ಆಸ್ಮಿಯಮ್

76 ರ್ಹೇನಿಯಮ್ಆಸ್ಮಿಯಮ್ಇರಿಡಿಯಮ್
ರುಥೇನಿಯಮ್

Os

ಆಸ್ಮಿಯಮ್
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಆಸ್ಮಿಯಮ್, Os, 76
ರಾಸಾಯನಿಕ ಸರಣಿtransition metal
ಗುಂಪು, ಆವರ್ತ, ಖಂಡ 8, 6, d
ಸ್ವರೂಪತಿಳಿ ನೀಲ ಯಾ ಬೆಳ್ಳಿಯ ಬಣ್ಣ
ಆಸ್ಮಿಯಮ್
ಅಣುವಿನ ತೂಕ 190.23 g·mol−1
ಋಣವಿದ್ಯುತ್ಕಣ ಜೋಡಣೆ [Xe] 4f14 5d6 6s2
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು 2, 8, 18, 32,14,2
ಭೌತಿಕ ಗುಣಗಳು
ಹಂತಘನ
ಸಾಂದ್ರತೆ (ಕೋ.ತಾ. ಹತ್ತಿರ)22.61 g·cm−3
ದ್ರವಸಾಂದ್ರತೆ at ಕ.ಬಿ.20 g·cm−3
ಕರಗುವ ತಾಪಮಾನ3306 K
(3033 °C, 5491 °ಎಫ್)
ಕುದಿಯುವ ತಾಪಮಾನ5285 K
(5012 °C, 9054 °F)
ಸಮ್ಮಿಲನದ ಉಷ್ಣಾಂಶ57.85 kJ·mol−1
ಭಾಷ್ಪೀಕರಣ ಉಷ್ಣಾಂಶ738 kJ·mol−1
ಉಷ್ಣ ಸಾಮರ್ಥ್ಯ(25 °C) 24.7 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 3160 3423 3751 4148 4638 5256
ಅಣುವಿನ ಗುಣಗಳು
ಸ್ಪಟಿಕ ಸ್ವರೂಪಷಡ್ಭುಜಾಕೃತಿ
ವಿದ್ಯುದೃಣತ್ವ2.2 (Pauling scale)
ಅಣುವಿನ ತ್ರಿಜ್ಯ130 pm
ಅಣುವಿನ ತ್ರಿಜ್ಯ (ಲೆಖ್ಕಿತ)185 pm
ತ್ರಿಜ್ಯ ಸಹಾಂಕ128 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆparamagnetic
ವಿದ್ಯುತ್ ರೋಧಶೀಲತೆ(0 °C) 81.2Ω·m
ಉಷ್ಣ ವಾಹಕತೆ(300 K) 87.6 W·m−1·K−1
ಉಷ್ಣ ವ್ಯಾಕೋಚನ(25 °C) 5.1 µm·m−1·K−1
ವಿರೋಧಬಲ ಮಾಪನಾಂಕ222 GPa
ಸಗಟು ಮಾಪನಾಂಕ462 GPa
ವಿಷ ನಿಷ್ಪತ್ತಿ 0.25
ಮೋಸ್ ಗಡಸುತನ7.0
ಬ್ರಿನೆಲ್ ಗಡಸುತನ3920 MPa
ಸಿಎಎಸ್ ನೋಂದಾವಣೆ ಸಂಖ್ಯೆ7440-04-2
ಉಲ್ಲೇಖನೆಗಳು

ಆಸ್ಮಿಯಮ್ ಒಂದು ಲೋಹಮೂಲಧಾತು. ಇದು ಅತ್ಯಂತ ಸಾಂದ್ರ ಮೂಲವಸ್ತುಗಳಲ್ಲಿ ಒಂದಾಗಿದೆ. ಇದನ್ನು ೧೮೦೪ರಲ್ಲಿ ಬ್ರಿಟನ್ಸ್ಮಿತ್‌ಸನ್ ಟೆನ್ನಂಟ್ ಎಂಬ ವಿಜ್ಞಾನಿ ಕಂಡುಹಿಡಿದರು. ಇದು ಹೆಚ್ಚಾಗಿ ಪ್ಲಾಟಿನಮ್ ಲೋಹದ ಅದಿರಿನೊಂದಿಗೆ ದೊರೆಯುತ್ತದೆ. ಇದನ್ನು ಕೆಲವು ಸಂಶೋಧನೆಗಳಲ್ಲಿ ಹಾಗೂ ಯಂತ್ರಗಳ ಬಿಡಿಭಾಗಗಳಲ್ಲಿ ಉಪಯೋಗಿಸುತ್ತಾರೆ.

ಇದರ ಸಂಕೇತ Os; ಆವರ್ತ ಕೋಷ್ಟಕದಲ್ಲಿ ಇದರ ಸಂಖ್ಯೆ 76; ಪರಮಾಣು ತೂಕ 190.2; ಸಹಜಲಭ್ಯ ಸ್ಥಿರ ಸಮಸ್ಥಾನಿಗಳು (ಐಸೊಟೋಪ್ಸ್) 184, 186, 187, 188, 189, 190, 192, ಇವುಗಳಲ್ಲಿ 192 ಸಮಸ್ಥಾನಿ ಪ್ರಕೃತಿಯಲ್ಲಿ ದೊರೆಯುವ ಲೋಹದಲ್ಲಿ 41% ಇರುತ್ತದೆ; ಉಳಿದವು ವಿವಿಧ ಪ್ರಮಾಣಗಳಲ್ಲಿ ಲಭಿಸುತ್ತವೆ. ಇತರ ಸಮಸ್ಥಾನಿಗಳು 182, 183, 185, 191, 193, 194. ಇವು ರಶ್ಮಿ ವಿಕಿರಣತೆ (ರೇಡಿಯೋ ಆಕ್ಟಿವಿಟಿ) ಉಳ್ಳವು ಆದ್ದರಿಂದ ಅಸ್ಥಿರವಾಗಿವೆ. ಆಸ್ಮಿಯಮ್ಮಿನ ದ್ರವೀಕರಿಸುವ ಉಷ್ಣತೆ 20000 ಸೆ.ಗಿಂತ ಹೆಚ್ಚು; ಕುದಿಯುವ ಉಷ್ಣತೆ 5000 ಸೆ. ಎಲೆಕ್ಟ್ರಾನಿಕ್ ವಿನ್ಯಾಸ 1s2 2s2 2p6 3s2 3p6 3d10 4s2 4p6 4d10 4f14 5s2 5p6 5d6 6s2.

ಗುಣಗಳು

ಆಸ್ಮಿಯಂ ಒಂದು ಗಡುಸಾದ (ರಿಫ್ರಾಕ್ಟರಿ) ಲೊಹವಾದರೂ ಸಾಮಾನ್ಯ ಉಷ್ಣತೆಯಲ್ಲಿಯೂ ಆಕ್ಸಿಜನ್ನಿನೊಂದಿಗೆ ಬೆರೆತು ನೀಲಿಬಣ್ಣದ ಆಕ್ಸೈಡನ್ನು ಉತ್ಪಾದಿಸುತ್ತದೆ. ಈ ಸಂಯುಕ್ತ ಲೋಹದ ಮೇಲೆ ತೆಳು ಪದರದಂತಿರುತ್ತದೆ. ಗಾಳಿಯಲ್ಲಿ ಕಾಸಿದಾಗ ಆಸ್ಮಿಯಂ ಆಕ್ಸೈಡ್ ಸುಲಭವಾಗಿ ಆಸ್ಮಿಯಂ ಟೆಟ್ರಾಕ್ಸೈಡ್ (OsO4) ಎಂಬ ವಸ್ತುವಿಗೆ ಪರಿವರ್ತನೆಯಾಗುತ್ತದೆ. 1300 ಸೆ. OsO4 ನಲ್ಲಿ ಕುದಿಯುತ್ತದೆ ಮತ್ತು ನಿರ್ವರ್ಣವಾದ ಮತ್ತು ಕ್ಲೋರಿನ್‌ನಂತೆ ವಾಸನೆಯುಳ್ಳ ಅತ್ಯಂತ ವಿಷಯುಕ್ತ ಅನಿಲವಾಗಿ ಪರಿವರ್ತಿತವಾಗುತ್ತದೆ. ಮೂಗಿನ ಲೋಳೆ ಪೊರೆ (ಮ್ಯೂಕಸ್ ಮೆಂಬ್ರೇನ್) ಮತ್ತು ಕಣ್ಣುಗಳಿಗೆ ಇದು ಅಪಾಯಕಾರಿ. ಆಸ್ಮಿಯಂ ನೈಟ್ರಿಕ್ ಆಮ್ಲದಲ್ಲಿ ಸುಲಭವಾಗಿ ವಿಲೀನವಾಗುತ್ತದೆ. ಈ ಲೋಹದ ವೇಲೆನ್ಸಿ 2+. 3+. 4+. 6+.ಮತ್ತು 8+ ಆಗಿರುವುದರಿಂದ ಅನೇಕ ಬಗೆಯ ಕ್ಲಿಷ್ಟ ರಚನೆಯುಳ್ಳ ಸಂಯುಕ್ತಗಳನ್ನು ರಚಿಸುತ್ತದೆ.

ತಯಾರಿಕೆ

ಆಸ್ಮಿಯಂ ಪ್ಲಾಟಿನಂ ಲೋಹದ ಅದುರಿನೊಂದಿಗೂ ಇರಿಡಿಯಂ ಲೋಹದೊಂದಿಗೆ ಆಸ್ಮರಿಡಿಯಂ ಎಂಬ ಮಿಶ್ರಲೋಹದ ರೂಪದಲ್ಲಿಯೂ ದೊರೆಯುತ್ತದೆ. ಲೋಹವನ್ನು ತಯಾರಿಸುವ ವಿಧಾನದಲ್ಲಿ ಮೊದಲನೆಯ ಹೆಜ್ಜೆಯಾಗಿ ನೈಟ್ರಿಕ್ ಆಮ್ಲದಲ್ಲಿ ಲೋಹವನ್ನು ವಿಲೀನಗೊಳಿಸಿ ತರುವಾಯ ಆಸ್ಮಿಯಂ ಟೆಟ್ರಾಕ್ಸೈಡನ್ನು ಅನಿಲರೂಪದಲ್ಲಿ ಹೊರತೆಗೆಯುವರು. ಇನ್ನೊಂದು ವಿಧಾನದಲ್ಲಿ ಅದುರನ್ನು ಗಾಳಿಯಲ್ಲಿ ಹುರಿದು (ರೋಸ್ಟ್) ಆಸ್ಮಿಯಂ ಟೆಟ್ರಾಕ್ಸೈಡನ್ನು ಪಡೆಯುತ್ತಾರೆ. ಮುಂದೆ ಈ ಅನಿಲವನ್ನು ಮದ್ಯಸಾರದಲ್ಲಿ ಕರಗಿದ ಪ್ರತ್ಯಾಮ್ಲದಲ್ಲಿ ಅವಶೋಷಿಸಲಾಗುವುದು (ಅಬ್‌ಸಾರ್ಬ್). ಇದರಿಂದ ಉತ್ಪತ್ತಿಯಾಗುವ ಆಸ್ಮೇಟ್ ದ್ರಾವಣದಿಂದ ಆಸ್ಮಿಯಂ ಸಲ್ಫೈಡ್ ಅಥವಾ ಆಸ್ಮಿಯಂ ಹೈಡ್ರಾಕ್ಸೈಡ್ ರೂಪದಲ್ಲಿ ಲೋಹವನ್ನು ಒತ್ತರಿಸುತ್ತಾರೆ. ಈ ಒತ್ತರಗಳನ್ನು ಹೈಡ್ರೊಜನ್ನಿನಿಂದ ಅಪಕರ್ಷಿಸಿ ಲೋಹವನ್ನು ಪಡೆಯುವರು.

ಮುಖ್ಯವಾದ ಸಂಯುಕ್ತಗಳು

1. ಆಸ್ಮಿಯಂ ಟೆಟ್ರಾಕ್ಲೋರೈಡ್ (OsCl4): ಕಪ್ಪುಬಣ್ಣದ ಘನಪದಾರ್ಥ. ಉತ್ಕರ್ಷಣ ಶಕ್ತಿಯಿಲ್ಲದ (ಉದಾ: ಹೈಡ್ರೋಕ್ಲೋರಿಕ್ ಆಮ್ಲ) ಆಮ್ಲಗಳಲ್ಲಿ ಕರಗುವುದಿಲ್ಲ. ಆಸ್ಮಿಯಂ ಲೋಹವನ್ನು 7000 ಸೆ. ಉಷ್ಣತೆಯಲ್ಲಿ ಕ್ಲೋರಿನ್ನಿನೊಂದಿಗೆ ಕಾಸಿ ಪಡೆಯುತ್ತಾರೆ.

2. ಆಸ್ಮಿಯಂ ಟೆಟ್ರಾಕ್ಸೈಡ್ (OsO4) ಅತಿ ತೆಳು ಹಳದಿಬಣ್ಣದ ಹರಳಿನಂಥ ವಸ್ತು. 400 ಸೆ. ಉಷ್ಣತೆಯಲ್ಲಿ ದ್ರವಿಸುತ್ತದೆ. 1300 ಸೆ. ಉಷ್ಣತೆಯಲ್ಲಿ ಆವಿಯಾಗುತ್ತದೆ. ವಿಷಪದಾರ್ಥ. ನೀರಿನಲ್ಲಿ ಮತ್ತು ಕಾರ್ಬನ್ ಟೆಟ್ರಾಕ್ಲೋರೈಡ್‌ನಲ್ಲಿ ವಿಲೀನವಾಗುತ್ತದೆ. ಪ್ರಬಲ ಉತ್ಕರ್ಷಣ ವಸ್ತು. ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ಮರಳಿಸಿ (ರೀಫ್ಲಕ್ಸ್) ಮುಂದೆ ಅಮೋನಿಯಂ ಕ್ಲೋರೈಡಿನೊಂದಿಗೆ ಸೇರಿಸಿದಾಗ ಅಮೋನಿಯಂ ಹೆಕ್ಸಾಕ್ಲೋರೋಆಸ್ಮೇಟ್ ಒತ್ತರಿಸುತ್ತದೆ. ಈ ಕಪ್ಪು ವಸ್ತುವನ್ನು [(NH4)2OsCl6] ಹೈಡ್ರೊಜನ್ನಿನಲ್ಲಿ ಕಾಸಿದರೆ ಆಸ್ಮಿಯಂ ಲೋಹ ಬಿಡುಗಡೆಯಾಗುತ್ತದೆ.

ಉಪಯೋಗಗಳು

ಕೆಲವು ಆರ್ಗ್ಯಾನಿಕ್ ರಾಸಾಯನಿಕ ವಸ್ತುಗಳ ತಯಾರಿಕೆಯಲ್ಲಿ, ದ್ವಿಬಂಧಗಳಿಗೆ (ಡಬಲ್ ಬಾಂಡ್ಸ್) ಜಲಾಂಶಗಳನ್ನು ಸೇರಿಸುವ ಕ್ರಿಯೆಯಲ್ಲಿ ಆಸ್ಮಿಯಂ ಟೆಟ್ರಾಕ್ಸೈಡಿನ ಉಪಯೋಗವಿದೆ. ಚೋದಕ ದ್ರವ್ಯಗಳಲ್ಲೊಂದಾದ ಕಾರ್ಟಿಸೋನ್ ವಸ್ತುವಿನ ತಯಾರಿಕೆಯನ್ನು ಇಲ್ಲಿ ಉದಾಹರಿಸಬಹುದು. ಸಸ್ಯಗಳ ಮತ್ತು ಜೀವಿಗಳ ಅಂಗಾಂಶಗಳನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಲು ಸುಲಭವಾಗುವಂತೆ ಅಂಗಾಂಶಗಳನ್ನು ಗಟ್ಟಿಮಾಡಲು ಮತ್ತು ಅವುಗಳಿಗೆ ಬಣ್ಣಕೊಡಲು ಆಸ್ಮಿಯಂ ಟೆಟ್ರಾಕ್ಸೈಡನ್ನು ಉಪಯೋಗಿಸುತ್ತಾರೆ. ಹೈಡ್ರೊಜನ್ನನ್ನು ಸೇರಿಸುವ ಕ್ರಿಯೆಗೆ ಲೋಹ ಸೊಗಸಾದ ವೇಗವರ್ಧಕ. ಆಸ್ಮಿಯಂ ಮಿಶ್ರಲೋಹಗಳನ್ನು ಸೂಕ್ಷ್ಮವಾದ ಮತ್ತು ಕರಾರುವಾಕ್ಕಾದ ಯಂತ್ರಗಳಲ್ಲಿ ಬೇರಿಂಗುಗಳನ್ನಾಗಿ ಉಪಯೋಗಿಸುತ್ತಾರೆ. ಶಾಯಿಯಲ್ಲಿರುವ ಆಮ್ಲ ಈ ಲೋಹವನ್ನೊಳಗೊಂಡ ಆಸ್ಮಿರಿಡಿಯಂ ಮಿಶ್ರಲೋಹವನ್ನು ಕರಗಿಸಲಾರದಾದ್ದರಿಂದ ಲೇಖನಿಗಳ ತುದಿಗಳನ್ನು ಈ ಲೋಹಮಿಶ್ರಣದಿಂದ ಮಾಡುತ್ತಾರೆ. ಮಿಶ್ರಲೋಹ ಅತಿಗಡುಸಾದ್ದರಿಂದ ಲೇಖನಿಗಳ ತುದಿ ಬೇಗ ಸವೆಯುವುದೂ ಇಲ್ಲ.

ಉಲ್ಲೇಖಗಳು

ಹೊರಗಿನ ಕೊಂಡಿಗಳು

ಆಸ್ಮಿಯಮ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಆಸ್ಮಿಯಮ್ ಗುಣಗಳುಆಸ್ಮಿಯಮ್ ತಯಾರಿಕೆಆಸ್ಮಿಯಮ್ ಮುಖ್ಯವಾದ ಸಂಯುಕ್ತಗಳುಆಸ್ಮಿಯಮ್ ಉಪಯೋಗಗಳುಆಸ್ಮಿಯಮ್ ಉಲ್ಲೇಖಗಳುಆಸ್ಮಿಯಮ್ ಹೊರಗಿನ ಕೊಂಡಿಗಳುಆಸ್ಮಿಯಮ್

🔥 Trending searches on Wiki ಕನ್ನಡ:

ಸಾಲುಮರದ ತಿಮ್ಮಕ್ಕಶಾಲೆಖ್ಯಾತ ಕರ್ನಾಟಕ ವೃತ್ತಚೋಳ ವಂಶಹಿಂದೂ ಧರ್ಮವೇಗೋತ್ಕರ್ಷಕಲ್ಪನಾಮಾನವ ಹಕ್ಕುಗಳುವಿಧಾನಸೌಧಮಹಾಲಕ್ಷ್ಮಿ (ನಟಿ)ಮಂಗಳಮುಖಿಭಾರತದಲ್ಲಿ ಪಂಚಾಯತ್ ರಾಜ್ವಚನ ಸಾಹಿತ್ಯರಚಿತಾ ರಾಮ್ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಮಂಡಲ ಹಾವುರತ್ನತ್ರಯರುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಟೈಗರ್ ಪ್ರಭಾಕರ್ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಪಿತ್ತಕೋಶಸಂಸ್ಕೃತಿಒಗಟುಕರ್ನಾಟಕದ ನದಿಗಳುಗಾದೆವಾಟ್ಸ್ ಆಪ್ ಮೆಸ್ಸೆಂಜರ್ಕನ್ನಡ ಬರಹಗಾರ್ತಿಯರುಮಾನವ ಸಂಪನ್ಮೂಲಗಳುದರ್ಶನ್ ತೂಗುದೀಪ್ಜೀವಕೋಶಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಗಣೇಶಭಾರತದಲ್ಲಿ ತುರ್ತು ಪರಿಸ್ಥಿತಿಹಳೇಬೀಡುಪೂರ್ಣಚಂದ್ರ ತೇಜಸ್ವಿಜಾಗತಿಕ ತಾಪಮಾನಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಚಿಪ್ಕೊ ಚಳುವಳಿಧಾರವಾಡಏಲಕ್ಕಿಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆವೀರಗಾಸೆಶಂ.ಬಾ. ಜೋಷಿಭಾರತದ ಸಂಸತ್ತುತೋಟಗಾರಿಕೆಯಕ್ಷಗಾನಶ್ಯೆಕ್ಷಣಿಕ ತಂತ್ರಜ್ಞಾನಬಸವೇಶ್ವರಶನಿಯೋನಿರವಿಚಂದ್ರನ್ಸಂಗೊಳ್ಳಿ ರಾಯಣ್ಣಹರ್ಡೇಕರ ಮಂಜಪ್ಪಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಅಮೃತಧಾರೆ (ಕನ್ನಡ ಧಾರಾವಾಹಿ)ಹಲ್ಮಿಡಿಆರೋಗ್ಯತತ್ಸಮ-ತದ್ಭವಶಿಲೀಂಧ್ರಮಲ್ಲಿಗೆಭಾರತೀಯ ಜನತಾ ಪಕ್ಷಸಿಂಧೂತಟದ ನಾಗರೀಕತೆಕದಂಬ ರಾಜವಂಶಕವಿರಾಜಮಾರ್ಗವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಭಾರತದ ವಾಯುಗುಣಹೊಯ್ಸಳ ವಿಷ್ಣುವರ್ಧನಸಹಕಾರಿ ಸಂಘಗಳುಮಂಕುತಿಮ್ಮನ ಕಗ್ಗಜೈಜಗದೀಶ್ಶ್ರೀರಂಗಪಟ್ಟಣಮಂಡ್ಯಪೌರತ್ವ (ತಿದ್ದುಪಡಿ) ಮಸೂದೆ, ೨೦೧೯🡆 More