ಕಂಪಾಲ

ಕಂಪಾಲ : ಪೂರ್ವ ಆಫ್ರಿಕದಲ್ಲಿರುವ ಉಗಾಂಡ ದೇಶದ ರಾಜಧಾನಿ; ಅಲ್ಲಿಯ ಅತ್ಯಂತ ದೊಡ್ಡ ನಗರ, ಬುಗಾಂಡ ಪ್ರಾಂತ್ಯದಲ್ಲಿ ಎನ್ಟೆಬ್ಬೆಗೆ ಉತ್ತರಕ್ಕೂ ಈಶಾನ್ಯಕ್ಕೂ ನಡುವೆ 34 ಕಿಮೀ ದೂರದಲ್ಲಿ ವಿಕ್ಟೋರಿಯ ಸರೋವರದ ದಡದ ಮೇಲಿದೆ.

ಈ ನಗರದ ವಿಸ್ತೀರ್ಣ 22 ಚ.ಕಿಮೀ ಜನವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಪ್ರದೇಶಗಳು ಪ್ರತ್ಯೇಕವಾಗಿವೆ. ಮುಖ್ಯ ರಸ್ತೆಯ ಉದ್ಧ 8 ಕಿಮೀ ಇದರ ಮಧ್ಯದಲ್ಲಿ ಇರುವ ಪುರಭವನವನ್ನು ಕಟ್ಟಿಸಿದಾತ (1950) ಒಬ್ಬ ಭಾರತೀಯ ವ್ಯಾಪಾರಿ. ಸರ್ಕಾರಿ ಭವನವೂ ಕೆಲವು ಸಚಿವಾಲಯಗಳೂ ಎನ್ಟೆಬ್ಬೆಯಲ್ಲಿವೆ. ಇತರ ಖಾತೆಗಳೂ ಸರ್ಕಾರಿ ಕಚೇರಿಗಳೂ ಇರುವುದು ಕಂಪಾಲದಲ್ಲಿ. ವಿಧಾನ ಪರಿಷತ್ತಿನ ಅಧಿವೇಶನ ನಡೆಯುವುದೂ ಸಂಸದೀಯ ಭವನ ಇರುವುದೂ ಇಲ್ಲೇ, ಮುಖ್ಯರಸ್ತೆಯ ಎರಡು ಪಕ್ಕಗಳಲ್ಲೂ ಹಿಂದೆ ಇದ್ದ ಹಳೆಯ ಭಾರತೀಯ ಮಳಿಗೆಗಳಿಗೆ ಬದಲಾಗಿ ಈಗ ಹೊಸ ಭವನಗಳು ಎದ್ದಿವೆ. ಉಗಾಂಡದ ವಿದ್ಯುಚ್ಛಕ್ತಿ ಮಂಡಳಿಯ ಭವನ (ಅಂಬರ್ ಹೌಸ್), ಲಿಂಟ್ ಮಾರುಕಟ್ಟೆ ಮತ್ತು ಕಾಫಿ ಮಂಡಲಿಯ ಭವನಗಳು ಉದಾಹರಣೆಗಳು. ಉಗಾಂಡದ ವಸ್ತುಸಂಗ್ರಹಾಲಯ ಮತ್ತು ನ್ಯಾಯಾಲಯಗಳು ಹಳೆಯ ಮಾದರಿಯ ಕಟ್ಟಡಗಳಲ್ಲಿಯೇ ಇವೆ. 1952ರಲ್ಲಿ ವಸ್ತುಸಂಗ್ರಹಾಲಯವನ್ನು ಹೊಸದಾಗಿ ಕಟ್ಟಲಾಯಿತು. ಕಂಪಾಲದಲ್ಲಿ ಅನೇಕ ಮಸೀದಿಗಳು, ದೇವಾಲಯಗಳು, ಚರ್ಚುಗಳು, ಆಸ್ಪತ್ರೆಗಳು, ಶಾಲಾ ಕಾಲೇಜುಗಳು, ಜ್ಯೂಬಿಲಿ ಉದ್ಯಾನ, ಕ್ರೀಡಾಂಗಣ ಮುಂತಾದುವೂ ಇವೆ. ಕಂಪಾಲದ ಬಾನುಲಿ ಕೇಂದ್ರ ಇರುವುದು ಬುಗೋಲೋಬಿ ಬೆಟ್ಟದ ಮೇಲೆ ಒಂದು ವಿಶ್ವವಿದ್ಯಾನಿಲಯವಿದೆ.

Kampala
Capital city
Montage of various landmarks in Kampala, Uganda.
Montage of various landmarks in Kampala, Uganda.
Coordinates: 00°18′49″N 32°34′52″E / 0.31361°N 32.58111°E / 0.31361; 32.58111
CountryUganda
CityKampala
Government
 • Lord MayorErias Lukwago
 • Executive DirectorDorothy Kisaka
Area
 • Capital city೧೮೯ km (೭೩ sq mi)
 • Land೧೭೬ km (೬೮ sq mi)
 • Water೧೩ km (೫ sq mi)
 • Metro
೮,೪೫೧.೯ km (೩,೨೬೩.೩ sq mi)
Elevation
೧,೨೦೦ m (೩,೯೦೦ ft)
Population
 (2019)
 • Capital city೧೬,೫೦,೬೦೦
 • Metro
೬೭,೦೯,೯೦೦
DemonymMunakampala
Time zoneUTC+3 (EAT)
Websitewww.kcca.go.ug

ಕಂಪಾಲ ಉಗಾಂಡದ ಮುಖ್ಯರಸ್ತೆ, ರೈಲ್ವೆ, ಜಲಮಾರ್ಗ ಮತ್ತು ವಾಯುಮಾರ್ಗಗಳ ಕೇಂದ್ರ. ಇಲ್ಲಿಯ ಜನಸಂಖ್ಯೆ 1,659,600 (2011).

ಉಲ್ಲೇಖಗಳು

ಕಂಪಾಲ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
ಕಂಪಾಲ

Tags:

ಆಫ್ರಿಕಉಗಾಂಡ

🔥 Trending searches on Wiki ಕನ್ನಡ:

ಚಂದನಾ ಅನಂತಕೃಷ್ಣಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಸಮಾಜ ವಿಜ್ಞಾನಚದುರಂಗದ ನಿಯಮಗಳುಶುಕ್ರಕೆಂಪುನೀತಿ ಆಯೋಗಸ್ವಾಮಿ ವಿವೇಕಾನಂದಕನ್ನಡದಲ್ಲಿ ವಚನ ಸಾಹಿತ್ಯಚೋಳ ವಂಶವ್ಯಕ್ತಿತ್ವಪರಮಾಣುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಕಾದಂಬರಿಅವ್ಯಯರತ್ನತ್ರಯರುಲೋಕಸಭೆಮಹಾತ್ಮ ಗಾಂಧಿಪರಿಸರ ರಕ್ಷಣೆಭಾರತದ ಭೌಗೋಳಿಕತೆಬಾಬು ಜಗಜೀವನ ರಾಮ್ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಪಾಲುಜಯಪ್ರದಾಬಂಡಾಯ ಸಾಹಿತ್ಯನರೇಂದ್ರ ಮೋದಿಹಿಂದೂ ಮಾಸಗಳು2017ರ ಕನ್ನಡ ಚಿತ್ರಗಳ ಪಟ್ಟಿಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುದೇವತಾರ್ಚನ ವಿಧಿಮೊದಲನೇ ಅಮೋಘವರ್ಷಅಲಿಪ್ತ ಚಳುವಳಿತೆರಿಗೆಜೀತ ಪದ್ಧತಿರಾಯಚೂರು ಜಿಲ್ಲೆವಡ್ಡಾರಾಧನೆವಿಸ್ಕೊನ್‌ಸಿನ್ಯೂನಿಲಿವರ್ಕನ್ನಡ ಸಾಹಿತ್ಯ ಪರಿಷತ್ತುದುರ್ಗಸಿಂಹತತ್ಸಮ-ತದ್ಭವಅರವಿಂದ ಘೋಷ್ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಜಾತ್ಯತೀತತೆಯೇಸು ಕ್ರಿಸ್ತಶಾಲೆಸುರಪುರದ ವೆಂಕಟಪ್ಪನಾಯಕನಾಗರೀಕತೆವರ್ಣಾಶ್ರಮ ಪದ್ಧತಿಸಾಲುಮರದ ತಿಮ್ಮಕ್ಕಭಾರತದ ಚುನಾವಣಾ ಆಯೋಗಶಬ್ದಮಣಿದರ್ಪಣಆದಿ ಶಂಕರಶಬ್ದ ಮಾಲಿನ್ಯಕಂಸಾಳೆಭಾರತದ ಮುಖ್ಯ ನ್ಯಾಯಾಧೀಶರುದ್ವಿಗು ಸಮಾಸಮಳೆಬಾದಾಮಿಮಹಾಕಾವ್ಯಸಂಸ್ಕೃತಿರಾಜಕೀಯ ವಿಜ್ಞಾನಹೆಚ್.ಡಿ.ಕುಮಾರಸ್ವಾಮಿರಾಘವಾಂಕಅಲ್ಲಮ ಪ್ರಭುಅಮೃತಧಾರೆ (ಕನ್ನಡ ಧಾರಾವಾಹಿ)ಅಳೆಯುವ ಸಾಧನಚನ್ನವೀರ ಕಣವಿಹರ್ಷವರ್ಧನಭಾರತೀಯ ರಿಸರ್ವ್ ಬ್ಯಾಂಕ್ರಾಮಋತುರಾಷ್ಟ್ರೀಯ ವರಮಾನಉತ್ತರ ಕರ್ನಾಟಕರಾಮಕೃಷ್ಣ ಮಿಷನ್ಬಿ.ಎಫ್. ಸ್ಕಿನ್ನರ್ಭಾರತದ ಸ್ವಾತಂತ್ರ್ಯ ದಿನಾಚರಣೆ🡆 More