ಜರ್ಮನಿ: ಮಧ್ಯ ಯುರೋಪ್‍ನ ಒಂದು ದೇಶ

ಜರ್ಮನಿ (ಜರ್ಮನ್: ದೊಯಿಚ್ಲಂತ್), ಅಧಿಕೃತವಾಗಿ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ, ಕೇಂದ್ರ-ಪಶ್ಚಿಮ ಯುರೋಪ್ ನಲ್ಲಿ ಫೆಡರಲ್ ಸಂಸದೀಯ ಗಣತಂತ್ರ ದೇಶವಾಗಿದೆ.ಇದು 16 ಘಟಕ ರಾಜ್ಯಗಳನ್ನು ಒಳಗೊಂಡಿದೆ.

3,57,021 ಚದರ ಕಿಲೋಮೀಟರ್ (1,37,847 ಚದರ ಮೈಲಿ) ನಷ್ಟು ಪ್ರದೇಶವನ್ನು ಒಳಗೊಂಡಿದೆ ಮತ್ತು ಹೆಚ್ಚಾಗಿ ಸಮಶೀತೋಷ್ಣ ಕಾಲೋಚಿತ ಹವಾಮಾನವನ್ನು ಹೊಂದಿದೆ. 82 ದಶಲಕ್ಷ ನಿವಾಸಿಗಳನ್ನು ಹೊಂದಿರುವ ಜರ್ಮನಿ ಯುರೋಪಿನ ಅತ್ಯಂತ ಜನನಿಬಿಡ ಸದಸ್ಯ ದೇಶವಾಗಿದೆ. ಅಮೇರಿಕಾದ ನಂತರ ಇದು ವಿಶ್ವದ ಎರಡನೇ ಅತ್ಯಂತ ಜನಪ್ರಿಯ ವಲಸೆ ತಾಣವಾಗಿದೆ.ಜರ್ಮನಿಯ ರಾಜಧಾನಿ ಮತ್ತು ದೊಡ್ಡ ಮಹಾನಗರ ಬರ್ಲಿನ್. ಇತರೆ ಪ್ರಮುಖ ನಗರಗಳು ಹ್ಯಾಂಬರ್ಗ್, ಮ್ಯೂನಿಚ್, ಕಲೋನ್, ಫ್ರಾಂಕ್ಫರ್ಟ್, ಸ್ಟಟ್ಗಾರ್ಟ್ ಮತ್ತು ಡಸೆಲ್ಡಾರ್ಫ್ ಸೇರಿವೆ.ಯುರೋಪ್ ಖಂಡದ ಕೇಂದ್ರದಲ್ಲಿರುವ ಈ ರಾಷ್ಟ್ರವು ವಿಶ್ವದ ಅಗ್ರ ಔದ್ಯೋಗಿಕ ದೇಶಗಳಲ್ಲಿ ಒಂದು.

ಬುಂಡೆಸ್‍ರಿಪಬ್ಲಿಕ್ ಡಾಯ್ಚ್ ಲಾಂಡ್
Federal Republic of Germany
Bundesrepublik Deutschland
Flag of ಜರ್ಮನಿ
Flag
ಲಾಂಛನ of ಜರ್ಮನಿ
ಲಾಂಛನ
Motto: Einigkeit und Recht und Freiheit
(ಜರ್ಮನ್ ಭಾಷೆಯಲ್ಲಿ: "ಐಕ್ಯತೆ ಮತ್ತು ನ್ಯಾಯ ಮತ್ತು ಸ್ವಾತಂತ್ರ್ಯ”)
Anthem: Deutschlandlied (Song of Germany / ಜರ್ಮನಿಯ ಹಾಡು) (3rd stanza)
Location of ಜರ್ಮನಿ
Capital
and largest city
ಬರ್ಲಿನ್
Official languagesಜರ್ಮನ್ 1
GovernmentFederal Republic
• ರಾಷ್ಟ್ರಪತಿ
Peter-Walter Steinmeier
• Chancellor
Angela Merkel (CDU)
ನಿರ್ಮಾಣ
• Holy Roman Empire
843 (Treaty of Verdun)
January 18 1871
• Federal Republic
May 23 1949
ಅಕ್ಟೋಬರ್ ೩ ೧೯೯೦
• Water (%)
2.416
Population
• 2014 estimate
80,716,000 (16th)
GDP (PPP)2005 estimate
• Total
$2.522 trillion (5th)
• Per capita
$30,579 (17th)
HDI (2003)0.930
very high · 20th
Currencyಯುರೋ (€) 2 (EUR)
Time zoneUTC+1 (CET)
• Summer (DST)
UTC+2 (CEST)
Calling code49
Internet TLD.de
1 Danish, Low German, Sorbian, Romany and Frisian are officially recognised and protected as minority languages by the ECRML. 2 Prior to 1999: Deutsche Mark

ಪದ ವ್ಯುತ್ಪತ್ತಿ

  • ಜರ್ಮನಿ ಎಂಬ ಇಂಗ್ಲಿಷ್ ಪದವು ಲ್ಯಾಟಿನ್ ಜರ್ಮೇನಿಯಾದಿಂದ ಬಂದಿದೆ, ಜೂಲಿಯಸ್ ಸೀಸರ್ ಇದನ್ನು ರೈನ್‌ನ ಪೂರ್ವದ ಜನರಿಗೆ ಅಳವಡಿಸಿಕೊಂಡ ನಂತರ ಬಳಕೆಗೆ ಬಂದಿತು.

ಸಂಕ್ಷಿಪ್ತ ಇತಿಹಾಸ

ಪ್ರಾಚೀನ

  • ಪ್ರಾಚೀನ ಮಾನವರು ಜರ್ಮನಿಯಲ್ಲಿ ಕನಿಷ್ಠ 600,000 ವರ್ಷಗಳ ಹಿಂದೆ ಇದ್ದರು. [12] ಮೊದಲ ಆಧುನಿಕವಲ್ಲದ ಮಾನವ ಪಳೆಯುಳಿಕೆ (ನಿಯಾಂಡರ್ತಲ್) ಅನ್ನು ನಿಯಾಂಡರ್ ಕಣಿವೆಯಲ್ಲಿ ಕಂಡುಹಿಡಿಯಲಾಯಿತು. [13] ಆಧುನಿಕ ಮಾನವರ ದಿನಾಂಕದ ಪುರಾವೆಗಳು ಸ್ವಾಬಿಯನ್ ಜುರಾದಲ್ಲಿ ಕಂಡುಬಂದಿವೆ, ಇದರಲ್ಲಿ 42,000 ವರ್ಷಗಳಷ್ಟು ಹಳೆಯದಾದ ಕೊಳಲುಗಳು ಸೇರಿವೆ, ಇದು ಇದುವರೆಗೆ ಕಂಡುಬರುವ ಅತ್ಯಂತ ಹಳೆಯ ಸಂಗೀತ ವಾದ್ಯಗಳು, [14] 40,000 ವರ್ಷಗಳಷ್ಟು ಹಳೆಯದಾದ ಲಯನ್ ಮ್ಯಾನ್, [15] ಮತ್ತು 35,000 ವರ್ಷಗಳು ಹೋಲ್ಡ್ ಫೆಲ್ಸ್ನ -ಲ್ಡ್ ವೀನಸ್. [16] ಯುರೋಪಿಯನ್ ಕಂಚಿನ ಯುಗದಲ್ಲಿ ರಚಿಸಲಾದ ನೆಬ್ರಾ ಸ್ಕೈ ಡಿಸ್ಕ್ ಅನ್ನು ಜರ್ಮನ್ ಸೈಟ್‌ಗೆ ಕಾರಣವೆಂದು ಹೇಳಲಾಗಿದೆ. ಷುಲ್ಜ್, ಹ್ಯಾಗನ್ (1998).

ಒಂಭತ್ತನೇ ಶತಮಾನದಿಂದ

  • ಕ್ರಿ.ಶ. 486 ಫ್ರಾಂಕಿಷ್ ರಾಜ ಕ್ಲೋವಿಸ್ ರೋಮನ್ ಪ್ರಾಂತ್ಯದ ಗೌಲ್ ಅನ್ನು ಆಕ್ರಮಿಸಿಕೊಂಡನು. ಕ್ಲೋವಿಸ್ ರೋಮನ್ ಜೀವನದ ವೈಶಿಷ್ಟ್ಯಗಳನ್ನು ಪಶ್ಚಿಮ ಜರ್ಮನಿಗೆ ಪರಿಚಯಿಸಿದ.
  • ಕ್ರಿ.ಶ. 9 ರಲ್ಲಿ ಜರ್ಮನಿಕ್ ಯೋಧರು ಟ್ಯೂಟೋಬರ್ಗ್ ಅರಣ್ಯ ಯುದ್ಧದಲ್ಲಿ ರೋಮನ್ ಪಡೆಗಳನ್ನು ನಿರ್ಣಾಯಕವಾಗಿ ಸೋಲಿಸಿದರು. ಕ್ರಿ.ಶ. 843 ವರ್ಡೂನ್ ಒಪ್ಪಂದವು ಚಾರ್ಲ್‌ಮ್ಯಾಗ್ನೆ ಸಾಮ್ರಾಜ್ಯವನ್ನು ಮೂರು ರಾಜ್ಯಗಳಾಗಿ ವಿಂಗಡಿಸಿತು. ಜರ್ಮನ್ ಸಾಮ್ರಾಜ್ಯವು ಶೀಘ್ರದಲ್ಲೇ ಐದು ಡಚೀಸ್ಗಳಾಗಿ ವಿಂಗಡಿಸಲ್ಪಟ್ಟಿತು. ಕ್ರಿ.ಶ. 962 ಒಟ್ಟೊ I ಆಚೆನ್ನಲ್ಲಿ ಪವಿತ್ರ ರೋಮನ್ ಚಕ್ರವರ್ತಿಯಾಗಿ ಪಟ್ಟಾಭಿಷೇಕ ಮಾಡಲಾಯಿತು. 1075 ಹೆನ್ರಿ IV ಮತ್ತು ಪೋಪ್ ಗ್ರೆಗೊರಿ VII ರ ನಡುವಿನ ವಿವಾದವು ಚರ್ಚ್ ಅಧಿಕಾರವನ್ನು ಸ್ಪರ್ಧಿಸುವ ಅಂತರ್ಯುದ್ಧಗಳ ಸರಣಿಯನ್ನು ಪ್ರಾರಂಭಿಸಿತು. ಕ್ರಿ.ಶ.1300 ರ ದಶಕವು ಉತ್ತರ ಜರ್ಮನಿಯಲ್ಲಿ ಹ್ಯಾನ್ಸಿಯಾಟಿಕ್ ಲೀಗ್ ಸರ್ವೋಚ್ಚ ವಾಣಿಜ್ಯ ಮತ್ತು ಮಿಲಿಟರಿ ಶಕ್ತಿಯಾಗಿತ್ತು.
  • ಬ್ಲ್ಯಾಕ್ ಡೆತ್, ಪಿಡುಗು ಮತ್ತು ಇದು ಪ್ಲೇಗ್ ಎಂದೂ ಕರೆಯಲ್ಪಡುತ್ತದೆ, ಮಾನವ ಇತಿಹಾಸದಲ್ಲಿ ದಾಖಲಾದ ಅತ್ಯಂತ ಮಾರಕ ಸಾಂಕ್ರಾಮಿಕ ರೋಗವಾಗಿದೆ, ಇದರ ಪರಿಣಾಮವಾಗಿ ಯುರೇಷಿಯಾ ಮತ್ತು ಉತ್ತರ ಆಫ್ರಿಕಾದಲ್ಲಿ 75-200 ದಶಲಕ್ಷ ಜನರು(ಸುಮಾರು ೨೦ ಕೋಟಿ ಜನರು) ಸಾವನ್ನಪ್ಪಿದರು, ಯುರೋಪಿನಲ್ಲಿ 1347 ರಿಂದ 1351 ರವರೆಗೆ ಬಾಧಿಸಿತು .
  • 1517ರಲ್ಲಿ ಮಾರ್ಟಿನ್ ಲೂಥರ್ ಪ್ರೊಟೆಸ್ಟಂಟ್ ಸುಧಾರಣೆಯನ್ನು ಪ್ರಾರಂಭಿಸಿದರು. ಕ್ರಿ.ಶ.1555 ಆಗ್ಸ್‌ಬರ್ಗ್‌ನ ಶಾಂತಿ ರಾಜಕುಮಾರರು ತಮ್ಮ ಭೂಮಿಗೆ ಲುಥೆರನಿಸಂ ಅಥವಾ ಕ್ಯಾಥೊಲಿಕ್ ಧರ್ಮವನ್ನು ಆಯ್ಕೆ ಮಾಡುವ ಹಕ್ಕನ್ನು ಗುರುತಿಸಿತು. 1648 ವೆಸ್ಟ್ಫಾಲಿಯಾದ ಶಾಂತಿ ಮೂವತ್ತು ವರ್ಷಗಳ ಯುದ್ಧವನ್ನು ಕೊನೆಗೊಳಿಸಿತು. ಕ್ರಿ.ಶ.1740 ಫ್ರೆಡೆರಿಕ್ ದಿ ಗ್ರೇಟ್ ಪ್ರಶ್ಯದ ರಾಜನಾದನು ಮತ್ತು ಪ್ರಶ್ಯವನ್ನು ಒಂದು ದೊಡ್ಡ ಶಕ್ತಿಯಾಗಿ ನಿರ್ಮಿಸಲು ಪ್ರಾರಂಭಿಸಿದನು. 1806 ಕಾನ್ಫಿಡರೇಶನ್ ಆಫ್ ದಿ ರೈನ್ ಸ್ಥಾಪನೆಯೊಂದಿಗೆ ಪವಿತ್ರ ರೋಮನ್ ಸಾಮ್ರಾಜ್ಯ ಕೊನೆಗೊಂಡಿತು. ಕ್ರಿ.ಶ. 1815 ವಿಯೆನ್ನಾದ ಕಾಂಗ್ರೆಸ್‌ನಲ್ಲಿ ಜರ್ಮನ್ ಒಕ್ಕೂಟವನ್ನು ರಚಿಸಲಾಯಿತು. ಕ್ರಿ.ಶ.1848 ರಲ್ಲಿ ಜರ್ಮನಿಯಾದ್ಯಂತ ಕ್ರಾಂತಿಗಳು ವ್ಯಾಪಿಸಿದವು. ಜರ್ಮನಿಯ ಮೊದಲ ರಾಷ್ಟ್ರೀಯ ಅಸೆಂಬ್ಲಿ ಫ್ರಾಂಕ್‌ಫರ್ಟ್‌ನಲ್ಲಿ ಹೆಚ್ಚು ಏಕೀಕೃತ ದೇಶವನ್ನು ರಚಿಸುವ ಭರವಸೆಯಲ್ಲಿ ಸಭೆ ಸೇರಿತು, ಆದರೆ ಕ್ರಾಂತಿಗಳನ್ನು ಹತ್ತಿಕ್ಕಲಾಯಿತು. ಕ್ರಿ.ಶ.1871 ರಲ್ಲಿ ಪ್ರಶ್ಯನ್ ಪ್ರಧಾನಿ ಒಟ್ಟೊ ವಾನ್ ಬಿಸ್ಮಾರ್ಕ್ ಜರ್ಮನ್ ಸಾಮ್ರಾಜ್ಯವನ್ನು ಸ್ಥಾಪಿಸಿದಂತೆ ಯುನೈಟೆಡ್ ಜರ್ಮನಿಯ ಕನಸನ್ನು ನನಸಾಗಿಸಿದರು. ಕ್ರಿ.ಶ.1914-1918 ಮೊದಲನೆಯ ಮಹಾಯುದ್ಧದಲ್ಲಿ ಜರ್ಮನಿ ಕೇಂದ್ರ ಶಕ್ತಿಗಳ ಪ್ರಮುಖ ಹೋರಾಟಗಾರ. 1.5 ದಶಲಕ್ಷಕ್ಕೂ ಹೆಚ್ಚು ಜರ್ಮನ್ ಸೈನಿಕರು ಕೊಲ್ಲಲ್ಪಟ್ಟರು.

ಮಾರ್ಟಿನ್ ಲೂಥರ್

ಜರ್ಮನಿ: ಪದ ವ್ಯುತ್ಪತ್ತಿ, ಸಂಕ್ಷಿಪ್ತ ಇತಿಹಾಸ, ಮಾರ್ಟಿನ್ ಲೂಥರ್ 
ಮಾರ್ಟಿನ್ ಲೂಥರ್ (1483–1546), ಪ್ರೊಟೆಸ್ಟಂಟ್ ಸುಧಾರಕ
  • ಮಾರ್ಟಿನ್ ಲೂಥರ್, (10 ನವೆಂಬರ್ 1483– 18 ಫೆಬ್ರವರಿ 1546) 10 ನವೆಂಬರ್ 1483 ರಂದು ಐಸ್ಲೆಬೆನ್‌ನಲ್ಲಿ ಜನಿಸಿದರು. ಅವರು ಜರ್ಮನ್ ಧರ್ಮಶಾಸ್ತ್ರದ ಪ್ರಾಧ್ಯಾಪಕರು, ಸಂಯೋಜಕ, ಪಾದ್ರಿ, ಅಗಸ್ಟಿನಿಯನ್ ಸನ್ಯಾಸಿ ಮತ್ತು ಪ್ರೊಟೆಸ್ಟಂಟ್ ಸುಧಾರಣೆಯಲ್ಲಿ ಮೂಲ ವ್ಯಕ್ತಿ. 1507 ರಲ್ಲಿ ಲೂಥರ್ ಅವರನ್ನು ಪೌರೋಹಿತ್ಯಕ್ಕೆ ನೇಮಿಸಲಾಯಿತು. ರೋಮನ್ ಕ್ಯಾಥೊಲಿಕ್ ಚರ್ಚಿನ ಹಲವಾರು ಬೋಧನೆಗಳು ಮತ್ತು ಆಚರಣೆಗಳನ್ನು ತಿರಸ್ಕರಿಸಲು ಅವರು ಬಂದರು; ನಿರ್ದಿಷ್ಟವಾಗಿ ಹೇಳುವುದಾದರೆ, ಅವರು ಭೋಗದ ಬಗ್ಗೆ ಚರ್ಚಿನ ಅಭಿಪ್ರಾಯವನ್ನು ವಿರೋಧಿಸಿದರು. ಅವರ ಬರಹಗಳು ಪ್ರೊಟೆಸ್ಟಂಟ್ ಸುಧಾರಣೆಗೆ ಪ್ರೇರಣೆ ನೀಡಿತು.
  • ಪಾದ್ರಿಗಳು 'ಭೋಗಪತ್ರಗಳನ್ನು (Indulgences')(ದೇವನ ಕ್ಷಮಾಪತ್ರಗಳು) ಮಾರುವ ಬಗ್ಗೆ ಲೂಥರ್ ಹೆಚ್ಚು ಕೋಪಗೊಂಡರು - ಪಾಪದ ಶಿಕ್ಷೆಯಿಂದ ವಿಮೋಚನೆ ನೀಡುವ ಭರವಸೆ ನೀಡಿದ, ಇನ್ನೂ ಜೀವಂತವಾಗಿರುವ ಯಾರಿಗಾದರೂ ಅಥವಾ ಮರಣ ಹೊಂದಿದ ಮತ್ತು ಶುದ್ಧೀಕರಣದಲ್ಲಿದ್ದಾರೆ ಎಂದು ನಂಬಲಾದವರಿಗೆ ಪಾದ್ರಿಗಳು(ಉನ್ನತ ಗುರು ಪೋಪ್‍ರು) ಪಾಪದ ಶಿಕ್ಷೆಯಿಂದ ವಿಮೋಚನೆ ನೀಡುವ ಭರವಸೆ ನೀಡುವುದನ್ನು ವಿರೋಧಿಸಿದರು. 31 ಅಕ್ಟೋಬರ್ 1517 ರಂದು, ಚರ್ಚಿನ ತಪ್ಪುನೆಡೆ ಬಗ್ಗೆ ಅವರು ತಮ್ಮ '95 ಪ್ರಬಂಧಗಳನ್ನು 'ಪ್ರಕಟಿಸಿದರು, ಪಾಪಲ್ ನಿಂದನೆ ಮತ್ತು ಭೋಗಗಳ ಮಾರಾಟದ ಮೇಲೆ ದಾಳಿ ಮಾಡಿದರು.
  • 1534 ರಲ್ಲಿ, ಲೂಥರ್ ಬೈಬಲ್‌ನ ಸಂಪೂರ್ಣ ಅನುವಾದವನ್ನು ಜರ್ಮನ್ ಭಾಷೆಗೆ ಪ್ರಕಟಿಸಿದರು, ಜನರು ಅದನ್ನು ತಮ್ಮ ಭಾಷೆಯಲ್ಲಿ ಓದಲು ಸಾಧ್ಯವಾಗುತ್ತದೆ ಎಂಬ ಅವರ ನಂಬಿಕೆಯನ್ನು ಒತ್ತಿಹೇಳಿದರು. ಅನುವಾದವು ಜರ್ಮನ್ ಭಾಷೆಯ ಹರಡುವಿಕೆ ಮತ್ತು ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿತು.
  • ಲೂಥರ್‌ನ ಪ್ರಭಾವವು ಉತ್ತರ ಮತ್ತು ಪೂರ್ವ ಯುರೋಪಿನಾದ್ಯಂತ ಹರಡಿತು ಮತ್ತು ಅವನ ಖ್ಯಾತಿಯು ವಿಟ್ಟನ್‌ಬರ್ಗ್‌ನನ್ನು ಬೌದ್ಧಿಕ ಕೇಂದ್ರವನ್ನಾಗಿ ಮಾಡಿತು. ತಮ್ಮ ಅಂತಿಮ ವರ್ಷಗಳಲ್ಲಿ ಅವರು ಸುಧಾರಣಾ ಚಳವಳಿಯ ಆಮೂಲಾಗ್ರ ವಿಭಾಗವಾದ ಯಹೂದಿಗಳು, ಪೋಪಸಿ ಮತ್ತು ಅನಾಬಾಪ್ಟಿಸ್ಟ್‌ಗಳ ವಿರುದ್ಧ ವಿವಾದಗಳನ್ನು ಕುರಿತು ಬರೆದರು. ಹೀಗೆ 1517 ರಲ್ಲಿ ಜರ್ಮನಿಯಲ್ಲಿ ಪ್ರೊಟೆಸ್ಟಾಂಟಿಸಂ (ಪ್ರೊಟೆಸ್ಂಟ್ ಕ್ರಿಸ್ಟಿಯಾನಿಟಿ) ಪ್ರಾರಂಭವಾಯಿತು, ರೋಮನ್ ಕ್ಯಾಥೊಲಿಕ್ ಚರ್ಚ್ 'ಭೋಗಪತ್ರಗಳನ್ನು (Indulgences') ಮಾರಾಟದಲ್ಲಿನ ದುರುಪಯೋಗದ ವಿರುದ್ಧದ ಪ್ರತಿಕ್ರಿಯೆಯಾಗಿ ಪ್ರೊಟೆಸ್ಟಾಂಟಿಸಂ ಪ್ರಾರಂಭವಾಯಿತು
  • ಪ್ರೊಟೆಸ್ಟಾಂಟಿಸಮ್ ಅಥವಾ ಪ್ರತಿಭಟನಾಕಾರ ಕ್ರಿಶ್ಚಿಯನ್ ಧರ್ಮವು ಕ್ರಿಶ್ಚಿಯನ್ ಧರ್ಮದ ಎರಡನೇ ಅತಿದೊಡ್ಡ ವಿಭಾಗವಾಗಿದೆ, ಇದು ವಿಶ್ವದಾದ್ಯಂತ ಒಟ್ಟು 800 ಮಿಲಿಯನ್‌ನಿಂದ 1 ಬಿಲಿಯನ್ (10 ಕೋಟಿ) ಅನುಯಾಯಿಗಳನ್ನು ಹೊಂದಿದೆ ಅಥವಾ ಎಲ್ಲಾ ಕ್ರೈಸ್ತರಲ್ಲಿ ಸುಮಾರು 37% (೩೩.೩%?)ನಷ್ಟು ಇದೆ.

ಒಂದನೆಯ ಮಹಾಯುದ್ಧ(1914-18):ಯುದ್ಧಮುಕ್ತಾಯದ ಕೌಲು- ಪ್ಯಾರಿಸ್ ಸಮ್ಮೇಳನ

ಜರ್ಮನಿ: ಪದ ವ್ಯುತ್ಪತ್ತಿ, ಸಂಕ್ಷಿಪ್ತ ಇತಿಹಾಸ, ಮಾರ್ಟಿನ್ ಲೂಥರ್ 
ಜರ್ಮನ್ ಒಕ್ಕೂಟ (1815)
  • 28 ಜೂನ್ 1914 ರಂದು ಆಸ್ಟ್ರಿಯಾದ ದೊರೆ ರಾಜಕುಮಾರನ ಹತ್ಯೆಯು ಆಸ್ಟ್ರಿಯನ್ ಸಾಮ್ರಾಜ್ಯಕ್ಕೆ ಸೆರ್ಬಿಯಾದ ಮೇಲೆ ದಾಳಿ ಮಾಡಲು ಮತ್ತು ಮೊದಲನೆಯ ಮಹಾಯುದ್ಧವನ್ನು ಪ್ರಚೋದಿಸುವ ನೆಪವನ್ನು ಒದಗಿಸಿತು. ನಾಲ್ಕು ವರ್ಷಗಳ ಯುದ್ಧದ ನಂತರ, ಸುಮಾರು ಎರಡು ಮಿಲಿಯನ್ ಜರ್ಮನ್ ಸೈನಿಕರು ಕೊಲ್ಲಲ್ಪಟ್ಟರು, ಸಾಮಾನ್ಯ ಕದನವಿರಾಮದ ಒಪ್ಪಂದದಿಂದ ಹೋರಾಟ ಕೊನೆಗೊಂಡಿತು. ಜರ್ಮನ್ ಕ್ರಾಂತಿಯಲ್ಲಿ (ನವೆಂಬರ್ 1918), ಚಕ್ರವರ್ತಿ ವಿಲ್ಹೆಲ್ಮ್ II ಮತ್ತು ಆಳುವ ರಾಜಕುಮಾರರು ತಮ್ಮ ಸ್ಥಾನಗಳನ್ನು ತ್ಯಜಿಸಿದರು ಮತ್ತು ಜರ್ಮನಿಯನ್ನು ಫೆಡರಲ್ ಗಣರಾಜ್ಯವೆಂದು ಘೋಷಿಸಲಾಯಿತು. ಜರ್ಮನಿಯ ಹೊಸ ನಾಯಕತ್ವವು ಮಿತ್ರರಾಷ್ಟ್ರಗಳ ಸೋಲನ್ನು ಒಪ್ಪಿಕೊಂಡು 1919 ರಲ್ಲಿ ವರ್ಸೈಲ್ಸ್ ಒಪ್ಪಂದಕ್ಕೆ ಸಹಿ ಹಾಕಿತು. ಜರ್ಮನ್ನರು ಈ ಒಪ್ಪಂದವನ್ನು ಅವಮಾನಕರವೆಂದು ಗ್ರಹಿಸಿದರು, ಇದು ಅಡಾಲ್ಫ್ ಹಿಟ್ಲರನ ಉದಯಕ್ಕೆ ಪ್ರಭಾವಶಾಲಿ ಕಾರಣ ಎಂದು ಇತಿಹಾಸಕಾರರು ಎಂದು ಭಾವಿಸಿದರು. ಜರ್ಮನಿ ತನ್ನ ಯುರೋಪಿಯನ್ ಭೂಪ್ರದೇಶದ ಸುಮಾರು 13% ನಷ್ಟು ಭಾಗವನ್ನು ಕಳೆದುಕೊಂಡಿತು ಮತ್ತು ಆಫ್ರಿಕಾ ಮತ್ತು ದಕ್ಷಿಣ ಸಮುದ್ರದಲ್ಲಿನ ತನ್ನ ಎಲ್ಲಾ ವಸಾಹತುಶಾಹಿ ಆಸ್ತಿಯನ್ನು ಬಿಟ್ಟುಕೊಟ್ಟಿತು.
  • ಪ್ಯಾರಿಸ್ ಸಮ್ಮೇಳನ - ಒಂದನೆಯ ಮಹಾಯುದ್ಧವನ್ನು (1914-18) ಕೊನೆಗೊಳಿಸುವ ಕೌಲುಗಳ ರಚನೆಗಾಗಿ 1919-20 ರಲ್ಲಿ ಪ್ಯಾರಿಸಿನಲ್ಲಿ ಸಮಾವೇಶಗೊಂಡಿದ್ದ ಸಮ್ಮೇಳನ. ಜರ್ಮನಿ ಮತ್ತು ಅದರೊಂದಿಗೆ ಕೂಡಿದ್ದ ರಾಷ್ಟ್ರಗಳ ವಿರುದ್ಧ ಹೋರಾಟ ನಡೆಸಿದ್ದು ಇಲ್ಲವೆ ಆ ಕೇಂದ್ರಶಕ್ತಿಗಳೊಂದಿಗೆ ರಾಯಭಾರ ಸಂಬಂಧವನ್ನು ಕಡಿದುಕೊಂಡಿದ್ದ ಮತ್ತು ಯಾವ ಪಕ್ಷಕ್ಕೂ ಸೇರದೆ ತಟಸ್ಥವಾಗಿದ್ದ ರಾಷ್ಟ್ರಗಳ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಸೇರಿದ್ದರು.

ಹಿನ್ನೆಲೆ

  • 1918 ರ ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಜರ್ಮನಿ ಹಾಗೂ ಅದರೊಂದಿಗೆ ಸೇರಿದ್ದ ಬಲ್ಗೇರಿಯ, ತುರ್ಕಿ, ಆಸ್ಟ್ರಿಯ-ಹಂಗೇರಿ ದೇಶಗಳು ಯುದ್ಧದಲ್ಲಿ ಸೋಲುವ ಸ್ಥಿತಿ ತಲುಪಿದ್ದವು. ತನ್ನ ಎಲ್ಲ ಮಿತ್ರ ರಾಷ್ಟ್ರಗಳೂ ಕುಸಿದುಬಿದ್ದಾಗ ತಾನೂ ಬೇಷರತ್ತಾಗಿ ಶರಣಾಗತವಾಗುವುದು ಜರ್ಮನಿಗೆ ಅನಿವಾರ್ಯವಾಗಿತ್ತು. ಕೇಂದ್ರಶಕ್ತಿಗಳ ವಿರುದ್ಧ ಯುದ್ಧನಿರತವಾಗಿದ್ಧ ಮಿತ್ರರಾಷ್ಟ್ರಗಳೊಂದಿಗೆ ಶಾಂತಿ ಮಾಡಿಕೊಳ್ಳಲು ಜರ್ಮನಿ ಹಾತೊರೆಯುತ್ತಿತ್ತು. ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ವುಡ್‍ರೋ ವಿಲ್ಸನರು ಶಾಂತಿಸ್ಥಾಪನೆಗೆ ಅಗತ್ಯವಾದ ಹದಿನಾಲ್ಕು ಅಂಶಗಳನ್ನು ಸೂಚಿಸಿದರು. ಜರ್ಮನಿ ಶಾಂತಿ ಭಿಕ್ಷೆಯನ್ನು ಯಾಚಿಸಿ 1918 ರ ಅಕ್ಟೋಬರ್ 4 ರಂದು ಸ್ವಿಸ್ ಸರ್ಕಾರದ ಮೂಲಕ ವಿಲ್ಸನರಿಗೆ ಪತ್ರ ಕಳಿಸಿತು.
  • ವಿಧಿಸಿದ ಎಲ್ಲ ಹದಿನಾಲ್ಕು ಅಂಶಗಳನ್ನೂ ಜರ್ಮನಿ ಒಪ್ಪಿಕೊಳ್ಳಬೇಕು. ಮಿತ್ರ ಸೇನಾಧಿಕಾರಿಗಳ ನೇತೃತ್ವದಲ್ಲಿ ಮಿತ್ರರಾಷ್ಟ್ರಗಳ ಪ್ರದೇಶಗಳ ಆಕ್ರಮಣವನ್ನು ಜರ್ಮನಿ ತೆರವು ಮಾಡಬೇಕು, ನ್ಯಾಯ ಬಾಹಿರವಾದ ಹಾಗೂ ಅಮಾನುಷವಾದ ಎಲ್ಲ ಕ್ರಮಗಳನ್ನೂ ಜರ್ಮನಿ ಕೊನೆಗೊಳಿಸಿ ಜಲಾಂತರ್ಗಾಮಿ ಯುದ್ಧವನ್ನು ತೊರೆಯಬೇಕು. ಯುದ್ಧಕ್ಕೆ ಕಾರಣವಾದ ಬೇಜವಾಬ್ದಾರಿ ಸರ್ಕಾರವನ್ನು ಜರ್ಮನಿ ವಿಸರ್ಜಿಸಬೇಕು ಎಂಬ ಷರತ್ತುಗಳಿಗೆ ಜರ್ಮನಿ ಒಪ್ಪುವುದಾದರೆ ಮಾತ್ರ ಶಾಂತಿ ಸಂಧಾನಕ್ಕೆ ಒಡಂಬಡಬಹುದೆಂದು ವಿಲ್ಸನರು ಜರ್ಮನ್ ಪತ್ರಕ್ಕೆ ಉತ್ತರ ಕಳಿಸಿದರು. ಈ ಷರತ್ತುಗಳಿಗೆ ಸಮ್ಮತಿಸದೆ ಜರ್ಮನಿಯ ಜನರಲ್ ಎರಿಕ್ ಲೂಡೆಂಡಾರ್ಫ್ ರಾಜೀನಾಮೆ ನೀಡಿದ. ಅದರೆ ಅಲ್ಲಿಯ ಅ ಸೈನಿಕ ಸರ್ಕಾರ ಈ ಷರತ್ತುಗಳಿಗೆ ಒಪ್ಪಿ ಅಕ್ಟೋಬರ್ 20 ರಂದು ಪತ್ರ ಕಳಸಿತು. ಅದಾಗ್ಯೂ ಜರ್ಮನಿ ನ್ಯಾಯಬಾಹಿರವಾದ ಹಾಗೂ ಅಮಾನುಷವಾದ ಕೃತ್ಯಗಳನ್ನೆಸಗುತ್ತಿದೆಯೆಂಬ ಆಪಾದನೆಯನ್ನು ಅದು ನಿರಾಕರಿಸಿತು.
  • ವಿಲ್ಸನರು ಈ ವಿಷಯವನ್ನು ಮಿತ್ರ ರಾಷ್ಟ್ರಗಳಿಗೆ ಒಪ್ಪಿಸಿದರು. ಜರ್ಮನಿಯೊಂದಿಗೆ ಶಾಂತಿ ಕೌಲು ಮಾಡಿಕೊಳ್ಳಬಹುದೇ, ವಿಲ್ಸನರ ಹದಿನಾಲ್ಕು ಅಂಶಗಳು ಸಂಧಾನಕ್ಕೆ ಆಧಾರವಾಗಬಹುದೇ ಎಂಬುದು ಮಿತ್ರರಾಷ್ಟ್ರಗಳಲ್ಲಿ ಚರ್ಚೆಯಾಯಿತು. ಜರ್ಮನಿಯೊಂದಿಗೆ ಶಾಂತಿ ಮಾಡಿಕೊಳ್ಳುವುದು ಸಾಧುವೇ ಅಲ್ಲವೇ ಎಂಬ ಬಗ್ಗೆ ಸೇನಾ ಮುಖ್ಯರೊಂದಿಗೂ ಸಮಾಲೋಚನೆ ನಡೆಸಲಾಯಿತು. ಜರ್ಮನಿಯ ರಾಜಧಾನಿಯಾದ ಬರ್ಲಿನ್ನನ್ನು ಮಿತ್ರ ಸೇನೆಗಳು ಆಕ್ರಮಿಸಿಕೊಂಡು ಆ ದೇಶ ಸಂಪೂರ್ಣವಾಗಿ ಶರಣಾದಾಗಲೂ ಇವಕ್ಕಿಂತ ಭಿನ್ನವಾದ ಷರತ್ತುಗಳನ್ನು ಹಾಕುವುದು ಸಾಧ್ಯವಿಲ್ಲವಾದ್ದರಿಂದ ಈ ಷರತ್ತುಗಳಿಗೆ ಅನುಗುಣವಾಗಿ ಜರ್ಮನಿಯೊಂದಿಗೆ ಈಗಲೇ ಶಾಂತಿ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲವೆಂದು ಸೇನಾ ಮುಖ್ಯರ ಅಭಿಪ್ರಾಯಪಟ್ಟರು. ಅನಾವಶ್ಯಕವಾಗಿ ಪ್ರಾಣಹಾನಿ ತಪ್ಪಿಸುವುದು ಇದರಿಂದ ಸಾಧ್ಯವಾಗುವುದೆಂಬುದು ಅವರ ಭಾವನೆಯಾಗಿತ್ತು.

ವಿಲ್ಸನರು ಸೂಚಿಸಿದ್ದ ಹದಿನಾಲ್ಕು ಅಂಶಗಳು

  • ಅಮೇರಿಕ ಅಧ್ಯಕ್ಷ ವಿಲ್ಸನರು ಸೂಚಿಸಿದ್ದ ಹದಿನಾಲ್ಕು ಅಂಶಗಳು ಶಾಂತಿಗೆ ಆಧಾರವಾಗಬಹುದೇ ಎಂಬ ವಿಚಾರವಾಗಿ ಮಿತ್ರನಾಯಕರಲ್ಲಿ ಒಮ್ಮತವಿರಲಿಲ್ಲ. ಕೊನೆಗೆ ಕೆಲವು ಉಪಾಧಿಗಳೊಂದಿಗೆ ಇವನ್ನು ಒಪ್ಪಲಾಯಿತು. ಅಂತೆಯೇ ವಿಲ್ಸನರು ನವೆಂಬರ್ 5 ರಂದು ಮಿತ್ರರಾಷ್ಟ್ರಗಳ ಉತ್ತರವನ್ನು ಜರ್ಮನ್ ಸರ್ಕಾರಕ್ಕೆ ತಿಳಿಸಿದರು. ಜರ್ಮನಿಯೊಂದಿಗೆ ಯುದ್ಧವಿರಾಮ ಒಡಂಬಡಿಕೆಯನ್ನೂ ಶಾಂತಿ ಕೌಲನ್ನೂ ಮಾಡಿಕೊಳ್ಳಲು ಮಿತ್ರ ಹಾಗೂ ಸಹಯೋಗಿ ರಾಜ್ಯಗಳು ಒಪ್ಪಿವೆಯೆಂದು ಇದರಲ್ಲಿ ಸೂಚಿಸಲಾಗಿತ್ತು. ಅಧ್ಯಕ್ಷ ವಿಲ್ಸನರ ಜನವರಿ 8 ರ ಮತ್ತು ಅನಂತರ ಭಾಷಣಗಳಿಗೆ ಅನುಗುಣವಾಗಿ. ಆದರೆ ಸಾಗರಗಳ ಸ್ವಾತಂತ್ರ್ಯ ಹಾಗೂ ಆಕ್ರಮಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ಕೆಲವು ಉಪಾಧಿಗಳೊಂದಿಗೆ ಈ ಒಪ್ಪಿಗೆ ನೀಡಲಾಯಿತು. ಯುದ್ಧ ವಿರಾಮ ಒಪ್ಪಂದಕ್ಕೆ ಪೂರ್ವದ ಈ ಒಡಂಬಡಿಕೆಯೇ ಶಾಂತಿಯ ಕೌಲಿಗೆ ತಳಹದಿಯಾಗತಕ್ಕದೆಂಬುದನ್ನು ಎರಡೂ ಪಕ್ಷಗಳು ಒಪ್ಪಿದವು.
  • ಮುಖ್ಯ ಮಿತ್ರ ಹಾಗೂ ಸಹಯೋಗಿ ರಾಜ್ಯಗಳಾದ ಫ್ರಾನ್ಸ್, ಬ್ರಿಟನ್, ಇಟಲಿ, ಜಪಾನ್, ಅಮೆರಿಕ ಸಂಯುಕ್ತ ಸಂಸ್ಥಾನ-ಇವು ಡಿಸೆಂಬರ್ ತಿಂಗಳಲ್ಲಿ ಪರಸ್ಪರ ಸಮಾಲೋಚನೆ ನಡೆಸಿದವು. ಪ್ರಥಮ ಸಕಲ ಸದಸ್ಯ ಸಭೆ ಸಮಾವೇಶಗೊಂಡದ್ದು 1919 ರ ಜನವರಿ 18 ರಂದು. ಜನವರಿ 12 ರಂದು ಸರ್ವೋಚ್ಚ ಯುದ್ಧ ಮಂಡಲಿಯ ಸಭೆ ಪ್ಯಾರಿಸಿನಲ್ಲಿ ಸೇರಿತ್ತು. ಬ್ರಿಟನ್, ಫ್ರಾನ್ಸ್, ಇಟಲಿ, ಅಮೆರಿಕಗಳ ಪ್ರತಿನಿಧಿಗಳಿಂದ ಕೂಡಿದ ಮಂಡಲಿಯಿದು. ಸಮ್ಮೇಳನದ ಸರ್ವೊಚ್ಚ ಮಂಡಲಿಗೆ ಜಪಾನನ್ನೂ ಸೇರಿಸಬಹುದೆಂಬುದು ಈ ಮಂಡಲಿಯ ಸಭೆಯ ಮುಖ್ಯ ತೀರ್ಮಾನ.
  • ಶಾಂತಿಯ ಷರತ್ತುಗಳನ್ನು ನಿರ್ಣಯಿಸುವ ಕಾರ್ಯದಲ್ಲಿ ಭಾಗವಹಿಸುವ ಬಯಕೆ ಹಲವು ರಾಷ್ಟ್ರಗಳಿಗಿತ್ತು. ಕೇಂದ್ರಶಕ್ತಿಗಳ ವಿರುದ್ಧ ಹೋರಾಡಿದ ಬೆಲ್ಚಿಯಮ್, ಸರ್ಬಿಯ, ರುಮೇನಿಯ, ಗ್ರೀಸ್ ಮತ್ತು ಇತರ ರಾಜ್ಯಗಳಿಗೆ ಮತ ಚಲಾಯಿಸುವ ಅಧಿಕಾರ ನೀಡಲಾಯಿತು. ಯುದ್ಧದಲ್ಲಿ ತಟಸ್ಥವಾಗಿದ್ದರೂ ಶಾಂತಿಯ ಕೌಲು ರೂಪಿತವಾಗುವಾಗ ತಮ್ಮ ಹಿತಗಳನ್ನು ರಕ್ಷಿಸಿಕೊಳ್ಳಬಯಸಿದ ರಾಜ್ಯಗಳೂ ಇದ್ದುವು. ಇವಕ್ಕೆಲ್ಲ ಪ್ರಮುಖ ಸ್ಥಾನ ನೀಡುವುದಂತೂ ಅಸಾಧ್ಯವಾಗಿತ್ತು. ಈ ರಾಜ್ಯಗಳ ಹಿಡಿತಗಳಿಗೆ ಸಂಬಂಧಿಸಿದ ಪ್ರಶ್ನೆ ಚರ್ಚೆಯಾಗುವಾಗ ಇವುಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿರಲು ಅವಕಾಶ ನೀಡಲಾಯಿತು. ಪಂಚ ಪ್ರಮುಖ ರಾಜ್ಯಗಳು ಈ ಪ್ರಶ್ನೆಯನ್ನು ಇತ್ಯರ್ಥ ಮಾಡಲು ಸಾಕಷ್ಟು ಸಮಯ ತೆಗೆದುಕೊಂಡವು. ವಿವಿಧ ರಾಜ್ಯಗಳ ಸೇನಾಬಲ, ಯುದ್ಧದಲ್ಲಿ ಅವುಗಳ ಪಾತ್ರ ಇವುಗಳಿಗೆ ಅನುಗುಣವಾಗಿ ಸ್ಥಾನಗಳನ್ನು ನಿಗದಿ ಮಾಡಲಾಯಿತು. ಸಕಲ ಸದಸ್ಯ ಸಭೆಯಲ್ಲಿ ಐದು ಪ್ರಧಾನ ರಾಜ್ಯಗಳಿಗೆ ತಲಾ ಐದು, ಬೆಲ್ಜಿಯಮ್, ಸರ್ಬಿಯ, ಬ್ರಜಿಲ್‍ಗಳಿಗೆ ತಲಾ ಮೂರು, ಕೆನಡ, ಆಸ್ಟ್ರೇಲಿಯ, ದಕ್ಷಿಣ ಅಫ್ರಿಕ, ಭಾರತ, ಚೀನ, ಚೆಕೊಸ್ಲೊವಾಕಿಯ, ಪೋಲೆಂಡ್, ಗ್ರೀಸ್, ಹೆಜಾಜ್, ಪೋರ್ಚುಗಲ್, ರುಮೇನಿಯ, ಸಯಾಮ್ (ಈಗಿನ ಥೈಲೆಂಡ್)ಗಳಿಗೆ ತಲಾ ಎರಡು: ನ್ಯೂಜಿಲೆಂಡ್, ಬೊಲಿವಿಯ, ಕ್ಯೂಬ, ಎಕ್ವಡಾರ್, ಗ್ವಾಟೆಮಾಲ, ಹೈಟಿ, ಹಾಂಡುರಾಸ್, ಲೈಬೀರಿಯ, ನಿಕರಾಗ್ವ, ಪನಾಮಾ, ಪೆರು, ಉರುಗ್ವೆ ರಾಜ್ಯಗಳಿಗೆ ತಲಾ ಒಂದು-ಹೀಗೆ ಸ್ಥಾನಗಳು ನಿಗದಿಯಾದವು.

ಸಕಲ ಸದಸ್ಯ ಸಭೆ:

  • 1919 ಜನವರಿ 18 ರಂದು ಪ್ರಥಮ ಸಕಲ ಸದಸ್ಯರ ಸಭೆ ಸೇರಿದಾಗ ಅದು ನಡೆಸಿದ ಕಲಾಪವೆಂದರೆ, ಸರ್ವೋಚ್ಚ ಮಂಡಳಿಯ ನಿರ್ಧಾರಗಳಿಗೆಲ್ಲ ಒಪ್ಪಿಗೆ ನೀಡುವುದು. ಫ್ರಾನ್ಸಿನ ಪ್ರಧಾನಿಯಾಗಿದ್ದ ಕ್ಲೇಮಾನ್ಸೋ ಅವರನ್ನು ಸಭೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸರ್ವೋಚ್ಚ ಮಂಡಲಿಯಿಂದ ಮುಂಚೆಯೇ ಆರಿಸಲ್ಪಟ್ಟವರೊಬ್ಬರು ಮಹಾ ಕಾರ್ಯದರ್ಶಿಯಾಗಿ ನೇಮಕಗೊಂಡರು. ಐದು ಪ್ರಧಾನ ರಾಷ್ಟ್ರಗಳ ಪ್ರತಿನಿಧಿಗಳನ್ನೊಳಗೊಂಡ ಕೌಲು ರಚನಾ ಸಮಿತಿಯೊಂದನ್ನು ರಚಿಸಲಾಯಿತು. ಐದು ಪ್ರಮುಖ ರಾಷ್ಟ್ರಗಳೇ ಹೀಗೆ ಎಲ್ಲ ಅಧಿಕಾರವನ್ನೂ ತಮ್ಮಲ್ಲೇ ಇಟ್ಟುಕೊಂಡದ್ದು ಸಣ್ಣ ರಾಷ್ಟ್ರಗಳಿಗೆ ಹಿಡಿಸಲಿಲ್ಲ. ಆದರೆ ಅವುಗಳ ಪ್ರತಿಭಟನೆಯನ್ನು ದೊಡ್ಡ ರಾಷ್ಟ್ರಗಳು ಲೆಕ್ಕಿಸಲಿಲ್ಲ.
  • ಶಾಂತಿ ಸಮ್ಮೇಳನದ ಪ್ರಮುಖ ಕಾರ್ಯವೆಂದರೆ ಶಾಂತಿಯ ಸ್ಥಾಪನೆ. ಇದರ ಜೊತೆಗೆ ಅದು ಅತ್ಯಂತ ಪರಿಣಾಮಕಾರಿಯಾದ ಇನ್ನೂ ಹಲವಾರು ಹೊಣೆಗಳನ್ನು ನಿರ್ವಹಿಸಬೇಕಾಗಿತ್ತು. ಜರ್ಮನ್ ಸೇನೆಯ ಆಕ್ರಮಣದ ತೆರವು, ಜರ್ಮನಿಯಲ್ಲಿ ಬಂಧಿತರಾಗಿದ್ದ ಮಿತ್ರರಾಜ್ಯಗಳವರ ವಿಮೋಚನೆ, ನಿಗದಿಯಾದ ಶಸ್ತ್ರಾಸ್ತ್ರಗಳು, ವಿಮಾನಗಳು, ಕೃಷಿಯಂತ್ರ, ರೈಲ್ವೆ ಸಲಕರಣೆ ಮುಂತಾದವನ್ನು ಜರ್ಮನಿ ಒಪ್ಪಿಸುವುದು_ಮುಂತಾದವುಗಳ ಉಸ್ತುವಾರಿಯ ಹೊಣೆ ಮಿತ್ರ ರಾಜ್ಯಗಳ ಯುದ್ಧವಿರಾಮ ಆಯೋಗದ ಕಾರ್ಯಭಾರವಾಗಿತ್ತು. ಈ ಆಯೋಗಕ್ಕೆ ಯುಕ್ತ ಆದೇಶ ನೀಡುವುದೂಶಾಂತಿ ಸಮ್ಮೇಳನದ ಹೊಣೆ ಅಲ್ಲದೆ ಪೋಲೆಂಡ್, ಜರ್ಮನಿ, ಹಂಗರಿ, ಚೆಕೊಸ್ಲೊವಾಕಿಯ ಮತ್ತು ರುಮೇನಿಯ ರಾಜ್ಯಗಳ ಮೇಲೆ ಅಧಿಕಾರ ಚಲಾಯಿಸುವ ಮತ್ತು ಸರ್ವೋಚ್ಚ ಆರ್ಥಿಕ ಮಂಡಳಿಯನ್ನು ನಿಯಂತ್ರಿಸುವ ಜವಾಬ್ದಾರಿಯೂ ಶಾಂತಿ ಸಮ್ಮೇಳನದ್ದೇ ಆಗಿತ್ತು. ಸರ್ವೋಚ್ಚ ಆರ್ಥಿಕ ಮಂಡಳಿಯ ರಚನೆಯಾದ್ದು ಅಮೆರಿಕದ ಅಧ್ಯಕ್ಷ ವಿಲ್ಸನರ ಸಲಹೆಯ ಮೇರೆಗೆ, ಶಾಂತಿ ಸಂಧಾನಗಳು ಪೂರೈಸುವ ತನಕ ಕೈಗೊಳ್ಳಬೇಕಾದ ಆರ್ಥಿಕ ಕ್ರಮಗಳ ಬಗ್ಗೆ ಸಮ್ಮೇಳನಕ್ಕೆ ಸಲಹೆ ನೀಡುವುದೇ ಆರ್ಥಿಕ ಮಂಡಲಿಯ ಕೆಲಸ. ಯುದ್ಧದಿಂದ ನಾಶಗೊಂಡಿದ್ದ ಪ್ರದೇಶಗಳ ಪುನರ್ರಚನೆಗೆ ಅಗತ್ಯವಾದ ಸಾಮಗ್ರಿಯ ಪೂರೈಕೆ, ಕ್ಷಾಮಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಿಕೆ, ಮಿತ್ರರಾಷ್ಟ್ರಗಳು ಆಕ್ರಮಿಸಿಕೊಂಡಿದ್ದ ಜರ್ಮನ್ ಪ್ರದೇಶಗಳ ಆರ್ಥಿಕ ನಿರ್ವಹಣೆ ಮುಂತಾದ ಮುಖ್ಯ ಕಾರ್ಯಭಾರಗಳನ್ನು ಆರ್ಥಿಕ ಮಂಡಲಿ ಕೈಗೊಂಡಿತು.

ಯೋರೋಪಿನ ಸ್ಥಿತಿ

  • ಈ ನಡುವೆ ಜರ್ಮನಿ ಪೋಲೆಂಡ್ ಚೆಕೊಸ್ಲೊವಾಕಿಯಗಳಲ್ಲಿ ಗಲಭೆಗಳಾಗುತ್ತಿದ್ದವು. ಹಂಗರಿ ರುಮೇನಿಯ ನಡುವೆಯೂ, ಚೆಕೊಸ್ಲೊವಾಕಿಯ ಮತ್ತು ಪೋಲೆಂಡ್ ನಡುವೆಯೂ ಸಣ್ಣ ಪುಟ್ಟ ವಾಜ್ಯಗಳಿದ್ದುವು. ಇವುಗಳ ಬಗ್ಗೆಯೂ ಶಾಂತಿ ಸಮ್ಮೇಳನ ಯುಕ್ತ ನಿರ್ಣಯ ಮಾಡಬೇಕಾಯಿತು.

ಸಮ್ಮೇಳನದಲ್ಲಿ ಪರಿಶೀಲನೆಗೆ ಒಳಗಾದ ಅಂಶಗಳು ಇವು:

  • 1. ಯುದ್ಧದ ಹೊಣೆ ಮತ್ತು ಯುದ್ಧಕಾಲದಲ್ಲಿ ನಡೆದ ಅಕ್ರಮಗಳು ಮತ್ತು ಅತ್ಯಾಚಾರಗಳು.
  • 2. ನಷ್ಟ ಪರಿಹಾರ, ಅಂತರ ರಾಷ್ಟ್ರೀಯ ಕಾರ್ಮಿಕ ಕಾನೂನು,
  • 3. ಬಂದರುಗಳು, ಜಲಮಾರ್ಗಗಳು, ರೈಲುಮಾರ್ಗಗಳು. ಅಂತರರಾಷ್ಟ್ರೀಯ ನಿಯಂತ್ರಣ,
  • 4. ಹಣಕಾಸಿನ ಪ್ರಶ್ನೆಗಳು,
  • 5. ಆರ್ಥಿಕ ಪ್ರಶ್ನೆಗಳು,
  • 6. ವಾಯುಯಾನ.
  • 7. ನೌಕಾ ಮತ್ತು ಸೇನಾ ವ್ಯವಹಾರಗಳು.
  • 8. ಪ್ರದೇಶಗಳನ್ನು ಕುರಿತ ಸಮಸ್ಯೆಗಳು. ಉದಾ. ಚೆಕೊಸ್ಲೊವಾಕಿಯ, ಪೋಲೆಂಡ್, ರುಮೇನಿಯ, ಯುಗೊಸ್ಲಾವಿಯ, ಗ್ರೀಸ್, ಅಲ್ಬೇನಿಯ, ಬೆಲ್ಜಿಯಮ್, ಡೆನ್‍ಮಾರ್ಕ್, ಸಾರ್‍ಪ್ರದೇಶ, ಅಲ್ಸೇಸ್_ಲೊರೇನ್ ಪ್ರದೇಶ.

ಸಕಲ ಸದಸ್ಯರ ಸಭೆಯ ಎರಡನೆಯ ಅಧಿವೇಶನ

  • ಸಕಲ ಸದಸ್ಯರ ಸಭೆಯ ಎರಡನೆಯ ಅಧಿವೇಶನದ ಪ್ರಮುಖ ಕಲಾಪವೆಂದರೆ ರಾಷ್ಟ್ರಗಳ ಕೂಟದ (ಲೀಗ್ ಆಫ್ ನೇಷನ್ಸ್ಸ್) ಸ್ಥಾಪನೆಯನ್ನು ಕುರಿತದ್ದು. ಸರ್ವೋಚ್ಚ ಮಂಡಲಿಯ ಶಿಫಾರಸಿನಂತೆ ಇದಕ್ಕಾಗಿ ಒಂದು ಆಯೋಗದ ನೇಮಕವಾಯಿತು. ರಾಷ್ಟ್ರಗಳ ಕೂಟದ ಒಡಂಬಡಿಕೆಯನ್ನು ಸಮ್ಮೇಳನ ಚರ್ಚಿಸಿ ನಿರ್ಣಯಿಸಿದ್ದು ಸಮ್ಮೇಳನದ ಒಂದು ಪ್ರಮುಖ ಸಾಧನೆ.
  • ಆದರೆ ಫ್ರಾನ್ಸ್, ಬ್ರಿಟನ್, ಇಟಲಿ, ಅಮೆರಿಕ ಈ ನಾಲ್ಕು ದೇಶಗಳೇ ಅನೇಕ ಪ್ರಶ್ನೆಗಳನ್ನು ಇತ್ಯರ್ಥ ಮಾಡಿ ಮಹಾಸಭೆಯ ಮುಂದೆ ಇಟ್ಟು ಜರ್ಮನಿಯನ್ನು ಸಂಪೂರ್ಣವಾಗಿ ನಿರ್ವೀರ್ಯಗೊಳಿಸಬೇಕೆಂಬುದು ಫ್ರಾನ್ಸಿನ ಇಚ್ಛೆಯಾಗಿತ್ತು. ರೈನ್ ಲ್ಯಾಂಡನ್ನೂ ಕೊಲೇನ್, ಕೊಬ್ಲಿನ್‍ಜ್ ಮತ್ತು ಮೇನ್ಸ್‍ನ ಹತೋಟಿಯನ್ನು ಮಿತ್ರರಾಷ್ಟ್ರಗಳ ವಶದಲ್ಲೇ ಮುಂದುವರಿಸಬೇಕೆಂಬುದಾಗಿ ಫ್ರಾನ್ಸ್ ವಾದಿಸಿತು. ಜರ್ಮನರು ತಮ್ಮ ಗಣಿಗಳನ್ನು ನಾಶಗೊಳಿಸಿದ್ದರಿಂದ ಇದಕ್ಕೆ ಪರಿಹಾರವಾಗಿ ಸಾರ್ ಪ್ರದೇಶ ಸಂಪೂರ್ಣವಾಗಿ ತಮ್ಮದಾಗಬೇಕೆಂದೂ ಫ್ರೆಂಚರು ವಾದಿಸಿದರು. ಡ್ಯಾನ್ ಜಿóಗ್ ಮತ್ತು ಅದರ ಮಾರ್ಗಗಳು ತನಗೆ ಸೇರಬೇಕೆಂಬ ಪೋಲೆಂಡಿನ ಬೇಡಿಕೆಯನ್ನೂ ಫ್ರಾನ್ಸ್ ಸಮರ್ಥಿಸಿತು.
  • ರೈನ್ ನದಿಯ ಎಡದಂಡೆಯೂ ಬಲದಂಡೆಯ ಒಂದು ವಿಶಾಲ ಭಾಗವೂ ನಿಸ್ಸೇನೀ ಕೃತವಾಗಬೇಕೆಂಬುದಾಗಿ ಒಪ್ಪಿಗೆಯಾಯಿತು. ಜರ್ಮನಿ ಆಸ್ಟ್ರಿಯಾಗಳು ಒಂದಾಗದಂತೆ ನಿಷೇಧ ವಿಧಿಸಲಾಯಿತು. ಸಾರ್ ಕಲ್ಲಿದ್ದಲು ಗಣಿ ಫ್ರಾನ್ಸಿಗೆ ಸೇರಬೇಕೆಂಬುದಕ್ಕೂ ಸಮ್ಮತಿ ದೊರಕಿತು. ಆದರೆ ಅಲ್ಲಿ ಆರೂವರೆ ಲಕ್ಷ ಜರ್ಮನರು ಇದ್ದದ್ದರಿಂದ ಹದಿನೈದು ವರ್ಷಗಳ ಕಾಲ ಆ ಪ್ರದೇಶ ರಾಷ್ಟ್ರಗಳ ಕೂಟದ ಹತೋಟಿಗೆ ಒಳಪಡಬೇಕೆಂದು ನಿರ್ಣಯಿಸಲಾಯಿತು. ಅನಂತರ ಆ ಪ್ರದೇಶದ ಜನರ ಅಭಿಪ್ರಾಯದಂತೆ ಅದರ ಭವಿಷ್ಯವನ್ನು ನಿರ್ಧರಿಸಬೇಕೆಂದೂ ತೀರ್ಮಾನಿಸಲಾಯಿತು.
  • ಯುದ್ಧ ಪರಿಹಾರದ ಸಮಸ್ಯೆಯನ್ನು ನಾಲ್ವರ ಮಂಡಲಿ ಸಮರ್ಪಕವಾಗಿ ತೀರ್ಮಾನಿಸಲಾಗಲಿಲ್ಲ. ಜರ್ಮನಿ ಸಂಪೂರ್ಣವಾಗಿ ನಿಶ್ಯಕ್ತವಾಗಿದ್ದದ್ದರಿಂದ ಭಾರಿ ಪರಿಹಾರ ನೀಡಬೇಕೆಂದು ಅದನ್ನು ಒತ್ತಾಯಿಸುವುದು ಸರಿಯಲ್ಲವೆಂಬುದು ಇಂಗ್ಲೆಂಡ್ ಮತ್ತು ಅಮೆರಿಕದ ಅಭಿಪ್ರಾಯವಾಗಿತ್ತು. ಆದರೆ, ಫ್ರಾನ್ಸಿನ ಅಭಿಪ್ರಾಯವನ್ನೇ ಒಪ್ಪಬೇಕಾಯಿತು. ಜರ್ಮನಿಯ ಸಾಮಥ್ರ್ಯಕ್ಕೆ ಅನುಗುಣವಾದ ಪರಿಹಾರವನ್ನು ಅದರಿಂದ ಪಡೆಯಲೇಬೇಕೆಂದು ತೀರ್ಮಾನಿಸಲಾಯಿತು.
  • ಡ್ಯಾನ್‍ಜಿಗ್ ರಾಷ್ಟ್ರಗಳ ಕೂಟದ ರಕ್ಷಣೆಯಲ್ಲಿ ಸ್ವತಂತ್ರ ನಗರವಾಗಿರತಕ್ಕದ್ದೆಂದೂ ಆದರೆ, ಪೋಲೆಂಡಿನಿಂದ ಬಾಲ್ಟಿಕ್ ಸಮುದ್ರಕ್ಕೆ ಪ್ರವೇಶ ದೊರಕಬೇಕೆಂದೂ ತೀರ್ಮಾನಿಸಲಾಯಿತು.
  • ಹೀಗೆ ಪ್ರಮುಖ ಮಿತ್ರ ರಾಷ್ಟ್ರಗಳು ತಂತಮ್ಮಲ್ಲೇ ಬಹುತೇಕ ಪ್ರಶ್ನೆಗಳ ಇತ್ಯರ್ಥ ಮಾಡಿಕೊಂಡ ಮೇಲೆ ಏಪ್ರಿಲ್ 25 ರಂದು ವರ್ಸೇಲ್ಸ್‍ನಲ್ಲಿ ಹಾಜರಾಗಲು ಜರ್ಮನಿಯ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಯಿತು. ಈ ನಡುವೆ ಇಟಲಿ, ಬೆಲ್ಜಿಯಮ್, ಯುಗೋಸ್ಲಾವಿಯ ಮತ್ತು ಜಪಾನ್ ದೇಶಗಳು ಕೆಲವು ತಕರಾರುಗಳನ್ನು ಹಾಕಿದವು. ಅದನ್ನೂ ಪರಿಹರಿಸಲಾಯಿತು.

ವರ್ಸೇಲ್ಸ್ ಕೌಲು:

ಜರ್ಮನಿ: ಪದ ವ್ಯುತ್ಪತ್ತಿ, ಸಂಕ್ಷಿಪ್ತ ಇತಿಹಾಸ, ಮಾರ್ಟಿನ್ ಲೂಥರ್ 
ನಾಜಿ ಪ್ರಾಬಲ್ಯದ ಅಡಿಯಲ್ಲಿ ಯುರೋಪ್
  • ಜರ್ಮನಿಯೊಂದಿಗೆ ಕೌಲಿನ ಕರಡನ್ನು ಜರ್ಮನಿಯ ಮುಖ್ಯ ಪ್ರತಿನಿಧಿಯಾದ ಕೌಂಟ್ ಅರ್ಲಿಜ್ ಫಾನ್ ಬ್ರೊಕ್‍ಡೋರ್ಫ್ - ರಾಂಟ್‍ಸೌಗೆ *1919 ರ ಮೇ 7 ರಂದು ಟೈಯನಾನ್‍ನಲ್ಲಿ ಒಪ್ಪಿಸಲಾಯಿತು. ಜರ್ಮನ್ ಪ್ರತಿನಿಧಿ ಈ ಕೌಲಿನ ಷರತ್ತಗಳನ್ನು ಪ್ರಬಲವಾಗಿ ವಿರೋಧಿಸಿದರು. ಕಳೆದ ಆರು ತಿಂಗಳುಗಳಲ್ಲಿ ಜರ್ಮನಿಯ ದಿಗ್ಬಂಧನದಿಂದಾಗಿ ಹಲವು ಸಹಸ್ರ ಮಂದಿ ಮಡಿದಿದ್ದಾರೆ. ಅಪರಾಧ ಮತ್ತು ಶಿಕ್ಷೆಯ ಮಾತಾಡುವ ನೀವು ಇದನ್ನು ಕುರಿತು ಯೋಚಿಸಬೇಕು ಎಂದರು. ಯುದ್ಧ ನಿಲುಗಡೆ ಒಪ್ಪಂದದಲ್ಲಿ ಸಮ್ಮತಿಸಲಾದ ಹೊಣೆಗಳನ್ನು ನಿರ್ವಹಿಸಲು ತಾವು ಒಪ್ಪುವುದಾಗಿಯೂ ಬೆಲ್ಜಿಯಮ್ ಮತ್ತು ಫ್ರಾನ್ಸಿನಲ್ಲಿ ನಾಶವಾದ ಪ್ರದೇಶಗಳ ಪುನರ್ ವ್ಯವಸ್ಥೆಗಾಗಿ ತಾವು ಹೊಣೆ ಎಂದೂ ಹೇಳಿದರು. ಆದರೆ, ದ್ವೇಷದ ಆಧಾರದ ಮೇಲೆ ರಚಿತವಾದ ಕೌಲು ಇದು ಎಂಬುದು ಅವರ ಭಾವನೆಯಾಗಿತ್ತು. ಯುದ್ಧ ಪರಿಹಾರ ಬಲು ಭಾರವೆಂದೂ ಪೂರ್ವಭಾವಿ ಒಪ್ಪಂದಕ್ಕೆ ಇದು ವಿರುದ್ಧವಾಗಿದೆ ಎಂದೂ ಜರ್ಮನರು ವಾದಿಸಿದರು. ಆದರೆ, ಮಿತ್ರರಾಷ್ಟ್ರಗಳು ಈ ವಾದವನ್ನೆಲ್ಲ ತಳ್ಳಿ ಹಾಕಿದರು. ಜೂನ್ 28 ರಂದು ವರ್ಸೇಲ್ಸ್‍ನಲ್ಲಿ ಕೌಲಿನ ಸಹಿಯಾಯಿತು.
  • ಸಮ್ಮೇಳನದ ಇನ್ನೊಂದು ಪ್ರಮುಖ ತೀರ್ಮಾನವೆಂದರೆ ಜರ್ಮನಿಗೆ ಸೇರಿದ ವಸಾಹತುಗಳನ್ನು ಕುರಿತದ್ದು. ಜರ್ಮನ್ ಸಾಮ್ರಾಜ್ಯವೆಲ್ಲ ಕಳೆದು ಹೋಯಿತು. ಅದರ ಹಲವು ಪ್ರದೇಶಗಳ ಆಡಳಿತವನ್ನು ಇತರ ಪ್ರಮುಖ ಯೂರೋಪಿಯನ್ ದೇಶಗಳು ವಹಿಸಿಕೊಂಡವು. ರಾಷ್ಟ್ರಗಳ ಕೂಟದ ಪರವಾಗಿ ಇವು ಆಡಳಿತ ನಡೆಸುವ ವ್ಯವಸ್ಥೆ ರೂಪಿತವಾದ್ದು ಈ ಸಮ್ಮೇಳನದಲ್ಲೇ.

ಅಡಾಲ್ಫ್ ಹಿಟ್ಲರ್ ನಾಜಿಗಳ ಅಧಿಕಾರ

ಜರ್ಮನಿ: ಪದ ವ್ಯುತ್ಪತ್ತಿ, ಸಂಕ್ಷಿಪ್ತ ಇತಿಹಾಸ, ಮಾರ್ಟಿನ್ ಲೂಥರ್ 
ಹಿಟ್ಲರ್‍ನ ಭಾವಚಿತ್ರcrop
  • 1918-1919 ವರ್ಸೈಲ್ಸ್ ಒಪ್ಪಂದದ ಅಡಿಯಲ್ಲಿ ಜರ್ಮನಿಯು ಕಠಿಣ ಷರತ್ತುಗಳನ್ನು ಸ್ವೀಕರಿಸಲು ಒತ್ತಾಯಿಸಲಾಯಿತು, ಅದು ಮೊದಲನೆಯ ಮಹಾಯುದ್ಧವನ್ನು ಕೊನೆಗೊಳಿಸಿತು. ವೀಮರ್ ಗಣರಾಜ್ಯವನ್ನು ಸ್ಥಾಪಿಸಲಾಯಿತು. 1933 ಅಡಾಲ್ಫ್ ಹಿಟ್ಲರ್ ಮತ್ತು ರಾಷ್ಟ್ರೀಯ ಸಮಾಜವಾದಿ ಪಕ್ಷ (ನಾಜಿಗಳು) ಅಧಿಕಾರ ವಹಿಸಿಕೊಂಡರು. ಕ್ರಿ.ಶ. 1939 ರಲ್ಲಿ ಜರ್ಮನಿಯು ಎರಡನೇ ವಿಶ್ವಯುದ್ಧವನ್ನು ಪ್ರಾರಂಭಿಸಿ ಪೋಲೆಂಡ್ ಮೇಲೆ ಆಕ್ರಮಣ ಮಾಡಿತು.

ಎರಡನೇ ಮಹಾಯುದ್ಧ

  • ಅಡಾಲ್ಫ್ ಹಿಟ್ಲರ್ ನೇತೃತ್ವದ ನಾಜಿ ಪಕ್ಷವು 1932 ರಲ್ಲಿ ವಿಶೇಷ ಚುನಾವಣೆಯಲ್ಲಿ ಜಯಗಳಿಸಿತು ಮತ್ತು ಹಿಂಡೆನ್ಬರ್ಗ್ 30 ಜನವರಿ 1933 ರಂದು ಹಿಟ್ಲರನನ್ನು ಜರ್ಮನಿಯ ಕುಲಪತಿಯನ್ನಾಗಿ ನೇಮಿಸಿತು. ರೀಚ್‌ಸ್ಟ್ಯಾಗ್ ಬೆಂಕಿಯ ನಂತರ, ಒಂದು ತೀರ್ಪು ಮೂಲಭೂತ ನಾಗರಿಕ ಹಕ್ಕುಗಳನ್ನು ರದ್ದುಗೊಳಿಸಿತು ಮತ್ತು ಮೊದಲ ನಾಜಿ ಕಾನ್ಸಂಟ್ರೇಶನ್ ಕ್ಯಾಂಪ್ ತೆರೆಯಿತು. ಸಕ್ರಿಯಗೊಳಿಸುವ ಕಾಯಿದೆ ಹಿಟ್ಲರ್‌ಗೆ ಅನಿಯಂತ್ರಿತ ಶಾಸಕಾಂಗ ಅಧಿಕಾರವನ್ನು ನೀಡಿತು, ಸಂವಿಧಾನವನ್ನು ಅತಿಕ್ರಮಿಸಿತು; ಅವರ ಸರ್ಕಾರವು ಕೇಂದ್ರೀಕೃತ ನಿರಂಕುಶ ಪ್ರಭುತ್ವವನ್ನು ಸ್ಥಾಪಿಸಿತು, ಲೀಗ್ ಆಫ್ ನೇಷನ್ಸ್‌ನಿಂದ ಹಿಂದೆ ಸರಿಯಿತು ಮತ್ತು ದೇಶದ ಮರುಸಂಗ್ರಹವನ್ನು ನಾಟಕೀಯವಾಗಿ ಹೆಚ್ಚಿಸಿತು. ಆರ್ಥಿಕ ನವೀಕರಣಕ್ಕಾಗಿ ಸರ್ಕಾರ ಪ್ರಾಯೋಜಿತ ಕಾರ್ಯಕ್ರಮವು ಸಾರ್ವಜನಿಕ ಕಾರ್ಯಗಳ ಮೇಲೆ ಕೇಂದ್ರೀಕರಿಸಿದೆ, ಅದರಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಜರ್ಮನ್ ಆಟೋಬ್ಯಾನ್‌ಗಳು.
  • 1935 ರಲ್ಲಿ, ಆಡಳಿತವು ವರ್ಸೇಲ್ಸ್ ಒಪ್ಪಂದದಿಂದ ಹಿಂದೆ ಸರಿಯಿತು ಮತ್ತು ಯಹೂದಿಗಳು ಮತ್ತು ಇತರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನ್ಯೂರೆಂಬರ್ಗ್ ಕಾನೂನುಗಳನ್ನು ಪರಿಚಯಿಸಿತು. ಜರ್ಮನಿಯು 1935 ರಲ್ಲಿ ಸಾರ್‌ನ ನಿಯಂತ್ರಣವನ್ನು ಪುನಃ ಪಡೆದುಕೊಂಡಿತು, 1936 ರಲ್ಲಿ ರೈನ್‌ಲ್ಯಾಂಡ್ ಅನ್ನು ಮರುಸಂಗ್ರಹಿಸಿತು, 1938 ರಲ್ಲಿ ಆಸ್ಟ್ರಿಯಾವನ್ನು ಸ್ವಾಧೀನಪಡಿಸಿಕೊಂಡಿತು, 1938 ರಲ್ಲಿ ಮ್ಯೂನಿಚ್ ಒಪ್ಪಂದದೊಂದಿಗೆ ಸುಡೆಟೆನ್‌ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಂಡಿತು, ಮತ್ತು ಒಪ್ಪಂದವನ್ನು ಉಲ್ಲಂಘಿಸಿ ಮಾರ್ಚ್ 1939 ರಲ್ಲಿ ಜೆಕೊಸ್ಲೊವಾಕಿಯಾವನ್ನು ಆಕ್ರಮಿಸಿಕೊಂಡಿತು. ಯಹೂದಿ ವ್ಯವಹಾರಗಳ ನಾಶ, ಮತ್ತು ಯಹೂದಿ ಜನರ ಸಾಮೂಹಿಕ ಬಂಧನ.
  • ಆಗಸ್ಟ್ 1939 ರಲ್ಲಿ, ಹಿಟ್ಲರನ ಸರ್ಕಾರವು ಮೊಲೊಟೊವ್-ರಿಬ್ಬನ್ಟ್ರಾಪ್ ಒಪ್ಪಂದದ ಬಗ್ಗೆ ಮಾತುಕತೆ ನಡೆಸಿತು, ಅದು ಪೂರ್ವ ಯುರೋಪನ್ನು ಜರ್ಮನ್ ಮತ್ತು ಸೋವಿಯತ್ ಕ್ಷೇತ್ರಗಳಾಗಿ ಪ್ರಭಾವಿಸಿತು. 1 ಸೆಪ್ಟೆಂಬರ್ 1939 ರಂದು, ಜರ್ಮನಿ ಪೋಲೆಂಡ್ ಮೇಲೆ ಆಕ್ರಮಣ ಮಾಡಿತು, ಯುರೋಪಿನಲ್ಲಿ ಎರಡನೇ ಮಹಾಯುದ್ಧವನ್ನು ಪ್ರಾರಂಭಿಸಿತು; ಬ್ರಿಟನ್ ಮತ್ತು ಫ್ರಾನ್ಸ್ ಸೆಪ್ಟೆಂಬರ್ 3 ರಂದು ಜರ್ಮನಿಯ ವಿರುದ್ಧ ಯುದ್ಧ ಘೋಷಿಸಿದವು. 1940 ರ ವಸಂತ Germany ತುವಿನಲ್ಲಿ, ಜರ್ಮನಿ ಡೆನ್ಮಾರ್ಕ್ ಮತ್ತು ನಾರ್ವೆ, ನೆದರ್ಲ್ಯಾಂಡ್ಸ್, ಬೆಲ್ಜಿಯಂ, ಲಕ್ಸೆಂಬರ್ಗ್ ಮತ್ತು ಫ್ರಾನ್ಸ್ ಅನ್ನು ವಶಪಡಿಸಿಕೊಂಡಿತು, ಫ್ರೆಂಚ್ ಸರ್ಕಾರವು ಕದನವಿರಾಮಕ್ಕೆ ಸಹಿ ಹಾಕುವಂತೆ ಒತ್ತಾಯಿಸಿತು. ಅದೇ ವರ್ಷದಲ್ಲಿ ಬ್ರಿಟನ್ ಕದನದಲ್ಲಿ ಜರ್ಮನ್ ವಾಯುದಾಳಿಗಳನ್ನು ಬ್ರಿಟಿಷರು ಹಿಮ್ಮೆಟ್ಟಿಸಿದರು. 1941 ರಲ್ಲಿ, ಜರ್ಮನ್ ಪಡೆಗಳು ಯುಗೊಸ್ಲಾವಿಯ, ಗ್ರೀಸ್ ಮತ್ತು ಸೋವಿಯತ್ ಒಕ್ಕೂಟವನ್ನು ಆಕ್ರಮಿಸಿದವು. 1942 ರ ಹೊತ್ತಿಗೆ, ಜರ್ಮನಿ ಮತ್ತು ಇತರ ಆಕ್ಸಿಸ್ ಶಕ್ತಿಗಳು ಯುರೋಪ್ ಮತ್ತು ಉತ್ತರ ಆಫ್ರಿಕಾದ ಹೆಚ್ಚಿನ ಭಾಗವನ್ನು ನಿಯಂತ್ರಿಸುತ್ತಿದ್ದವು, ಆದರೆ ಸ್ಟಾಲಿನ್‌ಗ್ರಾಡ್ ಕದನದಲ್ಲಿ ಸೋವಿಯತ್ ವಿಜಯದ ನಂತರ, ಮಿತ್ರರಾಷ್ಟ್ರಗಳ ಉತ್ತರ ಆಫ್ರಿಕಾವನ್ನು ಪುನಃ ವಶಪಡಿಸಿಕೊಂಡವು ಮತ್ತು 1943 ರಲ್ಲಿ ಇಟಲಿಯ ಮೇಲೆ ಆಕ್ರಮಣ ಮಾಡಿದ ನಂತರ, ಜರ್ಮನ್ ಪಡೆಗಳು ಪುನರಾವರ್ತಿತ ಮಿಲಿಟರಿ ಸೋಲುಗಳನ್ನು ಅನುಭವಿಸಿದವು. 1944 ರಲ್ಲಿ, ಸೋವಿಯತ್ ಪೂರ್ವ ಯುರೋಪಿಗೆ ತಳ್ಳಲ್ಪಟ್ಟಿತು; ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಫ್ರಾನ್ಸ್‌ಗೆ ಬಂದಿಳಿದು ಜರ್ಮನಿಗೆ ಪ್ರವೇಶಿಸಿದವು. ಬರ್ಲಿನ್ ಕದನದಲ್ಲಿ ಹಿಟ್ಲರನ ಆತ್ಮಹತ್ಯೆಯ ನಂತರ, ಜರ್ಮನಿ 8 ಮೇ 1945 ರಂದು ಶರಣಾಯಿತು, ಯುರೋಪಿನಲ್ಲಿ ಎರಡನೇ ಮಹಾಯುದ್ಧ ಕೊನೆಗೊಂಡಿತು. ಎರಡನೆಯ ಮಹಾಯುದ್ಧದ ನಂತರ, ನ್ಯೂರೆಂಬರ್ಗ್ ಪ್ರಯೋಗಗಳಲ್ಲಿ ನಾಜಿ ಅಧಿಕಾರಿಗಳನ್ನು ಯುದ್ಧ ಅಪರಾಧಗಳಿಗಾಗಿ ವಿಚಾರಣೆಗೆ ಒಳಪಡಿಸಲಾಯಿತು.

ಜರ್ಮನಿಯ ವಿಭಜನೆ: ಪೂರ್ವ ಜರ್ಮನಿ ಮತ್ತು ಪಶ್ಚಿಮ ಜರ್ಮನಿ

ಜರ್ಮನಿ: ಪದ ವ್ಯುತ್ಪತ್ತಿ, ಸಂಕ್ಷಿಪ್ತ ಇತಿಹಾಸ, ಮಾರ್ಟಿನ್ ಲೂಥರ್ 
ಜರ್ಮನಿಯ ಅಮೇರಿಕನ್, ಸೋವಿಯತ್, ಬ್ರಿಟಿಷ್ ಮತ್ತು ಫ್ರೆಂಚ್ ಆಕ್ರಮಿತ ವಲಯಗಳು ಮತ್ತು ಫ್ರೆಂಚ್-ನಿಯಂತ್ರಿತ ಸಾರ್ ಪ್ರೊಟೆಕ್ಟರೇಟ್, 1947. ಓಡರ್-ನೀಸ್ ರೇಖೆಯ ಪೂರ್ವದ ಪ್ರದೇಶಗಳನ್ನು ಪೋಟ್ಸ್‌ಡ್ಯಾಮ್ ಸಮ್ಮೇಳನದ ನಿಯಮಗಳ ಪ್ರಕಾರ ಪೋಲೆಂಡ್ ಮತ್ತು ಸೋವಿಯತ್ ಒಕ್ಕೂಟಕ್ಕೆ ವರ್ಗಾಯಿಸಲಾಯಿತು.

.

  • ಕ್ರಿ.ಶ.1945 ರಲ್ಲಿ ಮಿತ್ರಪಕ್ಷಗಳು ಜರ್ಮನಿಯನ್ನು ಸೋಲಿಸಿ ಅದನ್ನು ಆಕ್ರಮಿಸಿಕೊಂಡವು ಮತ್ತು ಅದನ್ನು ನಾಲ್ಕು ವಲಯಗಳಾಗಿ ವಿಂಗಡಿಸಿದವು. ನಾರೆ ಯುದ್ಧ ಅಪರಾಧಿಗಳನ್ನು ನ್ಯೂರೆಂಬರ್ಗ್‌ನಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಕ್ರಿ.ಶ.1949 ರಲ್ಲಿ ಜರ್ಮನಿಯನ್ನು ಪೂರ್ವ ಜರ್ಮನಿ ಮತ್ತು ಪಶ್ಚಿಮ ಜರ್ಮನಿ ಎಂದು ವಿಂಗಡಿಸಲಾಯಿತು. ಪೂರ್ವ ಜರ್ಮನಿಯ ಬರ್ಲಿನ್ ಅನ್ನು ಎರಡು ರಾಷ್ಟ್ರಗಳ ನಡುವೆ ವಿಭಜಿಸಲಾಯಿತು. 1955 ರಲ್ಲಿ ಪೂರ್ವ ಜರ್ಮನಿ ಕಮ್ಯುನಿಸ್ಟ್ ರಾಜ್ಯವಾದರೆ, ಪಶ್ಚಿಮ ಜರ್ಮನಿ ಸಂಸದೀಯ ಗಣರಾಜ್ಯವಾಯಿತು. 1961 ರಲ್ಲಿ ಪೂರ್ವ ಜರ್ಮನ್ ಸರ್ಕಾರ ಬರ್ಲಿನ್ ಗೋಡೆಯನ್ನು ನಿರ್ಮಿಸಿತು. 1989 ಪೂರ್ವ ಜರ್ಮನ್ ಸರ್ಕಾರ ಬರ್ಲಿನ್ ಗೋಡೆಯನ್ನು ತೆರೆಯಿತು. 1990ರಲ್ಲಿ ಪಶ್ಚಿಮ ಜರ್ಮನಿಯ ಸರ್ಕಾರದ ಅಡಿಯಲ್ಲಿ ಜರ್ಮನಿಯನ್ನು ಔಪಚಾರಿಕವಾಗಿ ಮತ್ತೆ ಒಂದುಗೂಡಿಸಲಾಯಿತು. 1991 ರಲ್ಲಿ ಪುನರೇಕೀಕರಣದ ವೆಚ್ಚಗಳು ನಿರೀಕ್ಷೆಗಿಂತ ಹೆಚ್ಚಿನದಾಗಿದೆ. ಪೂರ್ವ ಜರ್ಮನಿಯ ಮಾಜಿ ನಾಯಕ ಎರಿಕ್ ಹೊನೆಕರ್ ಅವರು ಕಾನೂನು ಕ್ರಮ ಜರುಗಿಸುವುದನ್ನು ತಪ್ಪಿಸಲು ದೇಶವನ್ನು ಬಿಟ್ಟು ಓಡಿಹೋದರು. ಸ್ಟಾಸಿಯ (ಪೂರ್ವ ಜರ್ಮನ್ ರಹಸ್ಯ ಪೊಲೀಸ್) ಫೈಲ್‌ಗಳನ್ನು ತೆರೆಯಲಾಯಿತು, ಮತ್ತು ಅನೇಕ ಜನರು ಸ್ಟಾಸಿ ಮಾಹಿತಿದಾರರು ಎಂದು ಆರೋಪಿಸಲಾಯಿತು. 1992 ರಲ್ಲಿ ನವ-ನಾಜಿ ಮತ್ತು ಜನಾಂಗೀಯ ಗುಂಪುಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡವು ಮತ್ತು ಟರ್ಕಿಯ ವಲಸಿಗರ ವಿರುದ್ಧ 2,500 ಕ್ಕೂ ಹೆಚ್ಚು ಹಿಂಸಾಚಾರಗಳನ್ನು ಎಸಗಿದವು. 1994 ರಲ್ಲಿ ಅಮೆರಿಕನ್, ಬ್ರಿಟಿಷ್, ಫ್ರೆಂಚ್ ಮತ್ತು ರಷ್ಯಾದ ಪಡೆಗಳು ಸುಮಾರು 40 ವರ್ಷಗಳ ನಂತರ ಅಲ್ಲಿನ ಔಪಚಾರಿಕವಾಗಿ ಬರ್ಲಿನ್‌ನಿಂದ ಹೊರಬಂದವು. 1995 ರಲ್ಲಿ ಬೋಸ್ನಿಯಾ ಮತ್ತು ಹರ್ಜೆಗೋವಿನಾಗೆ ಶಾಂತಿಪಾಲನಾ ಪಡೆಯನ್ನು ಕಳುಹಿಸಲು ಜರ್ಮನಿ ನಿರ್ಧರಿಸಿತು. 1997 ರಲ್ಲಿ ಎರಡನೆಯ ಮಹಾಯುದ್ಧದ ನಂತರ ನಿರುದ್ಯೋಗ ಗರಿಷ್ಠ ಮಟ್ಟವನ್ನು ತಲುಪಿತ್ತು.ಕ್ರಿ.ಶ. 1998ರಲ್ಲಿ ಅಧಿಕಾರದಲ್ಲಿದ್ದ 16 ವರ್ಷಗಳ ನಂತರ, ಹೆಲ್ಮಟ್ ಕೊಹ್ಲ್ ಅವರನ್ನು ಗೆರ್ಹಾರ್ಡ್ ಶ್ರೋಡರ್ ಮತ್ತು ಸಮಾಜವಾದಿ ನೇತೃತ್ವದ ಒಕ್ಕೂಟದ ಪರವಾಗಿ ಕಚೇರಿಯಿಂದ ಮತ ಚಲಾಯಿಸಲಾಯಿತು.

ಯುರೋಪಿಯನ್ ಒಕ್ಕೂಟದಲ್ಲಿ

  • ಕ್ರಿ.ಶ. 1999 ಜರ್ಮನಿ ಯುರೋ ಎಂಬ ಏಕ ಯುರೋಪಿಯನ್ ಕರೆನ್ಸಿಯ ಸ್ಥಾಪಕ ಸದಸ್ಯರಾದರು. ಕೊಸೊವೊದಲ್ಲಿ ಫೆಡರಲ್ ರಿಪಬ್ಲಿಕ್ ಆಫ್ ಯುಗೊಸ್ಲಾವಿಯ ವಿರುದ್ಧ ನ್ಯಾಟೋ ನಡೆಸಿದ ಮಿಲಿಟರಿ ಕಾರ್ಯಾಚರಣೆಯಲ್ಲಿ ಜರ್ಮನಿ ಭಾಗವಹಿಸುತ್ತದೆ. ಜೋಹಾನ್ಸ್ ರೌ ಅಧ್ಯಕ್ಷರಾಗುತ್ತಾರೆ. ಭ್ರಷ್ಟಾಚಾರದ ಹಗರಣದಲ್ಲಿ ಪಾಲ್ಗೊಂಡಿದ್ದಕ್ಕಾಗಿ 2001 ರ ಹೆಲ್ಮಟ್ ಕೊಹ್ಲ್‌ಗೆ ಜರ್ಮನ್ ನ್ಯಾಯಾಲಯ ದಂಡ ವಿಧಿಸಿತು.

ಪುರಕ ಮಾಹಿತಿ

ಉಲ್ಲೇಖಗಳು


Tags:

ಜರ್ಮನಿ ಪದ ವ್ಯುತ್ಪತ್ತಿಜರ್ಮನಿ ಸಂಕ್ಷಿಪ್ತ ಇತಿಹಾಸಜರ್ಮನಿ ಮಾರ್ಟಿನ್ ಲೂಥರ್ಜರ್ಮನಿ ಒಂದನೆಯ ಮಹಾಯುದ್ಧ(1914-18):ಯುದ್ಧಮುಕ್ತಾಯದ ಕೌಲು- ಪ್ಯಾರಿಸ್ ಸಮ್ಮೇಳನಜರ್ಮನಿ ಪುರಕ ಮಾಹಿತಿಜರ್ಮನಿ ಉಲ್ಲೇಖಗಳುಜರ್ಮನಿಖಂಡಬರ್ಲಿನ್ಯುರೋಪ್

🔥 Trending searches on Wiki ಕನ್ನಡ:

ಭಾರತದ ಇತಿಹಾಸಭಾರತದ ನದಿಗಳುತುಂಬೆಗಿಡಮಂಟೇಸ್ವಾಮಿಎಚ್.ಎಸ್.ಶಿವಪ್ರಕಾಶ್ಬೇಸಿಗೆಗಾದೆಹನುಮಂತಕಾವೇರಿ ನದಿಭಾರತದ ಪ್ರಧಾನ ಮಂತ್ರಿವಾಲಿಬಾಲ್ಭೂಮಿಭಾರತದಲ್ಲಿ ಕೃಷಿಹೊಯ್ಸಳ ವಿಷ್ಣುವರ್ಧನಯುವರತ್ನ (ಚಲನಚಿತ್ರ)ಕಳಿಂಗ ಯುದ್ಧಬಾದಾಮಿ ಚಾಲುಕ್ಯರ ವಾಸ್ತುಶಿಲ್ಪರಾಘವಾಂಕಸ್ವಾತಂತ್ರ್ಯವ್ಯಾಸರಾಯರುಕರ್ನಾಟಕದ ಏಕೀಕರಣಭಾರತೀಯ ಧರ್ಮಗಳುಚುನಾವಣೆಹೂವುವಿಜಯ ಕರ್ನಾಟಕಕನ್ನಡದಲ್ಲಿ ಮಹಿಳಾ ಸಾಹಿತ್ಯಜೋಡು ನುಡಿಗಟ್ಟುಅಬುಲ್ ಕಲಾಂ ಆಜಾದ್ಮಗುಕನ್ನಡದಲ್ಲಿ ನವ್ಯಕಾವ್ಯರುಮಾಲುಶಿವಕುಮಾರ ಸ್ವಾಮಿಮಾಹಿತಿ ತಂತ್ರಜ್ಞಾನಕುರಿಚಂದ್ರಯಾನ-೨ಶ್ರೀನಿವಾಸ ರಾಮಾನುಜನ್ಅದಿಲಾಬಾದ್ ಜಿಲ್ಲೆಸುರಪುರದ ವೆಂಕಟಪ್ಪನಾಯಕಜೇನು ಹುಳುಏಷ್ಯಾ ಖಂಡಜವಹರ್ ನವೋದಯ ವಿದ್ಯಾಲಯಶೃಂಗೇರಿವಿನಾಯಕ ದಾಮೋದರ ಸಾವರ್ಕರ್ಜೀವಕೋಶಭಾರತದ ರಾಜಕೀಯ ಪಕ್ಷಗಳುಖೊಖೊಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಕೃತಕ ಬುದ್ಧಿಮತ್ತೆಗ್ರಹಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಮುಹಮ್ಮದ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುನರೇಂದ್ರ ಮೋದಿಅಂತಾರಾಷ್ಟ್ರೀಯ ಸಂಬಂಧಗಳುಅನಂತ್ ಕುಮಾರ್ ಹೆಗಡೆಬರವಣಿಗೆಕುಡಿಯುವ ನೀರುಒಡೆಯರ್ಜಾಗತಿಕ ತಾಪಮಾನಭಾರತೀಯ ಮೂಲಭೂತ ಹಕ್ಕುಗಳುದೂರದರ್ಶನವ್ಯಂಜನಸಾರ್ವಜನಿಕ ಹಣಕಾಸುರಮ್ಯಾಕರ್ನಾಟಕದ ಮಹಾನಗರಪಾಲಿಕೆಗಳುರಾಷ್ಟ್ರೀಯ ಸೇವಾ ಯೋಜನೆಪ್ರಾಚೀನ ಈಜಿಪ್ಟ್‌ರವೀಂದ್ರನಾಥ ಠಾಗೋರ್ಬುಧಆಂಡಯ್ಯಏರೋಬಿಕ್ ವ್ಯಾಯಾಮಪ್ರಬಂಧಭಾರತದಲ್ಲಿನ ಚುನಾವಣೆಗಳುದುರ್ಗಸಿಂಹ🡆 More