ಮನಶ್ಶಾಸ್ತ್ರ

ಟೆಂಪ್ಲೇಟು:Cleanup- ಭಾಷೆಯನ್ನು ತಿದ್ದಬೇಕು

ಮನಶ್ಶಾಸ್ತ್ರ

ಮನಃಶಾಸ್ತ್ರವು ವೈಜ್ನಾನಿಕವಾಗಿ ಮನಸ್ಸಿನ ಭಾವನೆಗಳು ಮತ್ತು ಅದರ ಕಾರ್ಯಗಳ ಶೈಕ್ಷಣಿಕ ಮತ್ತು ಪ್ರಾಯೊಗಿಕ ಅಧ್ಯಯನದ ಅಂಗವಾಗಿದೆ. ಮನಶ್ಶಾಸ್ತ್ರದ ಮುಖ್ಯ ಗುರಿಯು ಮನುಷ್ಯನ ವೈಕ್ತಿಕವಾಗಿ ಹಾಗು ಗುಂಪುಗಳಾಗಿ ಕೆಲವು ಸಾಮನ್ಯ ತತ್ವಗಳು ಮತ್ತು ವೈಜ್ನಾನಿಕ ಅನುಸಂಧಾನದ ಮೂಲಕ ಅರಿಯುವುದಾಗಿದೆ. ಈ ಶಾಸ್ತ್ರದ ಮುಖ್ಯ ಊದ್ಧೆಶ ಸಮಾಜಕ್ಕೆ ಒಳಿತ್ತನ್ನು ಊಂಟು ಮಾಡುವುದಾಗಿದೆ. ಈ ರಂಗದಲ್ಲಿ ವೃತ್ತಿಪರವಾಗಿ ತೊಡಗಿಸಿಕೊಂಡು ಅಥವಾ ವೈಜ್ನಾನಿಕ ಅನುಸಂಧಾನಲ್ಲಿ ತೊಡಗಿಸಿಕೊಂಡಿರುವರನ್ನು "ಮನಃಶಾಸ್ತ್ರಜ್ಞ"ರೆಂದು ಕರೆಯುತ್ತರೆ. ಇವರನ್ನು "ಸಾಮಾಜಿಕ " "ನಡುವಳಿಕೆ" ಹಾಗು "ಅರಿವು" ಎಂದು ವಿಂಗಡಿಸಬಹುದು . ಮನಃಶಾಸ್ತ್ರಜ್ಞರು ವ್ಯ್ಕಕ್ತಿಗಳ ಮಾನಸಿಕ ಚತುವಟಿಕೆಗಳನ್ನು ಮತ್ತು ಅವರ ಸಾಮಾಜಿಕ ನಡುವಳಿಕೆಗಳನ್ನು ಅರಿಯಲು ಪ್ರಯತ್ನಿಸುದರರೊಂದಿಗೆ , ಮನಸ್ಸಿನ ಮತ್ತು ನರಮಂಡಲದ ಕಾರ್ಯನಿವರ್ಹಣಯ ಬಗ್ಗೆ ಸಹ ತಿಳಿಯುವುದಾಗಿದೆ

ಇತಿಹಾಸ

ಮನಶ್ಶಾಸ್ತ್ರದ ತತ್ವಗಳು ಅಧ್ಯಯನವು ಅತಿ ಪುರಾತನ ನಾಗರಿಕತೆಗಳಾದ ಈಜಿಪ್ಟ್,,ಗ್ರೀಸ್, ಚೀನ, ಭಾರತ ಮತ್ತು ಪರಿಷ್ಯನ್ ನಾಗರಿಕತೆ ಸಮಯದಿಂದ ನಡೆದು ಬಂದಿದೆ. ಇತಿಹಾಸಕಾರರು ಪುರಾತನ ಗ್ರೀಕ್ ಇತಿಹಾಸಕಾರರಾದ ಥೆಲ್ಸ್, ಪ್ಲೆಟೊ ಹಾಗು ಅರಿಸ್ಟಾಟಲ್ ಮುಂತಾದವರ ಬರವಣಿಗೆಯಲ್ಲಿ ಕೆಲವು ಪ್ರಮುಖ ವಿಚಾರಗಳು ಪಶ್ಚಿಮದ ರಾಷ್ಟ್ರಗಳಲ್ಲಿ ಮನಶ್ಶಾಸ್ತ್ರದ ಬಂದಿರುವುದನ್ನು ಊಲ್ಲೆಖಿಸಿದ್ದಾರೆ..ಕ್ರಿ.ಪೂ ೪ನೇ ಶತಮಾನದಲ್ಲಿ ಶ್ರೇಷ್ಟ ವೈದ್ಯನಾದ ಹಿಪ್ಪೊಕ್ರೇಟ್ಸ್ ಮಾನಸಿಕ ದುರ್ಬಲತೆ ಶಾರಿರಿಕ ತೊಂದರೆಯೆ ಹೊರೆತು ದೈವಿಕ ಪ್ರಕ್ರಿಯಲ್ಲ ಎಂದು ತಿಳಿಸಿದ್ದರು.

ಸ್ಟ್ರಕ್ಚರಲಿಸಂ

ಜರ್ಮನಿಯ ವೈದ್ಯರಾದ ವಿಲ್ಹ್ಮೆ ವುಂಟ್ ಮೊದಲ ಬಾರಿಗೆ ಪ್ರಾಯೊಗಿಕವಾಗಿ ಮನಶ್ಶಾಸ್ತ್ರವನ್ನು ಪ್ರಯೋಗಶಾಲೆಯಲಿ ಪ್ರಯೋಗಿಸಿ "ಪ್ರಾಯೋಗಿಕ ಮನಶ್ಶಾಸ್ತ್ರದ ಪಿತಾಮಹ" ಎಂಬ ಖ್ಯಾತಿಯನ್ನು ಗಳಿಸಿದರು. ಲೆಪಲ್ ವಿಶ್ವವಿದ್ಯಾನಿಲಯದಲ್ಲಿ ಮೊದಲ ಬಾರಿಗೆ ಮಾನಸಿಕ ಪ್ರಕ್ರಿಯೆಯನ್ನು ಹಲವು ಪ್ರಥಮಿಕ ವಿಭಾಗಗಳಿಸಿ ವಂಗದಿಸಿದರು. ಹೇಗೆ ರಸಾಯನ ಶಾಸ್ತ್ರದಲ್ಲಿ ಯಾವುದೆ ಪದಾರ್ಥವನ್ನು ವಿಭಜನೆ ಅಧ್ಯಯನ ಮಾದುವಂತೆ ಮನಶ್ಶಾಸ್ತ್ರದಲ್ಲು ಸಹ ಪ್ರಯತ್ನ ಮಾಡಿದರು. ವುಂಟ್ ಅವರ ಒಡನೆ ಅಧ್ಯಯನ ನಡೆಸಿದ ಎಡ್ವರ್ಡ್ ಟಿಚನರ್ ಸಹ "ಸ್ಟ್ರಕ್ಚರಲ್" ಮಾರ್ಗದ ಹರಿಕಾರನೆಂದು ಗುರುತಿಸಲ್ಪಡುತ್ತಾರೆ.

ಫಂಕ್ಶನಲಿಸಿಂ

ಸ್ಟ್ರಕ್ಚರಲಿಸಂ ಸಿಧ್ಧಾಂತಕ್ಕೆ ಪ್ರತಿಕ್ರಿಯೆಯಾಗಿ ಫಂಕ್ಶನಲಿಸಿಂ ಸಿಧ್ಧಾಂತವನ್ನು ಅಮೇರಿಕಾದ ಮನಶಾಸ್ತ್ರಜ್ಞನಾದ ವಿಲಿಯಂ ಜೇಮ್ಸ್ ಪ್ರಚಲಿತಗೊಳಿಸಿದರು. ಜೇಮ್ಸ್ ಮನಶ್ಶಾಸ್ತ್ರವು ಸಾಮನ್ಯರಿಗೆ ಉಪಯೋಗಕಾರಿಯಾಗಿದ್ದು , ಮನಶಾಸ್ತ್ರಜ್ಞರು ಮನುಷ್ಯನ ಮಾನಸಿಕ ಆರೋಗ್ಯಕ್ಕೆ ಬಳಸಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ೧೮೯೦ರಲ್ಲಿ ಪ್ರಕಾಶಿತಗೊಂಡ ಅವರ "ಪ್ರಿನ್ಸಿಪಲ್ಸ್ ಆಫ್ ಸೈಕಾಲಜಿ" ಯಲ್ಲಿ ಮುಂದಿನ ದಿನಗಳಲ್ಲಿ ಮನಶಾಸ್ತ್ರಜ್ಞರು ವಿಚಾರ ಮಾಡುವಂತ ಅನೇಕ ಪ್ರಶ್ನೆಗಳಿಗೆ ಭದ್ರವಾದ ಬುನಾದಿಯನ್ನು ಹಾಕಿದರು. ಫಂಕ್ಶನಲಿಸಿಂ ಸಿಧ್ಧಾಂತ ಇತರೆ ಪ್ರಮುಖ ವಿಚಾರವಾದಿಗಳೆಂದರೆ ಜಾನ್ ಡೀವಿ ಮತ್ತು ಹಾರ್ವೆ ಕಾರ್. ಜರ್ಮನ್ ಮನಶಾಸ್ತ್ರಜ್ಞರಾದ ಹರ್ಮನ್ ಎಬ್ಬಿನಘಾಸ ೧೯ನೇ ಶತಮಾನದಲ್ಲಿ ಮನುಷ್ಯನ "ನೆನಪಿನ" ಬಗ್ಗೆ ಆನೇಕ ಪ್ರಯೋಗಗಳನ್ನು ನಡೆಸಿದರು ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ "ನೆನಪು" ಹಾಗು "ಮರುವಿನ ಬಗ್ಗೆ ಅನೇಕ ಪ್ರಾಯೋಗಿಕ ಮಾದರಿಗಳನ್ನು ಸಿದ್ದಗೊಳಿಸಿದರು. ರಷ್ಯದ ಶರೀರಶಾಸ್ತ್ರಜ್ಞನಾದ ಇವಾನ್ ಪಾವ್ಲೊವ್ ನಾಯಿಗಳೊಂದಿಗೆ ಕಲಿಕೆಯ ಪ್ರಕ್ರಿಯೆಯ ಬಗ್ಗೆ ಅನೇಕ ಪ್ರಯೋಗಗಳನ್ನು ನಡೆಸಿ "ಕ್ಲಾಸಿಕಲ್ ಕಂಡಿಶಿನಿಂಗ್ " ಎಂಬ ಸಿಧ್ಧಾಂತವನ್ನು ಮಂಡಿಸಿ ಅದನ್ನು ಮನುಷ್ಯನಲ್ಲಿಯು ಸಹ ಗುರುತಿಸಿದರು.

ಮನಶ್ಶಾಸ್ತ್ರ 
Sigmund freud um 1905

ಸೈಕೋ ಅನಾಲಿಸಿಸ್

೧೮೯೦ನೇ ಇಸವಿಯಿಂದ ೧೯೩೯ರವರೆಗೆ ಆಸ್ಟ್ರಿಯಾದ ಪ್ರಮುಖ ಮನಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್ ಸೈಕೋ ಅನಾಲಿಸಿಸ್ ಎಂಬ ಸಿಧ್ಧಾಂತವನ್ನು ಬೆಳಕಿಗೆ ತಂದರು . ಇದರಲ್ಲಿ ಮನಸ್ಸಿನ ಭಾವನೆಗಳ ಮೂಲ ಮನುಷ್ಯನ ಅನುಭವಗಳ ಬಗ್ಗೆ ಕೆಲವು ನಿರ್ದಿಷ್ಟ ಸಿಧ್ಧಾಂತಗಳನ್ನ್ನು ಪ್ರಕಟಿಸಿದನು. ಸುಪ್ತ ಮನಸ್ಸಿನ ದ್ವಂದ್ವಗಳನ್ನು ನಿವಾರಿಸುವಲ್ಲಿ ಸೈಕೋ ಥೆರಪಿಯನ್ನು ಬಳಿಸಿಕೊಂಡು ಅನೇಕ ಮಾನಸಿಕ ತೊಂದರೆಗಳನ್ನು ನಿವಾರಿಸುವಲ್ಲಿ ಯಶಸ್ಸನ್ನು ಕಂಡರು. ಫ್ರಾಯ್ಡ್ ಪ್ರಕಾರ ಮನಸ್ಸಿನಲ್ಲಿ ಎರಡು ಭಾಗಗಳಿವೆ . ಒಂದು ಹೊರ ಅಥವಾ ಜಾಗೃತ ಮನಸ್ಸು. ಈ ಭಾಗದಲ್ಲಿ ನಡೆಯುವ ಎಲ್ಲ ಚಟುವಟಿಕೆಗಳು ನಮಗೆ ಅರಿವಿದ್ದು ಅವುಗಳ ಮೇಲೆ ನಮಗೆ ಹತೋಟಿ ಇರುತ್ತದೆ. ಇನ್ನೊಂದು ಸುಪ್ತ ಮನಸ್ಸು. ಇದರಲ್ಲಿ ನಡೆಯುವ ವಿಚಾರಗಳು ಮತ್ತು ವಿದ್ಯಾಮಾನಗಳು ನಮ್ಮ ಅರಿವಿಗೆ ಬರುವುದಿಲ್ಲ, ಹಾಗು ಅದರ ಮೇಲೆ ಹತೋಟಿ ಇರುವುದಿಲ್ಲ. ಫ್ರಾಯ್ಡ್ ಪ್ರಕಾರ ಮನಸ್ಸಿನಲ್ಲಿ ಮೂರು ವಿಭಾಗಗಳಿವೆ. ಇದ್,ಈಗೋ ಮತ್ತು ಸುಪರ್ ಈಗೋ. ಇದ್ ಎನ್ನುವುದು ಒಂದು ಅವ್ಯವಸ್ಥಿತವಾದ ಸಾಮರ್ಥ್ಯದ ಭಂಡಾರ.ಈಗೋ ಹೊರಗಿನಿಂದ ಬರುವ ಮಾಹಿತಿಗಳನ್ನು ಸ್ವೀಕರಿಸಿ, ಅರ್ಥೈಸುತ್ತದೆ.ಈಗೋ ಬಲವಾದಷ್ಟೊ, ವ್ಯಕ್ತಿಯಲ್ಲಿ ವಾಸ್ತವಿಕ ಪ್ರಜ್ಞೆ ಹೆಚ್ಚುತ್ತದೆ .ಸುಪರ್ ಈಗೋ ವ್ಯ್ಕ್ತಿಯ ನೈತಿಕ ಮಟ್ಟದ ಪ್ರತಿನಿಧಿ. ಯಾವ ನಡೆ ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ನಿರ್ಧಾರ ಮಾಡುವುದು ಇದರ ಕೆಲಸ.

ಬಿಹೇವ್ಯರಿಸಂ

೧೯೫೦ನೇ ಇಸವಿಯಲ್ಲಿ ಈ ಯೋಜನೆಯು ಅಮೇರಿಕಾದಲ್ಲಿ ಪ್ರಬಲತೆಯನ್ನು ಹೊಂದಿತು. ಜಾನ್ ಬಿ ವ್ಯಾಟ್ಸನ್ ೨೦ ನೇ ಶತಮಾನದ ಆರಂಭದಲ್ಲಿ ಈ ಯೋಜನೆಯನ್ನು ಸ್ಥಾಪಿಸಿದರು.ಎಡ್ವರ್ಡ್ ಥಾರ್ನ್ಡೈಕ್, ಕ್ಲಾರ್ಕ್ ಎಲ್ ಹಲ್, ಎಡ್ವರ್ಡ್ ಸಿ ಟೋಲ್ಮಾನ್, ಮತ್ತು ನಂತರ ಬಿ.ಎಫ್. ಸ್ಕಿನ್ನರ್ ವಿಸ್ತರಿಸಿದರು. ಈ ಸಿದ್ಧಾಂಥವು ಜನರು ತಮ್ಮ ಪರಿಸರದ ಮೂಲಕ ಕೆಲವು ರೀತಿಗಳಲ್ಲಿ ವರ್ತಿಸುತ್ತಾರೆ, ಹಾಗು ಈ ವರ್ತನೆಯ ಕಾರಣ ಕಲಿಕೆ ಎಂದು ಪ್ರತಿಪಾದಿಸುತ್ತದೆ. ಕ್ಲಾಸಿಕಲೆ ಕಂಡಿಷನಿಂಗ್ ಈ ಯೊಜನೆಯ ಮುಖ್ಯ ಮತ್ತು ಆರಂಭಿಕ ವರ್ತನ ಮಾದರಿಯಾಗಿತ್ತು. ಇದರ ಇತಿಹಾಸದಲ್ಲಿ ಗಮನಾರ್ಹ ಘಟನೆಯೆಂದರೆ ಜಾನ್ ಬಿ ವ್ಯಾಟ್ಸನ್ ರವರ "ಲಿಟಲ್ ಆಲ್ಬರ್ಟ್ ಪ್ರಯೋಗ".

ಹ್ಯೂಮನಿಸ್ಟಿಕ್ ಸೈಕಾಲಜಿ

ಮನಶ್ಶಾಸ್ತ್ರ 
Maslow's Hierarchy of Needs

ಮನಶ್ಶಾಸ್ತ್ರದ ಈ ಯೋಜನೆಯು ೧೯೫೦ರ ಇಸವಿಯಲ್ಲಿ ಬೆಳವಣಿಗೆಯನ್ನು ಹೊಂದಿತು. ಇದು, ಮಾನವನನ್ನು ಪೂರ್ತಿಯಾಗಿ ನೋಡಲು ಬಯಸಿತೆ ಹೊರೆತು, ಛಿದ್ರಗೊಂಡ ವ್ಯಕ್ತಿತ್ವ ದ ಭಾಗಗಳನ್ನು ಅಲ್. ಇದು ಪ್ರಮುಖವಾಗಿ ಮನುಷ್ಯನ ಸಮಸ್ಯೆಗಳ ಮೇಲೆ ಗಮನ ಹರಿಸುತ್ತದೆ. ಈ ಯೋಜನೆಯನ್ನು ಪ್ರತಿಪಾದಿಸಿದ ಮೊದಲಿಗರಲ್ಲಿ , ಅಮೇರಿಕಾದ ಮನಶಾಸ್ತ್ರಜ್ಞನಾದ ಅಬ್ರಹಾಂ ಮ್ಯಾಸ್ಲೊ ಒಬ್ಬರು. ಇವರು , ಮನುಷ್ಯನ ಅವಶ್ಯಕತೆಗಳ ಶ್ರೇಣಿ ವ್ಯವಸ್ಥೆಯನ್ನು ನೀಡಿದರು. ಇನ್ನೊಬ್ಬರು ಕಾರ್ಲ್ ರೋಜರ್ಸ್, "ಕ್ಲೈಂಟ್ ಸೆಂಟರಡ್ ತೆರಪಿ" ಎಂಬುದನ್ನು ದಾಖಲಿಸಿದರು.

ಉಲ್ಲೇಖನ

Tags:

ಮನಶ್ಶಾಸ್ತ್ರ ಇತಿಹಾಸಮನಶ್ಶಾಸ್ತ್ರ ಉಲ್ಲೇಖನಮನಶ್ಶಾಸ್ತ್ರ

🔥 Trending searches on Wiki ಕನ್ನಡ:

ಭಗವದ್ಗೀತೆಕದಂಬ ರಾಜವಂಶವಿಶ್ವ ಪರಿಸರ ದಿನಭಗತ್ ಸಿಂಗ್ಟೊಮೇಟೊನಾಗಚಂದ್ರಭಾರತೀಯ ನೌಕಾಪಡೆಶ್ರೀವಿಜಯಗಣೇಶವಾಲಿಬಾಲ್ಅಶ್ವತ್ಥಾಮಬೆಟ್ಟದ ನೆಲ್ಲಿಕಾಯಿಕರ್ಬೂಜವಿಮರ್ಶೆಅರವಿಂದ ಘೋಷ್ಭದ್ರಾವತಿನೀರುಹನುಮಾನ್ ಚಾಲೀಸಕಂಸಾಳೆಕನ್ನಡದಲ್ಲಿ ವಚನ ಸಾಹಿತ್ಯನೀನಾದೆ ನಾ (ಕನ್ನಡ ಧಾರಾವಾಹಿ)ಚೋಳ ವಂಶಇತಿಹಾಸಶ್ಯೆಕ್ಷಣಿಕ ತಂತ್ರಜ್ಞಾನಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಉತ್ಪಲ ಮಾಲಾ ವೃತ್ತಸ್ತ್ರೀಕರ್ನಾಟಕದ ತಾಲೂಕುಗಳುಕರ್ನಾಟಕ ರಾಜ್ಯ ಮಹಿಳಾ ಆಯೋಗಗುಪ್ತ ಸಾಮ್ರಾಜ್ಯಮಡಿವಾಳ ಮಾಚಿದೇವರಾಷ್ಟ್ರೀಯ ಶಿಕ್ಷಣ ನೀತಿನಂಜನಗೂಡುಬಿ. ಆರ್. ಅಂಬೇಡ್ಕರ್ರಾಘವಾಂಕಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಸಾಲ್ಮನ್‌ಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಕೊಪ್ಪಳಕನ್ನಡ ಗುಣಿತಾಕ್ಷರಗಳುಚದುರಂಗಕಾದಂಬರಿಕ್ರಿಕೆಟ್ದ್ವಂದ್ವ ಸಮಾಸಹಂಪೆಅಕ್ರಿಲಿಕ್ಚನ್ನಬಸವೇಶ್ವರಕಾವ್ಯಮೀಮಾಂಸೆಕನ್ನಡ ಸಾಹಿತ್ಯ ಪ್ರಕಾರಗಳುಊಳಿಗಮಾನ ಪದ್ಧತಿಭಾರತದಲ್ಲಿ ಮೀಸಲಾತಿಗಾಂಧಿ ಜಯಂತಿಸಿದ್ದರಾಮಯ್ಯಕನ್ನಡ ವ್ಯಾಕರಣರಸ(ಕಾವ್ಯಮೀಮಾಂಸೆ)ಮೂಲಧಾತುಗಳ ಪಟ್ಟಿಹಿಂದೂ ಧರ್ಮಧರ್ಮಸ್ಥಳಸುಧಾರಾಣಿರಾವಣಮಂಕುತಿಮ್ಮನ ಕಗ್ಗಮಾರುಕಟ್ಟೆಕ್ರಿಯಾಪದಮಧ್ವಾಚಾರ್ಯಸೀತಾ ರಾಮಭಾರತದಲ್ಲಿ ಪಂಚಾಯತ್ ರಾಜ್ರಾಷ್ಟ್ರೀಯ ಜನತಾ ದಳಕನ್ನಡದಲ್ಲಿ ಸಾಂಗತ್ಯಕಾವ್ಯಕನ್ನಡ ಬರಹಗಾರ್ತಿಯರುಲಕ್ಷ್ಮೀಶಕೆಂಪುಕಿತ್ತೂರು ಚೆನ್ನಮ್ಮಕರ್ನಾಟಕದ ನದಿಗಳುಹಣ್ಣುಸಂಧಿಬ್ರಿಕ್ಸ್ ಸಂಘಟನೆತಾಳಗುಂದ ಶಾಸನ🡆 More