ಜಾತೀಕರಣ

ಜಾತೀಕರಣ ಅಂದರೆ ಹೊಸ ಜೀವ ಜಾತಿಯ ಹುಟ್ಟುವಿಕೆಯ ಪ್ರಕ್ರಿಯೆ.

ಜೀವಜಾತಿಯೊಂದರ ಸಂದಣಿಗಳು ಕಾರಣಾಂತರಗಳಿಂದ ಸಂಕರಗೊಳ್ಳದೆ ಸಂತಾನ ಪ್ರತ್ಯೆಕತೆಯನ್ನು ತೋರುತ್ತದೆ. ಭೌಗೊಳಿಕ ತಡೆಗಳಿಂದ ಬಂದ ಪ್ರತ್ಯೇಕತೆಯ ಆಧಾರದ ಮೆಲೆ ಸ್ವಾಭಾವಿಕ ಜಾತೀಕರಣವನ್ನು ನಾಲ್ಕುವಿಧವಾಗಿ ವಿಂಗಡಿಸಲಾಗಿದೆ.

ಜಾತೀಕರಣ
ಜಾತೀಕರಣದ ವಿಧಗಳು

ಪ್ರಭೇದೀಕರಣವು ಸಂತಾನೋತ್ಪತ್ತಿ ಮಾಡುವ ಸಮುದಾಯಗಳು ವಿಕಾಸವಾಗಿ ಭಿನ್ನ ಪ್ರಭೇದಗಳಾಗುವ ವಿಕಸನೀಯ ಪ್ರಕ್ರಿಯೆ. ಪ್ರಭೇದೀಕರಣದಲ್ಲಿ ನೈಸರ್ಗಿಕ ಆಯ್ಕೆಯ ಪಾತ್ರದ ಬಗೆಗೆ ಮೊದಲು ವಿವರಿಸಿದುದು ಚಾರ್ಲ್ಸ್ ಡಾರ್ವಿನ್. ಪ್ರಭೇದೀಕರಣದಲ್ಲಿ ನಾಲ್ಕು ವಿಧಗಳಿದ್ದು ಅವು: ಅಲ್ಲೊಪಾಟ್ರಿಕ್, ಪೆರಿಪಾಟ್ರಿಕ್, ಪಾರಪಾಟ್ರಿಕ್ ಮತ್ತು ಸಿಂಪಾಟ್ರಿಕ್ ಪ್ರಭೇದೀಕರಣಗಳು. ಪಶು ಸಂಗೋಪನೆ, ಕೃಷಿ ಮತ್ತು ಲ್ಯಾಬರೊಟರಿ ಪ್ರಯೋಗಗಳಲ್ಲಿ ಕೃತಿಮವಾಗಿ ಪ್ರಭೇದೀಕರಣವನ್ನು ಪ್ರೇರೇಪಿಸ ಬಹುದು. ಜೆನೆಟಿಕ್ ಚಲನೆ ಪ್ರಭೇದೀಕರಣ ಪ್ರಕ್ರಿಯೆಗೆ ಕೊಡುವ ಕಾಣಿಕೆಯ ಮಹತ್ವದ ಬಗೆಗೆ ಚರ್ಚೆ ಚಾಲ್ತಿಯಲ್ಲಿದೆ.

ಪ್ರಭೇದೀಕರಣ ರೀತಿಗಳು

ವಿಕಾಸದಲ್ಲಿ ಎಲ್ಲ ರೀತಿಯ ಪ್ರಭೇದೀಕರಣಗಳೂ ಚಾಲ್ತಿಯಲ್ಲಿರುತ್ತವೆ, ಆದರೆ ಚರ್ಚೆ ಇರುವುದು ಜೈವಿಕ ವ್ಯವಿಧ್ಯತೆಯನ್ನು ಮುನ್ನಡೆಸುವ ಮೆಕಾನಿಸಂನಲ್ಲಿ ಅವುಗಳ ಸಾಕ್ಷೇಪಿಕ ಪ್ರಾಮುಖ್ಯತೆಯ ಬಗೆಗೆ. ಮೂರು ಮುಳ್ಳುಗಳ ಮುಳ್ಳುಮೀನು (ತ್ರೀ ಸ್ಪೈನ್ಡ್ ಸ್ಟಿಕಲ್‌ಬ್ಯಾಕ್) ಪ್ರಾಕೃತಿಕ ಪ್ರಭೇದೀಕರಣದ ಒಂದು ಉದಾಹರಣೆ. ಕೊನೆಯ ಹಿಮಯುಗದ ನಂತರ ಈ ಸಾಗರ ಜೀವಿ ಪ್ರತ್ಯೇಕ ಸರೋವರ ಮತ್ತು ಹಳ್ಳಗಳಿಗೆ ಸೀಮಿತವಾಗಿ ಸಿಹಿನೀರಿನ ಕಾಲನಿಗಳಾಯಿತು. ಸುಮಾರು ೧೦,೦೦೦ ಪೀಳಿಗೆಗಳಲ್ಲಿ ಮುಳ್ಳು ಮೀನು ಬೇರೆ ಮೀನಿನ ಕುಲಗಳ ನಡುವಿನ ವ್ಯತ್ಯಾಸಕ್ಕಿಂತ ಹೆಚ್ಚು ವ್ಯತ್ಯಾಸಗಳನ್ನು ತೋರುತ್ತಿದೆ. ಈ ವ್ಯತ್ಯಾಸಗಳು ಫಿನ್, ಮೂಳೆಯ ತಟ್ಟೆಗಳ ಗಾತ್ರ ಮತ್ತು ಸಂಖ್ಯೆಯಲ್ಲಿನ ವ್ಯತ್ಯಾಸ, ದವಡನೆಯ ರಚನೆ ಮತ್ತು ಬಣ್ಣಗಳ ವ್ಯತ್ಯಾಸಗಳನ್ನು ಒಳಗೊಂಡಿವೆ.

ಅಲ್ಲೊಪಾಟ್ರಿಕ್

ಅಲ್ಲೊಪಾಟ್ರಿಕ್ ಪ್ರಭೇದೀಕರಣದಲ್ಲಿ ಸಮುದಾಯಗಳು ಭೂಗೋಳಿಕವಾಗಿ ಎರಡು ಗುಂಪುಗಳಾಗಿ ಬೇರ್ಪಡುತ್ತದೆ (ಉದಾಹರಣೆಗೆ ವಾಸಿಸುವ ಸ್ಥಳದ ಬೇರೆಯಾಗುವಿಕೆ, ಬೆಟ್ಟಗಳ ಉದಯ ಮುಂತಾದ ಕಾರಣಗಳಿಂದಾಗಿ). ಹೀಗೆ ಪ್ರತ್ಯೇಕವಾದ ಈ ಗುಂಪುಗಳು ಅನುವಂಶಿಕತೆಯಲ್ಲಿ ಅಥವಾ/ಅಥವಾ ದೈಹಿಕವಾಗಿ ಈ ಕಾರಣಗಳಿಂದಾಗಿ ಭಿನ್ನವಾಗುತ್ತವೆ: ೧) ಭಿನ್ನ ರೀತಿಯ ಆಯ್ಕೆಯ ಒತ್ತಡಕ್ಕೆ ಗುರಿಯಾಗುವುದು. ೨) ಅವುಗಳಲ್ಲಿ ಸ್ವತಂತ್ರವಾಗಿ ಜೆನೆಟಿಕ್ ಚಲನೆ ಉಂಟಾಗುವುದು ಮತ್ತು ೩) ಎರಡೂ ಸಮೂಹಗಳಲ್ಲಿ ಭಿನ್ನ ವ್ಯತ್ಯಯನಗಳು (ಮ್ಯುಟೇಶನ್) ಉಂಟಾಗುವುದು. ಮತ್ತೊಮ್ಮೆ ಈ ಎರಡೂ ಸಮುದಾಯಗಳೂ ಹತ್ತಿರ ಬಂದಾಗ ಅವು ವಂಶವಾಹಿಗಳನ್ನು ವಿನಿಯಮಯ ಮಾಡಿಕೊಳ್ಳಲಾರದ ಹಂತವನ್ನು ತಲುಪಿದ್ದು ಲೈಂಗಿಕವಾಗಿ ಪ್ರತ್ಯೇಕವಾಗಿರುತ್ತವೆ.

ದ್ವೀಪ ಜೆನಿಟೆಕ್ಸ್ ನುಡಿಗಟ್ಟನ್ನು ಸಣ್ಣ ಪ್ರತ್ಯೇಕಿಸಲ್ಪಟ್ಟ ವಿಶಿಷ್ಟ ಗುಣಗಳನ್ನು ಮೇಳೈಸಿಕೊಂಡ ವಂಶವಾಹಿಗಳಿರುವ ಜೀವಿಗಳನ್ನು ವಿವರಿಸಲು ಬಳಸಲಾಗುತ್ತದೆ. ಜಗತ್ತಿನ ಅತಿದೊಡ್ಡ ಜೀವಂತ ಹಲ್ಲಿ ಇರುವ ಕೊಮೊಡೊ ದ್ವೀಪ (ಇಂಡೊನೇಶಿಯ) ಮತ್ತು ಡಾರ್ವಿನ್‌ನ ಮೇಲೆ ಪ್ರಭಾವ ಬೀರಿದ ಕಾರಣಕ್ಕೆ ಪ್ರಖ್ಯಾತವಾದ ಗಲಪಗೊ ದ್ವೀಪಗಳನ್ನು ಉದಾಹರಣೆಗಳಾಗಿ ನೋಡಬಹುದು. ಗಲಪಗೊ ದ್ವೀಪದ ಫಿಂಚ್‌ಗಳು (ಬೆಟ್ಟದ ಹಕ್ಕಿಗಳು) ದ್ವೀಪದಿಂದ ದ್ವೀಪಕ್ಕೆ ಭಿನ್ನವಾಗಿದ್ದುದನ್ನು ಡಾರ್ವಿನ್ ಗಮನಿದ ಮತ್ತು ಇದು ಪ್ರಭೇದಗಳು ಬದಲಾಗುತ್ತವೆ ಎಂಬ ಚಿಂತನೆಯನ್ನು ಅವನಲ್ಲಿ ಬಲಪಡಿಸಿತು. ಯಾತ್ರೆಯಿಂದ ಬ್ರಿಟನ್ನಿಗೆ ವಾಪಾಸದ ನಂತರ ತಜ್ಞರು ಈ ಭಿನ್ನ ಹಕ್ಕಿಗಳು ಬೇರೆ ಬೇರೆ ತಳಿಗಳಲ್ಲ ಬದಲಾಗಿ ಬೇರೆ ಬೇರೆ ಪ್ರಭೇದಗಳು ಎಂದು ತಿಳಿಸಿದರು. ಇದು ವಿಕಸಾದದ ಬಗೆಗೆ ಅವನ ಚಿಂತನೆ ಆಳವನ್ನು ಹೆಚ್ಚಿಸಿತು. ಡಾರ್ವಿನ್ ಫಿಂಚ್‌ಗಳು ಎಂದು ಇಂದು ಹೆಸರು ಪಡೆದ ಈ ಹಕ್ಕಿಗಳ ಆಧುನಿಕ ಅಧ್ಯಯನಗಳು ಅವು ವಿಕಸನೀಯ ಹೊಂದಾಣಿಕೆಯ ಅಪಸರಣದ (ಅಡಾಪ್ಟಿವ್ ರೇಡಿಯೇಶನ್) ಒಂದು ಮಾದರಿ ಉದಾಹರಣೆ ಎಂದು ಸೂಚಿಸುತ್ತವೆ.

ಪೆರಿಪಾಟ್ರಿಕ್

ಪೆರಿಪಾಟ್ರಿಕ್ ಪ್ರಭೇದೀಕರಣವು ಅಲ್ಲೊಪಾಟ್ರಿಕ್ ಪ್ರಭೇದೀಕರಣದ ಒಂದು ರೂಪ. ಇಲ್ಲಿ ಅಂಚಿನಲ್ಲಿರುವ ಸಣ್ಣ ಸಮುದಾಯವು ಪ್ರತ್ಯೇಕವಾಗುತ್ತದೆ ಮತ್ತು ಮೂಲ ಸಮುದಾಯದೊಂದಿಗೆ ಅದರ ವಂಶವಾಹಿಗಳ ವಿನಿಮಯವು ನಿರ್ಬಂಧಿತವಾಗುತ್ತದೆ. ಇದರ ಸಂಬಂಧ ಸ್ಥಾಪಕನ ಪರಿಣಾಮ (ಫೌಂಡರ್ ಎಫೆಕ್ಟ್) ಮತ್ತು ಸೀಸೆಯ ಕಂಠ ಪರಿಣಾಮದೊಂದಿಗೆಯೂ (ಪಾಪುಲೇಶನ್ ಬಾಟಲ್‌ನೆಕ್) ಇದೆ. ಇಂತಹ ಸಣ್ಣ ಸಮುದಾಯಗಳಲ್ಲಿ ಜೆನೆಟಿಕ್ ಚಲನೆ ಮಹತ್ವದ ಪಾತ್ರ ವಹಿಸುತ್ತದೆ. ಉದಾಹರಣೆ -ಆಸ್ಟ್ರೇಲಿಯದ ಹಕ್ಕಿ ಪೆಟ್ರೊಯಿಕ ಮಲ್ಟಿಕಾಲರ.

ಪಾರಪಾಟ್ರಿಕ್

ಪಾರಪಾಟ್ರಿಕ್ ಪ್ರಭೇದೀಕರಣದಲ್ಲಿ ಎರಡು ಭಿನ್ನ ಸಮುದಾಯಗಳ ನಡುವಿನ ಭೂಗೋಳಿಕ ಪ್ರತ್ಯೇಕತೆ ಭಾಗಶಹ ಮಾತ್ರವೇ ಇರುತ್ತದೆ. ಹೀಗಾಗಿ ಎರಡೂ ಗುಂಪಿನ ಜೀವಿಗಳು ಸಂಪರ್ಕಕಕ್ಕೆ ಬರಬಹುದು ಮತ್ತು ಅವುಗಳ ಮಿಶ್ರಣ ಅಥವಾ ಸಂಕರದಿಂದ ಉಂಟಾದ ಸಂತತಿ ಕಡಿಮೆ ಯೋಗ್ಯತೆಯ ಕಾರಣಕ್ಕೆ (ಬಾಳಿ ಬದುಕುವ ಮತ್ತು ಸಂತಾನೋತ್ಪತ್ತಿ ಮಾಡುವ ಯೋಗ್ಯತೆ) ಅಥವಾ ಇನ್ನಾವುದೇ ಮೆಕಾನಿಸಂ ಅವುಗಳ ಸಂಕರವನ್ನು ನಿರ್ಬಂಧಿಸಿದ ಕಾರಣಕ್ಕೆ ಪ್ರತ್ಯೇಕತೆ ಉಂಟಾಗುತ್ತದೆ. ಅಲ್ಲೊಪಾಟ್ರಿಕ್ ಮತ್ತು ಪೆರಿಪ್ರಾಟಿಕ್ ಪ್ರಭೇದೀಕರಣಗಳಲ್ಲಿ ವಾಸಸ್ತಾನಗಳು ಪ್ರೇತ್ಯೇಕಿಸಲ್ಪಟ್ಟಿರುತ್ತವೆ. ಪಾರಪಾಟ್ರಿಕ್ ಪ್ರಭೇದೀಕರಣದಲ್ಲಿ ಹೀಗಾಗುವುದಿಲ್ಲ. ಆದರೆ ಇಲ್ಲಿ ಪರಿಸರ ನೈಸರ್ಗಿಕ ಆಯ್ಕೆಯ ಕೆಲಸಮಾಡುತ್ತದೆ.

ಪಾರಪಾಟ್ರಿಕ್ ಪ್ರಭೇದೀಕರಣವು ಭೂಲಕ್ಷಣ ಆಧಾರಿತ ಭಿನ್ನ ಆಯ್ಕೆಗೆ ಕಾರಣವಾಗ ಬಹುದು. ಎರಡು ಸಮುದಾಯಗಳ ನಡುವೆ ವಂಶವಾಹಿಗಳ ಹರಿವು ಇದ್ದಾಗ್ಯೂ ಪ್ರಬಲ ಆಯ್ಕೆಯ ಒತ್ತಡ ಎರಡನ್ನೂ ಬೆಸೆಯುವಲ್ಲಿ ಅಡ್ಡ ಬರುತ್ತದೆ ಮತ್ತು ಪ್ರತ್ಯೇಕ ಪ್ರಭೇದವಾಗಲು ಸಹಾಯಕವಾಗುತ್ತದೆ. ವಾಸಸ್ಥಾನದ ವ್ಯತ್ಯಾಸಗಳು (ಕಾಲಮಾನದಲ್ಲಿನ ವ್ಯತ್ಯಾಸಕ್ಕಿಂತ) ಸಂತಾನೋತ್ಪತ್ತಿಯ ಪ್ರತ್ಯೇಕತೆಗೆ ಹೆಚ್ಚು ಕಾರಣವಾಗ ಬಲ್ಲವು. ಕಕೇಶಿಯದ ಕಲ್ಲು ಹಲ್ಲಿಗಳಲ್ಲಿ ಡರೆವಿಸ್ಕಿಯ ರುಡಿಸ್, ಡ. ವಲೆಂಟಿನಿ ಮತ್ತು ಡ. ಪೋರ್ಟ್‌ಸ್ಕಿನ್‌ಸ್ಕಿ ಎನ್ನುವ ಮೂರು ಪ್ರಭೇದಗಳಿವೆ. ಅವುಗಳ ಸಂಕರ ವಲಯದಲ್ಲಿ ಸಂಕರ ಸಾಮಾನ್ಯ. ಆದರೆ ಕಾಲಮಾನದಲ್ಲಿ ಹಿಂದೆ ಕವಲೊಡೆದೂ ಸಹ ಇಂದು ಒಂದೇ ಪರಿಸರದಲ್ಲಿ ಬಾಳುವ ಡ. ಪೋರ್ಟ್‌ಸ್ಕಿನ್‌ಸ್ಕಿ ಮತ್ತು ಡ. ರುಡಿಸ್‌ಗಳ ನಡುವೆ ಸಂಕರ ಹೆಚ್ಚು ಬಲವಾದದ್ದು. ಇದಕ್ಕೆ ಭಿನ್ನವಾಗಿ ಕಾಲಮನದಲ್ಲಿ ಇತ್ತೀಚೆಗೆ ಕವಲೊಡೆದಾಗ್ಯೂ ಭಿನ್ನ ವಾತಾವರಣದ ಪರಿಸರದಲ್ಲಿ ಬದುಕುವ ಡ. ವಲೆಂಟಿನಿ ಮತ್ತು ಇತರ ಎರಡು ಗುಂಪುಗಳ ನಡುವೆ ಸಂಕರ ಸಾಕ್ಷೇಪಿಕವಾಗಿ ಬಲಹೀನ.

ಪರಿಸರ ತಜ್ಞರು ಪಾರಪಾಟ್ರಿಕ್ ಮತ್ತು ಪೆರಿಪಾಟ್ರಿಕ್ ಪ್ರಭೇದೀಕರಣಗಳನ್ನು ಪರಿಸದ ಸ್ಥಳಾವಕಾಶಕ್ಕೆ (ಎಕಾಲಜಿಕಲ್ ನಿಚೆ) ಸಂಬಂಧಿಸಿ ಉಲ್ಲೇಖಿಸುತ್ತಾರೆ. ಹೊಸ ಪ್ರಭೇದ ಯಶಸ್ವಿಯಾಗಲು ಪರಿಸರದ ಸ್ಥಳಾವಕಾಶವೊಂದು ಲಭ್ಯವಿರ ಬೇಕು.

ಉಂಗುರ ಪ್ರಭೇದಗಳನ್ನು (ರಿಂಗ್ ಸ್ಪೀಶೀಸ್) ಇದಕ್ಕೆ ಉದಾಹರಣೆಯಾಗಿ ಕೊಡಬಹುದು. ಇದು ಹಲವು ಒಂದನ್ನೊಂದು ಸಂಕರವಾಗಿ ಸೇರಬಲ್ಲ ಸಮುದಾಯಗಳನ್ನು ಹೊಂದಿರುತ್ತದೆ. ಆದರೆ ಎರಡೂ "ತುದಿ"ಯ ಜೀವಿಗಳು ಒಂದಕ್ಕೊಂದು ಲೈಂಗಿಕವಾಗಿ ಬೆರೆಯದಷ್ಟು "ದೂರ"ವಾಗಿರುತ್ತವೆ. ಇದಕ್ಕೆ ಹಿಮಾಲಯಗಳ ಗ್ರೀನಿಶ್ ವಾರ್ಬಲರ್ (ಫೈಲೊಸ್ಕೋಪಸ್ ಟ್ರೊಕಿಲೊಯಿಡೆಸ್‌) ಒಂದು ಉದಾಹರಣೆ.

ಸಿಂಪಾಟ್ರಿಕ್

ಜಾತೀಕರಣ 
ಜಪಾನಿ ಬತ್ತ ಮೀನು (ಜಾಪನೀಸ್ ರೈಸ್ ಫಿಶ್)

ಸಿಂಪಾಟ್ರಿಕ್ ಪ್ರಭೇದೀಕರಣವು ಒಂದೇ ಪ್ರಭೇದದ ಎರಡು ಗುಂಪುಗಳು ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದೂ ಭಿನ್ನ ಪ್ರಭೇದಗಳಾಗಿ ವಿಕಾಸವಾಗುವುದು. ಸಿಂಪಾಟ್ರಿಕ್ ಪ್ರಭೇದೀಕರಣದಲ್ಲಿ ಕೆಲವೊಮ್ಮೆ ಒಂದೇ ಪ್ರದೇಶದಲ್ಲಿ ಅದರ ಬೇರೆ ಬೇರೆ ಆಶ್ರಯದಾತ ಗಿಡಗಳ ಮೇಲೆ ಆಧಾರ ಪಟ್ಟ ಕೀಟಗಳಲ್ಲಿ ಕಂಡುಬಂದುದು ವರದಿಯಾಗಿದೆ. ಆದರೆ ಪ್ರಭೇದೀಕರಣದ ಒಂದು ಮೆಕಾನಿಸಂ ಆಗಿ ಸಿಂಪ್ರಾಟಿಕ್ ಪ್ರಭೇದೀಕರಣದ ಇರುವಿಕೆ ಚರ್ಚಾಸ್ಪದವಾಗಿದೆ.

ಜಾತೀಕರಣ 
ಸಿಹಿನೀರಿನ ಏಂಜೆಲ್‌ಮೀನು, ಸಿಕ್ಲಿಡೇ ‌ವಂಶಕ್ಕೆ ಸೇರಿದ್ದು

ಪೂರ್ವ ಆಫಿಕ್ರಾದ ರಿಫ್ಟ್ ಕಣಿವೆಯ ಸರೋವರಗಳಲ್ಲಿರುವ, ಅದರಲ್ಲೂ ವಿಶೇಷವಾಗಿ ವಿಕ್ಟೋರಿಯ, ಮಾಲವಿ ಮತ್ತು ತಂಗನಿಕ ಸರೋವರಗಳಲ್ಲಿನ, ಸಿಕ್ಲಿಡೇ ವಂಶದ ಮೀನುಗಳ ಪ್ರಭೇದೀಕರಣ ಸಿಂಪ್ರಾಟಿಕ್ ಪ್ರಭೇದೀಕರಣದ ಒಳ್ಳೆಯ ಉದಾಹರಣೆ. ಇದರ ೮೦೦ಕ್ಕೂ ಹೆಚ್ಚು ಪ್ರಭೇದಗಳನ್ನು ವಿವರಿಸಲಾಗಿದೆ ಮತ್ತು ೧೬೦೦ ಹೆಚ್ಚು ಪ್ರಭೇದಗಳು ಈ ಪ್ರದೇಶದಲ್ಲಿ ಇದ್ದಿರ ಬಹುದೆಂದು ಅಂದಾಜಿಸಲಾಗಿದೆ. ಈ ಎಲ್ಲಾ ಪ್ರಭೇದಗಳೂ ಸಾಮಾನ್ಯ ಪೂರ್ವಜ ಜಪಾನಿ ಬತ್ತ ಮೀನಿನಿಂದ (ಒರಿಜಿಯಾಸ್ ಲಟಿಪೆಸ್) ಸುಮಾರು ೧೧೩ ದಶಲಕ್ಷ ವರುಷಗಳ ಹಿಂದೆ ಕವಲೊಡೆದಿವೆ. ಅವನ್ನು ನೈಸರ್ಗಿಕ ಮತ್ತು ಲೈಂಗಿಕ ಆಯ್ಕೆ ಎರಡರ ಉದಾಹರಣೆಗಳಾಗಿ ನೀಡಲಾಗುತ್ತಿದೆ. ಪರಿಸರದ ಅಂಶಗಳಿಂದ ನಿರ್ದೇಶಿತ ಸಿಂಪ್ರಾಟಿಕ್ ಪ್ರಭೇದೀಕರಣಕ್ಕೆ ಸೈಬೇರಿಯಾದ ಬೈಕಲ್ ಸರೋವರದ ಆಳದಲ್ಲಿನ ಕಠಿಣಚರ್ಮಿಗಳ (ಕ್ರಟೇಸಿಯನ್) ಅಸಾಮಾನ್ಯ ವೈವಿಧ್ಯತೆಗೆ ಉದಾಹರಣೆಯಾಗಿರಲು ಸಾಧ್ಯ.

ಹಾತಾರನ್ ನೊಣದ ಉದಾಹರಣೆ

ಜಾತೀಕರಣ 
ರಗೊಲೆಟಿಸ್ ಪೊಮನೆಲ್ಲ

ವಿಕಾಸವು ಕೆಲಸ ಮಾಡುತ್ತಿರುವ ಒಂದು ಉದಾಹರಣೆ ಹಾತಾರನ್ ನೊಣ (ರಗೊಲೆಟಿಸ್ ಪೊಮನೆಲ್ಲ). ಸೇಬಿನ ಮ್ಯಾಗಾಟ್ ನೊಣ ಎಂದು ಸಹ ಕರೆಯಲಾಗುವ ಇದು ಸಿಂಪ್ರಾಟಿಕ್ ವಿಕಾಸದ ಕುರುಹುಗಳನ್ನು ತೋರುತ್ತದೆ. ಹಾತಾರನ್ ನೊಣದ ಬೇರೆ ಬೇರೆ ಗುಂಪುಗಳು ಬೇರೆ ಬೇರೆ ಹಣ್ಣುಗಳನ್ನು ಆಹಾರವಾಗಿಸಿಕೊಂಡಿವೆ. ಉತ್ತರ ಅಮೆರಿಕದಲ್ಲಿ ಅಲ್ಲಿಗೆ ಸ್ಥಳೀಯವಲ್ಲದ ಸೇಬನ್ನು ೧೯ನೆಯ ಶತಮಾನದಲ್ಲಿ ಒಳತಂದ ನಂತರ ವಿಶಿಷ್ಟ ಗುಂಪೊಂದು ಹೊರಹೊಮ್ಮಿತು. ಈ ಗುಂಪು ಇದುವರೆಗೂ ಐತಿಹಾಸಿಕವಾಗಿ ಹಾತಾರನ್ ನೊಣ ಆಧಾರ ಪಟ್ಟ ಹಣ್ಣುಗಳಲ್ಲದೆ ಸೇಬನ್ನೇ ಆಹಾರವಾಗಿಸಿಕೊಂಡಿತು. ಇತರ ಹಣ್ಣುಗಳ ಮೇಲೆ ಆಧಾರ ಪಡುವ ಹಾತಾರನ್ ನೊಣಗಳು ಸೇಬನ್ನು ಆಹಾರವಾಗಿಸಿಕೊಂಡಿಲ್ಲ. ಇವುಗಳ ಭಿನ್ನತೆಯ ಕೆಲ ಸಾಕ್ಷಿಗಳೆಂದರೆ ಕಿಣ್ವ ತಯಾರಿ ನಿರ್ದೇಶಿಸುವ ಹದಿಮೂರು ವಂಶವಾಹಿ ನೆಲೆಗಳಲ್ಲಿ (ಲೊಕಸ್‌ಗಳು) ಆರು ಭಿನ್ನವಾಗಿವೆ, ಸಾಮಾನ್ಯ ಹಾತಾರನ್ ನೊಣಗಳು ಸೇಬಿನ ನೊಣಗಳಿಗಿಂತ ರುತುವಿನಲ್ಲಿ ನಂತರ ವಯಸ್ಕರಾಗುತ್ತವೆ ಮತ್ತು ತಡವಾಗಿ ವಯಸ್ಕರಾಗುತ್ತವೆ ಮತ್ತು ಅವೆರಡರ ನಡುವಿನ ಲೈಂಗಿಕ ಸಂಪರ್ಕಕ್ಕೆ ಪುರಾವೆಗಳು ಕಡಿಮೆ ಇದ್ದು (ಸಂಶೋಧಕರು ಶೇ ೪-೬ ಸಂಕರ ದರವನ್ನು ದಾಖಲಿಸಿದ್ದಾರೆ) ಸಿಂಪಾಟ್ರಿಕ್ ಪ್ರಭೇದೀಕರಣ ಚಾಲ್ತಿಯಲ್ಲಿದೆ ಎಂದು ಸೂಚಿತವಾಗಿದೆ. ಹೊಸ ಹಾತಾರನ್ ನೊಣದ ಗುಂಪು ರೂಪಗೊಳ್ಳುವುದು ವಿಕಾಸದ ಪ್ರಗತಿಯನ್ನು ತೋರುತ್ತದೆ.

ಬಲವರ್ಧನೆ

ಬಲವರ್ಧನೆ ಅಥವಾ ವ್ಯಾಲೇಸ್ ಪರಿಣಾಮವು ಪ್ರಾಕೃತಿಕ ಆಯ್ಕೆಯ ಮೂಲಕ ಸಂತಾನೋತ್ಪತ್ತಿ ಪ್ರತ್ಯೇಕತೆಯನ್ನು ಹೆಚ್ಚಿಸುವ ಪ್ರಕ್ರಿಯೆ. ಒಂದೇ ಪ್ರಭೇದದ ಎರಡು ಗುಂಪುಗಳು ಪ್ರತ್ಯೇಕವಾಗಿ ನಂತರದಲ್ಲಿ ಸಂಪರ್ಕಕ್ಕೆ ಬಂದಾಗ ಇದು ಆಗುತ್ತದೆ. ಸಂತಾನೋತ್ಪತ್ತಿಯ ಪ್ರತ್ಯೇಕತೆ ಪೂರ್ಣವಾಗಿದ್ದರೆ ಆ ಎರಡೂ ಗುಂಪುಗಳೂ ಆಗಲೆ ಬೇರೆ ಬೇರೆ ಪ್ರಭೇದಗಳಾಗಿರುತ್ತವೆ. ಸಂತಾನೋತ್ಪತ್ತಿಯ ಪ್ರತ್ಯೇಕತೆ ಪೂರ್ಣವಾಗಿರದಿದ್ದರೆ ಅವುಗಳ ನಡುವಿನ ಲೈಂಗಿಕ ಸಂಬಂಧವು ಸಂಕರ ಸಂತತಿಯನ್ನು ಉತ್ಪಾದಿಸುತ್ತದೆ. ಅವುಗಳ ಸಂತತಿ ಬಂಜೆ ಅಥವಾ ಬಂಜೆಯಾಗದೆಯೂ ಅವುಗಳ ಪೂರ್ವಜರಿಗಿಂತ ಕಡಿಮೆ ಯೋಗ್ಯತೆಯವಾಗಿದ್ದರೆ ಸಂತಾನೋತ್ಪತ್ತಿಯ ಪ್ರತ್ಯೇಕತೆ ಹೆಚ್ಚು ಬಲಪಡುತ್ತದೆ ಮತ್ತು ಪ್ರಭೇದೀಕರಣ ಮೂಲಭೂತವಾಗಿ ಪೂರ್ಣಗೊಂಡತಾಗುತ್ತದೆ (ಉದಾಹರಣೆ ಕತ್ತೆ ಮತ್ತು ಕುದುರೆಗಳ ನಡುವಿನ ಸಂಕರ).

ಇದಕ್ಕೆ ಕೊಡಬಹುದಾದ ಕಾರಣವೆಂದರೆ ಪ್ರತೀ ತಂದೆ ಅಥವಾ ತಾಯಿಗೆ ತನ್ನದೇ ನಿರ್ದಿಷ್ಟ ಪರಿಸರಗಳಿಗೆ ಹೊಂದಿಕೊಂಡ ಗುಣಗಳು ಪ್ರಾಕೃತಿಕವಾಗಿ ಆಯ್ಕೆಯಾಗಿದ್ದು ಸಂಕರ ಸಂತತಿಯು ಎರಡರ ಗುಣಗಳನ್ನೂ ಪಡೆದಿದ್ದು ಅದು ಜನ್ಮದಾತರಿಗೆ ಅಥವಾ ಅವರ ಪರಿಸರದ ಸ್ಥಳಾವಕಾಶಗಳಿಗೆ ಹೊಂದಿಕೊಳ್ಳುವುದಿಲ್ಲ. ಸಂಕರ ಸಂತತಿಯ ಕಡಿಮೆ ಯೋಗ್ಯತೆಯು ಹೋಲಿಕೆಯ ಜೀವಿಯ ಲೈಂಗಿಕ ಆಯ್ಕೆಯಲ್ಲಿ ಕೊನೆಗೊಂಡು ಸಂಕರವನ್ನು ನಿಯಂತ್ರಿಸುತ್ತದೆ (ಲೈಂಗಿಕ ಆಯ್ಕೆ ನೋಡಿ). ತಡವಾದ ಹತ್ತೊಂಬತ್ತನೆಯ ಶತಮಾನದಲ್ಲಿ ವಿಕಸನೀಯ ಜೀವಶಾಸ್ತ್ರಜ್ಞ ಆಲ್‌ಫ್ರೆಡ್ ರಸೆಲ್ ವ್ಯಾಲೆಸ್ ಪ್ರಭೇದೀಕರಣದಲ್ಲಿ ಈ ಅಂಶ ಮುಖ್ಯವಾಗಿರ ಬಹುದು ಎಂದು ಸೂಚಿಸಿದ ಕಾರಣಕ್ಕೆ ಇದನ್ನು ಕೆಲವೊಮ್ಮೆ ವ್ಯಾಲೇಸ್ ಪರಿಣಾಮ ಎಂದು ಸಹ ಕರೆಯಲಾಗುತ್ತದೆ.

ಇದಕ್ಕೆ ಭಿನ್ನವಾಗಿ ಸಂಕರ ಸಂತತಿಯು ಅದರ ಪೂರ್ವಜರಿಗಿಂತ ಹೆಚ್ಚು ಯೋಗ್ಯವಾಗಿದ್ದರೆ ಆ ಸಂತತಿಯು ಯಾವ ಪ್ರದೇಶದಲ್ಲಿ ಸಂಪರ್ಕದಲ್ಲಿದೆಯೊ ಅದರ ಮೂಲ ಪ್ರಭೇದದೊಳಗೆ ಸೇರಿಕೊಳ್ಳುತ್ತದೆ.

ಸಂತಾನೋತ್ಪತ್ತಿ ಪ್ರತ್ಯೇಕತೆಯ ಪರವಾದ ಬಲವರ್ಧನೆ ಪಾರಪಾಟ್ರಿಕ್ ಮತ್ತು ಸಿಂಪಾಟ್ರಿಕ್ ಪ್ರಭೇದೀಕರಣ ಗಳೆರಡರಲ್ಲಿಯೂ ಅಗತ್ಯ. ಬಲವರ್ಧನೆಯ ಇಲ್ಲದೆ ಒಂದೇ ಪ್ರಭೇದದ ಎರಡು ಗುಂಪುಗಳ ನಡುವಿನ, “ಸಂಕರ ವಲಯ” ಎಂದು ಕರೆಯಲಾದ, ಸಂಪರ್ಕದ ಭೂಗೋಳಿಕ ಪ್ರದೇಶ ಬೇರೆ ಪ್ರಭೇದಗಳ ಗಡಿಯಾಗಿ ರೂಪಗೊಳ್ಳುವುದಿಲ್ಲ. ಸಂಕರ ವಲಯವು ಎರಡು ಭಿನ್ನವಾದ ಜೀವ ಸಮೂಹಗಳು ಸಂಪರ್ಕಕ್ಕೆ ಬಂದು ಲೈಂಗಿಕವಾಗಿ ಬೆರೆಯುವ ಪ್ರದೇಶ. ಸಂಕರ ತಳಿಗಳು ಈ ಪ್ರದೇಶದಲ್ಲಿ ಸಾಮಾನ್ಯ ಮತ್ತು ಈ ಸಂದರ್ಭವು ಸಾಮಾನ್ಯವಾಗಿ ಎರಡು ಭಿನ್ನವಾದ ಜೀವ ಸಮೂಹಗಳು ಎರಡನೆಯ ಸಲ ಸಂಪರ್ಕಕ್ಕೆ ಬಂದಾಗ ಉಂಟಾಗುತ್ತದೆ. ಬಲವರ್ಧನೆ ಇಲ್ಲದೆ ಎರಡು ಪ್ರಭೇದಗಳ ನಡುವೆ ನಿರ್ಬಂಧವಿಲ್ಲದ ಲೈಂಗಿಕ ಬೆರೆಯುವಿಕೆ ನಡೆಯುತ್ತದೆ. ಬಲವರ್ಧನೆಯನ್ನು ಕೆಳಗೆ ತೋರಿಸಿದಂತೆ ಕೃತಿಮ ಆಯ್ಕೆಗಳ ಪ್ರಯೋಗಗಳ ಮೂಲಕ ಉಂಟುಮಾಡಬಹುದು.

ಪರಿಸರ ಮತ್ತು ಸಮಾಂತರ ಪ್ರಭೇದೀಕರಣ

ಪರಿಸರ ಪ್ರಭೇದೀಕರಣವು ಭಿನ್ನ ಸಮುದಾಯಗಳ ನಡುವೆ ಎರಡು ಭಿನ್ನ ಪರಿಸರಗಳ ನಡುವಿನ ಪರಿಸರ ಆಧಾರಿತ ಆಯ್ಕೆಯ ಪರಿಣಾಮವಾಗಿ ಸಂತಾನೋತ್ಪತ್ತಿಯ ತಡೆಯನ್ನು ಉಂಟುಮಾಡುವ ಪ್ರಕ್ರಿಯೆ. ಇದು ಕೆಲವೊಮ್ಮೆ ಸಂತಾನೋತ್ಪತ್ತಿಯ ಪ್ರತ್ಯೇಕತೆಗೆ ಸಂಬಂಧಿಸಿದ ಗುಣಗಳ ಆಯ್ಕೆಯಾಗಿ ಪರಿಣಮಿಸುತ್ತದೆ ಮತ್ತು ಈ ಹೊಂದಾಣಿಕೆಯ ವ್ಯತ್ಯಾಸದ ಉಪ ಪರಿಣಾಮವಾಗಿ ಪ್ರಭೇದೀಕರಣವಾಗುತ್ತದೆ.

ಸಮಾಂತರ ಪ್ರಭೇದೀಕರಣದಲ್ಲಿ “ಒಂದೇ ರೀತಿಯ ಪರಿಸರದಲ್ಲಿರುವ ಸ್ವತಂತ್ರ ಸಮುದಾಯಗಳಿಗಿಂತ ಭಿನ್ನ ಪರಿಸರಗಳಲ್ಲಿರುವ ಸ್ವತಂತ್ರ ಜೀವಿ ಸಮೂಹಗಳ ನಡುವೆ ಹೆಚ್ಚಿನ ಸಂತಾನೋತ್ಪತ್ತಿ ಪ್ರತ್ಯೇಕತೆಯು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ.” ಪರಿಸರ ಪ್ರಭೇದೀಕರಣದ ಇರುವಿಕೆಯ ಬಗೆಗಿನ ಪುರಾವೆಗಳು ಹೊಂದಾಣಿಕೆ ಮತ್ತು ಸಂತಾನೋತ್ಪತ್ತಿ ಪ್ರತ್ಯೇಕತೆ ಅಧ್ಯಯನಗಳಲ್ಲಿ ವಿಫುಲವಾಗಿ ದೊರೆಯುತ್ತವೆ.

ಲೈಂಗಿಕ ಆಯ್ಕೆ

ಲೈಂಗಿಕ ಆಯ್ಕೆಯು ಹಲವು ಒಂದೇ ಮೂಲದ ಜೀವಿಗಳಲ್ಲಿ ಪ್ರಭೇದೀಕರಣವನ್ನು ಪ್ರಾಕೃತಿಕ ಆಯ್ಕೆಗಿಂತ ಸ್ವತಂತ್ರವಾಗಿ ಮುನ್ನೆಡಸಬಲ್ಲದು ಎಂದು ಭಾವಿಸುತ್ತದೆ. ಆದರೆ ಇಲ್ಲಿ “ಪ್ರಭೇದೀಕರಣ” ಪದವನ್ನು ಎರಡು ಆದರೆ ಒಂದರಿಂದ ಒಂದು ಪೂರ್ಣವಾಗಿ ಪ್ರತ್ಯೇಕವಲ್ಲದ ಅರ್ಥದಲ್ಲಿ ಬಳಸಲಾಗುತ್ತದೆ. ಮೊದಲ ಬಹಳ ಸಾಮಾನ್ಯವಾಗಿ ಬಳಸುವ ಅರ್ಥ ಹೊಸ ಪ್ರಭೇದದ “ಹುಟ್ಟಿಗೆ” ಸಂಬಂಧಿಸಿದೆ. ಅಂದರೆ ಈಗಿರುವ ಪ್ರಭೇದವನ್ನು ಎರಡು ಪ್ರಭೇದಗಳಾಗಿ ವಿಭಜಿಸುವುದು ಅಥವಾ ಮೂಲ ಪ್ರಭೇದದಿಂದ ಹೊಸ ಪ್ರಭೇದವೊಂದರ ಹುಟ್ಟಿಗೆ ಸಂಬಂಧಿಸಿದ್ದು ಮತ್ತು ಈ ಎರಡೂ ಜೈವಿಕ “ಫ್ಯಾಶನ್ ಗೀಳಿನಿಂದ” (ಗಂಡು ಅಥವಾ ಹೆಣ್ಣು ಅಥವಾ ಎರಡೂ ಹೊಂದಾಣಿಕೆ ಗುಣಕ್ಕೆ ಸಂಬಂಧವಿಲ್ಲದ ಗುಣ ಅಥವಾ ಗುಣಗಳುಳ್ಳ ಸಂಗಾತಿಯನ್ನು ಮೆಚ್ಚುವುದು) ನಿರ್ದೇಶಿತ ಪ್ರಕ್ರಿಯೆಗಳಾಗಿವೆ. ಎರಡನೆಯ ಅರ್ಥದಲ್ಲಿ “ಪ್ರಭೇದೀಕರಣ”ವು ಲೈಂಗಿಕ ಜೀವಿಗಳಲ್ಲಿ ಚಾಲ್ತಿಯಲ್ಲಿರುವ ಪ್ರವೃತ್ತಿ. ಪಾಕೃತಿಕ ಆಯ್ಕೆಯ ತಾರ್ಕಿಕ ಅಥವಾ ಸ್ಪಷ್ಟ ಪರಿಣಾಮದಿಂದಾಗಿ ಜೀವಿಗಳು ಹಲವು ದೈಹಿಕ ವ್ಯತ್ಯಾಸಗಳಿರುವ ಅವಿಚ್ಛಿನ (ಒಂದೇ) ಗುಂಪಾಗಿ ಇರಬಹುದಾಗಿತ್ತು. ಇದಕ್ಕೆ ಭಿನ್ನವಾಗಿ ಪ್ರಕೃತಿಯಲ್ಲಿ ಜೀವಿಗಳು ಬಿಡಿಯಾದ ಪ್ರಭೇದಗಳಾಗಿ ವಿಭಜಿತವಾಗಿರುವುದಕ್ಕೆ ಸಂಬಂಧಿಸಿದೆ. ಇದನ್ನೊಂದು ಸಮಸ್ಯೆ ಎಂದು ಡಾರ್ವಿನ್ ತನ್ನ ಆನ್ ದಿ ಆರಿಜನ್ ಆಫ್ ಸ್ಪೀಶೀಸ್‌ನಲ್ಲಿ (೧೮೫೯) “ಡಿಫಿಕಲ್ಟೀಸ್ ವಿತ್ ದಿ ಥಿಯರಿ” ತಲೆಬರಹದಡಿ ಚರ್ಚಿಸಿದ್ದಾನೆ. ಡಾರ್ವಿನ್‌ನ ಈ ಸಂದಿಗ್ಧತೆಗೆ ಪರಿಹಾರ ಒದಗಿಸುವಲ್ಲಿ ಸಂಗಾತಿಗಳ ಆಯ್ಕೆಯು ಹೇಗೆ ಪ್ರಮುಖ ಪಾತ್ರ ವಹಿಸಬಲ್ಲದು ಎಂದು ಹಲವು ಸೂಚನೆಗಳನ್ನು ನೀಡಲಾಗಿದೆ.

ಕೃತಕ ಪ್ರಭೇದೀಕರಣ

ಜಾತೀಕರಣ 
ಡ್ರೊಸೊಫಿಲ ಪ್ರಭೇದೀಕರಣ ಪ್ರಯೋಗ

ಪಶುಸಂಗೋಪನೆಯಲ್ಲಿ ಪ್ರಾಣಿ ಸಾಕಾಣಿಕೆಯ ಮೂಲಕ ಹೊಸ ಪ್ರಭೇದಗಳನ್ನು ಸೃಷ್ಟಿಸಲಾಗಿದೆ. ಆದರೆ ಇಂತಹ ಪ್ರಭೇದದ ಆರಂಭ ಮತ್ತು ಇದಕ್ಕೆ ಬಳಸಿದ ಪದ್ಧತಿಗಳು ಸ್ಪಷ್ಟವಿಲ್ಲ. ಬಹಳಷ್ಟು ಸಲ ವನ್ಯ ಜೀವಿಗಳು ಸಾಕು ಪ್ರಾಣಿಗಳೊಂದಿಗೆ ಲೈಂಗಿಕವಾಗಿ ಬೆರೆಯುತ್ತವೆ. ಸಾಕು ದನ, ಕುರಿಗಳು ಅವುಗಳ ವನ್ಯ ರೂಪದವೊಂದಿಗೆ ಸಂಕರವಾಗಿ ಹುಟ್ಟಿದ ಸಂತತಿ ಸಂತಾನೋತ್ಪತ್ತಿಯನ್ನೂ ಮಾಡಬಲ್ಲವು. ಹೀಗಾಗಿ ಅವನ್ನು ಒಂದೇ ಪ್ರಭೇದ ಎಂದು ಕರೆಯಲು ಸಾಧ್ಯವಿದೆ.

ಹೊಸ ಪ್ರಭೇದದ ದಾಖಲಿತ ಸೃಷ್ಟಿಯನ್ನು ಪ್ರಯೋಗಾಲಯದಲ್ಲಿ ೧೯೮೦ರ ದಶಕದ ಎರಡನೆಯ ಭಾಗದಲ್ಲಿ ಮಾಡಲಾಯಿತು. ವಿಲಿಯಂ ಆರ್. ರೈಸ್ ಮತ್ತು ಜಾರ್ಜ್ ಡಬ್ಲು. ಸಾಲ್ಟ್ ಹಣ್ಣು ನೊಣಗಳನ್ನು (ಡ್ರೊಸೊಫಿಲ ಮೆಲನೊಗಾಸ್ಟರ್) ಸಾಕುವ ಪ್ರಯೋಗದ ಮೂಲಕ ೩೫ರಷ್ಟು ಕಡಿಮೆ ಪೀಳಿಗೆಗಳಲ್ಲಿ ಸಂತಾನೋತ್ಪತ್ತಿಯ ಪ್ರತ್ಯೇಕತೆಯನ್ನು ತರಬಹುದು ಎಂದು ತೋರಿಸಿಕೊಟ್ಟರು. ಡೈನ್ ಡೂಡ್ ಡ್ರೊಸೊಫಿಲ ಸೂಡೊಬ್‌ಸ್ಕುರ ಹಣ್ಣು ನೊಣಗಳ ಹಲವು ಪೀಳೆಗಗಳು ಹಿಟ್ಟು (ಸ್ಟಾರ್ಚ್) ಮತ್ತು ಮಾಲ್ಟೋಸ್ ಆಧಾರದ ಮಾಧ್ಯಮಗಳಲ್ಲಿ ಸಾಕುವ ಮೂಲಕ ಪ್ರಯೋಗಾಲಯದಲ್ಲಿ ಸಂತಾನೋತ್ಪತ್ತಿ ಪ್ರತ್ಯೇಕತೆ ವಿಕಾಸವಾಗುವುದನ್ನು ತೋರಿಸಿಕೊಟ್ಟ. ಡೂಡ್‌ರ ಪ್ರಯೋಗವು ಇತರರು ಬೇರೆ ಆಹಾರ ಮತ್ತು ಹಣ್ಣು ನೊಣಗಳೊಂದಿಗೆ ಪ್ರಯೋಗವನ್ನು ಪುನರಾವರ್ತಿಸುವುದು ಸುಲಭ ಮಾಡಿತ್ತು. ೨೦೦೫ರ ಸಂಶೋಧನೆಗಳು ಈ ಸಂತಾನೋತ್ಪತ್ತಿಯ ಪ್ರತ್ಯೇಕತೆಯ ಶೀಘ್ರ ವಿಕಾಸಕ್ಕೆ ವೊಲ್ಬಚಿಯ ಬ್ಯಾಕ್ಟೀರಿಯ ಸೋಂಕಿನ ಕುರುಹಾಗಿರಲು ಸಾಧ್ಯ ಎಂದು ಸೂಚಿಸುತ್ತವೆ.

ವಾಸ್ತವದಲ್ಲಿ ಲೈಂಗಿಕ ಜೀವಿಗಳು ಸಂಗಾತಿಗಳ ದೈಹಿಕ ಲಕ್ಷಣ ಮತ್ತು ವರ್ತನೆ ಭಿನ್ನವಾಗಿದ್ದ ಸಂದರ್ಭದಲ್ಲಿ ಆ ಜೀವಿಗಳೊಂದಿಗೆ ಲೈಂಗಿಕವಾಗಿ ಬೆರೆಯುವುದು ಕಡಿಮೆ ಎಂಬ ಅವಲೋಕನಕ್ಕೆ ಈ ಪ್ರಯೋಗಗಳು ಪುಷ್ಠಿ ನೀಡುತ್ತವೆ. ಹೀಗೆ ಲೈಂಗಿಕ ಜೀವಿಗಳು, ನೈಸರ್ಗಿಕ ಆಯ್ಕೆಯ ಮುಂದಿನ ದಿಕ್ಕನ್ನು ಅರಿಯದೆ, ಯೋಗ್ಯವಾದ ಸಂತತಿಯನ್ನು ಉತ್ಪಾದಿಸುವ ಹಾಗೆ ವರ್ತಿಸಲು ನಿರ್ಬಂಧಕ್ಕೆ ಒಳಗಾಗಿರುತ್ತವೆ ಮತ್ತು ಅಸಾಧಾರಣ ವರ್ತನೆ ಅಥವಾ ಗುಣಗಳ ಸಂಗಾತಿಗಳನ್ನು ಸೇರುವುದಕ್ಕೆ ಬಯಸುವುದಿಲ್ಲ. ಲೈಂಗಿಕ ಜೀವಿಗಳು ಹೀಗೆ ಸಂತಾನೋತ್ಪತ್ತಿ ಪ್ರತ್ಯೇಕವಾದ ಗುಂಪುಗಳಾಗುವ ಪ್ರವೃತ್ತಿ ಅನಿವಾರ್ಯವಾಗುತ್ತದೆ.

ಪ್ರಭೇದೀಕರಣ ದರ

ಭೂಗೋಳಿಕ ಕಾಲಮಾನದಲ್ಲಿ ಯಾವ ದರ ಅಥವಾ ವೇಗದಲ್ಲಿ ಪ್ರಭೇದೀಕರಣ ಉಂಟಾಗುತ್ತದೆ ಎಂಬುದರ ಬಗೆಗೆ ಚರ್ಚೆ ಇದೆ. ಕೆಲವು ವಿಕಸನೀಯ ಜೀವಶಾಸ್ತ್ರಜ್ಞರು ಪ್ರಭೇದೀಕರಣವು ಕಾಲಮಾನದಲ್ಲಿ ನಿರಂತರ ಮತ್ತು ನಿಧಾನ ಪ್ರಕ್ರಿಯೆ (ಇದನ್ನು “ಫೈಲೆಟಿಕ್ ಗ್ರಾಜುವಾಲಿಸಂ” ಎಂದು ಕರೆಯಲಾಗಿದೆ) ಎಂದು ವಾದಿಸುತ್ತಾರೆ. ಇದಕ್ಕೆ ಭಿನ್ನವಾಗಿ ಇತರ ಕೆಲವು ನೈಲ್ಸ್ ಎಲ್‌ಡ್ರೆಡ್ಜ್ ಮತ್ತು ಸ್ಟೀಫನ್ ಜೆ ಗೌಲ್ಡ್‌ನಂತಹ ಪ್ರಾಗ್ಜೀವಶಾಸ್ತ್ರಜ್ಞರು ಪ್ರಭೇದಗಳು ಬಹಳ ಕಾಲದವರೆಗೂ ಬದಲಾಗದೆ ಇರುತ್ತವೆಂತಲೂ ಮತ್ತು ಪ್ರಭೇದೀಕರಣವು ಸ್ವಲ್ಪ ಕಾಲಮಾನದಲ್ಲಿಯೇ ನಡೆಯುತ್ತದೆ ಎಂದು ವಾದಿಸುತ್ತಾರೆ (ಇದನ್ನು “ಪಂಕ್ಚುಯೇಟಡ್ ಈಕ್ವಲಿಬ್ರಿಯಂ” ಅಥವಾ ವಿರಾಮದ ಸಮತೋಲನ ಎಂದು ಕರೆಯಲಾಗಿದೆ).

ವಿರಾಮ ಸಮತೋಲನ

ಸಸ್ಯಗಳು ಮತ್ತು ಸಾಕು ಪ್ರಾಣಿಗಳು
ತಮ್ಮ ವನ್ಯ ಪೂರ್ವಿಕರಿಗಿಂತ
ತೀರಾ ಭಿನ್ನವಾಗಿರ ಬಲ್ಲವು
ಜಾತೀಕರಣ 
ಮೇಲೆ: ಟಿಯೊಸಿಂಟೆ. ಮಧ್ಯ:
ಮೆಕ್ಕೆಜೋಳ-ಟಿಯೊಸಿಂಟೆ
ಹೈಬ್ರಿಡ್. ಕೆಳಗೆ: ಮೆಕ್ಕೆಜೋಳ
ಜಾತೀಕರಣ  ಜಾತೀಕರಣ 
ವನ್ಯ ಕಾಲಿಫ್ಲವರ್ ಬೆಳೆದ ಕಾಲಿಪ್ಲವರ್
ಜಾತೀಕರಣ  ಜಾತೀಕರಣ 
ಪೂರ್ವಜ ಪ್ರುಸಿಯನ್ ಕಾರ್ಪ್ ಸಾಕಿದ ಗೋಲ್ಡ್‌ಫಿಶ್
ಜಾತೀಕರಣ  ಜಾತೀಕರಣ 
ಪೂರ್ವಜ ಕಾಡುಕುರಿ ಸಾಕಿದ ಕುರಿ

ಸಾಕು (ಮತ್ತು ಬೆಳೆದ) ಪ್ರಾಣಿಗಳು ಮತ್ತು ಸಸ್ಯಗಳ ಕೆಲವೇ ಸಾವಿರ ವರುಷಗಳಲ್ಲಿ ಹುಟ್ಟುಹಾಕಿರುವುದನ್ನು ನೋಡಿದರೆ ವಿಕಾಸದ ವೇಗವು ತೀವ್ರವಾಗಿರ ಬಲ್ಲದು ಎಂದು ಅರಿವಾಗುತ್ತದೆ. ಉದಾರಣೆಗೆ ಮೆಕ್ಕೆಜೋಳ (ಜಿಯ ಮೇಸ್) ಬೆಳೆಯುವುದನ್ನು ಮೆಕ್ಸಿಕೊದಲ್ಲಿ ೭೦೦೦ ದಿಂದ ೧೨೦೦೦ ವರುಷಗಳ ಹಿಂದೆ ಆರಂಭಿಸಲಾಯಿತು. ಹೀಗಾಗಿ ವಿಕಾಸವು ಸೈದ್ಧಾಂತಿಕ ಸಾಧ್ಯತೆಗಿಂತ ತೀರ ನಿಧಾನವಾಗಿ ಏಕೆ ಇರುತ್ತದೆ ಎಂಬ ಪ್ರಶ್ನೆಯು ಮುನ್ನೆಲೆಗೆ ಬರುತ್ತದೆ.

ವಿಕಾಸವು ಪ್ರಭೇದ ಅಥವಾ ಗುಂಪಿನ ಮೇಲೆ ಹೇರಲ್ಪಟ್ಟಿದೆ. ಅದು ಯೋಜಿತ ಅಥವಾ ಲೆಮಾರ್ಕ್ ಹೇಳಿದ ರೀತಿಯ ಸೆಣಸಾಟದ ಫಲವಲ್ಲ. ಈ ಪ್ರಕ್ರಿಯೆಗೆ ಆಧಾರವಾದ ವ್ಯತ್ಯಯನಗಳು ಬೇಕಾಬಿಟ್ಟಿ ಘಟನೆಗಳು, ಕಾರ್ಯನಿರ್ವಹಣೆ ಮತ್ತು ಆಕಾರವನ್ನು ಬದಲಾಯಿಸಿದ “ನಿಶ್ಶಬ್ದ ವ್ಯತ್ಯಯನ”ಗಳನ್ನು ಹೊರತು ಪಡಿಸಿ ಇತರ ವ್ಯತ್ಯಯನಗಳು ಜೀವಿಗೆ ಹಾನಿಕಾರಕ. ಇವುಗಳಲ್ಲಿ ಜೀವಿಗೆ ಉಪಯುಕ್ತವಾಗ ಬಲ್ಲ ವ್ಯತ್ಯಯನಗಳು ಇಲ್ಲವೆನ್ನುವಷ್ಟು ಕಡಿಮೆ. ಹೀಗಾಗಿ ಗುಂಪು ಅಥವಾ ಪ್ರಭೇದವು ವ್ಯಾಪಕವಾಗಿ ಅನುವಂಶಿಕ ಬದಲಾವಣೆಗಳನ್ನು ಸಂಚಿತಗೊಳಿಸಿಕೊಂಡು ಹೊಸ ಪರಿಸರಕ್ಕೆ ಹೊಂದಿಕೊಳ್ಳ ಬಹುದಾದರೂ ಇದು ಬಹಳಷ್ಟು ಜೀವಿಗಳಿಗೆ ಮಾರಕವಾಗಿದ್ದು ಒಂದು ಸಣ್ಣ ಖಚಿತವಾಗಿ ಊಹಿಸಲಾಗದ ಅಲ್ಪಸಂಖ್ಯಾತ ಗುಂಪು ಇಂತಹ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಗುಂಪಿನ ಹೊಂದಾಣಿಕೆಯನ್ನು (ಗುಂಪಿನ ಆಯ್ಕೆ) ಕೆಲವು ಜಾರ್ಜಿ ಸಿ. ವಿಲಿಯಮ್ಸ್, ಜಾನ್ ಮೆನಾರ್ಡ್ ಸ್ಮಿತ್ ಮತ್ತು ರಿಚರ್ಡ್ ಡಾಕಿನ್ಸ್‌ನಂತಹ ವಿಜ್ಞಾನಿಗಳು ಜೀವಿಗೆ ಅನುಕೂಲಕರವಲ್ಲ ಎಂಬ ಕಾರಣಕ್ಕೆ ತಿರಸ್ಕರಿಸಿದ್ದಾರೆ.

ಲೈಂಗಿಕ ಜೀವಿಗಳು ಹೊರ ರೂಪದ ಬದಲಾವಣೆಗೆ ಕಾರಣವಾಗುವ ಮ್ಯುಟಾಂಟ್ (ವ್ಯತ್ಯಯನ ಪಡೆದ ಜೀವಿ)ಗಳನ್ನು ತಿರಸ್ಕರಿಸುತ್ತವೆ ಎಂದಾದಲ್ಲಿ ಈ ಗುಣವು ತೀರ ವಿರಳವಾಗಿ ಮುಂದಿನ ಪೀಳಿಗೆಗೆ ಕೊಡಲ್ಪಡುತ್ತದೆ. ಹೀಗಾಗಿ ಇವು ಪಾಕೃತಿಕ ಆಯ್ಕೆಯಲ್ಲಿ ಪರೀಕ್ಷಿಸಲ್ಪಡುವುದಿಲ್ಲ. ಈ ಕಾರಣಗಳಿಂದಾಗಿ ವಿಕಾಸವು ಪರಿಣಾಮಕಾರಿಯಾಗಿ ನಿಧಾನವಾಗುತ್ತದೆ ಅಥವಾ ನಿಲ್ಲಿಸಲ್ಪಡುತ್ತದೆ. ವಿರಾಮ ಸಮತೋಲನದ ಪ್ರಕಾರ ಸಂಚಿತವಾಗುವ ವ್ಯತ್ಯಯನಗಳು ಕಾರ್ಯನಿರ್ವಹಣೆ ಮತ್ತು ರೂಪದ ಮೇಲೆ ಪರಿಣಾಮ ಬೀರದವು ಮಾತ್ರ (ನಿಶ್ಶಬ್ದ ಅಥವಾ “ತಟಸ್ಥ ವ್ಯತ್ಯಯನ” ಎಂದು ಕರೆಯಲಾದ ಇವನ್ನು ಜನಸಂಖ್ಯೆ ಮತ್ತು ಪ್ರಭೇದಗಳ ನಡುವಿನ ಸಂಬಂಧ ಮತ್ತು ಕಾಲಮಾನ ಅರಿಯಲು ಬಳಸಲಾಗುತ್ತಿದೆ). ಈ ವಾದವು ವಿಕಾಸವು ಮ್ಯುಟಾಂಟ್ ಸಂಗಾತಿಯನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳ ಬೇಕಾದ ಸ್ಥಿತಿಯಲ್ಲಿಯೇ ಆಗುತ್ತದೆ ಎಂದು ಸೂಚಿಸುತ್ತದೆ. ಇದು ಸಣ್ಣ, ಪ್ರತ್ಯೇಕಿಸಲ್ಪಟ್ಟ ಗುಂಪುಗಳಲ್ಲಿ ಆಗುವ ಸಾಧ್ಯತೆ ಇದೆ. ಸಣ್ಣ ದ್ವೀಪಗಳಲ್ಲಿ, ದೂರದ ಕಣಿವೆ, ಸರೋವರ, ನದಿ ವ್ಯವಸ್ಥೆ ಅಥವಾ ಗುಹೆಗಳಲ್ಲಿ ಅಥವಾ ಸಾಮೂಹಿಕ ಜೀವಿಗಳ ಅಳಿವಿನ ನಂತರ ಸಾಮಾನ್ಯವಾಗಿ ಇದು ಆಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಂಗಾತಿಯ ಆಯ್ಕೆಯ ಸ್ವತಂತ್ರ ತೀರ ಕಡಿಮೆ ಇರುತ್ತದೆ. ಅಷ್ಟೇ ಅಲ್ಲ ಜೊತೆಗೆ ಸೀಸೆಯ ಕಂಠದ ಪರಿಣಾಮ (ಪಾಪುಲೇಶನ್ ಬಾಟಲ್‌ನೆಕ್), ಸ್ಥಾಪಕನ ಪರಿಣಾಮ (ಫೌಂಡರ್ ಎಫೆಕ್ಟ್), ಜೆನೆಟಿಕ್ ಚಲನೆ, ಒಳಸಂಬಂಧದ (ಇನ್‌ಬ್ರೀಡಿಂಗ್) ಮುಂತಾದವುಗಳ ಪರಿಣಾಮದಿಂದಾಗಿ ಪ್ರತ್ಯೇಕಿತ ಜನಸಂಖ್ಯೆಯಲ್ಲಿ ಬೇಕಾಬಿಟ್ಟಿ ಅನುವಂಶಿಕ ಬದಲಾವಣೆಗಳು ಉಂಟಾಗುತ್ತವೆ. ಜೊತೆಗೆ ಇಂತಹುದೇ ಸ್ಥಿತಿಯಲ್ಲಿರುವ ಇನ್ನೊಂದು ಸಂಬಂಧಿತ ಪ್ರಭೇದದೊಂದಿಗಿನ ಸಂಕರವು ಹೆಚ್ಚುವರಿಯಾಗಿ ಅನುವಂಶಿಕತೆಯಲ್ಲಿ ವ್ಯತ್ಯಾಸವನ್ನು ಒಳತರುತ್ತದೆ. ಇಂತಹ ಸ್ಥಿತಿಯಲ್ಲಿನ ಪ್ರತ್ಯೇಕಿತ ಗುಂಪು ಅನುವಂಶಿಕ ವ್ಯತ್ಯಾಸವನ್ನು ಎದುರಿಸಿಯೂ ಉಳಿದುಕೊಂಡರೆ ಮತ್ತು ಇದುವರೆಗೂ ತುಂಬದ ಪರಿಸರದ ಸ್ಥಳಾವಕಾಶ ಕಂಡುಕೊಂಡರೆ ಅಥವಾ ನಿರ್ದಿಷ್ಟ ಸ್ಥಳಾವಕಾಶದಲ್ಲಿ ಇತರ ಸ್ಪರ್ಧಿಗಳಿಗಿಂತ ಹೆಚ್ಚಿನ ಅನುಕೂಲತೆ ಪಡೆದಿದ್ದರೆ ಹೊಸ ಪ್ರಭೇದ ಅಥವಾ ಉಪಪ್ರಭೇದವು ಹುಟ್ಟಿಕೊಳ್ಳುತ್ತದೆ. ಭೂಗೋಳಿಕ ಕಾಲಮಾನದ ದೃಷ್ಟಿಯಿಂದ ಇದು ಹಠಾತ್ತಾದ ಘಟನೆ. ನಂತರದಲ್ಲಿ ಮ್ಯುಟಾಂಟ್ ಜೀವಿಗಳನ್ನು ದೂರವಿಡುವುದು ಮತ್ತೆ ಕಾಣಿಸಿಕೊಳ್ಳುತ್ತದೆ ಹಾಗೂ ವಿಕಸನೀಯ ಸ್ಥಗಿತತೆ ಮತ್ತೆ ಕಾಣಿಸಿಕೊಳ್ಳುತ್ತದೆ.

ಈ ವಿರಾಮ ಸಮತೋಲನದ ವಿಕಾಸದ ನಿಲುವನ್ನು ಖಾತ್ರಿ ಪಡಿಸಲೆಂಬಂತೆ ವಿಕಾಸದ ಪ್ರಗತಿಯನ್ನು ತೋರುವ ಪಳೆಯುಳಿಕೆ ದಾಖಲೆಗಳಲ್ಲಿ ಪ್ರಭೇದಗಳು ಒಮ್ಮಿಂದೊಮ್ಮಲೆ ಕಾಣಿಸಿಕೊಳ್ಳುತ್ತವೆ ಮತ್ತು ಯಾವುದೇ ಬದಲಾವಣೆ ಇಲ್ಲದೆ ಕೆಲವು ದಶಲಕ್ಷ ವರುಷಗಳ ನಂತರ ಹಾಗೆಯೇ ಕೊನೆಯಲ್ಲಿ ಕಾಣೆಯಾಗುತ್ತವೆ. ಈ ಕೆಳಗಿನ ಗ್ರಾಪ್‌ನಲ್ಲಿ (ಮಾನವನ ವಿಕಾಸಕ್ಕೆ ಸಂಬಂಧಿಸಿದಂತೆ) ಪಳೆಯುಳಿಕೆಗಳನ್ನು ಅಡ್ಡ ಗೆರೆಗಳಾಗಿ ತೋರಿಸಲಾಗಿದೆ ಮತ್ತು ಅವುಗಳ ಉದ್ದ ಅವು ಎಷ್ಟು ಕಾಲ ಇದ್ದವು ಎಂದು ಸೂಚಿಸುತ್ತದೆ. ಪ್ರತೀ ಪ್ರಭೇದ ಇರುವಿಕೆಯಲ್ಲಿಯೂ ಹೊಸ ಪ್ರಭೇದವು ಬೇಕಾಬಿಟ್ಟಿ ಕಾಲಮಾನದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಹಲವು ನೂರು ಸಾವಿರ ವರುಷಗಳು ಬದಲಾಗದೆ ಇದ್ದು ನಂತರ ಕಾಣೆಯಾಗುತ್ತದೆ. ಒಮ್ಮೆಲೇ ಕಾಣಿಸಿಕೊಳ್ಳುವ ಪ್ರಭೇದಗಳ ನಡುವಿನ ಸಂಬಂಧ ಗುರುತಿಸುವುದು ಬಹುಶಹ ಸಾಧ್ಯವಾಗುವುದಿಲ್ಲ. ಇದನ್ನು ನಮ್ಮ ಹತ್ತಿರದ ಸಂಬಂಧಿ ಚಿಂಪಾಂಜಿಯು ಹೊಮಿನಿನ್‌ನಿಂದ ಕವಲೊಡದಾಗಿನಿಂದ ಆಧುನಿಕ ಮಾನವನ ವಿಕಾಸದವರೆಗೂ ಚಿತ್ರದಲ್ಲಿ ಗುರುತಿಸಲಾಗಿದೆ.

ಜಾತೀಕರಣ 
ಹೋಮಿನಿನ್ ಪ್ರಭೇದಗಳ ಹಂಚಿಕೆ

ಟಿಪ್ಪಣಿಗಳು

ಉಲ್ಲೇಖಗಳು

Tags:

ಜಾತೀಕರಣ ಪ್ರಭೇದೀಕರಣ ರೀತಿಗಳುಜಾತೀಕರಣ ಕೃತಕ ಪ್ರಭೇದೀಕರಣಜಾತೀಕರಣ ಪ್ರಭೇದೀಕರಣ ದರಜಾತೀಕರಣ ಟಿಪ್ಪಣಿಗಳುಜಾತೀಕರಣ ಉಲ್ಲೇಖಗಳುಜಾತೀಕರಣ ಗ್ರಂಥಸೂಚಿಜಾತೀಕರಣ

🔥 Trending searches on Wiki ಕನ್ನಡ:

ಜಗನ್ನಾಥ ದೇವಾಲಯಶಿರ್ಡಿ ಸಾಯಿ ಬಾಬಾಮುಟ್ಟುಜಾಗತೀಕರಣಕನಕದಾಸರುವೇದಬಾರ್ಲಿಸುಭಾಷ್ ಚಂದ್ರ ಬೋಸ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಭರತನಾಟ್ಯಸಾರಜನಕಕನ್ನಡವಸಾಹತುವೆಂಕಟೇಶ್ವರಅರಿಸ್ಟಾಟಲ್‌ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಬನವಾಸಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಸಹಕಾರಿ ಸಂಘಗಳುಭಾರತದ ಸ್ವಾತಂತ್ರ್ಯ ಚಳುವಳಿಗ್ರಾಮ ಪಂಚಾಯತಿಅಂಬರೀಶ್ರಾಮಕೃಷ್ಣ ಪರಮಹಂಸಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಚಿ.ಉದಯಶಂಕರ್ಎಸ್.ಎಲ್. ಭೈರಪ್ಪಮಹಾಶರಣೆ ಶ್ರೀ ದಾನಮ್ಮ ದೇವಿವೀಣೆಭಾರತೀಯ ಭೂಸೇನೆಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಪರಶುರಾಮಯುಗಾದಿಕಂಪ್ಯೂಟರ್ಶಿವರಾಮ ಕಾರಂತಆಹಾರ ಸರಪಳಿಕಿತ್ತೂರು ಚೆನ್ನಮ್ಮಅನುವಂಶಿಕ ಕ್ರಮಾವಳಿಹನುಮಂತಚನ್ನವೀರ ಕಣವಿಸಾವಯವ ಬೇಸಾಯಒಂದನೆಯ ಮಹಾಯುದ್ಧಹಿಂದೂ ಮಾಸಗಳುಮರಗೋಲ ಗುಮ್ಮಟಹಸ್ತ ಮೈಥುನಮಹಾಲಕ್ಷ್ಮಿ (ನಟಿ)ಕಾನೂನುಬಾಲಕೃಷ್ಣಜ್ವರಸತಿ ಸುಲೋಚನಆದಿಪುರಾಣಬಂಗಾರದ ಮನುಷ್ಯ (ಚಲನಚಿತ್ರ)ಪ್ಲೇಟೊಸಾವಿತ್ರಿಬಾಯಿ ಫುಲೆನಾಲಿಗೆಶ್ರೀಕೃಷ್ಣದೇವರಾಯಭಾಮಿನೀ ಷಟ್ಪದಿಶ್ರವಣಬೆಳಗೊಳಪುನೀತ್ ರಾಜ್‍ಕುಮಾರ್ಸಜ್ಜೆಕಲ್ಯಾಣ ಕರ್ನಾಟಕಮಂತ್ರಾಲಯಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಭಾರತದ ಸಂವಿಧಾನದ ೩೭೦ನೇ ವಿಧಿಸೆಸ್ (ಮೇಲ್ತೆರಿಗೆ)ದ್ರಾವಿಡ ಭಾಷೆಗಳುಚಂದ್ರಗುಪ್ತ ಮೌರ್ಯವಿಧಿರಾಜ್‌ಕುಮಾರ್ಭಾರತೀಯ ಅಂಚೆ ಸೇವೆಭಾರತೀಯ ಜನತಾ ಪಕ್ಷಅಜಂತಾಸ್ವಾಮಿ ವಿವೇಕಾನಂದಮೇಯರ್ ಮುತ್ತಣ್ಣಬೃಂದಾವನ (ಕನ್ನಡ ಧಾರಾವಾಹಿ)ಪ್ರತಿಭಾ ನಂದಕುಮಾರ್ರಕ್ತದೊತ್ತಡಚಿದಂಬರ ರಹಸ್ಯ🡆 More