ಬೈಬಲ್

ಬೈಬಲ್ ಅಥವಾ ಸತ್ಯವೇದ ಕ್ರೈಸ್ತರ ಪವಿತ್ರ ಗ್ರಂಥವಾಗಿದೆ.

ಬೈಬಲ್ ಎಂಬ ಪದವು ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯಿಂದ ಉದ್ಭವಿಸಿದೆ. ಇದರ ಅರ್ಥ, 'ಪುಸ್ತಕಗಳು'ಅಥವಾಾ 'ಪುಸ್ತಕಗಳ ಸಂಗ್ರಹ'. ಬೈಬಲ್‌ನ ಪ್ರಮುಖ ಭಾಗಗಳದ "ಹಳೆ ಒಡಂಬಡಿಕೆ"ಯಲ್ಲಿ ಒಟ್ಟು ೩೯(ಪ್ರೊಟೆಸ್ಟಂಟ್‌)ಅಥವಾಾ ೫೨(ರೋಮನ್ ಕಥೋಲಿಕ)ಪುಸ್ತಕಗಳೂ "ಹೊಸ ಒಡಂಬಡಿಕೆ"ಯಲ್ಲಿ ಒಟ್ಟು ೨೭ ಪುಸ್ತಕಗಳೂ ಇವೆ.ಇವು ದೈವ ಪ್ರೇರಣೆಯಿಂದ ಬೇರೆ ಬೇರೆ ಕಾಲಘಟ್ಟಗಳಲ್ಲಿ, ಬೇರೆ ಬೇರೆ ಸ್ಥಳಗಳಲ್ಲಿ, ಬೇರೆ ಬೇರೆ ವ್ಯಕ್ತಿಗಳಿಂದ ರಚಿಸಲ್ಪಟ್ಟ ಪುಸ್ತಕಗಳ ಸಂಗ್ರಹವೆಂಬುದು ಕ್ರೈಸ್ತರ ನಂಬಿಕೆ.

ಬೈಬಲ್

ಬೈಬಲ್‌ ನಡೆದು ಬಂದ ದಾರಿ

  • ಇಂದು ಪುಸ್ತಕದ ರೂಪದಲ್ಲಿ ನೋಡುತ್ತಿರುವ ಬೈಬಲ್‌ ಮೂಲರೂಪವಾದ ಹಳೇ ಒಡಂಬಡಿಕೆಯು ಆರಂಭದಲ್ಲಿ 'ದೈವ ವಾಕ್ಯ'ವೆಂಬ ಭಯ, ಭಕ್ತಿಯಿಂದ ಒಂದಕ್ಷರವೂ ಬದಲಾಗದಂತೆ ಜನರ ಬಾಯಿಂದ ಬಾಯಿಗೆ ಪ್ರಸಾರವಾಗುತಿತ್ತು. ಲಿಪಿಗಳು ಬಳಕೆಗೆ ಬರುತಿದ್ದಂತೆ ಅತ್ಯಂತ ಶೃಧ್ಧೆಯಿಂದ ಈ ವಾಕ್ಯಗಳನ್ನು ಕ್ರಮವಾಗಿ ಕಲ್ಲು, ಮೇಣ, ಜೇಡಿ ಮಣ್ಣಿನ ಫಲಕಗಳ ಮೇಲೆ ಬರೆದಿರಿಸತೊಡಗಿದರು. ಅನಂತರ ಪಾಪಿರಸ್ ಎಂಬ ವಸ್ತುವಿನ ಮೇಲೆ ಹಾಗೂ ಕುರಿ, ಮೇಕೆ, ಹಸುವಿನ ಚರ್ಮದ ತೆಳು ಹಾಳೆಗಳ ಮೇಲೆ ಬರೆಯಲು ಉಪಕ್ರಮಿಸಿದರು.
  • ಸುಮಾರು ೧೫೦೦-೨೦೦೦ ವರ್ಷಗಳ ಐತಿಹ್ಯವಿರುವ ಬೈಬಲ್‌ನ ಮೂಲ ರೂಪ ಹೀಬ್ರುಗಳ ಪವಿತ್ರ ಗ್ರಂಥವಾದ ತನಕ್. ೫೦೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ಇದು ಹಳೆ ಒಡಂಬಡಿಕೆ ಎಂಬ ಹೆಸರಿನಲ್ಲಿ ಬೈಬಲ್‌ನ ಒಂದು ಭಾಗವಾಗಿ ಉಳಿದುಕೊಂಡಿದೆ. ಲಿಪಿಗಳು ಆರಂಭವಾಗುವ ಮೊದಲು 'ದೈವ ವಾಕ್ಯ'ಗಳನ್ನು ಕಲ್ಲು, ಮೇಣ ಮತ್ತು ಜೇಡಿ ಮಣ್ಣಿನ ಫಲಕಗಳ ಮೇಲೆ ಸರಳ ರೂಪದ ಚಿತ್ರಗಳಾಗಿ ಕೆತ್ತುತ್ತಿದ್ದರು. ಇದನ್ನು 'ಕ್ಯುನಿಫಾರ್ಮ್ ಬರವಣಿಗೆ' ಎನ್ನುತ್ತಾರೆ.
  • ಕ್ರಿ.ಪೂ.೧ರ ವೇಳೆಗೆ ಹೀಬ್ರೂ ಭಾಷೆ ಬಳಕೆಗೆ ಬಂದು ಅದು ಈ ಗ್ರಂಥದ ಮೊದಲ ಲಿಪಿಯಾಯಿತು. ಬೈಬಲ್‌ನ ಕೆಲವು ಪ್ರತಿಗಳು ಅರಾಮೈಕ್ ಭಾಷೆಯಲ್ಲೂ ಬರೆದಿರುವುದು ದೊರಕಿದೆ. ಮುಂದೆ ಇವುಗಳನ್ನು ಗ್ರೀಕ್‌ಗೆ ಭಾಷಾಂತರಿಸಲಾಯಿತು. ಈಗ ಜಗತ್ತಿನ ಅನೇಕ ಭಾಷೆಗಳಲ್ಲಿ 'ಬೈಬಲ್' ಲಭ್ಯವಿವೆಯಲ್ಲದೇ, ಅನೇಕ ಭಾಷೆಗಳಲ್ಲಿ ತರ್ಜುಮೆಗೊಂಡ ಏಕೈಕ ಗ್ರಂಥವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಜಾನ್ ಹ್ಯಾಂಡ್ಸ್ ಅವರು ಕನ್ನಡ ಭಾಷೆಗೆ ಬೈಬಲ್ ಅನುವಾದಿಸಿದರು.

ಹಳೇ ಒಡಂಬಡಿಕೆ(ರೋಮನ್ ಕಥೋಲಿಕ)ಯಲ್ಲಿನ ಪುಸ್ತಕಗಳು

  1. ಆದಿಕಾಂಡ
  2. ವಿಮೋಚನಾಕಾಂಡ
  3. ಯಾಜಕಕಾಂಡ
  4. ಸಂಖ್ಯಾಕಾಂಡ
  5. ಧರ್ಮೋಪದೇಶಕಾಂಡ
  6. ಯೊಹೋಶುವ
  7. ನ್ಯಾಯಸ್ಥಾಪಕರು
  8. ರೂತಳು
  9. ಸಮುವೇಲನು ಭಾಗ ೧
  10. ಸಮುವೇಲನು ಭಾಗ ೨
  11. ಅರಸುಗಳು ಭಾಗ ೧
  12. ಅರಸುಗಳು ಭಾಗ ೨
  13. ಪೂರ್ವಕಾಲದ ವೃತ್ತಾಂತ ಭಾಗ ೧
  14. ಪೂರ್ವಕಾಲದ ವೃತ್ತಾಂತ ಭಾಗ ೨
  15. ಎಜ್ರನು
  16. ನೆಹೆಮೀಯಾ
  17. ಎಸ್ತೆರಳು
  18. ಯೋಬನ ಗ್ರಂಥ
  19. ಕೀರ್ತನೆಗಳು
  20. ಜ್ಞಾನೋಕ್ತಿಗಳು
  21. ಉಪದೇಷಕ
  22. ಪರಮಗೀತೆ
  23. ಪ್ರವಾದಿ ಯೆಶಾಯನ ಗ್ರಂಥ
  24. ಪ್ರವಾದಿ ಯೆರೆಮೀಯನ ಗ್ರಂಥ
  25. ಪ್ರಲಾಪಗಳು
  26. ಪ್ರವಾದಿ ಯೆಜೆಕಿಯೇಲನ ಗ್ರಂಥ
  27. ಪ್ರವಾದಿ ದಾನಿಯೇಲನ ಗ್ರಂಥ
  28. ಪ್ರವಾದಿ ಹೊಶೇಯನ ಗ್ರಂಥ
  29. ಪ್ರವಾದಿ ಯೊವೇಲನ ಗ್ರಂಥ
  30. ಪ್ರವಾದಿ ಆಮೋಸನ ಗ್ರಂಥ
  31. ಪ್ರವಾದಿ ಓಬದ್ಯನ ಗ್ರಂಥ
  32. ಪ್ರವಾದಿ ಯೋನನ ಗ್ರಂಥ
  33. ಪ್ರವಾದಿ ಮೀಕನ ಗ್ರಂಥ
  34. ಪ್ರವಾದಿ ನಹೂಮನ ಗ್ರಂಥ
  35. ಪ್ರವಾದಿ ಹಬಕ್ಕೂಕನ ಗ್ರಂಥ
  36. ಪ್ರವಾದಿ ಜೆಫನ್ಯನ ಗ್ರಂಥ
  37. ಪ್ರವಾದಿ ಹಗ್ಗಾಯನ ಗ್ರಂಥ
  38. ಪ್ರವಾದಿ ಜೆಕರ್ಯನ ಗ್ರಂಥ
  39. ಪ್ರವಾದಿ ಮಲಾಕಿಯನ ಗ್ರಂಥ
    • ಅನುಗ್ರಂಥಗಳು(ಪ್ರೊಟೆಸ್ಟಂಟರ ಬೈಬಲ್‌ನಲ್ಲಿ ಈ ಕೆಳಕಂಡ ೧೩ ಪುಸ್ತಕಗಳು ಇರುವುದಿಲ್ಲ)
  1. ತೊಬೀತನ ಗ್ರಂಥ ೧
  2. ತೊಬೀತನ ಗ್ರಂಥ ೨
  3. ಜೂಡಿತಳು
  4. ಎಸ್ತೇರಳು
  5. ಸೊಲೊಮೋನನ ಜ್ಞಾನಗ್ರಂಥ
  6. ಸಿರಾಖನು
  7. ಬಾರೂಕನು
  8. ಪ್ರವಾದಿ ಯೆರೆಮೀಯನ ಪತ್ರ
  9. ಅಜರ್ಯನ ಗೀತೆ ಹಾಗು ಮೂವರು ಯುವಕರ ಕೀರ್ತನೆ
  10. ಸುಸನ್ನಳ ಗ್ರಂಥ
  11. ಬೇಲ್ ದೇವತೆ ಮತ್ತು ಘಟಸರ್ಪ
  12. ಮಕ್ಕಾಬಿಯರ ಗ್ರಂಥ೧
  13. ಮಕ್ಕಾಬಿಯರ ಗ್ರಂಥ೨

ಆಡಿಯೋ ಬೈಬಲ್ - audio

ಹೊಸ ಒಡಂಬಡಿಕೆಯಲ್ಲಿನ ಪುಸ್ತಕಗಳು

  1. ಮತ್ತಾಯನು ಬರೆದ ಸುಸಂದೇಶಗಳು
  2. ಮಾರ್ಕನು ಬರೆದ ಸುಸಂದೇಶಗಳು
  3. ಲೂಕನು ಬರೆದ ಸುಸಂದೇಶಗಳು
  4. ಯೊವಾನ್ನನು ಬರೆದ ಸುಸಂದೇಶಗಳು
  5. ಪ್ರೇಷಿತರ ಕಾರ್ಯಕಲಾಪಗಳು
  6. ಪೌಲನು ರೋಮನರಿಗೆ ಬರೆದ ಪತ್ರ
  7. ಪೌಲನು ಕೊರಿಂಥಿಯರಿಗೆ ಬರೆದ ಮೊದಲ ಪತ್ರ
  8. ಪೌಲನು ಕೊರಿಂಥಿಯರಿಗೆ ಬರೆದ ಎರಡನೆಯ ಪತ್ರ
  9. ಪೌಲನು ಗಲಾತ್ಯರಿಗೆ ಬರೆದ ಪತ್ರ
  10. ಪೌಲನು ಎಫೆಸಿಯರಿಗೆ ಬರೆದ ಪತ್ರ
  11. ಪೌಲನು ಫಿಲಿಪಿಯರಿಗೆ ಬರೆದ ಪತ್ರ
  12. ಪೌಲನು ಕೊಲೊಸ್ಸೆಯರಿಗೆ ಬರೆದ ಪತ್ರ
  13. ಪೌಲನು ಥೆಸೆಲೋನಿಯರಿಗೆ ಮೊದಲ ಬರೆದ ಪತ್ರ
  14. ಪೌಲನು ಥೆಸೆಲೋನಿಯರಿಗೆ ಎರಡನೆಯ ಬರೆದ ಪತ್ರ
  15. ಪೌಲನು ತಿಮೊಥೇಯನಿಗ ಬರೆದ ಮೊದಲ ಪತ್ರ
  16. ಪೌಲನು ತಿಮೊಥೇಯನಿಗೆ ಬರೆದ ಎರಡನೆಯ ಪತ್ರ
  17. ಪೌಲನು ತೀತನಿಗೆ ಬರೆದ ಪತ್ರ
  18. ಪೌಲನು ಫಿಲೆಮೋನನಿಗೆ ಬರೆದ ಪತ್ರ
  19. ಪೌಲನು ಹಿಬ್ರಿಯರಿಗೆ ಬರೆದ ಪತ್ರ
  20. ಯಕೋಬನು ಬರೆದ ಪತ್ರ
  21. ಪೇತ್ರನು ಬರೆದ ಮೊದಲ ಪತ್ರ
  22. ಪೇತ್ರನು ಬರೆದ ಎರಡನೆಯ ಪತ್ರ
  23. ಯೊವಾನ್ನನು ಬರೆದ ಮೊದಲ ಪತ್ರ
  24. ಯೊವಾನ್ನನು ಬರೆದ ಎರಡನೆಯ ಪತ್ರ
  25. ಯೊವಾನ್ನನು ಬರೆದ ಮೂರನೆಯ ಪತ್ರ
  26. ಯೂದನು ಬರೆದ ಪತ್ರ
  27. ಯೊವಾನ್ನನು ಕಂಡ ದಿವ್ಯ ದರ್ಶನಗಳ ಪ್ರಕಟಣೆ


Tags:

ಕ್ರೈಸ್ತ ಧರ್ಮಪವಿತ್ರ ಗ್ರಂಥಲ್ಯಾಟಿನ್ಹಳೆ ಒಡಂಬಡಿಕೆಹೊಸ ಒಡಂಬಡಿಕೆ

🔥 Trending searches on Wiki ಕನ್ನಡ:

ಗುಪ್ತ ಸಾಮ್ರಾಜ್ಯಅರಸೀಕೆರೆತತ್ಸಮ-ತದ್ಭವಕೆಂಪುವಚನ ಸಾಹಿತ್ಯಹದಿಹರೆಯಭದ್ರಾವತಿಶನಿಹಸ್ತಪ್ರತಿಅಲಂಕಾರದ್ವಿಗು ಸಮಾಸಯಣ್ ಸಂಧಿಒಡೆಯರ ಕಾಲದ ಕನ್ನಡ ಸಾಹಿತ್ಯಭಾರತದ ಪ್ರಧಾನ ಮಂತ್ರಿಗಳ ಪಟ್ಟಿಹೈದರಾಲಿಸ್ವಚ್ಛ ಭಾರತ ಅಭಿಯಾನವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಮಹಿಳೆ ಮತ್ತು ಭಾರತಇತಿಹಾಸತಾಜ್ ಮಹಲ್ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುವಿಧಾನ ಪರಿಷತ್ತುರಾಷ್ಟ್ರೀಯ ಸೇವಾ ಯೋಜನೆತಾಟಕಿತುಳಸಿಬ್ಯಾಂಕ್ಕರ್ನಾಟಕದ ಜಾನಪದ ಕಲೆಗಳುಚೋಳ ವಂಶಗೌತಮ ಬುದ್ಧಕೇಂದ್ರ ಲೋಕ ಸೇವಾ ಆಯೋಗಜಯಚಾಮರಾಜ ಒಡೆಯರ್ಖಾಸಗೀಕರಣಮಂಡಲ ಹಾವುಗೋಕಾಕ್ ಚಳುವಳಿಮಂಗಳೂರುಬಹುವ್ರೀಹಿ ಸಮಾಸಹಲ್ಮಿಡಿ ಶಾಸನಅಂಶಗಣಭಾರತೀಯ ಧರ್ಮಗಳುಬೇವುಜಾತ್ಯತೀತತೆಮಹೇಂದ್ರ ಸಿಂಗ್ ಧೋನಿಜೀವಕೋಶಹವಾಮಾನಮಾಸ್ತಿ ವೆಂಕಟೇಶ ಅಯ್ಯಂಗಾರ್ಕನ್ನಡ ಸಾಹಿತ್ಯ ಸಮ್ಮೇಳನಪಾಲಕ್ಸಹಕಾರಿ ಸಂಘಗಳುಪಾಂಡವರುಮುಹಮ್ಮದ್ತ್ರಿಪದಿಮಹಾಲಕ್ಷ್ಮಿ (ನಟಿ)ಸುಭಾಷ್ ಚಂದ್ರ ಬೋಸ್ಕರಡಿರಕ್ತಮೊಹೆಂಜೊ-ದಾರೋಭಾರತದ ಬುಡಕಟ್ಟು ಜನಾಂಗಗಳುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಸುಮಲತಾಚನ್ನಬಸವೇಶ್ವರಕೇರಳಪ್ಯಾರಾಸಿಟಮಾಲ್ಬಿಳಿಗಿರಿರಂಗನ ಬೆಟ್ಟಜೋಡು ನುಡಿಗಟ್ಟುಹಂಸಲೇಖಸಿದ್ಧಯ್ಯ ಪುರಾಣಿಕಮಣ್ಣುಸಂವಹನಅಂತಾರಾಷ್ಟ್ರೀಯ ಸಂಬಂಧಗಳುಒಡೆಯರ್ಆರೋಗ್ಯಯಕ್ಷಗಾನಭಾರತದ ಉಪ ರಾಷ್ಟ್ರಪತಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಮಂತ್ರಾಲಯಸ್ವಾತಂತ್ರ್ಯಮೆಂತೆರಾಮಉಪ್ಪಿನ ಸತ್ಯಾಗ್ರಹ🡆 More