ಅಕ್ಕಿ

ಅಕ್ಕಿಯು ಒಂದು ಏಕದಳ ಸಸ್ಯವಾದ ಆರೈಝಾ ಸಟೀವಾದ ಬೀಜ.

ಒಂದು ಧಾನ್ಯವಾಗಿ ವಿಶ್ವದ ಮಾನವ ಜನಸಂಖ್ಯೆಯ ದೊಡ್ಡ ಭಾಗಕ್ಕೆ ಅದು ಅತ್ಯಂತ ಪ್ರಮುಖವಾದ ಅಗತ್ಯದ ಆಹಾರ ವಾಗಿದೆ, ವಿಶೇಷವಾಗಿ ಭಾರತದ ಕರ್ನಾಟಕ, ಕೇರಳ,ಆಂದ್ರಪ್ರದೇಶಗಳಲ್ಲಿ ಏಷ್ಯಾ, ದಕ್ಷಿಣ ಏಷ್ಯಾ, ದಕ್ಷಿಣಪೂರ್ವ ಏಷ್ಯಾ, ಮಧ್ಯಪ್ರಾಚ್ಯ, ಲ್ಯಾಟಿನ್ ಅಮೇರಿಕ, ಮತ್ತು ವೆಸ್ಟ್ ಇಂಡೀಸ್‌ನಲ್ಲಿ. ಅದು ಮೆಕ್ಕೆ ಜೋಳದ ನಂತರ ವಿಶ್ವದ ಎರಡನೇ ಅತಿ ಹೆಚ್ಚು ಉತ್ಪಾದನೆಯಾಗುವ ಧಾನ್ಯವಾಗಿದೆ.

ಅಕ್ಕಿ, white, long-grain, regular, unenriched, cooked without salt
ಅಕ್ಕಿ
Nutritional value per 100 g (3.5 oz)
ಆಹಾರ ಚೈತನ್ಯ 130 kcal (540 kJ)
ಶರ್ಕರ ಪಿಷ್ಟ 28.1 g
- ಸಕ್ಕರೆ 0.05 g
- ಆಹಾರ ನಾರು 0.4 g
ಕೊಬ್ಬು 0.28 g
Protein 2.69 g
ನೀರು 68.44 g
Thiamine (vit. B1) 0.02 mg (2%)
Riboflavin (vit. B2) 0.013 mg (1%)
Niacin (vit. B3) 0.4 mg (3%)
Pantothenic acid (B5) 0 mg (0%)
Vitamin B6 0.093 mg (7%)
ಕ್ಯಾಲ್ಸಿಯಂ 10 mg (1%)
ಕಬ್ಬಿಣ ಸತ್ವ 0.2 mg (2%)
ಮೆಗ್ನೇಸಿಯಂ 12 mg (3%)
ಮ್ಯಾಂಗನೀಸ್ 0 mg (0%)
ರಂಜಕ 43 mg (6%)
ಪೊಟಾಸಿಯಂ 35 mg (1%)
ಸೋಡಿಯಂ 1 mg (0%)
ಸತು 0.049 mg (1%)
Link to USDA Database entry
Percentages are roughly approximated
using US recommendations for adults.
Source: USDA Nutrient Database
ಅಕ್ಕಿ
ಭತ್ತ
ಅಕ್ಕಿ
ಅಕ್ಕಿಕಾಳುಗಳು
ಅಕ್ಕಿ
Rice can come in many shapes, colours and sizes. Photo by the IRRI.
ಅಕ್ಕಿ
Oryza sativa with small wind-pollinated flowers

ಇತಿವೃತ್ತ

  • ಅಕ್ಕಿಯು ಪ್ರಪಂಚದ ಮೂರರಲ್ಲೊಂದು ಪಾಲು ಜನರ ಮುಖ್ಯ ಆಹಾರ (ರೈಸ್). ಪಕ್ವ ಮಾಡಿದ ಅಕ್ಕಿಯನ್ನು ಅನ್ನವೆನ್ನುತ್ತಾರೆ. ಕೂಳು ಕನ್ನಡ ಪದ. ಸಾಮಾನ್ಯವಾಗಿ ಯಂತ್ರಗಳ ಮೂಲಕ ಭತ್ತದಿಂದ ಸಿಪ್ಪೆಯನ್ನು ಬೇರ್ಪಡಿಸಿ ಬರುವ ಕಾಳನ್ನು ಚೆನ್ನಾಗಿ ಪಾಲಿಷ್ ಮಾಡಿದಾಗ ಬಿಳಿಯ ಹೊಳೆಯುವ ಅಕ್ಕಿ ಸಿಗುತ್ತದೆ. ಪಾಲಿಷ್ ಮಾಡಿದ ಅಕ್ಕಿ ತಿನ್ನಲು ಹೆಚ್ಚು ಹಿತಕರವಾಗಿದ್ದರೂ ಪಾಲಿಷ್ ಮಾಡದ ಮಬ್ಬು ಬಣ್ಣದ ಕೊಟ್ಟಣದ ಅಕ್ಕಿಯೇ ನಿಜವಾಗಿ ಹೆಚ್ಚು ಪೌಷ್ಟಿಕ ಆಹಾರ.
  • ಹಿಂದೆ ಹಳ್ಳಿಗಳವರೆಲ್ಲ ಹೀಗೆ ಕೈಯಿಂದ ಕುಟ್ಟಿದ ಅಕ್ಕಿಯನ್ನೇ ಬಳಸುತ್ತಿದ್ದರು. ಅಕ್ಕಿಯ ಮೂಗು (ಭ್ರೂಣ) ಮತ್ತು ಮೇಲಿನ ತೆಳುಪೊರೆಯ ತೌಡಿನಲ್ಲಿ ಬಿ.ಕಾಂಪ್ಲೆಕ್ಸ್ ಮೊದಲಾದ ಉತ್ತಮ ಅನ್ನಾಂಗಗಳಿವೆ. ಬತ್ತವನ್ನು ಬೇಯಿಸಿ ತಯಾರಿಸಿದ ಕುತುಬಲಕ್ಕಿ ಅಥವಾ ಕುಸುಬಲಕ್ಕಿ ಬಹು ಜನಪ್ರಿಯವಾಗಿದೆ. ಇದು ಪಾಲಿಷ್ ಆದ ಅಕ್ಕಿಗಿಂತ ಉತ್ತಮ.

ಅಕ್ಕಿಯ ಮಹತ್ವ

  • ಪ್ರಾಚೀನ ಕಾಲದ ಬಡ ಜನರು ಅಕ್ಕಿಯನ್ನು ವರ್ಷಕ್ಕೆ ಒಂದೆರಡು ಬಾರಿ, ಅದೂ ಹಬ್ಬ ಹರಿದಿನಗಳಲ್ಲಿ ಮಾತ್ರ ಬಳಸುತ್ತಿದ್ದರು. ಸಂಕ್ರಾಂತಿಯ ಹಬ್ಬದಿಂದಲೇ ಅಕ್ಕಿಯ ಬಳಕೆ ಆರಂಭವಾಗುತ್ತದೆ. ಅಕ್ಕಿಯಲ್ಲಿ ಮುಖ್ಯವಾಗಿ ಬೆಳ್ತಕ್ಕಿ, ಕುಸುಬಲಕ್ಕಿ, ನುಚ್ಚಕ್ಕಿ ಎಂದು ಮೂರು ಪ್ರಧಾನ ವಿಭಾಗಗಳಿವೆ. ದೋಸೆಯಿಂದ ಹಿಡಿದು ಕರಿದ ತಿಂಡಿಗಳವರೆಗೂ ಅಕ್ಕಿ ಬಳಕೆ ಕಂಡು ಬರುತ್ತದೆ.
  • ಅಕ್ಕಿಯಲ್ಲಿ ಮಾಡುವಂತಹ ಬಗೆ ಬಗೆ ಖಾದ್ಯ-ಅಡುಗೆಗಳನ್ನು ಬಹುಶ: ಬೇರಾವುದೇ ಧಾನ್ಯಗಳಲ್ಲೂ ಮಾಡಲಾಗುವುದಿಲ್ಲ. ಅಕ್ಕಿಯ ಬಳಕೆಯ ಸುತ್ತ ಇರುವ ಆಚರಣೆಗಳಲ್ಲಿ ನಂಬಿಕೆಗಳು ಬಹಳ ಮುಖ್ಯ. ಗೌತಮನು ಇಡೀ ಮಾನವ ಜನಾಂಗವನ್ನು ಹತ್ತು ಭಾಗ ಮಾಡುವಾಗ ಅಕ್ಕಿಗೆ ಎರಡನೇ ಸ್ಥಾವನ್ನು ಕೊಟ್ಟಿದ್ದಾನೆ. ಶುಭಸಮಾರಂಭಗಳಲ್ಲಿ ಅದರಲ್ಲೂ ವಿವಾಹಕ್ಕೆ ಸಂಬಂಧ ಪಟ್ಟ ಕೆಲಸ ಕಾರ್ಯಗಳಲ್ಲಿ ಅಕ್ಕಿ ಪ್ರಮುಖ ಪಾತ್ರ ವಹಿಸುತ್ತದೆ.
  • ನಿಶ್ಚಿತಾರ್ಥ ಅಥವ ಒಪ್ಪಂದಶಾಸ್ತ್ರದಿಂದಲೇ ಅಕ್ಕಿಯ ಬಳಕೆ ಆರಂಭವಾಗುತ್ತದೆ. ಅಕ್ಕಿಶಾಸ್ತ್ರದ ಸಂದರ್ಭದಲ್ಲಿ ವಧುವಿನ ಮಡಿಲಿಗೆ ಸೇರಕ್ಕಿ, ಬೆಲ್ಲ,ಕೊಬ್ಬರಿ, ಹುರಿಗಡಲೆಗಳಿಂದ ಮಡಿಲು ತುಂಬಿ ಸೋಗ್ಲು ಕಟ್ಟುತ್ತಾರೆ. ಹರಸುವಾಗ ಅಕ್ಷತೆಯ ರೂಪದಲ್ಲೂ ಅಕ್ಕಿಯನ್ನ ಬಳಸಿ, ಅಕ್ಷತೆಯನ್ನು ವಧು-ವರರ ತಲೆಯ ಮೇಲೆ ಹಾಕಿ ಶುಭವನ್ನು ಹಾರೈಸುವರು.
  • ಮದುಮಗಳು ತವರಿಂದ ಹೊರಬರುವ ಸಂದರ್ಭದಲ್ಲಿ, ಅವಳ ತೌರು ಮನೆಯೊಳಗೆ ಅಪ್ಪ,ಅಣ್ಣ-ತಮ್ಮ, ಬಂಧು-ಬಳಗದವರನ್ನು ಕೂರಿಸಿ ಅವರ ತಲೆಯ ಮೇಲೆ ಮದುಮಗಳ ಕೈಯಿಂದ ಮೂರು ಬೊಗಸೆ ಅಕ್ಕಿಯನ್ನು ಎರಚುವಾಗ, ಮೂರು ಬಾರಿ ಆಕೆ "ನಮ್ಮಪ್ಪನ ಮನೆ ಹಾಲುಕ್ಕುವಂತೆ ಉಕ್ಕಲಿ"ಎಂದು ಹಾರೈಸುತ್ತಾ ಅಕ್ಕಿಯನ್ನು ಅವರ ಮೇಲೇರಚಿ ದು:ಖದಿಂದ ಕಣ್ತುಂಬಿ ಕೊಳ್ಳುತ್ತಾಳೆ.
  • ಧಾರೆಯಾದ ಬಳಿಕ ಮನೆದೇವರನ್ನು ತಂದ ನೀರಿನಲ್ಲಿ ಅಕ್ಕಿಯನ್ನು ನೆನೆಹಾಕಿ ಬೆಲ್ಲದನ್ನ ಮಾಡಿ ಬಂಧು-ಬಳಗದವರಿಗೆ ಹಂಚುವ ಪರಿಪಾಠವಿದೆ. ಹೊಸದಾಗಿ ಅತ್ತೆ ಮನೆ ಪ್ರವೇಶಿಸುವ ಸೊಸೆ ತಲೆಬಾಗಿಲ ಹೊಸ್ತಿಲಿನ ಮೇಲೆ ಅಕ್ಕಿ,ಬೆಲ್ಲವನ್ನಿಟ್ಟ ಸೇರನ್ನು ತನ್ನ ಬಲಗಾಲಿನಿಂದ ಒದ್ದು ಮನೆಯನ್ನು ಪ್ರವೇಶಿಸುತ್ತಾಳೆ. ಇದಕ್ಕೆ "ಪಡಿಯಕ್ಕಿ" ಇಡುವ ಶಾಸ್ತ್ರ ಎನ್ನುತ್ತಾರೆ.
  • ಸ್ತ್ರೀ ಗರ್ಭಿಣಿಯಾದಾಗ ಅವಳ ಬಸಿರೊಸಗೆಯ ಸಮಯದಲ್ಲಿ ಮಡಿಲಕ್ಕಿಶಾಸ್ತ್ರ ಮಾಡುವರು. ವ್ಯಕ್ತಿಯು ಸತ್ತಾಗ ಅವನ/ಳ ಬಾಯಿಗೆ ಅಕ್ಕಿ ತುಂಬುತ್ತಾರೆ. ಹೀಗೆ ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಅಕ್ಕಿ ಮನುಷ್ಯರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಇಂದು ಅಕ್ಕಿ ವಿಶ್ವದಾದ್ಯಂತ ಪ್ರಚಲಿತದಲ್ಲಿರುವ ಪ್ರಸಿದ್ದ ಧಾನ್ಯ.

ಅಕ್ಕಿಯ ಬಹುಪಯೋಗ

  • ಅಕ್ಕಿಯಲ್ಲಿ ಪಿಷ್ಟ ಪದಾರ್ಥವೇ (ಕಾರ್ಬೊಹೈಡ್ರೇಟ್) ಹೆಚ್ಚು. ಪ್ರೋಟೀನು ಮತ್ತು ಕೊಬ್ಬು ತೀರ ಕಡಿಮೆ. ಮಾಂಸ, ಎಣ್ಣೆ, ಬೆಣ್ಣೆ, ಹಾಲು, ಬೇಳೆಕಾಳು ಮತ್ತು ತರಕಾರಿಗಳೊಂದಿಗೆ ಸೇರಿದಾಗ ಒಳ್ಳೆಯ ಆಹಾರವಾಗಬಲ್ಲುದು. ಅಕ್ಕಿಯಿಂದ ಕೋಡುಬಳೆ, ಚಕ್ಕುಲಿ, ದೋಸೆ, ಇಡ್ಲಿ, ರೊಟ್ಟಿ, ಹಪ್ಪಳ, ಸಂಡಿಗೆ ಮೊದಲಾದ ರುಚಿಕರವಾದ ತಿಂಡಿಗಳನ್ನು ತಯಾರಿಸಿ ಬಳಸಲಾಗುತ್ತಿದೆ. ನೇರವಾಗಿ ಚಿತ್ರಾನ್ನ, ಪುಳಿಯೊಗರೆ, ಪೊಂಗಲು ಮೊದಲಾದುವನ್ನು ಮಾಡುತ್ತಾರೆ.
  • ಅಕ್ಕಿಯ ಬೇರೆ ರೂಪಗಳಾದ ಅವಲಕ್ಕಿ, ಪುರಿ, ಅರಳುಗಳೂ ಜನಪ್ರಿಯವಾಗಿವೆ. ಇದರ ನುಚ್ಚನ್ನು ದನಗಳಿಗೆ ಹಾಕುತ್ತಾರೆ. ಅಕ್ಕಚ್ಚು ಅವುಗಳಿಗೆ ಬಹು ಪ್ರಿಯವಾದ ಪಾನೀಯ, ತೌಡಂತೂ ಕರೆಯುವ ದನಕ್ಕೆ ಅಗತ್ಯವಾದ ಮೇವು ಅಕ್ಕಿಯಿಂದ ಮದ್ಯವನ್ನು ತಯಾರಿಸುವ ವಾಡಿಕೆ ಹಿಂದಿನಿಂದಲೂ ಪ್ರಚಾರದಲ್ಲಿದೆ. ಜಪಾನಿನಲ್ಲಿ ಈಗಲೂ ಅಕ್ಕಿಯ ಮದ್ಯ (ಸಾಕೆ) ತಯಾರಿಸುತ್ತಾರೆ. ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಅಕ್ಕಿಯ ಬಳಕೆ ಬಹಳ ಹೆಚ್ಚು. (ನೋಡಿ-ಭತ್ತ).

ಉಲ್ಲೇಖ

Tags:

ಅಕ್ಕಿ ಇತಿವೃತ್ತಅಕ್ಕಿ ಯ ಮಹತ್ವಅಕ್ಕಿ ಯ ಬಹುಪಯೋಗಅಕ್ಕಿ ಉಲ್ಲೇಖಅಕ್ಕಿಏಷ್ಯಾಧಾನ್ಯಮಧ್ಯಪ್ರಾಚ್ಯಮೆಕ್ಕೆ ಜೋಳಲ್ಯಾಟಿನ್ ಅಮೇರಿಕವೆಸ್ಟ್ ಇಂಡೀಸ್

🔥 Trending searches on Wiki ಕನ್ನಡ:

ಕಂಪ್ಯೂಟರ್ಸೋನಾರ್ಭಾರತದಲ್ಲಿನ ಶಿಕ್ಷಣನಾಗಚಂದ್ರದಿನೇಶ್ ಕಾರ್ತಿಕ್ಯುಗಾದಿಜಲ ಮಾಲಿನ್ಯದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಮಾರುಕಟ್ಟೆಜಾತ್ರೆರೇಣುಕಮಾನ್ಸೂನ್ಕ್ರೀಡೆಗಳುಭಾರತದ ಮಾನವ ಹಕ್ಕುಗಳುದಿಕ್ಸೂಚಿತ್ರಿಪುರಾದ ಜಾನಪದ ನೃತ್ಯಗಳುಸುಗ್ಗಿ ಕುಣಿತಕರ್ನಾಟಕ ಸ್ವಾತಂತ್ರ್ಯ ಚಳವಳಿಕಾಳಿವಿಕ್ರಮಾದಿತ್ಯ ೬ಚೋಮನ ದುಡಿಪ್ರಸ್ಥಭೂಮಿಪರಿಸರ ರಕ್ಷಣೆಉತ್ಪಾದನೆರಾಷ್ಟ್ರೀಯ ವರಮಾನಓಂ ನಮಃ ಶಿವಾಯಸುರಪುರದ ವೆಂಕಟಪ್ಪನಾಯಕಚಿಕ್ಕ ದೇವರಾಜಶಬ್ದ ಮಾಲಿನ್ಯಪ್ಲೇಟೊರಾವಣಶಾತವಾಹನರುಮುಮ್ಮಡಿ ಕೃಷ್ಣರಾಜ ಒಡೆಯರುಕುಬೇರಯೂಟ್ಯೂಬ್‌ಯಣ್ ಸಂಧಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಪರಮಾಣುತಾಳೀಕೋಟೆಯ ಯುದ್ಧಎರಡನೇ ಮಹಾಯುದ್ಧಕಾವ್ಯಮೀಮಾಂಸೆಕರ್ನಾಟಕದ ಹಬ್ಬಗಳುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಮಾರ್ಕ್ಸ್‌ವಾದರವಿಚಂದ್ರನ್ರಾಘವಾಂಕಬಾದಾಮಿಜೈನ ಧರ್ಮ ಇತಿಹಾಸಸವದತ್ತಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಧರ್ಮ (ಭಾರತೀಯ ಪರಿಕಲ್ಪನೆ)ಮಾಹಿತಿ ತಂತ್ರಜ್ಞಾನಪೆಟ್ರೋಲಿಯಮ್ಭಾರತಭಾಷೆಕೇಶಿರಾಜಸಂಚಿ ಹೊನ್ನಮ್ಮವಚನ ಸಾಹಿತ್ಯಜೋಗಿ (ಚಲನಚಿತ್ರ)ಕಳಿಂಗ ಯುದ್ದ ಕ್ರಿ.ಪೂ.261ಭಾರತದ ತ್ರಿವರ್ಣ ಧ್ವಜಶುಭ ಶುಕ್ರವಾರಲೋಹಕಾಂತಾರ (ಚಲನಚಿತ್ರ)ಆಸ್ಟ್ರೇಲಿಯಜೀತ ಪದ್ಧತಿರಾಯಚೂರು ಜಿಲ್ಲೆಇಮ್ಮಡಿ ಪುಲಿಕೇಶಿಆಯ್ಕಕ್ಕಿ ಮಾರಯ್ಯಸದಾನಂದ ಮಾವಜಿಕುರಿಕುಕ್ಕೆ ಸುಬ್ರಹ್ಮಣ್ಯ ದೇವಾಲಯಪ್ರಜಾಪ್ರಭುತ್ವಡಾ ಬ್ರೋಕರ್ನಾಟಕ ಸಂಗೀತಸುದೀಪ್ಹೊಂಗೆ ಮರರನ್ನನೈಸರ್ಗಿಕ ವಿಕೋಪ🡆 More