ದ್ವಿಪದ ಹೆಸರು

ದ್ವಿಪದ ಹೆಸರು ಅಥವಾ ದ್ವಿಪದ ನಾಮಕರಣ (ವೈಜ್ಞಾನಿಕ ನಾಮಕರಣ) ಜೀವಶಾಸ್ತ್ರದಲ್ಲಿ ಜೀವಿಗಳ ಪ್ರಭೇದಗಳನ್ನು ಗುರುತಿಸಲು ಎರಡು ಪದಗಳನ್ನು ಬಳಸುವ ನಾಮಕರಣ ಪದ್ಧತಿಯಾಗಿದೆ.

ದ್ವಿಪದ ನಾಮಕರಣದ ಪ್ರಥಮ ಪದವು ಜೀವಿಯ ಕುಲ ವನ್ನು ಸೂಚಿಸಿದರೆ, ದ್ವಿತೀಯ ಪದವು ಪ್ರಭೇದ ವನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಎರಡೂ ಪದಗಳನ್ನು ಲ್ಯಾಟಿನ್ ವ್ಯಾಕರಣದಲ್ಲಿ ರೂಪಿಸಲಾಗುತ್ತದೆ. ದ್ವಿಪದ ನಾಮಕರಣದ ಪ್ರಥಮ ಪದದ ಮೊದಲನೇಯ ಅಕ್ಷರವು ಕ್ಯಾಪಿಟಲ್ ಅಕ್ಷರದಲ್ಲಿದ್ದು (ಇದು ರೋಮನ್ ಲಿಪಿಗೆ ಅನ್ವಯವಾಗುತ್ತದೆ), ಇನ್ನಿತರ ಅಕ್ಷರಗಳು/ಪದಗಳು ಸಣ್ಣಕ್ಷರದಲ್ಲಿರುತ್ತವೆ. ದ್ವಿಪದ ಹೆಸರುಗಳನ್ನು ಬರೆದಾಗ ಅಡಿಗೆರೆಯೊಂದಿಗೆ, ಹಾಗು ಮುದ್ರಿಸಿದಾಗ ಇಟ್ಯಾಲಿಕ್ ರೂಪದಲ್ಲಿರಬೇಕು. ಉದಾಹರಣೆಗೆ, ಸಾಮಾನ್ಯ ನೆಲಗಪ್ಪೆಯು ದತ್ತಾಫ್ರಿನಸ್ ಕುಲದ ದತ್ತಾಫ್ರಿನಸ್ ಮೆಲಾನೊಸ್ಟಿಕ್ಟಸ್ ಪ್ರಭೇದಕ್ಕೆ ಸೇರಿದೆ. ತಮ್ಮ ಕೃತಿ ಸ್ಪೀಷೀಸ್ ಪ್ಲಾಂಟೇರಮ್ ನಲ್ಲಿ ಈ ಪದ್ಧತಿಯನ್ನು ಮೊದಲ ಬಾರಿಗೆ ಪರಿಚಯಿಸಿದ ಕರೋಲಸ್ ಲಿನ್ನಾಯೆಸ್ ರವರನ್ಜು ಈ ವೈಜ್ಞಾನಿಕ ನಾಮಕರಣ ಪದ್ಧತಿಯ ಹರಿಕಾರ ಎನ್ನಲಾಗಿದೆ.

ಪ್ರಸ್ತುತ ದ್ವಿಪದ ನಾಮಕರಣ ಪದ್ಧತಿಯನ್ನು ಹಲವಾರು ಅಂತಾರಾಷ್ಟ್ರೀಯವಾಗಿ ಒಪ್ಪಿಗೆಯಾದ ನಿಯಮಾವಳಿಗಳು ನಿರ್ದೇಶಿಸುತ್ತವೆ. ಅವುಗಳಲ್ಲಿ ಮುಖ್ಯವಾಗಿ ಪ್ರಾಣಿಗಳಿಗೆ ಅಂತಾರಾಷ್ಟ್ರೀಯ ಪ್ರಾಣಿಶಾಸ್ತ್ರೀಯ ನಾಮಕರಣ ನಿಯಮಗಳು, ಪಾಚಿ, ಶಿಲೀಂಧ್ರ ಮತ್ತು ಸಸ್ಯಗಳಿಗೆ ಅಂತಾರಾಷ್ಟ್ರೀಯ ಪಾಚಿ, ಶಿಲೀಂಧ್ರ ಮತ್ತು ಸಸ್ಯ ನಾಮಕರಣ ನಿಯಮಗಳು ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತವೆ.

ಉಲ್ಲೇಖಗಳು

Tags:

ಕಾರ್ಲ್ ಲಿನೆಯಸ್ಜೀವಶಾಸ್ತ್ರಲ್ಯಾಟಿನ್ಸಾಮಾನ್ಯ ಏಷ್ಯನ್ ನೆಲಗಪ್ಪೆ

🔥 Trending searches on Wiki ಕನ್ನಡ:

ಭಾರತ ರತ್ನಉತ್ಪಲ ಮಾಲಾ ವೃತ್ತಅದ್ವೈತಜೋಳಪರಿಸರ ರಕ್ಷಣೆಓಂ ನಮಃ ಶಿವಾಯಕರ್ನಾಟಕದ ಶಾಸನಗಳುಪ್ಯಾರಾಸಿಟಮಾಲ್ವ್ಯವಸಾಯಬಾಳೆ ಹಣ್ಣುಡಿ. ದೇವರಾಜ ಅರಸ್ಚನ್ನಬಸವೇಶ್ವರಭಾರತೀಯ ರಿಸರ್ವ್ ಬ್ಯಾಂಕ್ವಾರ್ತಾ ಭಾರತಿಭಾರತದ ಬುಡಕಟ್ಟು ಜನಾಂಗಗಳುಹೃದಯಅಯೋಧ್ಯೆರಾವಣದ್ವಿರುಕ್ತಿಉತ್ಪಾದನೆಯ ವೆಚ್ಚಮಾನವನ ನರವ್ಯೂಹಹೈನುಗಾರಿಕೆಅಂತರರಾಷ್ಟ್ರೀಯ ಸಂಘಟನೆಗಳುಹಸಿರುಛತ್ರಪತಿ ಶಿವಾಜಿಪರ್ವತ ಬಾನಾಡಿಭೂತಾರಾಧನೆಹಿರಿಯಡ್ಕವೆಂಕಟೇಶ್ವರ ದೇವಸ್ಥಾನನಿರುದ್ಯೋಗಡಿ.ಕೆ ಶಿವಕುಮಾರ್ಕುಮಾರವ್ಯಾಸಫೇಸ್‌ಬುಕ್‌ಭಾರತದ ನದಿಗಳುತೆಂಗಿನಕಾಯಿ ಮರನಾಗಚಂದ್ರಏಷ್ಯಾಅಲೆಕ್ಸಾಂಡರ್ಮಂತ್ರಾಲಯನುಡಿಗಟ್ಟುಗೋತ್ರ ಮತ್ತು ಪ್ರವರಗುಬ್ಬಚ್ಚಿಭಾರತದ ವಿಜ್ಞಾನಿಗಳುಅರವಿಂದ ಘೋಷ್ವರ್ಗೀಯ ವ್ಯಂಜನಮಾದಿಗಬಿ. ಎಂ. ಶ್ರೀಕಂಠಯ್ಯಹರಕೆಅರ್ಜುನಬಿ.ಎಲ್.ರೈಸ್ಭಾರತದ ಪ್ರಧಾನ ಮಂತ್ರಿಮಳೆದಿಕ್ಕುಭಾರತದಲ್ಲಿನ ಚುನಾವಣೆಗಳುಪುಸ್ತಕಪರಿಸರ ವ್ಯವಸ್ಥೆಹೆಚ್.ಡಿ.ದೇವೇಗೌಡಭಾರತ ಬಿಟ್ಟು ತೊಲಗಿ ಚಳುವಳಿಭಾರತದ ಇತಿಹಾಸಧಾರವಾಡಶಾಸ್ತ್ರೀಯ ಭಾಷೆದೇವನೂರು ಮಹಾದೇವಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಚಾಲುಕ್ಯಸ್ವಚ್ಛ ಭಾರತ ಅಭಿಯಾನಚನ್ನವೀರ ಕಣವಿಹನುಮಾನ್ ಚಾಲೀಸಭಾರತ ಸರ್ಕಾರಅಮೃತಬಳ್ಳಿಹಿಂದೂ ಧರ್ಮಜೀವಕೋಶದರ್ಶನ್ ತೂಗುದೀಪ್ಸ್ವಾಮಿ ವಿವೇಕಾನಂದಹಂಸಲೇಖವೇದಕರ್ನಾಟಕದ ತಾಲೂಕುಗಳುಪಾಲಕ್ಭಾರತದಲ್ಲಿ ಮೀಸಲಾತಿ🡆 More