ಹಿಪಪಾಟಮಸ್

ಹಿಪಪಾಟಮಸ್ ಅಥವಾ ನೀರಾನೆ (ಹಿಪಪಾಟಮಸ್ ಆಂಫಿಬೀಯಸ್ ) ಅಥವಾ ಹಿಪ್ಪೊ , ಪುರಾತನ ಗ್ರೀಕ್ ನಲ್ಲಿ ನೀರ್ಗುದುರೆ (Ιπποπόταμος) ಎಂದಾಗುತ್ತದೆ, ಬಹುಶ: ಸಬ್-ಸಹರನ್ ಆಫ್ರೀಕಾದಲ್ಲಿ ಉಪಲಬ್ಧವಿರುವ ಹಿಪಪಾಟಮಿಡೇ ಕುಟುಂಬ ವರ್ಗದ ಎರಡು ದೊಡ್ಡ ಹರ್ಬಿವೋರಸ್ ಸಸ್ತನಿ, (ಮತ್ತೊಂದು ಪಿಗ್ಮಿ ಹಿಪಪಾಟಮಸ್ ಅಥವಾ ಕಿರು ನೀರ್ಗುದುರೆ.) ಆನೆಯ ನಂತರ ಭೂಮಿ ಮೇಲೆ ಕಾಣಸಿಗುವ ಎರಡನೆಯ ದೊಡ್ಡ ಪ್ರಾಣಿ ಹಿಪಪಾಟಮಸ್ ಮತ್ತು ಇದು ಉಪಲಬ್ಧವಿರುವ ಬಲವಾದ ಆರ್ಟಿಯೋಡ್ಯಾಕ್ಟಿಲ್, ಆದಾಗ್ಯೂ ಇದು ಜಿರಾಫೆಗಿಂತ ಚಿಕ್ಕ ಪ್ರಾಣಿಯೇ.

Hippopotamus/ ನೀರಾನೆ.
ಹಿಪಪಾಟಮಸ್
Hippopotamus, Hippopotamus amphibius
Conservation status
ಹಿಪಪಾಟಮಸ್
Vulnerable  (IUCN 3.1)
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
Mammalia
ಮೇಲ್ಗಣ:
Cetartiodactyla
ಗಣ:
Artiodactyla
ಕುಟುಂಬ:
Hippopotamidae
ಕುಲ:
Hippopotamus

Linnaeus, 1758
ಪ್ರಜಾತಿ:
H. amphibius
Binomial name
Hippopotamus amphibius
Linnaeus, 1758
ಹಿಪಪಾಟಮಸ್
Range map

ಹಿಪಪಾಟಮಸ್ ಅರೆ-ಜಲವಾಸಿ, ಸುಮಾರು 5 ರಿಂದ 30 ಹೆಣ್ಣು ಮತ್ತು ತಾರುಣ್ಯದ ಹಿಪಪಾಟಮಸ್‌ಗಳು ನದಿ ಮತ್ತು ಕೆರೆಗಳ ಬಳಿ ಬೀಡು ಬಿಟ್ಟಿರುತ್ತದೆ ಮತ್ತು ಆ ಪ್ರದೇಶಗಳಲ್ಲಿ ಗೂಳಿಗಳು ಅಧಿಪತ್ಯ ನಡೆಸುತ್ತಿರುತ್ತವೆ. ಹಗಲು ಹೊತ್ತು ನೀರು ಅಥವಾ ಮಣ್ಣಿನಲ್ಲಿ ಇರುತ್ತಾ ಅವು ಶಾಂತವಾಗಿರುತ್ತವೆ;ಸಂತಾನೋತ್ಪತ್ತಿ ಮತ್ತು ಪ್ರಸವ ಎರಡೂ ನೀರಿನಲ್ಲೇ ಸಂಭವಿಸುತ್ತದೆ. ಮುಚ್ಚಂಜೆಯಲ್ಲಿ ಹುಲ್ಲು ಮೇಯುವುದಕ್ಕೆ ಹೊರಬರುತ್ತವೆ. ವಿಶ್ರಾಂತಿ ತೆಗೆದು ಕೊಳ್ಳುತ್ತಿರಬೇಕಾದರೆ ಮಾತ್ರ ಹಿಪಪಾಟಮಸ್‌ಗಳು ಒಂದಕ್ಕೊಂದು ಸೇರಿ ಗುಂಪು ಮಾಡಿಕೊಂಡಿರುತ್ತವೆ ಆದರೆ ಮೇಯುವಾಗ ಮಾತ್ರ ಅವು ಒಂಟಿಯಾಗಿ ಮೇಯಲು ಹೋಗಿಬಿಡುತ್ತವೆ ಮತ್ತು ಅವು ಒಂದು ಪ್ರದೇಶಕ್ಕೆ ನಿಷ್ಕೃಷ್ಟವಾಗಿ ಸೀಮಿತವಾಗಿರುವುದಿಲ್ಲ.

ಹಂದಿಗಳ ಮತ್ತು ಭೂಮಂಡಲದ ಇತರ ಸಮನಾಂತರ ಕಾಲ್ಬೆರಳುಗಳ, ಗೊರಸುಳ್ಳ ಪ್ರಾಣಿಗಳ ಹೋಲಿಕೆಯಿದ್ದರೂ, ಯಾವ ಸಿಟಾಸಿಯಾನ್‌ಗಳು (ವ್ಹೇಲ್‌ಗಳು, ಪಾರ್ಪಾಯ್ಸ್‌ಗಳು, ಇತ್ಯಾದಿ.) ಗಳಿದ್ದಾವೋ ಅವು ಇವುಗಳ ಹತ್ತಿರದ ನೆಂಟರು.೫೫ million years ago. ವ್ಹೇಲ್ಸ್ ಮತ್ತು ಹಿಪ್ಪೋಗಳ ಪೂರ್ವಜ ಪ್ರಾಣಿ ಬೇರೆ ಇತರ ಸಮನಾಂತರ ಕಾಲ್ಬೆರಳುಗಳ ಹಾಗೂ ಗೊರಸುಳ್ಳ ಪ್ರಾಣಿಯಿಂದ ಬೇರ್ಪಟ್ಟಿರುವಂತಹುದು೬೦ million years ago.

ಹಿಪಾಪಟಮಸ್ ಪಳಿಯುಳಿಕೆಗಳು ಆಫ್ರೀಕಾದ ಜೀನಸ್ ಕಿನ್ಯಾಪಟಮಸ್  ಗೆ ಸೇರಿರುತ್ತದೆ ಮತ್ತು ಅದು ೧೬ million years ago ಕಾಲದಾಗಿರುತ್ತದೆ. 

ಹಿಪಾಪಟಮಸ್ ತನ್ನ ಪೀಪಾಯಿ ಆಕಾರದ ಮುಂಡ, ಅಗಾಧ ಗಾತ್ರದ ಬಾಯಿ ಮತ್ತು ಹಲ್ಲುಗಳು, ಹೆಚ್ಚು-ಕಡಿಮೆ ಕೂದಲೇ ಇಲ್ಲದ ಶರೀರ, ಮೋಟು ಮೋಟಾದ ಕಾಲುಗಳು ಮತ್ತು ಭಯಂಕರ ಗಾತ್ರದಿಂದಾಗಿ ಗುರುತಿಸಲ್ಪಡುತ್ತದೆ. ತೂಕದ ವಿಚಾರದಲ್ಲಿ ಇದು ಭೂಮಂಡಲದ ಮೂರನೆಯ ಅತೀ ದೊಡ್ದ ಸಸ್ತನಿ (1½ ಯಿಂದ 3 ಟನ್‌ಗಳು), ಎರಡನೆಯದೆಂದರೆ ಬಿಳಿ ರಿನೋಸಿರೋಸ್ (1½ ಯಿಂದ 3½ ಟನ್‌ಗಳು) ಮತ್ತು ಇವೆರಡೂ ಆನೆಯ ವರ್ಗದವು (3 ರಿಂದ 9 ಟನ್‌ಗಳು). ಅದಾಗ್ಯೂ ಅದರ ಗಿಡ್ಡ ಮತ್ತು ದಪ್ಪನಾಗಿರುವ ಕಾಲುಗಳಿಂದಾಗಿ ಅದು ಓಟದಲ್ಲಿ ಮನುಷ್ಯನನ್ನು ಮೀರಿಸುತ್ತದೆ. ಹಿಪ್ಪೋಗಳು ಅತ್ಯಲ್ಪ ದೂರವನ್ನು 30 km/h (19 mph) ನಲ್ಲಿ ಓಡುತ್ತವೆನ್ನಲಾಗಿದೆ. ಹಿಪಾಪಟಮಸ್ ಪ್ರಪಂಚದ ಅತೀ ದೊಡ್ದ ಆಕ್ರಮಣಕಾರಿ ಪ್ರಾಣಿ ಮತ್ತು ಆಫ್ರೀಕಾದಲ್ಲಿ ದೊರಕುವ ಅತ್ಯಂತ ಕ್ರೂರ ಪ್ರಾಣಿ ಎನ್ನಲಾಗಿದೆ.

ಸಬ್-ಸಹರನ್ ಆಫ್ರೀಕಾದುದ್ದಕ್ಕೂ ಇವುಗಳ ಸಂಖ್ಯೆ ಸುಮಾರು 125,000 ದಿಂದ 150,000ವರೆಗೂ ಎಂದು ಅಂದಾಜಿಸಲಾಗಿದೆ; ಜಾಂಬಿಯಾ (40,000) ಮತ್ತು ಟಾಂಜಾನಿಯಾ (20,000–30,000) ಈ ಅಂಕಿ ಅಂಶಗಳು ಹಿಪಾಪಟಮಸ್‌ಗಳ ಸಂಖ್ಯೆ ಅಧಿಕವೆಂದು ತೋರಿಸುತ್ತದೆ. ಆದರೂ ಅವುಗಳ ಮಾಂಸಕ್ಕೆ ಮತ್ತು ದಂತದ ದವಡೆ ಹಲ್ಲುಗಳಿಗೆ ಆಕ್ರಮಣಕಾರರಿಂದಾಗಿ ಅವುಗಳಿಗೆ ತಮ್ಮ ತವರುನೆಲವನ್ನು ಕಳೆದುಕೊಳ್ಳುವುದರ ಬಗ್ಗೆ ಭಯವಿದ್ದೇ ಇದೆ.

ಶಬ್ದವ್ಯುತ್ಪತ್ತಿ ಶಾಸ್ತ್ರ

ಪುರಾತನ ಗ್ರೀಕ್ἱππος πόταμιοςನಿಂದಾಗಿ "ಹಿಪಾಪಟಮಸ್ ಪದವು ಬಂದಿರುವುದಾಗಿರುತ್ತದೆ, ಹಿಪಾಪಟಮಸ್ , ಪದವು ἵππος, ಹಿಪ್ಪೋಸ್ , "ಕುದುರೆ", ಮತ್ತು ποταμός, ಪೊಟಾಮಸ್ , "ನದಿ", ಅಂದರೆ ಇದರ ಅರ್ಥವು "ನದಿನೀರಿನ ಕುದುರೆ" ಎಂದಾಗುತ್ತದೆ. ಇಂಗ್ಲೀಷಿನಲ್ಲಿ ಹಿಪಾಪಟಮಸ್‌ನ ಬಹುವಚನ ಹಿಪಾಪಟಮಸಸ್, ಆದರೆ ಹಿಪಾಪಟಮಿ ಎಂದೂ ಕೂಡ ಬಳಸಲಾಗುತ್ತದೆ; ಹಿಪ್ಪೋಸ್ ಎಂದು ಅಲ್ಪ ಬಹುವಚನವಾಗಿ ಕೂಡ ಬಳಸಬಹುದಾಗಿದೆ. ಹಿಪಾಪಟಮಸ್‌ಗಳು ಸಮೂಹವಾಸಿಗಳು, ಅವು ಸುಮಾರು 30 ಪ್ರಾಣಿಗಳು ಸೇರಿ ಒಂದು ಗುಂಪನ್ನು ಮಾಡಿಕೊಳ್ಳುತ್ತವೆ; ಅಂಥ ಒಂದು ಗುಂಪನ್ನು ಪಾಡ್, ಹರ್ಡ್, ಡೇಲ್ ಅಥವಾ ಬ್ಲೋಟ್ ಎಂದು ಕರೆಯುತ್ತಾರೆ. ಗಂಡು ಹಿಪಾಪಟಮಸ್ ಅನ್ನು ಗೂಳಿ ಎಂದು ಹೆಣ್ಣು ಹಿಪಾಪಟಮಸ್ ಅನ್ನು ಹಸು ಮತ್ತು ಅದರ ಕಂದನನ್ನು ಕಾಲ್ಫ್ ಎಂದು ಕರೆಯುತ್ತಾರೆ. ಈ ವರ್ಗವನ್ನು ಸಾಮಾನ್ಯ ಹಿಪಾಪಟಮಸ್ ಅಥವಾ ನೈಲ್ ಹಿಪಾಪಟಮಸ್ ಎಂದು ಕರೆಯಲಾಗುತ್ತದೆ.

ಜೀವ ವರ್ಗೀಕರಣ ಶಾಸ್ತ್ರ ಮತ್ತು ಉಗಮಗಳು

ವರ್ಗೀಕರಣ

ಹಿಪಾಪಟಮಿಡೇ ಕುಟುಂಬದ ಟೈಪ್ ಜೀನಸ್ ಗೆ ಸೇರಿರುವುದು ಹಿಪಾಪಟಮಸ್. ಹಿಪಾಪಟಮಿಡೇಯ ವಿವಿಧ ಜೀನಸ್‌ಗಳಿಗೆ ಪಿಗ್ಮೀ ಹಿಪಾಪಟಮಸ್ ಸೇರಿರುತ್ತದೆ, ಅದು ಚೋಯೀರೋಪ್ಸಿಸ್ ಅಥವಾ ಹೆಕ್ಸಾಪ್ರೋಟೋಡಾನ್ ಆಗಿರುತ್ತದೆ.

ಕೆಲವು ಸಲ ಹಿಪಾಪಟಮಿಡೇಯನ್ನು ಹಿಪಾಪಟಮಿಡ್ಸ್ ಎಂದು ಕರೆಯಲಾಗುತ್ತದೆ. ಕೆಲವು ಸಲ ಉಪ-ವರ್ಗವಾಗಿ ಹಿಪಾಪಟಮಿನೇಯ್ ಎಂಬ ಶಬ್ದವನ್ನೂ ಸಹ ಬಳಸಲಾಗುತ್ತದೆ. ಇನ್ನೂ ಮುಂದೆ, ಜೀವ ವರ್ಗೀಕರಣ ವಿಜ್ಞಾನಿಗಳು ಅಂತ್ರಾಕೊಥೀರಾಯ್ಡೀಯಾ ಅಥವಾ ಹಿಪಾಪಟಮಾಯ್ಡೀಯಾ ದ ಸೂಪರ್-ಕುಟುಂಬದ ಗುಂಪಿಗೆ ಹಿಪಾಪಟಮಸ್ ಮತ್ತು ಅಂತ್ರಾಕೋಥೀರಸ್ ಅನ್ನು ಸೇರಿಸಿರುತ್ತಾರೆ.

ಹಿಪಪಾಟಮಸ್ 
ಹಿಪ್ಪೋನ ತಲೆಬುರುಡೆ, ಕಾಳಗಕ್ಕೆ ಬಳಸುವ ಕೋರೆ ಹಲ್ಲನ್ನು ಪ್ರದರ್ಶಿಸಿತ್ತಿದೆ

ಬೇರೆ ಇತರ ಸಮತಟ್ಟಾದ-ಕಾಲ್ಬೆರಳುಗಳ ಗೊರಸುಳ್ಳ ಆರ್ಟೀಯೋಡ್ಯಾಕ್ಟಿಲ್ಲಾ ಕ್ರಮಕ್ಕೆ ಹಿಪಾಪಟಮಿಡೇ ಅನ್ನು ವರ್ಗೀಕರಿಸಲಾಗಿದೆ. ಇತರ ಆರ್ಟೀಯೋಡ್ಯಾಕ್ಟೈಲ್ಸ್ ಗಳೆಂದರೆ ಒಂಟೆಗಳು, ಹಸುಗಳು, ಜಿಂಕೆ ಮತ್ತು ಹಂದಿಗಳು, ಏನೇ ಆದರೂ ಹಿಪಾಪಟಮಸಸ್ ಇವುಗಳ ಹತ್ತಿರಕ್ಕೆ ಸಂಬಂದಿಸಿಲ್ಲ.

ಹಿಪೋಸ್‌ನ ಐದು ಉಪವರ್ಗಗಳನ್ನು ಅವುಗಳ ತಲೆಬುರುಡೆಯ ಆಕೃತಿ ವಿಜ್ಞಾನದ ವ್ಯತ್ಯಾಸಗಳಿಂದ ಮತ್ತು ಭೌಗೋಳಿಕ ವ್ಯತ್ಯಾಸಗಳಿಂದ ವಿವರಿಸಲಾಗಿದೆ.

  • H. a. ಆಂಫೀಬೀಯಸ್ – (ನಾಮಕರಣಗೊಂಡಿಗಿರುವ ಉಪವರ್ಗ) ಇವು ಈಜ್ಯಿಪ್ಟ್ ಆದ್ಯಂತ ಹರಡಿದ್ದು, ಈಗ ಅದು ಗತಿಸಿರುತ್ತದೆ, ದಕ್ಷಿಣದುದ್ದಕ್ಕೂ ನೈಲ್ ನದಿ ಯಿಂದ ಟಾನ್ಜಾನೀಯಾ ಮತ್ತು ಮೊಜಾಂಬಿಕ್ ವರೆಗೂ ಹರಡಿರುತ್ತದೆ.
  • H. a. ಕಿಬೋಕೊ – ಆಫ್ರೀಕಾದ ಕೊಂಬಿನಾಕಾರದ ಭೂಶಿರದಲ್ಲಿ, ಕೀನ್ಯಾದಲ್ಲಿ ಮತ್ತು ಸೋಮಾಲಿಯಾದಲ್ಲಿ. ಕಿಬೊಕೊ ಎನ್ನುವುದು ಹಿಪ್ಪೋನ ಸ್ವಾಹಿಲ್ಲಿ ಪದ. ವಿಶಾಲವಾದ ಮೂಗು ಮತ್ತು ಹೆಚ್ಚು ಕುಳಿಯಿರುವ ಅಂತರ್ ಕುಳಿಯ ಪ್ರದೇಶ.
  • H. a. ಕ್ಯಾಪೆನ್ಸಿಸ್ಜಾಂಬಿಯಾ ದಿಂದ ದಕ್ಷಿಣ ಆಫ್ರೀಕಾದ ವರೆಗೂ. ಅತೀ ಚಪ್ಪಟೆ ತಲೆಬುರುಡೆಯ ಉಪವರ್ಗ.
  • H. a. ಚಾಡೆನ್ಸಿಸ್ – ಪಶ್ಚಿಮ ಆಫ್ರೀಕಾದ್ಯಂತ, ಹೆಸರೇ ಸೂಚಿಸುವಂತೆ ಚಡ್. ಸ್ವಲ್ಪ ಚಿಕ್ಕದಾದ ಮತ್ತು ಅಗಲವಾದ ಮುಖ ಮತ್ತು ಅವಕ್ಕೆ ಗಮನ ಸೆಳೆವ ಕಣ್ಣುಗುಳಿ.
  • H. a. ಕನ್ಸ್ಟ್ರ‍ಿಕ್ಟಸ್ಅಂಗೋಲಾದಲ್ಲಿ, ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ನಮೀಬಿಯಾದ ದಕ್ಷಿಣದಲ್ಲಿ. ಅವುಗಳ ಆಳವಾದ ಕಣ್ಣುಗುಳಿಯ ಕಿರಿದಾಗಿಸುವಿಕೆಯಿಂದಾಗಿ ಅದನ್ನು ಹಾಗೆಯೇ ಹೆಸರಿಸಲಾಗಿದೆ.

ಸೂಚಿತ ಉಪವರ್ಗವನ್ನು ವ್ಯಾಪಕವಾಗಿ ಬಳಸಿಲ್ಲ ಅಥವಾ ಫೀಳ್ಡ್ ಬಯಲಾಜಿಸ್ಟ್‌ಗಳು ಅದನ್ನು ಕ್ರಮಬದ್ಧಗೊಳಿಸಿಲ್ಲ; ವಿವರಿಸಲ್ಪಟ್ಟ ಆಕೃತಿ ವಿಜ್ಞಾನದ ವ್ಯತ್ಯಾಸಗಳು, ಪ್ರಾತಿನಿಧಿಕವಲ್ಲದ ನಮೂನೆಯಲ್ಲಿ ಗುರುತಿಸಲ್ಪಡುವುದಕ್ಕೆ ಅತೀ ಚಿಕ್ಕದಾಗಿ ಬಿಡುತ್ತಿದ್ದವು. ಅನುವಂಶಿಕ ವ್ಯಾಖ್ಯಾನಗಳು ನಂಬಲ್ಪಟ್ಟ ಮೂರು ಉಪವರ್ಗಗಳ ಅಸ್ತಿತ್ವವನ್ನು ಪರೀಕ್ಷಿಸಿದೆ. ಚರ್ಮದ ಬಯಾಪ್ಸಿಗಾಗಿ 13 ನಮೂನೆಗಳನ್ನು ತೆಗೆದುಕೊಂಡು ಮಿಟೋಕಾಂಡ್ರೀಯಲ್ DNA ಅಧ್ಯಯನವನ್ನು ಕೈಗೊಂಡಾಗ, ಭೂಖಂಡದಾದ್ಯಂತ ಹಿಪ್ಪೋ ಗಣತಿಯಲ್ಲಿ ಅನುವಂಶಿಕ ವಿವಿಧತೆಯನ್ನು ಮತ್ತು ರಚನೆಯನ್ನು ಒಪ್ಪಿಕೊಂಡಿತು. ಚಿಕ್ಕದಾದರೂ ಪ್ರಾಮುಖ್ಯವಾದ ವ್ಯತ್ಯಾಸಗಳನ್ನು ಲೇಖಕರು H. a. ಆಂಫೀಬೀಯಸ್ , H. a. ಕ್ಯಾಪೆನ್ಸಿಸ್ , ಮತ್ತು H. a. ಕಿಬೋಕೊ ನಡುವೆ ಗುರುತಿಸಿದರು. H.a.ಚಾಡೆನ್ಸಿಸ್ ಆಗಲಿ ಅಥವಾ H.a.ಕನ್ಸ್ಟ್ರಿಕ್ಟಸ್ ಆಗಲಿ ಪರೀಕ್ಷೆಗೆ ಒಳಪಟ್ಟಿಲ್ಲ.

ವಿಕಾಸ

ದವಡೆಯ ಹಲ್ಲುಗಳ ವಿನ್ಯಾಸಕ್ಕನುಗುಣವಾಗಿ ಪ್ರಕೃತಿ ಶಾಸ್ತ್ರಜ್ಞ ರು 1985ರ ವರೆಗೂ ಹಿಪ್ಪೋಗಳನ್ನು ಹಂದಿಗಳ ಪಂಗಡದ ಜೊತೆಗೆ ಸೇರಿಸುತ್ತಿದ್ದರು. ಆದಾಗ್ಯೂ, ಅನೇಕ ಸಾಕ್ಷ್ಯಾಧಾರಗಳು, ಮೊದಲಿಗೆ ರಕ್ತದ ಪ್ರೋಟೀನ್ ಗಳಿಂದ, ಆನಂತರ ಮೊಲಿಕ್ಯೂಲಾರ್ ಸಿಸ್ಟಮಾಟಿಕ್ಸ್ ಮತ್ತು DNA ಮತ್ತು ಪಳಿಯುಳಿಕೆಯ ಎಲುಬುಗಳ ದಾಖಲೆ ಯಿಂದ ಅವು ಸಿಟಾಸೀಯನ್ ಗಳಾದ ವ್ಹೇಲ್ಸ್ ಗಳು, ಪಾರ್ಪಾಯ್ಸ್ ಗಳಿಗೆ ಹತ್ತಿರದ ನಂಟಿದೆ ಎಂದು ತೋರಿಸುತ್ತದೆ ಹಿಪ್ಪೋವಿನ ಮತ್ತು ವ್ಹೇಲ್ಸ್‌ನ್ ಸಾಮಾನ್ಯ ಪೂರ್ವಜ ಪ್ರಾಣಿ ರುಮಿನಾನ್ಟೀಯಾ ಮತ್ತು ಇತರ ಸಮತಟ್ಟು ಕಾಲ್ಬೆರಳಿನ ಹಾಗೂ ಗೊರಸುಳ್ಳ ಪ್ರಾಣಿಗಳಿಂದ ಕವಲೊಡೆಯಿತು; ಸಿಟಾಸೀಯನ್ ಮತ್ತು ಹಿಪ್ಪೋ ತಳಿಗಳು ಆನಂತರ ಅತಿ ಶೀಘ್ರದಲ್ಲಿ ಬೇರ್ಪಟ್ಟವು.

ಇತ್ತೀಚಿನ ಒಂದು ಅಧ್ಯಯನದ ಪ್ರಕಾರ, ಹಿಪಪಾಟಮಿಡೇ ಮೂಲವು ಸೂಚಿಸುವುದೇನೆಂದರೆ ಹಿಪ್ಪೋ ಮತ್ತು ವ್ಹೇಲ್ಸ್ ಅರೆ-ಜಲರಾಶಿ ಪೂರ್ವಜ ಪ್ರಾಣಿಯನ್ನು ಹೊಂದಿತ್ತು ಎಂಬುದು ಮತ್ತು ಅದು ತನ್ನ ಸುತ್ತ-ಮುತ್ತಲಿನ ಆರ್ಟೀಯೋಡಕ್ಟೈಲ್ಸ್ ನಿಂದ ಕವಲೊಡೆಯಿತು ಎಂಬುದು೬೦ million years ago.

ಈ ಕಲ್ಪನೆಯ ಪ್ರಕಾರ ಪೂರ್ವಜ ಪ್ರಾಣಿಯ ಗುಂಪು ಬಹುಶ: ಎರಡು ಗುಂಪುಗಳಾಗಿ ಟಿಸಿಲೊಡೆಯಿತು ತನ್ನ ಸುತ್ತ-ಮುತ್ತಲು ೫೪ million years ago. ಟಿಸಿಲೊಡೆದ ಒಂದು ಗುಂಪು ಸಿಟಾಸೀಯನ್ಸ್ ಗಳಾಗಿ ವಿಕಸನ ಹೊಂದಿತು, ಸಂಭವನೀಯವಾಗಿ ೫೨ million years ago ಪ್ರೋಟೋ-ವ್ಹೇಲ್ ಪಾಕೀಸಿಟಸ್ ಜೊತೆಯಾಗಿ ಮತ್ತು ಇತರ ವ್ಹೇಲ್ ಪೂರ್ವಜ ಪ್ರಾಣಿಗಳನ್ನು ಸಮಗ್ರವಾಗಿ ಆರ್ಕೀಯೋಸಿಟಿ ಎಂದು ಕರೆಯಲಾಗುತ್ತದೆ, ಅಂತಿಮವಾಗಿ ಸಂಪೂರ್ಣ ಜಲಜೀವಿ ಸಿಟಾಸೀಯನ್ಸ್ ನೊಳಗೆ ಜಲಜೀವಿಯಾಗಿ ಮಾರ್ಪಾಡುವಿಕೆ ಗೆ ಒಳಪಟ್ಟವು.

ಹಿಪಪಾಟಮಸ್ 
ಆಂಥ್ರಾಕೋಥೆರೀಯಂ ಮ್ಯಾಗ್ನಸ್ ಮತ್ತು ಎಲ್ಲೋಮೆರಿಕ್ಸ್ ಆರ್ಮಾಟಸ್, ಒಲೀಗೋಸೀನ್ ಕಾಲದ ಎರಡು ಆಂಥ್ರಾಕೋಥೆರೆಸ್, ಈಗಾಗಲೇ ಆಧುನಿಕ ಹಿಪಪಾಟಮಸ್‌ಗಳ ಹೋಲಿಕೆ ಹೊಂದಿದೆ.

ಇನ್ನೊಂದು ಟಿಸಿಲೊಡೆದದ್ದು ಆಂಥ್ರಾಕೋಥರಿಸ್ ಆಯಿತು, ಇದು ನಾಲ್ಕು ಕಾಲುಗಳ ರಾಸುಗಳು, ಈಯೋಸೀನ್ ಕಾಲದ ತದನಂತರ ಪ್ರಾರಂಭದಲ್ಲಿ ಕಂಡು ಬಂದ ರಾಸುಗಳು ತೀರಾ ತೆಳ್ಳನೆಯ ಆದರೆ ಸಣ್ಣ ಮತ್ತು ಕಡಿಮೆ ಅಗಲದ ತಲೆಯುಳ್ಳ ಹಿಪಪಾಟಮಸ್‌ಗಳಿಗೆ ಹೋಲಿಕೆಯಾಗಿರ ಬಹುದು. ಎಲ್ಲಾ ಟಿಸಿಲೊಡೆದ ಆಂಥ್ರಾಕೋಥರಿಸ್‌ಗಳು ಹಿಪಪಾಟಮಿಡೇಗಳನ್ನು ಹೊರತು ಪಡಿಸಿ ಪ್ಲಿಯೋಸನ್ ಅವಧಿಯಲ್ಲಿ ಯಾವ ಒಂದು ಸಂತತಿಯೂ ಇಲ್ಲದೆ ಗತಿಸಿದವು.

ಏನೇ ಆಗಲಿ ಒಂದು ಅಂದಾಜು ವಿಕಸನವನ್ನು ಈಯೋಸನ್ ಮತ್ತು ಒಲೀಗೋಸನ್ ಜಾತಿಗಳಿಂದ ಗುರುತಿಸಬಹುದು: ಮಯೋಸನ್ ಮೆರಿಕೊಪಟಮಸ್ ಮತ್ತು ಲಿಬಿಕೋಸಾರಸ್ ಗಳಾಗಿ ಆಂಥ್ರಾಕೋಥೆರೀಯಂ ಮತ್ತು ಎಲೋಮೆರಿಕ್ಸ್ ಹಾಗೂ ತೀರಾ ಇತ್ತೀಚೆಗೆ ಪ್ಲೀಯಸನ್ ನಲ್ಲಿ ಆಂಥ್ರಾಕೋಥರೆಸ್.

ಮೆರಿಕೊಪಟಮಸ್ , ಲಿಬಿಕೊಸರಸ್ ಮತ್ತು ಎಲ್ಲಾ ಹಿಪಾಪಟಮಿಡ್ಸ್ ಅನ್ನು ಕ್ಲೇಡ್ ಎಂದು ಒಪ್ಪಿಕೊಳ್ಳಬಹುದು, ಅದರಲ್ಲಿ ಲಿಬಿಕೊಸರಸ್ ಅನ್ನು ಹಿಪ್ಪೋಗೆ ಹೆಚ್ಚು ಹತ್ತಿರದ ಸಂಬಂದ ವೆಂದೂ ಒಪ್ಪಿಕೊಳ್ಳಬಹುದು. ಅದರ ಸಾಮಾನ್ಯ ಪೂರ್ವಜ ಪ್ರಾಣಿಯು ಸುಮಾರು ೨೦ million years ago ನಲ್ಲಿ ಮಯಸೀನ್‌ನಲ್ಲಿ ಇದ್ದಿರಬಹುದು.

ಆದುದರಿಂದಲ್ಲ ಹಿಪಾಪಟಮಿಡ್ಸ್ ಅನ್ನು ಆಳವಾಗಿ ಆಂಥ್ರಾಕೋಥರೀಡೇ ಕುಟುಂಬದೊಳಗೆ ಅಡಕಿಸಲಾಗಿದೆ. ಹಿಪಾಪಟಮಿಡೇ ಆಫ್ರೀಕಾದಲ್ಲಿ ವಿಕಸನಗೊಂಡಿರುವುದಾಗಿ ನಂಬಲಾಗಿದೆ; ಅತ್ಯಂತ ಹಳೆಯ ಎಂದು ಗುರುತಿಸಲ್ಪಡುವ ಹಿಪಾಪಟಮಿಡ್ ಆಫ್ರೀಕಾದಲ್ಲಿ 16 ರಿಂದ million years ago ರವರೆಗೂ ಇದ್ದ ಕೆನ್ಯಾಪಟಮಸ್ ಜೀನಸ್ ಎನ್ನಲಾಗಿದೆ. ಪೂರ್ವದ ಒಲಿಗೋಸನ್ ಅವಧಿಯಲ್ಲಿ ಉತ್ತರ ಅಮೇರಿಕಾಗೆ ವಿವಿಧ ಆಂಥ್ರಾಕೋಥೆರ್ ವಲಸೆ ಹೋಗಿದ್ದರೂ ಯಾವುದೇ ಹಿಪಪಾಟಮಸ್‌ಗಳು ಅಮೇರಿಕಾದಲ್ಲಿ ಕಂಡು ಬಂದಿರುವುದಿಲ್ಲ, ಆದರೆ ಹಿಪಪಾಟಮಿಡ್ ವರ್ಗದವು ಏಷಿಯಾ ಮತ್ತು ಯೂರೋಪ್ ಗಳಲ್ಲಿ ಹರಡಿರುತ್ತದೆ. 7.5 ನಿಂದ ೧.೮ million years agoವರೆಗೂ ಆಧುನಿಕ ಹಿಪಾಪಟಮಸ್‌ನ ಪೂರ್ವಜ ಪ್ರಾಣಿ, ಆರ್ಕೀಯೋಪಟಮಸ್ ಒಂದು, ಆಫ್ರೀಕಾ ಮತ್ತು ಮಧ್ಯ ಪ್ರಾಚ್ಯದಲ್ಲಿ ವಾಸವಾಗಿತ್ತು.

ಹಿಪ್ಪೋಗಳ ಪಳಿಯುಳಿಕೆಯನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಂಡಿಲ್ಲ, ಎರಡು ಆಧುನಿಕ ಜನರಾ ಹಿಪಪಾಟಮಸ್ ಮತ್ತು ಕೊಯ್ರೋಪ್ಸಿಸ್ (ಕೆಲವೊಮ್ಮೆ ಹೆಕ್ಸಾಪ್ರೋಟೋಡಾನ್ ಎಂದು ಕರೆಯುವುದುಂಟು) ಇವು million years ago ರಷ್ಟು ಕಾಲದ ಹಿಂದೆಯೇ ಚದುರಿ ಹೋಗಿರುವ ಸಾಧ್ಯತೆಗಳಿವೆ. ಜೀವವರ್ಗೀಕರಣ ವಿಜ್ಞಾನಿಗಳು ಆಧುನಿಕ ಪಿಗ್ಮಿ ಹಿಪಪಾಟಮಸ್ ಎಂಬುದು ಹೆಕ್ಸಾಪ್ರೋಟಾಡನ್ ನ ಸದಸ್ಯ ವರ್ಗ ಎಂಬುದನ್ನು ಒಪ್ಪುವುದಿಲ್ಲ, ಪ್ಯಾರಾಫಯ್ಲೆಟಿಕ್ ನಂಂಥ ಕಂಡು ಬರುವ ಇದು ಗತಿಸಿದ ಏಷಿಯಾದ ಹಿಪಪಾಟಮಸ್ ಅನ್ನು ಅಪ್ಪಿಕೊಳ್ಳುತ್ತದೆ ಮತ್ತು ಅದು ಹಳೆಯ ಹಾಗೂ ಬಸಲ್ ಜೀನಸ್ ಆದ ಹಿಪಪಾಟಮಸ್ , ಅಥವಾ ಕೊಯ್ರೋಪ್ಸಿಸ್ ಗೆ ಹತ್ತಿರದ ನಂಟಿದೆ.

ಗತಿಸಿದ ಏಕ ರೀತಿಯ ಜೀವವರ್ಗ

ಹಿಪಪಾಟಮಸ್ 
ಅಸಾಧಾರಣವಾಗಿ ದೊಡ್ಡ ಚಲನಾ ಪಥ ಹೊಂದಿರುವ ಹಿಪಪಾಟಮಸ್ ಗಾರ್ಗಾಪ್ಸ್, ಯೂರೋಪ್‌ನಲ್ಲಿ ಜೀವಿಸುತ್ತಿದ್ದವು, ಐಸ್ ಯುಗಕ್ಕೆ ಮೊದಲೆ ಗತಿಸಿದವು.

ಮಲಾಗೇಸಿ ಹಿಪಾಪಟಮಸ್ ನ ಮೂರು ಏಕ ರೀತಿ ಜೀವ ವರ್ಗ ಮದಗಾಸ್ಕರ್ನಲ್ಲಿ ಹೋಲೋಸೀನ್ ನ ಕಾಲಾವಧಿಯಲ್ಲಿ ಗತಿಸಿತು,ಅದರಲ್ಲಿ ಒಂದು ಕಳೆದ 1,000 ವರ್ಷಗಳ ಹಿಂದೆ ಗತಿಸಿತು. ಮಲಾಗೇಸಿ ಹಿಪ್ಪೋಸ್ ಅಧುನಿಕ ಹಿಪಾಪಟಮಸ್‌ಗಿಂತ ಸಣ್ಣವು, ಇನ್‌ಸ್ಯೂಲಾರ್ ಡ್ವಾರ್ಫಿಸಂ ನ ಪ್ರಕ್ರಿಯೆಯಂಥವು. ಪಳಿಯುಳಿಕೆಗಳ ಸಾಕ್ಷ್ಯಾಧಾರದಂತೆ ಅನೇಕ ಮಲಾಗೇಸಿ ಹಿಪ್ಪೋಗಳನ್ನು ಮನುಷ್ಯ ಭೇಟೆ ಆಡಿರುತ್ತಾನೆ,ಅವುಗಳು ಗತಿಸುವುದಕ್ಕೆ ಇದೂ ಒಂದು ಕಾರಣವೆನ್ನಬಹುದು. ಅಭುಕ್ತ ಮೂಲೆಯ ಸ್ಥಳಗಳಲ್ಲಿ ಮಲಾಗೇಸಿ ಹಿಪಾಪಟಮಸ್‌ನ ಕೆಲ ಸದಸ್ಯ ಪ್ರಾಣಿಗಳು ಉಳಿದುಕೊಂಡಿರಬಹುದು; 1976ರಲ್ಲಿ ಹಳ್ಳಿಗರು ವಿವರಿಸಿದ ಕಿಲೋಪಿಲೋಪಿಟ್ಸಾಫಿ ಎಂಬ ಪ್ರಾಣಿಯೊಂದು ಮಲಾಗೇಸಿ ಹಿಪಾಪಟಮಸ್ ಆಗಿರಬಹುದಾಗಿದೆ.

ಯೂರೋಪ್ ಭೂಖಂಡ ಮತ್ತು ಬ್ರಿಟಿಷ್ ದ್ವೀಪದುದ್ದಕ್ಕೂ ಹರಡಿರುವ ಹಿಪಾಪಟಮಸ್‌ಗಳ ಎರಡು ಪ್ರತ್ಯೇಕ ಜೀವ ರಾಶಿಗಳೆಂದರೆ ಯೂರೋಪಿಯನ್ ಹಿಪಾಪಟಮಸ್ (H. ಆಂಟೀಕೂಸ್ ) ಮತ್ತು H. ಗಾರ್ಗೊಪ್ಸ್

ಆ ಎರಡೂ ಜೀವಿಗಳು ಕೊನೆಯ ಹಿಮಾಚ್ಛಾದಿತವಾಗುವ ಮೊದಲೇ ಗತಿಸಿದವು. ಯೂರೋಪಿಯನ್ ಹಿಪ್ಪೋಗಳ ಪೂರ್ವಜ ಪ್ರಾಣಿಗಳು ಮೆಡಿಟರ್ರೇನೀಯನ್ ದ್ವೀಪಗಳ ದಾರಿಯನ್ನು ಪ್ಲೀಸ್ಟೋಸೀನ್ ಕಾಲಾವಧಿಯಲ್ಲಿ ಕಂಡುಕೊಂಡವು. ಎರಡೂ ಪ್ರಾಣಿಗಳು ಆಧುನಿಕ ಹಿಪಪಾಟಮಸ್‌ಗಿಂತ ದೊಡ್ದದಿದ್ದವು, ಅವು ಸುಮಾರು 1 ಮೀಟರ್ (3.3 ಅಡಿ) ಉದ್ದವಾಗಿದ್ದವು.

ಪ್ಲೆಸ್ಟೋಸೀನ್ ಕಾಲಾವಧಿಯಲ್ಲಿ ಅನೇಕ ಮೆಡಿಟರ್ರೇನಿಯನ್ ದ್ವೀಪಗಳಾದ ಕ್ರೀಟ್ (H. ಕ್ರೆಟ್ಜಬುರ್ಗಿ ), ಸಿಪ್ರಸ್ (H. ಮೈನರ್ ), ಮಾಳ್ಟ (H. ಮೆಲಿಟೆನ್ಸಿಸ್ ) ಮತ್ತು ಸಿಸಿಲಿ (H. ಪೆಂಟ್ಲಾಂಡಿ ) ಮುಂತಾದವುಗಳಲ್ಲಿ ಅನೇಕ ಕುಬ್ಜ ಜೀವಿಗಳು ವಿಕಸನಗೊಂಡಿವೆ.

ಇವುಗಳಲ್ಲಿ ಸಿಪ್ರಸ್ ಡ್ವಾರ್ಫ್ ಹಿಪಾಪಟಮಸ್ ಪ್ಲೆಸ್ಟೋಸೀನ್ ನ ಅಂತಿಮ ಕಾಲಘಟ್ಟದಲ್ಲಿ ಅಥವಾ ಹೋಲೋಸೀನ್ ನ ಆರಂಭಿಕ ಕಾಲದವರೆಗೂ ಉಳಿದುಕೊಂಡಿದ್ದವು. ಆಯೀಟೋಕ್ರೆಮ್ನಾಸ್ ಸೈಟ್‌ನ ಪುರಾತತ್ವ ಸಾಕ್ಷ್ಯಾಧಾರದ ಪ್ರಕಾರ ಈ ಜೀವಿಗಳನ್ನು ಮನುಷ್ಯ ಅಂತ್ಯ ಕಾಣಿಸಿದನಾ ಎಂಬ ಪ್ರಶ್ನೆ ಚರ್ಚಾಸ್ಪದವಾಗಿಯೇ ಇನ್ನೂ ಉಳಿಯುತ್ತದೆ.

ಚಿತ್ರಣ

ಹಿಪಪಾಟಮಸ್ 
ಲಿಸ್ಬಾನ್‌ನ ಮೃಗಾಲಯದಲ್ಲಿ ಹಿಪ್ಪೋ
ಹಿಪಪಾಟಮಸ್ 
ಹಿಪಪಾಟಮಸ್ ಎಲುಬಿನ ಚಿತ್ರ
ಹಿಪಪಾಟಮಸ್ 
ಹಿಪಪಾಟಮಸ್ ಬಾಯಿಯ ಒಳಗೆ

ವಿಶ್ವದಲ್ಲಿ ವ್ಹೇಲ್ಸ್ ಮತ್ತು ಆನೆಗಳ ನಂತರ ಹಿಪಾಪಟಮಸಸ್‌ಗಳು ಮೂರನೆಯ ಅತೀ ದೊಡ್ದ ಸಸ್ತನಿ. ಅವು ನೀರಿನಲ್ಲಿ ಜೀವಿಸಬಲ್ಲವು ಹಾಗೆಯೇ ನೆಲದ ಮೇಲೆ ನಡೆದಾಡಬಲ್ಲವು. ಅವುಗಳ ವಿಶಿಷ್ಟ ಗುರುತ್ವದಿಂದಾಗಿ ಅವುಗಳು ನದಿಯ ನೀರಿನಲ್ಲಿ ಕುಸಿಯಬಲ್ಲದು, ತಳದಲ್ಲಿ ನಡೆದಾಡ ಬಲ್ಲವು ಅಥವಾ ಓಡಬಲ್ಲವು. ಹಿಪ್ಪೋಗಳು ಮೆಗಾಫೌನಾ ಎಂದು ಒಪ್ಪಿಕೊಳ್ಳಲಾಗತ್ತದೆ, ಆದರೆ ಇವು ಆಫ್ರೀಕನ್ ಮೆಗಾಫೌನಾದಂಥಲ್ಲ ಇವು ಶುಭ್ರವಾದ ಕೆರೆಯ ನೀರು ಹಾಗೂ ನದಿಗಳಲ್ಲಿ ಅನುಗೊಳಿಸಿದ ಅರೆ-ಜಲಜೀವಿಗಳು.

ಹಿಪಪಾಟಮಸಸ್‌ಗಳ ಅಗಾಧ ಗಾತ್ರದಿಂದಾಗಿ ಕಾಡಿನಲ್ಲಿ ಅವುಗಳನ್ನು ತೂಕ ಮಾಡಲು ಕಷ್ಟವಾಗುತ್ತದೆ. ಇವುಗಳ ತೂಕದ ಅಂದಾಜು ಸಿಕ್ಕಿರುವುದು 1960ರಲ್ಲಿ ಕೈಗೊಂಡ ಕುಯ್ಯುವ ಕಾರ್ಯಾಚಾರಣೆಗಳಿಂದ. ವಯಸ್ಕ ಗಂಡು ಪ್ರಾಣಿಯ ಸರಾಸರಿ ತೂಕವು 1,500–1,800 kg (3,300–4,000 lb) ನಿಂದ ಇರುತ್ತದೆ. ತಮ್ಮ ಗಂಡು ಪ್ರಾಣಿಗಳಿಗಿಂತ ಹೆಣ್ಣು ಪ್ರಾಣಿಗಳು ಕಡಿಮೆ ತೂಕವುಳ್ಳವು, ಅವುಗಳ ಸರಾಸರಿ ತೂಕವು 1,300–1,500 kg (2,900–3,300 lb)ನಷ್ಟು ಇರುತ್ತದೆ. ಗಂಡು ಪ್ರಾಣಿಗಳು ವಯಸ್ಸಾದಂತೆಲ್ಲಾ ತೂಕ ಹೆಚ್ಚಿಸಿಕೊಳ್ಳುತ್ತವೆ, ಅವುಗಳು 3,200 kg (7,100 lb) ನಷ್ಟು ತೂಕ ಹೆಚ್ಚಿಸಿಕೊಳ್ಳುತ್ತವೆ ಮತ್ತು ಅಪರೂಪಕ್ಕೆ 4,500 kg (9,900 lb) ನಷ್ಟು ತೂಕವನ್ನು ಪಡೆಯುತ್ತವೆ. ಗಂಡು ಹಿಪ್ಪೋಗಳು ಜೀವಿತದುದ್ದಕ್ಕೂ ಬೆಳೆಯುತ್ತಲ್ಲೇ ಇರುತ್ತವೆ ಆದರೆ ಹೆಣ್ಣು ಪ್ರಾಣಿಗಳು ಮಾತ್ರ ತಮ್ಮ 25 ವರ್ಷದ ವಯಸ್ಸಿಗೆ ತಮ್ಮ ಗರಿಷ್ಠ ತೂಕವನ್ನು ಪಡೆದುಕೊಳ್ಳುತ್ತವೆ.

ದೂರದರ್ಶನದ ನ್ಯಾಷನಲ್ ಜೀಯೋಗ್ರಾಫಿಕ್ ಚಾನಲ್ ನ "ಡೇಂಜರಸ್ ಎನ್ ಕೌಂಟರ್ಸ್ ವಿಥ್ ಬ್ರಾಡಿ ಬಾರ್ರ್", ಕಾರ್ಯಕ್ರಮದಲ್ಲಿ ಡಾ.ಬ್ರಾಡಿ ಬಾರ್ರ್ ವಯಸ್ಕ ಹೆಣ್ಣು ಹಿಪ್ಪೋನ ಬೈಟ್ ಪ್ರೆಶರನ್ನು ಅಳೆದಾಗ ಅದು 1,821 lb (826 kg) ನಷ್ಟಿರುತ್ತದೆ; ಬಾರ್ರ್ ಅದನ್ನೇ ವಯಸ್ಕ ಗಂಡು ಹಿಪ್ಪೋಗೆ ಅಳೆಯಲು ಪ್ರಯತ್ನಿಸಿದಾಗ ಅವರು ಅರ್ಧಕ್ಕೇ ನಿಲ್ಲಿಸಬೇಕಾಯಿತು ಕಾರಣ ಆ ಗಂಡು ವಯಸ್ಕ ಹಿಪ್ಪೋ ಆಕ್ರಮಣಕಾರಿಯಾಯಿತು.

ಹಿಪ್ಪೋಗಳ ಅಳತೆ ಹೀಗಿದೆ ಎನ್ನಲಾಗಿದೆ, ಉದ್ದ 3.3 to 5.2 meters (11 to 17 ft) ನಷ್ಟಿರುತ್ತದೆ ಇದು ಬಾಲದ ಉದ್ದ 56 centimeters (22 in) ವೂ ಒಳಗೊಂಡಿರುತ್ತದೆ ಮತ್ತು ಭುಜದಿಂದ ಸರಾಸರಿ 1.5 ಮೀಟರ್ ಎತ್ತರ (5 ಅಡಿ) ಇರುತ್ತದೆ. ಹಿಪಪಾಟಮಸ್‌ಗಳ ಗಾತ್ರವು ಬಿಳಿ ರೀನೋಸಿರೋಸ್ ನ ಗಾತ್ರದ ಜೊತೆ ಅತಿವ್ಯಾಪಿಸುತ್ತದೆ;ಈ ಗಾತ್ರಗಳ ಅಂಶಗಳಿಂದಾಗಿ ಆನೆಗಳ ನಂತರ ಯಾವುದು ದೊಡ್ಡ ಪ್ರಾಣಿ ಎಂಬುದು ಅಸ್ಪಷ್ಟ ಗೊಂದಲಕ್ಕೀಡಾಗುತ್ತದೆ.

ಹಿಪಪಾಟಮಸ್‌ಸಗಳು ಬೃಹದ್ಗಾತ್ರಗಳಾಗಿದ್ದರೂ ಭೂಮಿಯ ಮೇಲೆ ಮನುಷ್ಯನಿಗಿಂತ ವೇಗವಾಗಿ ಓಡಬಲ್ಲವು. ಅವುಗಳ ಓಟದ ವೇಗವು 30 ಕಿಮೀ/ಗ (18 ಮೀ/ಗ) ಇಂದ 40 ಕಿಮೀ/ಗ (25 ಮೀ/ಗ), ಅಥವಾ 50 ಕಿಮೀ/ಗ (30 ಮೀ/ಗ) ಎಂದು ಅಂದಾಜಿಸಲಾಗಿದೆ.

ಹಿಪ್ಪೋಗಳು ಈ ಅಧಿಕ ವೇಗವನ್ನು ಕೆಲವೇ ಕೆಲವು ನೂರು ಮೀಟರ್ ಗಳಷ್ಟರವರೆಗೂ ಮಾತ್ರ ಕಾಯ್ದುಕೊಳ್ಳುತ್ತವೆ.

ಹಿಪಪಾಟಮಸ್ 
ಗೂಳಿ ಹಿಪ್ಪೋ ಹಗಲು ಹೊತ್ತು ನೀರಿನಿಂದಾಚೆ, ಎನ್‌ಗೊರಾಂಗೋರೋ ಕ್ರೇಟರ್, ತಾನ್ಜಾನಿಯಾ

ಹಿಪ್ಪೋಗಳ ಜೀವಿತಾವಧಿ ಸಾಮಾನ್ಯವಾಗಿ 40 ರಿಂದ 50 ವರ್ಷಗಳು. ಸೆರೆ ಹಿಡಿದ ಹಿಪ್ಪೋಗಳಲ್ಲಿ 57 ವರ್ಷದ ದೊನ್ನಾ ಎಂಬ ಹಿಪ್ಪೋ ಅತ್ಯಂತ ವಯಸ್ಸಾದ ಹಿಪ್ಪೋ ಆಗಿರುತ್ತದೆ. ಇಂಡಿಯಾನಾದ ಇವಾಸ್ವಿಲ್ಲೇ ಯ ಮೆಸ್ಕರ್ ಪಾರ್ಕ್ ಜೂವಿನಲ್ಲಿ ವಾಸಿಸುತ್ತದೆ ಮತ್ತು ಅದು ಹೆಣ್ಣು ಪ್ರಾಣಿ. ಜರ್ಮನಿಯ ಮುನಿಚ್‌ನಲ್ಲಿ ಇದ್ದು 1995ರಲ್ಲಿ ತನ್ನ 61ನೇ ವಯಸ್ಸಿನಲ್ಲಿ ಸತ್ತ ಟಂಗಾ ಎಂಬ ಹೆಸರಿನ ಹಿಪ್ಪೋ ದೀರ್ಘಕಾಲ ಬಾಳಿದ ದಾಖಲೆಯನ್ನು ಹೊಂದಿದೆ.

ಹಿಪ್ಪೋಗಳ ತಲೆ ಬುರುಡೆಯ ಮೇಲ್ಭಾಗದಲ್ಲಿ ಕಿವಿ,ಕಣ್ಣು ಮತ್ತು ಮುಗಿನ ಹೊಳ್ಳೆಗಳು ಇರುತ್ತದೆ. ಈ ಕಾರಣದಿಂದಾಗಿಯೇ ಹಿಪ್ಪೋಗಳು ನೀರಿನಲ್ಲಿ ಹಾಗೂ ಟ್ರಾಪಿಕಲ್ ನದಿಗಳ ಕೆಸರಿನಲ್ಲಿ ಮುಳುಗಿ ತಮ್ಮನ್ನು ತಾವು ತಂಪಾಗಿಟ್ಟುಕೊಳ್ಳುತ್ತವೆ ಮತ್ತು ಬಿಸಿಲಿನ ಶಾಖಕ್ಕೆ ಚರ್ಮ ಕಂದು ತಿರುಗುವದರಿಂದ ರಕ್ಷಿಸಿಕೊಳ್ಳುತ್ತವೆ. ಅವುಗಳ ಎಲುಬು ಗೂಡಿನ ರಚನೆ ಗ್ರಾವಿಪೋರ್ಟಲ್ ಆಗಿದ್ದು ತಮ್ಮ ಅಗಾಧ ಭಾರವನ್ನು ಹೊರುವುದಕ್ಕೆ ಅನುಗೊಂಡಿರುತ್ತವೆ. ಇತರ ಮೆಗಾಫೌನಾ ಪ್ರ‍ಾಣಿಗಳಿಗಿಂತ ಹಿಪಪಾಟಮಸಸ್‌ಗಳಿಗೆ ಸಣ್ಣ ಕಾಲುಗಳಿವೆ ಕಾರಣ ಅವುಗಳ ಅತಿಯಾದ ತೂಕದ ಕಷ್ಟವನ್ನು ಅವುಗಳು ವಾಸಿಸುವ ನೀರು ಕಡಿಮೆಗೊಳಿಸುತ್ತದೆ. ಬೇರೆ ಇತರ ಜಲಜೀವಿ ಸಸ್ತನಿಗಳಂತೆ ಹಿಪಪಾಟಮಸ್‌ಗಳಿಗೆ ಬಹಳ ಸಣ್ಣ ಕೂದಲುಗಳಿವೆ.

ಹಿಪಪಾಟಮಸ್ 
ಮೆಮ್ಫಿಸ್ ಮೃಗಾಲಯದ ಕುಂಟೆಯಲ್ಲಿ ಮುಳುಗಿರುವ ಹಿಪ್ಪೋ

ಅವುಗಳ ಚರ್ಮವು ಕೆಂಪು ಬಣ್ಣದ ನೈಸರ್ಗಿಕ ಸನ್‌ಸ್ಕ್ರೀನ್ ದ್ರವ್ಯವನ್ನು ಸ್ರವಿಸುತ್ತದೆ. ಸ್ರವಿಸುವ ದ್ರವ್ಯವು "ರಕ್ತದ ಸಿಹಿ," ಎಂದು ಉಲ್ಲೇಖಿಸಲಾಗುತ್ತದೆ ಆದರೆ ಅದು ರಕ್ತವೂ ಅಲ್ಲಾ ಅಥವಾ ಸಿಹಿಯೂ ಅಲ್ಲಾ. ಈ ಸ್ರವಿಸುವ ದ್ರವ್ಯಕ್ಕೆ ಆರಂಭದಲ್ಲಿ ಬಣ್ಣವಿರುವುದಿಲ್ಲ ಆನಂತರ ನಿಮಿಷಗಳಲ್ಲೇ ಅದು ಕಿತ್ತಳೆ-ಕೆಂಪಿನ ಬಣ್ಣಕ್ಕೆ ಮಾರ್ಪಾಡಾಗುತ್ತದೆ ಮತ್ತು ಅಂತಿಮವಾಗಿ ಅದು ಕಂದು ಬಣ್ಣವಾಗುತ್ತದೆ. ಸ್ರವಿಸುವ ಎರಡು ವಿವಿಧ ವರ್ಣ ದ್ರವ್ಯಗಳಲ್ಲಿ ಒಂದು ಕೆಂಪು (ಹಿಪ್ಪೋಸುಡಾರಿಕ್ ಆಸಿಡ್) ಮತ್ತು ಒಂದು ಕಿತ್ತಳೆ (ನಾರ್ಹಿಪ್ಪೋಸುಡಾರಿಕ್ ಆಸಿಡ್) ಎಂದು ಗುರುತಿಸಲಾಗಿದೆ. ಆ ಎರಡು ವರ್ಣ ದ್ರವ್ಯಗಳು ಅತಿಯಾದ ಅಸಿಡ್ ಇಕ್ ಸಂಯುಕ್ತಗಳು. ಎರಡೂ ವರ್ಣ ದ್ರವ್ಯಗಳು ರೋಗ ಉತ್ಪತಿ ಮಾಡುವ ಬ್ಯಾಕ್ಟೀರಿಯಾಗಳು ಬೆಳೆಯುವುದನ್ನು ಪ್ರತಿರೋಧಿಸುತ್ತದೆ; ಹಾಗೆಯೇ ಎರಡೂ ವರ್ಣದ್ರವ್ಯಗಳಿಂದಾಗಿ ಅಲ್ಟ್ರಾ ವಯಲೆಟ್ ಸಂದರ್ಭಗಳಲ್ಲಿ ಲೈಟ್ ಅಬ್ಸಾರ್ಪಷನ್ ಉತ್ಕೃಷ್ಟವಾಗಿರುತ್ತದೆ ಈ ಮುಖಾಂತರ ಸನ್‌ಸ್ಕ್ರೀನ್ ಪರಿಣಾಮವನ್ನು ಉಂಟು ಮಾಡುತ್ತದೆ. ಬೇರೆ ಬೇರೆ ಆಹಾರ ಪದ್ಧತಿಯ ಹಿಪ್ಪೋಗಳು ವರ್ಣದ್ರವ್ಯಗಳನ್ನು ಸ್ರವಿಸುತ್ತದೆ, ಆದುದರಿಂದ ಆಹಾರವು ಇದಕ್ಕೆ ಮೂಲ ಎನ್ನಲಾಗುವುದಿಲ್ಲ. ಬದಲಾಗಿ, ಪ್ರಾಣಿಗಳು ವರ್ಣದ್ರವ್ಯಗಳನ್ನು ಪೂರ್ವವರ್ತಿಗಳಾದ ಅಮಿನೊ ಆಸಿಡ್ ಟೈರೋಸೀನ್ ಗಳನ್ನು ಸಮನ್ವಯಗೊಳಿಸುತ್ತದೆ.

ಹಂಚಿಕೆ-ವಿತರಣೆ

ಈಮಿಯನ್ ಮತ್ತು ಪ್ಲೀಸ್ಟೋಸೀನ್ ಕಾಲದ ತರುವಾಯ ಅಂದರೆ 30,000 ವರ್ಷಗಳ ಹಿಂದೆ, ಹಿಪಪಾಟಮಸ್ ಆಂಫೀಬೀಯಸ್ ಉತ್ತರದ ಅಮೇರಿಕಾ ಮತ್ತು ಯೂರೋಪ್ ನಲ್ಲಿ ವ್ಯಾಪಕವಾಗಿ ಹರಡಿತ್ತು, ಮತ್ತು ನೀರು ಹಿಮಗಡ್ಡೆಯಾಗದಿದ್ದಲ್ಲಿ ಅವು ತೀವ್ರ ಚಳಿಗಾಲವನ್ನು ತಡೆದುಕೊಳ್ಳುತ್ತದೆ.[ಸೂಕ್ತ ಉಲ್ಲೇಖನ ಬೇಕು] ಐತಿಹಾಸಿಕ ಕಾಲದ ಅವಧಿಯವರೆಗೂ ಅವುಗಳನ್ನು ಈಜ್ಯಿಪ್ಟ್ ನ ನೈಲ್ ನದಿಯ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣಲಾಗುತ್ತಿತ್ತು, ಆನಂತರವಷ್ಟೇ ಅವುಗಳ ನಿರ್ಮೂಲನಗೊಂಡಿದ್ದು. ಪ್ಲೀನಿ ದಿ ಎಲ್ಡರ್ ಬರೆಯುತ್ತಾರೆ, ಅವರ ಕಾಲದಲ್ಲಿ, ಈ ಪ್ರಾಣಿಯನ್ನು ಹಿಡಿಯುವುದಕ್ಕೆ ಸೂಕ್ತವಾದ ಸ್ಥಳವೆಂದರೆ ಅದು ಈಜ್ಯಿಪ್ಟ್‌ನ ಸೈಟೆ ನೋಮೆ ಅಂತೆ; ಈ ಪ್ರಾಣಿಗಳು ಇನ್ನೂ ಡಮೈಟ್ಟಾ ದುದ್ದಕ್ಕೂ 639ರಲ್ಲಿ ಅರಬ್ ಗೆದ್ದ ರಾಜ್ಯಗಳಲ್ಲಿ ಕಂಡು ಬರುತ್ತದಂತೆ. ಉಗಾಂಡಾ, ಸೂಡಾನ್, ಸೋಮಾಲಿಯಾ, ಕೀನ್ಯಾ, ಉತ್ತರದ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ದಿ ಕಾಂಗೋ ಮತ್ತು ಇಥಿಯೋಪಿಯಾ, ಪಶ್ಚಿಮದ ಮುಖಾಂತರ ಘಾನಾ ದಿಂದ ಗಾಂಬಿಯಾ ದವರೆಗೆ, ಮತ್ತು ದಕ್ಷಿಣ ಆಫೀಕಾ ದೊಳಗೂ ಅಂದರೆ (ಬಾಟ್ಸ್‌ವಾನಾ, ರಿಪಬ್ಲಿಕ್ ಆಫ್ ಸೌತ್ ಆಫ್ರೀಕಾ, ಜಿಂಬಾಬ್ವೇ, ಜಾಂಬಿಯಾ ದಲ್ಲೂ) ಇರುವ ನದಿ ಮತ್ತು ಕೆರೆಗಳಲ್ಲಿ ಇನ್ನೂ ಹಿಪ್ಪೋಗಳನ್ನು ಕಾಣಬಹುದಾಗಿದೆ. ತಾನ್ಜಾನಿಯಾ ಮತ್ತು ಮೊಜಾಂಬಿಕ್ ಗಳಲ್ಲಿ ಪ್ರತೇಕ ಹಿಪ್ಪೋಗಳ ಸಮೂಹವೇ ಅಸ್ತಿತ್ವದಲ್ಲಿದೆ.

ಸಂರಕ್ಷಣೆಯ ಮಾನ್ಯತೆ

ಹಿಪಪಾಟಮಸ್ 
ಪೀಟರ್ ಪಾಲ್ ರುಬೆನ್ಸ್ ರವರಿಂದ ದಿ ಹಿಪಪಾಟಮಸ್ ಹಂಟ್ (1617).

ಆನುವಂಶಿಕ ಸಾಕ್ಷ್ಯಾಧಾರಗಳು ಸೂಚಿಸುವಂತೆ ಪ್ಲೀಸ್ಟೋಸೀನ್ ಯುಗದ ಅಥವಾ ನಂತರದ ಸಂದರ್ಭಗಳಲ್ಲಿ ಆಫ್ರೀಕಾದ ಸಾಮಾನ್ಯ ಹಿಪ್ಪೋಗಳ ಸಂಖ್ಯೆಗಳಲ್ಲಿ ವಿಸ್ತರಣೆಯುಂಟಾಯಿತು,ಪರಿಣಾಮವಾಗಿ ಯುಗದ ಕೊನೆಯಲ್ಲಿ ನೀರಿನ ಜೀವಿಗಳ ಸಂಖ್ಯೆ ಅಧಿಕವಾಯಿತು. ಈ ಆವಿಷ್ಕಾರಗಳಿಂದ ಗೊತ್ತಾದ ಬಹಳ ಮುಖ್ಯವಾದ ಸಂರಕ್ಷಣೆಯ ಸೂಚ್ಯಾರ್ಥವೇನೆಂದರೆ ಪ್ರಸ್ತುತ ಹಿಪ್ಪೋಗಳ ಸಂಖ್ಯೆಯು ಭೂಖಂಡದಲ್ಲಿ ಆತಂಕಕಾರಿ ಸ್ಥಿತಿಯಲ್ಲಿದೆ ಕಾರಣ ಶುಭ್ರವಾದ ನೀರಿನೊಳಗೆ ಅವುಗಳಿಗೆ ಪ್ರವೇಶ ದೊರೆಯದಿರುವುದು. ಹಿಪ್ಪೋಗಳು ಅನಿಯಂತ್ರಣವಾದ ಬೇಟೆಗೆ ಮತ್ತು ಆಕ್ರಮಣಕಾರರಿಗೆ ತುತ್ತಾಗಿದೆ. ಮೇ 2006ರಲ್ಲಿ ವರ್ಳ್ಡ್ ಕನ್ ಸರ್ವೇಷನ್ ಯೂನಿಯನ್ (IUCN) ನವರು ಪಟ್ಟಿ ಮಾಡಿದ IUCN ಕೆಂಪು ಪಟ್ಟಿ ನಲ್ಲಿ ಹಿಪ್ಪೋಗಳನ್ನು ವಲ್ನರಬಲ್ ಸ್ಪೆಸೀಸ್ ಎಂದು ಗುರುತಿಸಲಾಗಿದೆ, ಆಗ ಅವುಗಳ ಸಂಖ್ಯೆ 125,000 ನಿಂದ 150,000 ಹಿಪ್ಪೋಗಳೆಂದು ಅಂದಾಜಿಸಲಾಗಿತ್ತು, IUCN's 1996ರ ಅಧ್ಯಯನದ ನಂತರ ಹಿಪ್ಪೋಗಳ ಸಂಖ್ಯೆಯಲ್ಲಿ ಶೇಖಡ 7 ಮತ್ತು ಶೇಖಡ 20 ಇಳಿಮುಖವಾಗಿದೆ.

ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ದಿ ಕಾಂಗೋ ಅವಧಿಯಲ್ಲಿ ಹಿಪ್ಪೋಗಳ ಸಂಖ್ಯೆ ನಾಟಕೀಯವಾಗಿ ಇಳಿಯಿತು. ವಿರುಂಗ ನ್ಯಾಷನಲ್ ಪಾರ್ಕ್ ನಲ್ಲಿ 1970ರ ಮಧ್ಯದಲ್ಲಿ ಹಿಪ್ಪೋಗಳ ಸಂಖ್ಯೆ 29,000ದಲ್ಲಿ 800 ಅಥವಾ 900ರಷ್ಟು ಕಡಿಮೆಗೊಂಡಿತು. ದ್ವಿತೀಯ ಕಾಂಗೋ ಸಮರ ದಿಂದಾಗಿ ಹಿಪ್ಪೋಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎನ್ನಲಾಗಿದೆ. ಹುಟು ಬಂಡಾಯಗಾರರು, ಕಡಿಮೆ ವೇತನದ ಕಾಂಗೋಲೀಸ್ ಸೈನಿಕರು ಮತ್ತು ಸ್ಥಳೀಯ ಮಿಲಿಟರಿ ಗುಂಪಿನವರು ಈ ಹಿಪ್ಪೋಗಳ ಕಳ್ಳ ಆಕ್ರಮಣಕ್ಕೆ ಅಥವಾ ಬೇಟೆಗೆ ಕಾರಣವೆನ್ನಲಾಗಿದೆ. ಹಿಪ್ಪೋಗಳು ದಡ್ಡ ಜೀವಿಗಳು ಅವು ಸಮಾಜಕ್ಕೆ ಮಾರಕ ಎಂದು ಭಾವಿಸಿದವರು ಇದನ್ನು ಬೇಟೆಯಾಡಿದ್ದಾರೆ ಜೊತೆಗೆ ಹಣಕ್ಕೂ ಸಹಾ ಬೇಟೆ ಆಡಲಾಗಿದೆ ಎಂದು ನಂಬಲಾಗಿದೆ. ಹಿಪ್ಪೋ ಪ್ರಾಣಿಗಳ ಮಾಂಸ ಮಾರಾಟ ಕಾನೂನು ಬಾಹಿರವೇನೋ ಸರಿ ಆದರೆ ಕಾಳಸಂತೆ ಮಾರಾಟವನ್ನು ವಿರುಂಗ ನ್ಯಾಷನಲ್ ಪಾರ್ಕ್ ನ ಅಧಿಕಾರಿಗಳಿಗೆ ಸುಳಿವಿಡಿದು ಶಿಕ್ಷಿಸಲು ಸಾಧ್ಯವಾಗುತ್ತಿಲ್ಲ.

ಆಕ್ರಮಣದ ಸಂಭಾವ್ಯತೆ

1980ರಲ್ಲಿ, ಪಾಬ್ಲೋ ಎಸ್ಕೋಬಾರ್ ನಾಲ್ಕು ಹಿಪ್ಪೋಗಳನ್ನು ಮೆಡಿಲ್ಲಿನ್ (ಕೊಲಂಬಿಯಾ)ದ 100 ಕಿಮೀ ಪೂರ್ವಕ್ಕೆ ಇರುವ ಹಾಸಿಯಂಡಾ ನಪೋಲ್ಸ್ ನ ತನ್ನ ಮನೆಯ ಖಾಸಗಿ ಮೃಗಾಲಯದಲ್ಲಿ ಇಟ್ಟಿದ್ದನು, ಅವನ್ನು ನ್ಯೂ ಆರ್ಲೀಯನ್ಸ್ ನಲ್ಲಿ ಕೊಂಡುಕೊಂಡಿದ್ದನು. ಎಸ್ಕೋಬಾರ್ ಅಳಿದಮೇಲೆ ಹಿಪ್ಪೋಗಳನ್ನು ಹಿಡಿದು ಕಟ್ಟಿಹಾಕುವುದಕ್ಕೆ ಕಷ್ಟವೆನ್ನಿಸಿತು, ಕಾವಲಿಲ್ಲದ, ಉಪಚಾರವಿಲ್ಲದ ಅವು ಆ ಸ್ಥಳವನ್ನು ಬಿಟ್ಟು ತೆರಳಿದವು. 2007ರಲ್ಲಿ ಅವುಗಳ ಸಂಖ್ಯೆ 16ಕ್ಕೆ ಏರಿತು ಮತ್ತು ಅವು ಆಹಾರಕ್ಕಾಗಿ ಹತ್ತಿರದ ಮಗ್ಡಾಲೀನಾ ನದಿ ಯ ಹತ್ತಿರ ಸುಳಿದಾಡುತ್ತಿದ್ದವು.

2009ರಲ್ಲಿ, 3 ಒಂಟಿ ಹಿಪ್ಪೋಗಳು ಅದರಲ್ಲಿ ಎರಡು ದೊಡ್ಡವು ಮತ್ತು ಒಂದು ಕರು ಮಂದೆಯಿಂದ ತಪ್ಪಿಸಿಕೊಂಡವು, ಆನಂತರ ಅವು ಮನುಷ್ಯರನ್ನು ದಾಳಿಮಾಡಿ, ದನಗಳನ್ನು ಸಾಯಿಸುತ್ತಿದ್ದವು, ಸ್ಥಳೀಯರ ಅನುಮತಿ ಮೇರೆಗೆ ಬೇಟೆಗಾರರು "ಪೀಪೇ" ಎನ್ನುವ ದೊಡ್ಡ ಹಿಪ್ಪೋವನ್ನು ಬೇಟೆಯಾಡಿ ಕೊಂದರು.

ಇದು ಕೊಲಂಬಿಯಾದ ಪರಿಸರ ವ್ಯವಸ್ಥೆ ಮೇಲೆ ಯಾವ ರೀತಿ ಪರಿಣಾಮವಾಗುತ್ತದೆಂದು ಗೊತ್ತಾಗಿಲ್ಲ. W ರೇಡಿಯೋ ಕೊಲಂಬಿಯಾದಲ್ಲಿ ನಡೆದ ಸಂದರ್ಶನದಲ್ಲಿ ತಜ್ಞರು ಅವು ಕೊಲಂಬಿಯಾದ ಕಾಡುಗಳಲ್ಲಿ ಉಳಿದುಕೊಂಡಿರಬಹುದು ಎಂದು ಅಭಿಪ್ರಾಯಿಸಿದ್ದಾರೆ. ಆದಾಗ್ಯೂ, ಕೊಲಂಬಿಯನ್ ಸರ್ಕಾರ ಇಂಥ ಜೀವಿಗಳ ಮೇಲಿನ ನಿಯಂತ್ರಣ ಮಾಡುವಲ್ಲಿ ಲೋಪವಿರುವುದರಿಂದ ಹೀಗಾಗಿದೆ ಕೊನೆಗೆ ಇದು ಮನುಷ್ಯನ ವಿನಾಶಕ್ಕೆ ದಾರಿ ಆಗಿ ಬಿಡುತ್ತದೆ ಎಂದು ಭಾವಿಸಲಾಗಿದೆ.

ನಡವಳಿಕೆ

ಹಿಪಪಾಟಮಸ್ 
ಹಿಪ್ಪೋಗಳು ಅಪಾಯವೆಂದು ಭಾವಿಸಿ ಭಯಗೊಳ್ಳುವ ತೆರೆದ ಬಾಯಿಯ ಸನ್ನೆಗಳು.

ಹಿಪ್ಪೋಗಳು ತಮ್ಮ ಗುಂಪಿನ ಜೊತೆ ದಿನದ ಅನೇಕ ವೇಳೆ ನೀರು ಅಥವಾ ಕೆಸರಿನಲ್ಲಿ ಹೊರಳಾಡಿತ್ತಿರುತ್ತವೆ. ನೀರು ಅವುಗಳ ಉಷ್ಣಾಂಶವನ್ನು ಕಡಿಮೆಗೊಳಿಸುತ್ತವೆ ಮತ್ತು ಚರ್ಮ ಒಣಗಿಹೋಗುವುದನ್ನು ತಪ್ಪಿಸುತ್ತದೆ. ಅನೇಕ ಹಿಪಪಾಟಮಸ್‌ಗಳು ಚಿಕ್ಕಂದಿನಿಂದ ತಿನ್ನುವುದರ ಜೊತೆ ಇತರ ಹಿಪ್ಪೋಗಳ ಜೊತೆ ಕಾದಾಡುತ್ತಿರುತ್ತದೆ ಮತ್ತು ಸಂತಾನೋತ್ಪತಿ ಕ್ರಿಯೆ ಕೂಡ ನೀರಿನಲ್ಲೇ ಆಗುತ್ತದೆ.

ಹಿಪ್ಪೋಗಳು ಮುಚ್ಚಂಜೆಗೆ ನೀರನ್ನು ಬಿಟ್ಟು ಒಳನಾಡಿಗೆ ಬಂದು ಬಿಡುತ್ತವೆ, ಕೆಲವೊಮ್ಮೆ ಇವು 8 ಕಿಲೋಮೀಟರು (5 ಮೈ)ಗಳಷ್ಟು ನಡೆದು ಹುಲ್ಲನ್ನು ಮೇಯುತ್ತವೆ ಇದೇ ಅವುಗಳ ಮುಖ್ಯ ಆಹಾರವಾಗಿರುತ್ತದೆ. ಒಂದು ರಾತ್ರಿಗೆ ನಾಲ್ಕು ಅಥವಾ ಐದು ಗಂಟೆಗಳಷ್ಟು ಕಾಲ ಮೇಯುತ್ತವೆ, ಈ ಅವಧಿಯಲ್ಲಿ ಸುಮಾರು 68 ಕಿಲೋಗ್ರಾಮ್ (150 lb) ನಷ್ಟು ಹುಲ್ಲನ್ನು ತಿಂದಿರುತ್ತವೆ. ಬೇರೆ ಸಸ್ಯಹಾರಿ ಪ್ರಾಣಿಗಳಂತೆ ಹಿಪ್ಪೋಗಳು ಹುಲ್ಲಿನ ಜೊತೆ ಸಿಕ್ಕ ಇತರ ಸಸ್ಯಗಳನ್ನೂ ತಿನ್ನುತ್ತವೆ ಆದರೆ ಅವುಗಳ ಮುಖ್ಯ ಆಹಾರ ಹಸಿರು ಹುಲ್ಲು, ಇದರ ಜೊತೆ ಕನಿಷ್ಠ ಮಟ್ಟದಲ್ಲಿ ಜಲಸಸ್ಯಗಳನ್ನು ಸೇವಿಸುತ್ತವೆ. ಅಪರೂಪಕ್ಕೆ ಹಿಪ್ಪೋಗಳು ಸಾಮಾನ್ಯವಾಗಿ ನೀರಿನ ಹತ್ತಿರದಲ್ಲಿ ಸಿಗುವ ಕೊಳೆತ-ಸತ್ತ ಪ್ರಾಣಿಯ ಮಾಂಸವನ್ನು ತಿನ್ನುವುದನ್ನು ಚಿತ್ರೀಕರಿಸಲಾಗಿದೆ. ಹಿಪ್ಪೋಗಳ ಮಾಂಸಭಕ್ಷಣೆಯ ಬಗ್ಗೆ ಇನ್ನು ಬೇರೆ ವರದಿಗಳೂ ಇವೆ, ಅವುಗಳ ಪ್ರಕಾರ ಹಿಪ್ಪೋಗಳು ನರಭಕ್ಷಣೆಯನ್ನೂ ಮಾಡುತ್ತವೆ ಮತ್ತು ಬೇರೆ ಇತರ ಪ್ರಾಣಿಗಳನ್ನೂ ಕೊಂದು ತಿನ್ನುತ್ತವೆ. ಹಿಪ್ಪೋಗಳ ಹೊಟ್ಟೆಯ ಅಂಗ ರಚನೆ ನರಭಕ್ಷಣೆಗೆ ಮತ್ತು ಮಾಂಸದೂಟಕ್ಕೆ ಸೂಕ್ತವಲ್ಲ ಆದರೆ ಅವು ಈ ಆಹಾರವನ್ನು ಸೇವಿಸಿದಾಗ ಅದು ಅಸ್ವಾಭಾವಿಕ ಅಥವಾ ಪೌಷ್ಟಿಕತೆ ಒತ್ತಡವೆನ್ನಲಾಗಿದೆ.

ಹಿಪ್ಪೋಗಳ ಮುಖ್ಯ ಆಹಾರ ಭೂಮಿಯ ಮೇಲೆ ಬೆಳೆಯುವ ಹುಲ್ಲು ಆದರೆ ಅವು ಜಾಸ್ತಿ ಸಮಯ ಕಳೆಯುವುದು ನೀರಿನಲ್ಲಿ. ಅವುಗಳ ಮಲವಿಸರ್ಜನೆ ಕಾರ್ಯ ನೀರಿನಲ್ಲೇ ನಡೆಯುತ್ತದೆ ಇದರಿಂದಾಗಿಯೇ ನದಿಯ ದಡಗಳಲ್ಲಿ ಅಲೋಕ್ಟ್ ಹಾನಸ್ ಜೈವಿಕ ಶೇಖರಣೆಗಳು ಇರುತ್ತವೆ. ಈ ಶೇಖರಣೆಗಳಿಂದ ಅಸ್ಪಷ್ಟ ಪರಿಸರ ಕಾರ್ಯವಾಗುತ್ತದೆ. ಅವುಗಳ ಗಾತ್ರದಿಂದಾಗಿ ಮತ್ತು ಮೇಯಲು ಹೋಗುವ ಹಾದಿಯಲ್ಲೇ ಮರಳಿ ಬರುವ ಅಭ್ಯಾಸದಿಂದಾಗಿ ಅವು ನಡೆದಾಡುವ ನೆಲದಲ್ಲಿ ಯಾವುದೇ ಸಸ್ಯಗಳು ಬೆಳೆಯಲಾರದು ಮತ್ತು ಆ ನೆಲವು ಕೂಡ ಹಿಪ್ಪೋಗಳ ಭಾರಕ್ಕೆ ಕುಸಿದಿರುತ್ತದೆ. ದೀರ್ಘಾವಧಿಯಲ್ಲಿ ಹಿಪ್ಪೋಗಳು ಅದೇ ಮಾರ್ಗವನ್ನು ಬಳಸಿದಾಗ ಕೊಳಚೆ ಮತ್ತು ನಾಲೆಗಳ ಹಾದಿಯನ್ನು ಬದಲಿಸಬಹುದಾಗಿದೆ.

ಹಿಪಪಾಟಮಸ್ 
ಸ್ಯಾನ್ ಡೀಗೋ ಮೃಗಾಲಯದಲ್ಲಿ ಮುಳುಗಿರುವ ಹಿಪ್ಪೋವಯಸ್ಕ ಹಿಪ್ಪೋಗಳು ನೀರಿನ ಹೊರಮೈಗೆ ಬಂದು ಪ್ರತಿ 3–5 ನಿಮಿಷಗಳಿಗೆ ಉಸಿರೆಳೆದುಕೊಳ್ಳುವುದು.

ವಯಸ್ಕ ಹಿಪ್ಪೋಗಳು ಈಜಲಾರವು ಮತ್ತು ಅವು ತೇಲಲಾರವು ಕೂಡ.

ಆಳವಾದ ನೀರಿದ್ದಲ್ಲಿ ಅವು ತಮ್ಮನ್ನು ತಾವೇ ಕುಪ್ಪಳಿಸಿಕೊಂಡು ತಳದಿಂದ ಮುನ್ನೂಕಿಕೊಳ್ಳುತ್ತವೆ. ನೀರಿನಲ್ಲಿ ಅವುಗಳ ಓಟದ ವೇಗವು 8 ಕಿಮೀ/ಗ (5 ಮೈಲಿ ಪ್ರತಿ ಗಂಟೆಗೆ) ಇರುತ್ತದೆ. ಏನೇ ಆದರೂ, ಚಿಕ್ಕ ವಯಸ್ಸಿನ ಹಿಪ್ಪೋಗಳು ತೇಲಬಲ್ಲವು ಮತ್ತು ಹಿಂಗಾಲಿನಿಂದ ತಮ್ಮನ್ನು ತಾವೇ ಮುನ್ನೂಕುವಂತೆ ಮಾಡಿ ಈಜಬಲ್ಲವು. ವಯಸ್ಕ ಹಿಪ್ಪೋಗಳು ಪ್ರತಿ 3–5 ನಿಮಿಷಕ್ಕೆ ಮೇಲ್ಬಂದು ಅದರದೇ ಆದ ಶೈಲಿಯಲ್ಲಿ ಉಸಿರಾಡುತ್ತದೆ. ಸಣ್ಣ ವಯಸ್ಸಿನ ಹಿಪ್ಪೋಗಳು ಪ್ರತಿ ಎರಡು ಅಥವಾ ಮೂರು ನಿಮಿಷಕ್ಕೊಮ್ಮೆ ಉಸಿರಾಡಬೇಕಾಗುತ್ತದೆ. ನೀರಿನಿಂದ ಮೇಲ್ಬಂದು ಉಸಿರಾಡುವ ಕ್ರಿಯೆ ತನ್ನಷ್ಟಕ್ಕೇ ತಾನೇ ನಡೆಯುತ್ತಿರುವಂತಹುದು, ಹಿಪ್ಪೋಗಳು ಮಲಗಿದ್ದಾಗಲೂ ಈ ಪ್ರಕ್ರಿಯೆ ಅವುಗಳ ಪ್ರಯತ್ನವಿಲ್ಲದೆಯೇ ಎಚ್ಚರವಾಗದೇನೇ ನಡೆಯುತ್ತಿರುತ್ತದೆ. ನೀರಿನಲ್ಲಿ ಮುಳುಗಿದ್ದಾಗ ಹಿಪ್ಪೋಗಳು ಅವುಗಳ ಮೂಗಿನ ಹೊಳ್ಳೆಗಳನ್ನು ಮುಚ್ಚಿಕೊಂಡಿರುತ್ತವೆ.

ಸಾಮಾಜಿಕ ಬದುಕು

ಹಿಪಾಪಟಮಸಸ್‌ಗಳಲ್ಲಿ ಗಂಡು ಹೆಣ್ಣಿನ ಪಾರಸ್ಪರಿಕ ಕ್ರಿಯೆಗಳನ್ನು ಅಧ್ಯಯನ ಮಾಡುವುದು ಜಟಿಲವಾದ ಕೆಲಸ ಕಾರಣ ಅವು ಲೈಂಗಿಕ ದ್ವಿರೂಪಿಗಳಲ್ಲ ಜೊತೆಗೆ ತರುಣ ಹಿಪ್ಪೋಗೂ ವಯಸ್ಕ ಹೆಣ್ಣು ಹಿಪ್ಪೋಗೂ ಯಾವುದೇ ವ್ಯತ್ಯಾಸವನ್ನು ಕಣದಲ್ಲಿ ಅವು ಇಟ್ಟುಕೊಳ್ಳುವುದಿಲ್ಲ. ಹಿಪ್ಪೋಗಳು ಸಮೀಪದಲ್ಲೇ ಒಂದಕ್ಕೊಂದು ಇದ್ದರೂ ಅವು ಸಾಮಾಜಿಕ ಬಂಧವನ್ನು ರಚಿಸಿಕೊಂಡಂತೆ ಕಂಡು ಬರುವುದಿಲ್ಲ ಆದರೆ ತಾಯಿ ಮತ್ತು ಮಗಳಿನ ಸಂಬಂದ್ಧ ಮಾತ್ರ ಇದಕ್ಕೊಂದು ಅಪವಾದ, ಏನೇ ಆಗಲಿ ಅವು ಸಾಮಾಜಿಕ ಪ್ರಾಣಿಗಳಲ್ಲ. ಆದರೂ ಅವೇಕೆ ಒಂದಕ್ಕೊಂದು ಹತ್ತಿರದಲ್ಲೇ ಇರುತ್ತವೆ ಎನ್ನುವುದಕ್ಕೆ ಉತ್ತರ ಅಸ್ಪಷ್ಟ.

ಹಿಪಪಾಟಮಸ್ 
ಮೈದಾನದಲ್ಲಿ ಹಿಪ್ಪೋಗಳ ಲಿಂಗವನ್ನು ಗುರುತಿಸುವುದು ಕಷ್ಟ, ಸಂಶೋಧಕರಿಗೆ ಹಿಪ್ಪೋಗಳ ಹಿಂಭಾಗವನ್ನು ಮಾತ್ರ ಸಾಧಾರಣವಾಗಿ ಕಾಣಸಿಗುತ್ತದೆ ಜಾಂಬಿಯಾದ ಈ ಹಿಂಡು ಕಾಣಿಸುವ ಹಾಗೆ.
ಹಿಪಪಾಟಮಸ್ 
ಬಾರ್ಸಿಲೋನಾ ಮೃಗಾಲಯದಲ್ಲಿ ಕಾಳಗ ಮಾಡುತ್ತಿರುವ ಹಿಪಪಾಟಮಸ್

250 ಮೀಟರುಗಳಷ್ಟು ಉದ್ದದ ನದಿ ನೀರಿನಲ್ಲಿ ಗೂಳಿಯೊಂದು ಹತ್ತು ಹೆಣ್ಣು ಪ್ರಾಣಿಗಳನ್ನು ಇಟ್ಟುಕೊಂಡು ಆಧಿಪತ್ಯ ನಡೆಸುವಾಗ ಹಿಪಪಾಟಮಸ್‌ಗಳ ಭೂಪ್ರದೇಶ ಅದಾಗುತ್ತವೆ. ದೊಡ್ದ ಹಿಂಡು ಅಂದರೆ ಅದರಲ್ಲಿ 100 ಹಿಪ್ಪೋಗಳಿರುತ್ತವೆ. ಗೂಳಿಗೆ ವಿಧೇಯತೆಯಿಂದ ನಡೆದುಕೊಂಡಾಗ ಮಾತ್ರ ಇತರ ಪ್ರಾಯದ ಹಿಪ್ಪೋಗಳು ಆ ಕ್ಷೇತ್ರದೊಳಗೆ ಬರಬಹುದಾಗಿದೆ. ಹಿಪ್ಪೋಗಳ ಭೂಪ್ರದೇಶ ಅಸ್ತಿತ್ವದಲ್ಲಿರುವುದು ತಮ್ಮ ಸಹವರ್ತಿಗಳ ಹಕ್ಕುಗಳನ್ನು ಸ್ಥಾಪಿಸುವಂತೆ. ಹಿಂಡಿನೊಳಗೆ ಹಿಪ್ಪೋಗಳು ಲಿಂಗ ಭೇದ ಮಾಡಿ ಪ್ರತ್ಯೇಕವಾಗಿರುವಂತೆ ನಡೆದುಕೊಳ್ಳುತ್ತವೆ. ಜೋಡಿ ಇಲ್ಲದ ಹಿಪ್ಪೋವು ಇತರ ಜೋಡಿ ಇಲ್ಲದ ಹಿಪ್ಪೋವಿನೊಡನೆ ಇದ್ದರೆ, ಹೆಣ್ಣು ಹಿಪ್ಪೋ ಇನ್ನೊಂದು ಹೆಣ್ಣು ಹಿಪ್ಪೋವಿನ ಜೊತೆ ಇರುತ್ತದೆ ಮತ್ತು ಗೂಳಿ ತನ್ನಷ್ಟಕ್ಕೆ ತಾನಿರುತ್ತದೆ. ಹಿಪ್ಪೋಗಳು ಮೇಯಲು ಹೋಗಬೇಕೆನ್ನಿಸಿದಾಗ ನೀರಿನಿಂದೆದ್ದು ಸ್ವಾತಂತ್ಯವಾಗಿ ಒಂದೊಂದೆ ಹೋಗುತ್ತವೆ.

ಹಿಪಪಾಟಮಸ್‌ಗಳು ಶಬ್ದಗಳ ಮುಖಾಂತರ ಸಂವಹನ ಮಾಡಿದಂತೆ ಕಂಡು ಬರುತ್ತದೆ,ಅವುಗಳ ಗುಟುರು, ರೊಂಕಿಡುವ ಶಬ್ದಗಳು ಹಾಗೆನ್ನಿಸುತ್ತದೆ ಮತ್ತು ಅವು ಪ್ರತಿ ಧ್ವನಿ ಸ್ಥಾನ ನಿರ್ದೇಶನ ಅಭ್ಯಾಸ ಮಾಡುತ್ತಿದ್ದಂತೆ ಎಂದೂ ಅನ್ನಿಸುತ್ತದೆ, ಆದರೆ ಈ ಉಚ್ಚಾರಣೆಗಳ ಕಾರಣ ಮಾತ್ರ ಯಾಕೆಂದು ಗೊತ್ತಾಗಿಲ್ಲ. ತಲೆಯನ್ನು ಭಾಗಶ: ನೀರಿನಿಂದ ಹೊರಗಿಟ್ಟು ಕೂಗನ್ನು ಹಾಕುವ ಕಲೆ ಇವುಗಳಿಗೆ ಮಾತ್ರ ಇದೆ; ನೀರಿನಿಂದ ಹೊರಕ್ಕೆ ಹಾಗೂ ಒಳಕ್ಕೆ ಇರುವ ಇತರ ಹಿಪ್ಪೋಗಳು ಇದಕ್ಕೆ ಸ್ಪಂದಿಸುತ್ತವೆ.

ಸಂತಾನೋತ್ಪತ್ತಿ

ಹೆಣ್ಣು ಹಿಪ್ಪೋಗಳು ಲೈಂಗಿಕ ಪ್ರಬುದ್ಧತೆಯನ್ನು ಐದರಿಂದ ಆರು ವರ್ಷದ ವಯಸ್ಸಿಗೆ ಪಡೆಯುತ್ತದೆ ಮತ್ತು 8 ತಿಂಗಳು ಅದರ ಗರ್ಭಾವಸ್ಥೆ ಕಾಲ. ನಿರ್ನಾಳಗ್ರಂಥಿ ವ್ಯವಸ್ಥೆ ಯ ಅಧ್ಯಯನದ ಪ್ರಕಾರ ಹೆಣ್ಣು ಹಿಪಪಾಟಮಸ್‌ ಸಂತಾನೋತ್ಪತ್ತಿ ಮಾಡುವ ಸ್ಥಿತಿಯನ್ನು 3 ರಿಂದ 4 ವರ್ಷದ ವಯಸ್ಸಿಗೆ ಪಡೆದುಕೊಂಡಿರುತ್ತದೆ. ಗಂಡು ಹಿಪಾಪಟಮಸ್‌ಗಳು 7.5 ವಯಸ್ಸಿಗೆ ಪ್ರಬುದ್ಧತೆಯನ್ನು ಪಡೆಯುತ್ತದೆ.

ಹಿಪಪಾಟಮಸ್‌ಗಳ ಸಂತಾನೋತ್ಪತ್ತಿ ಸ್ವಭಾವವನ್ನು ಉಗಾಂಡದಲ್ಲಿ ಅಭ್ಯಸಿಸಲಾಗಿ ಅದರಿಂದ ಕಂಡು ಬಂದ ಅಂಶವೇನೆಂದರೆ ಗರ್ಭಧಾರಣೆ ಸಾಮಾನ್ಯವಾಗಿ ಬೇಸಿಗೆಯ ಕಾಲದಲ್ಲಿ ಮುಗಿವ ತೇವದ ಅವಧಿಯಲ್ಲಿ, ಮತ್ತು ಜನನಗಳು ಚಳಿಗಾಲದ ಅಂತ್ಯದಲ್ಲಿ ಬರುವ ತೇವದ ಕಾಲದ ಆರಂಭದಲ್ಲಿ ಆಗುತ್ತವೆ. ಹೆಣ್ಣಿನ ಎಸ್ಟ್ರಸ್ ಚಕ್ರ ದಿಂದಾಗಿ ಇದು ಈ ರೀತಿ ಆಗುತ್ತದೆ; ಅನೇಕದೊಡ್ದ ಸಸ್ತನಿಗಳಲ್ಲಿದ್ದಂತೆ ಗಂಡು ಹಿಪಪಾಟಮಸ್‌ನಲ್ಲಿಯೂ ಕೂಡ ಸ್ಪರ್ಮಾಟಜೋವಾ ವರ್ಷ ಪೂರ್ತಿ ಕ್ರಿಯಾಶೀಲವಾಗಿರುತ್ತದೆ. ಜಾಂಬಿಯಾ ಮತ್ತು ದಕ್ಷಿಣ ಆಫ್ರೀಕಾದಲ್ಲಿ ಕೈಗೊಂಡ ಅಧ್ಯಯನದಲ್ಲಿ ಕೂಡ ಕಂಡು ಬಂದ ಅಂಶವೆಂದರೆ ಜನನಗಳು ತೇವ ಕಾಲದ ಆರಂಭದಲ್ಲಿ ನಡೆಯುತ್ತವೆ.

ಗರ್ಭಧಾರಣೆಯ ನಂತರ ಹೆಣ್ಣು ಹಿಪಪಾಟಮಸ್‌ಗಳಲ್ಲಿ ನಮೂನೆಯಂತೆ ಮತ್ತೆ 17 ತಿಂಗಳು ಆಂಡೋತ್ಪತ್ತಿ ಆಗುವುದಿಲ್ಲ.

ಹಿಪಪಾಟಮಸ್ 
ಕ್ರುಗೆರ್ ಪಾರ್ಕ್‌ನ ಬಳಿ ಹಾಕಿರುವ ಟಿಪ್ಪಣಿ ಪ್ರಕಾರ ಹಿಪ್ಪೋಗಳು ಮಾನವರಿಗೆ ಅಪಾಯಕಾರಿ.

ನೀರಿನಲ್ಲಿ ಮೇಟಿಂಗ್ ಕ್ರಿಯೆ ನಡೆಯುತ್ತಿರುವಾಗ ಹೆಣ್ಣು ಹಿಪಪಾಟಮಸ್ ಎದುರಾಳಿಯನ್ನು ಸಂಧಿಸುವ ಬಹುತೇಕ ವೇಳೆ ನೀರಿನಲ್ಲಿ ಮುಳುಗಿರುತ್ತದೆ, ನಿಗದಿತ ಸಮಯದಲ್ಲೆಂಬಂತೆ ಮಾತ್ರ ತನ್ನ ತಲೆಯನ್ನು ಆಗಾಗ್ಗೆ ಎತ್ತಿ ಉಸಿರೆಳೆದುಕೊಳ್ಳುತ್ತದೆ. ಸಿಟಾಸೀಯನ್ಸ್ ಮತ್ತು ಸಿರೇನಿಯನ್ಸ್ (ಮನಾಟೀ ಗಳು ಮತ್ತು ಡುಗಾಂಗ್ ಗಳು) ಮುಂತಾದ ಸಸ್ತನಿಗಳ ಜೊತೆ ಹಿಪ್ಪೋಗಳೂ ಕೂಡ ನೀರಿನಲ್ಲಿ ಹಡೆಯುತ್ತವೆ. ಹಸುಳೆ ಹಿಪ್ಪೋವು ನೀರಿನಲ್ಲಿ ಜನಿಸುತ್ತದೆ ಮತ್ತು ಅದು 25 ರಿಂದ 45 ಕೆಜಿ ವರೆಗೂ (60–110 lb) ಹಾಗು ಸರಾಸರಿ ಉದ್ದ 127 ಸೆಮೀ (50 ಇಂಚು) ಇರುತ್ತದೆ ಮತ್ತು ಅದು ತನ್ನ ಪ್ರಥಮ ಉಸಿರನ್ನು ಎಳೆದುಕೊಳ್ಳಲು ನೀರಿನ ಮೇಲ್ಮೈಗೆ ಈಜಿಕೊಂಡು ಬರಬೇಕಾಗುತ್ತದೆ.

ಒಂದು ತಾಯಿ ಹಿಪ್ಪೋ ಒಂದೇ ಹಿಪ್ಪೋಗೆ ಜನನ ಕೊಡುತ್ತದೆ ಎಂದಾದರೊಮ್ಮೆ ಅವಳಿ ಹಿಪ್ಪೋಗೆ ಜನನ ಕೊಟ್ಟಿರುವುದೂ ಇದೆ. ಸಣ್ಣ ಹಸುಳೆ ಹಿಪ್ಪೋಗೆ, ನೀರಿನ ಆಳ ಅತಿಯಾಗಿದ್ದು ಅವುಗಳ ತಾಯಿಯ ಬೆನ್ನನ್ನು ಅವಲಂಬಿಸುತ್ತದೆ ಮತ್ತು ಎದೆ ಹಾಲು ಹೂಡಿಸಲು ತಾಯಿ ತನ್ನ ಕಂದನನ್ನು ಕರೆದುಕೊಂಡು ಅರ್ಥಾತ್ ಈಜಿಕೊಂಡು ನೀರಿನ ಆಳಕ್ಕೆ ಹೋಗುತ್ತದೆ. ನೆಲದ ಮೇಲೂ ಎದೆ ಹಾಲು ಹೂಡಿಸುತ್ತದೆ ತಾಯಿ ಹಿಪ್ಪೋ. ಎದೆ ಹಾಲು ಉಣಿಸುವುದನ್ನು ಬಿಡಿಸಿ ಬೇರೆ ಆಹಾರ ಕೊಡುವುದು,ಇದು ಹಸುಳೆ ಜನಿಸಿ ಆರರಿಂದ ಎಂಟು ತಿಂಗಳ ಮಧ್ಯೆ ಪ್ರಾರಂಭಿಸಲಾಗುತ್ತದೆ ಆದರೆ ಕೆಲವೊಮ್ಮೆ ಕರುಗಳು ಒಂದು ವರ್ಷದ ತರುವಾಯ ತಾಯಿಯ ಎದೆ ಹಾಲನ್ನು ಬಿಡುತ್ತದೆ.

ದೊಡ್ದ ಸಸ್ತನಿಯ ತರಹ ಹಿಪ್ಪೋಗಳನ್ನು K-ಸ್ಟ್ರಾಟಜಿಸ್ಟ್ಸ್ ಎಂದು ವಿವರಿಸಲಾಗುತ್ತದೆ, ಇದರಲ್ಲಿ ಅವು ಎಷ್ಟೋ ವರ್ಷಗಳಿಗೊಮ್ಮೆ ಮಾತ್ರ ಸದೃಢಕಾಯವಾದ ಒಂದೇ ಒಂದು ಹಸುಳೆಯನ್ನು ಹೆರುತ್ತದೆ (ಸಣ್ಣ ಸಸ್ತನಿಯ ಹಾಗೆ ಪೂರ್ಣವಾಗಿ ಬೆಳೆಯದ ಹಸುಳೆಗಳನ್ನು ವರ್ಷವೊಂದರಲ್ಲಿ ಅನೇಕ ಹಸುಳೆಗಳನ್ನು ಹೆರುವುದಿಲ್ಲ,ಉದಾಹರಣೆಗೆ:ರೋಡೆಂಟ್ಸ್).

ಆಕ್ರಮಣ

ಹಿಪಪಾಟಮಸ್‌ಗಳು ಮಹಾನ್ ಕೋಪಿಷ್ಠ ಪ್ರಕೃತಿಯ ಪ್ರಾಣಿಗಳು. ವಯಸ್ಕ ಹಿಪ್ಪೋಗೆ ತಾವು ವಾಸಿಸುವ ಕೆರೆ ಮತ್ತು ನದಿಗಳಲ್ಲಿ ಜೊತೆಯಲ್ಲೇ ಬಾಳುವ ಮೊಸಳೆ ಗಳು ಎಂದರೆ ಶತ್ರುವಿನ ಭಾವನೆ. ಹಿಪ್ಪೋಗಳ ಮರಿಗಳು ಸುತ್ತ ಇದ್ದಾಗ ಈ ಭಾವನೆ ವಿಶೇಷವಾಗಿ ಕಂಡು ಬರುತ್ತದೆ. ನೈಲ್ ಮೊಸಳೆ ಗಳು, ಸಿಂಹ ಗಳ ಜೊತೆಗೆ ಮತ್ತು ಚುಕ್ಕೆಗಳುಳ್ಳ ಹೈನಾ ಗಳು, ಚಿಕ್ಕ ವಯಸ್ಸಿನ ಹಿಪ್ಪೋಗಳನ್ನು ಕೊಂದು ತಿನ್ನುತ್ತವೆ. ಹಿಪ್ಪೋಗಳು ಮನುಷ್ಯನ ಬಗ್ಗೆ ತುಂಬಾ ಆಕ್ರಮಣಕಾರಿ ಧೋರಣೆಯುಳ್ಳ ಪ್ರಾಣಿಗಳು, ದೊಡ್ಡ ಪ್ರಾಣಿಗಳಲ್ಲೇ ಇವು ಅತ್ಯಂತ ಕ್ರೂರ ಪ್ರಾಣಿಯೆಂದು ಆಫ್ರೀಕಾದಲ್ಲಿ ಪರಿಗಣಿಸಲಾಗಿದೆ. ವಾಸ್ತವಾಗಿ, ಮನುಷ್ಯನನ್ನು ಮತ್ತು ದೋಣಿಗಳನ್ನು ಆಕ್ರಮಣ ಮಾಡುವುದರಲ್ಲಿ ಹಿಪ್ಪೋಗಳು ಪ್ರಸಿದ್ಧಿ ಪಡೆದಿವೆ.

ಭೂಪ್ರದೇಶವನ್ನು ಗುರುತು ಮಾಡುವುದಕ್ಕೆ, ಹಿಪ್ಪೋಗಳು ತಮ್ಮ ಮಲವನ್ನು ಬಿಸಾಡುವಾಗ ಬಾಲವನ್ನು ಆದಷ್ಟೂ ದೂರಕ್ಕೆ ತಿರುಗಿಸಿ ಎಸೆಯುತ್ತವೆ. ಈ ಕಾರಣಕ್ಕೇ ಅವು ರೆಟ್ರೋಮಿಂಜೆಂಟ್ಸ ಎಂದು ಹೇಳಲಾಗುತ್ತದೆ.

ಒಬ್ಬರಿಗೊಬ್ಬರು ನೆಲದ ಮೇಲೆ ಕಾದಾಡುವಾಗ ಕೂಡ ಅವುಗಳು ಕೊಂದುಕೊಳ್ಳುವುದಿಲ್ಲ. ಸಾಮಾನ್ಯವಾಗಿ ನೆಲದ ಮೇಲೆ ಗೂಳಿ ಮತ್ತು ತರುಣ ಹಿಪ್ಪೋ ಕಾದಾಡುವಾಗ ಅವುಗಳಲ್ಲಿ ಒಂದು ಹಿಪ್ಪೋ ಬಲಿಷ್ಠವಾಗಿದೆ ಎಂದು ತಿಳಿದೊಡನೆಯೇ ಕಾದಾಟ ನಿಲ್ಲಿಸಿಬಿಡುತ್ತವೆ. ಹಿಂಡಿನಲ್ಲಿ ಹಿಪ್ಪೋಗಳ ಸಂಖ್ಯೆ ಅಧಿಕವಾದಾಗ ಅವುಗಳ ಸಮೂಹ ಬಾಳುವ ಸ್ವಭಾವ ಕುಸಿಯುತ್ತದೆ, ಗೂಳಿಗಳು ಕೆಲವೊಮ್ಮೆ ಹಸುಳೆ ಹಿಪ್ಪೋವನ್ನು ಸಾಯಿಸಲು ಪ್ರಯತ್ನಿಸುತ್ತದೆ;ಕೆಲವೊಮ್ಮೆ ತಾಯಿ ಹಿಪ್ಪೋ ತನ್ನ ಕಂದನ ರಕ್ಷಿಸಲು ಆ ಗೂಳಿಯನ್ನೇ ಸಾಯಿಸುತ್ತದೆ, ಆದರೆ ಈ ಉದಾಹರಣೆಗಳು ಘಟಿಸುವುದು ಕಡಿಮೆಯೇ.

ನರಭಕ್ಷಣೆಯ ಉದಾಹರಣೆಗಳು ದಾಖಲಾಗಿವೆ ಆದರೆ ಇದು ಒತ್ತಡದಿಂದ ಬಳಲುತ್ತಿರುವ ಅಥವಾ ಕಾಯಿಲೆಯ ಹಿಪ್ಪೋಗಳಿಂದ ಮಾತ್ರ ಘಟಿಸಿರುತ್ತದೆ, ಸಾಧಾರಣವಾಗಿ ಆರೋಗ್ಯದಿಂದಿರುವ ಹಿಪ್ಪೋಗಳು ಈ ರೀತಿ ಮಾಡಿರುವುದು ಕಂಡು ಬಂದಿರುವುದಿಲ್ಲ.

ಹಿಪ್ಪೋಗಳು ಮತ್ತು ಮಾನವರು

ಹಿಪಪಾಟಮಸ್ 
ಈಜ್ಯಿಪ್ಟ್‌ನ ಹೊಸ ರಾಜಧಾನಿಯಲ್ಲಿ ಚಿತ್ರಿತ ಶಿಲೆ, 18ನೇ/19ನೇ ರಾಜಸಂತತಿ, c. 1500–1300 BCನಲ್ಲಿ ಹಿಪ್ಪೋಗಳು ಇನ್ನೂ ನೈಲ್ ನದಿಯ ಉದ್ದಕ್ಕೂ ವ್ಯಾಪಕವಾಗಿ ಹರಡಿತ್ತು
ಹಿಪಪಾಟಮಸ್ 
1852ನಲ್ಲಿ ಲಂಡನ್ ಮೃಗಾಲಯನಲ್ಲಿ ಒಬೇಯಿಸಿಚ್

ಮನುಷ್ಯ ಮತ್ತು ಹಿಪ್ಪೋ ನಡುವನ ಪಾರಸ್ಪರಿಕ ಕ್ರಿಯೆ ನಡೆದಿರುವ ಸಾಕ್ಷ್ಯವು 160,000 ವರ್ಷಗಳ ಹಿಂದೆ ಬೌರಿ ರಚನೆಯಲ್ಲಿ ಹಿಪ್ಪೋ ಮೂಳೆಗಳ ಮೇಲೆ ಕಸಾಯಿಖಾನೆಯ ಗುರುತುಗಳಿಂದ ದೊರೆಯುತ್ತದೆ.

ಮಧ್ಯ ಸಹಾರಾ ದ ಡಿಜೇನೆಟ್ ಬಳಿಯ ಟಾಸಿಲಿ ಎನ್’ಅಜ್ಜರ್ ಬೆಟ್ಟಗಳಲ್ಲಿ 4,000–5,000 ವರ್ಷಗಳ ಹಿಂದೆ ದೊರಕಿರುವ ವರ್ಣ ಕಲೆಗಳಲ್ಲಿ ಮತ್ತು ಕೆತ್ತನೆಗಳಲ್ಲಿ ಹಿಪ್ಪೋಗಳನ್ನು ಬೇಟೆ ಆಡಿರುವ ಬಗ್ಗೆ ಗೊತ್ತಾಗುತ್ತದೆ.

ಹಿಪ್ಪೋಗಳು ಪುರಾತನ ಈಜ್ಯಿಪ್ಟ್ ನವರಿಗೂ ಚನ್ನಾಗಿಯೇ ಗೊತ್ತಿದೆ, ಹಿಪ್ಪೋಗಳನ್ನು ನೈಲ್ ನದಿಯ ಉಗ್ರ ಸ್ಥಳವಂದಿಗ ಎಂದು ಪರಿಗಣಿಸಲಾಗಿದೆ. ಈಜ್ಯೀಪ್ಟ್ ಪುರಾಣ ಕಥೆಗಳಲ್ಲಿ ಹಿಪಪಾಟಮಸ್‌ನ ತಲೆ ಹೊಂದಿರುವ ತವಾರೆಟ್ ಎನ್ನುವ ಹೆಸರಿನ ದೇವತೆಯನ್ನು ಆರಾಧಿಸುತಿದ್ದನ್ನು ಉಲ್ಲೇಖಿಸಲಾಗಿದೆ, ಅದು ಸ್ತ್ರೀಯರು ಗರ್ಭಿಣಿ ಆಗಿದ್ದಾಗ ಹಾಗೂ ಹಸುಳೆಯನ್ನು ಹಡೆದಾಗ ರಕ್ಷಿಸುತ್ತದೆ ಎಂದು ನಂಬಲಾಗಿದೆ, ಇದಕ್ಕೆ ಕಾರಣ ಹೆಣ್ಣು ಹಿಪಪಾಟಮಸ್‌ಗಳು ತಮ್ಮ ಮರಿಗಳನ್ನು ರಕ್ಷಿಸುವುದನ್ನು ಇಲ್ಲಿ ಗಂಭೀರವಾಗಿ ಪರಿಗಣಿಸಿರುವುದರಿಂದ ಈ ನಂಬುಗೆ ಹುಟ್ಟಿದೆ ಎನ್ನಲಾಗಿದೆ.

ಇತಿಹಾಸಗಾರರಿಗೆ ಹಿಪಪಾಟಮಸ್‌ಗಳ ಬಗ್ಗೆ ಸಾಂಪ್ರದಾಯಿಕ ಪ್ರಾಚೀನತೆಯಿಂದಲ್ಲೂ ತಿಳಿದಿದೆ. ಗ್ರೀಕ್ ಇತಿಹಾಸಗಾರ ಹೀಯೋಡಟಸ್ ಹಿಪಪಾಟಮಸ್‌ಗಳನ್ನು ದಿ ಹಿಸ್ಟರೀಸ್ ನಲ್ಲಿ ವಿವರಿಸಿದ್ದಾನೆ (ಸಿರ್ಕಾ 440 BCನಲ್ಲಿ ಬರೆಯಲಾಗಿದೆ) ಮತ್ತು ರೋಮನ್ ಇತಿಹಾಸಗಾರ ಪ್ಲೀನಿ ದಿ ಎಲ್ಡರ್ ಹಿಪಪಾಟಮಸ್‌ಗಳ‌ ಬಗ್ಗೆ ತನ್ನ ಎನ್‌ಸೈಕ್ಲೋಪೀಡೀಯಾ ನ್ಯಾಚುರಾಲಿಸ್ ಹಿಸ್ಟೋರಿಯಾ ದಲ್ಲಿ ಬರೆದಿರುತ್ತಾನೆ (ಸಿರ್ಕಾ 77 AD).

ಮೃಗಾಲಯದಲ್ಲಿ ಹಿಪ್ಪೋಗಳು

ಹಿಪಪಾಟಮಸ್‌ಗಳು ಹಿಂದಿನಿಂದಲ್ಲೂ ಮೃಗಾಲಯದ ಜನಪ್ರಿಯ ಪ್ರಾಣಿ. ಮೇ 25, 1850ರಲ್ಲಿ ಲಂಡನ್ ಮೃಗಾಲಯಕ್ಕೆ ಆಗಮಿಸಿದ ಆಧುನಿಕ ಇತಿಹಾಸದ ಮೊದಲ ಮೃಗಾಲಯದ ಹಿಪ್ಪೋ ಎಂದರೆ ಒಬೇಯಿಶ್, ಇದು ದಿನವೊಂದಕ್ಕೆ 10,000 ಭೇಟಿಗಾರರನ್ನು ಸೆಳೆಯುತ್ತಿತ್ತು ಮತ್ತು ಹಿಪಪಾಟಮಸ್ ಪೊಲ್ಕಾ ಎನ್ನುವ ಜನಪ್ರಿಯ ಹಾಡಿನ ಉಗಮಕ್ಕೆ ಕಾರಣವಾಯಿತು. ಒಬೇಯಿಶ್ ಆಗಮನದಿಂದ ಹಿಪ್ಪೋಗಳು ಜನಪ್ರಿಯ ಮೃಗಾಲಯದ ಪ್ರಾಣಿಗಳಾಗಿವೆ ಮತ್ತು ಸಾಮಾನ್ಯವಾಗಿ ಅವು ಸೆರೆಯಲ್ಲಿ ಚನ್ನಾಗಿ ಪ್ರಸವಿಸುತ್ತದೆ. ಆದರೆ ಅವುಗಳ ಜನನದ ಪ್ರಮಾಣವು ಕಾಡಿನಲ್ಲಿದ್ದಕ್ಕಿಂತ ಕಡಿಮೆ ಇರುತ್ತದೆ ಇದಕ್ಕೆ ಕಾರಣ ಮೃಗಾಲಯದವರಿಗೆ ಇವುಗಳ ಗಾತ್ರದಿಂದಾಗಿ ಸಾಕುವುದಕ್ಕೆ ಕಷ್ಟವಾಗುತ್ತದೆ ಮತ್ತು ದುಬಾರಿಯೂ ಆಗುತ್ತದೆ ಆದುದರಿಂದ ಅವರು ಅಧಿಕ ಜನನಕ್ಕೆ ಪ್ರೋತ್ಸಾಹಿಸುವುದಿಲ್ಲ.

ಅನೇಕ ಹಿಪ್ಪೋಗಳು ಮೃಗಾಲಯದ ಸೆರೆಯಲ್ಲಿ ಜನಿಸಿರುವುದಾಗಿದೆ. ಅಂತಾರಾಷ್ಟ್ರ‍ೀಯ ಮೃಗಾಲಯ ವ್ಯವಸ್ಥೆಯಲ್ಲಿ ವೈವುಧ್ಯ ಹಿಪ್ಪೋಗಳ ತಳಿಯ ಜನನಕ್ಕೆ ಸಾಕಾಗುವಷ್ಟು ಹಿಪ್ಪೋಗಳಿದೆ ಆದುದರಿಂದ ಸಂತತಿಯ ಮುಂದುವರಿಕೆಗೆಂದೇ ಕಾಡಿನಿಂದ ಹಿಪ್ಪೋಗಳನ್ನು ಕರೆತರುವ ಅಗತ್ಯ ಇಲ್ಲ.

ಮೃಗಾಲಯದ ಇತರ ಅನೇಕ ಪ್ರಾಣಿಗಳಂತೆ ಹಿಪ್ಪೋಗಳನು ಕೂಡ ಸಾಂಪ್ರದಾಯಿಕ ಕಾಂಕ್ರೀಟ್ ಮನೆಗಳಲ್ಲೇ ಇಟ್ಟು ಪ್ರದರ್ಶಿಸಲಾಗುತ್ತದೆ. ಹಿಪ್ಪೋಗಳ ವಿಚಾರದಲ್ಲಿ ಅವುಗಳಿಗೆ ಒಂದು ಸಣ್ಣ ಕುಂಟೆ ಮತ್ತು ಒಂದಷ್ಟು ಹುಲ್ಲಿನ ಹಾಸನ್ನು ಒದಗಿಸಲಾಗುತ್ತದೆ. 1980ರಿಂದೀಚೆಗೆ, ಮೃಗಾಲಯದ ವಿನ್ಯಾಸಗಾರರು ಆದಷ್ಟೂ ಪ್ರಾಣಿಗಳ ತವರು ನೆಲದಂತೆಯೇ ಕಾಣಿಸುವಂತೆ ಮೃಗಾಲಯವನ್ನು ವಿನ್ಯಾಸಗೊಳಿಸುತ್ತಿದರು. ಇವುಗಳಲ್ಲಿ ಅತ್ಯುತ್ತಮವೆಂದರೆ ಟೊಲೆಡೊ ಮೃಗಾಲಯ ಹಿಪ್ಪೋಕ್ವಾರೀಯಂ, ಇದರಲ್ಲಿ 360,000 ಗ್ಯಾಲನ್‌ನಿನ ನೀರಿನ ಕುಂಟೆಗಳನ್ನು ಹಿಪ್ಪೋಗಳಿಗೆಂದೇ ವಿನ್ಯಾಸಗೊಳಿಸಲಾಗಿದೆ. 1987ರಲ್ಲಿ ಟೊಲೆಡೊ ಮೃಗಾಲಯದಲ್ಲಿ ಸಂಶೋಧಕರು ಮೊದಲ ಬಾರಿಗೆ ನೀರಿನಾಳದಲ್ಲಿ (ಕಾಡಿನಲ್ಲಿ ಆದಂತೆ) ನಡೆವ ಪ್ರಸವವನ್ನು ಚಿತ್ರೀಕರಿಸಲ್ಲು ಸಾಧ್ಯವಾಯಿತು. ಈ ಪ್ರದರ್ಶಕವು ಎಷ್ಟು ಜನಪ್ರಿಯವಾಯಿತೆಂದರೆ ಟೊಲೆಡೋ ಮೃಗಾಲಯ ದ ಲಾಂಚನವೇ ಹಿಪಪಾಟಮಸ್ ಆಯಿತು.

ಸಂಸ್ಕೃತಿಯ ವರ್ಣನೆ

ಹಿಪಪಾಟಮಸ್ 
ಹಿಪಪಾಟಮಸ್ ಪೋಲ್ಕಾದ ಪ್ರಸಾರ. ಅಸಂಭವೆನ್ನಬಹುದಾದ ಹಿಪ್ಪೋಗಳ ಕುಣಿತದ ಚಿತ್ರ ಡಿಸ್ನೀ ಫಾಂಟೇಸಿಯಾದಲ್ಲಿ ಧ್ವನಿಸಿತು.

ಗ್ರೀಕರು ಮತ್ತು ರೋಮನರ ದೃಷ್ಠಿಯಲ್ಲಿ ಹಿಪಪಾಟಮಸ್ ಎಂದರೆ ಅದು ನೈಲ್ ನದಿಯ ಜಾನುವಾರು ಅಥವಾ ಮೃಗ. ಕೆಂಪು ವರ್ಣದ ಹಿಪ್ಪೋ ಪುರಾತನ ಈಜ್ಯಿಪ್ಟ್ ದೇವರ Set; ಹಿಪ್ಪೋನ ತೊಡೆ ಪುರುಷತ್ವಕ್ಕೆ ಲೈಂಗಿಕ ಪ್ರಜ್ಞೆಯನ್ನು ಉದ್ಧೀಪಿಸುವ ಸಂಕೇತವಾಗಿ ಕಾಣಲಾಗಿದೆ. ದೇವರುಗಳ ಸಾಲಿನಲ್ಲಿ ತವಾರೆಟ್ ಎಂಬ ದೇವತೆಯಲ್ಲೂ ಕೂಡ ಹಿಪ್ಪೋನ ಭಾಗ ಒಂದನ್ನು ಗುರುತಿಸಲಾಗಿತ್ತು. ಬುಕ್ ಆಫ್ ಜಾಬ್ 40:15–24 ನಲ್ಲಿ ಉಲ್ಲೇಖಿಸಿರುವ ದೊಡ್ದ ಪ್ರಾಣಿ ಕೂಡ ಹಿಪ್ಪೋ ಎಂದೇ ಆಲೋಚಿಸಲಾಗಿದೆ.

ಹಿಪಪಾಟಮಸ್ ಪೋಲ್ಕ ಹಾಡಿಗೆ ಒಬೆಯಸಿಚ್ ಸ್ಫೂರ್ತಿಯಾಗಿದ್ದೇ ಪಶ್ಚಿಮದ ಸಂಸ್ಕೃತಿ ನಲ್ಲಿ ಹಿಪಪಾಟಮಸ್‌ಗಳ ದುಂಡಗಿನ ಆಕಾರದಿಂದಾಗಿ ಹಾಸ್ಯದ ವಸ್ತು ಆಗಿ ಬಹು ಜನಪ್ರಿಯಗೊಂಡವು. 1930ರಲ್ಲಿ ದೇಶದಾದ್ಯಂತ ಹುಬೆರ್ಟಾ ರೀತಿಯ ಹಿಪ್ಪೋಗಳ ಕಥೆಗಳು ದಕ್ಷಿಣ ಆಫ್ರೀಕಾ ದಲ್ಲಿ ಪ್ರಸಿದ್ಧಿ ಪಡೆದವು; ಅಥವಾ ಓವೆನ್ ಮತ್ತು ಎಂಜೀ ಹಿಪ್ಪೋ ಮತ್ತು ಆಮೆ ಸ್ನೇಹ ಬೆಳಸಿದ ಕಥೆ ಜನರನ್ನು ರಂಜಿಸಿದೆ, ಇವೆಲ್ಲಾ ಜನರು ಹಿಪ್ಪೋನ ಬಗ್ಗೆ ಇರುವ ಪುಸ್ತಕಗಳನ್ನು,ಹಿಪ್ಪೋನ ರೂಪದ ಆಟಿಕೆಗಳು ಮತ್ತು ಇನ್ನೂ ಅನೇಕ ಹಿಪ್ಪೋ ಬಗೆಗಿನ ವಾಣಿಜ್ಯ ಸರಕುಗಳನ್ನು ಕೊಂಡುಕೊಳ್ಳುವುದಕ್ಕೆ ಕಾರಣವಾಗಿದೆ. 1953ರಲ್ಲಿ, ನಾವೀನ್ಯತೆಯುಳ್ಳ "ಐ ವಾಂಟ್ ಎ ಹಿಪಪಾಟಮಸ್ ಫಾರ್ ಕ್ರಿಸ್‌ಮಸ್" ಎನ್ನುವ ಕ್ರಿಸ್‌ಮಸ್ ಹಾಡು ಜನಪ್ರಿಯವಾಗಿ ಬಾಲ ಕಲಾವಿದ ಗಾಯ್ಲಾ ಪೀವೇಯ್ ಗೆ ತಾರಾಪಟ್ಟವನ್ನು ತಂದುಕೊಟ್ಟಿತು.. ಫ್ಲಾಂಡರ್ಸ್ ಮತ್ತು ಸ್ವಾನ್ನ್ ರ "ದಿ ಹಿಪಪಾಟಮಸ್" ಮತ್ತು "ಹಿಪ್ಪೋ ಎನ್‌ಕೋರ್" ಎನ್ನುವ ಹಾಡುಗಳಲ್ಲೂ ಹಿಪ್ಪೋಗಳು ವಿಜೃಂಭಿಸಿದವು ಅದರಲ್ಲಿ ಮಡ್, ಮಡ್, ಗ್ಲೋರಿಯಸ್ ಮಡ್ ಎನ್ನುವ ಪಲ್ಲವಿ ಬಹು ಜನಪ್ರಿಯವಾಯಿತು. ಹಂಗ್ರೀ ಹಂಗ್ರೀ ಹಿಪ್ಪೋಗಳು ಎನ್ನುವ ಆಟವೊಂದಕ್ಕೂ ಹಿಪ್ಪೋಗಳು ಸ್ಫೂರ್ತಿಯಾದವು.

ಕಾರ್ಟೂನ್ ಚಿತ್ರದ ಪಾತ್ರದಲ್ಲೂ ಅವು ಜನಪ್ರಿಯಗೊಂಡವು, ಅವುಗಳ ದುಂಡಗಿನ ಆಕಾರದಿಂದಾಗಿ ಜನರಲ್ಲಿ ಹಾಸ್ಯ ಉತ್ಪತ್ತಿಯಾಗುತ್ತಿತ್ತು. ಡಿಸ್ನಿ ಚಿತ್ರ ಫ್ಯಾಂಟೇಸಿಯಾ ದಲ್ಲಿ ಬ್ಯಾಲರೀನಾ ಹಿಪಪಾಟಮಸ್‌ಗಳು ಲಾ ಗಯೋಕೊಂಡಾ ಗೀತನಾಟಕದಲ್ಲಿ ಕುಣಿದವು. ಹಿಪ್ಪೋಗಳಿರುವ ಇತರ ಕಾರ್ಟೂನ್ ಚಿತ್ರವೆಂದರೆ ಹನ್ನಾ-ಬಾರ್ಬೆರಾ ನ ಪೀಟರ್ ಪೊಟಾಮಸ್, ಜಾರ್ಜ್ ಮತ್ತು ಮಾರ್ಥಾ ಎನ್ನುವ ಪುಸ್ತಕ ಮತ್ತು ಟಿ ವಿ ಸರಣಿ, ಜೀವಂತವೆನ್ನಿಸುವ ಕೀಲುಗೊಂಬೆ ಗಳಲ್ಲಿ ಫ್ಲೇವಿಯೋ ಮತ್ತು ಮಾರಿತಾ, ಫ್ರೆಂಚ್ ಜೋಡಿ ಕಲಾವಿದರ ಪ್ಯಾಟ್ ಎಟ್ ಸ್ಟ್ಯಾನ್ಲಿ , ದಿ ಬ್ಯಾಕ್‌ಯಾರ್ಡಿಗನಿನ ತಶಾ, ಮತ್ತು ಮದಾಗಸ್ಕರ್ ನ ಒಪ್ಪಂದದಿಂದ ಆದ ಗ್ಲೋರಿಯಾ ಹಾಗೂ ಮೋಟೋ-ಮೋಟೋ.

1988ನಲ್ಲಿ, ಮುನಿಚ್ ಮೂಲದ ಫ್ರೆಂಚ್ ವಿನ್ಯಾಸಗಾರ ಆಂಡ್ರೀ ರೋಚ್ ಇಟಾಲೀಯನ್ ಚಾಕೋಲೇಟ್ ಕಂಪನಿ ಫೆರೆರೋ ಸ್ಪಾಗಾಗಿ "ಕಿಂಡರ್ ಸರ್ಪ್ರೈಸ್ ಮೊಟ್ಟೆ" ನಲ್ಲಿ "ಹ್ಯಾಪಿ ಹಿಪ್ಪೋಸ್" ಎನ್ನುವ ಪಾತ್ರವನ್ನು ಸೃಷ್ಟಿಸಿದ, ಈ ಪಾತ್ರಗಳು ನೈಜ ಹಿಪ್ಪೋಗಳಂತೆ ಸೌಮ್ಯವಾಗಿರಲಿಲ್ಲ ಬದಲಾಗಿ ಆಕರ್ಷವಾಗಿ ಮತ್ತು ಜೀವಂತವೆನ್ನುವಂತೆ ಮಾಡಲಾಗಿತ್ತು, ಇದು ಎಷ್ಟು ಯಶಸ್ಸನ್ನು ಕಂಡಿತು ಎಂದರೆ ಈ ಕಂಪನಿಯ ವಿವಿಧ ಉತ್ಪನ್ನಗಳಿಗೆ ಈ ಮಾದರಿಯ ಪಾತ್ರದ ಆಟಿಕೆಗಳನ್ನು ಪ್ರತಿ ವರ್ಷವೂ ಬಳಸಲಾಗುತ್ತಿತ್ತು ಮತ್ತು ಪ್ರತಿ ಸಾರಿಯೂ ಅದು ಕಂಪನಿಯ ಜನಪ್ರಿಯತೆಯನ್ನು ಹೆಚ್ಚಿಸುತ್ತಿತ್ತು. 2001 ಮತ್ತು 2007ರಲ್ಲಿ ನಿಂಟೆಂಡೋ ಕಂಪನಿಯವರು ಗೇಮ್ ಬಾಯ್ ಅಡ್ವೆಂಚ್ಯೂರ್ಸ್ ಅನ್ನು ಪ್ರಕಟಿಸಿದರು.

ಚೆಸ್ ಆಟದಲ್ಲಿ, ರಕ್ಷಣೆಯ ಕಾಯಿಯೊಂದಕ್ಕೆ ಹಿಪಪಾಟಮಸ್ ಹೆಸರನ್ನು ಬಳಸಲಾಗಿದೆ, ಸಾಹಸವಿಲ್ಲದ ಆಟದ ಆರಂಭಕ್ಕೆ ಹಿಪಪಾಟಮಸ್ ಡಿಫೆನ್ಸ್ ಹೆಸರನ್ನು ಉಪಯೋಗಿಸಲಾಗಿದೆ.

250 ADನಲ್ಲಿ, ರೋಮ್‌ನ 1000 ವರ್ಷಗಳ ಜ್ಞಾಪಕಾರ್ಥವಾಗಿ ರೋಮ್‌ನ ರಾಜ ಫಿಲಿಪ್ I ಪಳಗಿಸಿದ ಪ್ರಾಣಿಗಳನ್ನು ತಂದು ಕುಸ್ತಿಮಲ್ಲರ ಜೊತೆ ಕಾಳಗ ಮಾಡಲು ಬಿಡುತ್ತಿದ್ದ ಅವುಗಳಲ್ಲಿ ಹಿಪಪಾಟಮಸ್‌ಗಳೂ ಇರುತ್ತಿದ್ದವು. ಆ ವರ್ಷ ಬೆಳ್ಳಿಯ ನಾಣ್ಯಗಳ ಮೇಲೆ ಹಿಪಪಾಟಮಸ್‌ಗಳ ಚಿತ್ರವನ್ನು ಮುದ್ರಿಸಲಾಗಿತ್ತು.

ಆಕರಗಳು

This article uses material from the Wikipedia ಕನ್ನಡ article ಹಿಪಪಾಟಮಸ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.

Tags:

ಹಿಪಪಾಟಮಸ್ ಶಬ್ದವ್ಯುತ್ಪತ್ತಿ ಶಾಸ್ತ್ರಹಿಪಪಾಟಮಸ್ ಜೀವ ವರ್ಗೀಕರಣ ಶಾಸ್ತ್ರ ಮತ್ತು ಉಗಮಗಳುಹಿಪಪಾಟಮಸ್ ಚಿತ್ರಣಹಿಪಪಾಟಮಸ್ ಹಂಚಿಕೆ-ವಿತರಣೆಹಿಪಪಾಟಮಸ್ ನಡವಳಿಕೆಹಿಪಪಾಟಮಸ್ ಹಿಪ್ಪೋಗಳು ಮತ್ತು ಮಾನವರುಹಿಪಪಾಟಮಸ್ ಆಕರಗಳುಹಿಪಪಾಟಮಸ್ ಬಾಹ್ಯ ಕೊಂಡಿಗಳುಹಿಪಪಾಟಮಸ್ಕುಟುಂಬಜಿರಾಫೆ

🔥 Trending searches on Wiki ಕನ್ನಡ:

ಪರ್ವತ ಬಾನಾಡಿಶಿವರಾಮ ಕಾರಂತಮಹಾವೀರ ಜಯಂತಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುರಾಜಕೀಯ ಪಕ್ಷವಿರಾಟ್ ಕೊಹ್ಲಿಭರತೇಶ ವೈಭವಕೆ. ಎಸ್. ನಿಸಾರ್ ಅಹಮದ್ಧೃತರಾಷ್ಟ್ರತತ್ಸಮ-ತದ್ಭವಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆತಿಂಥಿಣಿ ಮೌನೇಶ್ವರತೀ. ನಂ. ಶ್ರೀಕಂಠಯ್ಯಭೂಮಿಕನ್ನಡ ಅಕ್ಷರಮಾಲೆಜನ್ನಕನ್ನಡ ಚಂಪು ಸಾಹಿತ್ಯಗ್ರಾಮ ಪಂಚಾಯತಿಬೌದ್ಧ ಧರ್ಮಲಕ್ಷ್ಮಿಕಾರ್ಮಿಕರ ದಿನಾಚರಣೆಕೇಂದ್ರ ಲೋಕ ಸೇವಾ ಆಯೋಗವೆಂಕಟೇಶ್ವರಜಿ.ಎಸ್.ಶಿವರುದ್ರಪ್ಪರಾಷ್ಟ್ರೀಯ ಜನತಾ ದಳಸಾರ್ವಭೌಮತ್ವಬಾದಾಮಿ ಗುಹಾಲಯಗಳುಹರಪ್ಪರಾಷ್ಟ್ರೀಯ ಸೇವಾ ಯೋಜನೆಕದಂಬ ಮನೆತನತ್ರಿಪದಿಹಿಂದೂ ಧರ್ಮಭರತನಾಟ್ಯಶೃಂಗೇರಿರಾವಣಮಾನವನ ನರವ್ಯೂಹಅಲೆಕ್ಸಾಂಡರ್ವಚನ ಸಾಹಿತ್ಯಬಸವಲಿಂಗ ಪಟ್ಟದೇವರುಕನ್ನಡದಲ್ಲಿ ಗದ್ಯ ಸಾಹಿತ್ಯಕರ್ನಾಟಕದ ತಾಲೂಕುಗಳುಝಾನ್ಸಿ ರಾಣಿ ಲಕ್ಷ್ಮೀಬಾಯಿತಾಳೆಮರಏಳು ಪ್ರಾಣಾಂತಿಕ ಪಾಪಗಳುವ್ಯವಸಾಯವಿಜಯಾ ದಬ್ಬೆಶಾಂತಲಾ ದೇವಿಭೀಷ್ಮಹುಲಿಬಿದಿರುಕಾವೇರಿ ನದಿಶಬರಿಗೀತಾ ನಾಗಭೂಷಣಅಂತಾರಾಷ್ಟ್ರೀಯ ಸಂಬಂಧಗಳುಪಕ್ಷಿನುಡಿಗಟ್ಟುಕರ್ನಾಟಕದ ಮುಖ್ಯಮಂತ್ರಿಗಳುಪ್ರೀತಿನಂಜನಗೂಡುಜಾಗತಿಕ ತಾಪಮಾನ ಏರಿಕೆಕರ್ನಾಟಕದ ಜಾನಪದ ಕಲೆಗಳುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಸಾವಿತ್ರಿಬಾಯಿ ಫುಲೆಕೃಷಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಮಹಮದ್ ಬಿನ್ ತುಘಲಕ್ದೆಹಲಿದೆಹಲಿ ಸುಲ್ತಾನರುಬಾರ್ಲಿತ್ರಿವೇಣಿನಾಯಿಕುವೆಂಪುವಡ್ಡಾರಾಧನೆಚಂದ್ರಗುಪ್ತ ಮೌರ್ಯಬೆಸಗರಹಳ್ಳಿ ರಾಮಣ್ಣತುಳಸಿವಾಟ್ಸ್ ಆಪ್ ಮೆಸ್ಸೆಂಜರ್ಭಾರತದ ರಾಷ್ಟ್ರೀಯ ಉದ್ಯಾನಗಳುಭೂತಾರಾಧನೆ🡆 More