ನಿಕೋಲ್‌ ಕಿಡ್‌ಮನ್‌

' ನಿಕೊಲ್ ಕಿಡ್‌ಮನ್, ಎ ಸಿ (ಹುಟ್ಟು ಜೂನ್ ೨೦, ೧೯೬೭) ಅಮೆರಿಕಾ ಸಂಜಾತೆ, ಆಸ್ಟ್ರೇಲಿಯಾದ ನಟಿ, ಫ್ಯಾಷನ್ ರೂಪದರ್ಶಿ, ಹಾಡುಗಾರ್ತಿ ಹಾಗೂ ಮಾನವತಾವಾದಿ.

೧೯೯೪ರಿಂದ ಆಸ್ಟ್ರೇಲಿಯಾ ಯುನಿಸೆಫ್‌ನ ಸದ್ಭಾವ ರಾಯಭಾರಿಯಾಗಿದ್ದಾರೆ. ೨೦೦೬ರಲ್ಲಿ ಕಿಡ್‌ಮನ್‌ರಿಗೆ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಆಸ್ಟ್ರೇಲಿಯಾ ನೀಡಿ ಗೌರವಿಸಲಾಯಿತು, ಇದು ಆಸ್ಟ್ರೇಲಿಯಾದ ಉನ್ನತ ನಾಗರೀಕ ಸನ್ಮಾನವಾಗಿದೆ. ಇವರು ೨೦೦೬ರಲ್ಲಿ ಚಲನಚಿತ್ರ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯಾಗಿದ್ದಾರೆ.

  • ೧೯೮೯ರ ಥ್ರಿಲ್ಲರ್ ಡೆಡ್‌‍ ಕಾಮ್ ಕಿಡ್‌ಮನ್‌ರಿಗೆ ಹೆಸರು ತಂದುಕೊಟ್ಟಿತು. ಅವರ ಅಭಿನಯದ ಚಿತ್ರಗಳು ಡೇಸ್ ಆಫ್ ಥಂಡರ್ (೧೯೯೦), ಟು ಡೈ ಫಾರ್ (೧೯೯೫), ಮತ್ತು ಮೌಲಿನ್ ರೋಗ್ (೨೦೦೧)ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿತು, ಮತ್ತು ಅವರ ದಿ ಹವರ್ಸ್‌‍ (೨೦೦೨)ನಲ್ಲಿನ ಅಭಿನಯವನ್ನು ವಿಮರ್ಶಕರ ತಂಡ ಗುರುತಿಸಿತು ಜೊತೆಗೆ ಅಕಾಡೆಮಿ ಪ್ರಶಸ್ತಿ‌ ನೀಡುವ ಅತ್ಯುತ್ತಮ ನಟಿ ಪ್ರಶಸ್ತಿ, ಬಿಎಎಫ್‌ಟಿಎ ಪ್ರಶಸ್ತಿ, ಮತ್ತು ಗೊಲ್ಡನ್ ಗ್ಲೋಬ್ ಪ್ರಶಸ್ತಿ ಒಳಗೊಂಡಂತೆ ಹಲವಾರು ಪ್ರಶಸ್ತಿಗಳು ಅರಸಿ ಬಂದವು. ಕ್ಯಾಲಿಫೋರ್ನಿಯಾದಲ್ಲಿ ಕಿಡ್‌ಮನ್ ವಾಕ್‌ ಆಫ್‌ ಫೇಮ್ ಇನ್ ಹಾಲಿವುಡ್‌ನ ಸ್ಟಾರ್‌‌ ಪಡೆದು ಉತ್ತಮ ತಾರೆಯೆಂಬ ಖ್ಯಾತಿಯನ್ನು ಪಡೆದಳು.
  • ಟಾಮ್ ಕ್ರೂಸ್‌ರ ಜೊತೆಗಿನ ಅವರ ಮದುವೆಯಿಂದಲೂ ಕೂಡ ಅವರು ಪ್ರಸಿದ್ದರು. ಪ್ರಸ್ತುತ ದೇಶಿಯ ಸಂಗೀತಗಾರ ಕೇತ್ ಅರ್ಬನ್‌ ಜೊತೆ ಮದುವೆಯಾಗಿದ್ದಾರೆ.
  • ಅವರ ಹೆತ್ತವರು ಆಸ್ಟ್ರೇಲಿಯಾದ ಹವಾಯಿ ಪ್ರದೇಶದವರಾದ್ದರಿಂದ ಕಿಡ್‌ಮನ್‌ರಿಗೆ ಆಸ್ಟ್ರೇಲಿಯಾ ಮತ್ತು ಅಮೆರಿಕಾ ಈ ಎರಡು ರಾಷ್ಟ್ರಗಳ ಪೌರತ್ವ ಲಭಿಸಿದೆ.
ನಿಕೋಲ್‌ ಕಿಡ್‌ಮನ್‌
ನಿಕೋಲ್‌ ಕಿಡ್‌ಮನ್‌
At the 2001 Cannes Film Festival.
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Nicole Mary Kidman
(1967-06-20) ೨೦ ಜೂನ್ ೧೯೬೭ (ವಯಸ್ಸು ೫೬)
, U.S.
ವೃತ್ತಿ Actress, singer, model
ವರ್ಷಗಳು ಸಕ್ರಿಯ 1983–present
ಪತಿ/ಪತ್ನಿ Tom Cruise (1990–2001)
Keith Urban (2006–present)

ಆರಂಭಿಕ ಜೀವನ

ಕಿಡ್‌ಮನ್ ಹವಾಯಿಯ ಹೊನಲುಲುವಿನಲ್ಲಿ ಜನಿಸಿದರು. ಅವರ ತಂದೆ ಡಾ.ಆಂಟನಿ ಡೇವಿಡ್ ಕಿಡ್‌ಮನ್‌ರು ಒಬ್ಬ ಜೈವಿಕ ರಸಾಯನ ಶಾಸ್ತ್ರಜ್ಞ, ಚಿಕಿತ್ಸಕ ಮನಶಾಸ್ತ್ರಜ್ಞ ಹಾಗೂ ಲೇಖಕರಾಗಿದ್ದು, ಆಸ್ಟ್ರೇಲಿಯಾದ ಸಿಡ್ನಿಯ ಲೇನ್ ಕೋವ್ ಎಂಬಲ್ಲಿ ಕಚೇರಿ ಹೊಂದಿದ್ದರು. ಅವರ ತಾಯಿ ಜನೆಲಾ ಆ‍ಯ್‌‍ನ್ (ನೀ ಗ್ಲೆನ್ನಿ) ಸೂಶ್ರೂಷಾ ಬೋಧಕಿಯಾಗಿದ್ದು ತನ್ನ ಗಂಡನ ಪುಸ್ತಕಗಳನ್ನು ಸಂಪಾದಿಸುತ್ತಿದ್ದರು ಹಾಗೂ ವುಮೆನ್ಸ್ ಎಲೆಕ್ಟೊರಲ್ ಲಾಬಿಯ ಸದಸ್ಯಳಾಗಿದ್ದರು. ಕಿಡ್‌ಮನ್ ಹುಟ್ಟಿದಾಗ ಅವರ ತಂದೆ ಸಂಯುಕ್ತ ರಾಷ್ಟ್ರಗಳ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆಯ ಸಂದರ್ಶನಾ ಗೌರವ ಸದಸ್ಯನಾಗಿದ್ದ. ಕಿಡ್‌ಮನ್‌ರಿಗೆ ನಾಲ್ಕು ವರ್ಷವಾಗಿದ್ದಾಗ ಅವರ ಕುಟುಂಬ ಆಸ್ಟ್ರೇಲಿಯಾಗೆ ಹಿಂದಿರುಗಿತು, ಈಗ ಅವರ ತಂದೆ ತಾಯಿ ಸಿಡ್ನಿಯ ನಾರ್ತ್ ಶೋರ್‌ನಲ್ಲಿ ವಾಸವಾಗಿದ್ದಾರೆ. ಕಿಡ್‌ಮನ್‌ರ ಸಹೋದರಿ ಆ‍ಯ್‌೦ಟೋನಿಯಾ ಕಿಡ್‌ಮನ್ ಒಬ್ಬ ಪತ್ರಕರ್ತೆಯಾಗಿದ್ದಾರೆ. ನಟಿಯಾದ ನವೊಮಿ ವ್ಯಾಟ್ಸ್‌‍ರನ್ನು ಹರೆಯದಿಂದಲೂ ಇವರಿಗೆ ಪರಿಚಿತರಾಗಿದ್ದು ಈಗಲು ಒಳ್ಳೆಯ ಸ್ನೇಹಿತರಾಗಿದ್ದಾರೆ.

  • ಕಿಡ್‌ಮನ್ ಲೇನ್ ಕೋವ್ ಪಬ್ಲಿಕ್ ಸ್ಕೂಲ್ ಮತ್ತು ನಾರ್ತ್ ಸಿಡ್ನಿಯ ಗರ್ಲ್ಸ್ ಹೈ ಸ್ಕೂಲ್ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದರು. ಅವರು ಮೆಲ್ಬೊರ್ನ್‌ನ ವಿಕ್ಟೋರಿಯನ್ ಕಾಲೇಜ್ ಆಫ್ ಆರ್ಟ್ಸ್‌ನಲ್ಲಿ ವ್ಯಾಸಾಂಗ ಮಾಡಿದರು. ಸಿಡ್ನಿಯ ಫಿಲಿಪ್ ಸ್ಟ್ರೀಟ್ ಥಿಯೇಟರ್‌ನಲ್ಲಿ ನವೊಮಿ ವ್ಯಾಟ್ಸ್ ಜೊತೆ ವಿದ್ಯಾಭ್ಯಾಸ ಮಾಡಿದರು. ಇದು ಆಸ್ಟ್ರೇಲಿಯನ್‌ ಥಿಯೇಟರ್ ಫಾರ್ ಯಂಗ್‌ ಪೀಪಲ್‌‍ ಭೇಟಿ ನೀಡುವವರೆಗೂ ಮುಂದುವರೆದಿತ್ತು.

ವೃತ್ತಿಜೀವನ

ಆಸ್ಟ್ರೇಲಿಯಾದಲ್ಲಿನ ಆರಂಭಿಕ ವೃತ್ತಿಜೀವನ (1983–89)

  • ಪಾಟ್ ವಿಲ್ಸನ್ 1983ರಲ್ಲಿ ತೆಗೆದ ಸಂಗೀತ ಚಿತ್ರದ "ಬಾಪ್ ಗರ್ಲ್" ಹಾಡಿನಲ್ಲಿ 15ವರ್ಷದ ಕಿಡ್‌ಮನ್‌ ಮೊದಲು ಅಭಿನಯಿಸಿದರು. ಅದೇ ವರ್ಷದ ಕೊನೆಗೆ ಟಿವಿ ಸರಣಿ‌ ಫೈವ್ ಮೈಲ್ ಕ್ರೀಕ್ , ಮತ್ತು ಬಿಎಮ್‌ಎಕ್ಸ್ ಬ್ಯಾಂಡಿಟ್ಸ್ ಮತ್ತು ಬುಷ್ ಕ್ರಿಸ್‌ಮಸ್ ಒಳಗೊಂಡಂತೆ ನಾಲ್ಕು ಚಲನಚಿತ್ರಗಳಲ್ಲಿಯೂ ಕೂಡಾ ನಟಿಸಿದರು. 1980ರ ಸಮಯದಲ್ಲಿ ಇವರು ಎ ಕಂಟ್ರಿ ಪ್ರ್ಯಾಕ್ಟಿಸ್‌ ಹೆಸರಿನ ಧಾರಾವಾಹಿಯೂ ಸೇರಿದಂತೆ ಚಿಕ್ಕ ಸರಣಿ ವಿಯೆಟ್ನಾಂ , ಎಮರಾಲ್ಡ್ ಸಿಟಿ (1988), ಮತ್ತು ಬ್ಯಾಂಕಾಕ್ ಹಿಲ್ಟನ್ (1989) ಹಲವಾರು ಆಸ್ಟ್ರೇಲಿಯಾದ ಸಂಸ್ಥೆಗಳ ನಿರ್ಮಾಣದಲ್ಲಿ ನಟಿಸಿದರು.

ಯಶಸ್ಸಿನ ಹಾದಿ (1989–95)

  • 1989ರ ಡೆಡ್ ಕಾಮ್ ಚಿತ್ರದಲ್ಲಿ ಹಡಗಿನ ಅಧಿಕಾರಿ ಜಾನ್ ಇ‌ನ್‌ಗ್ರಾಮ್ (ಸ್ಯಾಮ್ ನೇಲ್‌‍)ನ ಹೆಂಡತಿ ರೇ ಇನ್‌ಗ್ರಾಮ್ ಪಾತ್ರದಲ್ಲಿ ನಟಿಸಿದರು. ಈ ಚಿತ್ರದಲ್ಲಿ, ಫೆಸಿಫಿಕ್ ದೋಣಿ ಪ್ರಯಾಣದಲ್ಲಿ ಮಾನಸಿಕ ಅಸ್ವಸ್ಥ ಹ್ಯೂಜ್ ವಾರಿನರ್ (ಬಿಲ್ಲಿ ಜೆನ್)ನಿಂದ ಸೆರೆ ಹಿಡಿಯಲ್ಪಟ್ಟಿರುತ್ತಾರೆ. ಈ ಥ್ರಿಲ್ಲರ್ ಚಿತ್ರ ಉತ್ತಮವಾದ ಪ್ರತಿಕ್ರಿಯೆಯನ್ನು ಪಡೆಯಿತು; ಬೇರೆ ಬೇರೆ ರೀತಿಯ ಅಭಿಪ್ರಾಯವನ್ನು ಇದು ಪಡೆಯಿತು: ಚಿತ್ರದ ಉದ್ದಕ್ಕೂ ಕಿಡ್‌ಮನ್‌ರ ಅಭಿನಯ ಉತ್ತಮವಾಗಿದೆ, ರೆ ಪಾತ್ರಕ್ಕೆ ಜೀವ ತುಂಬಿ ಕಿಡ್‌ಮನ್‌ ನಟಿಸಿದ್ದಾರೆ" ಎಂಬ ವಿಮರ್ಶೆಗಳನ್ನು ಪಡೆಯಿತು. ಹಾಗೆಯೇ, ವಿಮರ್ಶಕರಾದ ರೋಗರ್ ಎಬರ್ಟ್ ಪಟ್ಟಿ ಮಾಡಿದಂತೆ ಎರಡು ಪ್ರಮುಖ ಪಾತ್ರಗಳ ನಡುವೆ ಹೊಂದಾಣಿಕೆ ಚೆನ್ನಾಗಿದೆ ಎನ್ನುತ್ತಾ "ಕಿಡ್‌ಮನ್ ಮತ್ತು ಜೆನ್ ಇಬ್ಬರು ತಮ್ಮ ದೃಶ್ಯಗಳಲ್ಲಿ ನಿಜವಾಗಿಯೂ ದ್ವೇಷ ಬರುವಂತೆ ನಟಿಸಿದ್ದಾರೆ" ಎಂದು ಹೇಳಿದ್ದಾರೆ. 1990ರಲ್ಲಿ ಟಾಮ್ ಕ್ರೂಸ್ ಎದುರು ಡೇಸ್ ಆಫ್ ಥಂಡರ್ (1992) ಮತ್ತು ರೋನ್ ಹೊವರ್ಡ್ಸ್‌ರವರ ಪಾರ್ ಆ‍ಯ್‌೦ಡ್‌ ಅವೇ ಚಿತ್ರಗಳಲ್ಲಿ ನಟಿಸಿದರು. ಬ್ಯಾಟ್‌ಮನ್ ಪಾರೆವರ್ ಚಿತ್ರದಲ್ಲಿಯೂ ಕೂಡ ಇವರು ಪಾತ್ರ ನಿರ್ವಹಿಸಿದ್ದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು (1995ರಿಂದ ವರ್ತಮಾನದವರೆಗೆ)

    1995ರಲ್ಲಿ ಕಿಡ್‌ಮನ್‌ರ ಎರಡನೆಯ ಟೂ ಡೈ ಫಾರ್ ಎಂಬ ವಿಡಂಬನಾತ್ಮಕ ಹಾಸ್ಯ ಚಿತ್ರದಲ್ಲಿನ ಅಭಿನಯಕ್ಕಾಗಿ ವಿಮರ್ಶಾತ್ಮಕ ಪ್ರಶಂಸೆಗೆ ಪಾತ್ರರಾದರು. ಅದರಲ್ಲಿನ ಕೊಲೆಗಾರ ವರದಿಗಾರ್ತಿ ಸುಜೆನ್‌ ಸ್ಟೊನ್ ಮರೆಟ್ಟೊ ಪಾತ್ರಕ್ಕಾಗಿ ದಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮತ್ತು ಇತರ ಐದು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗಳಿಸಿದರು. 1998ರಲ್ಲಿ ಸಂಡ್ರಾ ಬುಲಾಕ್ ಜೊತೆಗೆ ಪ್ರಾಕ್ಟೀಕಲ್ ಮ್ಯಾಜಿಕ್ ಚಿತ್ರದಲ್ಲಿ ಮತ್ತು ಲಂಡನ್‌ನ ರಂಗಭೂಮಿಯಲ್ಲಿ ಪ್ರದರ್ಶನಗೊಂಡ ದಿ ಬ್ಲೂ ರೂಂ ನಾಟಕದಲ್ಲೂ ಕಾಣಿಸಿಕೊಂಡರು. 1999ರಲ್ಲಿ ಸ್ಟಾನ್ಲಿ ಕುಬ್ರಿಕ್‌ರವರ ಕೊನೆಯ ಚಿತ್ರ ಐಸ್ ವೈಡ್ ಶಟ್‌ ನಲ್ಲಿ ದಂಪತಿಗಳಾದ ಕಿಡ್‌ಮನ್ ಮತ್ತು ಕ್ರೂಸ್ ಅಭಿನಯಿಸಿದರು. ಈ ಚಿತ್ರದ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು ಆದರೆ ಇದರಲ್ಲಿನ ಮುಚ್ಚು ಮರೆಯಿಲ್ಲದ ಸೆಕ್ಸ್ ದೃಶ್ಯಗಳಿಂದ ಸೆನ್ಸಾರ್‌ನಲ್ಲಿ ವಿವಾದಕ್ಕೊಳಗಾಯಿತು.
    2001ರ ಸಂಗೀತಮಯ ಚಿತ್ರ ಮೌಲಿನ್ ರೋಗ್ ಚಿತ್ರದಲ್ಲಿನ ನಟನೆಗಾಗಿ 2002ರಲ್ಲಿ ಅಕಾಡೆಮಿ ಪ್ರಶಸ್ತಿಗೆ ನಾಮಾಂಕಿತವಾದರು. ಈ ಚಿತ್ರದಲ್ಲಿ ಇವಾನ್ ಮ್ಯಾಕ್‌ಗ್ರೆಗೊರ್ ಎದುರು ವೇಶ್ಯೆಯಾಗಿ ನಟಿಸಿದ್ದರು. ಇದರ ಪರಿಣಾಮವಾಗಿ ಕಿಡ್‍ಮನ್ ಸಂಗೀತಮಯ ಅಥವಾ ಹಾಸ್ಯ ಚಲನಚಿತ್ರಕ್ಕಾಗಿ ಎರಡನೇಯ ಬಾರಿ ಅತ್ಯುತ್ತಮ ನಟಿಯಾಗಿ ಗೋಲ್ಡನ್ ಗ್ಲೋಬ್ಪ್ರಶಸ್ತಿ ಪಡೆದರು. ಇದೇ ವರ್ಷ ಹಾರರ್ ಚಿತ್ರ ದಿ ಅದರ್ಸ್‌ ನಲ್ಲಿ ಒಳ್ಳೆಯ ಪಾತ್ರ ಪಡೆದುಕೊಂಡರು. ಇದೆ ವೇಳೆ ಆಸ್ಟ್ರೇಲಿಯಾದಲ್ಲಿ ಮೌಲಿನ್ ರೋಗ್ ಚಿತ್ರ ಮಾಡುವಾಗ ಅವರ ಪಕ್ಕೆಲುಬಿಗೆ ಪೆಟ್ಟಾಗಿತ್ತು; ಇದರಿಂದಾಗಿ ಜೂಡಿ ಪೊಸ್ಟರ್‌ರ ಪ್ಯಾನಿಕ್ ರೂಂ ಚಿತ್ರದಲ್ಲಿನ ಅವರ ಪಾತ್ರವನ್ನು ಬದಲಾಯಿಸಲಾಯಿತು ಈ ಚಿತ್ರದಲ್ಲಿ ಕಿಡ್‌ಮನ್‌ರು ಮುಖ್ಯಪಾತ್ರಧಾರಿಯ ಹೆಂಡತಿಯ ಧ್ವನಿಯಾಗಿ ದೂರವಾಣಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ.
    ನಂತರದ ವರ್ಷಗಳಲ್ಲಿ ಕಿಡ್‌ಮನ್ ವರ್ಜಿನಿಯಾ ವೂಲ್ಫ್ ನಟನೆಗಾಗಿ ವಿಮರ್ಶಾತ್ಮಕ ಪ್ರಂಶಸೆಗೆ ಪಾತ್ರರಾಗಿದ್ದಾರೆ.
    ದಿ ಅವರ್ಸ್ ಚಿತ್ರದಲ್ಲಿ ಅವರನ್ನು ಅಂಗ ನ್ಯೂನ್ಯತೆ ಹೊಂದಿರುವಂತೆ ಮಾಡಲಾಗಿದ್ದು ಅದರಿಂದಾಗಿ ಗುರುತಿಸುವುದು ಸುಲಭವಲ್ಲ.
    ಈ ಪಾತ್ರಕ್ಕಾಗಿ ಅಕಾಡಮಿ ಪ್ರಶಸ್ತಿಯ ಅತ್ಯುತ್ತಮ ನಟಿ ಪ್ರಶಸ್ತಿ ಜೊತೆಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ, BAFTA ಮತ್ತು ಹಲವಾರು ವಿಮರ್ಶಕ ಪ್ರಶಸ್ತಿ ಪಡೆದಿದ್ದಾರೆ. ಕಿಡ್‌ಮನ್ ಅಕಾಡಮಿ ಪ್ರಶಸ್ತಿ ಪಡೆದ ಪ್ರಥಮ ಆಸ್ಟ್ರೇಲಿಯಾದ ನಟಿಯಾಗಿದ್ದಾರೆ. ಯುದ್ಧ ನಡೆಯುತ್ತಿದ್ದ ಸಮಯದಲ್ಲಿ ಅಕಾಡೆಮಿ ಪ್ರಶಸ್ತಿ ಪಡೆದು ಮಾತನಾಡಿದ ಕಿಡ್‌ಮನ್ ನೀರು ತುಂಬಿದ ಕಣ್ಣುಗಳಿಂದ ಕಲೆಯ ಪ್ರಾಮುಖ್ಯತೆಯ ಬಗ್ಗೆ ಹೀಗೆ ಹೇಳಿದರು " ಜಗತ್ತು ಪ್ರಕ್ಷುಬ್ದತೆಯಿಂದ ಕೂಡಿರುವ ಇಂತಹ ಸಮಯದಲ್ಲಿ ಅಕಾಡೆಮಿ ಪ್ರಶಸ್ತಿಯ ಸಂಭ್ರಮ ಬೇಕಿತ್ತಾ? ಹೌದು ಏಕೆಂದರೆ ಕಲೆ ತುಂಬಾ ಮುಖ್ಯವಾದುದು. ಏಕೆಂದರೆ ನೀವು ಮಾಡುವ ಕೆಲಸದಲ್ಲಿ ನಿಮಗೆ ನಂಬಿಕೆ ಇರುತ್ತದೆ ಮತ್ತು ಅದಕ್ಕಾಗಿ ನಿಮ್ಮನ್ನು ಗೌರವಿಸುವುದನ್ನು ನೀವು ಬಯಸುತ್ತೀರಿ ಮತ್ತು ಈ ಸಂಪ್ರದಾಯ ಇರಲೇಬೇಕಾದದ್ದು." ಎಂದು ಹೇಳಿದರು.
    ಅದೇ ವರ್ಷ ಕಿಡ್‌ಮನ್‌ ಮೂರು ಬೇರೆ ಬೇರೆ ಚಲನಚಿತ್ರಗಳಲ್ಲಿ ನಟಿಯಾಗಿ ಅಭಿನಯಿಸಿದರು. ಮೊದಲ ಚಲನಚಿತ್ರ ಡ್ಯಾನಿಷ್‌ ನಿರ್ದೇಶಕ ಲಾರ್ಸ್ ವೊನ್‌ ಟ್ರೈರ್‌ನ ಪ್ರಯೋಗಾತ್ಮಕ ಚಲನಚಿತ್ರ ಡಾಗ್‌ವಿಲ್ಲೆ . ಇದನ್ನು ಕಾಲಿ ಸೌಂಡ್‌ಸ್ಟೇಜ್‌ನ ಮೇಲೆ ಚಿತ್ರೀಕರಿಸಲಾಗಿತ್ತು. ಎರಡನೇ ಚಲನಚಿತ್ರದಲ್ಲಿ ಆ‍ಯ್‌೦ಥೊನಿ ಹಾಪ್‌ಕಿನ್ಸ್‌ನ ಜೊತೆ ಸಹನಟಿಯಾಗಿ ನಟಿಸಿದ್ದಳು. ಇದು ಫಿಲಿಫ್‌ ರೊಥ್‌ನ ಕಾದಂಬರಿ "ದಿ ಹ್ಯೂಮನ್‌ ಸ್ಟೇನ್‌‍" ನ ಆಧಾರಿತವಾಗಿತ್ತು. ಮೂರನೇಯದು "ಕೋಲ್ಡ್ ಮೌಂಟೇನ್‌" ಇದು ಅಂತರ್‌ಯುದ್ಧದಲ್ಲಿ ಬೇರೆಯಾದ ಇಬ್ಬರು ದಕ್ಷಿಣದ ಪ್ರೇಮಿಗಳ ಕತೆಯಾಗಿತ್ತು. ಈ ಚಲನಚಿತ್ರವು ಇವರಿಗೆ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಯಲ್ಲಿ ನಾಮನಿರ್ದೇಶನವನ್ನು ತಂದುಕೊಟ್ಟಿತು.
    ಕಿಡ್‌ಮನ್‌ಳ 2004ನೇ ಇಸವಿಯ ಚಲನಚಿತ್ರ "ಬರ್ತ್" ವೆನಿಸ್‌ ಚಲನಚಿತ್ರೋತ್ಸವದಲ್ಲಿ ಗೋಲ್ಡನ್‌ ಲಯನ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಅಲ್ಲದೆ ಮತ್ತೊಂದು ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗೆ ಕೂಡ ಇವರು ನಾಮಾಂಕಿತವಾಗಿದ್ದರು.
    ದಿ ಇಂಟರ‍್ಪ್ರಿಟರ್‌ ಮತ್ತು ಬಿವಿಚ್ಡ್‌ ಇವು ಕಿಡ್‌ಮನ್‌ಳ 2005ರ ಎರಡು ಚಲನಚಿತ್ರಗಳಾಗಿವೆ. ದಿ ಇಂಟರ್‌ಪ್ರಿಟರ್‌ ಸಿನೆಮಾವನ್ನು ಸಿಡ್ನಿ ಫೊಲಾಕ್‌ ನಿರ್ದೇಶಿಸಿದ್ದರು. ಇದು ಮಿಶ್ರ ಅಭಿಪ್ರಾಯಗಳನ್ನು ಪಡೆದುಕೊಂಡಿತು. ವಿಲ್‌ ಫೆರಲ್‌ ಜೊತೆ ಸಹನಟಿಯಾಗಿ ಅಭಿನಯಿಸಿದ್ದ "ಬಿವಿಚ್ಡ್‌" ಚಲನಚಿತ್ರವು ಅದೇ ಹೆಸರಿನ 1960ರ ಅದೇ ಹೆಸರಿನ ಟಿವಿ ಧಾರಾವಾಹಿ ಆಧಾರಿತ ಚಲನಚಿತ್ರವಾಗಿತ್ತು. ಇದು ಮಾಧ್ಯಮಗಳಿಂದ ತೀರಾ ಅವಹೇಳನಕ್ಕೆ ಗುರಿಯಾಗಿತ್ತು. ಈ ಚಲನಚಿತ್ರವು ಯುನೈಟೆಡ್‌ ಸ್ಟೇಟ್‌ನಲ್ಲಿ ಸರಿಯಾಗಿ ಪ್ರದರ್ಶನ ಕಾಣಲಿಲ್ಲ. ಅಲ್ಲದೆ ಇದರ ನಿರ್ಮಾಣ ವೆಚ್ಚ ಕಡಿಮೆ ಇದ್ದುದರಿಂದ ಬಾಕ್ಸ್‌ ಆಫೀಸ್‌ ವ್ಯಾಪಾರ ಕೂಡಾ ಸರಿಯಾಗಿರಲಿಲ್ಲ. ಆದರೆ ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರನ್ನು ಗಳಿಸಿತು.
    ಸಿನೆಮಾದಲ್ಲಿ ಕಿಡ್‌ಮನ್‌ಳ ಯಶಸ್ಸಿನಿಂದಾಗಿ ಇವರನ್ನು ಚಾನೆಲ್‌ 5 ಸುಗಂಧದ್ರವ್ಯ ತನ್ನ ಪ್ರಚಾರ ರಾಯಭಾರಿಯಾಗಿ ಇವರನ್ನು ಆಯ್ಕೆ ಮಾಡಿತು. ಮೌಲಿನ್‌ ರೋ ನಿರ್ದೇಶನದಲ್ಲಿ ಇವರು ಕಿರುತೆರೆ ಮತ್ತು ಮುದ್ರಣ ಮಾದ್ಯಮದ ಜಾಹಿರಾತಿನಲ್ಲಿ ರೊಡ್ರಿಗೋ ಸಾಂತೊರೊ ಜೊತೆಗೆ ಕಾಣಿಸಿಕೊಂಡರು. ನಿರ್ದೇಶಕ ಬಾಜ್‌ ಲಹ್ರ್‌ಮನ್‌ ಅವರು ಈ ಸುಗಂಧ ದ್ರವ್ಯವನ್ನು 2004, 2005, 2006 ಮತ್ತು 2008ರ ರಜಾದಿನಗಳಲ್ಲಿ ಪ್ರಚಾರ ಮಾಡುವ ಸಲುವಾಗಿ ನೇಮಕ ಮಾಡಲಾಯಿತು.
    ಚಾನೆಲ್‌ 5ಕ್ಕಾಗಿ ನಿರ್ಮಿಸಲ್ಪಟ್ಟ ಈ ಮೂರು ನಿಮಿಷಗಳ ಜಾಹಿರಾತಿಗಾಗಿ ಕಿಡ್‌ಮನ್‌ರ ಹೆಸರು ನಿಮಿಷಕ್ಕೆ ಅತಿಹೆಚ್ಚು ಹಣ ಪಡೆದ ನಟಿ ಎಂದು ದಾಖಲಾಯಿತು. ಮೂರು ನಿಮಿಷಗಳ ಈ ಜಾಹಿರಾತಿಗಾಗಿ ಇವರು ಸುಮಾರು 12ಮಿಲಿಯನ್‌ US$ ಹಣವನ್ನು ಮೂರು ನಿಮಿಷಗಳ ಅವಧಿಯ ಸಿನೆಮಾಕ್ಕಾಗಿ ಪಡೆದಿದ್ದರು. ಈ ಸಮಯದಲ್ಲಿ 2005ರ ಫೋರ್ಬ್ಸ್‌‍ನ 100 ಖ್ಯಾತರ ಪಟ್ಟಿಯಲ್ಲಿ ಇವರನ್ನು 45ನೇ ಅತಿಹೆಚ್ಚು ಪ್ರಭಾವಿ ಖ್ಯಾತನಾಮರಾಗಿ ಗುರುತಿಸಲಾಗಿತ್ತು. ಇವರು 2004-2005ರಲ್ಲಿ ಸುಮಾರು US$14.5 ಮಿಲಿಯನ್‌ ಆದಾಯ ಗಳಿಸಿದ್ದರು ಎಂದು ವರದಿಯಾಗಿತ್ತು.
    ಪೀಪ್ಲ‌ ಮ್ಯಾಗ್‌ಜಿನ್‌ನ 2005ರ ಅತಿಹೆಚ್ಚು ಹಣಪಡೆವ ನಟಿಯರ ಪಟ್ಟಿಯಲ್ಲಿ ಕಿಡ್‌ಮನ್‌, ಜೂಲಿಯಾ ರಾಬರ್ಟ್‌ಳ ನಂತರದ US$16 ಮಿಲಿಯನ್‌‍ನಿಂದ US$17 ಮಿಲಿಯನ್‌ ಮೊತ್ತದ ಸ್ಥಾನದಲ್ಲಿ ಎರಡನೇ ಕ್ರಮಾಂಕವನ್ನು ಪಡೆದುಕೊಂಡಿದ್ದರು. ಅವರು ಈವರೆಗೆ ರಾಬರ್ಟ್‌ರನ್ನು ಅತಿಹೆಚ್ಚು ಹಣಪಡೆವ ನಟಿಯ ಪಟ್ಟದಿಂದ ಹಿಂದೆ ಕಳಿಸಿದ್ದಾರೆ.
    ಕಿಡಮನ್‌ರು ಡಿಯಾನೆ ಅರ್ಬಸ್‌ರ ಜೈವಿಕ ಚಿತ್ರ ಫರ್‌ ದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಧ್ವನಿಯನ್ನು ಅನಿಮೇಷನ್‌ ಚಲನಚಿತ್ರ ಹ್ಯಾಪಿ ಫೀಟ್‌ ಗಾಗಿ ನೀಡಿದ್ದಾರೆ. ಅದು ವೇಗವಾಗಿ ವಿಮರ್ಶಾತ್ಮಕ ಮತ್ತು ವಾಣಿಜ್ಯಾತ್ಮಕ ಯಶಸ್ಸನ್ನು ಪಡೆದುಕೊಂಡಿತು. ಈ ಸಿನೆಮಾವು ಪ್ರಪಂಚದಾದ್ಯಂತದಿಂದ ಸುಮಾರು US$384 ಮಿಲಿಯನ್‌ ಡಾಲರ್‌ ಹಣವನ್ನು ಗಳಿಸಿತ್ತು. 2007ರಲ್ಲಿ ಅವರು ವೈಜ್ಞಾನಿಕ ಚಿತ್ರವೊಂದರಲ್ಲಿ ನಟಿಸಿದರು. ಇನ್ವಾನ್‌ಷನ್‌ ಎಂಬ ಹೆಸರಿನ ಈ ಚಲನಚಿತ್ರವು ಆಲಿವರ್‌ ಹಿರ್ಶ್ಚ್‌ಬೈಗಲ್‌ರಿಂದ ನಿರ್ದೇಶಿಸಲ್ಪಟ್ಟಿತ್ತು. ಈ ಸಿನೆಮಾದಲ್ಲಿಯ ಪಾತ್ರದ ಅವರ ಅಭಿನಯಕ್ಕಾಗಿ $26 ಮಿಲಿಯನ್‌ ಹಣ ಪಡೆದರು ಎಂದು ವರದಿಯಾಗಿತ್ತು. ಇದು ವಾಣಿಜ್ಯಿಕವಾಗಿ ಸೋತರೂ ಕೂಡ ಚಿತ್ರದ ಸೋಲು ಗೆಲುವು ನನ್ನಿಂದ ನಿರ್ಧಾರವಾಗುವುದಿಲ್ಲ ಎಂದು ಅವರು ಹೇಳಿಕೆ ನೀಡಿದ್ದು ವರದಿಯಾಗಿತ್ತು. ನೋಹಾ ಬೌಂಬ್ಯಾಕ್‌ರ ಹಾಸ್ಯ ಸಿನೆಮಾ ಮಾರ್ಗೊಟ್‌ ಅಟ್‌ ದಿ ವೆಡ್ಡಿಂಗ್‌ ಸಿನೆಮಾದಲ್ಲಿ ಅವರು ಜೆನಿಫರ್ ಜಾಸನ್‌ ಲೈ ಮತ್ತು ಜಾಕ್‌ ಬ್ಲಾಕ್‌ರಿಗೆ ವಿರುದ್ಧವಾದ ಪಾತ್ರದಲ್ಲಿ ನಟಿಸಿದ್ದರು. ಅವರು ಹಿಸ್ ಡಾರ್ಕ್ ಮೆಟಿರಿಯಲ್ಸ್ ತ್ರಿಕೋಣ ಸಿನೆಮಾದ ಮೊದಲ ಭಾಗದ ಸಿನೆಮಾ ಅಳವಡಿಕೆಯಲ್ಲಿ ಖಳನಾಯಕಿ ಮಾರಿಸಾ ಕೌಟ್ಲರ್ ಪಾತ್ರದಲ್ಲಿ ಅಭಿನಯಿಸಿದ್ದರು. ಅದೇನೆ ಇದ್ದರೂ ಉತ್ತರ ಅಮೇರಿಕಾದ ಬಾಕ್ಸ್‌ ಆಫೀಸ್‌ನಲ್ಲಿ ಅಂದುಕೊಂಡ ಯಶಸ್ಸನ್ನು ಗೋಲ್ಡನ್‌ ಕಂಪಾಸ್‌ ಗಳಿಸಲು ಸಾಧ್ಯವಾಗದ ನಂತರದಲ್ಲಿ ಈ ರೀತಿಯ ಸರಣಿ ಚಿತ್ರಗಳ ನಿರ್ಮಾಣ ಕಡಿಮೆಯಾಯಿತು.
    ಜೂನ್‌ 25, 2007ರಲ್ಲಿ ನಿಂಟೆಂಡೊ ಕಂಪೆನಿಯು ತನ್ನ ನಿಂಟೆಂಡೊ ಡಿಎಸ್‌ ಗೇಮ್‌ ಮತ್ತು ಮೋರ್ ಬ್ರೇನ್‌ ಟ್ರೈನಿಂಗ್‌ ಉತ್ಪನ್ನಗಳನ್ನು ಯುರೋಪಿಯನ್‌ ಮಾರುಕಟ್ಟೆಗೆ ಪರಿಚಯಿಸುವ ಜಾಹಿರಾತು ಕ್ಯಾಂಪೆನ್‌ನಲ್ಲಿ ಕಿಡ್‌ಮನ್‌ರನ್ನು ಹೊಸ ಮುಖವಾಗಿ ಪರಿಚಯಿಸಲಾಗುವುದು ಎಂದು ಘೋಷಿಸಿತು.
    2008ರಲ್ಲಿ ಅವರು ಬಾಜ್‌ ಲಹ್ರ್‌ಮನ್‌ನ ಆಸ್ಟ್ರೇಲಿಯಾ ಸಮಯದ ಸಿನೆಮಾ ಆಸ್ಟ್ರೇಲಿಯಾ ದಲ್ಲಿ ನಟಿಸಿದರು. ಈ ಸಿನೆಮಾದ ಕಥೆಯು ಎರಡನೇ ವಿಶ್ವಯುದ್ಧದ ಸಮಯದಲ್ಲಿ ಉತ್ತರದ ಭಾಗದಲ್ಲಿ ಡಾರ್ವಿನ್ ಪ್ರದೇಶದ ಮೇಲೆ ಜಪಾನಿಯರ ದಾಳಿ ನಡೆದ ಘಟನೆಯನ್ನು ಚಿತ್ರಿಸುತ್ತದೆ. ಇದರಲ್ಲಿ ಕಿಡಮನ್‌ ಶತ್ರು ರಾಷ್ಟ್ರದಿಂದ ಧ್ವಂಸ ಮಾಡಲ್ಪಟ್ಟ ಭಾವನೆ ಇರುವ ಇಂಗ್ಲೀಷ್‌ ಮಹಿಳೆಯ ಪಾತ್ರದಲ್ಲಿ ಹ್ಯೂಗ್‌ ಜಾಕ್‌ಮನ್‌ರ ವಿರುದ್ಧ ನಟಿಸಿದ್ದಾರೆ. ಇದು ಪ್ರಪಂಚದಾದ್ಯಂತ ಬಾಕ್ಸ್‌ ಆಫೀಸ್‌ ಯಶಸ್ಸನ್ನು ಗಳಿಸಿಕೊಂಡಿತು.
    ಕಿಡ್‌ಮನ್‌ರು ದಿ ರೀಡರ್ ಚಲನಚಿತ್ರದಲ್ಲಿ ನಟಿಸಬೇಕಾಗಿತ್ತು ಆದರೆ ಆ ಸಮಯದಲ್ಲಿ ಅವರು ಗರ್ಭಿಣಿಯಾಗಿದ್ದರಿಂದ ಈ ಸಿನೆಮಾದಿಂದ ಅವರು ಹಿಂದೆ ಸರಿದರು. ಕಿಡ್‌ಮನ್‌ರು ಈ ಸಿನೆಮಾದಿಂದ ಹೊರಹೋದ ಸುದ್ದಿ ಬಂದ ಕೆಲವೇ ದಿನಗಳಲ್ಲಿ ಕೇಟ್‌ ವಿನ್ಸ್ಲೆಟ್‌ ಈ ಪಾತ್ರಕ್ಕೆ ಆಯ್ಕೆಯಾದ ವಿಷಯವನ್ನು ವರದಿಮಾಡಲಾಯಿತು. ವಿನ್‍ಸ್ಲೆಟ್‌ ಈ ಪಾತ್ರಕ್ಕೆ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡರು; ಕಿಡ್‌ಮನ್‌ ಮತ್ತು ಇತರ ಐದು ಜನ ಈ ಮೊದಲೇ ಆಸ್ಕರ್ ಪಡೆದುಕೊಂಡವರು ವಿನ್‌ಸ್ಲೆಟ್‌ಗೆ ಪ್ರಶಸ್ತಿನೀಡಿ ಗೌರವಿಸಿದರು.
    ಕಿಡ್‌ಮನ್‌ 2009ರ ರಾಬ್‌ ಮಾರ್ಷಲ್‌ರ ಸಂಗೀತಮಯ ಚಿತ್ರ ನೈನ್‌ ನಲ್ಲಿ ಕಾಣಿಸಿಕೊಂಡರು. ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ನಾಟಕ ರಾಬಿಟ್‌ ಹೋಲ್‌ ನ ಚಲನಚಿತ್ರ ರೂಪಾಂತರದಲ್ಲಿ ಕಿಡ್‌ಮನ್‌ ಏರೊನ್‌ ಎಕಾರ್ಟ್‌ರ ಜೊತೆಯಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿನ ಪಾತ್ರಕ್ಕಾಗಿ ವುಡಿ ಅಲೆನ್‌ನ ಮುಂಬರುವ ಚಿತ್ರ ’ಯು ವಿಲ್‌ ಮೀಟ್‌ ಟಾಲ್‌ ಡಾರ್ಕ್‌ ಸ್ಟ್ರೇಂಜರ್ ’ ಚಿತ್ರವನ್ನು ಬಿಟ್ಟುಕೊಟ್ಟರು.

ಮುಂಬರುವ ಯೋಜನೆಗಳು

ಕಿಡ್‌ಮನ್‌‌‍ರವರು ದಿ ಡ್ಯಾನೀಷ್ ಗರ್ಲ್  ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಹೆಸರಿನ ಕಾದಂಬರಿ ಡ್ಯಾನೀಷ್ ಗರ್ಲ್‌‍ನ ರೂಪಾಂತರವಾಗಿದ್ದು  ಈ ಚಿತ್ರದಲ್ಲಿ  ಪ್ರಪಂಚದ ಲಿಂಗ ಬದಲಾವಣೆಗೆ ಒಳಗಾದಂತ ಮಹಿಳೆ (ಅಂದರೆ ಪುರುಷನಾಗಿ ಹುಟ್ಟಿ ನಂತರ ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮಹಿಳೆಯಾಗಿ ಮಾರ್ಪಾಡಾಗುವುದು) ಐನರ್ ವೆಗೆನೆರ್‌ರವರ‌‌ ಪಾತ್ರವನ್ನು ಕಿಡ್‌ಮನ್‌‌‍ರವರು ನಿರ್ವಹಿಸುತ್ತಾರೆ ಮತ್ತು ಇವರಿಗೆ ವಿರುದ್ದವಾದ ಪಾತ್ರದಲ್ಲಿ ಅಮೇರಿಕಾದ ನಟಿ ಗ್ವೆಯೆನೆಥ್ ಪಾಲ್ಟ್ರೋ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಟಿವಿ ಗೈಡ್‌ ವರದಿ ಮಾಡಿದೆ.  ಕ್ರಿಸಿಸ್ ಕ್ಲೀವ್ಸ್ರವರ ಕಾದಂಬರಿ ಲಿಟ್ಲ್ ಬೀ ಯನ್ನು ಆಧರಿಸಿದ ಚಿತ್ರವೊಂದರಲ್ಲಿ ನಟಿಸುವುದರ ಜತೆಗೆ ಬಿಬಿಸಿ(ಫಿಲ್ಮ್ಸ್) ಸಹಯೋಗದೊಂದಿಗೆ ಚಿತ್ರ ನಿರ್ಮಾಣವನ್ನೂ ಸಹ ಮಾಡಲಿದ್ದಾರೆ.    ಚಿತ್ರೀಕರಣದ ಯೋಜನೆಯನ್ನು 2010ರ ಕೊನೆಗೆ ಅಥವಾ 2011ರ ಆರಂಭದಲ್ಲಿ ಪ್ರಾರಂಭಿಸಬಹುದು. 
ಆಸ್ಟ್ರೇಲಿಯಾ ತನ್ನ ದೇಶದಲ್ಲಿ 2018ರ ವಿಶ್ವಕಪ್‌ ಆಯೋಜನೆಯ ಧನ ಸಹಾಯಕ್ಕಾಗಿ ಚಿತ್ರಿಕರಿಸಿರುವಂತಹ ಪರಿಚಯಾತ್ಮಕ ವಿಡಿಯೋಗೆ ಇತ್ತೀಚೆಗೆ ಇವರು ತಮ್ಮ ಧ್ವನಿಯನ್ನು ನೀಡಿದ್ದಾರೆ.  ಐದು ನಿಮಿಷಗಳ ಈ ವಿಡಿಯೋವನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2010ರ ವಿಶ್ವಕಪ್‌ನಲ್ಲಿ ಪ್ರಸಾರಮಾಡಲಾಗುವುದು. 

ಹಾಡುಗಾರಿಕೆ

ಮೌಲಿನ್ ರೊಗ್‌‍!  ಚಿತ್ರದಲ್ಲಿ ತಮ್ಮ ಗಾನಗೋಷ್ಠಿಯ(ಗೀತ ಗಾಯನ) ಪ್ರದರ್ಶನಗಳಿಗೆ ಶಾಭಾಸ್‌‍ಗಿರಿಯನ್ನು ಸ್ವೀಕರಿಸುವ ಮುನ್ನ ಕಿಡ್‌ಮನ್‌‌‍ ಹಾಡುಗಾರ್ತಿಯಾಗಿರಲಿಲ್ಲ.  ಕಿಡ್‌ಮನ್‌‌‍ ಮತ್ತು ಇವಾನ್ ಮೇಕ್‌ಗ್ರೇಗರ್‌‌ರವರ ಸಹಭಾಗಿತ್ವದಲ್ಲಿ ತಯಾರಾದ ಅಲ್ಬಮ್‌‍ "ಕಮ್ ವಾಟ್ ಮೇ"  

ಯುಕೆ ಸಿಂಗಲ್ ಚಾರ್ಟ್‌‌‌ನಲ್ಲಿ #27 ಅಗ್ರಸ್ಥಾನವನ್ನು ಪಡೆದುಕೊಂಡಿತು. ನಂತರ ಇವರು ರೊಬ್ಬಿ ವಿಲಿಯಮ್ಸ್‌‍ ಜೊತೆಗೂಡಿ "ಸಂಥಿಂಗ್ ಸ್ಟುಪ್ಪಿಡ್" ಮತ್ತು ವಿಲಿಯಮ್‌‍ ಅವರ ಆಲ್ಬಮ್‌‌ ಸ್ವಿಂಗ್ ವೆನ್‌ ಯು ಆರ್ ವಿನ್ನಿಂಗ್‌‍ ಎನ್ನುವ ಆಲ್ಬಮ್‌ಗಳಲ್ಲಿ ಹಾಡಿದರು. ಇದು ಆಸ್ಟ್ರೇಲಿಯನ್‌‍ ಏರಿಯಾನೆಟ್ ಸಿಂಗಲ್ಸ್ ಚಾರ್ಟ್‌‍ನಲ್ಲಿ #8 ಅಗ್ರಸ್ಥಾನವನ್ನು ಪಡೆದುಕೊಂಡಿತು ಮತ್ತು ಮೂರು ವಾರಗಳ ಕಾಲ ಯುಕೆ ಸಿಂಗಲ್ಸ್ ಚಾರ್ಟ್‌ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿತ್ತು ಹಾಗೂ 2001ರ ಯುಕೆ ಕ್ರಿಸ್‌ಮಸ್ ಅಲ್ಲಿ #೧ ಸ್ಥಾನ ಪಡೆದಿದ್ದಿತ್ತು.

2006ರಲ್ಲಿ ಹ್ಯಾಪಿ ಪೀಟ್  ಅನಿಮೇಟೆಡ್ ಚಿತ್ರಕ್ಕೆ ಧ್ವನಿಯನ್ನು ನೀಡಿದ್ದರು. ಅದರ ಜೊತೆಗೆ ನಾರ್ಮಾ ಜೀನ್ಸ್‌ರವರ  "ಹಾರ್ಟ್ ಸಾಂಗ್"  ಗಾನಗೋಷ್ಠಿಯಲ್ಲಿ ಹಾಡಿದರು. ಇದು ಪ್ರಿನ್ಸ್‌‍ರವರು ಸಂಕ್ಷಿಪ್ತವಾಗಿ ಮಾರ್ಪಡಿಸಿರುವ "ಕಿಸ್ಸ್"ನ ಆವೃತ್ತಿಯಾಗಿದೆ.  ಕಿಡ್‌‍ಮನ್‌ರವರು ರಾಬ್ ಮಾರ್ಷಲ್‌ನ ನೈನ್  ಸಂಗೀತ ಚಿತ್ರದಲ್ಲಿ ಡ್ಯಾನಿಯಲ್ ಡೇ-ಲೋಯಿಸ್, ಪೆನೆಲೋಪೆ ಕ್ರೂಜ್, ಜುಡಿ ಡೇಂಕ್, ಸೋಪಿಯಾ ಲೊರೆನ್ ಮತ್ತು ಮರಿಯಾನ್ ಕೊಟಿಲ್ಲಾರ್ಡ್‌‌ರವರ ಜೊತೆಗೆ ಹಾಡಿದ್ದರು. 

ವೈಯಕ್ತಿಕ ಜೀವನ

ಕಿಡ್‌ಮನ್ ಎರಡು ಬಾರಿ ವಿವಾಹ ವಾಗಿದ್ದಾರೆ.   1990ರಲ್ಲಿ ಟಾಮ್ ಕ್ರೂಸ್‌ರೊಂದಿಗೆ ನಟಿಸಿದ, ಡೇಸ್ ಆಫ್ ತಂಡರ್  ಚಿತ್ರದ ಚಿತ್ರೀಕರಣದ ಸಂದರ್ಭಗಳಲ್ಲಿ ಟಾಮ್ ಕ್ರೂಸ್‌ ಅವರೊಂದಿಗೆ ಪ್ರಣಯ ಸಲ್ಲಾಪಗಳಲ್ಲಿ ತೊಡಗಿದ್ದರು.  ಇದಾದ ಕೆಲವೇ ದಿನಗಳಲ್ಲಿ ಅಂದರೆ 1990ರ ಕ್ರಿಸ್ಮಸ್‌ ದಿನ ಟಾಮ್ ಕ್ರೂಸ್‌‍ ಮತ್ತು ಕಿಡ್‌ಮನ್ ಇಬ್ಬರು ಟೆಲ್ಯೂರೈಡ್ ಕೊಲೊರಾಡೊದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.  ನಂತರ ಈ ಜೋಡಿಯು ಇಬ್ಬರು ಮಕ್ಕಳನ್ನು ದತ್ತು ಪಡೆದರು ಮಗಳು ಇಸಾಬೆಲ್ ಜಾನ್ (ಜನನ 1992) ಮತ್ತು ಮಗ ಕೊನೊರ್ ಆಂಥೋನಿ(ಜನನ 1995).  ಇವರಿಬ್ಬರು ತಮ್ಮ ಹತ್ತನೇ ವಿವಾಹ ವಾರ್ಷಿಕೋತ್ಸವದ ನಂತರ ಬೇರೆಯಾದರು.  ಆಗ ಮೂರು ತಿಂಗಳ ಗರ್ಭಿಣಿಯಾಗಿದ್ದ ಕಿಡ್‌ಮನ್‌ ಗರ್ಭಸ್ರಾವಕ್ಕೀಡಾದರು.  ಫೆಬ್ರವರಿ 2001ರಲ್ಲಿ ಕ್ರೂಸ್‌ ವಿವಾಹ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದರು.  2001ರಲ್ಲಿ ಇವರಿಗೆ ವಿವಾಹ ವಿಚ್ಛೇದನ ದೊರೆಯಿತು. ಆದರೆ ಕ್ರೂಸ್‌ ಮತ್ತು ಕಿಡ್‌ಮನ್‌ ನಡುವೆ ರಾಜಿಮಾಡಲಾಗಂತಹ ವೈಮನಸ್ಸು ಉಂಟಾಗಿತ್ತು.    ಇಷ್ಟಾದರು ಇವರ ವಿವಾಹ ವಿಚ್ಚೇದನಕ್ಕೆ ಕಾರಣಗಳೇನೆಂಬುದನ್ನು ಸಾರ್ವಜನಿಕವಾಗಿ ಬಹಿರಂಗವಾಗಲೇ ಇಲ್ಲ.  ಕಿಡ್‌ಮನ್‌‌‍ರವರು ಮೇರಿ ಕ್ಲೇರ್‌  ಮಾಸ ಪತ್ರಿಕೆಯ ಸುದ್ದಿಯಲ್ಲಿ "ತಾವು ಮದುವೆಯಾದ ಪ್ರಾರಂಭದ ಸಮಯದಲ್ಲಿ ಅಪಸ್ಥಾನಿಯ ಗರ್ಭಿಣಿಯಾಗಿದ್ದರೆಂದು ಹೇಳಿದ್ದಾರೆ.  ನಂತರ ಜೂನ್ 2006ರಲ್ಲಿ, "ನಾನು ಈಗಲೂ ಕ್ರೂಸ್‌‍ ಅವರನ್ನು ಪ್ರೀತಿಸುತ್ತಿದ್ದೇನೆ" 

ಎಂದು ಲೇಡಿಸ್ ಹೋಮ್ ಜರ್ನಲ್‌ ನಲ್ಲಿ ಕಿಡ್‌ಮನ್ ಹೇಳಿದ್ದಾರೆ. "ಆತ ದೊಡ್ಡವ್ಯಕ್ತಿತ್ವದವನು. ಅವರು ಬೇರೆಯವರಿಗೆ ಎಷ್ಟೆ ದೊಡ್ಡವರಾಗಿರಬಹುದು ಆದರೆ ನನಗೆ ಮಾತ್ರ ಟಾಮ್ ಅಷ್ಟೆ. ಆದರೆ ಅವನು ನನಗೆ ಬಹಳ ಪ್ರಿಯವಾದವನಾಗಿದ್ದ. ಮತ್ತು ನಾನು ಅವನನ್ನು ತುಂಬ ಇಷ್ಟ ಪಟ್ಟಿದ್ದೆ. ಈಗಲೂ ನಾನು ಅವರನ್ನು ಪ್ರೀತಿಸುತ್ತಿದ್ದೇನೆ" ಎಂದು ಹೇಳುತ್ತ ವಿವಾಹ ವಿಚ್ಛೇದನದ ಕುರಿತು ತಮ್ಮ ತಲ್ಲಣವನ್ನು ವ್ಯಕ್ತಪಡಿಸಿದರು.

ನಿಕೋಲ್‌ ಕಿಡ್‌ಮನ್‌ 
ಆಗಸ್ಟ್ 2006ರಲ್ಲಿ ನಿಕೋಲ್ ಕಿಡ್‌‌ಮನ್
2003ರ ಕೋಲ್ಡ್ ಮೌಂಟೆನ್ ಚಲನಚಿತ್ರವು ಕಿಡ್‌‍ಮನ್ ಮತ್ತು ಅವರ ಸಹನಟ ಜುಡ್‌ ಲಾ ನಡುವೆ ಸಂಬಂಧ ಇರುವುದಾಗಿ ವದಂತಿಗಳು ಕೇಳಿಬಂದವು. ಜುಡ್ ಲಾ ಇವರ ಮದುವೆ ಮುರಿದು ಬೀಳಲು ಕಾರಣ ಎಂದು ಹೇಳಲಾಯಿತು.  ಇಬ್ಬರು ಈ ಅರೋಪಗಳನ್ನು ತಳ್ಳಿಹಾಕಿದರು ಮತ್ತು ಈ ವರದಿಯನ್ನು ಪ್ರಕಟಿಸಿದ ಬ್ರಿಟಿಷ್‌ ಟ್ಯಾಬ್ಲಾಯಿಡ್‌ನಿಂದ ಕಿಡ್‌ಮನ್‌ ಗುಟ್ಟಾಗಿ ಹಣವನ್ನು ಪಡೆದರು.    ನಂತರ ಇವರು ಅ ಹಣವನ್ನು ಈ ಚಿತ್ರದ ಚಿತ್ರೀಕರಣ ನಡೆದ ಸ್ಥಳದಲ್ಲಿದ್ದ ರೊಮಾನಿಯನ್ ಅನಾಥಾಶ್ರಮಕ್ಕೆ ದೇಣಿಗೆಯಾಗಿ ನೀಡಿದರು.  2004ರ ಬೇಸಿಗೆಯಲ್ಲಿ  

ಆಕೆಯ ದೋಣಿಯಲ್ಲಿ ಅವರಿಬ್ಬರು ಸಣ್ಣ ಪ್ರಣಯಕ್ಕೆ ಒಳಗಾಗಿದ್ದನ್ನು ರೊಬ್ಬಿ ವಿಲಿಯಮ್ಸ್ ಒಪ್ಪಿಕೊಂಡರು. ಇವರು ಅಸ್ಕರ್ ಪ್ರಶಸ್ತಿ ಪಡೆದ ನಂತರದ ಕೆಲ ದಿನಗಳಲ್ಲಿ ಇವರ ಮತ್ತು ಅಡ್ರಿಯನ್ ಬ್ರೊಡಿಯವರ ಸಂಬಂಧದ ಕುರಿತು ವದಂತಿಗಳು ಹಬ್ಬಿದ್ದವು. ಇವರು 2003ರಲ್ಲಿ ಸಂಗೀತಗಾರ ಲೆನ್ನಿ ಕ್ರೆವಿಟ್ಜ್‌ರನ್ನು ಭೇಟಿಯಾಗುತ್ತಾರೆ ಮತ್ತು 2004ರವರೆಗೂ ಆತನ ಜೊತೆಗಿದ್ದರು.

ನಂತರ ಜನವರಿ 2005ರಲ್ಲಿ ಜಿ’ಡೇ ಲಾದಲ್ಲಿ ನಡೆದ ಶ್ರೇಷ್ಠ ಆಸ್ಟ್ರೇಲಿಯನ್ನರ ಸಮಾರಂಭದಲ್ಲಿ ಕಿಡ್‌ಮನ್ ತಮ್ಮ ಎರಡನೇ ಪತಿ ಮತ್ತು ದೇಶಿಯ ಸಂಗೀತಗಾರ ಕೇತ್ ಅರ್ಬನ್‌ರವರನ್ನು ಭೇಟಿ ಮಾಡಿದರು.  ಸಿಡ್ನಿಯ ಮನ್ಲೆಯಲ್ಲಿರುವ ಗ್ರೌಂಡ್ಸ್ ಆಫ್ ಸೆಂಟ್ ಪಾಟ್ರಿಕ್ಸ್ ಎಸ್ಟೇಟ್‌‌‌ನ, ಕಾರ್ಡಿನಲ್ ಸೆರೆಟ್ಟಿ ಮೆಮೊರಿಯಲ್ ಚಾಪೆಲ್‌ನಲ್ಲಿ ಜೂನ್ ೨೫, 2006ರಂದು ಇವರಿಬ್ಬರು ವಿವಾಹವಾದರು.  ಇವರು ಸಿಡ್ನಿ, ಸಟ್ಟಾನ್‌ ಫಾರೆಸ್ಟ್‌, ಲಾಸ್‌‍ಏಜಂಲೀಸ್ ಮತ್ತು ನ್ಯಾಶ್‌ವಿಲ್ಲೆ, ಟೆನ್ನೆಸ್ಸೀಗಳಲ್ಲಿ ಮನೆಗಳನ್ನು ಹೊಂದಿದ್ದಾರೆ. ಮಾರ್ಚ್ 2008ರಲ್ಲಿ ಕೆಲವು ದಿನಗಳ ಅಂತರದಲ್ಲಿ ಲಾಸ್‌ಏಂಜಲೀಸ್ ಮತ್ತು ನ್ಯಾಶ್‌ವಿಲ್ಲೆಗಳಲ್ಲಿ ಭವ್ಯ ಬಂಗಲೆಗಳನ್ನು ಖರೀದಿಸಿದರು. 
ಪತ್ರಿಕೆ ಮತ್ತು ಪತ್ರಕರ್ತರ ಊಹಾಪೋಹಗಳ ನಂತರ ಜನವರಿ 2008ರಲ್ಲಿ ಕಿಡ್‌‍ಮನ್ ಮೂರು ತಿಂಗಳ ಗರ್ಭಿಣಿ ಎಂದು ಖಚಿತವಾಯಿತು.  ನಂತರ 7ಜುಲೈ2008ರಲ್ಲಿ ನ್ಯಾಶ್‌ವಿಲ್ಲೆ, ಟೆನ್ನೆಸ್ಸೀಯಲ್ಲಿ ಈ ದಂಪತಿಗಳು ಮೊದಲ ಮಗು ಸನ್‌‍ಡೇ ರೋಸ್ ಕಿಡ್‌‍ಮನ್ ಅರ್ಬನ್‌‍ ಎಂಬ ಹೆಣ್ಣುಮಗುವನ್ನು ಪಡೆದರು.   ಕಿಡ್‌ಮನ್‌ನ ತಂದೆ ಹೇಳುವ ಪ್ರಕಾರ ಈ ಮಗುವಿನ ಮಧ್ಯದ ಹೆಸರು ’ರೋಸ್‌’ ಎಂಬುದು ಅರ್ಬನ್‌ನ ಅಜ್ಜಿಯ ಹೆಸರಾಗಿದೆ. 
2005ರಲ್ಲಿ ಏಲೇನ್ ಡೀ ಜನ್‌ರಸ್‌‍ ಜೊತೆಗೆ ಒಂದು ಸಂದರ್ಶನದಲ್ಲಿ ತಮ್ಮ ನೆಚ್ಚಿನ ಹವ್ಯಾಸಗಳಲ್ಲಿ ಒಂದಾದ ಸ್ಕೈ ಡೈವಿಂಗ್ ಅನ್ನು ಚಿತ್ರೀಕರಣ ಇರುವ ಸಮಯದಲ್ಲಿ ಮಾಡುವುದಿಲ್ಲ ಎಂದು ಹೇಳಿದರು.  ಈ ನಡುವೆ ಜನವರಿ 2005ರಲ್ಲಿ ಇಬ್ಬರು ಸಿಡ್ನಿ ಪಾಪರಾತ್ಸಿ‌ ಛಾಯಾಗ್ರಾಹಕರ ವಿರುದ್ಧ ಕಾನೂನು ಸಮರ ಮಾಡಿ ಕ್ರಮ ಕೈಗೊಳ್ಳುವಂತೆ ಮಾಡಿದ್ದರು. 
ನಂತರ 2009ರ ಆರಂಭದಲ್ಲಿ ವಿಶೇಷ ಪೋಸ್ಟ್‌ ಸ್ಟಾಂಪ್‌‍ಗಳ ಸರಣಿ ಸಂಚಿಕೆಯಲ್ಲಿ ಕಿಡ್‌ಮನ್ ಕಾಣಿಸಿಕೊಂಡಿದ್ದರು ಇದರಲ್ಲಿ ಆಸ್ಟ್ರೇಲಿಯಾದ ಹಲವು ಶ್ರೇಷ್ಠ ನಟರು ಒಳಗೊಂಡಿದ್ದರು.  ಕಿಡ್‌ಮನ್‌, ಜಾಫ್ರಿ ರಷ್, ರಸಲ್ ಕ್ರೊವ್ ಮತ್ತು ಕೇಟ್‌ ಬ್ಲಾನ್‌‍ಕೆಟ್ ಇವರೆಲ್ಲರೂ ಈ ಸರಣಿಯಲ್ಲಿ ಎರಡು ಬಾರಿ ಕಾಣಿಸಿಕೊಂಡಿದ್ದಾರೆ. ಒಮ್ಮೆ ಅವರ ಮೂಲರೂಪದಲ್ಲಿ ಮತ್ತೊಮ್ಮೆ ಅಕಾಡೆಮಿ ಪ್ರಶಸ್ತಿ ಪಡೆಯುತ್ತಿರುವ ರೀತಿಯಲ್ಲಿ ಕಾಣಿಸಿಕೊಂಡರು. 

ಧಾರ್ಮಿಕ ಮತ್ತು ರಾಜಕೀಯ ದೃಷ್ಟಿಕೋನ

ಕಿಡ್‌ಮನ್‌‍ರವರು ರೋಮನ್ ಕ್ಯಾಥೋಲಿಕ್ ಧರ್ಮವನ್ನು ಆಚರಿಸುತ್ತಾರೆ.   ಇವರು ಉತ್ತರ ಸಿಡ್ನಿಯಲ್ಲಿರುವ ಮೇರಿ ಮ್ಯಾಕಿಲೋಪ್ ಚಾಪೆಲ್‌ಗೆ ಬೇಟಿ ನೀಡಿದ್ದರು.  ಇವರು ಕ್ರೂಸ್‌ರೊಂದಿಗಿದ್ದಾಗಿನ ಸಮಯದಲ್ಲಿ ಸಾಂದರ್ಭಿಕವಾಗಿ  

ಸೈಂಟಾಲಜಿ ಧರ್ಮವನ್ನು ಅನುಸರಿಸುತ್ತಿದ್ದರು. ಇವರ ವಿವಾಹ ವಿಚ್ಛೇದನದವರೆಗೂ, ಈಕೆ ಸೈಂಟಾಲಜಿಯ ಕುರಿತು ಚರ್ಚಿಸುವುದು ಇಷ್ಟವಿಲ್ಲದೆ ಹೆಣಗಾಡುತ್ತಿದ್ದರು.

ಕಿಡ್‌ಮನ್‌ರವರ ಹೆಸರು ಲಾಸ್ ಏಂಜಲೀಸ್ ಟೈಮ್ಸ್  ಪತ್ರಿಕೆಯ ಜಾಹೀರಾತಿನಲ್ಲಿತ್ತು (17ಆಗಸ್ಟ್2006). ಇದರಲ್ಲಿ 2006ರ ಇಸ್ರೇಲ್ -ಲೆಬನಾನ್ ಸಂಘರ್ಷದಲ್ಲಿ ಹಮಾಸ್ ಮತ್ತು ಹಿಜ್‌ಬುಲ್‌ ಇಸ್ಲಾಂ ಧರ್ಮದ ಗುಂಪುಗಳನ್ನು ಖಂಡಿಸಲಾಗಿತ್ತು ಮತ್ತು  ಇಸ್ರೇಲ್‌ಗೆ ಬೆಂಬಲವನ್ನು ಸೂಚಿಸಲಾಗಿತ್ತು.  ಕಿಡ್‌ಮನ್ 2004ರ ಅಧ್ಯಕ್ಷೀಯ ಚುನಾವಣೆಯಲ್ಲಿ, ಯುಎಸ್‌ನ ಡೆಮೊಕ್ರಟಿಕ್‌ ಪಕ್ಷದ ಸದಸ್ಯರಿಗೆ ದೇಣಿಗೆ ನೀಡಿದ್ದರು. ಹಾಗೂ ಈ ಚುನಾವಣೆಯಲ್ಲಿ ಜಾನ್ ಕೇರಿಯವರ ಪರವಹಿಸಿದ್ದರು. 

ಧರ್ಮಾರ್ಥ ಸೇವೆ

ಕಿಡ್‌ಮನ್‌ ಅವರು 1994ರಿಂದ ಯುನಿಸೆಫ್‌ನ ಹಿತಚಿಂತನಾ ರಾಯಭಾರಿ ಆಗಿದ್ದಾರೆ.  ಅವರು ವಿಶ್ವದಾದ್ಯಂತ ಅನಾನುಕೂಲವಂತ ಮಕ್ಕಳ ಹಿತಾಸಕ್ತಿಗಾಗಿ ಎಚ್ಚರವನ್ನು ಮೂಡಿಸಿದರು ಮತ್ತು ಹಣವನ್ನು ಸಂಗ್ರಹಿಸಿದರು.  2004ರಲ್ಲಿ, ಅವರು ಸಂಯುಕ್ತ ರಾಷ್ಟ್ರಗಳಿಂದ "ವಿಶ್ವದ ನಾಗರೀಕ" ಎಂಬ ಗೌರವಕ್ಕೆ ಪಾತ್ರರಾದರು. 

2006ರ ಆಸ್ಟ್ರೇಲಿಯಾ ದಿನಾಚರಣೆ ಯಂದು, ಕಿಡ್‌ಮನ್ ಅವರು ಆರ್ಡರ್ ಆಫ್ ಆಸ್ಟ್ರೇಲಿಯಾದ ಸಹವರ್ತಿಯಾಗಿದ್ದಾಗ, ಆಸ್ಟ್ರೇಲಿಯಾದ ಅತ್ಯುನ್ನತ ನಾಗರೀಕ ಎಂಬ ಕೀರ್ತಿ ಗಳಿಸಿದರು. ಅವರು ಯುನಿಫೆಮ್‌ಗೂ ಸಹ ಹಿತಚಿಂತನಾ ರಾಯಭಾರಿಯಾಗಿ ನೇಮಕಗೊಂಡರು.

ಕಿಡ್‌ಮನ್ ಅವರು ಸ್ತನ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ’ಲಿಟ್ಲ್ ಟೀ ಕಂಪೈನ್’ಗೆ ಸೇರಿದರು, ಅದಕ್ಕಾಗಿ ವಿನ್ಯಾಸಗೊಳಿಸಿದ ಟೀ-ಶರ್ಟ್ಸ್ ಅಥವಾ ನಡುವಂಗಿಗಳನ್ನು ಧರಿಸುತ್ತಿದ್ದರು. ಅವರು ಸ್ತನ ಕ್ಯಾನ್ಸರ್‌ ಜಾಗೃತಿಗಾಗಿ ಹಣವನ್ನು ಸಂಗ್ರಹ ಮಾಡಿದರು. 1984ರಲ್ಲಿ ಕಿಡ್‌ಮನ್‌ ಅವರ ತಾಯಿಗೆ ಸ್ತನ ಕ್ಯಾನ್ಸರ್ ಇತ್ತು.

ಜನವರಿ 8, 2010ರಲ್ಲಿ, ಕಿಡ್‌ಮನ್ ಅವರು ನ್ಯಾನ್ಸಿ ಪೆಲೊಸಿ, ಜಾನ್ ಚೆನ್ ಮತ್ತು ಜೊ ಟೊರ್ರೆ ಅವರೊಂದಿಗೆ ಕೌಟುಂಬಿಕ ಹಿಂಸಾಚಾರ ನಿವಾರಣೆ ನಿಧಿಗೆ ಸಹಾಯ ಮಾಡುವುದಕ್ಕಾಗಿ, ಸ್ಯಾನ್‌ ಫ್ರಾನ್ಸಿಸ್ಕೋದ ಪ್ರೆಸಿಡಿಯೊದಲ್ಲಿರುವ ಹೊಸ ಅಂತಾರಾಷ್ಟ್ರೀಯ ಕೇಂದ್ರದ ಮೈದಾನದಲ್ಲಿ ಭಾಗವಹಿಸಿದ್ದರು. ಅಲ್ಲಿ ಮಹಿಳೆ ಮತ್ತು ಮಕ್ಕಳ ವಿರುದ್ಧದ ಹಿಂಸಾಚಾರದ ಬಗ್ಗೆ ಹೋರಾಟ ಮಾಡಲು ಉದ್ದೇಶಿಸಲಾಗಿತ್ತು.

ಚಲನಚಿತ್ರಗಳ ಪಟ್ಟಿ

ಕಿಡ್‌ಮನ್‌ ಅವರ ಚಿತ್ರಗಳ ಒಟ್ಟು ಆದಾಯವು US$2 ಬಿಲಿಯನ್‍ಗಿಂತ ಹೆಚ್ಚಾಗಿದೆ, ಅದರಲ್ಲಿ 17ಚಿತ್ರಗಳು $100ಮಿಲಿಯನ್‌ಗಿಂತ ಹೆಚ್ಚು ಗಳಿಸಿವೆ.

ವಿಜೇತರು ವಿಯೆಟ್ನಾಂ ಜನನ
Year Film Role Notes
1983 BMX ಬ್ಯಾಂಡಿಟ್ಸ್ ಜುಡಿ
ಬುಷ್ ಕ್ರಿಸ್‌ಮಸ್ ಹೆಲೆನ್
ಫೈವ್ ಮೈಲ್ ಕ್ರೀಕ್ ಆ‍ಯ್‌ನಿ (TV ಸರಣಿ)
ಸ್ಕೀನ್ ಡೀಪ್ ಶೀನಾ ಹೆಂಡರ್ಸನ್ ಟಿವಿ ಚಲನಚಿತ್ರ
ಚೇಸ್ ಥ್ರೂ ದ ನೈಟ್

ಪೆಟ್ರಾ

ಟಿವಿ ಚಲನಚಿತ್ರ
1984 ಮ್ಯಾಥ್ಯೂ ಆ‍ಯ್೦ಡ್ ಸನ್ ಬ್ರಿಡ್ಜೆಟ್ ಎಲಿಯಟ್ ಟಿವಿ ಚಲನಚಿತ್ರ
ವಿಲ್ಸ್ & ಬುರ್ಕ್ ಜುಲಿಯಾ ಮ್ಯಾಥ್ಯೂಸ್
ಎ ಕಂಟ್ರಿ ಪ್ರಾಕ್ಟೀಸ್ ಸೈಮನ್ ಜೆನ್‌ಕಿನ್ಸ್ ಟಿವಿ ಸರಣಿ, 2 ಕಂತುಗಳು (4x43-44)
1985 ಆರ್ಚರ್’ಸ್ ಅಡ್ವೆಂಚರ್ ಕ್ಯಾಥರಿನ್ ಟಿವಿ ಚಲನಚಿತ್ರ
ಕರೊಲ್ ಟ್ರಿಗ್ ಟಿವಿ ಸರಣಿ - ಕಂತು 1
1986 ವಿನ್‌ಡ್ರೈಡರ್

ಜೇಡ್‌

1987 ವಾಚ್ ದ ಶಾಡೊಸ್ ಡ್ಯಾನ್ಸ್ ಎಮಿ ಗೇಬ್ರಿಯೆಲ್
ದ ಬಿಟ್ ಪಾರ್ಟ್ ಮೇರಿ ಮ್ಯಾಕ್‌ಆ‍ಯ್‌ಲಿಸ್ಟರ್
ರೂಮ್ ಟು ಮೂವ್ ಕರೊಲ್ ಟ್ರಿಗ್ ಟಿವಿ ಚಿಕ್ಕಸರಣಿ
ಆ‍ಯ್‌ನ್ ಆಸ್ಟ್ರೇಲಿಯನ್ ಇನ್ ರೋಮ್ ಜಿಲ್ ಟಿವಿ ಚಲನಚಿತ್ರ
ಮೆಗನ್ ಗೊಡಾರ್ಡ್ ಚಿಕ್ಕ ಸರಣಿಯಲ್ಲಿ ನಟಿಯರ ಅತ್ಯುತ್ತಮ ಅಭಿನಯಕ್ಕಾಗಿ ಆಸ್ಟ್ರೇಲಿಯನ್ ಫಿಲ್ಮ್ ಇನ್ಸ್‌ಟಿಟ್ಯೂಟ್ ಪ್ರಶಸ್ತಿ
ಚಿಕ್ಕಸರಣಿ/ಸಾಕ್ಷ್ಯಚಿತ್ರಗಳಲ್ಲಿನ ಅತ್ಯಂತ ಜನಪ್ರಿಯ ನಟಿಗಾಗಿ ಲೊಜೀ ಪ್ರಶಸ್ತಿ
1988 ಎಮೆರಾಲ್ಡ್ ಸಿಟಿ ಹೆಲೆನ್ ನಾಮನಿರ್ದೇಶಿತ — [[ ಪೋಷಕ ಪಾತ್ರದಲ್ಲಿ ಉತ್ತಮ ನಟಿಗಾಗಿ ಆಸ್ಟ್ರೇಲಿಯನ್

ಫಿಲ್ಮ್ ಇನ್ಸ್‌ಟಿಟ್ಯೂಟ್ ಪ್ರಶಸ್ತಿ]]

1989 ಡೆಡ್ ಕಾಮ್ ರಾ ಇಂಗ್ರಾಮ್

ನಾಮನಿರ್ದೇಶಿತ — ಅತ್ಯುತ್ತಮ ನಟಿಗೆ ಸ್ಯಾಟರ್ನ್‌ ಪ್ರಶಸ್ತಿ‌

ಬ್ಯಾಂಕಾಕ್ ಹಿಲ್ಟನ್ ಕಟ್ರಿನಾ ಸ್ಟ್ಯಾಂಟನ್ ಚಿಕ್ಕಸರಣಿ/ಸಾಕ್ಷ್ಯಚಿತ್ರಗಳಲ್ಲಿನ ಅತ್ಯಂತ ಜನಪ್ರಿಯ ನಟಿಗಾಗಿ ಲೊಜೀ ಪ್ರಶಸ್ತಿ
ಅತ್ಯುತ್ತಮ ನಟಿಗೆ ಸಿಲ್ವರ್ ಲೊಜೀ ಪ್ರಶಸ್ತಿ
ನಾಮನಿರ್ದೇಶಿತ — ಟೆಲಿಫೇರ್‌ನಲ್ಲಿ ಉತ್ತಮ ಅಭಿಯಕ್ಕಾಗಿ ನಟಿಗೆ ಆಸ್ಟ್ರೇಲಿಯನ್ ಫಿಲ್ಮ್ ಇನ್ಸ್‌ಟಿಟ್ಯೂಟ್ ಪ್ರಶಸ್ತಿ
1990

ಡೇಸ್‌ ಆಫ್‌ ಥಂಡರ್‌

ಡಾ.ಕ್ಲಾರಿ ಲೆವಿಕ್ಕಿ
1991 ಫ್ಲಿರ್ಟಿಂಗ್ ನಿಕೊಲ
ಬಿಲ್ಲಿ ಬಥ್‌ಗೇಟ್ ಡ್ರ್ಯೂ ಪ್ರೆಸ್ಟನ್

ನಾಮನಿರ್ದೇಶಿತ — ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ‌‌ನ ಅತ್ಯುತ್ತಮ ಪೋಷಕ ನಟಿ - ಚಲನಚಿತ್ರ

1992

ಫಾರ್‌ ಆ‍ಯ್‌೦ಡ್‌ ಅವೇ

ಶಾನಾನ್ ಕ್ರಿಸ್ಟೀ
1993 ಮ್ಯಾಲೀಸ್ ಟ್ರೇಸಿ ಕೆನ್ಸಿಂಗರ್
ಮೈ ಲೈಫ್ ಗೈಲ್ ಜೋನ್ಸ್
1995 ಟು ಡೈ ಫಾರ್ ಸುಜನೆ ಸ್ಟೋನ್ ಮರೆಟ್ಟೊ

ಉತ್ತಮ ಪೋಷಕ ನಟಿಗಾಗಿ ಬೊಸ್ಟನ್ ಸೊಸೈಟಿ ಆಫ್ ಫಿಲ್ಮ್ ಕ್ರಿಟಿಕ್ಸ್ ಪ್ರಶಸ್ತಿ
ಅತ್ಯುತ್ತಮ ನಟಿಗಾಗಿ ಬ್ರಾಡ್‌ಕ್ಯಾಸ್ಟ್‌ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ ಪ್ರಶಸ್ತಿ‌
ನಾಮನಿರ್ದೇಶಿತ – ಉತ್ತಮ ನಟಿಗಾಗಿ ಎಂಪೈರ್ ಪ್ರಶಸ್ತಿ
ಅತ್ಯುತ್ತಮ ನಟಿಗಾಗಿ ಗೋಲ್ಡನ್‌ ಗ್ಲೋಬ್‌ ಅವಾರ್ಡ್‌ – ಸಂಗೀತ ಮತ್ತು ಹಾಸ್ಯ ಚಲನಚಿತ್ರ
ವರ್ಷದ ನಟಿಗಾಗಿ ಲಂಡನ್ ಕ್ರಿಟಿಕ್ಸ್ ಸರ್ಕಲ್ ಫಿಲ್ಮ್ ಪ್ರಶಸ್ತಿ
ಅತ್ಯುತ್ತಮ ನಟಿಗಾಗಿ ಸೀಟಲ್ ಇಂಟರ‍್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ
ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟಿಗಾಗಿ BAFTA ಪ್ರಶಸ್ತಿ‌‌ಗೆ ನಾಮನಿರ್ದೇಶಿತವಾಗಿದೆ.
ನಾಮನಿರ್ದೇಶಿತ —ಅತ್ಯುತ್ತಮ ನಟಿಗಾಗಿ ಸ್ಯಾಟರ್ನ್‌ ಪ್ರಶಸ್ತಿ‌

ಬ್ಯಾಟ್‌ಮನ್‌ ಫಾರೆವರ್‌ ಡಾ. ಚೇಸ್ ಮೆರಿಡಿಯನ್
1996 ದ ಪೊರ್ಟೈಟ್ ಆಫ್ ಎ ಲೇಡಿ ಇಸಾಬೆಲ್ ಆರ್ಚರ್
ಶೈನ್ ವುಮನ್ ಇನ್ ಬಾರ್ ಅನ್‌ಕ್ರೆಡಿಟೆಡ್ ಕ್ಯಾಮಿಯೊ
ದ ಲೀಡಿಂಗ್ ಮ್ಯಾನ್ ಅಕಾಡೆಮಿ ಪ್ರಶಸ್ತಿಸ್ ಆಯೋಜಕರು
1997 ದ ಪೀಸ್ ಮೇಕರ್ ಡಾ. ಜುಲಿಯಾ ಕೆಲ್ಲಿ ನೆಚ್ಚಿನ ನಟಿಗೆ ನೀಡುವ ಬ್ಲಾಕ್‌ಬಸ್ಟರ್ ಎಂಟರ್‌ಟೈನ್‌ಮೆಂಟ್ ಪ್ರಶಸ್ತಿ‌ಗೆ ನಾಮನಿರ್ದೇಶನಗೊಂಡಿದೆ.
1998 ಪ್ರಾಕ್ಟಿಕಲ್ ಮ್ಯಾಜಿಕ್ ಗಿಲ್ಲಿಯಾನ್ ಓವೆನ್ಸ್
1999

ಐಸ್ ವೈಡ್‌ ಶಟ್‌

ಲೈಸ್ ಹಾರ್ಫೊರ್ಡ್ ನೆಚ್ಚಿನ ನಟಿಗೆ ಬ್ಲಾಕ್‌ಬಸ್ಟರ್ ಎಂಟರ್‌ಟೈನ್ಮೆಂಟ್ ಪ್ರಶಸ್ತಿ
ಫಿಲ್ಮ್‌ಕ್ರಿಟಿಕ್ "ಬಾಸ್ಟೊನ್ ಬಿಯಾನ್ಕೊ" ಪ್ರಶಸ್ತಿ 1999
ನಾಮನಿರ್ದೇಶಿತ —ಅತ್ಯುತ್ತಮ ನಟಿಗೆ ಸ್ಯಾಟಲೈಟ್‌ ಪ್ರಶಸ್ತಿ‌- ಸಂಗೀತ ಅಥವಾ ಹಾಸ್ಯ ಚಲನಚಿತ್ರ
2001

ಮೌಲಿನ್‌ ರೌಜ್‌!

ಸ್ಯಾಟಿನ್

ಅತ್ಯುತ್ತಮ ನಟಿಗಾಗಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ‌ – ಸಂಗೀತ ಮತ್ತು ಹಾಸ್ಯ ಚಲನಚಿತ್ರ
ನಾಮನಿರ್ದೇಶಿತ – ಉತ್ತಮ ನಟಗಾಗಿ ಎಂಪೈರ್ ಪ್ರಶಸ್ತಿ
ಅತ್ಯುತ್ತಮ ನಟಿಗಾಗಿ ಲಂಡನ್‌ ಫಿಲ್ಮ್‌ ಕ್ರಿಟಿಕ್ಸ್‌ ಸರ್ಕಲ್‌ ಪ್ರಶಸ್ತಿ‌
ಅತ್ಯುತ್ತಮ ನಟಿಗಾಗಿ ಅಕಾಡೆಮಿ ಪ್ರಶಸ್ತಿ‌ಗೆ ನಾಮನಿರ್ದೇಶನಗೊಂಡಿದೆ
ನಾಮನಿರ್ದೇಶನ -ಅತ್ಯುತ್ತಮ ಮಹಿಳೆ ಪಾತ್ರಕ್ಕೆ MTV ಮೂವೀ ಪ್ರಶಸ್ತಿ
ಉತ್ತಮ ಸಂಗೀತ ಸನ್ನೀವೇಶಕ್ಕೆ MTV ಮೂವೀ ಪ್ರಶಸ್ತಿ
ನಾಮನಿರ್ದೇಶಿತ— ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿಗಾಗಿ ಆಸ್ಟ್ರೇಲಿಯನ್ ಫಿಲ್ಮ್ ಇನ್ಸ್‌ಟಿಟ್ಯೂಟ್ ಪ್ರಶಸ್ತಿ
ಅತ್ಯುತ್ತಮ ನಟಿಗಾಗಿ ಬ್ರಾಡ್‌ಕ್ಯಾಸ್ಟ್‌ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ ಪ್ರಶಸ್ತಿ‌ಗೆ ನಾಮನಿರ್ದೇಶಿತವಾಗಿದೆ
ನಾಮನಿರ್ದೇಶಿತ — ಸಂಗೀತ ಅಥವಾ ಹಾಸ್ಯ ಚಲನಚಿತ್ರದ ಅತ್ಯುತ್ತಮ ನಟಿಗಾಗಿ ಸ್ಯಾಟೆಲೈಟ್‌ ಪ್ರಶಸ್ತಿ‌
ನಾಮನಿರ್ದೇಶಿತ — ಚಲನಚಿತ್ರದ ಪಾತ್ರವೊಂದರಲ್ಲಿ ಅತ್ಯುತ್ತಮ ನಟನೆಗಾಗಿ ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿ‌

ದ ಅದರ್ಸ್ ಗ್ರೇಸ್ ಸ್ಟೇವಾರ್ಟ್ ಸಾಟರ್ನ್ ಅತ್ಯುತ್ತಮ ನಟಿ ಪ್ರಶಸ್ತಿ
ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟಿಗಾಗಿ BAFTA ಪ್ರಶಸ್ತಿ‌‌ಗೆ ನಾಮನಿರ್ದೇಶಿತವಾಗಿದೆ.
ಚಲನಚಿತ್ರ ನಾಟಕದಲ್ಲಿ ಅತ್ಯುತ್ತಮ ನಟಿಗಾಗಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ‌ಗೆ ನಾಮನಿರ್ದೇಶಿತವಾಗಿದೆ
ನಾಮನಿರ್ದೇಶಿತ — ಉತ್ತಮ ನಟಿಗಾಗಿ ಗೊಯಾ ಪ್ರಶಸ್ತಿ]]
ನಾಮನಿರ್ದೇಶಿತ — ಸಂಗೀತ ಅಥವಾ ಹಾಸ್ಯ ಚಲನಚಿತ್ರದ ಅತ್ಯುತ್ತಮ ನಟಿಗಾಗಿ ಸ್ಯಾಟೆಲೈಟ್‌ ಪ್ರಶಸ್ತಿ‌
ಬರ್ತ್‌ಡೇ ಗರ್ಲ್ ಸೊಫಿಯಾ/ನಾಡಿಯಾ
2002 ದ ಹವರ್ಸ್

ವರ್ಜೀನಿಯಾ ವೂಲ್ಫ್

ಅತ್ಯುತ್ತಮ ನಟಿಗಾಗಿ ಅಕಾಡೆಮಿ ಪ್ರಶಸ್ತಿ‌
ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟಿಗಾಗಿ BAFTA ಪ್ರಶಸ್ತಿ‌
ಚಲನಚಿತ್ರ ನಾಟಕದ ಅತ್ಯುತ್ತಮ ನಟಿಗಾಗಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ‌
ಅತ್ಯುತ್ತಮ ನಟಿಗಾಗಿ ಕ್ಯಾನ್ಸಾಸ್ ಸಿಟಿ ಫಿಲ್ಮ್ ಕ್ರಿಟಿಕ್ಸ್ ಪ್ರಶಸ್ತಿ
ಅತ್ಯುತ್ತಮ ನಟಿಗಾಗಿ ಲಾಸ್‌ ವೆಗಾಸ್‌ ಫಿಲ್ಮ್‌ ಕ್ರಿಟಿಕ್ಸ್‌ ಸೊಸೈಟಿ ಪ್ರಶಸ್ತಿ‌
ಅತ್ಯುತ್ತಮ ನಟಿಗಾಗಿ ಸಿಲ್ವರ್ ಬಿಯರ್ ಪ್ರಶಸ್ತಿ
ಅತ್ಯುತ್ತಮ ನಟಿಗಾಗಿ ಬ್ರಾಡ್‌ಕಾಸ್ಟ್‌ ಫಿಲ್ಮ್‌ ಕ್ರಿಟಿಕ್ಸ್‌ ಅಸೋಸಿಯೇಷನ್‌ ಪ್ರಶಸ್ತಿ‌ಗೆ ನಾಮನಿರ್ದೇಶಿತವಾಗಿದೆ
ಮುಖ್ಯ ಪಾತ್ರದಲ್ಲಿನ ಅತ್ಯುತ್ತಮ ನಟಿಗಾಗಿ ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿ‌‌ಗೆ ನಾಮನಿರ್ದೇಶಿತವಾಗಿದೆ
ನಾಮನಿರ್ದೇಶಿತ —ಚಲನಚಿತ್ರದ ಪಾತ್ರವೊಂದರಲ್ಲಿ ಅತ್ಯುತ್ತಮ ನಟನೆಗಾಗಿ ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿ‌
2003 ಡಾಗ್‌ವಿಲ್ ಗ್ರೇಸ್ ಮಾರ್ಗರೇಟ್ ಮುಲಿಗ್ಯಾನ್ ಅತ್ಯುತ್ತಮ ವಿದೇಶಿ ನಟಿಗಾಗಿ ರಷಿಯನ್ ಗಿಲ್ಡ್ ಆಫ್ ಫಿಲ್ಮ್ ಕ್ರಿಟಿಕ್ಸ್ ಗೋಲ್ಡನ್ ಎರಿಯಸ್ ಪ್ರಶಸ್ತಿ
ನಾಮನಿರ್ದೇಶಿತ — ಅತ್ಯುತ್ತಮ ನಟಿಗಾಗಿ ಬೊಡ್ಲಿ ಪ್ರಶಸ್ತಿ
ನಾಮನಿರ್ದೇಶಿತ — ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್‌ನ ಅತ್ಯುತ್ತಮ ನಟಿ ಪ್ರಶಸ್ತಿ
ದ ಹ್ಯೂಮನ್ ಸ್ಟೈನ್ ಫಾನಿಯಾ ಫಾರ್ಲೇ
ಕೋಲ್ಡ್ ಮೌಂಟೈನ್ ಆ‍ಯ್‌ಡ ಮೊನ್ರೊ

ಅತ್ಯುತ್ತಮ ನಟಿಗಾಗಿ ಬ್ರಾಡ್‌ಕ್ಯಾಸ್ಟ್‌ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ ಪ್ರಶಸ್ತಿ‌ಗೆ ನಾಮನಿರ್ದೇಶಿತವಾಗಿದೆ
ನಾಮನಿರ್ದೇಶಿತ –ಅತ್ಯುತ್ತಮ ನಟಿಗಾಗಿ ಎಂಪೈರ್ ಪ್ರಶಸ್ತಿ
ಚಲನಚಿತ್ರ ನಾಟಕದಲ್ಲಿ ಅತ್ಯುತ್ತಮ ನಟಿಗಾಗಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ‌ಗೆ ನಾಮನಿರ್ದೇಶಿತವಾಗಿದೆ
ನಾಮನಿರ್ದೇಶಿತ— ಲಾಸ್ ವೇಗಾಸ್ ಫಿಲ್ಮ್ ಕ್ರಿಟಿಕ್ಸ್ ಸೊಸೈಟಿಯ ಅತ್ಯುತ್ತಮ ನಟಿ ಪ್ರಶಸ್ತಿ
ಅತ್ಯುತ್ತಮ ನಟಿಗಾಗಿ ಲಂಡನ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ‌ಗೆ ನಾಮ ನಿರ್ದೇಶಿತವಾಗಿದೆ

2004 ದ ಸ್ಟೆಪ್‌ಫೊರ್ಡ್ ವೈವ್ಸ್ ಜೊಅನ್ನಾ ಎಬರ್ಹಾರ್ಟ್
ಅನ್ನಾ

ಚಲನಚಿತ್ರ ನಾಟಕದಲ್ಲಿ ಅತ್ಯುತ್ತಮ ನಟಿಗಾಗಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ‌ಗೆ ನಾಮನಿರ್ದೇಶಿತವಾಗಿದೆ
ಅತ್ಯುತ್ತಮ ನಟಿಗಾಗಿ ಲಂಡನ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ‌ಗೆ ನಾಮ ನಿರ್ದೇಶಿತವಾಗಿದೆ
ನಾಮನಿರ್ದೇಶಿತ — ಅತ್ಯುತ್ತಮ ನಟಿಗಾಗಿ ಸ್ಯಾಟರ್ನ್‌ ಪ್ರಶಸ್ತಿ‌

2005 ದ ಇಂಟರ್‌ಪ್ರೆಟರ್ ಸಿಲಿವಿಯಾ ಬ್ರೂಮ್
ಬೆವಿಚ್ಡ್ ಇಸಬೆಲ್ ಬಿಗೆಲೊ/ಸಮಂಥ
2006 ಫರ್ ಡೈಯಾನೆ ಆರ್ಬಸ್
ಹ್ಯಾಪಿ ಪೀಟ್ ನಾರ್ಮ ಜೀನ್ ವಾಯ್ಸ್
2007 ದ ಇನ್‌ವೇಷನ್ ಡಾ. ಕಾರೊಲ್ ಬೆನೆಲ್
ಮಾರ್ಗಟ್ ಅಟ್ ದ ವೆಡಿಂಗ್ ಮಾರ್ಗಟ್ ನಾಮನಿರ್ದೇಶಿತ — ಅತ್ಯುತ್ತಮ ಸಮಗ್ರ ಪಾತ್ರವರ್ಗಕ್ಕಾಗಿ ಗೊಥಮ್ ಪ್ರಶಸ್ತಿ
ನಾಮನಿರ್ದೇಶಿತ —ಸಂಗೀತ ಅಥವಾ ಹಾಸ್ಯ ಚಲನಚಿತ್ರದ ಅತ್ಯುತ್ತಮ ನಟಿಗಾಗಿ ಸ್ಯಾಟೆಲೈಟ್‌ ಪ್ರಶಸ್ತಿ‌
ದ ಗೋಲ್ಡನ್ ಕ್ಯಾಂಪಾಸ್ ಮ್ಯಾರಿಸಾ ಕೌಲ್ಟರ್ ನಾಮನಿರ್ದೇಶಿತ — ಅತ್ಯುತ್ತಮ ನಟಿಗಾಗಿ ಆಸ್ಟ್ರೇಲಿಯನ್ ಫಿಲ್ಮ್ ಇನ್ಸ್‌ಟಿಟ್ಯೂಟ್ ಇಂಟರ್‌ನ್ಯಾಷನಲ್ ಪ್ರಶಸ್ತಿ
2008

ಆಸ್ಟ್ರೇಲಿಯಾ

ಲೇಡಿ ಸರಾಹ್ ಆಶ್ಲೇ ನಾಮನಿರ್ದೇಶನಗೊಂಡಿದ್ದು — ಆಯ್ಕೆಯ ಚಿತ್ರನಟಿಗೆ ಟೀನ್‌ ಚಾಯ್ಸ್ ಪ್ರಶಸ್ತಿ: ನಾಟಕ
2009 ನೈನ್ ಕ್ಲೌಡಿಯಾ ಚಲನಚಿತ್ರದ ಅತ್ಯುತ್ತಮ ಪಾತ್ರವರ್ಗಕ್ಕಾಗಿ ಸ್ಯಾಟೆಲೈಟ್‌ ಪ್ರಶಸ್ತಿ
ನಾಮನಿರ್ದೇಶನ – ಅತ್ಯುತ್ತಮ ಪಾತ್ರಕ್ಕಾಗಿ ಬ್ರಾಡ್‌ಕಾಸ್ಟ್ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ ಪ್ರಶಸ್ತಿ‌
ನಾಮನಿರ್ದೇಶನ — ಚಲನಚಿತ್ರದ ಪಾತ್ರವೊಂದರಲ್ಲಿ ಅತ್ಯುತ್ತಮ ನಟನೆಗಾಗಿ ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿ‌
2010 ರಬ್ಬಿತ್ ಹೋಲ್ ಬೆಕ್ಕಾ ಕಾರ್ಬೆಟ್ ನಿರ್ಮಾಣದ-ನಂತರದ್ದು
ದ ಡ್ಯಾನೀಷ್ ಗರ್ಲ್ ಐನರ್ ವೆಗೆನರ್‌/ಲಿಲಿ ಎಲ್ಬೆ

ನಿರ್ಮಾಣ

2011 ಲಿಟ್ಲ್ ಬೀ ಸರಾಹ್ ಒ'ರೌರ್ಕೆ

ನಿರ್ಮಾಣದ-ಮುಂಚಿನ ಹಂತ

ಪ್ರಶಸ್ತಿಗಳು

2003ರಲ್ಲಿ ಕಿಡ್‌ಮನ್‌ ಅವರು ಹಾಲಿವುಡ್ ವಾಕ್ ಆಫ್ ಫೇಮ್‌ನಲ್ಲಿ ನಕ್ಷತ್ರವೊಂದನ್ನು ಪಡೆದುಕೊಂಡರು. ಅತ್ಯುತ್ತಮ ನಟಿಗಾಗಿ 2003ರ ಅಕಾಡೆಮಿ ಪ್ರಶಸ್ತಿಯನ್ನು ಪಡೆಯುವುದರ ಜೊತೆಗೆ, ಕಿಡ್‌ಮನ್‌ ಅವರು ಈ ಕೆಳಕಂಡ ವಿಮರ್ಶಕ ಗುಂಪುಗಳಿಂದ ಅಥವಾ ಪ್ರಶಸ್ತಿ-ನೀಡುವ ಸಂಸ್ಥೆಗಳಿಂದ ಅತ್ಯುತ್ತಮ ನಟಿ ಪ್ರಶಸ್ತಿಗಳನ್ನು ಪಡೆದರು: ಹಾಲಿವುಡ್ ಫಾರಿನ್ ಪ್ರೆಸ್, (ಗೋಲ್ಡನ್ ಗ್ಲೋಬ್ಸ್), ದ ಆಸ್ಟ್ರೇಲಿಯನ್ ಫಿಲ್ಮ್ ಇನ್ಸ್‌ಟಿಟ್ಯೂಟ್, ಬ್ಲಾಕ್‌ಬಸ್ಟರ್ ಎಂಟರ್‌ಟೈನ್‌ಮೆಂಟ್ ಪ್ರಶಸ್ತಿಸ್, ಎಂಪೈರ‍್ ಅವಾರ್ಡ್ಸ್, ಗೋಲ್ಡನ್ ಸ್ಯಾಟಲೈಟ್ ಅವಾರ್ಡ್ಸ್, ಹಾಲಿವುಡ್ ಫಿಲ್ಮ್ ಫೆಸ್ಟಿವಲ್, ಲಂಡನ್ ಕ್ರಿಟಿಕ್ಸ್ ಸರ್ಕಲ್, ರಷಿಯನ್ ಗಿಲ್ಡ್ ಆಫ್ ಫಿಲ್ಮ್ ಕ್ರಿಟಿಕ್ಸ್ ಮತ್ತು ಸೌತ್‍ಈಸ್ಟರ್ನ್ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್. 2003ರಲ್ಲಿ ಕಿಡ್‌ಮನ್ ಅವರಿಗೆ ಅಮೇರಿಕನ್ ಸಿನಿಮ್ಯಾಥೀಕ್‌ ಪ್ರಶಸ್ತಿ‌ ಅನ್ನು ನೀಡಲಾಯಿತು. ಅವರು 1992ರಲ್ಲಿ ಶೋವೆಸ್ಟ್ ಸಮ್ಮೇಳನದಲ್ಲಿ ನ್ಯಾಷನಲ್ ಅಸೋಸಿಯೇಷನ್ ಆಫ್ ದಿ ಥಿಯೇಟರ್ಸ್ ಓನರ್ಸ್‌ ವತಿಯಿಂದ ಫೀಮೇಲ್‌ ಸ್ಟಾರ್ ಆಫ್ ಟುಮಾರೊ ಎಂಬ ಮನ್ನಣೆಯನ್ನು ಮತ್ತು 2002ರಲ್ಲಿ ಡಿಸ್ಟಿಂಗ್ವಿಶ್ಡ್ ಡಿಕೇಡ್ ಆಫ್ ಆಚೀವ್‌ಮೆಂಟ್ ಇನ್ ಫಿಲ್ಮ್ ಪ್ರಶಸ್ತಿಯನ್ನೂ ಸಹ ಪಡೆದುಕೊಂಡರು

ಸರ್ಕಾರದ ಗೌರವಗಳು

2006ರಲ್ಲಿ ಕಿಡ್‌ಮನ್ ಅವರಿಗೆ ಆಸ್ಟ್ರೇಲಿಯಾದ ಅತ್ಯುನ್ನತ ನಾಗರೀಕ ಗೌರವವಾದ ಕಂಪಾನಿಯನ್‌ ಆಪ್‌ ದಿ ಆರ್ಡರ್‌ ಆಫ್ ಆಸ್ಟ್ರೇಲಿಯಾವನ್ನು(AC), ಅವರ "ಅಭಿನಯ ಕಲೆಗಳಿಗೆ ಸೇವೆ ಸಲ್ಲಿಸುವ ಮೂಲಕ ಚಲನಚಿತ್ರ ನಟಿ ಎಂದು ಕರೆಸಿಕೊಂಡಿದ್ದಕ್ಕೆ, ಮಹಿಳೆ ಮತ್ತು ಮಕ್ಕಳಿಗಾಗಿ ವೈದ್ಯಕೀಯ ಚಿಕಿತ್ಸೆಯನ್ನು ಸುಧಾರಿಸಲು ವಂತಿಗೆ ನೀಡುವ ಮೂಲಕ ಆರೋಗ್ಯ ಜಾಗರೂಕತೆ ಮೂಡಿಸಿದ್ದಕ್ಕೆ ಮತ್ತು ಕ್ಯಾನ್ಸರ್ ಸಂಶೋಧನೆಗಾಗಿ ವಕಾಲತ್ತು ವಹಿಸಿದ್ದಕ್ಕೆ, ಒಬ್ಬ ಯುವ ವ್ಯಕ್ತಿಯಾಗಿ ನಟನೆ ಮಾಡುವ ಯುವಕಲಾವಿದರಿಗೆ ಪ್ರಮುಖ ಪ್ರೋತ್ಸಾಹಕರಾಗಿದ್ದಕ್ಕೆ ಹಾಗೂ ಆಸ್ಟ್ರೇಲಿಯಾದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನವತಾವಾದಿ ಕಾರ್ಯಗಳನ್ನು ನಿರ್ವಹಿಸಿದ್ದಕ್ಕೆ" ನೀಡಲಾಯಿತು. ಆದಾಗ್ಯೂ, ಹಲವಾರು ಸಿನಿಮಾ ಭಾದ್ಯತೆ ಮತ್ತು ಅರ್ಬನ್‍ ಅವರೊಂದಿಗಿನ ಅವರ ಮದುವೆಯ ಕಾರಣದಿಂದ, ಅವರನ್ನು ಏಪ್ರಿಲ್ 13, 2007 ರಂದು ಗೌರವಾತ್ಮಕವಾಗಿ ಸನ್ಮಾನಿಸಲಾಯಿತು. ಅವರು ಕ್ಯಾನ್‌ಬೆರಾದ ಗೌವರ್ನಮೆಂಟ್ ಹೌಸ್‌ನಲ್ಲಿ ನಡೆದ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಗೌವರ್ನರ್-ಜನರಲ್ ಆಗಿದ್ದ ಮೇಜರ್ ಜನರಲ್ ಮೈಕೆಲ್ ಜೆಫ್ರಿ ಅವರಿಂದ ಆ ಗೌರವವನ್ನು ಪಡೆದರು.

ಧ್ವನಿಮುದ್ರಿಕೆ ಪಟ್ಟಿ

  • "ಕಮ್ ವಾಟ್ ಮೇ" ಸಿಂಗಲ್ (ಇವಾನ್ ಮ್ಯಾಕ್‌ಗ್ರೆಗರ್ ಜೊತೆ ಯುಗಳ ಗೀತೆ – ಅಕ್ಟೋಬರ್ 2001) AUS #10, UK #27
  • "ಸ್ಪಾರ್ಕಿಂಗ್ ಡೈಮಂಡ್ಸ್" ( ಕ್ಯಾರೊಲೈನ್‌ ಒ'ಕನ್ನರ್‌‌ನೊಂದಿಗೆ) -ಅಕ್ಟೋಬರ್ 2001 (ಮೌಲಿನ್ ರೂಜ್‌

! ಸೌಂಡ್‌ಟ್ರ್ಯಾಕ್)

  • "ಹಿಂದಿ ಸ್ಯಾಡ್ ಡೈಮಂಡ್ಸ್" - ಅಕ್ಟೋಬರ್2001 (ಮೌಲಿನ್ ರೂಜ್‌

! ಸೌಂಡ್‌ಟ್ರ್ಯಾಕ್)

  • "ಸಮ್‌ಥಿಂಗ್' ಸ್ಟುಪಿಡ್" (ರಾಬಿ ವಿಲಿಯಂಸ್‌ಯೊಂದಿಗೆ ಒಂದು ಯುಗಳಗೀತೆ – ಡಿಸೆಂಬರ್ 2001) AUS#8, UK#1l
  • "ಕಿಸ್" / "ಹಾರ್ಟ್‌ಬ್ರೇಕ್ ಹೋಟೆಲ್" – ನಿಕೋಲ್ ಕಿಡ್‌ಮನ್ / ಹ್ಯೂಗ್‌ ಜ್ಯಾಕ್‌ಮನ್ - ನವೆಂಬರ್ 2006 (ಹ್ಯಾಪೀ ಫೀಟ್‌ ಸೌಂಡ್‌ಟ್ರ್ಯಾಕ್‌)

ಆಕರಗಳು

ಹೆಚ್ಚಿನ ಓದಿಗೆ

ಹೊರಗಿನ ಕೊಂಡಿಗಳು

ನಿಕೋಲ್‌ ಕಿಡ್‌ಮನ್‌ 
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ನಿಕೋಲ್‌ ಕಿಡ್‌ಮನ್‌]]


Tags:

ನಿಕೋಲ್‌ ಕಿಡ್‌ಮನ್‌ ಆರಂಭಿಕ ಜೀವನನಿಕೋಲ್‌ ಕಿಡ್‌ಮನ್‌ ವೃತ್ತಿಜೀವನನಿಕೋಲ್‌ ಕಿಡ್‌ಮನ್‌ ವೈಯಕ್ತಿಕ ಜೀವನನಿಕೋಲ್‌ ಕಿಡ್‌ಮನ್‌ ಚಲನಚಿತ್ರಗಳ ಪಟ್ಟಿನಿಕೋಲ್‌ ಕಿಡ್‌ಮನ್‌ ಪ್ರಶಸ್ತಿಗಳುನಿಕೋಲ್‌ ಕಿಡ್‌ಮನ್‌ ಧ್ವನಿಮುದ್ರಿಕೆ ಪಟ್ಟಿನಿಕೋಲ್‌ ಕಿಡ್‌ಮನ್‌ ಆಕರಗಳುನಿಕೋಲ್‌ ಕಿಡ್‌ಮನ್‌ ಹೆಚ್ಚಿನ ಓದಿಗೆನಿಕೋಲ್‌ ಕಿಡ್‌ಮನ್‌ ಹೊರಗಿನ ಕೊಂಡಿಗಳುನಿಕೋಲ್‌ ಕಿಡ್‌ಮನ್‌

🔥 Trending searches on Wiki ಕನ್ನಡ:

ಅಂತಿಮ ಸಂಸ್ಕಾರಮೈಸೂರು ಚಿತ್ರಕಲೆಮೂಲಭೂತ ಕರ್ತವ್ಯಗಳುಕನ್ನಡ ಸಾಹಿತ್ಯ ಪ್ರಕಾರಗಳುಪ್ಯಾರಾಸಿಟಮಾಲ್ಹಲಸುಕುದುರೆಮಳೆಬಿಲ್ಲುಆಲ್ಫೊನ್ಸೋ ಮಾವಿನ ಹಣ್ಣುನೆಪೋಲಿಯನ್ ಬೋನಪಾರ್ತ್ಕಲಬುರಗಿಕದಂಬ ಮನೆತನಭಾರತ ರತ್ನಗೋಕರ್ಣಕರ್ನಾಟಕವಿಜಯ ಕರ್ನಾಟಕಕರ್ನಾಟಕ ವಿಧಾನ ಸಭೆಗುಡಿಸಲು ಕೈಗಾರಿಕೆಗಳುಧರ್ಮಭಗತ್ ಸಿಂಗ್ಗ್ರಂಥಾಲಯಗಳುಭಾರತೀಯ ರಿಸರ್ವ್ ಬ್ಯಾಂಕ್ಸುಧಾ ಮೂರ್ತಿಶ್ರೀ ರಾಮಾಯಣ ದರ್ಶನಂಕೋಪಸಂವಹನಸಹಕಾರಿ ಸಂಘಗಳುಮಂಡ್ಯಕಯ್ಯಾರ ಕಿಞ್ಞಣ್ಣ ರೈಯಕೃತ್ತುನಾಗವರ್ಮ-೨ವಿಶ್ವ ಮಾನವ ಸಂದೇಶನಾರುಕಾಮಾಕ್ಯ ದೇವಾಲಯಕೆಳದಿಬೈರಾಗಿ (ಚಲನಚಿತ್ರ)ಮುಟ್ಟುಭಾರತೀಯ ಸಂಸ್ಕೃತಿಕನ್ನಡ ಸಂಧಿರಾಜ್ಯಸಭೆಛತ್ರಪತಿ ಶಿವಾಜಿಸೂರ್ಯ (ದೇವ)ಕರ್ನಾಟಕದಲ್ಲಿ ಜೈನ ಧರ್ಮಪರಿಸರ ರಕ್ಷಣೆತ್ರಿಪದಿಹಳೆಗನ್ನಡಶ್ರೀಕಾಳಹಸ್ತಿಜಯಂತ ಕಾಯ್ಕಿಣಿಹಾಸನಪೂರ್ಣಚಂದ್ರ ತೇಜಸ್ವಿಸಂಧಿಶೈಕ್ಷಣಿಕ ಸಂಶೋಧನೆಹಿಂದಿ ಭಾಷೆಮನುಸ್ಮೃತಿಗ್ರಾಮ ಪಂಚಾಯತಿಆರ್ಯಭಟ (ಗಣಿತಜ್ಞ)ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಮಳೆನೀರು ಕೊಯ್ಲುಕೆ. ಎಸ್. ನಿಸಾರ್ ಅಹಮದ್ಚನ್ನವೀರ ಕಣವಿಸಂಚಿ ಹೊನ್ನಮ್ಮವಿಜಯದಾಸರುಗಿರವಿದಾರಬಸವೇಶ್ವರಸವದತ್ತಿಕೊಲೆಸ್ಟರಾಲ್‌ಅಳೆಯುವ ಸಾಧನಕಾವೇರಿ ನದಿಆರೋಗ್ಯಪಂಪಮೂತ್ರಪಿಂಡಬಿಳಿ ರಕ್ತ ಕಣಗಳುಇಮ್ಮಡಿ ಪುಲಕೇಶಿಕರ್ಕಾಟಕ ರಾಶಿಇತಿಹಾಸಆದೇಶ ಸಂಧಿಮಕರ ಸಂಕ್ರಾಂತಿಚಾಲುಕ್ಯದ್ವಂದ್ವ ಸಮಾಸ🡆 More