ಹಿಂದಿ ನಟ ಶಾರುಖ್ ಖಾನ್: ಭಾರತೀಯ ನಟ

ನವೆಂಬರ್ ೨, ೧೯೬೫ ರಂದು ಜನಿಸಿದ ಶಾರುಖ್‌ ಖಾನ್‌ ರವರು ಹಿಂದಿ:शाहरुख़ ख़ान ಉರ್ದು: شاہ رُخ خان), ಪ್ರಖ್ಯಾತ ಬಾಲಿವುಡ್‌ ತಾರೆಯಲ್ಲದೇ, ಚಲನಚಿತ್ರ ನಿರ್ಮಾಪಕ ಮತ್ತು ಕಿರುತೆರೆ ನಿರೂಪಕರೂ ಆಗಿರುವ ಓರ್ವ ಭಾರತೀಯ ನಟ.

ಇವರನ್ನು ಷಾಹ್‌ ರುಖ್‌ ಖಾನ್‌ ಎಂಬ ಜನಪ್ರಿಯ ಹೆಸರಿಂದಲೂ ಸಹಾ ಗುರುತಿಸಲಾಗುತ್ತದೆ. ಈ ಜನಪ್ರೀಯ ನಟನನ್ನು ಆತನ ಅಭಿಮಾನಿಗಳು ಕಿಂಗ್ ಖಾನ್, ಬಾಲಿವುಡ್ ಬಾದಷಾ ಅಂತಲೂ ಕರೆಯುತ್ತಾರೆ

ಶಾರುಖ್ ಖಾನ್
ಹಿಂದಿ ನಟ ಶಾರುಖ್ ಖಾನ್: ಕಿರುತೆರೆಯ, ಶಾರುಖ್ ಖಾನ್,ಬಾಲಿವುಡ್ ವಲಯದಲ್ಲೂ, ಪ್ರಚಂಡ ಚನಪ್ರಿಯತೆಯನ್ನು ಗಳಿಸಿದರು, ಜನನ, ಬಾಲ್ಯ, ವಿದ್ಯಾಭ್ಯಾಸ, ಮತ್ತು ವೃತ್ತಿ ಜೀವನ, ಪ್ರಾಥಮಿಕ ವಿದ್ಯಾಬ್ಯಾಸ
ಶಾಹ್ ರುಖ್ ಖಾನ್
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
೨ ನವೆಂಬರ್ ೧೯೬೫
[ದೆಹಲಿ],ಭಾರತ
ಬೇರೆ ಹೆಸರುಗಳು ಕಿಂಗ್ ಖಾನ್, ಕಿಂಗ್ ಆಫ್ ಬಾಲಿವುಡ್
ವೃತ್ತಿ ನಟ, ನಿರ್ಮಾಪಕ
ವರ್ಷಗಳು ಸಕ್ರಿಯ 1988–present
ಪತಿ/ಪತ್ನಿ ಗೌರಿ ಖಾನ್ (1991-present )

'ಕಿರುತೆರೆ'ಯ, ಶಾರುಖ್ ಖಾನ್,'ಬಾಲಿವುಡ್ ವಲಯದಲ್ಲೂ, 'ಪ್ರಚಂಡ ಚನಪ್ರಿಯತೆಯನ್ನು ಗಳಿಸಿದರು'

೧೯೮೦ 0ರ ದಶಕದ ಕೊನೆಯಲ್ಲಿ ಅನೇಕ ಕಿರುತೆರೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಾ ತಮ್ಮ ವೃತ್ತಿಜೀವನವನ್ನು 'ಖಾನ್‌' ಆರಂಭಿಸಿದರು. ಅವರನ್ನು 'ದೀವಾನಾ'(೧೯೯೨) ಚಲನಚಿತ್ರದ ಮೂಲಕ ಚಿತ್ರಜಗತ್ತಿಗೆ ಪರಿಚಯಿಸಲಾಯಿತು. ಆಗಿನಿಂದ, ಅವರು ಅಸಂಖ್ಯಾತ ವಾಣಿಜ್ಯಾತ್ಮಕವಾಗಿ ಯಶಸ್ವಿಯಾದ ಚಿತ್ರಗಳ ಭಾಗವಾಗಿ, ತಮ್ಮ ಅನೇಕ ಪಾತ್ರಗಳ ಅಭಿನಯಗಳಿಂದಾಗಿ ವ್ಯಾಪಕ ಕೀರ್ತಿಗೆ ಪಾತ್ರರಾದರು. ಭಾರತೀಯ ಚಿತ್ರೋದ್ಯಮದಲ್ಲಿನ ತನ್ನ ಕಾಲದಲ್ಲಿ, ಖಾನ್ ಅತ್ಯುತ್ತಮ ನಟ ವಿಭಾಗದಲ್ಲಿನ ಏಳು ಪ್ರಶಸ್ತಿಗಳೂ ಸೇರಿದಂತೆ ಹದಿಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

  • 'ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ,' (೧೯೯೫),
  • 'ಕುಚ್‌ ಕುಚ್‌ ಹೋತಾ ಹೈ,' (೧೯೯೮),
  • 'ಚಕ್‌ ದೇ ಇಂಡಿಯಾ,' (೨೦೦೭),
  • 'ಓಂ ಶಾಂತಿ ಓಂ' (೨೦೦೭) ಮತ್ತು
  • 'ರಬ್‌ ನೇ ಬನಾದಿ ಜೋಡೀ,' (೨೦೦೮) ಗಳಂತಹಾ ಖಾನ್‌ರ‌, ಚಿತ್ರಗಳು ಬಾಲಿವುಡ್‌ನ ಅತಿ ಜನಪ್ರಿಯ ಚಿತ್ರಗಳಾಗಿ ಉಳಿದರೆ,
  • 'ಕಭೀ ಖುಷಿ ಕಭೀ ಗಮ್‌' (೨೦೦೧),
  • 'ಕಲ್‌ ಹೋ ನಾ ಹೋ,' (೨೦೦೩),
  • 'ವೀರ್-ಝಾರಾ' (೨೦೦೪)

ಮತ್ತು 'ಕಭೀ ಅಲ್ವಿದಾ ನಾ ಕೆಹೆನಾ,' (೨೦೦೬) ನಂತಹಾ ಚಿತ್ರಗಳು ಸಾಗರದಾಚೆಯ/ವಿದೇಶಿ ಮಾರುಕಟ್ಟೆ ಕೊಳ್ಳೆ ಹೊಡೆದ ಭಾರತೀಯ ನಿರ್ಮಿತ ಚಿತ್ರಗಳಾಗಿ, ಅವರನ್ನು ಭಾರತದ ಯಶಸ್ವಿ ನಟರಲ್ಲಿ ಒಬ್ಬರನ್ನಾಗಿ ಮಾಡಿದವು. ೨೦೦೦ ನೇ ಇಸವಿಯಿಂದ, ಖಾನ್ ಚಿತ್ರ ನಿರ್ಮಾಣ ಹಾಗೂ ಕಿರುತೆರೆ ನಿರೂಪಣಾ ಕ್ಷೇತ್ರಗಳಲ್ಲೂ ತಮ್ಮ ಶಾಖೆ ತೆರೆದರು. ಅವರು ಎರಡು ನಿರ್ಮಾಣ ಕಂಪೆನಿಗಳಾದ, ಡ್ರೀಮ್ಸ್‌ ಅನ್‌ಲಿಮಿಟೆಡ್‌ ಮತ್ತು ರೆಡ್‌ ಚಿಲ್ಲೀಸ್‌ ಎಂಟರ್‌ಟೇನ್‌ಮೆಂಟ್‌ಗಳ ಸ್ಥಾಪಕ/ಮಾಲಿಕರೂ ಹೌದು‌. 2008ರಲ್ಲಿ, ನ್ಯೂಸ್‌ವೀಕ್‌ ಅವರಿಗೆ ವಿಶ್ವದ ೫೦ ಹೆಚ್ಚು ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂಬ ಅಭಿದಾನ ನೀಡಿತು.

'ಜನನ', 'ಬಾಲ್ಯ', 'ವಿದ್ಯಾಭ್ಯಾಸ', ಮತ್ತು 'ವೃತ್ತಿ ಜೀವನ'

ಹಿಂದಿ ನಟ ಶಾರುಖ್ ಖಾನ್: ಕಿರುತೆರೆಯ, ಶಾರುಖ್ ಖಾನ್,ಬಾಲಿವುಡ್ ವಲಯದಲ್ಲೂ, ಪ್ರಚಂಡ ಚನಪ್ರಿಯತೆಯನ್ನು ಗಳಿಸಿದರು, ಜನನ, ಬಾಲ್ಯ, ವಿದ್ಯಾಭ್ಯಾಸ, ಮತ್ತು ವೃತ್ತಿ ಜೀವನ, ಪ್ರಾಥಮಿಕ ವಿದ್ಯಾಬ್ಯಾಸ 
ಶಾರುಖ್‌ ಖಾನ್ ಮತ್ತು ಕುಟುಂಬ

'ಶಾರುಖ್ ಖಾನ್‌', ೧೯೬೫ ರಲ್ಲಿ ಭಾರತ ದೇಶದ ಕರ್ನಾಟಕ ರಾಜ್ಯದ ಮಂಗಳೂರು ಎಂಬಲ್ಲಿ ಪಠಾಣ್‌ ಸಂಸ್ಕೃತಿಯ ಮುಸಲ್ಮಾನ ಪೋಷಕರಿಗೆ ಹುಟ್ಟಿದರು. ಅವರ ತಂದೆ, 'ತಾಜ್‌ ಮೊಹಮ್ಮದ್‌ ಖಾನ್‌ರು', ಬ್ರಿಟಿಷ್‌ ಭಾರತದ ಪೇಷಾವರ್ ಮೂಲದ ಭಾರತೀಯ ಸ್ವಾತಂತ್ರ್ಯಸಂಗ್ರಾಮದ ಕಾರ್ಯಕರ್ತರಾಗಿದ್ದರು. ಖಾನ್‌ರ‌ ಪ್ರಕಾರ, ಅವರ ತಂದೆ ಕಡೆಯ ಅಜ್ಜ ಆಫ್ಘಾನಿಸ್ತಾನ್‌ ಮೂಲದವರು. ಅವರ ತಾಯಿ, ಸುಭಾಷ್‌ ಚಂದ್ರ ಬೋಸ್‌‌‌ರ ಭಾರತೀಯ ರಾಷ್ಟ್ರೀಯ ಸೇನೆ/ಇಂಡಿಯನ್‌ ನ್ಯಾಷನಲ್‌ ಆರ್ಮಿಯಲ್ಲಿ ಜನರಲ್‌ ಆಗಿದ್ದ ಜಂಜುವಾ ರಜಪೂತ್‌ ಕುಲದ ಮೇಜರ್ ಜನರಲ್‌ ಷಾಹ್‌ ನವಾಜ್‌ ಖಾನ್‌ರ‌, ದತ್ತು ಪುತ್ರಿಯಾಗಿದ್ದ 'ಲತೀಫ್‌ ಫಾತಿಮಾ.' ಖಾನ್‌ರ‌ ತಂದೆಯವರು ಭಾರತ ವಿಭಜನೆಗೆ ಮುನ್ನ ಪೇಷಾವರ್ನ ಕಿಸ್ಸಾ ಖವಾನಿ ಬಜಾರ್‌ನಿಂದ ನವದೆಹಲಿಗೆ ಸ್ಥಳಾಂತರಗೊಂಡರೆ, ಅವರ ತಾಯಿಯವರ ಕುಟುಂಬ ಬ್ರಿಟಿಷ್‌ ಭಾರತದ ರಾವಲ್ಪಿಂಡಿಯಿಂದ ಬಂದವರು. ಖಾನ್‌ರಿಗೆ ಷೆಹ್‌ನಾಜ್‌ ಎಂಬ ಹೆಸರಿನ ಅಕ್ಕ ಇದ್ದಾರೆ.

ಪ್ರಾಥಮಿಕ ವಿದ್ಯಾಬ್ಯಾಸ

ಖಾನ್‌ ಸೇಂಟ್, ಕೊಲಂಬಸ್‌ ಶಾಲೆಯಲ್ಲಿ ಶಿಕ್ಷಣ ಪಡೆದು ಕ್ರೀಡೆಗಳು, ನಾಟಕ ಮತ್ತು ಶಿಕ್ಷಣಗಳಲ್ಲಿ ಸಾಧನೆ ನಡೆಸಿದರು. ಶಾಲೆಯ ಮಹತ್ವವನ್ನು ಉತ್ತಮ ರೀತಿಯಲ್ಲಿ ಪ್ರತಿನಿಧಿಸಿದ ವಿದ್ಯಾರ್ಥಿಗೆ ನೀಡಲಾಗುತ್ತಿದ್ದ ವಾರ್ಷಿಕ ಪ್ರಶಸ್ತಿ ಗೌರವಾನ್ವಿತ ಖಡ್ಗ ವನ್ನು ಸಹಾ ಗೆದ್ದರು. ನಂತರ ಹನ್ಸ್‌‌ರಾಜ್‌ ಮಹಾವಿದ್ಯಾಲಯದಲ್ಲಿ (೧೯೮೫-೧೯೮೮) ಶಿಕ್ಷಣ ಪಡೆದ ಖಾನ್, ಅಲ್ಲಿ ತಮ್ಮ ಅರ್ಥಶಾಸ್ತ್ರದ(ಆನರ್ಸ್‌) ಪದವಿ ಪಡೆದರು. ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಸಮೂಹ ಮಾಧ್ಯಮ ವಿಷಯದ ಸ್ನಾತಕೋತ್ತರ ಪದವಿಗೆ ಅಧ್ಯಯನ ನಡೆಸಿದರೂ ನಂತರ ಅವರುಬಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನ ರೂಪಿಸಿಕೊಳ್ಳಲು ಅದನ್ನು ತೊರೆದರು.

ಪೋಷಕರ ಸಾವಿನನಂತರ

ಖಾನ್ ತಮ್ಮ ಪೋಷಕರ ಸಾವಿನ ನಂತರ ೧೯೯೧ ರಲ್ಲಿ ಮುಂಬಯಿಗೆ ಸ್ಥಳಾಂತರಗೊಂಡರು. ಅದೇ ವರ್ಷ, ತಮ್ಮ ಯಾವುದೇ ಚಿತ್ರಗಳು ಬಿಡುಗಡೆಯಾಗುವ ಮುಂಚೆ ೨೫ ಅಕ್ಟೋಬರ್ ೧೯೯೧ ರಂದು ಸಾಂಪ್ರದಾಯಿಕ ಹಿಂದೂ ಮದುವೆ ಸಮಾರಂಭದಲ್ಲಿ ಗೌರಿ ಚಿಬ್ಬರ್‌ (ಈಕೆ ಹಿಂದೂ ಧರ್ಮದವರು)ರನ್ನು ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಮಗ ಆರ್ಯನ್‌(ಜ. ೧೯೯೭) ಮತ್ತು ಮಗಳು ಸುಹಾನಾ (ಜ. ೨೦೦೦). ಖಾನ್‌ರ ಪ್ರಕಾರ, ಅವರು ಅಲ್ಲಾಹುವಿನಲ್ಲಿ ತೀವ್ರ ಶ್ರದ್ಧೆಯನ್ನಿಟ್ಟಿದ್ದರೂ, ತಮ್ಮ ಪತ್ನಿಯ ಧರ್ಮವನ್ನೂ ಗೌರವಿಸುತ್ತಾರೆ. ಮನೆಯಲ್ಲಿ, ಅವರ ಮಕ್ಕಳು ಹಿಂದೂ ದೇವತೆಗಳೊಂದಿಗೆ ಕುರ್‌-ಆನ್‌ ಅನ್ನು ಇಟ್ಟು ಎರಡೂ ಧರ್ಮಗಳನ್ನು ಪಾಲಿಸುತ್ತಾರೆ.

೨೦೦೫ ರಲ್ಲಿ

೨೦೦೫ ರಲ್ಲಿ, ನಸ್ರೀನ್‌ ಮುನ್ನಿ ಕಬೀರ್‌ರು ಖಾನ್‌ರ ಮೇಲೆ ಎರಡು-ಭಾಗಗಳ, ದ ಇನ್ನರ್ ಅಂಡ್‌ ಔಟರ್ ವರ್ಲ್ಡ್‌ ಆಫ್‌ ಷಾಹ್‌ ರುಖ್‌ ಖಾನ್‌/ಷಾಹ್‌ ರುಖ್‌ ಖಾನ್‌ರ ಆಂತರಿಕ ಹಾಗೂ ಬಾಹ್ಯ ಪ್ರಪಂಚ ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರವನ್ನು ನಿರ್ಮಿಸಿದರು. ಅವರ 2004 ಟೆಂಪ್ಟೇಷನ್ಸ್‌ ಸಂಗೀತ ಪ್ರವಾಸವನ್ನು ವಿಶೇಷ ಆಕರ್ಷಣೆಯಾಗಿಸಿದ್ದ ಆ ಚಿತ್ರವು, ಖಾನ್‌ರ‌, ಕುಟುಂಬದ ಆಂತರಿಕ ಪ್ರಪಂಚ ಹಾಗೂ ಹೊರಪ್ರಪಂಚದ ವೃತ್ತಿಜೀವನದ ದೈನಂದಿನ ಜೀವನದ ವೈದೃಶ್ಯಗಳನ್ನು ಎತ್ತಿ ತೋರಿಸಿತ್ತು. ಸ್ಟಿಲ್‌ ರೀಡಿಂಗ್‌ ಖಾನ್ ‌, ಎಂಬ ಅವರ ಕೌಟುಂಬಿಕ ಜೀವನದ ಬಗ್ಗೆ ಬರೆದ ಪುಸ್ತಕವು ೨೦೦೭ ರಲ್ಲಿ ಬಿಡುಗಡೆಯಾಯಿತು. ಅನುಪಮಾ ಛೋ/ಚೋಪ್ರಾರ ಇನ್ನೊಂದು ಪುಸ್ತಕ, "ಕಿಂಗ್‌ ಆಫ್‌ ಬಾಲಿವುಡ್‌: ಶಾರುಖ್‌ ಖಾನ್ ಅಂಡ್‌ ದ ಸೆಡಕ್ಟಿವ್‌ ವರ್ಲ್ಡ್‌ ಆಫ್‌ ಇಂಡಿಯನ್‌ ಸಿನೆಮಾ", 2007ರಲ್ಲಿ ಬಿಡುಗಡೆಯಾಯಿತು. ಈ ಪುಸ್ತಕವು ಖಾನ್‌ರ‌ ಜೀವನದ ಮುಖಾಂತರ ಬಾಲಿವುಡ್‌ ಪ್ರಪಂಚವನ್ನು ವಿವರಿಸಿತು.

ಪ್ರಶಸ್ತಿಗಳು

  • ಖಾನ್‌ ಅವರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಭಾರತದ ನಾಲ್ಕನೇ ಉನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀಯನ್ನು ಅವರಿಗೆ ಭಾರತ ಸರ್ಕಾರದ ವತಿಯಿಂದ 2005ರಲ್ಲಿ ನೀಡಿ ಗೌರವಿಸಲಾಯಿತು. ಏಪ್ರಿಲ್‌ ೨೦೦೭ ರಲ್ಲಿ, ಲಂಡನ್‌‌ಮೇಡಮ್‌ ತುಸ್ಸಾಡ್‌ರ ಮೇಣದ ಪುತ್ಥಳಿಗಳ ಸಂಗ್ರಹಾಲಯ ದಲ್ಲಿ ಖಾನ್ ಅವರ ಸಹಜ ಗಾತ್ರದ ಪುತ್ಥಳಿಯನ್ನು ಸ್ಥಾಪಿಸಲಾಯಿತು. ಅದೇ ವರ್ಷ ಪ್ಯಾರಿಸ್‌ಮ್ಯುಸೀ ಗ್ರೆವಿನ್‌ ಎಂಬಲ್ಲಿ ಮತ್ತೊಂದು ಪ್ರತಿಮೆಯನ್ನು ಸ್ಥಾಪಿಸಲಾಯಿತು. ತಮ್ಮ “ಅಸಾಧಾರಣ ವೃತ್ತಿಜೀವನ”ದ ಸಾಧನೆಗಾಗಿ ಫ್ರೆಂಚ್‌ ಸರಕಾರದಿಂದ ಆರ್ಡರೆ ಡೆಸ್‌ ಆರ್ಟ್ಸ್‌ ಎಟ್‌ ಡೆಸ್‌ ಲೆಟ್ರೆಸ್‌ (ಆರ್ಡರ್‌ ಆಫ್‌ ದ ಆರ್ಟ್ಸ್‌ ಅಂಡ್‌ ಲಿಟರೇಚರ್‌) ಪ್ರಶಸ್ತಿಯನ್ನು ಅದೇ ವರ್ಷ ಅವರು ಪಡೆದರು.

೨೦೦೮ ರಲ್ಲಿ

  • ಅಕ್ಟೋಬರ್ ೨೦೦೮ ರಲ್ಲಿ, ಮಲೇಷಿಯಾದ ಮಲಕ್ಕಾ ರಾಜ್ಯದ ಮುಖ್ಯಸ್ಥರಾದ ಯಾಂಗ್‌ ದಿ/ಡಿ-ಪೆರ್ಟುವಾ ನೆಗೆರಿ ತುನ್‌ ಮೊಹಮ್ಮದ್‌ ಖಲೀಲ್‌ ಯಾಕೂಬ್‌ರಿಂದ ಖಾನ್‌ರವರು ದತುಕ್ (ಬ್ರಿಟಿಷ್‌ ನೈಟ್‌ಹುಡ್‌ ಪದವಿಯ “ಸರ್‌” ಪದವಿಯಂತೆ) ಎಂಬ ಉಪಾಧಿಯೊಂದಿಗಿನ ದರ್ಜಾ ಮುಲಿಯಾ ಸೆರಿ ಮೆಲಕ ಎಂಬ ಗೌರವ ಪಡೆದರು. ಖಾನ್‌ರವರು ೨೦೦೧ ರಲ್ಲಿ ಆ ದೇಶದಲ್ಲಿ ಒನ್‌ ಟು ಕಾ ಫೋರ್‌ ಚಿತ್ರದ ಚಿತ್ರೀಕರಣ ನಡೆಸಿ ಮಲಕ್ಕಾದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದುದಕ್ಕಾಗಿ" ಅವರನ್ನು ಗೌರವಿಸಲಾಗಿತ್ತು. ಈ ನಿರ್ಧಾರದ ವಿರುದ್ಧ ಕೆಲವರಿಂದ ಟೀಕಾಪ್ರಹಾರವೂ ಆಯಿತು. ಅವರು ೨೦೦೯ ರಲ್ಲಿ ಬ್ರಿಟನ್‌ ನ 'ಬೆಡ್‌ಫೋರ್ಡ್‌ಷೈರ್ ವಿಶ್ವವಿದ್ಯಾಲಯ'ದಿಂದ ಕಲೆ ಮತ್ತು ಸಂಸ್ಕೃತಿಗಳ ಮೇಲಿನ 'ಗೌರವ ಡಾಕ್ಟರೇಟ್‌ ಪದವಿ' ಪಡೆದಿದ್ದಾರೆ.

ಚಿತ್ರರಂಗದ ವೃತ್ತಿ

ಖಾನ್‌ ವಿಖ್ಯಾತ ರಂಗನಿರ್ದೇಶಕ 'ಬ್ಯಾರ್ರಿ ಜಾನ್‌' ರ ಗರಡಿಯಲ್ಲಿ ದೆಹಲಿಯ ಥಿಯೇಟರ್‌ ಆಕ್ಷನ್‌ ಗ್ರೂಪ್‌ (TAG)ನಲ್ಲಿ ನಟನೆಯ ಅಭ್ಯಾಸ ನಡೆಸಿದರು. 2007ರಲ್ಲಿ, ಜಾನ್‌ ತಮ್ಮ ಮಾಜಿ ವಿದ್ಯಾರ್ಥಿಯ ಬಗ್ಗೆ ಹೀಗೆಂದರು, "ಶಾರುಖ್‌ರ ವೃತ್ತಿಜೀವನದ ಅಸಾಧಾರಣ ಯಶಸ್ವಿ ಬೆಳವಣಿಗೆ ಮತ್ತು ನಿರ್ವಹಣೆಯ ಗೌರವ ಸ್ವತಃ ಸೂಪರ್‌ಸ್ಟಾರ್ ಅವರಿಗೇ ಸಲ್ಲಬೇಕು." ಖಾನ್‌ 1988ರಲ್ಲಿ ಕಿರುತೆರೆ ಸರಣಿ ಫೌಜಿ ಯಲ್ಲಿ, ಕಮಾಂಡೋ ಅಭಿಮನ್ಯು ರಾಯ್ ಪಾತ್ರದ ಮೂಲಕ ತಮ್ಮ ನಟನಾವೃತ್ತಿ ಆರಂಭಿಸಿದರು. ಅವರು ಇನ್ನೂ ಅನೇಕ ಕಿರುತೆರೆ ಸರಣಿಗಳಲ್ಲಿ ನಟಿಸುವುದನ್ನು ಮುಂದುವರೆಸಿದರು. ಸರ್ಕಸ್‌ ಪ್ರದರ್ಶನಕಾರರ ಜೀವನದ ಮೇಲೆ ಆಧಾರಿತವಾಗಿದ್ದ 1989ರಲ್ಲಿ ಪ್ರಸಾರವಾದ ಅಜೀಜ್‌ ಮಿರ್ಜಾರ ಸರ್ಕಸ್ ಅದರಲ್ಲಿ ಹೆಚ್ಚು ಪ್ರಸಿದ್ಧಿ ಗಳಿಸಿತ್ತು. ಅದೇ ವರ್ಷ, ಅರುಂಧತಿ ರಾಯ್‌ ಅವರು ಬರೆದಿದ್ದ, ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಬದುಕಿನ ಮೇಲೆ ಆಧಾರಿತವಾಗಿದ್ದ ಕಿರುತೆರೆಗೆಂದೇ-ನಿರ್ಮಿತ ಇಂಗ್ಲಿಷ್‌-ಭಾಷೆಯ ಚಿತ್ರ, ಇನ್‌ ವಿಚ್‌ ಆನ್ನಿ ಗಿವ್ಸ್‌ ಇಟ್‌ ದೋಸ್‌ ಒನ್ಸ್‌ ನಲ್ಲಿ ಕಿರುಪಾತ್ರವೊಂದನ್ನು ಸಹಾ ಖಾನ್ ಮಾಡಿದ್ದರು.

೧೯೯೦ರ ದಶಕ

೧೯೯೧ ರಲ್ಲಿ ನವದೆಹಲಿಯಿಂದ ಮುಂಬಯಿಗೆ ಸ್ಥಳಾಂತರಗೊಂಡ ನಂತರ, ದೀವಾನಾ * (೧೯೯೨) ಚಿತ್ರದ ಮೂಲಕ ಖಾನ್ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಆ ಚಲನಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಪಡೆದು ಬಾಲಿವುಡ್‌ನ ಅವರ ವೃತ್ತಿಜೀವನವನ್ನು ಆರಂಭಿಸಿತು. ಅವರ ಸಾಧನೆಯು ಫಿಲ್ಮ್‌ಫೇರ್ ಅತ್ಯುತ್ತಮ ಪುರುಷ ಪರಿಚಯ ಪ್ರಶಸ್ತಿಯನ್ನು ತಂದುಕೊಟ್ಟಿತು. ಅವರು ಮಾಯಾ ಮೇಮ್‌ಸಾಬ್‌ , ಚಿತ್ರದಲ್ಲಿ ಪಾತ್ರ ವಹಿಸಿದಾಗ ಅದರಲ್ಲಿ ಅವರು "ಪ್ರಕಟ" ಲೈಂಗಿಕ ದೃಶ್ಯದಲ್ಲಿ ಕಾಣಿಸಿಕೊಂಡ ಕಾರಣ ಕೆಲ ವಿವಾದಗಳಿಗೆ ಕಾರಣರಾದರು.

'ಬಾಜಿಗರ್ ಚಿತ್ರ

೧೯೯೩ ರಲ್ಲಿ, ಖಾನ್ ಅನುಕ್ರಮವಾಗಿ ಒತ್ತಾಯದಿಂದ ಹಿಂದೆ ಬೀಳುವ ಪ್ರೇಮಿ ಮತ್ತು ಕೊಲೆಗಾರನಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡ, ಡರ್‌ ಮತ್ತು ಬಾಜಿಗರ್‌ ಚಿತ್ರಗಳಲ್ಲಿ ಖಳ ಪಾತ್ರಗಳಲ್ಲಿನ ಉತ್ತಮ ಸಾಧನೆಗಾಗಿ ಹೆಚ್ಚು ಪ್ರಸಿದ್ಧವಾದರು. ಡರ್‌ ಚಿತ್ರವು ಪ್ರಖ್ಯಾತ ಚಿತ್ರನಿರ್ಮಾಪಕ ಯಶ್‌ ಛೋಪ್ರಾ ಮತ್ತು ಅವರ ಬಾಲಿವುಡ್‌ನ ಅತಿದೊಡ್ಡ ನಿರ್ಮಾಣ ಕಂಪೆನಿಯಾದ ಯಶ್‌ ರಾಜ್‌ ಫಿಲಂಸ್‌ನ ಲಾಂಛನದೊಂದಿಗಿನ ಪ್ರಥಮ ಸಹಯೋಗಕ್ಕೆ ಕಾರಣವಾಯಿತು. ಖಾನ್‌ರ ಬಾಜಿಗರ್ , ತನ್ನ ಪ್ರೇಮಿಯನ್ನೇ ಕೊಲೆ ಮಾಡುವ ಸಂದೇಹಾತ್ಮಕ/ಇಬ್ಬಗೆ ವ್ಯಕ್ತಿತ್ವದ ಸೇಡುಗಾರನ ಪಾತ್ರದಲ್ಲಿ ಬಾಲಿವುಡ್‌ನ ಮಾದರಿ ಸೂತ್ರದ ಅನಿರೀಕ್ಷಿತ ಉಲ್ಲಂಘನೆಯಿಂದ ತನ್ನ ಭಾರತೀಯ ವೀಕ್ಷಕರನ್ನು ದಿಗ್ಭ್ರಮೆಗೊಳಿಸಿತು. ಆ ಚಿತ್ರದ ಉತ್ತಮ ನಟನಾ ಸಾಧನೆ ಅವರಿಗೆ ಪ್ರಥಮ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ದೊರಕಿಸಿಕೊಟ್ಟಿತು. ಅದೇ ವರ್ಷ, ಕುಂದನ್‌ ಶಾಹ್‌ರ ಕಭೀ ಹಾ ಕಭೀ ನಾ , ಚಿತ್ರದ ಓರ್ವ ಯುವ ಸಂಗೀತಗಾರನ ಪಾತ್ರದಲ್ಲಿ ಖಾನ್ ನೀಡಿದ ಅಮೋಘ ಅಭಿನಯ ಅವರಿಗೆ ಅತ್ಯುತ್ತಮ ನಟನೆಗಾಗಿ ಫಿಲ್ಮ್‌ಫೇರ್ ಕ್ರಿಟಿಕ್ಸ್‌ ಪ್ರಶಸ್ತಿಯನ್ನು ದೊರಕಿಸಿಕೊಟ್ಟಿತು. ಖಾನ್‌ರವರು ಕೂಡಾ ಈ ಚಿತ್ರವನ್ನು ತಾವು ನಟಿಸಿದ ಚಿತ್ರಗಳಲ್ಲೇ ಸಾರ್ವಕಾಲಿಕ ಪ್ರೀತಿಪಾತ್ರ ಚಿತ್ರವೆಂದು ಒಪ್ಪಿಕೊಳ್ಳುತ್ತಾರೆ. 1994ರಲ್ಲಿ, ಖಾನ್ ಮತ್ತೊಮ್ಮೆ ಹಿಂಬಾಲಕ ಪ್ರೇಮಿ/ಮನೋರೋಗಿಯ ಪಾತ್ರದಲ್ಲಿ ಮಾಧುರಿ ದೀಕ್ಷಿತ್‌ರೊಂದಿಗೆ ಅಂಜಾಮ್‌ ನಲ್ಲಿ ನಟಿಸಿದರು. ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಗಳಿಸದೇ ಹೋದರೂ, ಖಾನ್‌ರ‌ ನಟನಾಚಾತುರ್ಯ ಅವರನ್ನು ಫಿಲ್ಮ್‌ಫೇರ್ ಅತ್ಯುತ್ತಮ ಖಳನಟ ಪ್ರಶಸ್ತಿಗೆ ಭಾಜನರಾಗಿಸಿತು.

೧೯೯೫ ರಲ್ಲಿ

೧೯೯೫ ರಲ್ಲಿ, ಪ್ರಮುಖ ನಿರ್ಣಾಯಕ ಮತ್ತು ವಾಣಿಜ್ಯ ಯಶಸ್ಸು ಕಂಡ ಆದಿತ್ಯ ಛೋಪ್ರಾರ ಚೊಚ್ಚಲ ನಿರ್ದೇಶನದ ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ , ಚಿತ್ರದಲ್ಲಿ ನಟಿಸಿ ಖಾನ್ ತಮ್ಮ ಎರಡನೇ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. 2007ರಲ್ಲಿ, ಆ ಚಿತ್ರವು ಮುಂಬಯಿಯ ಚಿತ್ರಮಂದಿರಗಳಲ್ಲಿ ಹನ್ನೆರಡನೇ ವರ್ಷದ ಪ್ರದರ್ಶನಗಳನ್ನು ಕಂಡಿತು. ಅಷ್ಟು ಸಮಯದಲ್ಲಿ ಚಿತ್ರವು ಒಟ್ಟಾರೆಯಾಗಿ 12 ದಶಲಕ್ಷ ರೂಪಾಯಿಗಳ ಆದಾಯವನ್ನು ಪಡೆದು ಭಾರತದ ಅತಿ ದೊಡ್ಡ ಪ್ರಚಂಡ ಯಶಸ್ವಿ ಚಿತ್ರಗಳಲ್ಲಿ ಒಂದೆನಿಸಿಕೊಂಡಿತು. ಅದೇ ವರ್ಷದ ಮುಂಚಿನ ಭಾಗದಲ್ಲಿ ವರ್ಷದ ಎರಡನೇ ಅತಿದೊಡ್ಡ ಜನಪ್ರಿಯ ಚಿತ್ರವೆನಿಸಿದ ರಾಕೇಶ್‌ ರೋಷನ್‌ರ ಕರಣ್‌ ಅರ್ಜುನ್‌ ಚಿತ್ರದಲ್ಲಿ ಸಹಾ ಯಶಸ್ಸನ್ನು ಕಂಡುಕೊಂಡಿದ್ದರು.

೧೯೯೬ ರಲ್ಲಿ ಬಿಡುಗಡೆಯಾದ ಚಿತ್ರಗಳು ಅಷ್ಟು ಯಶಸ್ಸು ಕಾಣಲಿಲ್ಲ

೧೯೯೬ ರಲ್ಲಿ ಬಿಡುಗಡೆಯಾದ ಅವರ ಎಲ್ಲಾ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸನ್ನು ಕಾಣಲಿಲ್ಲವಾದ್ದರಿಂದ ಅದು ಖಾನ್‌ರಿಗೆ ನಿರಾಶಾದಾಯಕ ವರ್ಷವಾಗಿ ಪರಿಣಮಿಸಿತು. ಆದರೂ ನಂತರ ೧೯೯೭ ರಲ್ಲಿ ಅವರ ಯಶಸ್ಸಿನ ಪುನರಾಗಮನವಾಯಿತು. -- ವರ್ಷದ ಅತಿ ದೊಡ್ಡ ಯಶಸ್ಸುಗಳಲ್ಲಿ ಒಂದಾಗಿದ್ದ -- ಸುಭಾಷ್‌ ಘಾಯ್‌ರ ಸಾಮಾಜಿಕ ರೂಪಕ ಪರ್ದೇಸ್‌ ಮತ್ತು ಮಧ್ಯಮ ಯಶಸ್ಸನ್ನು ಕಂಡ ಅಜೀಜ್‌ ಮಿರ್ಜಾರ ಹಾಸ್ಯಚಿತ್ರ ಯಸ್‌ ಬಾಸ್‌ ಗಳೊಂದಿಗೆ ಮತ್ತೆ ಯಶಸ್ಸನ್ನು ಕಂಡರು. ಯಶ್‌ ಛೋಪ್ರಾರ ನಿರ್ದೇಶನದಲ್ಲಿ ಅವರ ಎರಡನೇ ಯೋಜನೆಯಾದ, ದಿಲ್‌ ತೊ ಪಾಗಲ್‌ ಹೈ ವರ್ಷದ ಎರಡನೇ ಅತಿಹೆಚ್ಚು ಸಂಪಾದನೆಯ ಚಿತ್ರವಾದುದಲ್ಲದೇ, ತನ್ನ ಹೊಸ ನಟಿಯರಲ್ಲಿ ಒಬ್ಬಳನ್ನು ಪ್ರೇಮಿಸುವ ರಂಗ ನಿರ್ದೇಶಕನ ಪಾತ್ರಕ್ಕಾಗಿ ಅವರು ತಮ್ಮ ಮೂರನೇ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಗಳಿಸಿದರು.

೧೯೯೮ ರಲ್ಲಿ

೧೯೯೮ ರಲ್ಲಿ, ಕರಣ್‌ ಜೋಹರ್‌ರ ಚೊಚ್ಚಲ ನಿರ್ದೇಶನದ ಹಾಗೂ ವರ್ಷದ ಅತಿ ದೊಡ್ಡ ಯಶಸ್ವಿ ಚಿತ್ರವೆನಿಸಿಕೊಂಡ ಕುಚ್‌ ಕುಚ್‌ ಹೋತಾ ಹೈ ನಲ್ಲಿ ಖಾನ್ ನಟಿಸಿದರು. ಅವರ ನಟನೆಯು ಅವರಿಗೆ ತಮ್ಮ ನಾಲ್ಕನೇ ಫಿಲ್ಮ್‌ಫೇರ್ನ ಅತ್ಯುತ್ತಮ ನಟ ಪ್ರಶಸ್ತಿಯನ್ನು ದೊರಕಿಸಿತು. ಮಣಿರತ್ನಂದಿಲ್‌ ಸೇ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಗಮನಾರ್ಹ ಹೊಗಳಿಕೆಗಳನ್ನು ಪಡೆದರು. ಈ ಚಿತ್ರವು ಭಾರತೀಯ ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯಲಿಲ್ಲವಾದರೂ, ಸಾಗರೋತ್ತರ ಪ್ರದೇಶಗಳಲ್ಲಿ ವಾಣಿಜ್ಯಿಕ ಯಶಸ್ಸನ್ನು ಪಡೆಯಿತು.

೧೯೯೯ ರಲ್ಲಿ 'ಬಾದ್ ಷಾ,' ಬಿಡುಗಡೆಯಾಯಿತು

೧೯೯೯ ರಲ್ಲಿ ಬಿಡುಗಡೆಯಾದ ಖಾನ್‌ರ‌ ಏಕೈಕ ಚಿತ್ರ ಬಾದ್‌ಷಾ ವು, ಸಾಮಾನ್ಯ ಗಳಿಕೆಯನ್ನು ಮಾಡಿತು.

೨೦೦೦ ರ ದಶಕ

ಅಮಿತಾಭ್‌ ಬಚ್ಚನ್‌ರು ಸಹನಟರಾಗಿದ್ದ ಆದಿತ್ಯ ಛೋಪ್ರಾರ ೨೦೦೦ನೇ ಇಸವಿಯ ಚಿತ್ರ, ಮೊಹಬ್ಬತೇ ಯೊಂದಿಗೆ ಖಾನ್‌ರ‌ ಯಶಸ್ಸು ಮುಂದುವರೆಯಿತು. ಅದು ಗಲ್ಲಾ ಪೆಟ್ಟಿಗೆಯನ್ನು ತುಂಬಿಸಿತಲ್ಲದೇ ಮಹಾವಿದ್ಯಾಲಯದ/ಕಾಲೇಜು ಶಿಕ್ಷಕರಾಗಿ ಖಾನ್‌ರ‌ ಅಭಿನಯ ಅವರಿಗೆ ಅತ್ಯುತ್ತಮ ಸಾಧನೆಗಾಗಿಯ ಎರಡನೇ ಕ್ರಿಟಿಕ್ಸ್‌ ಪ್ರಶಸ್ತಿ ದೊರಕಿಸಿತು. ಮನ್ಸೂರ್ ಖಾನ್‌ರ‌, ಸಾಹಸ ಚಿತ್ರ ಜೋಷ್‌‌ ನಲ್ಲೂ ನಟಿಸಿದ್ದರು‌. ಗಲ್ಲಾ ಪೆಟ್ಟಿಗೆ ಯಶಸ್ಸನ್ನು ಗಳಿಸಿದ ಈ ಚಿತ್ರದಲ್ಲಿ ಖಾನ್‌ರು ಗೋವಾದ ಕ್ರೈಸ್ತ ರೌಡಿ ತಂಡದ ನಾಯಕನಾಗಿ ಹಾಗೂ ಐಶ್ವರ್ಯ ರೈಯವರು ಅವರ ಅವಳಿ ಸೋದರಿಯಾಗಿ ನಟಿಸಿದ್ದರು. ಅದೇ ವರ್ಷದಲ್ಲಿ, ಖಾನ್ ತಮ್ಮದೇ ಆದ ಸ್ವಂತ ನಿರ್ಮಾಣಸಂಸ್ಥೆಯಾದ, ಡ್ರೀಮ್ಸ್‌ ಅನ್‌ಲಿಮಿಟೆಡ್‌ ಅನ್ನು ಜೂಹಿ ಚಾವ್ಲಾರೊಂದಿಗೆ ಸೇರಿ ಸ್ಥಾಪಿಸಿದರು (ಕೆಳಗೆ ನೋಡಿ). ಖಾನ್ ಮತ್ತು ಚಾವ್ಲಾ ಇಬ್ಬರೂ ತಮ್ಮ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರವಾದ ಫಿರ್ ಬಿ ದಿಲ್‌ ಹೈ ಹಿಂದೂಸ್ಥಾನಿ/ಹಿಂದೂಸ್ತಾನಿ ಯಲ್ಲಿ ನಟಿಸಿದ್ದರು. ಕರಣ್‌ ಜೋಹರ್‌ರೊಂದಿಗಿನ ಅವರ ಸಹಯೋಗ ವರ್ಷದ ಎರಡನೇ ಹೆಚ್ಚಿನ ಯಶಸ್ಸು ಕಂಡ ಕುಟುಂಬ ರೂಪಕ ಚಿತ್ರವಾದ ಕಭೀ ಖುಷಿ ಕಭೀ ಗಮ್‌ ನೊಂದಿಗೆ ಮುಂದುವರೆಯಿತು‌. ಮಹಾಪುರುಷ ಅಶೋಕನ (೩೦೪ BC–೨೩೨ BC) ಜೀವನದ ಮೇಲೆ ಆಧಾರಿತವಾಗಿದ್ದ ತಮ್ಮ ಭಾಗಶಃ ಕಲ್ಪಿತ ಚಿತ್ರ ಐತಿಹಾಸಿಕ ಮಹಾಕಾವ್ಯ ಅಶೋಕ ದಲ್ಲಿನ ಚಕ್ರವರ್ತಿ ಅಶೋಕನ ಪಾತ್ರದ ಅಭಿನಯಕ್ಕಾಗಿ ಸಕಾರಾತ್ಮವಾದ ವಿಮರ್ಶೆಗಳನ್ನು ಅವರು ಪಡೆದಿದ್ದರು.

೨೦೦೨ ರಲ್ಲಿ

೨೦೦೨ ರಲ್ಲಿ, ಸಂಜಯ್‌ ಲೀಲಾ ಬನ್ಸಾಲಿಯವರ ಪ್ರಶಸ್ತಿ-ವಿಜೇತ ಗತಕಾಲದ ಪ್ರಣಯಕಾವ್ಯ, ದೇವದಾಸ ಚಿತ್ರದಲ್ಲಿನ ಶೀರ್ಷಿಕೆ ಪಾತ್ರದಲ್ಲಿನ ಖಾನ್‌‌ರ ಅಭಿನಯವನ್ನು ಶ್ಲಾಘಿಸಲಾಯಿತು. ಇದು ಶರತ್‌ ಚಂದ್ರ ಚಟ್ಟೋಪಾಧ್ಯಾಯರ ಅದೇ ಹೆಸರಿನ ವಿಖ್ಯಾತ ಕಾದಂಬರಿಯೊಂದರ ಮೂರನೇ ಹಿಂದಿ ಚಿತ್ರ ಅಳವಡಿಕೆಯಾಗಿದ್ದುದಲ್ಲದೇ ಆ ವರ್ಷದ ಅತಿ ದೊಡ್ಡ ಯಶಸ್ವಿ ಚಿತ್ರಗಳಲ್ಲೊಂದಾಯಿತು. ಗಲ್ಲಾ ಪೆಟ್ಟಿಗೆಯನ್ನು ತುಂಬಿಸಿದ ಕುಟುಂಬ-ರೂಪಕ ಹಮ್‌ ತುಮಾರೆ ಹೇ ಸನಮ್‌ ಚಿತ್ರದಲ್ಲಿ ಸಲ್ಮಾನ್‌ ಖಾನ್ ಮತ್ತು ಮಾಧುರಿ ದೀಕ್ಷಿತ್‌ರೊಂದಿಗಿನ ಪಾತ್ರವನ್ನೂ ಸಹಾ ಖಾನ್ ಮಾಡಿದ್ದಾರೆ. 2003ರಲ್ಲಿ, ಖಾನ್ ಸಾಧಾರಣ ಯಶಸ್ಸನ್ನು ಹೊಂದಿದ ಪ್ರಣಯ ರೂಪಕ ಚಲ್ತೇ ಚಲ್ತೇ ಯಲ್ಲಿ ನಟಿಸಿದರು. ಅದೇ ವರ್ಷ, ಕರಣ್‌ ಜೋಹರ್ ಬರೆದ ಮತ್ತು‌ ನಿಖಿಲ್‌ ಅದ್ವಾನಿ/ಅಡ್ವಾಣಿ ನಿರ್ದೇಶಿಸಿದ ಕಣ್ಣೀರಿನ ಪ್ರವಾಹ ಹರಿಸುವ, ಕಲ್‌ ಹೋ ನಾ ಹೋ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿನ ಖಾನ್‌ರ‌, ಮಾರಕ ಹೃದ್ರೋಗವಿರುವ ಪುರುಷನ ಪಾತ್ರದಲ್ಲಿನ ನಟನೆಯನ್ನು ಬಹಳ ಶ್ಲಾಘಿಸಲಾಗಿದೆ. ಈ ಚಿತ್ರವು ಭಾರತದಲ್ಲಿನ ವರ್ಷದ ಅತಿ ದೊಡ್ಡ ಯಶಸ್ವಿ ಚಿತ್ರಗಳಲ್ಲೊಂದಾಗಿದ್ದುದಲ್ಲದೇ ಸಾಗರೋತ್ತರ ಮಾರುಕಟ್ಟೆಗಳಲ್ಲಿನ ಬಾಲಿವುಡ್‌ನ ಅತಿ ದೊಡ್ಡ ಯಶಸ್ವಿ ಚಿತ್ರವಾಯಿತು.

೨೦೦೪ ರಲ್ಲಿ

೨೦೦೪ ನೇ ಇಸವಿಯು ಖಾನ್‌ರಿಗೆ ಪ್ರತ್ಯೇಕವಾಗಿ ವಾಣಿಜ್ಯಿಕವಾಗಿ ಹಾಗೂ ನಿರ್ಣಾಯಕ ರೀತಿಯಲ್ಲಿ ಒಳ್ಳೆಯ ವರ್ಷವಾಗಿತ್ತು. ಅವರು ಫರಾಹ್‌ ಖಾನ್‌ರ ಚೊಚ್ಚಲ ನಿರ್ದೇಶನದ ಹಾಸ್ಯ ಚಿತ್ರ ಮೈ ಹೂ ನಾ ನಲ್ಲಿ ಸಹಾ ನಟಿಸಿದ್ದರು. ಚಿತ್ರವು ಗಲ್ಲಾ ಪೆಟ್ಟಿಗೆಯನ್ನು ತುಂಬಿಸಿತು. ಭಾರತ ಮತ್ತು ಸಾಗರೋತ್ತರ ದೇಶಗಳಲ್ಲಿ ಕೂಡಾ ೨೦೦೪ರ ಅತಿ ದೊಡ್ಡ ಯಶಸ್ವಿ ಚಿತ್ರವಾದ ಯಶ್‌ ಛೋಪ್ರಾರ ಪ್ರಣಯಗಾಥೆ ವೀರ್-ಝಾರಾ ನಲ್ಲಿ ಭಾರತೀಯ ಅಧಿಕಾರಿ, ವೀರ್ ಪ್ರತಾಪ್‌ ಸಿಂಗ್‌ ಪಾತ್ರ ವಹಿಸಿದ್ದರು. ಇದು ವೀರ್ ಮತ್ತು ಪ್ರೀತಿ ಝಿಂಟಾ ನಟಿಸಿದ ಪಾತ್ರವಾದ ಪಾಕಿಸ್ತಾನದ ಮಹಿಳೆಯ ಝಾರಾ ಹಯಾತ್‌/ಹಾಯತ್‌ ಖಾನ್‌ರ ಪ್ರಣಯ ಕಥೆಗೆ ಸಂಬಂಧಿಸಿದೆ. ಖಾನ್‌ರ‌, ಈ ಚಿತ್ರದ ಅಭಿನಯ ಅವರಿಗೆ ಅನೇಕ ಪ್ರಶಸ್ತಿ ಸಮಾರಂಭಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿಕೊಟ್ಟಿತು. ಅಶುತೋಷ್‌ ಗೊವಾರಿಕರ್‌ರ ರೂಪಕ ಸ್ವದೇಶ್‌ ‌‌‌ನಲ್ಲಿನ ಉತ್ತಮ ಅಭಿನಯಕ್ಕಾಗಿ ಅದೇ ವರ್ಷ ಅವರಿಗೆ ನಿರ್ಣಾಯಕ ಗೌರವಗಳು ದೊರೆತವು‌. 2004ರಲ್ಲಿ ಬಿಡುಗಡೆಯಾದ ಅವರ ಮೂರೂ ಚಿತ್ರಗಳಲ್ಲಿನ ಪಾತ್ರಕ್ಕೆ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಾಂಕಿತರಾಗಿದ್ದರೂ ಪ್ರಶಸ್ತಿಯನ್ನು ಸ್ವದೇಶ್‌ ನ ಅಭಿನಯಕ್ಕಾಗಿ ಪಡೆದರು.

೨೦೦೬ ರಲ್ಲಿ

೨೦೦೬ ರಲ್ಲಿ, ಖಾನ್ ನಾಲ್ಕನೇ ಬಾರಿ ಭಾವತೀವ್ರತೆಯ ರೂಪಕ ಕಭೀ ಅಲ್ವಿದಾ ನಾ ಕೆಹೆನಾ ದಲ್ಲಿ ಕರಣ್‌ ಜೋಹರ್‌‌ರ ಸಹಯೋಗದಲ್ಲಿ ನಟಿಸಿದರು. ಇದು ಭಾರತದಲ್ಲಿ ಒಳ್ಳೆಯ ಗಳಿಕೆ ಪಡೆದರೂ ಸಾಗರೋತ್ತರ ಮಾರುಕಟ್ಟೆಯಲ್ಲಿ ಅದಕ್ಕೂ ಹೆಚ್ಚಿನ ಗಳಿಕೆಯನ್ನು ಪಡೆದು ಬಾಲಿವುಡ್‌ನ ಅತಿದೊಡ್ಡ ಸಾರ್ವಕಾಲಿಕ ಯಶಸ್ವೀ ಚಿತ್ರವಾಯಿತು. ಆ ವರ್ಷದ ಅವರ ಎರಡನೇ ಬಿಡುಗಡೆಯಾದ ಚಿತ್ರ 1978ರ ಯಶಸ್ವಿ ಚಿತ್ರ ಡಾನ್‌ ನ ರೀಮೇಕ್‌ ಆದ ಶೀರ್ಷಿಕೆ ಪಾತ್ರ ವಹಿಸಿದ ಸಾಹಸ ಚಿತ್ರ ಡಾನ್ . ಈ ಚಿತ್ರವು ಯಶಸ್ಸನ್ನು ಪಡೆಯಿತು.

'ಚಕ್ ದೇ ಇಂಡಿಯ' ಅತ್ಯಂತ ಮಹತ್ವದ ಚಿತ್ರಗಳಲ್ಲೊಂದಾಗಿತ್ತು

ಖಾನ್‌ರ‌, ಯಶಸ್ಸು ಇನ್ನೂ ಅನೇಕ ಹೆಚ್ಚು ಜನಪ್ರಿಯ ಚಿತ್ರಗಳೊಂದಿಗೆ ಮುಂದುವರೆಯಿತು. ಅವರ ಅತಿ ಹೆಚ್ಚು ಯಶಸ್ಸಿನ ಪಾತ್ರಗಳಲ್ಲೊಂದೆಂದರೆ ಬಹು ಪ್ರಶಸ್ತಿ-ವಿಜೇತ ೨೦೦೭ರ ಚಿತ್ರ, ಭಾರತೀಯ ಮಹಿಳೆಯರ ರಾಷ್ಟ್ರೀಯ ಹಾಕಿ ತಂಡದ ಬಗೆಗಿನ ಚಕ್‌ ದೇ ಇಂಡಿಯಾ . Rs 639 ದಶಲಕ್ಷಕ್ಕೂ ಹೆಚ್ಚಿನ ಗಳಿಕೆ ಮಾಡಿದ ಚಕ್‌ ದೇ ಇಂಡಿಯಾ 2007ರಲ್ಲಿ ಭಾರತದಲ್ಲಿನ ಮೂರನೇ ಅತಿಹೆಚ್ಚು ಗಳಿಕೆ ಕಂಡ ಚಿತ್ರವಾಗಿದ್ದುದಲ್ಲದೇ ಖಾನ್‌ರಿಗೆ ಮತ್ತೊಂದು ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ ದೊರಕಿಸಿಕೊಟ್ಟಿತು. ಚಿತ್ರವು ಪ್ರಮುಖ ನಿರ್ಣಾಯಕ ಯಶಸ್ಸಾಗಿತ್ತು. ಅದೇ ವರ್ಷದಲ್ಲಿ ಫರಾಹ್‌ ಖಾನ್‌ರ‌, ೨೦೦೭ರ ಚಿತ್ರ, ಓಂ ಶಾಂತಿ ಓಂ ನಲ್ಲಿ ಸಹಾ ಖಾನ್ ನಟಿಸಿದರು. ಅದು ಆ ವರ್ಷದ ಭಾರತ ಮತ್ತು ಸಾಗರೋತ್ತರ ಮಾರುಕಟ್ಟೆಯ ಅತಿ ಹೆಚ್ಚಿನ ಗಳಿಕೆಯ ಚಿತ್ರವಾದುದಲ್ಲದೇ ಭಾರತದ ಅದುವರೆಗಿನ ಅತಿದೊಡ್ಡ ಗಳಿಕೆಯ ನಿರ್ಮಾಣವೆನಿಸಿತು. ಅತ್ಯುತ್ತಮ ನಟ ಪ್ರಶಸ್ತಿಗೆ ಫಿಲ್ಮ್‌ಫೇರ್ ಸಮಾರಂಭದಲ್ಲಿ ಮತ್ತೊಮ್ಮೆ ನಾಮಾಂಕಿತಗೊಳ್ಳಲು ಅವಕಾಶ ನೀಡಿತು. ಖಾನ್‌ರ‌, ತೀರ ಇತ್ತೀಚಿನ ಚಿತ್ರಗಳೆಂದರೆ 2008ರಲ್ಲಿ ಬಿಡುಗಡೆಯಾದ, ಗಲ್ಲಾ ಪೆಟ್ಟಿಗೆಯಲ್ಲಿ ಬೃಹತ್‌ ಯಶಸ್ಸು ಕಂಡ ರಬ್‌ ನೇ ಬನಾದಿ ಜೋಡೀ ಮತ್ತು ಬಿಲ್ಲು .

'ಮೈ ನೇಮ್ ಈಸ್ ಖಾನ್'

2009ರ ಹಾಗೆ, ಖಾನ್ ಫೆಬ್ರವರಿ ೨೦೧೦ರಲ್ಲಿ ಬಿಡುಗಡೆಯಾಗಬೇಕಿರುವ ಮೈ ನೇಮ್‌ ಈಸ್‌ ಖಾನ್‌ ದ ಚಿತ್ರೀಕರಣ ನಡೆಸುತ್ತಿದ್ದಾರೆ. ತಮ್ಮ ಪತ್ನಿ ಗೌರಿ ಮತ್ತು ನಿರ್ದೇಶಕ ಕರಣ್‌ ಜೋಹರ್‌ರೊಂದಿಗೆ ಲಾಸ್‌ ಏಂಜಲೀಸ್‌ನಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದಾಗ, ಅವರು ಚಿತ್ರೀಕರಣದಿಂದ ಬಿಡುವು ಪಡೆದುಕೊಂಡು 11 ಜನವರಿ 2009ರಂದು ಕ್ಯಾಲಿಫೋರ್ನಿಯಾದ ಲಾಸ್‌ ಏಂಜಲೀಸ್‌ನಲ್ಲಿ ನಡೆದ 66ನೇ ಸ್ವರ್ಣ ವಿಶ್ವ/ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳ ಸಮಾರಂಭದಲ್ಲಿ ಭಾಗವಹಿಸಿದ್ದರು. ಖಾನ್ ಚಿತ್ರದ ತಾರೆ ಫ್ರೀದಾ ಪಿಂಟೊರೊಂದಿಗೆ ಸ್ಲಂಡಾಗ್‌ ಮಿಲಿಯನೇರ್‌ ಚಿತ್ರವನ್ನು ಅಲ್ಲಿ ಪರಿಚಯಿಸಿದರು.

ನಿರ್ಮಾಪಕ

1999ರಲ್ಲಿ ಜೂಹಿ ಚಾವ್ಲಾ ಮತ್ತು ನಿರ್ದೇಶಕ ಅಜೀಜ್‌ ಮಿರ್ಜಾರೊಡಗೂಡಿ ಡ್ರೀಮ್ಸ್‌ ಅನ್‌ಲಿಮಿಟೆಡ್ ಎಂಬ ನಿರ್ಮಾಣ ಕಂಪೆನಿಯನ್ನು ಸ್ಥಾಪಿಸಿದ ಖಾನ್‌ ನಿರ್ಮಾಪಕರೂ ಆದರು. ಅವರು ನಿರ್ಮಾಣ ಮತ್ತು ನಟನೆ ಎರಡನ್ನೂ ವಹಿಸಿದ್ದ ಮೊದಲೆರಡು ಚಿತ್ರಗಳಾದ: ಫಿರ್ ಬಿ ದಿಲ್‌ ಹೈ ಹಿಂದೂಸ್ಥಾನಿ (೨೦೦೦) ಮತ್ತು ಅಶೋಕ (೨೦೦೧)ಗಳು ಗಲ್ಲಾ ಪೆಟ್ಟಿಗೆಯಲ್ಲಿ ಮುಗ್ಗರಿಸಿದವು. ಆದರೂ, ಅವರ ನಿರ್ಮಾಣ ಹಾಗೂ ನಟನೆಯ ಮೂರನೇ ಚಿತ್ರ, ಚಲ್ತೇ ಚಲ್ತೇ (2003), ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು.

  • ೨೦೦೪ ರಲ್ಲಿ, ಖಾನ್‌ರು ಮತ್ತೊಂದು ನಿರ್ಮಾಣ ಕಂಪೆನಿಯಾದ, ರೆಡ್‌ ಚಿಲ್ಲೀಸ್‌ ಎಂಟರ್‌ಟೇನ್‌ಮೆಂಟ್‌ ಅನ್ನು ಸ್ಥಾಪಿಸಿ, ನಿರ್ಮಾಣ ಮತ್ತು ನಟನೆಯನ್ನು ನಿರ್ವಹಿಸಿದ ಮೈ ಹೂ ನಾ , ಇನ್ನೊಂದು ಯಶಸ್ವಿ ಚಿತ್ರವಾಯಿತು. ಅದರ ಮುಂದಿನ ವರ್ಷ, ಅವರು ನಟಿಸಿ ನಿರ್ಮಿಸಿದ ಕಾಲ್ಪನಿಕ ಚಿತ್ರ ಪಹೇಲಿ , ಕಳಪೆ ಸಾಧನೆ ಮೆರೆಯಿತು. ಈ ಚಿತ್ರವು ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರಗಳಿಗೆ ನೀಡುವ ಅಕಾಡೆಮಿ ಪ್ರಶಸ್ತಿಗೆ ಭಾರತದ ಅಧಿಕೃತ ಸ್ಪರ್ಧಿ ಆಗಿದ್ದರೂ, ಅಂತಿಮ ಆಯ್ಕೆಯಲ್ಲಿ ಸಫಲವಾಗಲಿಲ್ಲ. ಖಾನ್‌ರು ೨೦೦೫ರಲ್ಲಿ ಕರಣ್‌ ಜೋಹರ್‌ರೊಡನೆ ಸಹನಿರ್ಮಾಪಕರಾಗಿ ಅಲೌಕಿಕ ಭಯಾನಕ ಚಿತ್ರ ಕಾಲ್ ‌, ಚಿತ್ರದಲ್ಲಿ ಅವರು ಮಲೈಕಾ ಅರೋರಾ ಖಾನ್‌ರೊಡನೆ ಐಟಂ ಹಾಡಿನಲ್ಲಿ ಖಾನ್ ಭಾಗವಹಿಸಿದ್ದರು. ಕಾಲ್‌ ಗಲ್ಲಾ ಪೆಟ್ಟಿಗೆಯಲ್ಲಿ ಸಮಾಧಾನಕರ ಯಶಸ್ಸನ್ನು ಪಡೆಯಿತು. ಅವರ ಕಂಪೆನಿಯು ಅವರು ನಟಿಸಿದ್ದ ಓಂ ಶಾಂತಿ ಓಂ (2007), ಮತ್ತು ಅವರು ಬಾಲಿವುಡ್‌ ಸೂಪರ್‌ಸ್ಟಾರ್‌ ಆಗಿ ಪೋಷಕಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಿಲ್ಲು (೨೦೦೯) ಚಿತ್ರಗಳನ್ನು ನಿರ್ಮಿಸಿತ್ತು.

ಚಿತ್ರ ನಿರ್ಮಾಣ ಮಾತ್ರವಲ್ಲದೇ, ಅವರ ಕಂಪೆನಿಯು ರೆಡ್‌ ಚಿಲ್ಲೀಸ್‌ VFX ಎಂಬ ಹೆಸರಿನ ದೃಶ್ಯ ಸಂಯೋಜನೆ ಸ್ಟುಡಿಯೋವನ್ನು ಸಹಾ ಹೊಂದಿದೆ. ಅದು 'ದ ಫಸ್ಟ್‌ ಲೇಡೀಸ್‌', 'ಘರ್‌ ಕಿ ಬಾತ್‌ ಹೈ', ಮತ್ತು 'ನೈಟ್ಸ್‌ ಅಂಡ್‌ ಏಂಜೆಲ್ಸ್‌'ಗಳಂತಹಾ ಕಿರುತೆರೆ ಕಾರ್ಯಕ್ರಮಗಳ ನಿರ್ಮಾಣದಲ್ಲೂ ತೊಡಗಿಕೊಂಡಿದೆ. ಕಿರುತೆರೆ ಜಾಹಿರಾತುಗಳನ್ನು ಸಹಾ ಕಂಪೆನಿಯು ನಿರ್ಮಿಸುತ್ತದೆ.

  • ೨೦೦೮ ರಲ್ಲಿ, ರೆಡ್‌ ಚಿಲ್ಲೀಸ್‌ ಎಂಟರ್‌ಟೇನ್‌ಮೆಂಟ್‌ ಸಂಸ್ಥೆಯು BCCI-ಬೆಂಬಲದ IPL ಕ್ರಿಕೆಟ್‌ ಪಂದ್ಯಾವಳಿ/ಸ್ಪರ್ಧೆಯ ಕೊಲ್ಕೊತಾ ನೈಟ್‌ ರೈಡರ್ಸ್‌ ತಂಡದ ಮಾಲಿಕನಾಯಿತು.

ಕಿರುತೆರೆ ನಿರೂಪಕ

ಖಾನ್ ೦೦೭ ರಲ್ಲಿ, ಹೂ ವಾಂಟ್ಸ್‌ ಟು ಬಿ ಎ ಮಿಲಿಯನೇರ್‌? ನ ಭಾರತೀಯ ಆವೃತ್ತಿಯಾದ ಪ್ರಸಿದ್ಧ ಪ್ರದರ್ಶನ ಆಟ ಕೌನ್‌ ಬನೇಗಾ ಕರೋಡಪತಿ ಯ ಮೂರನೇ ಸರಣಿಯಲ್ಲಿ ಅಮಿತಾಭ್‌ ಬಚ್ಚನ್‌ರ ಬದಲಿ ನಿರೂಪಕರಾಗಿ ಕಾಣಿಸಿಕೊಂಡರು. ಹಿಂದಿನ ನಿರೂಪಕರು ಪ್ರದರ್ಶನ ಕಾರ್ಯಕ್ರಮವನ್ನು ೨೦೦೦-೦೫ರವರೆಗೆ ಐದು ವರ್ಷಗಳ ಕಾಲ ನಡೆಸಿಕೊಟ್ಟಿದ್ದರು. ೨೨ ಜನವರಿ ೨೦೦೭ರಂದು, ಹೊಸ ನಿರೂಪಕ ಖಾನ್‌ರೊಂದಿಗೆ ಕೌನ್‌ ಬನೇಗಾ ಕರೋಡಪತಿ ಪ್ರಸಾರವಾಗಲು ಆರಂಭಿಸಿ ೧೯ ಏಪ್ರಿಲ್‌ ೨೦೦೭ರಲ್ಲಿ ಕೊನೆಗೊಂಡಿತು.

  • ೨೫ ಏಪ್ರಿಲ್‌, ೨೦೦೮ರಲ್ಲಿ, ಖಾನ್ ನಿರೂಪಕರಾಗಿ ಆರಂಭಿಸಿದ್ದ ಮತ್ತೊಂದು ಪ್ರದರ್ಶನ ಆಟವಾದ ಆರ್‌ ಯೂ ಸ್ಮಾರ್ಟರ್‌ ದ್ಯಾನ್‌ 5ತ್‌ ಗ್ರೇಡರ್‌? ನ ಭಾರತೀಯ ಆವೃತ್ತಿಯಾದ ಕ್ಯಾ ಆಪ್‌ ಪಾಂಚ್‌ ವೀ ಪಾಸ್‌ ಸೇ ತೇಜ್‌ ಹೈಂ? ನ, ಲಾಲೂ ಪ್ರಸಾದ್‌ ಯಾದವ್‌ರು ವಿಶೇಷ ಅತಿಥಿಯಾಗಿದ್ದ ಕೊನೆಯ ಕಂತು ೨೭ ಜುಲೈ ೨೦೦೮ರಂದು ಪ್ರಸಾರವಾಗಿತ್ತು.

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಚಲನಚಿತ್ರಗಳ ಪಟ್ಟಿ

ನಟ

ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
೧೯೯೨ ದೀವಾನಾ ರಾಜಾ ಸಹಾಯ್‌ ವಿಜೇತ , ಫಿಲ್ಮ್‌ಫೇರ್ ಅತ್ಯುತ್ತಮ ಪುರುಷ ಪರಿಚಯ ಪ್ರಶಸ್ತಿ
ಈಡಿಯಟ್‌ ಪವನ್‌ ರಘುಜನ್
ಚಮತ್ಕಾರ್ ಸುಂದರ್ ಶ್ರೀವಾಸ್ತವ
ರಾಜು ಬನ್‌ ಗಯಾ ಜಂಟಲ್‌ಮನ್‌ ರಾಜು (ರಾಜ್‌ ಮಾಥುರ್‌)
ದಿಲ್‌ ಆಶ್‌ನಾ ಹೈ ಕರಣ್
೧೯೯೩ ಮಾಯಾ ಮೇಮ್‌ಸಾಬ್‌ ಲಲಿತ್‌ ಕುಮಾರ್‌
ಕಿಂಗ್‌ ಅಂಕಲ್‌ ಅನಿಲ್‌ ಭನ್ಸಾಲ್
ಬಾಜಿಗರ್ ಅಜಯ್‌ ಶರ್ಮ/ವಿಕಿ ಮಲ್ಹೋತ್ರಾ ವಿಜೇತ , ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
ಡರ್‌ ರಾಹುಲ್‌ ಮೆಹ್ರಾ ನಾಮಾಂಕಿತ, ಫಿಲ್ಮ್‌ಫೇರ್ ಅತ್ಯುತ್ತಮ ಖಳನಾಯಕ ಪ್ರಶಸ್ತಿ
ಕಭೀ ಹಾ ಕಭೀ ನಾ ಸುನಿಲ್‌ ವಿಜೇತ , ಅತ್ಯುತ್ತಮ ನಟನೆ/ಸಾಧನೆಗೆ ಫಿಲ್ಮ್‌ಫೇರ್ ಕ್ರಿಟಿಕ್ಸ್‌ ಪ್ರಶಸ್ತಿ


ನಾಮಾಂಕಿತ, ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ

೧೯೯೪ ಅಂಜಾಮ್ ವಿಜಯ್‌ ಅಗ್ನಿಹೋತ್ರಿ ವಿಜೇತ , ಫಿಲ್ಮ್‌ಫೇರ್ ಅತ್ಯುತ್ತಮ ಖಳನಾಯಕ ಪ್ರಶಸ್ತಿ
೧೯೯೫ ಕರಣ್‌ ಅರ್ಜುನ್‌ ಅರ್ಜುನ್‌ ಸಿಂಗ್‌/ವಿಜಯ್
ಜಮಾನಾ ದೀವಾನಾ ರಾಹುಲ್‌ ಮಲ್ಹೋತ್ರಾ
ಗುಡ್ಡು ಗುಡ್ಡು ಬಹಾದುರ್
ಓಹ್‌ ಡಾರ್ಲಿಂಗ್‌! ಯೇ ಹೈ ಇಂಡಿಯಾ ಹೀರೋ
ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ ರಾಜ್‌ ಮಲ್ಹೋತ್ರಾ ವಿಜೇತ , ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
ರಾಮ್‌ ಜಾನೆ ರಾಮ್‌ ಜಾನೆ
ತ್ರಿಮೂರ್ತಿ ರೋಮಿ ಸಿಂಗ್‌
೧೯೯೬ ಇಂಗ್ಲಿಷ್‌ ಬಾಬು ದೇಸಿ ಮೇಮ್ ವಿಕ್ರಮ್‌/ಹರಿ/ಗೋಪಾಲ್‌ ಮಯೂರ್
ಚಾಹತ್‌ ರೂಪ್‌ ರಾಥೋಡ್‌
ಆರ್ಮಿ ಅರ್ಜುನ್ ವಿಶೇಷ ಪಾತ್ರ
ದುಶ್ಮನ್‌ ದುನಿಯಾ ಕಾ ಬದ್ರು
೧೯೯೭ ಗುದ್ಗುದೀ ವಿಶೇಷ ಪಾತ್ರ
ಕೋಯ್ಲಾ ಶಂಕರ್
ಯಸ್‌ ಬಾಸ್‌ ರಾಹುಲ್‌ ಜೋಷಿ ನಾಮಾಂಕಿತ, ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
ಪರ್ದೇಸ್‌ ಅರ್ಜುನ್‌ ಸಾಗರ್
ದಿಲ್‌ ತೊ ಪಾಗಲ್‌ ಹೈ ರಾಹುಲ್ ವಿಜೇತ , ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
೧೯೯೮ ಡ್ಯುಪ್ಲಿಕೇಟ್‌ ಬಬ್ಲು ಚೌಧರಿ/ಮನು ದಾದಾ ನಾಮಾಂಕಿತ, ಫಿಲ್ಮ್‌ಫೇರ್ ಅತ್ಯುತ್ತಮ ಖಳನಟ ಪ್ರಶಸ್ತಿ
ಅಚಾನಕ್‌ ತಮ್ಮದೇ ನಿಜಜೀವನದ ಪಾತ್ರ ವಿಶೇಷ ಪಾತ್ರ
ದಿಲ್‌ ಸೇ ಅಮರ್‌ಕಾಂತ್‌ ವರ್ಮಾ
ಕುಚ್‌ ಕುಚ್‌ ಹೋತಾ ಹೈ ರಾಹುಲ್‌ ಖನ್ನಾ ವಿಜೇತ , ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
೧೯೯೯ ಬಾದ್‌ಷಾ ರಾಜ್‌ ಹೀರಾ /ಬಾದ್‌ಷಾ ನಾಮಾಂಕಿತ, ಫಿಲ್ಮ್‌ಫೇರ್ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ
೨೦೦೦ ಫಿರ್ ಬಿ ದಿಲ್‌ ಹೈ ಹಿಂದೂಸ್ತಾನಿ ಅಜಯ್‌ ಭಕ್ಷಿ
ಹೇ ರಾಮ್‌ ಅಮ್ಜದ್‌ ಅಲಿ ಖಾನ್
ಜೋಷ್‌ ಮ್ಯಾಕ್ಸ್
ಹರ್‌ ದಿಲ್‌ ಜೋ ಪ್ಯಾರ್‌ ಕರೇಗಾ ರಾಹುಲ್‌ ವಿಶೇಷ ಪಾತ್ರ
ಮೊಹಬ್ಬತೇ ರಾಜ್‌ ಆರ್ಯನ್ ಮಲ್ಹೋತ್ರಾ ವಿಜೇತ , ಅತ್ಯುತ್ತಮ ನಟನೆಗೋಸ್ಕರ ಫಿಲ್ಮ್‌ಫೇರ್ ಕ್ರಿಟಿಕ್ಸ್‌ ಪ್ರಶಸ್ತಿ
ನಾಮಾಂಕಿತ, ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
ಗಜಗಾಮಿನಿ ತಮ್ಮದೇ ನಿಜಜೀವನದ ಪಾತ್ರ ವಿಶೇಷ ಪಾತ್ರ
೨೦೦೧ ಒನ್‌ 2 ಕಾ 4 ಅರುಣ್‌ ವರ್ಮಾ
ಅಶೋಕ ಅಶೋಕ
ಕಭೀ ಖುಷಿ ಕಭೀ ಗಮ್‌ ರಾಹುಲ್‌ ರಾಯ್‌ಚಂದ್‌ ನಾಮಾಂಕಿತ, ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
೨೦೦೨ ಹಮ್‌ ತುಮಾರೆ ಹೇ ಸನಮ್‌ ಗೋಪಾಲ್‌
ದೇವದಾಸ್‌ ದೇವದಾಸ್‌ ಮುಖರ್ಜಿ ವಿಜೇತ , ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
ಶಕ್ತಿ: ದಿ ಪವರ್‌ ಜೈಸಿಂಗ್ ವಿಶೇಷ ಪಾತ್ರ
ಸಾಥಿಯಾ ಯಶವಂತ್‌ ರಾವ್‌ ಕಿರುಪಾತ್ರ
೨೦೦೩ ಚಲ್ತೇ ಚಲ್ತೇ ರಾಜ್‌ ಮಾಥುರ್‌
ಕಲ್‌ ಹೋ ನಾ ಹೋ ಅಮನ್‌ ಮಾಥುರ್‌ ನಾಮಾಂಕಿತ, ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
೨೦೦೪ ಯೇ ಲಮ್ಹೇ ಜುದಾಯಿ ಕೇ ದುಷಂತ್
ಮೈ ಹೂ ನಾ Maj. ರಾಮ್‌ ಪ್ರಸಾದ್‌ ಶರ್ಮಾ ನಾಮಾಂಕಿತ, ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
ವೀರ್-ಝಾರಾ ವೀರ್ ಪ್ರತಾಪ್‌ ಸಿಂಗ್‌ ನಾಮಾಂಕಿತ, ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
ಸ್ವದೇಶ್‌ ಮೋಹನ್‌ ಭಾರ್ಗವ ವಿಜೇತ , ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
೨೦೦೫ ಕುಚ್‌ ಮೀಠಾ ಹೋ ಜಾಯೆ ತಮ್ಮದೇ ನಿಜಜೀವನದ ಪಾತ್ರ ವಿಶೇಷ ಪಾತ್ರ
ಕಾಲ್‌ ಕಾಲ್‌ ಧಮಾಲ್‌ ಎಂಬ ಹಾಡಿನಲ್ಲಿ ವಿಶೇಷಪಾತ್ರದಲ್ಲಿ
ಸಿಲ್‌ಸಿಲೇ ಸೂತ್ರಧಾರ್ ಜಬ್‌ ಜಬ್‌ ದಿಲ್‌ ಮಿಲೇ ಎಂಬ ಹಾಡಿನಲ್ಲಿ ವಿಶೇಷಪಾತ್ರದಲ್ಲಿ
ಪಹೇಲಿ ಕಿಶೆನ್‌ಲಾಲ್‌/ದ ಘೋಸ್ಟ್‌
ದ ಇನ್ನರ್‌ ಅಂಡ್‌ ಔಟರ್‌ ವರ್ಲ್ಡ್‌ ಆಫ್‌ ಷಾಹ್‌ ರುಖ್‌ ಖಾನ್ ತಮ್ಮದೇ ನಿಜಜೀವನದ ಪಾತ್ರ (ಆತ್ಮಚರಿತ್ರೆ) ಬ್ರಿಟಿಷ್‌ ಮೂಲದ ಲೇಖಕ ಮತ್ತು ನಿರ್ದೇಶಕ ನಸ್ರೀನ್‌ ಮುನ್ನಿ ಕಬೀರ್‌‌ರಿಂದ ನಿರ್ದೇಶಿತ
೨೦೦೬ ಅಲಗ್ ಸಬಸೆ ಅಲಗ್ ಹಾಡಿನಲ್ಲಿ ವಿಶೇಷ ಪಾತ್ರ
ಕಭೀ ಅಲ್ವಿದಾ ನಾ ಕೆಹೆನಾ ದೇವ್‌ ಸರನ್‌ ನಾಮಾಂಕಿತ, ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
ಡಾನ್ - ದಿ ಚೇಸ್ ಬಿಗಿನ್ಸ್‌ ಎಗೇನ್ ವಿಜಯ್‌/ಡಾನ್ ನಾಮಾಂಕಿತ, ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
ನಾಮಾಂಕಿತ, ಏಷ್ಯಾದ ಚಿತ್ರಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟ
ಐ ಸೀ ಯು ಸುಬಹ್‌ ಸುಬಹ್‌ ಎಂಬ ಹಾಡಿನಲ್ಲಿ ವಿಶೇಷಪಾತ್ರದಲ್ಲಿ
೨೦೦೭ ಚಕ್‌ ದೇ ಇಂಡಿಯಾ ಕಬೀರ್‌ ಖಾನ್ ವಿಜೇತ , ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
ಹೇ ಬೇಬಿ ರಾಜ್‌ ಮಲ್ಹೋತ್ರಾ ಮಸ್ತ್‌ ಕಲಂದರ್ ಎಂಬ ಹಾಡಿನಲ್ಲಿ ವಿಶೇಷಪಾತ್ರದಲ್ಲಿ
ಓಂ ಶಾಂತಿ ಓಂ ಓಂ ಪ್ರಕಾಶ್‌ ಮಖೀಜಾ/ಓಂ ಕಪೂರ್‌ ನಾಮಾಂಕಿತ, ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
೨೦೦೮ ಕ್ರೇಜಿ 4 ಬ್ರೇಕ್‌ ಫ್ರೀ ಎಂಬ ಹಾಡಿನಲ್ಲಿ ವಿಶೇಷಪಾತ್ರದಲ್ಲಿ
ಭೂತ್‌ನಾಥ್ ಆದಿತ್ಯ ಶರ್ಮಾ ವಿಶೇಷ ಪಾತ್ರ
ರಬ್‌ ನೇ ಬನಾದಿ ಜೋಡೀ ಸುರೀಂರ್‌ ಸಾಹ್ನಿ/ರಾಜ್‌ ನಾಮಾಂಕಿತ, ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
೨೦೦೯ ಲಕ್‌ ಬೈ ಚಾನ್ಸ್‌ ತಮ್ಮದೇ ನಿಜಜೀವನದ ಪಾತ್ರ ವಿಶೇಷ ಪಾತ್ರ
ಬಿಲ್ಲು ಸಾಹಿರ್‌ ಖಾನ್
ದುಲ್ಹಾ ಮಿಲ್‌ ಗಯಾ ನಿರ್ಮಾಣಹಂತದ ಕೊನೆಯಲ್ಲಿದೆ
೨೦೧೦ ಮೈ ನೇಮ್‌ ಈಸ್‌ ಖಾನ್‌ ರಿಜ್ವಾನ್‌ ಖಾನ್
ಕೂಚಿ ಕೂಚಿ ಹೋತಾ ಹೈಂ ರಾಕಿ ಚಿತ್ರೀಕರಣಮುಗಿದಿದೆ.

ನಿರ್ಮಾಪಕ

  • ಫಿರ್ ಬಿ ದಿಲ್‌ ಹೈ ಹಿಂದೂಸ್ತಾನಿ (೨೦೦೦)
  • ಅಶೋಕ (೨೦೦೧)
  • ಚಲ್ತೇ ಚಲ್ತೇ (೨೦೦೩)
  • ಮೈ ಹೂ ನಾ (೨೦೦೪)
  • ಕಾಲ್‌ (೨೦೦೫)
  • ಪಹೇಲಿ (೨೦೦೫)
  • ಓಂ ಶಾಂತಿ ಓಂ (೨೦೦೭)
  • ಬಿಲ್ಲು (೨೦೦೯)

ಹಿನ್ನೆಲೆ ಗಾಯಕ

  • ಮೈ ತೊ ಹೂ ಪಾಗಲ್‌ - ಬಾದ್‌ಷಾ (೧೯೯೯)
  • ಅಪುನ್‌ ಬೋಲಾ - ಜೋಷ್ (೨೦೦೦)
  • ಖಯೀಕೆ ಪಾನ್‌ ಬನಾರಸ್‌ವಾಲಾ - ಡಾನ್‌ - ದ ಚೇಸ್‌ ಬಿಗಿನ್ಸ್‌ ಎಗೇನ್‌ (೨೦೦೬)
  • ಏಕ್‌ ಹಾಕಿ ದೂಂಗಿ ರಖ್‌ಕೇ - ಚಕ್‌ ದೇ ಇಂಡಿಯಾ (೨೦೦೭)
  • ಸತ್ತರ್‌ ಮಿನಟ್‌ - ಚಕ್‌ ದೇ ಇಂಡಿಯಾ (೨೦೦೭)

ಸಾಹಸ ನಿರ್ದೇಶನ

  • ಕುಚ್‌ ಕುಚ್‌ ಹೋತಾ ಹೈ (೧೯೯೮)
  • ಮೈ ಹೂ ನಾ (೨೦೦೪)
  • ಕಭೀ ಅಲ್ವಿದಾ ನಾ ಕೆಹೆನಾ (೨೦೦೬)
  • ಚಕ್‌ ದೇ ಇಂಡಿಯಾ (೨೦೦೭)
  • ಓಂ ಶಾಂತಿ ಓಂ (೨೦೦೭)

ಕಿರುತೆರೆಯ ಕಾರ್ಯಕ್ರಮಗಳು

  • ದಿಲ್‌ ದರಿಯಾ (೧೯೮೮)
  • ಫೌಜಿ (೧೯೮೮) ... ಅಭಿಮನ್ಯು ರಾಯ್‌
  • ದೂಸ್ರಾ ಕೇವಲ್‌ (೧೯೮೯)
  • ಸರ್ಕಸ್ (೧೯೮೯)
  • ಇನ್‌ ವಿಚ್‌ ಆನ್ನಿ ಗಿವ್ಸ್‌ ಇಟ್‌ ದೋಸ್‌ ಒನ್ಸ್‌ (೧೯೮೯)
  • ಈಡಿಯಟ್‌ (೧೯೯೧) ... ಪವನ್‌ ರಘುಜನ್
  • ಕರೀನಾ ಕರೀನಾ (೨೦೦೪) ... ವಿಶೇಷ ಪಾತ್ರ
  • ರೆಂಡಿವೂ ವಿತ್‌ ಸಿಮಿ ಗರೆವಾಲ್‌ .....ಅತಿಥಿ
  • ಕಾಫೀ ವಿತ್‌ ಕರಣ್‌ (೨೦೦೪-೨೦೦೭) ... ಅತಿಥಿ (3 ಕಂತುಗಳು)
  • ಕೌನ್‌ ಬನೇಗಾ ಕರೋಡಪತಿ (೨೦೦೭) ... ನಿರೂಪಕ
  • ಜ್ಹೂಮ್‌ ಇಂಡಿಯಾ (೨೦೦೭) ... ಅತಿಥಿ
  • ನಾಚ್‌ ಬಲಿಯೇ (೨೦೦೮) .... ಅತಿಥಿ
  • ಕ್ಯಾ ಆಪ್‌ ಪಾಂಚ್‌ ವೀ ಪಾಸ್‌ ಸೇ ತೇಜ್‌ ಹೈಂ? (೨೦೦೮) .... ನಿರೂಪಕ

ವಿವರಗಳಿಗಾಗಿ ನೋಡಿ

  • ಭಾರತೀಯ ನಟರ ಪಟ್ಟಿ
  • ನ್ಯೂಯಾರ್ಕ್‌ ವಿಮಾನನಿಲ್ದಾಣ ಘಟನೆ

ಕಾರ್ಯಗಳು/ಕೃತಿಗಳು

  • ನಸ್ರೀನ್‌ ಮುನ್ನಿ ಕಬೀರ್‌. ದ ಇನ್ನರ್‌ ಅಂಡ್‌ ಔಟರ್ ವರ್ಲ್ಡ್‌ ಆಫ್‌ ಷಾಹ್‌ ರುಖ್‌ ಖಾನ್ (ಸಾಕ್ಷ್ಯಚಿತ್ರ, 2005).
  • ಶಾರುಖ್‌ ಖಾನ್ - ಸ್ಟಿಲ್‌ ರೀಡಿಂಗ್‌ ಖಾನ್‌ . A1ಬುಕ್ಸ್‌ ವಿತರಕರು ೨೦೦೭. ISBN 978-81-87107-79-8.
  • ಗಹ್ಲೋಟ್‌, ದೀಪಾ; ಅಗರ್ವಾಲ್‌, ಅಮಿತ್‌. ಕಿಂಗ್‌ ಖಾನ್ SRK . ಆಗ್ಸ್‌ಬರ್ಗ್‌ ವೆಲ್ಟ್‌ಬಿಲ್ಡ್‌ ೨೦೦೭. ISBN 978-3-8289-8869-9.
  • ಘೋಷ್‌, ಬಿಸ್ವದೀಪ್‌. ಹಾಲ್‌ ಆಫ್‌ ಫೇಂ: ಶಾರುಖ್‌ ಖಾನ್ (ಆಂಗ್ಲದಲ್ಲಿ). ಮುಂಬಯಿ: ಮ್ಯಾಗ್ನಾ ಬುಕ್ಸ್, ೨೦೦೪. ISBN 81-7809-237-9.
  • ಛೋಪ್ರಾ/ಚೋಪ್ರಾ, ಅನುಪಮ. ಕಿಂಗ್‌ ಆಫ್‌ ಬಾಲಿವುಡ್‌ : ಷಾಹ್‌ ರುಖ್‌ ಖಾನ್ ಅಂಡ್‌ ದ ಸೆಡಕ್ಟಿವ್‌ ವರ್ಲ್ಡ್‌ ಆಫ್‌ ಇಂಡಿಯನ್‌ ಸಿನೆಮಾ (ಆಂಗ್ಲ). ನ್ಯೂಯಾರ್ಕ್: ವಾರ್ನರ್‌ ಬುಕ್ಸ್‌, 2007. ISBN 978-0-446-57858-5.

ಟಿಪ್ಪಣಿಗಳು

ಹೊರಗಿನ ಕೊಂಡಿಗಳು

ಹಿಂದಿ ನಟ ಶಾರುಖ್ ಖಾನ್: ಕಿರುತೆರೆಯ, ಶಾರುಖ್ ಖಾನ್,ಬಾಲಿವುಡ್ ವಲಯದಲ್ಲೂ, ಪ್ರಚಂಡ ಚನಪ್ರಿಯತೆಯನ್ನು ಗಳಿಸಿದರು, ಜನನ, ಬಾಲ್ಯ, ವಿದ್ಯಾಭ್ಯಾಸ, ಮತ್ತು ವೃತ್ತಿ ಜೀವನ, ಪ್ರಾಥಮಿಕ ವಿದ್ಯಾಬ್ಯಾಸ 
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಶಾರುಖ್ ಖಾನ್ (ಹಿಂದಿ ನಟ)]]

pnb:شاہ رخ خان

Tags:

ಹಿಂದಿ ನಟ ಶಾರುಖ್ ಖಾನ್ ಕಿರುತೆರೆಯ, ಶಾರುಖ್ ಖಾನ್,ಬಾಲಿವುಡ್ ವಲಯದಲ್ಲೂ, ಪ್ರಚಂಡ ಚನಪ್ರಿಯತೆಯನ್ನು ಗಳಿಸಿದರುಹಿಂದಿ ನಟ ಶಾರುಖ್ ಖಾನ್ ಜನನ, ಬಾಲ್ಯ, ವಿದ್ಯಾಭ್ಯಾಸ, ಮತ್ತು ವೃತ್ತಿ ಜೀವನಹಿಂದಿ ನಟ ಶಾರುಖ್ ಖಾನ್ ಪ್ರಾಥಮಿಕ ವಿದ್ಯಾಬ್ಯಾಸಹಿಂದಿ ನಟ ಶಾರುಖ್ ಖಾನ್ ಪೋಷಕರ ಸಾವಿನನಂತರಹಿಂದಿ ನಟ ಶಾರುಖ್ ಖಾನ್ ೨೦೦೫ ರಲ್ಲಿಹಿಂದಿ ನಟ ಶಾರುಖ್ ಖಾನ್ ಪ್ರಶಸ್ತಿಗಳುಹಿಂದಿ ನಟ ಶಾರುಖ್ ಖಾನ್ ೨೦೦೮ ರಲ್ಲಿಹಿಂದಿ ನಟ ಶಾರುಖ್ ಖಾನ್ ಚಿತ್ರರಂಗದ ವೃತ್ತಿಹಿಂದಿ ನಟ ಶಾರುಖ್ ಖಾನ್ ಬಾಜಿಗರ್ ಚಿತ್ರಹಿಂದಿ ನಟ ಶಾರುಖ್ ಖಾನ್ ೧೯೯೫ ರಲ್ಲಿಹಿಂದಿ ನಟ ಶಾರುಖ್ ಖಾನ್ ೧೯೯೬ ರಲ್ಲಿ ಬಿಡುಗಡೆಯಾದ ಚಿತ್ರಗಳು ಅಷ್ಟು ಯಶಸ್ಸು ಕಾಣಲಿಲ್ಲಹಿಂದಿ ನಟ ಶಾರುಖ್ ಖಾನ್ ೧೯೯೮ ರಲ್ಲಿಹಿಂದಿ ನಟ ಶಾರುಖ್ ಖಾನ್ ೧೯೯೯ ರಲ್ಲಿ ಬಾದ್ ಷಾ, ಬಿಡುಗಡೆಯಾಯಿತುಹಿಂದಿ ನಟ ಶಾರುಖ್ ಖಾನ್ ೨೦೦೦ ರ ದಶಕಹಿಂದಿ ನಟ ಶಾರುಖ್ ಖಾನ್ ೨೦೦೨ ರಲ್ಲಿಹಿಂದಿ ನಟ ಶಾರುಖ್ ಖಾನ್ ೨೦೦೪ ರಲ್ಲಿಹಿಂದಿ ನಟ ಶಾರುಖ್ ಖಾನ್ ೨೦೦೬ ರಲ್ಲಿಹಿಂದಿ ನಟ ಶಾರುಖ್ ಖಾನ್ ಚಕ್ ದೇ ಇಂಡಿಯ ಅತ್ಯಂತ ಮಹತ್ವದ ಚಿತ್ರಗಳಲ್ಲೊಂದಾಗಿತ್ತುಹಿಂದಿ ನಟ ಶಾರುಖ್ ಖಾನ್ ಮೈ ನೇಮ್ ಈಸ್ ಖಾನ್ಹಿಂದಿ ನಟ ಶಾರುಖ್ ಖಾನ್ ನಿರ್ಮಾಪಕಹಿಂದಿ ನಟ ಶಾರುಖ್ ಖಾನ್ ಕಿರುತೆರೆ ನಿರೂಪಕಹಿಂದಿ ನಟ ಶಾರುಖ್ ಖಾನ್ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳುಹಿಂದಿ ನಟ ಶಾರುಖ್ ಖಾನ್ ಚಲನಚಿತ್ರಗಳ ಪಟ್ಟಿಹಿಂದಿ ನಟ ಶಾರುಖ್ ಖಾನ್ ವಿವರಗಳಿಗಾಗಿ ನೋಡಿಹಿಂದಿ ನಟ ಶಾರುಖ್ ಖಾನ್ ಕಾರ್ಯಗಳುಕೃತಿಗಳುಹಿಂದಿ ನಟ ಶಾರುಖ್ ಖಾನ್ ಟಿಪ್ಪಣಿಗಳುಹಿಂದಿ ನಟ ಶಾರುಖ್ ಖಾನ್ ಹೊರಗಿನ ಕೊಂಡಿಗಳುಹಿಂದಿ ನಟ ಶಾರುಖ್ ಖಾನ್ಉರ್ದು ಭಾಷೆಹಿಂದಿ ಭಾಷೆ

🔥 Trending searches on Wiki ಕನ್ನಡ:

ಕಿತ್ತೂರು ಚೆನ್ನಮ್ಮಮಲೈ ಮಹದೇಶ್ವರ ಬೆಟ್ಟಜಯಂತ ಕಾಯ್ಕಿಣಿಅಲಂಕಾರಚಿಕ್ಕಮಗಳೂರುಶಿವರಾಮ ಕಾರಂತಧಾರವಾಡಧಾನ್ಯಪಿತ್ತಕೋಶಬೆಳಗಾವಿಶಾತವಾಹನರುಬಾದಾಮಿ ಚಾಲುಕ್ಯರ ವಾಸ್ತುಶಿಲ್ಪತ್ರಿಶೂಲಸ್ವಾಮಿ ವಿವೇಕಾನಂದಚದುರಂಗ (ಆಟ)ಸಿದ್ದರಾಮಯ್ಯತ್ರಿಪದಿರಾಘವಾಂಕಬಬಲಾದಿ ಶ್ರೀ ಸದಾಶಿವ ಮಠಪಠ್ಯಪುಸ್ತಕಯೋಗ ಮತ್ತು ಅಧ್ಯಾತ್ಮಮಣ್ಣುನೀರುಒಗಟುಉಡನಿರಂಜನಯಕ್ಷಗಾನಹೆಚ್.ಡಿ.ಕುಮಾರಸ್ವಾಮಿಕೇಂದ್ರಾಡಳಿತ ಪ್ರದೇಶಗಳುಉಪನಯನಕುರುಬವರ್ಗೀಯ ವ್ಯಂಜನಛಂದಸ್ಸುಕಾಲಾಯ ತಸ್ಮೈ ನಮಃ (ಚಲನಚಿತ್ರ)ಹಲ್ಮಿಡಿಲೆಕ್ಕ ಪರಿಶೋಧನೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಕಲಿಕೆಗ್ರಾಮ ಪಂಚಾಯತಿತಿಗಳಾರಿ ಲಿಪಿಭಾರತದಲ್ಲಿ ಮೀಸಲಾತಿಭಾರತದ ಆರ್ಥಿಕ ವ್ಯವಸ್ಥೆಟಿಪ್ಪು ಸುಲ್ತಾನ್ಮುದ್ದಣಸ್ತ್ರೀಚೀನಾಕನ್ನಡ ಕಾವ್ಯಮಾಟ - ಮಂತ್ರಗೋತ್ರ ಮತ್ತು ಪ್ರವರವಿಧಾನ ಸಭೆಭ್ರಷ್ಟಾಚಾರಕಾಳಿದಾಸಹರಪ್ಪಇಮ್ಮಡಿ ಪುಲಕೇಶಿಹನುಮ ಜಯಂತಿಸಾಮ್ರಾಟ್ ಅಶೋಕಬಾಲ್ಯ ವಿವಾಹಹುರುಳಿಮುಪ್ಪಿನ ಷಡಕ್ಷರಿರಾಜಕೀಯ ಪಕ್ಷಕೇಶಿರಾಜಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕರ್ನಾಟಕದ ನದಿಗಳುವಲ್ಲಭ್‌ಭಾಯಿ ಪಟೇಲ್ಟೊಮೇಟೊಗಾದೆ ಮಾತುಬೌದ್ಧ ಧರ್ಮಕಲ್ಯಾಣ ಕರ್ನಾಟಕಭಾರತದ ಬುಡಕಟ್ಟು ಜನಾಂಗಗಳುಕನ್ನಡ ವ್ಯಾಕರಣಆರ್ಯಭಟ (ಗಣಿತಜ್ಞ)ಕನ್ನಡಪ್ರಭಭಾರತದಲ್ಲಿ ಪಂಚಾಯತ್ ರಾಜ್ಪ್ಲೇಟೊ🡆 More