ಯೂಕ್ಲಿಡ್: ಗಣಿತಜ್ಞ

ಯೂಕ್ಲಿಡ್ ಒಬ್ಬ ಮಹಾನ್ ಗಣಿತಜ್ಞನಾಗಿದ್ದು ಅವರನ್ನು ಜ್ಯಾಮಿತಿಯ ಪಿತಾಮಹ ಎಂದು ಉಲ್ಲೇಖಿಸಲ್ಪಡಲಾಗುತ್ತದೆ.

'ರೇಖಾಗಣಿತದ ತಂದೆ' ಎಂದು ಹೆಸರುವಾಸಿಯಾದ ಯೂಕ್ಲಿಡ್ ರೇಖಾಗಣಿತ ಕಲಿಯಲು ಯಾವುದೇ ರಾಜಮಾರ್ಗವಿಲ್ಲ ಎಂಬುದಾಗಿ ಹೇಳಿದ್ದಾರೆ. 'ಯೂಕ್ಲಿಡ್' ಎನ್ನುವುದು ಗ್ರೀಕ್ ಹೆಸರಿನ ಆಂಗ್ಲೀಕೃತ ಆವೃತ್ತಿಯಾಗಿದ್ದು ಇದರ ಅರ್ಥ ಪ್ರಖ್ಯಾತ ಅಥವಾ ಖ್ಯಾತಿ ಎಂಬುದಾಗಿದೆ.

ಯೂಕ್ಲಿಡ್
ಯೂಕ್ಲಿಡ್: ಜೀವನ, ಶಿಕ್ಷಣ, ಎಲಿಮೆಂಟ್ಸ್ ನ  ಸಂಪುಟಗಳ ವಿವರ
ಯೂಕ್ಲಿಡ್
Eukleides of Alexandria
ಜನನMid-4th century BC
ಮರಣMid-3rd century BC
ವಾಸಸ್ಥಳಅಲೆಕ್ಸಾಂಡ್ರಿಯಾ, ಹೆಲೆನಿಸ್ಟಿಕ್ ಈಜಿಪ್ಟ್
ಕಾರ್ಯಕ್ಷೇತ್ರಗಣಿತ
ಪ್ರಸಿದ್ಧಿಗೆ ಕಾರಣ
  • Euclidean geometry
  • Euclid's Elements
  • Euclidean algorithm
ಯೂಕ್ಲಿಡ್: ಜೀವನ, ಶಿಕ್ಷಣ, ಎಲಿಮೆಂಟ್ಸ್ ನ  ಸಂಪುಟಗಳ ವಿವರ
ಯೂಕ್ಲಿಡ್ ಒಂದು ಷಡ್ಭುಜಾಕೃತಿಯನ್ನು ಹೇಗೆ ನಿರ್ಮಿಸಿದನು ಎಂಬುದನ್ನು ತೋರಿಸುವ ಒಂದು ಅನಿಮೇಷನ್ (ಪುಸ್ತಕ IV, ಪ್ರೊಪೊಸಿಷನ್ 15). "ಎಲಿಮೆಂಟ್ಸ್" ನಲ್ಲಿನ ಪ್ರತಿ ಎರಡು ಆಯಾಮದಮೇಲೆ ಮೂರು ಆಯಾಮದ ಘನವನ್ನು ಕೈವಾರ ಮತ್ತು ನೇರ-ಅಳತೆಪಟ್ಟಿಯನ್ನು ಮಾತ್ರ ಬಳಸಿ ಹೇಗೆ ನಿರ್ಮಿಸಬಹುದು ಎಂಬುದನ್ನು ತೋರಿಸುವ ಚಲನಾಕೃತಿ.

ಯೂಕ್ಲಿಡ್: ಗಣಿತಜ್ಞ

ಯೂಕ್ಲಿಡ್ ರವರು ಅಲೆಕ್ಸಾಂಡ್ರಿಯದಲ್ಲಿ ಹುಟ್ಟಿದರು.ಅವರು ಒಂದನೇ ಟಾಲೆಮಿಯ ಕಾಲದಲ್ಲಿ ಅಲೆಕ್ಸಾಂಡ್ರಿಯದಲ್ಲಿ ಸಕ್ರಿಯರಾಗಿದ್ದರು. ಯೂಕ್ಲಿಡ್ ರವರ 'ಅಂಶಗಳು' ಗಣಿತಶಾಸ್ತ್ರದ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಕಾರ್ಯಗಳಲ್ಲಿ ಒಂದಾಗಿದೆ, ೧೯ನೇ ಶತಮಾನದ ಅಂತ್ಯದವರೆಗೂ ಅದರ ಪ್ರಕಟಣೆಯ ಸಮಯದಿಂದ ಗಣಿತಶಾಸ್ತ್ರವನ್ನು ಕಲಿಸಲು ಅದೇ ಪಠ್ಯಪುಸ್ತಕವನ್ನು ಉಪಯೋಗಿಸುತ್ತಿದ್ದರು. ಯೂಕ್ಲಿಡ್ನ ಅಂಶಗಳು ಈಗ ಯೂಕ್ಲಿಡ್ನ ರೇಖಾಗಣಿತವನ್ನು ಸಣ್ಣ ಗುಂಪುಗಳ ಮೂಲತ್ವಗಳಿಂದ ಕರೆಯುವ ಪ್ರಮೇಯಗಳನ್ನು ನಿರ್ಣಯಿಸಿತು.ಅವರು ರೇಖಾಗಣಿತದ ಬಗೆಗೆ ತಮಗೆ ಲಭ್ಯವಿದ್ದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ಹದಿಮೂರು ಪುಸ್ತಕಗಳ ರೂಪದಲ್ಲಿ ವ್ಯವಸ್ಥಿತವಾಗಿ ಬರೆದಿಟ್ಟ ಮಹಾವಿಜ್ಞಾನಿ. ಈ ಪುಸ್ತಕಗಳನ್ನು 'ಎಲಿಮೆಂಟ್ಸ್' ಎಂದು ಕರೆಯಲಾಗಿದೆ. ಯೂಕ್ಲಿಡ್ನ ಬಳಿಕ ಸುಮಾರು ೨೩೦೦ ವರ್ಷಗಳಿಂದ ಶಾಲೆಗಳಲ್ಲಿ ರೇಖಾಗಣಿತದ ಪಾಠ ಹೇಳುತ್ತಿರುವುದು ಯೂಕ್ಲಿಡ್ನ ಪುಸ್ತಕಗಳನ್ನು ಆಧರಿಸಿಯೇ.

ಯೂಕ್ಲಿಡ್: ಗಣಿತಜ್ಞ

ಯೂಕ್ಲಿಡ್ ಪ್ಲಾಟೊ ಸ್ಥಾಪಿಸಿದ ಅಕಾಡೆಮಿಯಲ್ಲಿ ಶಿಕ್ಷಣ ಪಡೆದ.ಗಣಿತ ಕಲಿಯಲು ಅಲ್ಲಿ ಅಪಾರ ಅವಕಾಶವಿರುತ್ತಿತ್ತು. ಬಳಿಕ ಕೆಲವು ರಾಜಕೀಯ ಕಾರಣಗಳಿಂದ ಅಲೆಗ್ಸಾಂಡ್ರಿಯ ಸೇರಿದ. ಟಾಲೆಮಿ ಅಲ್ಲಿ ರಾಜನಾಗಿದ್ದ.ಅವನಿಗೆ ರೇಖಾಗಣಿತ ಕಲಿಸುವ ಅವಕಾಶ ಯೂಕ್ಲಿಡ್ಗೆ ಒದಗಿತ್ತು.ಅಲೆಗ್ಸಾಂಡ್ರಿಯದಲ್ಲೆಲ್ಲಾ ಯೂಕ್ಲಿಡ್ ಪ್ರಸಿದ್ಧನಾಗಿದ್ದ. ಯೂಕ್ಲಿಡ್ಗೆ ದ್ಯುತಿಶಾಸ್ತ್ರದಲ್ಲಿಯೂ ಸಾಕಷ್ಟು ಜ್ಞಾನವಿತ್ತು.

ಯೂಕ್ಲಿಡ್: ಗಣಿತಜ್ಞ

ಕ್ರಿ.ಶ. ೧೨ ನೆಯ ಶತಮಾನದಲ್ಲಿ ಯೂಕ್ಲಿಡ್ನ ಪುಸ್ತಕಗಳು ಅರೇಬಿಕ್ ಭಾಷೆಯಿಂದ ಲ್ಯಾಟಿನ್ ಗೆ ತರ್ಜುಮೆಗೊಂಡವು. ಹದಿಮೂರು ಸಂಪುಟಗಳ 'ಎಲಿಮೆಂಟ್ಸ್' ನಲ್ಲಿ ಮೊದಲ ಸಂಪುಟ ಬಿಂದು, ರೇಖೆಗಳು , ವೃತ್,ತ್ರಿಭುಜಗಳು ಮೊದಲಾದವನ್ನು ಕುರಿತಿದೆ. ಎರಡನೆಯ ಸಂಪುಟದಲ್ಲಿ ರೇಖಾಗಣಿತದ ಆಕೃತಿಗಳನ್ನು ರಚಿಸುವ ವಿಧಾನಗಳನ್ನು ಕುರಿತು ತಿಳಿಸಲಾಗಿದೆ. ಮೂರು , ನಾಲ್ಕನೆಯ ಸಂಪುಟಗಳು ವೃತ್ತಗಳ ಬಗ್ಗೆ ವಿವರಗಳನ್ನು ಕೊಡುತ್ತವೆ. ಐದು, ಆರನೆಯ ಸಂಪುಟಗಳ ಪ್ರಮಾಣ ಮತ್ತು ಅನುಪಾತದ ನಿಯಮಗಳು ಹಾಗೂ ಅವುಗಳ ಅನ್ವಯ ಕುರಿತು ಹೇಳಿದರೆ ೧೧,೧೨ ಮತ್ತು ೧೩ ನೆಯ ಸಂಪುಟಗಳು ಘನ ರೇಖಾಗಣಿತ ಕುರಿತಿದೆ. ಉಳಿದಂತೆ ಈ ಪುಸ್ತಕಗಳು ಘನ, ಪಿರಮಿಡ್, ಗೋಳ ಇತ್ಯಾದಿ ಘನಾಕೃತಿಗಳ ಬಗ್ಗೆ ಮಾಹಿತಿ ನೀಡುತ್ತವೆ. ಅಲ್ಬರ್ಟ್ ಐನ್ಸ್ಟೈನ್ ಎಂಬ ಪ್ರಖ್ಯಾತ ವಿಜ್ಞಾನಿ ಯೂಕ್ಲಿಡ್ನ ರೇಖಾಗಣಿತದಿಂದ ಪ್ರಭಾವಿತನಾದ. ಜರ್ಮನ್ ಗಣಿತಜ್ಞ ರೀಮಾನ್ ಸಹ ಯೂಕ್ಲಿಡ್ ಗಣಿತಜ್ಞವನ್ನು ಅಭ್ಯಸಿಸಿದ್ದ.ಯೂಕ್ಲಿಡ್ ಇಂತಹ ಒಬ್ಬ ಮಹಾ ವಿಜ್ಞಾನಿ.

ಯೂಕ್ಲಿಡ್ನ ಕಳೆದುಹೋದ ಕೃತಿಗಳು

  • ಕೋನಿಕ್ಸ್.
  • ಪೊರ್ಸಿಮ್ಸ್.
  • ಸೂಡೊರಿಯಾ.
  • ಸರ್ಫೇಸ್ ಲೋಕೈ.
  • ಯಂತ್ರಶಾಸ್ತ್ರದಲ್ಲಿ ನ ಹಲವಾರು ಕೃತಿಗಳು.

ಇತರ ಕೃತಿಗಳು

ಯೂಕ್ಲಿಡ್: ಜೀವನ, ಶಿಕ್ಷಣ, ಎಲಿಮೆಂಟ್ಸ್ ನ  ಸಂಪುಟಗಳ ವಿವರ 
ಯೂಕ್ಲಿಡ್ ನ ನಿಯಮಿತ ಡಾಡೆಕಾಹೆಡ್ರನ್ ನಿರ್ಮಾಣ .
ಯೂಕ್ಲಿಡ್: ಜೀವನ, ಶಿಕ್ಷಣ, ಎಲಿಮೆಂಟ್ಸ್ ನ  ಸಂಪುಟಗಳ ವಿವರ 
ಒಂದು ಘನ ಅಂಚುಗಳ ಮೇಲೆ ಮುಖಗಳನ್ನು ಇರಿಸುವ ಮೂಲಕ ಡಾಡೆಕಾಹೆಡ್ರನ್ ನಿರ್ಮಾಣ.
  • ಡಾಟಾ.
  • ಕ್ಯಾಟೊಪ್ಟ್ರಿಕ್ಸ್.
  • ಡಿವಿಸ್ಯನ್ಸ್ ಆಫ್ ಫಿಗರ್.
  • ಫಿನೋಮಿನಾ.
  • ಆಪ್ಟಿಕ್ಸ್(ದೃಗ್ವಿಜ್ಞಾನ).

ಯೂಕ್ಲಿಡ್: ಗಣಿತಜ್ಞ

ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ESA) ಯೂಕ್ಲಿಡ್ ಗಗನನೌಕೆಯನ್ನು ಅವರ ಗೌರವಾರ್ಥವಾಗಿ ಹೆಸರಿಸಲಾಯಿತು.

ಯೂಕ್ಲಿಡ್: ಗಣಿತಜ್ಞ

  • ಯೂಕ್ಲಿಡಿಯನ್ ಜಿಯೋಮೆಟ್ರಿ.
  • ಯೂಕ್ಲಿಡ್ಸ್ ಎಲಿಮೆಂಟ್ಸ್.
  • ಯೂಕ್ಲಿಡಿಯನ್ ಆಲ್ಗೋರಿಥಮ್.

ಯೂಕ್ಲಿಡ್: ಗಣಿತಜ್ಞ

ಯೂಕ್ಲಿಡ್ ರವರು ಅಲೆಕ್ಸಾಂಡ್ರಿಯದಲ್ಲಿ(ಈಜಿಪ್ಟ್‌) ಮರಣ ಹೊಂದಿದರು.

ಯೂಕ್ಲಿಡ್: ಗಣಿತಜ್ಞ

Tags:

ಯೂಕ್ಲಿಡ್ ಜೀವನಯೂಕ್ಲಿಡ್ ಶಿಕ್ಷಣಯೂಕ್ಲಿಡ್ ಎಲಿಮೆಂಟ್ಸ್ ನ ಸಂಪುಟಗಳ ವಿವರಯೂಕ್ಲಿಡ್ ಗೌರವಯೂಕ್ಲಿಡ್ ಹೆಸರುವಾಸಿಯಾಗಿದ್ದುಯೂಕ್ಲಿಡ್ ನಿಧನಯೂಕ್ಲಿಡ್ ಉಲ್ಲೇಖಯೂಕ್ಲಿಡ್ರೇಖಾಗಣಿತ

🔥 Trending searches on Wiki ಕನ್ನಡ:

ಬೆಳಗಾವಿಆರ್ಯಭಟ (ಗಣಿತಜ್ಞ)ಕೊ. ಚನ್ನಬಸಪ್ಪಚಾಮರಾಜನಗರಸಮಾಜ ವಿಜ್ಞಾನಅಮೇರಿಕ ಸಂಯುಕ್ತ ಸಂಸ್ಥಾನಲಕ್ಷ್ಮಿಓಂ (ಚಲನಚಿತ್ರ)ಕಲಿಯುಗಕ್ಷಯರಮಣ ಮಹರ್ಷಿಮಾವುಮಧ್ವಾಚಾರ್ಯಸೂರ್ಯವಂಶ (ಚಲನಚಿತ್ರ)ತಿಂಥಿಣಿ ಮೌನೇಶ್ವರಭಾರತದಲ್ಲಿ ಪಂಚಾಯತ್ ರಾಜ್ಬಸವೇಶ್ವರಆದೇಶ ಸಂಧಿಭೂತಕೋಲಬೆಳಗಾವಿ ಜಿಲ್ಲೆಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಪರಶುರಾಮನಗರೀಕರಣರಜಪೂತವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಕಾವೇರಿ ನದಿರಾಮ ಮಂದಿರ, ಅಯೋಧ್ಯೆಸರ್ಪ ಸುತ್ತುಗೋಲ ಗುಮ್ಮಟಪ್ಯಾರಾಸಿಟಮಾಲ್ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳುಉಡಕೃಷ್ಣಹಾವೇರಿದೂರದರ್ಶನಹೈದರಾಲಿಯುಗಾದಿಶ್ರೀವಿಜಯಶಂಕರ್ ನಾಗ್ನಾಕುತಂತಿವಿಷ್ಣುವರ್ಧನ್ (ನಟ)ಸಮುದ್ರ ಮಂಥನಇಂಡಿಯನ್ ಪ್ರೀಮಿಯರ್ ಲೀಗ್ಜವಹರ್ ನವೋದಯ ವಿದ್ಯಾಲಯಶಬ್ದಮಣಿದರ್ಪಣಭಾರತದ ಸಂಸತ್ತುಮೂಲವ್ಯಾಧಿಯು.ಆರ್.ಅನಂತಮೂರ್ತಿಅಲಾವುದ್ದೀನ್ ಖಿಲ್ಜಿಮಲೈ ಮಹದೇಶ್ವರ ಬೆಟ್ಟಮಹಾರಾಣಿ ವಿಕ್ಟೋರಿಯಗುರುಸಂವಹನಕನ್ನಡ ಬರಹಗಾರ್ತಿಯರುಮೊಘಲ್ ಸಾಮ್ರಾಜ್ಯಉತ್ತರ ಕರ್ನಾಟಕವಿಜಯನಗರಅರ್ಥಶಾಸ್ತ್ರಚಿಪ್ಕೊ ಚಳುವಳಿಭಾರತೀಯ ಮೂಲಭೂತ ಹಕ್ಕುಗಳುಬೃಹತ್ ಬೆಂಗಳೂರು ಮಹಾನಗರ ಪಾಲಿಕೆದ್ವಾರಕೀಶ್ಕನ್ನಡ ರಾಜ್ಯೋತ್ಸವಶಿಕ್ಷಣ ಮಾಧ್ಯಮಚೆನ್ನಕೇಶವ ದೇವಾಲಯ, ಬೇಲೂರುಎ.ಪಿ.ಜೆ.ಅಬ್ದುಲ್ ಕಲಾಂದಸರಾಸಾಂಗತ್ಯದೇವದಾಸಿಭಾರತದಲ್ಲಿ ತುರ್ತು ಪರಿಸ್ಥಿತಿಪಾಟೀಲ ಪುಟ್ಟಪ್ಪಕನಕದಾಸರುಕರ್ಬೂಜಮುಳ್ಳುಹಂದಿಗರ್ಭಧಾರಣೆಕರ್ನಾಟಕದ ಜಿಲ್ಲೆಗಳು🡆 More