ಗಾಂಜಾ

ಗಾಂಜಾ (ಸಂಸ್ಕೃತದಲ್ಲಿ ಗಂಜಿಕಾ)ವು, ಗಾಂಜಾ ಸಸ್ಯದಿಂದ ತಯಾರಿಸಲಾದ ಅಮಲುಕಾರಕ ವಸ್ತುವಾಗಿದ್ದು, ಇದನ್ನು ಕೆಲವೊಂದು ಖಾಯಿಲೆಗಳಿಗೆ ಔಷಧವಾಗಿಯೂ ಬಳಸುತ್ತಾರೆ.

ಗಾಂಜಾ
ಗಾಂಜಾ

ಇತರ ಭಾಷೆಯಲ್ಲಿ

ಗಾಂಜಾ 
Cannabis Plant- ಭಂಗಿಸೊಪ್ಪಿನ ಗಿಡ

ಸಂಸ್ಕೃತ: ವಿಜಯ-ಭಂಗ್

ಹಿಂದಿ; ಗಾಂಜ-ಭಂಗ್

ಮಲಯಾಳಂ: ಭಂಗ್

ಗುಜರಾತಿ: ಭಂಗ್

ತೆಲುಗು: ಗಾಂಜ ಚೆಟ್ಟು

ತಮಿಳು: ಗಾಂಜ ಚಡಿ

ವರ್ಣನೆ

‘ಚರಸ್’ ಅನ್ನುವ ಮಾದಕ ವಸ್ತುವನ್ನು ಈ ಮೂಲಿಕೆಯ ಪತ್ರೆಗಳಿಂದ ಮಾಡುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ತಲೆ ತಿರುಗಿ, ಜ್ಞಾನ ತಪ್ಪಬಹುದು ಮತ್ತು ಮುಂದೆ ಗಾಢ ನಿದ್ರೆಯುಂಟಾಗಿ ಉಸಿರು ಕಟ್ಟಿ ಸಾಯಲುಬಹುದು. ಈ ಮೂಲಿಕೆ ಚಿಕಿತ್ಸೆಯಲ್ಲಿ ಅತ್ಯಂತ ಉಪಯುಕ್ತವಾದುದು. 1-2 ಅಡಿ ಎತ್ತರ ಪೊದೆಯಾಗಿ ಬೆಳೆಯುವುದು. ಕಾಂಡದ ತುದಿಯಲ್ಲಿ ಗೊಂಚಲಾಕರವಾಗಿ ಹೂಗಳು ಬಿಡುವುದು. ಈ ಸೊಪ್ಪನ್ನು ಬೆಳೆಯುವುದನ್ನು ಸರ್ಕಾರ ನಿಷೇಧಿಸಿದೆ. ಹೆಚ್ಚಿನ ಉಪಯೋಗದಿಂದ ಹೃದಯ, ಮನಸ್ಸು, ಮತ್ತು ನರಮಂಡಲದ ಮೇಲೆ ಅಹಿತ ಪರಿಣಾಮಗಳನ್ನುಂಟು ಮಾಡುವುದು ಮತ್ತು ಮನಃಶೋಭೆವುಂಟು ಆಗುವುದು. ಒವ್ಮೊಮ್ಮೆ ಸಮ್ಮೋಹನಾ ರಚಿಸಿ, ಬಹಳ ಹೊತ್ತು ಭಯಗ್ರಸ್ಥನಂತೆ ಮಾಡುವುದು. ಚಟವುಳ್ಳವರು ಇದನ್ನು ಬಹಳ ಉಪಯೋಗಿಸುತ್ತಾರೆ. ಸಿದ್ಧರ ಬೆಟ್ಟದ ಗವಿಗಳಲ್ಲಿ ವಿಶಾಲವಾದ ಮರಗಳು ಅಡಿಯಲ್ಲಿ ಮತ್ತು ಹಾಳು ಮಂಟಪಗಳಲ್ಲಿ ಗುಂಪು ಗುಂಪಾಗಿ ಸೇರಿ ಈ ಭಂಗಿ ಸೊಪ್ಪಿನ ಹೊಗೆಯನ್ನು ಬಹಳ ಹುರುಪು ಮತ್ತು ಹುಮಸ್ಸಿನಿಂದ ಸೇದುತ್ತಾರೆ ಸೇದುವುದಕ್ಕೆ ಬಳಸುವ ಸಾಧನ “ಮಣ್ಣಿನ ಚಿಲುಮೆ” ಯು ಕೊಳವೆಯಾಗಿಕಾರದ್ದು. ಒಂದು ತುದಿ ಕಿರುದಾಗಿದ್ದು, ಮತ್ತೊಂದು ತುದಿ ಅಗಲವಾಗಿರುತ್ತದೆ. ಭಂಗಿ ಸೊಪ್ಪುನ್ನು ಈ ಚಿಲುಮೆಯಲ್ಲಿ ತುಂಬಿ, ಬೆಂಕಿ ಹಚ್ಚಿಕೊಂಡು ಸರದಿಯಂತೆ ಒಬ್ಬೊಬ್ಬರಾಗಿ ಸೇದುತ್ತಾರೆ. ಇದೊಂದು ಕೆಟ್ಟ ಚಟ. ಹೆಚ್ಚಾಗಿ ಹರಟೆ ಹೊಡೆಯುವವರು ಹಾಗೂ ಹರಳು ಹುರಿದಂತೆ ಮಾತನಾಡುವವರು ಈ ಭಂಗಿ ಸೊಪ್ಪಿನ ಸೇವೆನೆಯಿಂಧ ಕೆಲವೇ ನಿಮಿಷದಿಂದ ಕೆಲವೇ ನಿಮಿಷಗಳಲ್ಲಿ ಮೌನವಾಗಿ ಬೀಡುತ್ತಾರೆ. ಕಾರಣ ಇಷ್ಟೆ, ನರಮಂಡಲದ ಮೇಲೆ ಮತ್ತಿನ ಪರಿಣಾಮವುಂಟಾಗಿ ಅಮಲೇರಿ ಕರ್ತವ್ಯವನ್ನು ಮರೆಯುವುದು, ಮುಂದೆ ಅಹಿತಕರ ಪರಿಣಾಮವುಂಟಾಗಿ ದೇಹದ ರಚನೆ, ಕರ್ತವ್ಯದ ಮೇಲೆ ಸಾಕಷ್ಟು ನಷ್ಟ ಉಂಟಾಗುವುದು.

ಸರಳ ಚಿಕಿತ್ಸೆಗಳು

ಮಲೇರಿಯಾ ಜ್ವರದಲ್ಲಿ

ಒಂದು ಗ್ರಾಂ ತೂಕದಷ್ಟು ಭಂಗಿ ಸೊಪ್ಪುನ್ನು 2 ಗ್ರಾಂ ಬೆಲ್ಲೆದೊಡನೆ ಸೇರಿಸಿ ನಯವಾಗಿ ಅರೆದು ನಾಲ್ಕು ಗುಳಿಗೆಗಳಾಗಿ ಮಾಡಿಟ್ಟುಕೊಳ್ಳುವುದು. ಪ್ರತಿ ತಾಸಿಗೊಂದು ಸಾರಿ ಒಂದೊಂದು ಮಾತ್ರೆಯನ್ನು ಕೊಡುವುದು. ಮೊದಲನೆ ದಿವಸ ಜ್ವರ ನಿಲ್ಲದಿದ್ದರೆ ಈ ಚಿಕಿತ್ಸೆಯಿಂದ ಮರು ದಿವಸ ಜ್ವರ ಭಾದೆ ಕಡಿಮೆಯಾಗುವುದು.

ಕಿವಿನೋವು

ಗಾಂಜ ಗಿಡದ ಹಸಿರೆಲೆಗಳ ರಸವನ್ನು ಒಂದೊಂದು ತೊಟ್ಟು ನೋವಿರುವ ಕಿವಿಗೆ ಬಿಡುವುದು, ನೋವು ಪರಿಹಾರವಾಗಿ ಕ್ರಿಮಿಗಳು ನಾಶವಾಗುವುವು.

ಅರೆನಿದ್ರೆಯಲ್ಲಿ (ನಿದ್ರೆಯ ಕೊರತೆ)

ಗಾಂಜ ಸೊಪ್ಪು ಮತ್ತು ಬಿಳಿ ಗಸಗಸೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಆಡಿನ ಹಾಲಿನಲ್ಲಿ ನುಣ್ಣಗೆ ಅರೆದು ಪಾದಗಳಿಗೆ ಲೇಪಿಸುವುದು, ನಿದ್ದೆ ಮಾಡಬೇಕೆಂದು ಸಂಕಲ್ಪ ಮಾಡಿ ಮಲಗುವುದು.

ಅಂಡಗಳ ಊತ ಮತ್ತು ನೋವು

ಗಾಂಜ ಎಲೆಗಳನ್ನು ತಣ್ಣೀರಿನಲ್ಲಿ ಚೆನ್ನಾಗಿ ಅರೆದು, ಸುಮಾರು ಬಿಸಿ ಮಾಡಿದ ಹರಳೆಲೆ ಮೇಲೆ ಹರಡಿ ಅಂಡಗಳ ಮೇಲೆ ಕಟ್ಟುವುದು, ಕೆಲವು ದಿವಸ ಚಿಕಿತ್ಸೆಯನ್ನು ಮುಂದುವರಿಸುವುದು.

ಸ್ವಪ್ನಸ್ಖಲನ

10 ಗ್ರಾಂ ಗಾಂಜ ಸೊಪ್ಪಿನಲ್ಲಿ ಸುಮಾರು 20 ಗಾಂ ದಾಳಿಂಬೆಯ ಅರಳಿರುವ ಕೆಂಪು ಹೂವುಗಳನ್ನು ಶುದ್ಧವಾದ ತಣ್ಣೀರಿನಲ್ಲಿ ನುಣ್ಣಗೆ ಅರೆದು, ಹೆಸರಕಾಳು ಗಾತ್ರ ಗುಳಿಗೆಗಳನ್ನು ಮಾಡಿ ನೆರಳಿನಲ್ಲಿ ಒಣಗಿಸುವುದು. ಪ್ರತಿ ಮೂರು ತಾಸಿಗೊಮ್ಮೆ ಒಂದೊಂದು ಗುಳಿಗೆಯನ್ನು ನೀರಿನೊಂದಿಗೆ ಸೇವಿಸುವುದು 7 ದಿವಸ ಮಂಜುಗಡ್ಡೆಯನ್ನು ಬಾಯಿಲ್ಲಿಟ್ಟುಕೊಂಡು ಚೀಪುವುದು. ಮತ್ತು ಮಂಜುಗಡ್ಡೆಯನ್ನು ಹೊಕ್ಕಳ ಮೇಲೆರಿಸುವುದು.

ಮೂಲವ್ಯಾಧಿಯಲ್ಲಿ

ಒಂದು ಗ್ರಾಂ ಗಾಂಜ ಸೊಪ್ಪನ್ನು ಒಂದು ಬಟ್ಟಲು ಹಾಲಿನಲ್ಲಿ ಹಾಕಿ ಕಾಯಿಸುವುದು, ಇದರಿಂದ ಬರುವ ಹೊಗೆಯನ್ನು ನಳಿಕೆ ಮೂಲಕ ಮೊಳೆಗಳಿಗೆ ಹಾಯಿಸುವುದು. ನಂತರ ಉಳಿದ ಭಾಗವನ್ನು ರೊಟ್ಟಿಯಂತೆ ಮಾಡಿ ಮೂಲದ ಮೊಳೆಗಳಿಗೆ ಕಟ್ಟುವುದು.

ತಲೆಯಲ್ಲಿ ನವೆ, ಹೊಟ್ಟು

ಗಾಂಜ ಸೊಪ್ಪನ್ನು ನೀರಿನಲ್ಲರೆದು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ. ಇದರಿಂದ ಹೇನುಗಳು ನಾಶವಾಗುವುವು.

ಭಂಗಿ ಸೊಪ್ಪಿನ ದೋಶಕ್ಕೆ (ಅಮಲು ಇಳಿಸಲು)

ಮುಖದ ಮೇಲೆ ತಣ್ಣೀರಿ ಸಿಂಪಡಿಸುವುದು ಮತ್ತು ಇಪ್ಪತ್ತು ಗ್ರಾಂ ಹುಣಸೆ ಹಣ್ಣನ್ನು ನೀರಿನಲ್ಲಿ ಚೆನ್ನಾಗಿ ಕಿವಿಚಿ, ಬಟ್ಟೆಯಲ್ಲಿ ಸೋಸಿ, ಸ್ವಲ್ಪ ದ್ವಲ್ಪ ಕುಡಿಸುವುದು. ಇಪ್ಪತ್ತು ಗ್ರಾಂ ಶುಂಠಿಯನ್ನು ನೀರಿನಲ್ಲಿ ತೇದು ಗಂಧವನ್ನು ಸ್ವಲ್ಪ ಸ್ವಲ್ಪ ನಾಲಿಗೆಗೆ ಸವರುವುದು. ನಿಂಬೆ ಹಣ್ಣನ್ನು ನೀರಿನಲ್ಲಿ ಕಿವುಚಿ, ಬೀಜಗಳನ್ನು ಬೇರ್ಪಡಿಸಿ, ಸ್ಲಲ್ಪ ಸ್ವಲ್ಪ ಕುಡಿಸುವುದು.

ಅಡಿ ಟಿಪ್ಪಣಿಗಳು

ಹೆಚ್ಚಿನ ಮಾಹಿತಿ

  • ಆನಂದಾಮೈಡ್‌ ಉಕ್ಕಿದರೆ ಸಾಲದೆ?;; ನಾಗೇಶ ಹೆಗಡೆ Updated: 10 ಸೆಪ್ಟೆಂಬರ್ 2020; ಅನಾದಿ ಕಾಲದಿಂದಲೂ ಅಫೀಮು, ಚರಸ್‌, ಗಾಂಜಾ, ಹಶೀಶ್‌, ಕೆನ್ನಾಬೀಸ್‌, ಗ್ರಾಸ್‌, ವೀಡ್‌ ಇತ್ಯಾದಿ ಹೆಸರಿನಲ್ಲಿ ಈ ದ್ರವ್ಯಗಳು ಮನೋಲ್ಲಾಸಕ್ಕೆ, ಔಷಧಕ್ಕೆ ಹಾಗೂ ಅಧ್ಯಾತ್ಮ ಸಾಧನೆಗೆ ಬಳಕೆಯಾಗುತ್ತಿದ್ದವು. ಚಟಗ್ರಾಹಿ ಅಂಶಗಳನ್ನು ಬೇರ್ಪಡಿಸಿದರೆ ಮಾದಕ ಸಸ್ಯಗಳಲ್ಲಿ ಮನುಷ್ಯನ 20ಕ್ಕೂ ಹೆಚ್ಚು ಕಾಯಿಲೆಗಳನ್ನು ವಾಸಿ ಮಾಡುವ ಗುಣ ಸಿಬಿಡಿಗೆ ಇದೆ ಎಂಬುದು ತಿಳಿದುಬಂತು. ಈತನ ತಂಡದ ನಿರಂತರ ಶ್ರಮದಿಂದಾಗಿ ಇಸ್ರೇಲ್‌ ಇಂದು ಔಷಧ ಜಗತ್ತಿನ ಶೃಂಗಸ್ಥಾನಕ್ಕೇರಿದೆ.
  • Portal Cannabis

ಉಲ್ಲೇಖ

Tags:

ಗಾಂಜಾ ಇತರ ಭಾಷೆಯಲ್ಲಿಗಾಂಜಾ ವರ್ಣನೆಗಾಂಜಾ ಸರಳ ಚಿಕಿತ್ಸೆಗಳುಗಾಂಜಾ ಮಲೇರಿಯಾ ಜ್ವರದಲ್ಲಿಗಾಂಜಾ ಕಿವಿನೋವುಗಾಂಜಾ ಅರೆನಿದ್ರೆಯಲ್ಲಿ (ನಿದ್ರೆಯ ಕೊರತೆ)ಗಾಂಜಾ ಅಂಡಗಳ ಊತ ಮತ್ತು ನೋವುಗಾಂಜಾ ಸ್ವಪ್ನಸ್ಖಲನಗಾಂಜಾ ಮೂಲವ್ಯಾಧಿಯಲ್ಲಿಗಾಂಜಾ ತಲೆಯಲ್ಲಿ ನವೆ, ಹೊಟ್ಟುಗಾಂಜಾ ಭಂಗಿ ಸೊಪ್ಪಿನ ದೋಶಕ್ಕೆ (ಅಮಲು ಇಳಿಸಲು)ಗಾಂಜಾ ಹೆಚ್ಚಿನ ಮಾಹಿತಿಗಾಂಜಾ ಉಲ್ಲೇಖಗಾಂಜಾ

🔥 Trending searches on Wiki ಕನ್ನಡ:

ವರ್ಲ್ಡ್ ವೈಡ್ ವೆಬ್ಭಾರತದಲ್ಲಿನ ಚುನಾವಣೆಗಳುಕೊಂದೆರಜಪೂತಶ್ರೀಕೃಷ್ಣದೇವರಾಯಊಳಿಗಮಾನ ಪದ್ಧತಿಕನ್ನಡ ಗುಣಿತಾಕ್ಷರಗಳುಮಧ್ವಾಚಾರ್ಯರತ್ನಾಕರ ವರ್ಣಿಗ್ರಾಹಕರ ಸಂರಕ್ಷಣೆಹೈದರಾಲಿಕಟಕ (ಚಲನಚಿತ್ರ)ವೇದಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಧರ್ಮಸ್ಥಳಕುರುಬಕೌಸಲ್ಯೆಭಾರತದ ಬುಡಕಟ್ಟು ಜನಾಂಗಗಳುಸಂವಹನವೃತ್ತಪತ್ರಿಕೆಋಗ್ವೇದಜಾಹೀರಾತುವಸುಧೇಂದ್ರಮಧ್ಯಕಾಲೀನ ಭಾರತಕರ್ಬೂಜಸಮುಚ್ಚಯ ಪದಗಳುಬಾವಲಿವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಪಂಜುರ್ಲಿಹೂಡಿಕೆಸಂವತ್ಸರಗಳುಪಾಂಡವರುಪರಿಸರ ವ್ಯವಸ್ಥೆಭರತನಾಟ್ಯಶ್ರೀಜಾಗತಿಕ ತಾಪಮಾನ ಏರಿಕೆಭಾರತದ ಸರ್ವೋಚ್ಛ ನ್ಯಾಯಾಲಯಭಾರತೀಯ ಸಂಸ್ಕೃತಿರಂಗಭೂಮಿಕುಂತಿಅಡಿಕೆಲಕ್ಷ್ಮಣನಿರುದ್ಯೋಗಸ್ವರಗಳಗನಾಥಗುಲ್ಮಹರ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆಹಂಪೆಗಾಳಿ/ವಾಯುವಿರೂಪಾಕ್ಷ ದೇವಾಲಯಮಸೂರ ಅವರೆನಿಂಬೆಭಾರತದ ಸ್ವಾತಂತ್ರ್ಯ ಚಳುವಳಿಅರ್ಥಶಾಸ್ತ್ರಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಜನಪದ ಕಲೆಗಳುಸಿದ್ದಲಿಂಗಯ್ಯ (ಕವಿ)ಕನ್ನಡದಲ್ಲಿ ಶಾಸ್ತ್ರ ಸಾಹಿತ್ಯಭಾರತದ ಸಂವಿಧಾನ ರಚನಾ ಸಭೆಸಿಗ್ಮಂಡ್‌ ಫ್ರಾಯ್ಡ್‌ಹಸ್ತಪ್ರತಿಶ್ರೀ ರಾಮ ನವಮಿಮಂಟೇಸ್ವಾಮಿಬಕಾಸುರಉಪನಯನಪು. ತಿ. ನರಸಿಂಹಾಚಾರ್ಸಾವಿತ್ರಿಬಾಯಿ ಫುಲೆಮೈಸೂರುಆಮೆಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಎಸ್.ಎಲ್. ಭೈರಪ್ಪಹಂಸಲೇಖಎಂ. ಕೆ. ಇಂದಿರಇಂದಿರಾ ಗಾಂಧಿ🡆 More