ಥಾಮಸ್ ಆಲ್ವ ಎಡಿಸನ್

ಥಾಮಸ್ ಆಲ್ವ ಎಡಿಸನ್ (ಫೆಬ್ರುವರಿ ೧೧, ೧೮೪೭ - ಅಕ್ಟೋಬರ್ ೧೮, ೧೯೩೧) ಅಮೇರಿಕ ದೇಶದ ಸಂಶೋಧಕ.

ಥಾಮಸ್ ಆಲ್ವ ಎಡಿಸನ್
ಥಾಮಸ್ ಆಲ್ವ ಎಡಿಸನ್
ಥಾಮಸ್ ಎಡಿಸನ್ ಜೊತೆ ಒಂದು ದಿನ (1922)

ಸಂಶೋಧನೆಗಳು

  • ಗ್ರಾಮಫೋನ್, ವಿದ್ಯುದ್ವೀಪ ,ಕೈನಟೊಸ್ಕೋಪ್, ಸಂಚಯನ ವಿದ್ಯುತ್ಕೋಶ, ಕಬ್ಬಿಣ ಅದುರು ಬೇರ್ಪಡಿಸುವ ಕಾಂತೀಯ ಸಲಕರಣೆ, ಮೊದಲಾದ ಅಮೂಲ್ಯ ವಸ್ತುಗಳನ್ನು ಜಗತ್ತಿಗೆ ನೀಡಿದ ಮಹಾವಿಜ್ಞಾನಿ,
  • ಥಾಮಸ್ ಆಲ್ವ ಎಡಿಸನ್, ಈತ ಫೆಬ್ರುವರಿ ೧೧. ೧೮೪೭ರಂದು ಸಂ. ರಾ. ಅಮೆರಿಕದ ಮಿಲಾನ್ ಎಂಬ ಪಟ್ಟಣದಲ್ಲಿ ಜನಿಸಿದರು. ತಂದೆಯ ಹೆಸರು ಸಾಮ್ಯುಯೆಲ್ ಎಡಿಸನ್, ತಾಯಿ ನ್ಯಾನ್ಸಿ ಚಿಕ್ಕವನಿದ್ದಾಗ ಥಾಮಸ್ ಆಲ್ವ ಎಡಿಸನ್ ತುಂಬ "ಕಿಡಿಗೇಡಿ" ಆಗಿದ್ದ. ಅದಕ್ಕಾಗಿ ಎಲ್ಲರಿಂದಲೂ ಚೆನ್ನಾಗಿ ಬೈಸಿಕೊಳ್ಳುತ್ತಿದ್ದ, ಒಮ್ಮೊಮ್ಮೆ ಏಟೂ ತಿನ್ನುತ್ತಿದ್ದ. ಆದರೆ ಈತನ ಅಂದಿನ "ಕಿಡಿಗೇಡಿತನ"ದ ಹಿಂದೆ ಎಷ್ಟು ಅದ್ಭುತವಾದ ಪ್ರತಿಭಾಶಕ್ತಿ ರೂಪಗೊಳ್ಳುತ್ತಲಿತ್ತು ಎಂಬುದು ಬಹುಶಃ ಯಾರಿಗೂ ತಿಳಿದಿರಲಿಲ್ಲ. ಮೊಟ್ಟೆಗಳಿಗೆ ಕಾವು ಕೊಡಲು ಕೋಳಿಯೇ ಆಗ ಬೇಕೆ! ಮನುಷ್ಯರೂ ಕಾವು ಕೊಡಬಹುದಲ್ಲ ಎಂದು ಭಾವಿಸಿದ ಹುಡುಗಮೊಟ್ಟೆಗಳ ಮೇಲೆ ಕುಳಿತು ಕಾವು ಕೊಟ್ಟು ಮರಿಗಳು ಹೊರಬರುವುದನ್ನು ಎದುರು ನೋಡುತ್ತ ಕುಳಿತಿದ್ದ. ಮಿಚಿಗನ್ ಪ್ರಾಂತ್ಯದ ಪೋರ್ಟ್ ಹೂರಾನ್ ನಲ್ಲಿ ಶಾಲೆಯಲ್ಲಿ ಶಿಕ್ಷಕರಿಗೆ ಕಿರಿಕಿರಿಯಾಗುವಂಥ ಪ್ರಶ್ನೆಗಳನ್ನು ಕೇಳುವುದು, ಪಾಠದ ಕಡೆಗೆ ಲಕ್ಷ್ಯ ಕೊಡದೆಎ ಸ್ಲೇಟಿನ ಮೇಲೆ ಏನಾದರೂ ಗೀಚುವುದು ಮಾಡುತ್ತಿದ್ದ. ಆತನ ಶಿಕ್ಷಕಿ ಚೆನ್ನಾಗಿ ಬೈದ ಮೇಲೆ ಶಾಲೆಯನ್ನೇ ಬಿಟ್ಟ. ತಾಯಿಯೇ ಆತನಿಗೆ ಮನೆಯಲ್ಲಿ ಪಾಠ ಹೇಳಬೇಕಾಯಿತು. ಬಲೂನುಗಳಿಗೆ ಅನಿಲ ತುಂಬಿದಾಗ ಅವು ಹಾರುತ್ತವೆ, ಹಾಗೆಯೇ ಅನಿಲ ತುಂಬಿದ ಮನುಷ್ಯ ಹಾರಬಹುದೆ? ಎಡಿಸನ್ ಆ ಪ್ರಯೋಗವನ್ನೂ ಮಾಡಿದ! ಅನಿಲ ಹೊರಡಿಸುವ ಸೈಡ್ ಲಿಟ್ಸ್ ಪುಡಿಯನ್ನು ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬನಿಗೆ ತಿನ್ನಿಸಿದ. ಆತ ಹಾರುವ ಬದಲು ಹೊಟ್ಟೆ ನೋವಾಗಿ ನೆಲದ ಮೇಲೆ ಬಿದ್ದ. ಥಾಮಸ್ ಎಡಿಸನ್ಗೆ ಪುನಃ ಏಟು.
  • ಇನ್ನೂ ಹದಿನೈದು ವರ್ಷದವನಿದ್ದಾಗಲೇ ಎಡಿಸನ್ "ದಿ ವೀಕ್ಲಿ ಹೆರಾಲ್ಡ್ " ಎಂಬ ತನ್ನದೇ ಆದ ಒಂದು ಸಾಪ್ತಾಹಿಕ ಪತ್ರಿಕೆಯನ್ನು ಪ್ರಕಟಿಸಿದ. ರೈಲು ಡಬ್ಬಿಯನ್ನೇ ಪ್ರಯೋಗಾಲಯ ಮಾಡಿಕೊಂಡು ಪ್ರಯೋಗಗಳನ್ನೂ ಮುಂದುವರಿಸಿದ. ಒಮ್ಮೆ ರಂಜಕದ ತುಂಡು ಬಿದ್ದು ರೈಲು ಡಬ್ಬಿಗೆ ಬೆಂಕಿ ಹೊತ್ತಿದಾಗ ಗಾರ್ಡ್‌ ಆತನ ಕಿವಿ ಹಿಡಿದು ಥಳಿಸಿದ. ಥಾಮಸ್ ನ ಕಿವಿಯೇ ಕಿವುಡಾಯಿತು. ಆದರೆ ರೈಲು ನಿಲ್ದಾಣದ ಅಧಿಕಾರಿಯೊಬ್ಬನ ಮಗು ಹಳಿಗೆ ಸಿಕ್ಕು ಸಾಯುವ ಸಂದರ್ಭದಲ್ಲಿ ಎಡಿಸನ್ ತನ್ನ ಪ್ರಾಣದ ಪರಿವೆಯಿಲ್ಲದೆ ಆ ಮಗುವನ್ನು ರಕ್ಷಿಸಿದ. ಅದನ್ನು ಮೆಚ್ಚಿದ ರೈಲು ನಿಲ್ದಾಣದ ಅಧಿಕಾರಿ ಆತನಿಗೆ ಟೆಲಿಗ್ರಾಫ್ ನಿರ್ವಹಣೆ, ಮೋರ್ಸ್ ಸಂಕೇತ ಕಲಿಸಿದ.
  • ಥಾಮಸ್ ಆಲ್ವ ಎಡಿಸನ್ ಟೆಲಿಗ್ರಾಫ್ ನಲ್ಲಿ ಹಲವಾರು ಸುಧಾರಣೆಗಳನ್ನು ಮಾಡಿದರು, ಫೋನೋಗ್ರಾಮ್ ಕಂಡು ಹಿಡಿದರು, ವಿದ್ಯುದ್ವೀಪಗಳನ್ನು ತಯಾರಿಸಿದರು, ಚಲನಚಿತ್ರ ಕ್ಯಾಮರಾ, ಕೈನಟೊಸ್ಕೋಪ್, ಸಂಚಯನ ವಿದ್ಯುತ್ಕೋಶ, ಕಾಂತೀಯ ಸಲಕರಣೆಗಳು ಮೊದಲಾದವುಗಳನ್ನು ಮಾರುಕಟ್ಟೆಗೆ ತಂದರು.
  • "ಕಿಡಿಗೇಡಿ" ಆಗಿದ್ದ ಹುಡುಗ ಈಗ "ಪವಾಡ ಪುರುಷ" ಆದ, ೧೮೮೯ರಲ್ಲಿ ವಾಕ್ ಚಲನಚಿತ್ರಗಳನ್ನು ಎಡಿಸನ್ ಪ್ರದರ್ಶಿಸಿದರು.
  • ಥಾಮಸ್ ಆಲ್ವ ಎಡಿಸನ್ ಅಕ್ಟೋಬರ್ ೧೮, ೧೯೩೧ರಂದು ನಿಧನ ಹೊಂದಿದರು.

ಉಲ್ಲೇಖ

Tags:

ಅಕ್ಟೋಬರ್ ೧೮ಅಮೇರಿಕ ದೇಶಫೆಬ್ರುವರಿ ೧೧೧೮೪೭೧೯೩೧

🔥 Trending searches on Wiki ಕನ್ನಡ:

ಸಾರಜನಕಉಪ್ಪಿನ ಸತ್ಯಾಗ್ರಹಆಧುನಿಕ ಮಾಧ್ಯಮಗಳುಕರ್ನಾಟಕ ವಿಶ್ವವಿದ್ಯಾಲಯಗದ್ಯಅರ್ಜುನಶಾತವಾಹನರುಭಾರತೀಯ ಜನತಾ ಪಕ್ಷಗುರುನಾನಕ್ಭಾರತದ ರಾಷ್ಟ್ರಗೀತೆಸಹಕಾರಿ ಸಂಘಗಳುಕೆಂಪು ಕೋಟೆಅಕ್ಕಮಹಾದೇವಿಸಮಾಸಕುಂ.ವೀರಭದ್ರಪ್ಪಯಾಣಮಹಾಭಾರತಸವರ್ಣದೀರ್ಘ ಸಂಧಿಯೂಟ್ಯೂಬ್‌ತಾಜ್ ಮಹಲ್ರತ್ನತ್ರಯರುರಾಷ್ಟ್ರೀಯ ಸ್ವಯಂಸೇವಕ ಸಂಘಕನ್ನಡ ಚಿತ್ರರಂಗನೀರುಜಾನ್ ಸ್ಟೂವರ್ಟ್ ಮಿಲ್ಭಾರತದ ಸಂಸತ್ತುಸಂಸ್ಕಾರಎ.ಆರ್.ಕೃಷ್ಣಶಾಸ್ತ್ರಿಕುಟುಂಬಕುಂದಾಪುರಜಾನಪದಭಾರತೀಯ ಭಾಷೆಗಳುಹುಣಸೆದರ್ಶನ್ ತೂಗುದೀಪ್ಶ್ರೀ ರಾಘವೇಂದ್ರ ಸ್ವಾಮಿಗಳುಕಬ್ಬುಅಥರ್ವವೇದಅಕ್ಬರ್ಇತಿಹಾಸಉತ್ತರ ಕನ್ನಡಕದಂಬ ರಾಜವಂಶಭಾರತಬೇಸಿಗೆಅಶೋಕನ ಶಾಸನಗಳುರನ್ನಕನ್ನಡ ಸಾಹಿತ್ಯ ಪರಿಷತ್ತುಭಾರತೀಯ ನೌಕಾಪಡೆಅಳತೆ, ತೂಕ, ಎಣಿಕೆದೇವರ/ಜೇಡರ ದಾಸಿಮಯ್ಯಹುಬ್ಬಳ್ಳಿವಜ್ರಮುನಿಹದಿಬದೆಯ ಧರ್ಮರೇಣುಕನುಡಿ (ತಂತ್ರಾಂಶ)ಮಂಡಲ ಹಾವುರಾಜ್‌ಕುಮಾರ್ವಲ್ಲಭ್‌ಭಾಯಿ ಪಟೇಲ್ಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಮಧ್ಯಕಾಲೀನ ಭಾರತಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬರಗೂರು ರಾಮಚಂದ್ರಪ್ಪವಾಸ್ತುಶಾಸ್ತ್ರಚಂದನಾ ಅನಂತಕೃಷ್ಣಲಕ್ಷ್ಮೀಶಮೆಂತೆರಾಘವನ್ (ನಟ)ರಾವಣಬೆಂಗಳೂರು ಕೋಟೆಮಾಧ್ಯಮಪಾಲಕ್ಚಂದ್ರಶೇಖರ ಕಂಬಾರದೆಹಲಿ ಸುಲ್ತಾನರುನಾಮಪದಪ್ರಶಸ್ತಿಗಳುಒಡೆಯರ್ಇಸ್ಲಾಂ ಧರ್ಮಕನ್ನಡ ಬರಹಗಾರ್ತಿಯರುಜೀವಕೋಶ🡆 More