ಕನ್ನಡ ಸಂಧಿ

ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಯ ಬಾರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು.

    ಸಂಧಿ ಎಂದರೇನು ?

ಉದಾ : [ಹೊಸಗನ್ನಡ] =ಹೊಸ+ಕನ್ನಡ, ಹೊಸ-ಪೂರ್ವಪದ, ಕನ್ನಡ-ಉತ್ತರಪದ ಪೂರ್ವಪದ+ಉತ್ತರಪದ=ಸಂಧಿಪದ. ಇಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಮೂಲಪದಗಳು. ಪೂರ್ವಪದದ ಕೊನೆಯ ಅಕ್ಷರ ‘ಅ’ಮತ್ತು ಉತ್ತರಪದದ ಮೊದಲನೆಯ ಅಕ್ಷರ ‘ಕ್’ಸಂಧಿಸಿದಾಗ ಸಂಧಿಕಾರ್ಯ ಆಗುವುದು. ಉದಾ : ಹೊಸ(ಅ)+(ಕ್)ಕನ್ನಡ = ಹ್+ಓ+ಸ್+ಅ+ಕ್+ಅ+ನ್+ನ್+ಅ+ಡ್+ಅ. ಸಂಧಿ = ಕೂಡುವುದು. ಎಂದರೆ, ಎರಡು ವರ್ಣಗಳು ಸದ್ಗುಣಕೂಡಿ ಸಂಧಿಯಾಗುತ್ತದೆ. ಉದಾ: ಮರ=ಮ್+ಅ+ರ್+ಅ. ಎರಡು ವರ್ಣಗಳು = ಮ್+ಅ ಮತ್ತು ರ್+ಅ.

    ವಿದ್ವಾಂಸರ ಅಭಿಪ್ರಾಯ

ಸಂಧಿ ಎಂದರೆ, “ಎರಡು ಅಥವಾ ಹಲವಾರು ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ವರ್ಣಾಕ್ಷರ ಸಂಧಿ ಎಂದು ಹೆಸರು”- ಕೇಶಿರಾಜ.

  • ಬೇರೆ ಬೇರೆಯಾಗಿದ್ದ ಅಕ್ಷರಗಳನ್ನು ಕೂಡಿಸಿ ಉಚ್ಛರಿಸುವುದಕ್ಕೆ ಸಂಧಿ ಎಂದು ಹೆಸರು - ಕ್ಯೆಪಿಡಿಕಾರ.

ಸಂಧಿಗಳಲ್ಲಿ ವಿಧ

  • ಸಂಧಿಗಳಲ್ಲಿ ಎರಡು ವಿಧ.
  1. ಕನ್ನಡ ಸಂಧಿ.
  2. ಸಂಸ್ಕೃತ ಸಂಧಿ.

ಕನ್ನಡ ಸಂಧಿ

    ಕನ್ನಡ ಸಂಧಿ ಎಂದರೇನು ?
  • ಕನ್ನಡ ಕನ್ನಡ ಪದಗಳು ಕೂಡಿ ಆಗುವುದು ಕನ್ನಡ ಸಂಧಿ. ಉದಾ : ಎಳೆ+ಕರು=ಎಳೆಕರು. ಇಲ್ಲಿ ಎರಡೂ ಕನ್ನಡ+ಕನ್ನಡ ಪದಗಳು ಸೇರಿ ಸಂಧಿಯಾಗಿದೆ.
  • ಒಂದು ಕನ್ನಡ ಪದ, ಇನ್ನೊಂದು ಸಂಸ್ಕೃತ ಪದ ಕೂಡಿ ಸಂಧಿಯಾದರೂ ಕನ್ನಡ ಸಂಧಿಯಾಗಬಹುದು.
    ಕನ್ನಡ ಸಂಧಿಗಳು ಯಾವುವು?
  • ಲೋಪಾಗಮಾದೇಶ ಎಂದು ಕನ್ನಡದ ಮೂರು ಸಂಧಿಗಳು. : ಲೋಪ-ಆಗಮ-ಆದೇಶ
  • ಇವುಗಳಲ್ಲಿ ಲೋಪ ಮತ್ತು ಆಗಮ ಸಂಧಿಗಳು ಕನ್ನಡದ ಸ್ವರಸಂದಿಗಳು, ಆದೇಶ ಸಂಧಿಯನ್ನು ಕನ್ನಡದ ವ್ಯಂಜನ ಸಂಧಿಯೆಂದು ಕರೆಯುತ್ತಾರೆ.
  • ಲೋಪಸಂಧಿ
  • ಆಗಮ ಸಂಧಿ
  • ಆದೇಶ ಸಂಧಿ

ಸ್ವರ ಸಂಧಿ

ಸ್ವರಸಂಧಿ ಎಂದರೇನು? ಸ್ವರಸಂಧಿ ಎಂದರೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾದರೆ ಸ್ವರಸಂಧಿ. ಎಂದರೆ ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಮೊದಲನೆಯ ಅಕ್ಷರ ಸಂಧಿಸಿದಾಗ ಸಂಧಿ ಆಗುವುದು. ಇದನ್ನು ಸಂಧಿಕಾರ್ಯವೆನ್ನುವರು. ಉದಾ: ಮಾತು+ಇಲ್ಲ=ಮಾತುವಿಲ್ಲ- ಮಾತಿಲ್ಲ (ಸಂಧಿ ವಿಕಲ್ಪ) ಉ+e (ಸಂಧಿಪದ ಸಂದರ್ಭ) ಮರ+ಅನ್ನು = ಮರವನ್ನು. ಅ+ಅ(ಸಂಧಿಪದ ಸಂದರ್ಭ) :

ಕನ್ನಡ ಸಂಧಿಕಾರ್ಯ

ಲೋಪ-ಆಗಮ-ಆದೇಶ, ಈ ಮೂರೂ ಸಂಧಿಗಳು ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಮೊದಲ ಅಕ್ಷರಗಳ ಸಂಧಿಸುವಿಕೆಯಲ್ಲಿ ನಡೆಯುತ್ತದೆ.

  1. ಸಂಧಿ ಮಾಡುವಾಗ - ಪೂರ್ವಪದದಲ್ಲಿಯ ಒಂದು ಅಕ್ಷರವು ಸಂಧಿಪದದಲ್ಲಿ ಇಲ್ಲದಿದ್ದರೆ - ಲೋಪಸಂಧಿ. ಉದಾ: ಮಾತಿಲ್ಲ= ಮಾತು+ಇಲ್ಲ=ಇಲ್ಲಿ ‘ಉ’ ಸ್ವರ ಲೋಪ.
  2. ಸಂಧಿ ಮಾಡುವಾಗ - ಪೂರ್ವಪದ ಮತ್ತು ಉತ್ತರ ಪದಗಳಲ್ಲಿಯ ಎಲ್ಲ ಅಕ್ಷರಗಳು ಸಂಧಿಪದದಲ್ಲಿ ಇದ್ದು ಹೊಸದಾಗಿ ಒಂದು ಅಕ್ಷರ ಸಂಧಿಪದದಲ್ಲಿ ಬಂದಿದ್ದರೆ-ಆಗಮಸಂಧಿ. ಉದಾ: ಮನೆ+ಅನ್ನು = ಮನೆಯನ್ನು = ‘ಯ್’ ವ್ಯಂಜನ ಆಗಮ.
  3. ಸಂಧಿ ಮಾಡುವಾಗ - ಉತ್ತರ ಪದದ ಆದಿಯಲ್ಲಿಯ ಒಂದು ವ್ಯಂಜನವು ಸಂಧಿಪದದಲ್ಲಿ ಲೋಪವಾಗಿ ಆ ಸ್ಥಳದಲ್ಲಿ ಹೊಸದಾಗಿ ಮತ್ತೊಂದು ವ್ಯಂಜನವು ಆಗಮವಾಗಿ ಬಂದರೆ - ಆದೇಶ ಸಂಧಿ. ಉದಾ: ಮಳೆ+ಕಾಲ=ಮಳೆಗಾಲ=‘ಕ್’ವ್ಯಂಜನ ಲೋಪ. ‘ಗ್’ ವ್ಯಂಜನ ಆದೇಶ.
  4. ಎಲ್ಲಾ ಅಕ್ಷರಗಳು ಇದ್ದಷ್ಟೇ ಸಂಧಿಪದದಲ್ಲಿ ಇರುವುದು ‘ಪ್ರಕೃತಿಭಾವ’ / ವಿಸಂಧಿ.

ಸಂಧಿಯಾಗುವ ಸ್ಥಳಗಳು

ಸಂಧಿಯಾಗುವ ಸ್ಥಳಗಳಲ್ಲಿ ಎರಡು ವಿಧ

  1. ಪದಮಧ್ಯ ಸಂಧಿ : ಪ್ರಕೃತಿ+ಪ್ರತ್ಯಯಗಳ ಸೇರುವಿಕೆಯಿಂದ ಪದವಾಗುತ್ತದೆ. ಇದರ ಮಧ್ಯದಲ್ಲಿ ಉಂಟಾಗುವ ಸೇರುವಿಕೆಯೇ ಪದಮಧ್ಯ ಸಂಧಿ. ಉದಾ: ಮನೆಯಿಂದ=ಮನೆ+ಇಂದ, ನೋಡು+ಅ+ಅನ್ನು=ನೋಟವನ್ನು. ಮಾತು+ಒಳ್=ಮಾತೊಳ್.
  2. ಪದಾಂತ್ಯ ಸಂಧಿ : ಒಂದು ಪದದ ಮುಂದೆ ಇನ್ನೊಂದು ಪದವೋ, ಪ್ರತ್ಯಯವೋ ಸೇರಿದರೆ ಆ ಸಂಧಿಯನ್ನು ಪದಾಂತ್ಯ ಸಂಧಿಯೆನ್ನುತ್ತಾರೆ. ವಾಕ್ಯದಲ್ಲಿ ಎರಡು ಪದಗಳ ಡುವೆ ಆಗುವ ಸಂಧಿ. ಉದಾ: ಮರ+ಎಂಬಲ್ಲಿ=ಮರವೆಂಬಲ್ಲಿ, ಶಿಖರ+ಅನ್ನು+ಏರಿ=ಶಿಖರವನ್ನೇರಿ. [ಪದಮಧ್ಯೆ ಸಂಧಿ ನಿತ್ಯವೂ ಬರುವುದು. ಪದಾಂತ್ಯ ಸಂಧಿ ವಿಕಲ್ಪವಾಗಿ ಬರುವುದು. ವಿಕಲ್ಪ=ಸಂಧಿಮಾಡಬಹುದು/ಬಿಡಬಹುದು]


ಉಲ್ಲೇಖ

4. ಕನ್ನಡ ಸಂಧಿಗಳು

Tags:

ಕನ್ನಡ ಸಂಧಿ ಸಂಧಿಗಳಲ್ಲಿ ವಿಧಕನ್ನಡ ಸಂಧಿ ಸ್ವರ ಸಂಧಿಕನ್ನಡ ಸಂಧಿ ಕಾರ್ಯಕನ್ನಡ ಸಂಧಿ ಸಂಧಿಯಾಗುವ ಸ್ಥಳಗಳುಕನ್ನಡ ಸಂಧಿ ಉಲ್ಲೇಖಕನ್ನಡ ಸಂಧಿಸಂಧಿ

🔥 Trending searches on Wiki ಕನ್ನಡ:

ವಿಷ್ಣುದಿನೇಶ್ ಕಾರ್ತಿಕ್ಕರ್ನಾಟಕ ಸ್ವಾತಂತ್ರ್ಯ ಚಳವಳಿಆಹಾರಮಲ್ಲಿಗೆಜನಪದ ನೃತ್ಯಗಳುಅಕ್ಬರ್ವಿಜಯನಗರ ಸಾಮ್ರಾಜ್ಯಕೈಗಾರಿಕೆಗಳುಹರಕೆಪಾಂಡವರುಮೈಸೂರು ಸಂಸ್ಥಾನಚುನಾವಣೆತತ್ಸಮ-ತದ್ಭವಭಾರತೀಯ ಮೂಲಭೂತ ಹಕ್ಕುಗಳುಭಾರತದ ಸರ್ವೋಚ್ಛ ನ್ಯಾಯಾಲಯಶಬ್ದಮಣಿದರ್ಪಣಬಂಡಾಯ ಸಾಹಿತ್ಯವಾಯು ಮಾಲಿನ್ಯಮೊದಲನೆಯ ಕೆಂಪೇಗೌಡಟೊಮೇಟೊಎ.ಪಿ.ಜೆ.ಅಬ್ದುಲ್ ಕಲಾಂಭಾರತದ ಸ್ವಾತಂತ್ರ್ಯ ದಿನಾಚರಣೆಯೋಗವಾಹಹಳೇಬೀಡುಪ್ರತಿಭಾ ನಂದಕುಮಾರ್ಭಾರತದ ತ್ರಿವರ್ಣ ಧ್ವಜಜಾತ್ರೆದಾಸವಾಳರೇಡಿಯೋಗೋಕರ್ಣಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಉತ್ತರ ಕರ್ನಾಟಕಇಮ್ಮಡಿ ಪುಲಿಕೇಶಿವಜ್ರಮುನಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಪುಸ್ತಕಸತ್ಯ (ಕನ್ನಡ ಧಾರಾವಾಹಿ)ಬಾದಾಮಿಕೊಲ್ಲೂರು ಮೂಕಾಂಬಿಕಾ ದೇವಸ್ಥಾನಲಕ್ಷ್ಮಿತೆಂಗಿನಕಾಯಿ ಮರಶಬ್ದಯಾಣರಾಜ್ಯಸಭೆಕನ್ನಡ ಚಿತ್ರರಂಗಹೊಂಗೆ ಮರಬ್ಯಾಂಕ್ಕರ್ನಾಟಕ ವಿಧಾನ ಪರಿಷತ್ಭ್ರಷ್ಟಾಚಾರಕರ್ನಾಟಕ ವಿಶ್ವವಿದ್ಯಾಲಯದ್ವಾರಕೀಶ್ಅರ್ಥ ವ್ಯತ್ಯಾಸಯಶವಂತ ಚಿತ್ತಾಲಪದಬಂಧಕನ್ನಡ ಸಂಧಿಎ.ಆರ್.ಕೃಷ್ಣಶಾಸ್ತ್ರಿಎರಡನೇ ಮಹಾಯುದ್ಧಕಾವ್ಯಮೀಮಾಂಸೆರಾಮಮಹಾಭಾರತಶಕುನಕಾಲಾಯ ತಸ್ಮೈ ನಮಃ (ಚಲನಚಿತ್ರ)ರಾಶಿಶಾತವಾಹನರುಮನುಸ್ಮೃತಿಚಿನ್ನರಾಜಕುಮಾರ (ಚಲನಚಿತ್ರ)ಮಂತ್ರಾಲಯಕನ್ನಡ ಸಾಹಿತ್ಯ ಪರಿಷತ್ತುಕರ್ಣಾಟಕ ಸಂಗೀತಜೋಡು ನುಡಿಗಟ್ಟುಭಾರತದ ಇತಿಹಾಸಜಾತಕ ಕಥೆಗಳುಭಾರತದ ಸಂವಿಧಾನದ ೩೭೦ನೇ ವಿಧಿಮಹಾತ್ಮ ಗಾಂಧಿ🡆 More