಪ್ರಶಸ್ತಿ  ರಾವೂರಿ ಭರದ್ವಾಜ ತೆಲುಗು ಸಮಗ್ರ ಸಾಹಿತ್ಯ
2013
(49th)
ಜ್ಞಾನಪೀಠ ಪ್ರಶಸ್ತಿ  ಕೇದಾರನಾಥ್ ಸಿಂಗ್ ಹಿಂದಿ ಸಮಗ್ರ ಸಾಹಿತ್ಯ
2014
(50th)
ಜ್ಞಾನಪೀಠ ಪ್ರಶಸ್ತಿ  ಭಾಲಚಂದ್ರ ನೇಮಾಡೆ ಮರಾಠಿ ಸಮಗ್ರ ಸಾಹಿತ್ಯ
2015
(51st)
ಜ್ಞಾನಪೀಠ ಪ್ರಶಸ್ತಿ  ರಘುವೀರ್ ಚೌಧರಿ ಗುಜರಾತಿ ಸಮಗ್ರ ಸಾಹಿತ್ಯ
2016
(52nd)
ಜ್ಞಾನಪೀಠ ಪ್ರಶಸ್ತಿ  ಶಂಖ ಘೋಷ್ ಬೆಂಗಾಲಿ ಸಮಗ್ರ ಸಾಹಿತ್ಯ
2017
(53rd)
ಜ್ಞಾನಪೀಠ ಪ್ರಶಸ್ತಿ  ಕೃಷ್ಣಾ ಸೋಬ್ತಿ ಹಿಂದಿ ಸಮಗ್ರ ಸಾಹಿತ್ಯ
2018
(54th)
ಜ್ಞಾನಪೀಠ ಪ್ರಶಸ್ತಿ  ಅಮಿತಾವ್ ಘೋಷ್ ಇಂಗ್ಲಿಷ್ ಸಮಗ್ರ ಸಾಹಿತ್ಯ
2019
(55th)
ಜ್ಞಾನಪೀಠ ಪ್ರಶಸ್ತಿ  ಅಕ್ಕಿತಂ ಅಚ್ಯುತನ್ ನಂಬೂದಿರಿ ಮಲಯಾಳಂ ಸಮಗ್ರ ಸಾಹಿತ್ಯ
2021
(56th)
 – ನೀಲಮಣಿ ಫೂಕನ್ ಅಸ್ಸಾಮಿ ಸಮಗ್ರ ಸಾಹಿತ್ಯ
2022
(57th)
ಜ್ಞಾನಪೀಠ ಪ್ರಶಸ್ತಿ  ದಾಮೋದರ ಮೌಜೋ ಕೊಂಕಣಿ ಸಮಗ್ರ ಸಾಹಿತ್ಯ
2023
(58th)
ಜ್ಞಾನಪೀಠ ಪ್ರಶಸ್ತಿ  ರಾಮಭದ್ರಾಚಾರ್ಯ ಸಂಸ್ಕೃತ ಸಮಗ್ರ ಸಾಹಿತ್ಯ
ಜ್ಞಾನಪೀಠ ಪ್ರಶಸ್ತಿ  ಗುಲ್ಜಾರ್ ಉರ್ದು ಸಮಗ್ರ ಸಾಹಿತ್ಯ

ಈ ಪುಟಗಳನ್ನೂ ನೋಡಿ

ಉಲ್ಲೇಖಗಳು

Tags:

ಜ್ಞಾನಪೀಠ ಪ್ರಶಸ್ತಿ ಜ್ಞಾನಪೀಠದ ಹಿನ್ನೆಲೆ ಮತ್ತು ವಿವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿಜ್ಞಾನಪೀಠ ಪ್ರಶಸ್ತಿ ಈ ಪುಟಗಳನ್ನೂ ನೋಡಿಜ್ಞಾನಪೀಠ ಪ್ರಶಸ್ತಿ ಉಲ್ಲೇಖಗಳುಜ್ಞಾನಪೀಠ ಪ್ರಶಸ್ತಿಭಾರತ

🔥 Trending searches on Wiki ಕನ್ನಡ:

ಸ್ವಚ್ಛ ಭಾರತ ಅಭಿಯಾನಇಸ್ಲಾಂ ಧರ್ಮಹಸ್ತ ಮೈಥುನಶ್ರೀರಂಗಪಟ್ಟಣವಿಹಾರಭ್ರಷ್ಟಾಚಾರರಾಮನಾಲಿಗೆಮಲೆನಾಡುಚಂದ್ರಗುಪ್ತ ಮೌರ್ಯಮಾನವ ಸಂಪನ್ಮೂಲ ನಿರ್ವಹಣೆವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಭಾರತೀಯ ಸಂಸ್ಕೃತಿನಾಟಕ೧೮೬೨ಗುಪ್ತ ಸಾಮ್ರಾಜ್ಯಮೈಸೂರು ದಸರಾಸಿದ್ಧಯ್ಯ ಪುರಾಣಿಕಭಾರತೀಯ ಧರ್ಮಗಳುಹಣಎಳ್ಳೆಣ್ಣೆಎಸ್.ಎಲ್. ಭೈರಪ್ಪವಡ್ಡಾರಾಧನೆಕೃಷ್ಣದೇವರಾಯಬಿ.ಟಿ.ಲಲಿತಾ ನಾಯಕ್ಅಂತರಜಾಲಭಾರತದ ಸ್ವಾತಂತ್ರ್ಯ ಚಳುವಳಿಸರ್ವಜ್ಞಮೂತ್ರಪಿಂಡಕಲ್ಯಾಣಿಬೀಚಿಎಚ್ ಎಸ್ ಶಿವಪ್ರಕಾಶ್ಬಾದಾಮಿ ಗುಹಾಲಯಗಳುಜಲ ಮೂಲಗಳುಗುರುರಾಜ ಕರಜಗಿದಾನ ಶಾಸನಅಯ್ಯಪ್ಪಕರ್ನಾಟಕದ ಮುಖ್ಯಮಂತ್ರಿಗಳುಕನ್ನಡವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆರಾಜಕುಮಾರ (ಚಲನಚಿತ್ರ)ಮಾಟ - ಮಂತ್ರಒಂದನೆಯ ಮಹಾಯುದ್ಧಸಂಸ್ಕೃತಿಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಪಾಂಡವರುಶ್ರೀನಾಥ್ದಕ್ಷಿಣ ಕನ್ನಡಶಿವಮೊಗ್ಗಕುಟುಂಬವರ್ಗೀಯ ವ್ಯಂಜನವಚನ ಸಾಹಿತ್ಯಚಿಪ್ಕೊ ಚಳುವಳಿಮಾಸಸವರ್ಣದೀರ್ಘ ಸಂಧಿಸಾತ್ವಿಕಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆಭಗವದ್ಗೀತೆಆಮ್ಲಗಳು ಮತ್ತು ಪ್ರತ್ಯಾಮ್ಲಗಳುದೀಪಾವಳಿಕೋವಿಡ್-೧೯ಕರ್ನಾಟಕದ ಸಂಸ್ಕೃತಿಜವಾಹರ‌ಲಾಲ್ ನೆಹರುಬೈಗುಳಚಿ.ಉದಯಶಂಕರ್ತಾಜ್ ಮಹಲ್ವಿನಾಯಕ ಕೃಷ್ಣ ಗೋಕಾಕಗೋಪಾಲಕೃಷ್ಣ ಅಡಿಗಬ್ಯಾಂಕ್ ಖಾತೆಗಳುವೆಂಕಟೇಶ್ವರಬಂಡಾಯ ಸಾಹಿತ್ಯರಾಮಕೃಷ್ಣ ಪರಮಹಂಸಅಶ್ವತ್ಥಮರವೃತ್ತಪತ್ರಿಕೆಮೇಯರ್ ಮುತ್ತಣ್ಣಚಿದಂಬರ ರಹಸ್ಯಅರಿಸ್ಟಾಟಲ್‌🡆 More