ಯೋಹಾನ್ ಸೆಬಾಸ್ಟಿಯನ್ ಬಾಕ್

ಬಾಖ್, ಯೋಹನ್ ಸೆಬಾಸ್ಟಿಯನ್ 1685-1750.

ಜರ್ಮನಿಯ ಅರ್ಗನ್‍ವಾದಕ, ಕೃತಿಕಾರ, ಪ್ರಪಂಚದ ಒಬ್ಬ ಸಾರ್ವಕಾಲಿಕ ಮಹಾನ್ ಸಂಗೀತವಿದ.

ಬದುಕು

ಈಗ ಜರ್ಮನಿಯಲ್ಲಿರುವ ಐಸೆನಾಖ್ ಎಂಬಲ್ಲಿ 1685 ಮಾರ್ಚ್ 21ರಂದು ಜನನ. ತಂದೆ ಯೋಹನ್ ಆಂಬ್ರೋಸಿಯಾಸ್ ಸ್ಥಳೀಯ ಪುರಸಭೆಯಲ್ಲಿ ತಂತ್ರೀವಾದಕನಾಗಿ ಕೆಲಸಮಾಡುತ್ತಿದ್ದ. ಅಣುಗ ಸೆಬಾಸ್ಟಿಯನ್ ತನ್ನ ಮೊದಲ ಸಂಗೀತಪಾಠವನ್ನು ತಂದೆಯಿಂದಲೇ ಕಲಿತಿರಬಹುದು. 1695ರ ವೇಳೆಗೆ ಇವನ ತಂದೆ ತಾಯಿ ಗತಿಸಿದ್ದರಿಂದ ಮುಂದೆ ಕೆಲ ಕಾಲ ಅಣ್ಣನ ಆಶ್ರಯದಲ್ಲಿ ಬೆಳೆದ. ಸ್ವತಃ ವಾದ್ಯಕಾರನಾದ ಈತ ತಮ್ಮನಿಗೆ ವಾದ್ಯವಾದನ ಕಲೆಗೆ ಶಾಸ್ತ್ರೀಯ ಪ್ರವೇಶ ನೀಡಿದ. ಆದರೆ ಶಿಸ್ತಿನ ಬಗೆಗಿನ ತಪ್ಪು ಗ್ರಹಿಕೆಯಿಂದಲೋ ತನಗಿಂತ ಉಜ್ವಲ ಪ್ರತಿಭಾನ್ವಿತನಾಗಿದ್ದ ತಮ್ಮನ ಬಗೆಗಿನ ಮತ್ಸರದಿಂದಲೋ ಈ ಅಣ್ಣ ತನ್ನ ತಮ್ಮನ ಕಣ್ಣಿಗೆ ಮಹಾಕೃತಿಕಾರರ ರಚನೆಗಳು ಬೀಳದಂತೆ ಎಚ್ಚರವಹಿಸಿದ. ಬಾಖನ ಜ್ಞಾನದಾಹ ಅಪಾರವಾಗಿದ್ದುದರಿಂದ ಈತ ಅವನ್ನು ಗುಟ್ಟಾಗಿ ಸಂಪಾದಿಸಿ ತಿಂಗಳ ಬೆಳಕಿನಲ್ಲಿ ನಕಲುಮಾಡಿ ಅಭ್ಯಸಿಸತೊಡಗಿದ.

ಬಾಲಕ ಸೆಬಾಸ್ಟಿಯನ್ನನ ಶಾರೀರ ಸುಮಧುರವಾಗಿತ್ತು. ಹೀಗಾಗಿ ಸಂಗೀತ ಮೇಳಗಳಲ್ಲಿ ತಾರಸ್ಥಯಿ ಗಾಯಕನ ಸ್ಥಾನ ಲಭಿಸಿತು. ಆದರೆ ವಯೋ ಧರ್ಮಾನುಸಾರ ಕಂಠ ಒಡೆದು ಧ್ವನಿಗೊಗ್ಗರವಾದಾಗ ಈತ ಪಿಟೀಲುಗಾರನಾಗಿ ಮೇಳಗಳಲ್ಲಿ ಭಾಗವಹಿಸತೊಡಗಿದ. 1703ರಲ್ಲಿ ವೈಮರಿನ ರಾಜಾಸ್ಥಾನದಲ್ಲಿ ಉದ್ಯೋಗ ದೊರೆಯಿತು. ಅಲ್ಲಿ ಇತಾಲಿಯನ್ ಸಂಗೀತ ಅಭ್ಯಸಿಸಿದ. ಅದೇ ಸುಮಾರಿಗೆ ಸ್ವಂತ ಕೃತಿಗಳನ್ನು ಕೂಡ ರಚಿಸತೊಡಗಿದ

ಸಂಗೀತಕ್ಷೇತ್ರದಲ್ಲಿ ಸಾಧನೆ

ಪಾಶ್ಚಾತ್ಯ ಸಂಗೀತಕ್ಕೆ ಖಚಿತ ಅಂತಸ್ತು ಮತ್ತು ಗತಿಶೀಲತೆ ತಂದುಕೊಟ್ಟ ಈತನ ಕೃತಿಗಳನ್ನು ಅಭ್ಯಾಸದ ಸೌಕರ್ಯಕ್ಕಾಗಿ ಐದು ವಿಭಾಗಗಳಲ್ಲಿ ಪರಿಗಣಿಸುವುದುಂಟು: ಮೌಖಿಕ ಸಂಗೀತ ಕೃತಿಗಳು (ಧಾರ್ಮಿಕ ಮತ್ತು ಲೌಕಿಕ), ವಾದ್ಯಮೇಳ ಕೃತಿಗಳು, ಕೊಠಡಿಸಂಗೀತ ಕೃತಿಗಳು (ಚೇಂಬರ್ ಮ್ಯೂಸಿಕ್), ಆರ್ಗನ್ ಸಂಗೀತ ಕೃತಿಗಳು, ಹಾಪ್ರ್ಸಿಕಾರ್ಡ್ ಸಂಗೀತಕೃತಿಗಳು. ಸ್ವಂತ ವಾದನಗಳಿಂದ, ದಿಗ್ದರ್ಶನದಿಂದ ಮತ್ತು ಕೃತಿಗಳಿಂದ ಇತಿಹಾಸವನ್ನೇ ನಿರ್ಮಿಸಿದನಾದರೂ ಬಾಖನ ಖ್ಯಾತಿ ಜನಜನಿತವಾದದ್ದು ಈತ ಮರಣಹೊಂದಿ (28) ಜುಲೈ 1750, ಲೈಲ್ಝಿಗ್), ಸುಮಾರು ಅರ್ಧ ಶತಮಾನ ಕಾಲ ಸಂದ ಮೇಲೆಯೇ.

ಬಾಖ್ (1685-1750), ಹೇಯ್ಡನ್ (1732-1809), ಮೊಝಾರ್ಟ್ (1756-91) ಮತ್ತು ಬೇತೋವನ್ (1770-1827) ಈ ನಾಲ್ವರನ್ನು ಪಾಶ್ಚಾತ್ಯ ಅಭಿಜಾತ ಸಂಗೀತದ ಆಚಾರ್ಯ ಪುರುಷರೆಂದು ಪರಿಗಣಿಸುವುದು ವಾಡಿಕೆ. ಇವರ ಪೈಕಿ ವಿನೂತನತೆ, ಸೃಷ್ಟಿಶೀಲತೆ ಮತ್ತು ಸಂವಹನತೆ ಈ ಕಾರಣಗಳಿಗಾಗಿ ಕೆಲವು ವಿಮರ್ಶಕರು ಬಾಖನಿಗೆ ಅಗ್ರಸ್ಥಾನ ನೀಡಿದ್ದಾರೆ.

Tags:

🔥 Trending searches on Wiki ಕನ್ನಡ:

ಹರಿದಾಸಏರೋಬಿಕ್ ವ್ಯಾಯಾಮಭಗತ್ ಸಿಂಗ್ಆಗಮ ಸಂಧಿನಾಡ ಗೀತೆಲೋಪಸಂಧಿವಿಜ್ಞಾನಶೃಂಗೇರಿಸಂಗೊಳ್ಳಿ ರಾಯಣ್ಣಹಳೆಗನ್ನಡರಾಷ್ಟ್ರಕೂಟದಯಾನಂದ ಸರಸ್ವತಿಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಹರ್ಡೇಕರ ಮಂಜಪ್ಪವಿಜಯನಗರ ಸಾಮ್ರಾಜ್ಯವಾಣಿಜ್ಯ ಬ್ಯಾಂಕ್ಕಂಪ್ಯೂಟರ್ಯಣ್ ಸಂಧಿಆದಿ ಶಂಕರಮೈಸೂರುಅಲನ್ ಶಿಯರೆರ್ಮೂಢನಂಬಿಕೆಗಳುಬೆಳ್ಳುಳ್ಳಿಶ್ರವಣಬೆಳಗೊಳಕೆ.ಗೋವಿಂದರಾಜುಅಮ್ಮೊನೈಟ್ನವ್ಯಸ್ವರಕರ್ನಾಟಕ ಸಶಸ್ತ್ರ ಬಂಡಾಯಗ್ರಾಮ ಪಂಚಾಯತಿಶಿವರಾಮ ಕಾರಂತಭಾರತದಲ್ಲಿ ಬ್ರಿಟಿಷ್ ಆಳ್ವಿಕೆಮಾನವ ಅಭಿವೃದ್ಧಿ ಸೂಚ್ಯಂಕಭಾರತೀಯ ನಾಗರಿಕ ಸೇವೆಗಳುಪ್ರವಾಹರಾಘವಾಂಕಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕನ್ನಡದಲ್ಲಿ ವಚನ ಸಾಹಿತ್ಯತುಮಕೂರುಚದುರಂಗ (ಆಟ)ಭಾರತದ ಬುಡಕಟ್ಟು ಜನಾಂಗಗಳುಸೌರಮಂಡಲ2017ರ ಕನ್ನಡ ಚಿತ್ರಗಳ ಪಟ್ಟಿಹಸಿರುಮನೆ ಪರಿಣಾಮಮೂಲಭೂತ ಕರ್ತವ್ಯಗಳುಹಸಿವುಟಿ.ಪಿ.ಕೈಲಾಸಂವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಹೊಂಗೆ ಮರಮಯೂರಶರ್ಮಎತ್ತಿನಹೊಳೆಯ ತಿರುವು ಯೋಜನೆರೈತವಾರಿ ಪದ್ಧತಿಚಂದ್ರಪೊನ್ನಕಾಳಿದಾಸತತ್ಪುರುಷ ಸಮಾಸಸಂಯುಕ್ತ ರಾಷ್ಟ್ರ ಸಂಸ್ಥೆರವಿಚಂದ್ರನ್ಸಮಾಜಶಾಸ್ತ್ರಭಾರತದಲ್ಲಿ ತುರ್ತು ಪರಿಸ್ಥಿತಿಕಂಸಾಳೆಕುವೆಂಪುಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಇಂಟೆಲ್ಉತ್ತರ ಕರ್ನಾಟಕಪ್ರಬಂಧ ರಚನೆಚದುರಂಗದ ನಿಯಮಗಳುಆಂಗ್‌ಕರ್ ವಾಟ್ಕಾವ್ಯಮೀಮಾಂಸೆಸುದೀಪ್ವೇಳಾಪಟ್ಟಿಶಬ್ದಮಣಿದರ್ಪಣವಾಲ್ಮೀಕಿಹನುಮಾನ್ ಚಾಲೀಸ🡆 More