ಅರ್ನೆಸ್ಟ್ ರುದರ್‍ಫೋರ್ಡ್

ಅರ್ನೆಸ್ಟ್ ರುದರ್‌ಫೋರ್ಡ್ ರವರು (೩೦ ಆಗಸ್ಟ್ ೧೮೭೧ - ೧೯ ಅಕ್ಟೋಬರ್ ೧೯೩೭) ಪರಮಾಣು ಭೌತಶಾಸ್ತ್ರದ ಪಿತಾಮಹನೆಂದು ಹೆಸರುವಾಸಿಯಾದವರು.

ಇವರು ಪರಮಾಣುವಿನ ಮೂಲಸ್ವರೂಪವನ್ನು ನಿರೂಪಿಸಿದವರಲ್ಲಿ ಮೊದಲಿಗರು.

ಅರ್ನೆಸ್ಟ್ ರುದರ್‍ಫೋರ್ಡ್
ಅರ್ನೆಸ್ಟ್ ರುದರ್‍ಫೋರ್ಡ್
ಅರ್ನೆಸ್ಟ್ ರುದರ್‍ಫೋರ್ಡ್
ಜನನಅಗಸ್ಟ್ 30, 1871
ಬ್ರೈಟ್‌ವಾಟರ್, ನ್ಯೂಜಿಲ್ಯಾಂಡ್
ಮರಣOctober 19, 1937
ಕೆಂಬ್ರಿಡ್ಜ್, ಇಂಗ್ಲೆಂಡ್
ವಾಸಇಂಗ್ಲೆಂಡ್, ಕೆನಡ
ರಾಷ್ಟ್ರೀಯತೆನ್ಯೂಜಿಲ್ಯಾಂಡ್
ಕಾರ್ಯಕ್ಷೇತ್ರಗಳುಭೌತಶಾಸ್ತ್ರಜ್ಞ
ಸಂಸ್ಥೆಗಳುಮ್ಯಾಕ್ ಗಿಲ್ ವಿಶ್ವವಿದ್ಯಾಲಯ,ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ
ಅಭ್ಯಸಿಸಿದ ಸಂಸ್ಥೆಕ್ಯಾಂಟರ್‌ಬರಿ ವಿಶ್ವವಿದ್ಯಾಲಯ, ಕೆಂಬ್ರಿಡ್ಜ್ ವಿಶ್ವವಿದ್ಯಾಲಯ
ಡಾಕ್ಟರೆಟ್ ಸಲಹೆಗಾರರುಜೆ.ಜೆ.ಥಾಮ್ಸನ್
ಡಾಕ್ಟರೆಟ್ ವಿದ್ಯಾರ್ಥಿಗಳುನೀಲ್ಸ್ ಬೋಹ್ರ್,ಜೇಮ್ಸ್ ಚಾಡ್ವಿಕ್
ಪ್ರಸಿದ್ಧಿಗೆ ಕಾರಣಪರಮಾಣು ಭೌತಶಾಸ್ತ್ರದ ಪಿತಾಮಹ,ರುದರ್‌ಫೋರ್ಡ್ ಮಾದರಿ,ರುದರ್‌ಫೋರ್ಡ್ ಚದುರುವಿಕೆ,ಪ್ರೊಟಾನ್ ನ ಕಂಡುಹಿಡಿಯುವಿಕೆ
ಗಮನಾರ್ಹ ಪ್ರಶಸ್ತಿಗಳುರಸಾಯನಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ-೧೯೦೮

ಜೀವನ ಚರಿತ್ರೆ

ಅರ್ನೆಸ್ಟ್ ರುದರ್ ಫೋರ್ಡ್ ನ್ಯೂಜಿಲ್ಯಾಂಡಿನ ಪ್ರಖ್ಯಾತ ವಿಜ್ಞಾನಿ. ಇವರು ೧೮೭೧ ರ ಆಗಸ್ಟ್ ೩೦ ರಂದು ಜನಿಸಿದರು. ರುದರ್‌ಫೋರ್ಡ್‌ರವರು ನ್ಯೂಜಿಲ್ಯಾಂಡ್‍ನ ನೆಲ್ಸನ್ ಎಂಬ ಊರಿನಲ್ಲಿ ಜನಿಸಿದರು. ಮಾಂಟ್ರಿಯಲ್, ಕೆಂಬ್ರಿಡ್ಜ್, ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯಗಳಲ್ಲಿ ಕೆಲಸಮಾಡಿದರು.೧೯೦೩ರಲ್ಲಿ ಫೆಲೋ ಅಫ್ ರಾಯಲ್ ಸೊಸೈಟಿ ಆಗಿ ಆಯ್ಕೆಯಾದರು. ೧೯೦೮ರಲ್ಲಿ ರಸಾಯನಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದರು.

ಚಿಕ್ಕಂದಿನಿಂದಲೂ ಇವರಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿಯಿತ್ತು. ಇವನ ಆರಂಭದ ಸಂಶೋಧನಾ ವಲಯಗಳು ‘ಉಚ್ಚ ಆವೃತ್ತಿ ವಿಸರ್ಜನೆಗಳ ಮೂಲಕ ಕಬ್ಬಿಣದ ಕಾಂತೀಕರಣ’ (1894, ಮ್ಯಾಗ್ನೆಟೈಸೇಶನ್ ಆಫ್ ಐರನ್ ಬೈ ಹೈ ಫ್ರೀಕ್ವೆನ್ಸಿ ಡಿಸ್ಚಾರ್ಜಸ್) ಮತ್ತು ‘ಕಾಂತೀಯ ಸ್ನಿಗ್ಧತೆ’ (1896, ಮ್ಯಾಗ್ನೆಟಿಕ್ ವಿಸ್ಕಾಸಿಟಿ). ವಿದ್ಯಾರ್ಥಿ ವೇತನ ಪಡೆದು ಕ್ಯಾವೆಂಡಿಶ್ ಲ್ಯಾಬೊರೇಟರಿ ಟ್ರಿನಿಟಿ ಕಾಲೇಜ್ ಕೇಂಬ್ರಿಜ್ಜಿಗೆ ಪ್ರವೇಶಗಳಿಸಿದ (1895). ಅಲ್ಲಿ ಮೊದಲ ಬಾರಿಗೆ ಯಶಸ್ವೀ ನಿಸ್ತಂತು ಪ್ರೇಷಣೆ (ವೈರ್‌ಲೆಸ್ ಟ್ರಾನ್ಸ್‌ಮಿಶನ್) ಸಾಧಿಸಿದ-3.2 ಕಿಮೀಗಳಿಗಿಂತಲೂ ಹೆಚ್ಚು ದೂರಕ್ಕೆ. ಜೆ.ಜೆ. ತಾಮ್ಸನ್‌ನ (1856-1940) ಭವ್ಯ ಧುರೀಣತ್ವದಲ್ಲಿ ಮೂಲಭೂತ ಸಂಶೋಧನೆ ಮಾಡಿ ಈತ ಯುರೇನಿಯಮ್ ಸೂಸುವ ವಿಕಿರಣದಲ್ಲಿ ಮೂರು ಬಗೆಗಳಿರುವುದನ್ನು ಆವಿಷ್ಕರಿಸಿದ. ಈ ಕಿರಣಗಳಲ್ಲಿ ಕೆಲವು ಆಲ್ಫಾ ಕಿರಣಗಳಿದ್ದು ಇನ್ನು ಕೆಲವು ಬೀಟಾ ಕಿರಣಗಳು ಮತ್ತು ಗ್ಯಾಮ ತರಂಗಗಳು ಎಂದು ರುದರ್‌ಫೋರ್ಡ್ ಕರೆದರು. ಆಲ್ಫಾ ಕಿರಣಗಳ ನೆರವಿನಿಂದ ಪರಮಾಣುವನ್ನು ಅಭ್ಯಾಸ ಮಾಡಿ ಅದರ ಬಹಳಷ್ಟು ದ್ರವ್ಯರಾಶಿಯಲ್ಲಿ ನ್ಯೂಕ್ಲಿಯಸ್ ಇರುತ್ತದೆಂದು ಕಂಡುಹಿಡಿದರು.

ಮುಂದೆ ಮಾಕ್‌ಗಿಲ್ ವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನ ಪ್ರಾಧ್ಯಾಪಕನಾಗಿ ಕೆನಡ ದೇಶಕ್ಕೆ ತೆರಳಿದ (1898). ಅಲ್ಲಿ ಫ್ರೆಡರಿಕ್ ಸಾಡಿ (1877-1965) ಎಂಬ ಸಹೋದ್ಯೋಗಿ ಜೊತೆ ಸಂಶೋಧನೆಗೈದು ಯುರೇನಿಯಮ್ ವಿತರಿಸುವ ಅತಿ ತೀವ್ರ ಉಷ್ಣಶಕ್ತಿಯ ಕಾರಣವಾಗಿ ಸಂಭವಿಸುವ ಪರಮಾಣವಿಕ ವಿಘಟನೆ ಕುರಿತ ಸಿದ್ಧಾಂತ ಮಂಡಿಸಿದ. 1907ರಲ್ಲಿ ಮ್ಯಾಂಚೆಸ್ಟರಿಗೆ ಬಂದ. ಇಲ್ಲಿ ಈತ ಸಂಶೋಧನೆಯ ಮೂಲಕ ಆಲ್ಫಕಣಗಳು ಎರಡು ಮಡಿ ಅಯಾನೀಕೃತ ಹೀಲಿಯಮ್ ಅಯಾನುಗಳೆಂದು ರುಜುವಾತಿಸಿದ. ಈ ಅಯಾನುಗಳನ್ನು ಈತ ವಾಸ್ತವವಾಗಿ ಎಣಿಸಿ ನೋಡಿದ್ದ! ಇದರ ಸಲುವಾಗಿ ಈತ ಜರ್ಮನ್ ಭೌತವಿಜ್ಞಾನಿ ಹ್ಯಾನ್ಸ್‌ ಗೀಗರ್ (1882-1945) ಸಹಯೋಗದಲ್ಲಿ ಹೊಸತೊಂದು ಸಾಧನವನ್ನು ಉಪಜ್ಞಿಸಿದ.

ಈ ಸಂಶೋಧನೆ ಪರಮಾಣು ಬಗೆಗಿನ ಪರಿಕಲ್ಪನೆಯನ್ನು ಕ್ರಾಂತಿಕಾರಿಯಾಗಿ ಮಾರ್ಪಡಿಸಿತು: ಪರಮಾಣುವೊಂದು ಸೂಕ್ಷ್ಮಾತಿಸೂಕ್ಷ್ಮ ವಿಶ್ವ, ಇದರ ರಾಶಿ ಪೂರ್ತಿ ಬೀಜದಲ್ಲೇ ಸಾಂದ್ರೀಕರಿಸಿದೆ, ಇದನ್ನು ಸುತ್ತುವರಿದು ಎಲೆಕ್ಟ್ರಾನ್ ‘ಗ್ರಹ’ಗಳು ಪರಿಭ್ರಮಿಸುತ್ತಿವೆ. ಸಂಕ್ಷೇಪವಾಗಿ ಹೇಳುವುದಾದರೆ ಪರಮಾಣುವೊಂದು ಅತಿ ಸಂಕೋಚಿತ ಸೌರವ್ಯೂಹ. ಈ ಚಿಂತನೆಗೆ ಈತನ ಯುವ ಸಹಾಯಕ ನೀಲ್ಸ್ ಬೋರ್ (1882-1962) ಸಕಲ ಸಿದ್ಧಾಂತವನ್ನು (ಕ್ವಾಂಟಮ್ ತಿಯರಿ) ಅನ್ವಯಿಸಿದ. ಹೀಗೆ ಮೈದಳೆಯಿತು ರುದರ್ಫರ್ಡ್-ಬೋರ್ ಪರಮಾಣು ಪರಿಕಲ್ಪನೆ. ಮೊದಲನೆಯ ಮಹಾಯುದ್ಧದ ವೇಳೆ (1914-18) ಈತ ಬ್ರಿಟಿಷ್ ನೌಕಾದಳದ ಸಲುವಾಗಿ ಜಲಾಂತರ್ಗಾಮೀ ನೌಕೆಗಳನ್ನು ಪತ್ತೆ ಹಚ್ಚುವ ತಂತ್ರ ಸಂಶೋಧನೆಯಲ್ಲಿ ನಿರತನಾದ.

ವಾಯುಮಂಡಲದಲ್ಲಿರುವ ನೈಟ್ರೊಜನನ್ನು ಆಲ್ಫ ಕಣಗಳ ಸತತ ತಾಡನೆಗಳಿಗೆ ಒಡ್ಡಿದಾಗ ಅದು (ನೈಟ್ರೊಜನ್) ಪರಮಾಣವಿಕ ಪರಿವರ್ತನೆಗೆ ಒಳಗಾಗುತ್ತದೆ ಮತ್ತು ಆಗ ಹೈಡ್ರೊಜನ್ನಿನ ಒಂದು ಬೀಜ ವಿಮೋಚಿತವಾಗುವುದೆಂಬ ತಥ್ಯವನ್ನು ಹಲವಾರು ಪ್ರಯೋಗಗಳನ್ನು ಮಾಡಿ ಆವಿಷ್ಕರಿಸಿದ (1919). ಅದೇ ವರ್ಷ ಇವನಿಗೆ ಕೇಂಬ್ರಿಜ್ಜಿನಲ್ಲಿ ಆ ಮೊದಲು ತಾಮ್ಸನ್ ಅಲಂಕರಿಸಿದ್ದ ಕ್ಯಾವೆಂಡಿಶ್ ಪ್ರಾಧ್ಯಾಪಕ ಹುದ್ದೆ ದೊರೆಯಿತು. ನ್ಯೂಟ್ರಾನ್ ಕಣದ ಅಸ್ತಿತ್ತ್ವವನ್ನು ಸೈದ್ಧಾಂತಿಕ ವೇಗದಿಂದ ಮುನ್ನಡಿಸಿದ (1920). ಇವನ ಸಹೋದ್ಯೋಗಿ ಜೇಮ್ಸ್ ಚಾಡ್‌ವಿಕ್ (1891-1974) ನ್ಯೂಟ್ರಾನಿನ ಭೌತಅಸ್ತಿತ್ವವನ್ನು ದೃಢೀಕರಿಸಿದ (1932). ಈತ 1925-30ರ ತನಕ ರಾಯಲ್ ಸೊಸೈಟಿಯ ಅಧ್ಯಕ್ಷನಾಗಿದ್ದ.

ಸಾಧನೆಗಳು

ರುದರ್‌ಫೋರ್ಡ್ ೧೯೦೮ ರಲ್ಲಿ ವಿಕಿರಣ ವಸ್ತುಗಳ ಕುರಿತು ನಡೆಸಿದ ಅಧ್ಯಯನಕ್ಕಾಗಿ ರಸಾಯನ ಶಾಸ್ತ್ರದ ನೋಬಲ್ ಪ್ರಶಸ್ತಿಯನ್ನು ಪಡೆದರು. ಇವರು ಪರಮಾಣುಗಳು ಸ್ಥಿರವಾಗಿರಬೇಕಿಲ್ಲ, ಅವು ವಿಭಜನೆ ಹೊಂದಬಹುದು ಎಂಬುದನ್ನು ತಮ್ಮ ಅನೇಕ ಪ್ರಯೋಗಗಳ ಮೂಲಕ ತಿಳಿಸಿಕೊಟ್ಟರು. ೧೯೩೧ರಲ್ಲಿ ಇವರಿಗೆ ನೆಲ್ಸನ್ ಆಫ್ ಬ್ಯಾರನ್ ಪದವಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿಗಳು

  • ೧೯೦೮ ರಲ್ಲಿ ನೋಬೆಲ್ ಪ್ರಶಸ್ತಿ.
  • ೧೯೩೧ ರಲ್ಲಿ ಬ್ಯಾರನ್ ರುದರ್‌ಫೋರ್ಡ್ ಆಫ್ ನೆಲ್ಸನ್ ಪ್ರಶಸ್ತಿ.

ಉಲ್ಲೇಖಗಳು

ಹೊರಗಿನ ಕೊಂಡಿಗಳು

Tags:

ಅರ್ನೆಸ್ಟ್ ರುದರ್‍ಫೋರ್ಡ್ ಜೀವನ ಚರಿತ್ರೆಅರ್ನೆಸ್ಟ್ ರುದರ್‍ಫೋರ್ಡ್ ಸಾಧನೆಗಳುಅರ್ನೆಸ್ಟ್ ರುದರ್‍ಫೋರ್ಡ್ ಪ್ರಶಸ್ತಿಗಳುಅರ್ನೆಸ್ಟ್ ರುದರ್‍ಫೋರ್ಡ್ ಉಲ್ಲೇಖಗಳುಅರ್ನೆಸ್ಟ್ ರುದರ್‍ಫೋರ್ಡ್ ಹೊರಗಿನ ಕೊಂಡಿಗಳುಅರ್ನೆಸ್ಟ್ ರುದರ್‍ಫೋರ್ಡ್ಪರಮಾಣುಪರಮಾಣು ಭೌತಶಾಸ್ತ್ರ

🔥 Trending searches on Wiki ಕನ್ನಡ:

ತ್ರಿಪದಿಆನೆಶ್ರೀವಿಜಯಆರತಿಪತ್ನಿಜಾತಿಸಂಯುಕ್ತ ರಾಷ್ಟ್ರ ಸಂಸ್ಥೆಏರೋಬಿಕ್ ವ್ಯಾಯಾಮರಾವಣಸಂಸ್ಕೃತ ಸಂಧಿಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ವಚನ ಸಾಹಿತ್ಯಆರ್.ಟಿ.ಐರಿಕಾಪುಚಂದ್ರಯಾನ-೨ಹದಿಹರೆಯಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಭರತ-ಬಾಹುಬಲಿವಿಜ್ಞಾನಕಾಜೊಲ್ಅಮೃತಧಾರೆ (ಕನ್ನಡ ಧಾರಾವಾಹಿ)ಭಾರತದ ಜನಸಂಖ್ಯೆಯ ಬೆಳವಣಿಗೆಚಾರ್ಲಿ ಚಾಪ್ಲಿನ್ಕೆಂಪೇಗೌಡ (ಚಲನಚಿತ್ರ)ವಿದ್ಯುಲ್ಲೇಪಿಸುವಿಕೆಕ್ರಿಯಾಪದಜ್ಯೋತಿಕಾ (ನಟಿ)ಅಂಜನಿ ಪುತ್ರನೈಟ್ರೋಜನ್ ಚಕ್ರಬಂಡಾಯ ಸಾಹಿತ್ಯಕರ್ನಾಟಕದ ಇತಿಹಾಸಜೀನ್-ಜಾಕ್ವೆಸ್ ರೂಸೋಗೋವಕಾವೇರಿ ನದಿಸ್ವರಛತ್ರಪತಿ ಶಿವಾಜಿಮೈಸೂರು ದಸರಾಭಾರತದ ಸರ್ವೋಚ್ಛ ನ್ಯಾಯಾಲಯಎಚ್.ಎಸ್.ಶಿವಪ್ರಕಾಶ್ಮೈಟೋಕಾಂಡ್ರಿಯನ್ಪರಿಸರ ವ್ಯವಸ್ಥೆರತ್ನತ್ರಯರುಪಟ್ಟದಕಲ್ಲುಅನ್ನಿ ಬೆಸೆಂಟ್ದಶಾವತಾರಕರ್ನಾಟಕ ಐತಿಹಾಸಿಕ ಸ್ಥಳಗಳುಶೈಕ್ಷಣಿಕ ಮನೋವಿಜ್ಞಾನಜ್ಞಾನಪೀಠ ಪ್ರಶಸ್ತಿಮಾನವ ಅಭಿವೃದ್ಧಿ ಸೂಚ್ಯಂಕಶಬ್ದಮಣಿದರ್ಪಣಕಾಳಿದಾಸನದಿಬಾಲಕಾರ್ಮಿಕನಾಟಕಗ್ರಾಹಕರ ಸಂರಕ್ಷಣೆನೀರಿನ ಸಂರಕ್ಷಣೆಸಂತಾನೋತ್ಪತ್ತಿಯ ವ್ಯವಸ್ಥೆಒಡೆಯರ್ಮೊಘಲ್ ಸಾಮ್ರಾಜ್ಯದಿಕ್ಸೂಚಿಪರಮಾಣುಮಲೇರಿಯಾಶ್ರೀ ರಾಘವೇಂದ್ರ ಸ್ವಾಮಿಗಳುಸ್ಫಟಿಕ ಶಿಲೆಭಾರತೀಯ ಭಾಷೆಗಳುಸುಮಲತಾಅಮ್ಮೊನೈಟ್ಮಲ್ಲಿಕಾರ್ಜುನ ಜ್ಯೋತಿರ್ಲಿಂಗಪುರಂದರದಾಸಪ್ರಾಚೀನ ಈಜಿಪ್ಟ್‌ಬೆಳ್ಳುಳ್ಳಿಕೇಂದ್ರ ಲೋಕ ಸೇವಾ ಆಯೋಗಹರಪ್ಪಆದೇಶ ಸಂಧಿಕನ್ನಡದಲ್ಲಿ ವಚನ ಸಾಹಿತ್ಯಪಂಚಾಂಗಪ್ರಚ್ಛನ್ನ ಶಕ್ತಿಕುಡಿಯುವ ನೀರುಕೆ. ಅಣ್ಣಾಮಲೈ🡆 More